Tag: doctor

  • ವ್ಯಕ್ತಿಯ ಹೊಟ್ಟೆಯಿಂದ ಸ್ಟೀಲ್ ಗ್ಲಾಸ್ ಹೊರತೆಗೆದ ವೈದ್ಯರು!

    ವ್ಯಕ್ತಿಯ ಹೊಟ್ಟೆಯಿಂದ ಸ್ಟೀಲ್ ಗ್ಲಾಸ್ ಹೊರತೆಗೆದ ವೈದ್ಯರು!

    ಪಾಟ್ನಾ: ವೈದ್ಯ (Doctor) ರ ಗುಂಪೊಂದು ವ್ಯಕ್ತಿಯ ಹೊಟ್ಟೆಯಿಂದ ಸ್ಟೀಲ್ ಲೋಟವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದ ವಿಲಕ್ಷಣ ಘಟನೆಯೊಂದು ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ವ್ಯಕ್ತಿಯನ್ನು ರಿತೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತನ ಹೊಟ್ಟೆಯಿಂದ 5.5 ಇಂಚು ಉದ್ದದ ಗ್ಲಾಸ್ ಹೊರತೆಗೆಯಲಾಗಿದೆ. ಇದನ್ನೂ ಓದಿ: ಕೇರಳದಲ್ಲಿ ನರಬಲಿ ಪ್ರಕರಣ – ಮಹಿಳೆ ದೇಹವನ್ನು 56 ತುಂಡು ಮಾಡಿ ಭಕ್ಷಿಸಿರುವ ಶಂಕೆ

    ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಿತೇಶ್, ಪಾಟ್ನಾ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ (ಪಿಎಂಸಿಹೆಚ್) ಗೆ ಬಂದಿದ್ದಾನೆ. ಈ ವೇಳೆ ವೈದ್ಯರು ಆತನಿಗೆ ಎಕ್ಸ್ ರೇ ಮಾಡಿದ್ದಾರೆ. ಎಕ್ಸ್ ರೇ ನೋಡಿದ ವೈದ್ಯರೇ ದಂಗಾಗಿ ಹೋಗಿದ್ದಾರೆ. ರೋಗಿಯನ್ನು ಪರೀಕ್ಷೆ ಮಾಡಿದ ವೈದ್ಯರು ತಕ್ಷಣ ಆತನಿಂದ ಯಾವುದೇ ಹಣವನ್ನು ತೆಗೆದುಕೊಳ್ಳದೆ ಚಿಕಿತ್ಸೆ ನೀಡಲು ನಿರ್ಧರಿಸಿದರು.

    ರಿತೇಶ್ ಹೊಟ್ಟೆಯೊಳಗೆ ಸ್ಟೀಲ್ ಗ್ಲಾಸ್ (Steel Glass) ಹೇಗೆ ಇಳಿಯಿತು ಎಂಬುದರ ಕುರಿತು ಮಾತನಾಡಿದ ವೈದ್ಯರು, ಘಟನೆ ನಡೆದಾಗ ರೋಗಿಯು ಕುಡಿದಿರಬೇಕು ಅಥವಾ ಯಾರಾದರೂ ಅದನ್ನು ಅವನ ದೇಹದೊಳಗೆ ಹಾಕಿರಬೇಕು ಎಂದು ತಿಳಿಸಿದ್ದಾರೆ. ಸದ್ಯ ರೋಗಿಯು ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲು ಸಾಧ್ಯವಿಲ್ಲ. ಹೀಗಾಗಿ ಆತ ಸಂಪೂರ್ಣ ಗುಣಮುಖನಾದ ಬಳಿಕ ಆತನಿಂದ ಕಾರಣ ಕೇಳಲಾಗುವುದು ಎಂದು ಅವರು ಹೇಳಿದ್ದಾರೆ.

    ಸಾಂದರ್ಭಿಕ ಚಿತ್ರ

    ಆಪರೇಷನ್ ಯಶಸ್ವಿಯಾಗಿದ್ದಕ್ಕೆ ವೈದ್ಯರು ಸಂತಸ ವ್ಯಕ್ತಪಡಿಸಿದ್ದು, ಸದ್ಯ ರೋಗಿ ಐಸಿಯುನಲ್ಲಿದ್ದಾರೆ. ಈ ರೀತಿಯ ಯಾವುದೇ ಪ್ರಕರಣವನ್ನು ಎಂದಿಗೂ ಪರಿಗಣಿಸಿಲ್ಲ ಎಂದು ಇದೇ ವೇಳೆ  ಡಾ.ಕುಮಾರ್ ಬೈಭವ್ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಪ್ರೇಯಸಿಗೆ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧ – ಪ್ರಶ್ನೆ ಮಾಡಿದ್ದಕ್ಕೆ ವೈದ್ಯನ ಕೊಲೆ

    ಪ್ರೇಯಸಿಗೆ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧ – ಪ್ರಶ್ನೆ ಮಾಡಿದ್ದಕ್ಕೆ ವೈದ್ಯನ ಕೊಲೆ

    ಬೆಂಗಳೂರು: ಕೆಲ ದಿನಗಳ ಹಿಂದೆ ನಡೆದಿದ್ದ ವೈದ್ಯ (Doctor) ವಿಕಾಸ್ ಕೊಲೆಗೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಪ್ರಿಯತಮೆಯ ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ಡಾಕ್ಟರ್‌ನ್ನು ಹತ್ಯೆ ಮಾಡಲಾಗಿದೆ ಎಂಬ ವಿಷಯ ಬಯಲಾಗಿದೆ.

    ಕಳೆದ ಸೆಪ್ಟೆಂಬರ್ 19ರಂದು ಬೆಂಗಳೂರಿನ (Bengaluru) ಬೇಗೂರಿನ ನ್ಯೂ ಮೈಕೋಲೇಔಟ್‍ನಲ್ಲಿ ವೈದ್ಯನಾಗಿದ್ದ ವಿಕಾಸ್ ಎನ್ನುವ ಯುವಕನ ಬರ್ಬರ ಕೊಲೆಯಾಗಿತ್ತು. ಚೆನ್ನೈ (Chennai) ಮೂಲದ ವೈದ್ಯ ವಿಕಾಸ್ ಅರ್ಕೆಟಿಕ್ಟ್ ಆಗಿರುವ ಪ್ರತಿಭಾ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ಮನೆ ಕಡೆಯವರು ಒಪ್ಪಿ ಮದುವೆಗೆ ಡೇಟ್ ಕೂಡ ಫಿಕ್ಸ್ ಆಗುವುದರಲ್ಲಿತ್ತು. ಅಷ್ಟರಲ್ಲಿ ವೈದ್ಯ ವಿಕಾಸ್ ತನ್ನ ಪ್ರಿಯತಮೆ ಪ್ರತಿಭಾ ಜೊತೆಗಿದ್ದ ಖಾಸಗಿ ವೀಡಿಯೋವನ್ನು ಸೋಷಿಯಲ್ ಮೀಡಿಯಾದ ಅದೊಂದು ಗ್ರೂಪ್‍ಗೆ ಶೇರ್ ಮಾಡಿಬಿಟ್ಟಿದ್ದ.

    ಈ ವಿಚಾರ ತಿಳಿದ ಪ್ರಿಯತಮೆ ಪ್ರತಿಭಾ, ವಿಕಾಸ್‍ಗೆ ಕಾಲ್ ಮಾಡಿ ಹಿಗ್ಗಾಮುಗ್ಗಾ ಬೈದಿದ್ದಳು. ಅಷ್ಟೇ ಅಲ್ಲದೇ, ರಾಜಿ ಪಂಚಾಯ್ತಿಗೆ ಸ್ನೇಹಿತ ಸುಶೀಲ್ ಎನ್ನುವವರ ಪ್ಲಾಟ್‍ಗೆ ಕರೆದಿದ್ದಳು. ಮಾತುಕತೆಗೆ ಹೋದ ವೈದ್ಯ ವಿಕಾಸ್‍ಗೆ ಗೆಳತಿ ಪ್ರತಿಭಾಳ ಸ್ನೇಹಿತರಾದ, ಸೂರ್ಯ, ಸುಶೀಲ್, ಗೌತಮ್ ಸೇರಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದರು. ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಮಾತುಕತೆಗೆ ಎಂದು ಹೋದ ವಿಕಾಸ್ ಪ್ಲಾಟ್‍ನಲ್ಲೇ ಸಾವನ್ನಪ್ಪಿದ್ದ.

    ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೆಳತಿ ಪ್ರತಿಭಾಳ ಅಶ್ಲೀಲ ವೀಡಿಯೋ ಅಪ್ಲೋಡ್ ಮಾಡಿದ್ದಕ್ಕೆ ಕೊಲೆ ಆಯಿತು ಅನ್ನು ಮಾಹಿತಿ ಲಭ್ಯವಾಗಿತ್ತು. ಆದರೆ ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಮತ್ತೊಂದು ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ. ಅದೇನಂದ್ರೆ ವೈದ್ಯ ವಿಕಾಸ್ ಪ್ರೇಯಸಿ ಪ್ರತಿಭಾಗೆ ಸ್ನೇಹಿತ ಸುಶೀಲ್ ಜೊತೆಗೆ ಅನೈತಿಕ ಸಂಬಂಧ ಇತ್ತು. ಈ ವಿಚಾರ ತಿಳಿದ ವಿಕಾಸ್, ಪ್ರತಿಭಾ ಜೊತೆಗೆ ಗಲಾಟೆ ಮಾಡಿದ್ದ. ಅಲ್ಲದೇ ತಾವಿಬ್ಬರೂ ಜೊತೆಯಾಗಿದ್ದ ಕೆಲ ವಿಡಿಯೋಗಳನ್ನು ಸುಶೀಲ್ ಮೊಬೈಲ್‍ಗೆ ಸೆಂಡ್ ಮಾಡಿದ್ದ. ಇದರಿಂದ ಕೋಪಗೊಂಡ ಪ್ರತಿಭಾ, ಮಾತುಕತೆ ನೆಪದಲ್ಲಿ ಕರೆದು ಕೊಲೆ ಮಾಡಿದ್ದಾಳೆ ಅನ್ನೋ ಸ್ಪೋಟದ ಮಾಹಿತಿ ಸದ್ಯ ಪೊಲೀಸರಿಗೆ ಸಿಕ್ಕಿದೆ. ಇದನ್ನೂ ಓದಿ: ದಯವಿಟ್ಟು ಮದುವೆ ಮಾಡಿಸಿ ಅಂತ ಅಂಗಲಾಚಿ ಬಂದ ಪ್ರೇಮಿಗಳಿಗೆ ನೆರವಾದ ಪೊಲೀಸರು!

    ಆಸಲಿ ಸತ್ಯ ಮುಚ್ಚಿಟ್ಟ ಆರೋಪಿ ಪ್ರತಿಭಾ, ವೈದ್ಯ ಕಮ್ ಪ್ರಿಯಕರನ ಮೇಲೆ ಕಥೆ ಕಟ್ಟಿ ಸ್ನೇಹಿತರ ಜೊತೆಗೆ ಸೇರಿ ಕೊಲೆ ಮಾಡಿದಳು. ವೈದ್ಯನಾಗಿ ಉತ್ತಮ ಸೇವೆ ಸಲ್ಲಿಸಬೇಕಿದ್ದ ವಿಕಾಸ್, ಕ್ಷುಲ್ಲಕ ಕಾರಣಕ್ಕೆ ಕೊಲೆಯಾದರೆ, ಕೊಲೆ ಮಾಡಿದ ಪ್ರತಿಭಾ ಸೇರಿದಂತೆ ಎಲ್ಲರೂ ಅರ್ಕೆಟಿಕ್ಟ್ ಆಗಿ ನಗರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸದಲ್ಲಿದ್ದರು. ಈಗ ಎಲ್ಲರೂ ಜೈಲು ಸೇರಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಹಿಂಸಾಚಾರ – ಬಿಜೆಪಿ ರಾಜ್ಯಾಧ್ಯಕ್ಷನ ಬಂಧನ

    Live Tv
    [brid partner=56869869 player=32851 video=960834 autoplay=true]

  • ಕುಡಿದ ಮತ್ತಿನಲ್ಲಿ ಚಿಕಿತ್ಸೆ ನೀಡಿದ ವೈದ್ಯ – ಆಸ್ಪತ್ರೆಯಲ್ಲಿ ಮಗು ಸಾವು

    ಕುಡಿದ ಮತ್ತಿನಲ್ಲಿ ಚಿಕಿತ್ಸೆ ನೀಡಿದ ವೈದ್ಯ – ಆಸ್ಪತ್ರೆಯಲ್ಲಿ ಮಗು ಸಾವು

    ಲಕ್ನೋ: ಕುಡಿದ ಮತ್ತಿನಲ್ಲಿದ್ದ ವೈದ್ಯ ನೀಡಿದ ಚಿಕಿತ್ಸೆಯಿಂದಾಗಿ ಒಂದೂವರೆ ವರ್ಷದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ (Uttar Pradesh) ಬಾರಾಬಂಕಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಗಂಟಲಿನಲ್ಲಿ ಜೋಳ ಸಿಲುಕಿದೆ ಎಂದು ಬಾಲಕಿಯನ್ನು ಸಿರೌಲಿ ಗೌಸ್‌ಪುರ ಪ್ರದೇಶದ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ರಾತ್ರಿ ಕರ್ತವ್ಯದ ವೇಳೆ ಡಾ.ಧರ್ಮೇಂದ್ರ ಗುಪ್ತಾ ಅವರು ಆಸ್ಪತ್ರೆಯಲ್ಲಿ ಇರಲಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ. ವೈದ್ಯ ಒಂದು ಗಂಟೆಯ ನಂತರ ಅಮಲೇರಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದು, ಮಗುವಿಗೆ ಚಿಕಿತ್ಸೆ ನೀಡಿದ್ದಾರೆ. ಪರಿಣಾಮವಾಗಿ ಮಗು ಸಾವಿಗೀಡಾಗಿದೆ ಎಂದು ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಆರ್ಡರ್ ಮಾಡಿದ್ದು ಡ್ರೋನ್ ಕ್ಯಾಮೆರಾ, ಬಂದಿದ್ದು ಆಲೂಗಡ್ಡೆ- ಗ್ರಾಹಕ ಕಕ್ಕಾಬಿಕ್ಕಿ!

    ಸಿರೌಲಿ ಗೌಸ್‌ಪುರ್‌ನ ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ಡಾ. ನೀಲಂ ಗುಪ್ತಾ ಅವರು ಧರ್ಮೇಂದ್ರ ಗುಪ್ತಾ ಅವರನ್ನು ಕರ್ತವ್ಯದಿಂದ ತೆಗೆದುಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರ ತಂಡವು ತನಿಖೆ ನಡೆಸುತ್ತಿದೆ.

    ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದಕ್ಕೆ, ಮೃತ ಬಾಲಕಿ ತಾಯಿಗೆ ಇನ್ನೊಂದು ಮಗುವಿಗೆ ಜನ್ಮ ನೀಡುವಂತೆ ಡಾ.ಧರ್ಮೇಂದ್ರ ಗುಪ್ತಾ ಅವರು ಅವಮಾನಿಸಿರುವ ದೃಶ್ಯದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ತಹಸಿಲ್ ಸಿರೌಲಿ ಗೌಸ್ಪುರದಲ್ಲಿ ಪೋಸ್ಟ್ ಮಾಡಲಾದ ವೀಡಿಯೋ ಡಾ.ಗುಪ್ತಾ ಅವರದ್ದು ಎಂದು ಮುಖ್ಯ ವೈದ್ಯಾಧಿಕಾರಿ ಅವಧೇಶ್ ಕುಮಾರ್ ಯಾದವ್ ಮಂಗಳವಾರ ಹೇಳಿದ್ದಾರೆ. ಇದನ್ನೂ ಓದಿ: ಬುರ್ಖಾ ಧರಿಸದಿದ್ದಕ್ಕಾಗಿ ಪತ್ನಿಯನ್ನೇ ಚಾಕುವಿನಿಂದ ಇರಿದು ಕೊಂದ ಪತಿ

    ಘಟನೆ ಬಗ್ಗೆ ನಮಗೆ ಮಾಹಿತಿ ಬಂದಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ದೂರು ಬಂದಿಲ್ಲ ಎಂದು ಬಡೋಸರೈ ಪೊಲೀಸ್ ಠಾಣೆ ಪ್ರಭಾರಿ ಅಮಿತ್ ಮಿಶ್ರಾ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ಲಿನಿಕ್‌ನಲ್ಲಿ ಬೆಂಕಿ – ವೈದ್ಯ, ಆತನ ಇಬ್ಬರು ಮಕ್ಕಳು ದಾರುಣ ಸಾವು

    ಕ್ಲಿನಿಕ್‌ನಲ್ಲಿ ಬೆಂಕಿ – ವೈದ್ಯ, ಆತನ ಇಬ್ಬರು ಮಕ್ಕಳು ದಾರುಣ ಸಾವು

    ಅಮರಾವತಿ: ಕ್ಲಿನಿಕ್ (Clinic) ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿ ವೈದ್ಯ (Doctor) ಹಾಗೂ ಆತನ ಇಬ್ಬರು ಮಕ್ಕಳು (Children)ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ (Andhra Pradesh) ತಿರುಪತಿ ಜಿಲ್ಲೆ ರೇಣಿಗುಂಟಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.

    ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ವೈದ್ಯನ ಮನೆಯ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ರೇಣಿಗುಂಟಾ ಪೊಲೀಸರು (Renigunta Police) ತಿಳಿಸಿದ್ದಾರೆ.

    ವರದಿಗಳ ಪ್ರಕಾರ ವೈದ್ಯನ ಮನೆಯ ನೆಲದ ಮಹಡಿಯನ್ನು ಕ್ಲಿನಿಕ್ ಆಗಿ ಮಾಡಿಕೊಳ್ಳಲಾಗಿತ್ತು. ಕಟ್ಟಡದ ಮೊದಲ ಹಾಗೂ 2ನೇ ಮಹಡಿಯಲ್ಲಿ ವೈದ್ಯನ ಕುಟುಂಬ ವಾಸವಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆಯಿಂದ ಕ್ರಮ: ಸುಧಾಕರ್

    ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ರಕ್ಷಣಾ ಕಾರ್ಯದಲ್ಲಿ ವೈದ್ಯನ ಪತ್ನಿ ಹಾಗೂ ತಾಯಿಯನ್ನು ರಕ್ಷಿಸಲಾಗಿದೆ. ಗಂಭೀರ ಸುಟ್ಟ ಗಾಯಗಳಿಂದ ಡಾ. ರವಿ ಶಂಕರ್, ಅವರ 12 ವರ್ಷದ ಮಗ ಹಾಗೂ 7 ವರ್ಷದ ಮಗಳು ಸಾವನ್ನಪ್ಪಿದ್ದಾರೆ.

    ಘಟನೆಯ ಬಗ್ಗೆ ರೇಣಿಗುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: PFI ಶಂಕಿತರ ಮೊಬೈಲ್‌ನಲ್ಲಿತ್ತು ಸಾಕ್ಷಿಗಳನ್ನೇ ನಾಶ ಮಾಡುವ ಆಪ್

    Live Tv
    [brid partner=56869869 player=32851 video=960834 autoplay=true]

  • ಬೆಳಗ್ಗೆ ಎದ್ದಾಗ್ಲೇ ಬಿಕ್ಕಳಿಕೆ- ಯಾರೋ ಮಿಸ್ ಮಾಡಿಕೊಳ್ತಿದ್ದಾರೆ ಅಂದ್ರು ರಶ್ಮಿಕಾ

    ಬೆಳಗ್ಗೆ ಎದ್ದಾಗ್ಲೇ ಬಿಕ್ಕಳಿಕೆ- ಯಾರೋ ಮಿಸ್ ಮಾಡಿಕೊಳ್ತಿದ್ದಾರೆ ಅಂದ್ರು ರಶ್ಮಿಕಾ

    ಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಮಧ್ಯೆ ಬೆಳಗ್ಗೆನೇ ಯಾರೋ ನನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಹೌದು. ಸತತವಾಗಿ ಚಿತ್ರೀಕರಣದಲ್ಲಿ ತೊಡಗಿರುವ ಕಾರಣದಿಂದಾಗಿ ರಶ್ಮಿಕಾ ಅವರು ಮೊಣಕಾಲು ನೋವಿನ (Knee Pain) ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅವರು ಹೈದರಾಬಾದ್ ನ ಪ್ರತಿಷ್ಠಿತ ಆಸ್ಪತ್ರೆಗೆ (Hyderabad Hospital) ದಾಖಲಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ನಟಿ ಇದೀಗ ಟ್ವೀಟ್ (Tweet) ಒಂದನ್ನು ಮಾಡಿದ್ದಾರೆ.

    ಇಂದು ಬೆಳಗ್ಗೆ ಎದ್ದ ಕೂಡಲೇ ನನಗೆ ತುಂಬಾ ಬಿಕ್ಕಳಿಕೆ ಬಂದಿದೆ. ನನಗ ಅಚ್ಚರಿಯಾಗಿದ್ದು, ಯಾರೋ ನನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಯಾರಾಗಿರಬಹುದು ಎಂದು ಯೋಚನೆ ಮಾಡುವ ಸಿಂಬಲ್ ಹಾಕಿ ತಮ್ಮ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ

    ಆಸ್ಪತ್ರೆಗೆ ದಾಖಲಾದ ನಟಿಗೆ ಆರ್ಥೋ ಸ್ಪೆಷಲಿಸ್ಟ್ ಗುರುವಾ ರೆಡ್ಡಿ ಅವರು ರಶ್ಮಿಕಾಗೆ ಚಿಕಿತ್ಸೆ ನೀಡಿದ್ದು, ತಮಾಷೆಯಾಗಿ `ಸಾಮಿ ಸಾಮಿ ಅಂತ ಮೊಣಕಾಲಿಗೆ ಭಾರ ಹಾಕಿ ಡಾನ್ಸ್ ಮಾಡಿದ್ದೀರಿ. ಅದಕ್ಕಾಗಿ ಈ ನೋವು ಬಂದಿದೆ’ ಎಂದು ಬರೆದುಕೊಂಡಿದ್ದರು.

    ಮೊಣಕಾಲಿನ ನೋವು ಅತಿಯಾದ ಕಾರಣದಿಂದಾಗಿ ಚಿಕಿತ್ಸೆ ಪಡೆಯಲು ರಶ್ಮಿಕಾ ಬಂದಿದ್ದರು. ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದೇವೆ. ಸದ್ಯ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಸರಿ ಹೋಗುತ್ತಾರೆ. ಎಂದಿನಂತೆ ಮತ್ತೆ ಸಿನಿಮಾಗಳ ಶೂಟಿಂಗ್ (Film Shooting) ನಲ್ಲೂ ಅವರು ಭಾಗಿಯಾಗಲಿದ್ದಾರೆ. ಹೆಚ್ಚು ಮೊಣಕಾಲಿಗೆ ಕೆಲಸ ಕೊಟ್ಟಿರುವ ಕಾರಣದಿಂದಾಗಿಯೇ ಈ ನೋವು ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೋಲಾರದಲ್ಲಿ ನಕಲಿ ಡಾಕ್ಟರ್ ಹಾವಳಿ- 10ನೇ ತರಗತಿ ಫೇಲ್ ಆದವ್ರು ಇಲ್ಲಿ ವೈದ್ಯರು

    ಕೋಲಾರದಲ್ಲಿ ನಕಲಿ ಡಾಕ್ಟರ್ ಹಾವಳಿ- 10ನೇ ತರಗತಿ ಫೇಲ್ ಆದವ್ರು ಇಲ್ಲಿ ವೈದ್ಯರು

    ಕೋಲಾರ: ಜಿಲ್ಲೆಯ ಗಡಿ ಭಾಗದಲ್ಲಿ ನಕಲಿ ವೈದ್ಯರ (Doctor) ಹಾವಳಿ ಹೆಚ್ಚಾಗಿದೆ. 10ನೇ ತರಗತಿ ಕೂಡ ಪಾಸು ಮಾಡದ ಇವರು ರೋಗಿಗಳ (Patient) ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ.

    ಮುಳಬಾಗಿಲು ತಾಲೂಕಿನ ತಾಯಲೂರು, ನಂಗಲಿ ಗ್ರಾಮದಲ್ಲಿ ನಕಲಿ ಕ್ಲಿನಿಕ್‍ಗಳು (Clinic) ಹೆಚ್ಚಿದೆ. ಕೈಯಲ್ಲಿ ಸ್ಟೆತಸ್ಕೋಪ್‌ ಇಟ್ಟುಕೊಂಡು, ರೋಗಿಗಳು ಯಾವುದೇ ರೋಗ ಎಂದು ಬಂದರೂ ಸ್ಟಿರಾಯ್ಡ್‌ ಇಂಜೆಕ್ಷನ್ ಹಾಕಿ, ಎಲ್ಲಾ ವಾಸಿಯಾಗುತ್ತೆ ಅಂತಾ ಕಡಿಮೆ ಹಣ (Money) ಪಡೆದು ಚಿಕಿತ್ಸೆ ನೀಡುತ್ತಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಮಕ್ಕಳ ಕಳ್ಳರೆಂದು ಮಹಿಳೆಯರಿಗೆ ಥಳಿತ

    ಇಷ್ಟು ಮಾತ್ರವಲ್ಲದೆ ತೀರ ಜ್ವರ ಇದ್ದರೆ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಕೂಡ ಮಾಡಿ ರಿಪೋರ್ಟ್ ನೀಡಿ ಥೇಟ್ ವೈದ್ಯರಂತೆ ಚಿಕಿತ್ಸೆ ಕೊಡುತ್ತಾರೆ. ಇತ್ತ, ಪಬ್ಲಿಕ್ ಟಿವಿ ಕ್ಯಾಮೆರಾ ಕಾಣಿಸಿಕೊಳ್ಳುತ್ತಿದ್ದಂತೆ ಕಕ್ಕಾಬಿಕ್ಕಿಯಾದರು. ಇಷ್ಟೆಲ್ಲ ಗೋಲ್‍ಮಾಲ್ ನಡೆಯುತ್ತಿದ್ದರೂ ಜಿಲ್ಲಾ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿಲ್ಲ. ಇದನ್ನೂ ಓದಿ: PayCM ಪೋಸ್ಟರ್‌ ಅಂಟಿಸಲು ಕಾಲೇಜು ವಿದ್ಯಾರ್ಥಿಗಳ ಬಳಕೆ – ಸ್ಟೂಡೆಂಟ್ಸ್‌ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್‌

    Live Tv
    [brid partner=56869869 player=32851 video=960834 autoplay=true]

  • ಪ್ರಿಯತಮೆಯಿಂದಲೇ ವೈದ್ಯನ ಬರ್ಬರ ಕೊಲೆ- ಸಂಧಾನಕ್ಕೆ ಕರೆದು ಸಾಯಿಸಿದ್ಳು

    ಪ್ರಿಯತಮೆಯಿಂದಲೇ ವೈದ್ಯನ ಬರ್ಬರ ಕೊಲೆ- ಸಂಧಾನಕ್ಕೆ ಕರೆದು ಸಾಯಿಸಿದ್ಳು

    ಬೆಂಗಳೂರು: ಚೆನ್ನೈ ಮೂಲದ ವೈದ್ಯನೊಬ್ಬ (Doctor) ಬೆಂಗಳೂರಿನಲ್ಲಿ (Bengaluru) ಬರ್ಬರವಾಗಿ ಕೊಲೆ (Murder) ಯಾಗಿದ್ದಾನೆ. ಆ ಕೊಲೆ ಮಾಡಿದ್ದು ಬೇರೆ ಯಾರೋ ಅಪರಿಚಿತರಲ್ಲ, ಕೊಲೆಯಾದ ವೈದ್ಯನನ್ನು ಮದುವೆಯಾಗಬೇಕಿದ್ದ (Marriage) ಬಾವಿ ಪತ್ನಿ ಮತ್ತವಳ ಮೂವರು ಸ್ನೇಹಿತರು.

    ಪ್ರಿಯತಮೆಯಿಂದಲೇ (Lover) ಕೊಲೆಯಾದ ಪ್ರಿಯಕರನನ್ನು ವಿಕಾಸ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬಿಜೆಪಿಯವರದ್ದು ಮೊಟ್ಟೆಯ ಕಮಿಷನ್‍ನಂತೆ, ಶಾಲಾ ಬಟ್ಟೆಯಲ್ಲೂ ಕಮಿಷನ್ ಲೂಟಿಯೇ?: ಕಾಂಗ್ರೆಸ್

    ಏನಿದು ಡಾಕ್ಟರ್ ಲವ್ ಮಿಸ್ಟ್ರಿ?
    ತಮಿಳುನಾಡಿನ (Tamilnadu) ಚೆನ್ನೈ ಮೂಲದ ಡಾ.ವಿಕಾಸ್, ಉಕ್ರೇನ್ ನಲ್ಲಿ ಎಮ್‌ಬಿಬಿಎಸ್ (MBBS) ಮಾಡ್ಕೊಂಡು, ಬೆಂಗಳೂರಿನಲ್ಲಿ ವೈದ್ಯನಾಗಿ ಅಭ್ಯಾಸ ಮಾಡ್ತಿದ್ದ. ಇದೇ ವೇಳೆ ಅರ್ಕೆಟಿಕ್ಟ್ ಆಗಿದ್ದ ಪ್ರತಿಭಾ ಅನ್ನೋ ಯುವತಿಯ ಪರಿಚಯವಾಗಿ, ಪರಿಚಯ ಪ್ರೀತಿಯಾಗಿತ್ತು. ನಂತರ ಇಬ್ಬರು ಮದುವೆ ಆಗಬೇಕು ಅಂತಾ ನಿರ್ಧರಿಸಿ ಎರಡು ಕುಟುಂಬಗಳು ಮಾತಾಡಿ ಇನ್ನೇನು ಮೂರು ತಿಂಗಳಲ್ಲಿ ಮದುವೆ ಕೂಡ ಫಿಕ್ಸ್ ಆಗಿತ್ತು.

    ಈ ನಡುವೆ ಅದೊಂದು ದಿನ ಪ್ರತಿಭಾ ಮತ್ತು ವಿಕಾಸ್ (Vikas) ದೈಹಿಕ ಸಂಬಂಧದ ವೇಳೆ ಒಂದಷ್ಟು ನಗ್ನ ಫೋಟೋಗಳನ್ನು ತೆಗೆದುಕೊಂಡಿದ್ರು. ಬರೀ ಇಷ್ಟೇ ಆಗಿದ್ರೆ, ಇವತ್ತು ಡಾಕ್ಟರ್ ವಿಕಾಸ್ ಕೊಲೆಯಾಗ್ತಾ ಇರಲಿಲ್ಲ. ಡಾಕ್ಟರ್ ವಿಕಾಸ್, ಪ್ರಿಯತಮೆ ಜೊತೆಗಿನ ನಗ್ನ ವೀಡಿಯೋವನ್ನು ಸೋಷಿಯಲ್ ಮೀಡಿಯಾದ ಕ್ಲೋಸ್ ಫ್ರೆಂಡ್ಸ್ ಗ್ರೂಪ್ ಗೆ ಶೇರ್ ಮಾಡ್ಕೊಂಡಿದ್ದ.

    ಸಂಧಾನಕ್ಕೆ ಕರೆದು ಕೊಲೆ:
    ಯಾವಾಗ ಪ್ರತಿಭಾಳಿಗೆ ಈ ವಿಚಾರ ಗೊತ್ತಾಯ್ತೋ, ವಿಕಾಸ್ ಬಳಿ ಜಗಳ ಮಾಡಿದಳು. ಡಾಕ್ಟರ್ ವಿಕಾಸ್ ಎಲ್ಲವನ್ನೂ ಡಿಲೀಟ್ ಮಾಡಿ, ಪ್ರಿಯತಮೆಗೆ ಸಾರಿ ಕೂಡ ಕೇಳಿದ್ದ. ಆದರೆ ಇಷ್ಟಕ್ಕೆ ಸುಮ್ಮನಾಗದ ಪ್ರತಿಭಾ, ತನ್ನ ಕ್ಲಾಸ್ ಮೆಟ್‌ಗಳಾದ ಸುಶೀಲ್, ಸೂರ್ಯ, ಗೌತಮ್ ಅನ್ನೋರ ಜೊತೆಗೆ ಪ್ರಿಯಕರ ವಿಕಾಸ್ ನನ್ನು ಮಾತುಕತೆಗೆ ಕರೆಸಿಕೊಂಡಿದ್ರು. ಅದಕ್ಕೆ ಒಪ್ಪಿ ವಿಕಾಸ್ ಕೂಡ ಬಂದಿದ್ದ. ಮಾತಾಡುತ್ತಿದ್ದ ವೇಳೆ ಮಾತಿಗೆ ಮಾತು ಬೆಳೆದು, ಯುವತಿ ಪ್ರತಿಭಾ ಸೇರಿದಂತೆ ನಾಲ್ವರು ಡಾಕ್ಟರ್ ವಿಕಾಸ್‌ಗೆ ಮನೆಯಲ್ಲೇ ಹಿಗ್ಗಾಮುಗ್ಗ ಥಳಿಸಿದ್ರು. ರಾತ್ರಿ ಹತ್ತು ಗಂಟೆಗೆ ಶುರುವಾದ ಗಲಾಟೆ ಮಧ್ಯರಾತ್ರಿ ಒಂದು ಗಂಟೆ ತನಕ ನಡೆದಿತ್ತು. ಕೊನೆಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ವಿಕಾಸ್ ಸಾವನ್ನಪ್ಪಿದ್ದ.

    ವಿಕಾಸ್ ಸತ್ತುಬಿದ್ದಿರೋದನ್ನು ಲೆಕ್ಕಿಸದ ಪ್ರತಿಭಾ, ಸುಶೀಲ್, ಸೂರ್ಯ, ಗೌತಮ್, ತುಂಬಾ ಹೊಟ್ಟೆ ಹಸಿತಿದೆ ಅಂತಾ ಒಟ್ಟಿಗೆ ಕೂತು ಊಟ ಮಾಡಿದ್ರು. ನಂತರ ಬೆಳಗ್ಗಿನ ಜಾವದ ಹೊತ್ತಿಗೆ ಪ್ರಿಯತಮೆ ಪ್ರತಿಭಾ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಿಸೋಕೆ ಮುಂದಾದ ವೇಳೆ ಡಾಕ್ಟರ್ ವಿಕಾಸ್ ಸಾವನ್ನಪ್ಪಿರೋದು ಖಚಿತವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬೇಗೂರು ಪೊಲೀಸರು ಪ್ರತಿಭಾ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಯಾಗಿರುವ ಸೂರ್ಯ ನಾಪತ್ತೆಯಾಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಕ್ಟೋಬರ್ ಅಂತ್ಯಕ್ಕೆ ರಾಜ್ಯದಲ್ಲಿ ನಮ್ಮ ಕ್ಲಿನಿಕ್ ಸಂಪೂರ್ಣ ಪ್ರಾರಂಭ: ಸುಧಾಕರ್

    ಅಕ್ಟೋಬರ್ ಅಂತ್ಯಕ್ಕೆ ರಾಜ್ಯದಲ್ಲಿ ನಮ್ಮ ಕ್ಲಿನಿಕ್ ಸಂಪೂರ್ಣ ಪ್ರಾರಂಭ: ಸುಧಾಕರ್

    ಬೆಂಗಳೂರು: ಅಕ್ಟೋಬರ್ ಅಂತ್ಯದ ವೇಳೆ ನಮ್ಮ ಕ್ಲಿನಿಕ್ (Namma Clinic) ರಾಜ್ಯದಲ್ಲಿ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ (Sudhakar) ತಿಳಿಸಿದರು.

    ನಮ್ಮ ಕ್ಲಿನಿಕ್ ಯೋಜನೆ ಕೂಡಲೇ ಸ್ಥಗಿತ ಮಾಡಬೇಕು ಎಂದು ಜೆಡಿಎಸ್ ಸದಸ್ಯ ಮಂಜೇಗೌಡ ವಿಧಾನ ಪರಿಷತ್ (Session) ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಿದರು.ಈಗಾಗಲೇ ಇರುವ ಸರ್ಕಾರಿ ಆಸ್ಪತ್ರೆಗೆ ವೈದ್ಯರ ಕೊರತೆ ಇದೆ. ಸರ್ಕಾರಿ ಆಸ್ಪತ್ರೆಗಳು ಗುಣಮಟ್ಟದಲ್ಲಿ ಕೆಲಸ ಮಾಡ್ತಿಲ್ಲ. ಈಗ ಹೊಸದಾಗಿ ನಮ್ಮ ಕ್ಲಿನಿಕ್ ಸ್ಥಾಪನೆಗೆ 150 ಕೋಟಿ ಯಾಕೆ ಅಂತ ಪ್ರಶ್ನೆ ಮಾಡಿದರು. ಕೂಡಲೇ ಯೋಜನೆ ಕೈ ಬಿಡುವಂತೆ ಒತ್ತಾಯ ಮಾಡಿದರು.

    ಇದಕ್ಕೆ ಉತ್ತರ ನೀಡಿದ ಸಚಿವ ಡಾ.‌ಸುಧಾಕರ್, ನಗರದ ಭಾಗದಲ್ಲಿ 438 ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭ ಮಾಡಲಾಗ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಕ್ಲಿನಿಕ್ ಪ್ರಾರಂಭ ಮಾಡುತ್ತೇವೆ ಹಾಗೂ ರಾಜ್ಯದ ಇತರೆ ಭಾಗದಲ್ಲಿ 195 ಕ್ಲಿನಿಕ್ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.

    ನಮ್ಮ ಕ್ಲಿನಿಕ್‌ನಲ್ಲಿ 12 ಸೇವೆಗಳು ಲಭ್ಯವಿರಲಿವೆ. ಇದಕ್ಕಾಗಿ 155 ಕೋಟಿ ಹಣ ಸರ್ಕಾರದಿಂದ ಮೀಸಲು ಇಡಲಾಗಿದೆ ಎಂದು ಮಾಹಿತಿ ನೀಡಿದರು. ನಗರ ಭಾಗದ ಕೊಳಗೇರಿ, ಬಡ ವರ್ಗದ ಜನರಿಗೆ ಅನುಕೂಲ ಆಗಲು ಈ ಕ್ಲಿನಿಕ್ ಪ್ರಾರಂಭ ಮಾಡಲಾಗುತ್ತಿದೆ. ಅಕ್ಟೋಬರ್ ಅಂತ್ಯದ ಒಳಗೆ ರಾಜ್ಯದಲ್ಲಿ ಎಲ್ಲಾ 438 ಕ್ಲಿನಿಕ್ ಆರಂಭ ಆಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಕ್ಷಮೆ ಕೇಳದ ಕೆಂಪಣ್ಣ ಸೇರಿ 18 ಮಂದಿ ಮೇಲೆ 50 ಕೋಟಿ ಮಾನನಷ್ಟ ಕೇಸ್‌, ಶೀಘ್ರವೇ ಎಫ್‌ಐಆರ್‌: ಮುನಿರತ್ನ

    ವೈದ್ಯರ ಕೊರತೆ ನೀಗಿಸಲು ಈಗಾಗಲೇ 4 ಸಾವಿರ ವೈದ್ಯರ (Doctor) ನೇಮಕ ಆಗಿದೆ. ನಮ್ಮ‌ ಕ್ಲಿನಿಕ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ವೈದ್ಯರು ಕೆಲಸ ಮಾಡಲಿದ್ದು, ಯಾವುದೇ ತೊಂದರೆ ಆಗದಂತೆ ಕ್ರಮವಹಿಸುತ್ತೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಆಟೋ ಚಾಲಕನಿಗೆ ಜಾಕ್‌ಪಟ್‌ – ಓಣಂ ಬಂಪರ್‌ ಲಾಟರಿಯಲ್ಲಿ 25 ಕೋಟಿ ಗೆದ್ದ

    Live Tv
    [brid partner=56869869 player=32851 video=960834 autoplay=true]

  • ಕಾರಿಗೆ ನಾಯಿಯನ್ನು ಕಟ್ಟಿ ನಡುರಸ್ತೆಯಲ್ಲಿ ಎಳೆದಾಡಿದ – ಕ್ರೂರಿ ವೈದ್ಯನ ವಿರುದ್ಧ ಕೇಸ್

    ಕಾರಿಗೆ ನಾಯಿಯನ್ನು ಕಟ್ಟಿ ನಡುರಸ್ತೆಯಲ್ಲಿ ಎಳೆದಾಡಿದ – ಕ್ರೂರಿ ವೈದ್ಯನ ವಿರುದ್ಧ ಕೇಸ್

    ಜೈಪುರ: ಜೋಧ್‍ಪುರದ(Jodhpur) ವ್ಯಕ್ತಿಯೋರ್ವ ತನ್ನ ಕಾರಿಗೆ ನಾಯಿಯನ್ನು(Dog) ಚೈನ್‍ನಲ್ಲಿ (Chain) ಕಟ್ಟಿಕೊಂಡು ನಡುರಸ್ತೆಯಲ್ಲಿ ನಿಷ್ಕರುಣೆಯಿಂದ ಎಳೆದುಕೊಂಡು ಹೋದ ಹಿನ್ನೆಲೆ ಆತನ ವಿರುದ್ಧ ಪ್ರಾಣಿಹಿಂಸೆ (Animal Cruelty) ಪ್ರಕರಣ ದಾಖಲಾಗಿದೆ.

    ಭಾನುವಾರ ರಾಜಸ್ಥಾನದ(Rajasthan) ಜೋಧ್‍ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇದೀಗ ಈ ವೀಡಿಯೋ (Video) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ವೈದ್ಯನೋರ್ವ(Doctor) ನಾಯಿಯ ಕುತ್ತಿಗೆಗೆ ಚೈನ್ ಕಟ್ಟಿ, ತನ್ನ ಕಾರಿಗೆ ಕಟ್ಟಿಕೊಂಡು ವಾಹನ ಚಲಾಯಿಸಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಇಂದು ಬ್ರಿಟನ್ ರಾಣಿ ಎಲಿಜಬೆತ್-2 ಅಂತ್ಯಕ್ರಿಯೆ – ದ್ರೌಪದಿ ಮುರ್ಮು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗಿ

    ಇದೇ ವೇಳೆ ಬೈಕ್ ಸವಾರರೊಬ್ಬರು (Bike Rider) ಪ್ರಾಣಿ ಹಿಂಸೆ ಪಡುತ್ತಿರುವುದನ್ನು ಕಂಡು ತಕ್ಷಣ ಕಾರಿಗೆ ಅಡ್ಡಹಾಕಿದ್ದಾರೆ. ನಂತರ ನಾಯಿಯ ಕುತ್ತಿಗೆಗೆ ಕಟ್ಟಿದ್ದ ಚೈನ್ ಬಿಚ್ಚಿ, ಘಟನೆ ಬಗ್ಗೆ ನಗರದ ಡಾಗ್ ಹೋಮ್ ಫೌಂಡೇಶನ್‍ಗೆ (Dog Home Foundation) ಮಾಹಿತಿ ನೀಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನಾಯಿಗೆ ಸ್ಥಳೀಯರು ಆಂಬುಲೆನ್ಸ್ ವ್ಯವಸ್ಥೆಗೊಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಆರೋಪಿಯನ್ನು ಡಾ. ರಜನೀಶ್ ಗಾಲ್ವಾ (Dr Rajneesh Galwa) ಎಂದು ಗುರುತಿಸಲಾಗಿದ್ದು, ಈತನ ಬಗ್ಗೆ ತಕ್ಷಣ  ಪೊಲೀಸರಿಗೆ(Police) ಕರೆ ಮಾಡಿ ತಿಳಿಸಿದ್ದಾರೆ. ತಮ್ಮ ಮನೆಯ ಸಮೀಪವೇ ಬೀದಿ ನಾಯಿ (Street Dog) ವಾಸವಿದ್ದು, ಅದನ್ನು ಅಲ್ಲಿಂದ ಬೇರೆಡೆಗೆ ಬಿಡಲು ಕರೆದುಕೊಂಡು ಹೋಗುತ್ತಿದೇನು ಎಂದು ಆರೋಪಿ ತಿಳಿಸಿದ್ದಾನೆ. ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಆಪರೇಷನ್‌ ಬುಲ್ಡೋಜರ್‌ – ದೊಡ್ಡ ಕಟ್ಟಡಗಳು, ವಿಲ್ಲಾಗಳನ್ನು ಕೆಡವುತ್ತಾ BBMP?

    ಈ ಸಂಬಂಧ ನಗರದ ಡಾಗ್ ಹೋಮ್ ಫೌಂಡೇಶನ್, ಜೋಧಪುರ ವೈದ್ಯನ ವಿರುದ್ಧ ಪ್ರಾಣಿಹಿಂಸೆ ಪ್ರಕರಣ ( Case of Animal Abuse) ದಾಖಲಿಸಿದೆ ಎಂದು ಎಸ್‍ಎಚ್‍ಒ ಜೋಗೇಂದ್ರ ಸಿಂಗ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯ ಹೊಟ್ಟೆಯಿಂದ ವೈದ್ಯರು ತೆಗೆದರು 55 ಬ್ಯಾಟರಿ

    ಮಹಿಳೆಯ ಹೊಟ್ಟೆಯಿಂದ ವೈದ್ಯರು ತೆಗೆದರು 55 ಬ್ಯಾಟರಿ

    ಡಬ್ಲಿನ್: 66 ವರ್ಷದ ಮಹಿಳೆಯ (Woman) ಹೊಟ್ಟೆ ಹಾಗೂ ಕರುಳಿನಿಂದ ಬರೋಬ್ಬರಿ 55 ಬ್ಯಾಟರಿಗಳನ್ನು (Battery) ವೈದ್ಯರು (Doctor) ಹೊರ ತೆಗೆದಿರುವ ವಿಚಿತ್ರ ಘಟನೆ ಐರ್ಲೆಂಡಿನಲ್ಲಿ (Ireland) ನಡೆದಿದೆ. ಮಹಿಳೆ ಉದ್ದೇಶಪೂರ್ವಕವಾಗಿಯೇ ತನ್ನನ್ನು ತಾನು ಘಾಸಿಗೊಳಿಸುವ ಉದ್ದೇಶದಿಂದ ಬ್ಯಾಟರಿಗಳನ್ನು ನುಂಗಿದ್ದಾಳೆ ಎಂದು ತಿಳಿದುಬಂದಿದೆ.

    ಮಹಿಳೆ ಕೈಗೆ ಸಿಕ್ಕ ಬ್ಯಾಟರಿಗಳನ್ನೆಲ್ಲಾ ನುಂಗಿರುವುದಾಗಿ ತಿಳಿಸಿದ್ದಾಳೆ. ಆದರೆ ಎಷ್ಟು ಬ್ಯಾಟರಿಗಳನ್ನು ನುಂಗಿದ್ದಾಳೆ ಎಂಬ ಲೆಕ್ಕ ಆಕೆಯೂ ಇಟ್ಟುಕೊಂಡಿರಲಿಲ್ಲ. ಆಕೆ ಆಸ್ಪತ್ರೆಗೆ ದಾಖಲಾದ ಬಳಿಕ ಆಕೆಯ ಹೊಟ್ಟೆಯ ಭಾಗದ ಎಕ್ಸ್-ರೇ ಪರೀಕ್ಷೆಯ ವೇಳೆ ಹೊಟ್ಟೆಯಲ್ಲಿ ಹಾಗೂ ಕರುಳಿನಲ್ಲಿ ಹಲವು ಬ್ಯಾಟರಿಗಳು ಇರುವುದನ್ನು ನೋಡಿ ದಂಗಾಗಿದ್ದಾರೆ.

    ಆರಂಭದಲ್ಲಿ ವೈದ್ಯರು ಮಹಿಳೆಯ ದೇಹದಿಂದ ಬ್ಯಾಟರಿಗಳನ್ನು ನೈಸರ್ಗಿಕವಾಗಿಯೇ ಹೊರ ಹಾಕಲು ಕಾದಿದ್ದಾರೆ. 1 ವಾರದ ಬಳಿಕ ಮತ್ತೆ ಸ್ಕ್ಯಾನ್ ಮಾಡಿ ನೋಡಿದಾಗ ಮತ್ತಷ್ಟು ಬ್ಯಾಟರಿಗಳು ಇದ್ದುದನ್ನು ನೋಡಿದ್ದಾರೆ. ಆಕೆ ತಾನಾಗಿಯೇ AA ಬ್ಯಾಟರಿಗಳನ್ನು ಮಾತ್ರವೇ ಹೊರ ಹಾಕಲು ಸಾಮರ್ಥ್ಯಳಾಗಿದ್ದು, AAA ಬ್ಯಾಟರಿಗಳನ್ನು ಹೊರ ಹಾಕಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಸತತ ಎರಡೂವರೆ ಗಂಟೆಗಳ ಕಾಲ ಲಿಫ್ಟ್‌ನಲ್ಲಿ ಸಿಕ್ಕಿಬಿದ್ದ 6ರ ಬಾಲಕ

    ಬ್ಯಾಟರಿಗಳ ತೂಕದಿಂದಾಗಿ ಆಕೆಯ ಹೊಟ್ಟೆ ಹಿಗ್ಗಿದ್ದು ಮಾತ್ರವಲ್ಲದೇ ಅವು ಗುದದ್ವಾರದ ಮೂಳೆಗಳಲ್ಲೂ ನೇತಾಡಿಕೊಂಡಿದ್ದವು ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಎಲ್ಲಾ ಬ್ಯಾಟರಿಗಳನ್ನೂ ತೆಗೆದುಹಾಕಿದ್ದಾರೆ.

    ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ಒಟ್ಟು 55 ಬ್ಯಾಟರಿಗಳನ್ನು ತೆಗೆದಿದ್ದು, ಇದು ಇಲ್ಲಿಯವರೆಗೆ ಶಸ್ತ್ರಚಿಕಿತ್ಸೆಯಲ್ಲಿ ಮನಿಷ್ಯರ ಹೊಟ್ಟೆಯಿಂದ ತೆಗೆಯಲಾದ ಅತಿ ಹೆಚ್ಚು ಬ್ಯಾಟರಿಗಳು ಎಂದು ತಿಳಿಸಿದ್ದಾರೆ. ಮಾತ್ರವಲ್ಲದೇ ಆ ಬ್ಯಾಟರಿಗಳು ಆಕೆಯ ಜೀರ್ಣಕ್ರಿಯೆಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ ಟೈಂನಲ್ಲಿ ನಾಪತ್ತೆಯಾಗಿದ್ದ ಬೆಕ್ಕು 2 ವರ್ಷಗಳ ನಂತರ ತಾನೇ ಮನೆಗೆ ಬಂತು!

    Live Tv
    [brid partner=56869869 player=32851 video=960834 autoplay=true]