Tag: doctor

  • ಜಿಲ್ಲಾಸ್ಪತ್ರೆಯ 7 ವೈದ್ಯರ ಬ್ಯಾಗ್‌ಗಳನ್ನು ಎಸ್ಕೇಪ್ ಮಾಡಿದ ಭೂಪ

    ಜಿಲ್ಲಾಸ್ಪತ್ರೆಯ 7 ವೈದ್ಯರ ಬ್ಯಾಗ್‌ಗಳನ್ನು ಎಸ್ಕೇಪ್ ಮಾಡಿದ ಭೂಪ

    ಮಡಿಕೇರಿ: ಜಿಲ್ಲಾಸ್ಪತ್ರೆಯಲ್ಲಿ (Hospital) ಒಂದಲ್ಲ ಒಂದು ಕರ್ಮಕಾಂಡಗಳು ನಡೆಯುತ್ತಲೇ ಇದೆ.‌ ಇತ್ತೀಚೆಗೆ ಆಸ್ಪತ್ರೆಯ ಶವಗಾರದಲ್ಲಿ ಡಿ ದರ್ಜೆ ನೌಕರನೋಬ್ಬ ಶವಗಾರದಲ್ಲೇ ಮಹಿಳೆಯರು, ಯುವತಿಯರ ಜೊತೆ ಪಲ್ಲಂಘದಾಟ ನಡೆಸಿ ಜಿಲ್ಲೆಯಲ್ಲಿ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಇದೀಗ ಜಿಲ್ಲಾ ಆಸ್ಪತ್ರೆಯಲ್ಲೇ ಕಳ್ಳನೊಬ್ಬ 7 ವೈದ್ಯರ (Doctor) ಬ್ಯಾಗ್‌ಗಳನ್ನು ಎಸ್ಕೇಪ್ ಮಾಡಿರುವ ವೀಡಿಯೋವೊಂದು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ.

    ಮಡಿಕೇರಿ (Madikeri) ನಗರದಲ್ಲಿ ಇರುವ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಕಳ್ಳನ್ನೋರ್ವ ಆಸ್ಪತ್ರೆಯಲ್ಲಿ ವೈದ್ಯರು ಇಟ್ಟಿದ್ದ ಬ್ಯಾಗ್‌ಗಳನ್ನು ಕಳವು ಮಾಡಿದ್ದಾನೆ. ಈತ ಸಂಜೆ ಸಮಯದಲ್ಲಿ ಆಸ್ಪತ್ರೆಗೆ ಎಂಟ್ರಿ ನೀಡಿದ್ದು, ಸುಮಾರು ಒಂದು ತಾಸು ಆಸ್ಪತ್ರೆ ಸುತ್ತ ಓಡಾಟ ನಡೆಸಿದ್ದಾನೆ. ಅದಾದ ಬಳಿಕ ವೈದ್ಯರ ಬ್ಯಾಗ್‌ಗಳನ್ನು ಎಗರಿಸಿದ ಭೂಪ ಆಸ್ಪತ್ರೆ ಹೊರಗೆ ಬಂದು ಬ್ಯಾಗ್‌ಗಳನ್ನು ಜಾಲಾಡಿದ್ದಾನೆ. ನಂತರ ಬ್ಯಾಗುಗಳಲ್ಲಿದ್ದ ವೈದ್ಯರ ಎಟಿಎಂ ಕಾರ್ಡ್‌ಗಳನ್ನು ಎಗರಿಸಿದ ಅತ್ತ ಆಸ್ಪತ್ರೆಗಳ ಮುಂಭಾಗದಲ್ಲಿದ್ದ ಒಂದು ಬೈಕನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾನೆ.

    ಘಟನೆಗೆ ಸಂಬಂಧಿಸಿ ಕಳ್ಳನ ಕೈಚಳಕ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ವರ್ಷ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಫೋನ್ ಕಳವಾಗಿತ್ತು. ಇದೀಗ 7 ವೈದ್ಯರ ಬ್ಯಾಗುಗಳ ಕಳವಾಗಿದ್ದು, 7 ವೈದ್ಯರು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರ ಠಾಣೆ ಎಸ್ಐ ಶ್ರೀನಿವಾಸ್ ಭೇಟಿ ನೀಡಿದ್ದಾರೆ. ಅಲ್ಲದೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ- ಬಿಜೆಪಿಗೆ ಸುಮಲತಾ ಆಪ್ತ ಸಚ್ಚಿದಾನಂದ ಸೇರ್ಪಡೆ

    ಕಳೆದ ರಾತ್ರಿ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಹೆಚ್ಚಿನ ಸೆಕ್ಯುರಿಟಿ ಇಲ್ಲದ ಕಾರಣ ಕಳ್ಳತನವಾಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಪ್ರಕರಣವಾದ ಬಳಿಕ ಅಸ್ಪತ್ರೆಗೆ ಸೆಕ್ಯುರಿಟಿ ಇನ್ನಷ್ಟು ಹೆಚ್ಚಿಸುವುದಾಗಿ ಮೆಡಿಕಲ್ ಸೂಪರಿಂಟೆಂಡೆಂಟ್ ರೂಪೇಶ್ ತಿಳಿಸಿದ್ದಾರೆ. ಒಟ್ನಲ್ಲಿ ಇದೀಗಾ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ರಕ್ಷಣೆ ಇಲ್ವಾ ಅನ್ನೋ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಬಸ್ ಪಲ್ಟಿ – 9 ಜನರಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಶ್ರದ್ಧಾಳನ್ನ ಕೊಂದು ಗೆಳತಿಯೊಂದಿಗೆ ಸೆಕ್ಸ್- ಡಾಕ್ಟರ್ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್

    ಶ್ರದ್ಧಾಳನ್ನ ಕೊಂದು ಗೆಳತಿಯೊಂದಿಗೆ ಸೆಕ್ಸ್- ಡಾಕ್ಟರ್ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್

    ನವದೆಹಲಿ: ಲಿಂವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ (LiveIn RelationShip) ಗೆಳತಿ ಶ್ರದ್ಧಾ ವಾಕರ್‌ನನ್ನ (Shraddha Walker) ಕೊಂದು 35 ತುಂಡುಗಳಾಗಿ ಕತ್ತರಿಸಿ, ಬಿಸಾಡಿದ್ದ ಅಫ್ತಾಬ್ ಅಮೀನ್ ಪೂನಾವಾಲಾನ (Aftab Amin Poonawalla) ಮತ್ತೊಂದು ಕರಾಳಮುಖ ಪೊಲೀಸ್ ತನಿಖೆ (Police Investigation) ವೇಳೆ ಬಯಲಾಗಿದೆ.

    ತನ್ನ ಗೆಳತಿಯನ್ನ ಕ್ರೂರವಾಗಿ ಕೊಂದು ಬಳಿಕ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಹೊಸ ಫ್ರಿಡ್ಜ್‌ನಲ್ಲಿಟ್ಟಿದ್ದರೂ ತನ್ನ ರೂಮಿಗೆ ಕರೆದುಕೊಂಡು ಮತ್ತೊಬ್ಬ ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಅಲ್ಲದೇ ಒಬ್ಬ ವೈದ್ಯೆ (Doctor) ಜೊತೆಗೂ ಡೇಟಿಂಗ್ (Dating) ನಡೆಸುತ್ತಿದ್ದ ಎನ್ನುವ ಸತ್ಯ ಬೆಳಕಿಗೆ ಬಂದಿದೆ. ಇವರು ಮನೋವೈದ್ಯರಾಗಿದ್ದು, ಡೇಟಿಂಗ್ ಆ್ಯಪ್‌ನಲ್ಲಿ (Dating APP) ಅಫ್ತಾಬ್‌ಗೆ ಪರಿಚಯವಾಗಿದ್ದರು ಎಂದು ಪೊಲೀಸರು (Police) ತಿಳಿಸಿದ್ದಾರೆ. ಶನಿವಾರ ವೈದ್ಯೆಯನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ತಮಿಳುನಾಡು ರೈತ ಸಾವು

    ಶ್ರದ್ಧಾ ಮೊದಲಬಾರಿಗೆ ಭೇಟಿ ಮಾಡಿದ `ಬಂಬಲ್’ ಎಂಬ ಡೇಟಿಂಗ್ ಆ್ಯಪ್ ಮೂಲಕವೇ ಈಕೆಯನ್ನು ಅಫ್ತಾಬ್ ಮೊದಲಿಗೆ ಪರಿಚಯ ಮಾಡಿಕೊಂಡಿದ್ದ. ಅಲ್ಲದೇ ಈ ಆ್ಯಪ್ ಮೂಲಕ ಮತ್ತಷ್ಟು ಮಹಿಳೆಯರ ಪರಿಚಯ ಜೊತೆಗೂ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ. ಪೊಲೀಸರು ಈ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಸರ್ಕಾರಿ ಆಸ್ಪತ್ರೆಗೆ ಬಂತು ರೋಬೊ ಡಾಕ್ಟರ್ – ಏನಿದರ ವಿಶೇಷತೆ?

    ಅಫ್ತಾಬ್ ಜೈಲಿಗೆ: ಅಫ್ತಾಬ್ ಅಮೀನ್ ಪೂನಾವಾಲ ಪೊಲೀಸ್ ಕಸ್ಟಡಿ ಅವಧಿ ಮುಗಿದಿದೆ. ಹೀಗಾಗಿ 13 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಆತನ ಸುಳ್ಳು ಪತ್ತೆಗೆ ಮಂಪರು ಪರೀಕ್ಷೆ ಮಾಡಿಸೋದು ಬಾಕಿಯಿದೆ. ಅದಕ್ಕೂ ಮುನ್ನ ಪಾಲಿಗ್ರಾಫ್ ಪರೀಕ್ಷೆ ಮಾಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗ್ಳೂರಿನ ಸರ್ಕಾರಿ ಆಸ್ಪತ್ರೆಗೆ ಬಂತು ರೋಬೊ ಡಾಕ್ಟರ್ – ಏನಿದರ ವಿಶೇಷತೆ?

    ಬೆಂಗ್ಳೂರಿನ ಸರ್ಕಾರಿ ಆಸ್ಪತ್ರೆಗೆ ಬಂತು ರೋಬೊ ಡಾಕ್ಟರ್ – ಏನಿದರ ವಿಶೇಷತೆ?

    ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳೆಂದರೆ (Government Hospital) ಮೂಗುಮುರಿಯೋ ಜನರೇ ಜಾಸ್ತಿ. ಆಸ್ಪತ್ರೆ ಕ್ಲೀನ್ ಇರಲ್ಲ, ನರ್ಸ್‌ಗಳ ದರ್ಪ ಜೋರಾಗಿರುತ್ತೆ ಅಂತ ನೂರೆಂಟು ಕಂಪ್ಲೆಂಟ್. ಆದರೆ ಬೆಂಗಳೂರಿನ ಈ ಸರ್ಕಾರಿ ಆಸ್ಪತ್ರೆ ಇದೆಲ್ಲದಕ್ಕೂ ಸೆಡ್ಡು ಹೊಡೆದು, ಆಸ್ಪತ್ರೆಗಳೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

    ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ (Gandhi Hospital Bangalore) ರೋಬೊ ಟ್ರೀಟ್ಮೆಂಟ್:
    ಟೆಕ್ನಾಲಜಿ ಬೆಳೆದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಂತೂ ದಿನನಿತ್ಯ ಲೇಟೆಸ್ಟ್ ಟೆಕ್ನಾಲಜಿ ಪರಿಚಯ ಆಗ್ತಿದೆ. ಆದರೆ ಸರ್ಕಾರಿ ಆಸ್ಪತ್ರೆಗಳು ಮಾತ್ರ ಆದ್ಯಾವಾಗ ಈ ಎಲ್ಲಾ ಸೌಲಭ್ಯಗಳನ್ನ ತಂದು ಬಡವರ ಕಷ್ಟಕ್ಕೆ ಆಗುತ್ತವೆ ಅನ್ನೋ ಕೊರಗು ಸಾಮಾನ್ಯರಿಗೆ ಕಾಡುತ್ತಿತ್ತು. ಈ ನಿಟ್ಟಿನಲ್ಲಿ ವೈದ್ಯಕೀಯ ವಲಯದಲ್ಲಿರುವ ಕಾಂಪಿಟೇಶನ್ ತಕ್ಕಂತೆ ಇದೀಗ ಆರೋಗ್ಯ ಇಲಾಖೆ ಕೂಡ ಹೆಜ್ಜೆ ಹಾಕಲು ಪ್ರಯತ್ನಿಸಿದೆ. ಇದರ ಭಾಗವಾಗಿ ಇದೇ ಮೊದಲ ಬಾರಿಗೆ ಬೆಂಗಳೂರು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ (Gandhi Hospital) ಮೊದಲ ಬಾರಿಗೆ ರೋಬೋಟಿಕ್ ಟೆಕ್ನಾಲಜಿ ಪರಿಚಯ ಮಾಡಿದೆ. ಇದನ್ನೂ ಓದಿ: `ಗಾಲ್ವಾನ್ ಸೇಸ್ ಹಾಯ್’ – ರಿಚಾ ಚಡ್ಡಾ ಬೆಂಬಲಿಸಿದ ನಟ ಪ್ರಕಾಶ್ ರಾಜ್

    ಏನೇನು ಅನುಕೂಲ?:
    ಹೌದು. ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆ ಈ ಟೆಕ್ನಾಲಜಿ ಬಳಕೆ ಮಾಡುತ್ತಿರುವ ಮೊದಲ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಸ್ಪತ್ರೆಯ ಐಸಿಯು (ICU) ನಲ್ಲಿ ಈ ಟೆಕ್ನಾಲಜಿ ಬಳಕೆ ಮಾಡಲಾಗುತ್ತಿದ್ದು, ಒಂದೇ ರೂಮಿನಲ್ಲಿ ಕುಳಿತು ಹಿರಿಯ ವೈದ್ಯರು ರೋಗಿಗೆ ಸಂಬಂಧಿಸಿದ ಚಿಕಿತ್ಸೆ ನೀಡಬಹುದಾಗಿದೆ. ಜೊತೆಗೆ ಒಂದೇ ರೂಂನಲ್ಲಿ ಕುಳಿತು ಇಡೀ ಐಸಿಯುನಲ್ಲಿರುವ ರೋಗಿಗಳ ಸ್ಥಿತಿಗತಿಗಳನ್ನ ತಿಳಿಯಬಹುದಾಗಿದೆ. ಅಲ್ಲದೇ ಕೆಲವೊಮ್ಮೆ ಇತರರಿಂದ ಐಸಿಯುನಲ್ಲಿರುವ ರೋಗಿಗಳು ಇನ್ಪೆಕ್ಷನ್ ಗೆ ತುತ್ತಾಗುವ ಸಾಧ್ಯತೆಯನ್ನ ತಪ್ಪಿಸಬಹುದಾಗಿದ್ದು, ಇತರ ಎಕ್ಸ್ ಪರ್ಟ್ ವೈದ್ಯರಿಂದ ಕುಳಿತಲ್ಲೇ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ ಎಂದು ರಾಜೀವ್ ಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ನಾಗರಾಜ ಮಾಹಿತಿ ನಿಡಿದ್ದಾರೆ. ಇದನ್ನೂ ಓದಿ: ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ತಮಿಳುನಾಡು ರೈತ ಸಾವು

    ವಿಶೇಷತೆಗಳೇನು?
    ಇನ್ಫೆಕ್ಷನ್ ರೇಟ್ ಕಡಿಮೆಯಾಗಲಿದೆ, ವೈದ್ಯರಿಗೆ ಶಸ್ತ್ರಚಿಕಿತ್ಸೆ ವೇಳೆ ವೇಳೆ ರೋಬೋಟೆಕ್ ಟೆಕ್ನಾಲಜಿ ತುಂಬಾ ನೆರವಾಗಲಿದೆ. ಬಹುಬೇಗ ಸರ್ಜರಿ ಮಾಡಲು ರೋಬೊಟೆಕ್ ಟೆಕ್ನಾಲಜಿ, ಸಹಾಯಕಾರಿಯಾಗಲಿದೆ. ತುರ್ತು ಚಿಕಿತ್ಸೆ ವೇಳೆ ಹೆಚ್ಚಿನ ಅನುಕೂಲ. ರೋಗಿಯ ಸ್ಥಿತಿಗತಿ ಬಗ್ಗೆ ರೋಬೊ ಥಟ್ಟಂತ ಮಾಹಿತಿ ಕೊಡುತ್ತೆ. ನೇರ ಸಂಪರ್ಕ ಇಲ್ಲದೆ ರೋಗಿಯ ಜೊತೆ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗಿದೆ.

    ಮೊದಲ ಹಂತದಲ್ಲಿ ಒಟ್ಟು 28 ಬೆಡ್‌ಗಳಿಗೆ ರೋಬೋಟೆಕ್ ಡಾಕ್ಟರ್ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದು ವಾರದೊಳಗೆ ಈ ಸೇವೆ ಉದ್ಘಾಟನೆಯಾಗಲಿದ್ದು, ಬಳಿಕ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ ಎಂದು ಡಾ.ಸಿ.ಎನ್ ನಾಗರಾಜ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಣಂತಿ ಡಿಸ್ಚಾರ್ಜ್ ಮಾಡಲು ಲಂಚಕ್ಕೆ ಬೇಡಿಕೆ – ಇಬ್ಬರು ವೈದ್ಯ ಸಿಬ್ಬಂದಿ ಅಮಾನತು

    ಬಾಣಂತಿ ಡಿಸ್ಚಾರ್ಜ್ ಮಾಡಲು ಲಂಚಕ್ಕೆ ಬೇಡಿಕೆ – ಇಬ್ಬರು ವೈದ್ಯ ಸಿಬ್ಬಂದಿ ಅಮಾನತು

    ರಾಮನಗರ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ (Government Hospital)  ವೈದ್ಯೆಯರು (Doctor) ಬಾಣಂತಿ ಡಿಸ್ಚಾರ್ಜ್‍ಗೆ ಲಂಚದ ಬೇಡಿಕೆಯಿಟ್ಟ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ.

    ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ಸಿಗುತ್ತೆ ಎಂದು ತೆರಳುವ ಬಡವರಿಗೆ ಧನದಾಹಿ ವೈದ್ಯರಿಂದ ಕಿರುಕುಳ ಮಾತ್ರ ತಪ್ಪಿಲ್ಲ. ಆಸ್ಪತ್ರೆಗೆ ದಾಖಲಾಗುವ ರೋಗಿ ಹಣ ನೀಡಲೇಬೇಕು, ಅದು ಅವರು ಕೇಳಿದಷ್ಟು ಲಂಚ ಕೊಡಲೇಬೇಕಂತೆ. ಬಿಡದಿಯ (Bidadi) ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿತ್ಯ ಇದೇ ರೀತಿಯ ಕರ್ಮಕಾಂಡ ನಡೆಯುತ್ತಿದೆ. ಆಸ್ಪತ್ರೆ ವೈದ್ಯರಾದ ಡಾ. ಶಶಿಕಲಾ ಮತ್ತು ಡಾ. ಐಶ್ವರ್ಯ ರೋಗಿಯ ಪೋಷಕರಿಂದ ಹಣ ಡಿಮ್ಯಾಂಡ್ ಮಾಡ್ತಾ ಇರುವ ವೀಡಿಯೋ ಈಗ ಸಖತ್ ವೈರಲ್ ಆಗಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

    ಬಿಡದಿಯ ನಿಂಗೇಗೌಡನ ದೊಡ್ಡಿಯ ಮಂಜಪ್ಪ ಅವರು ಅವರ ಪತ್ನಿಯನ್ನು ಬಿಡದಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಹಣದ ಬೇಡಿಕೆ ಇಟ್ಟಿದ್ದ ವೈದ್ಯರಿಗೆ ಎರಡು ಸಾವಿರ ಹಣ ನೀಡಲು ಹೋಗಿದ್ದಾರೆ. ಆದರೆ ಆ ವೈದ್ಯರು ಕೊಟ್ಟಷ್ಟು ಹಣವನ್ನು ಒಪ್ಪಿಕೊಳ್ಳದೇ ಸತಾಯಿಸಿದ್ದರು. ಮೇಲಿನ ವೈದ್ಯರಿಗೆ ಎರಡು ಸಾವಿರ ರೂ. ನನಗೆ ಎರಡು ಸಾವಿರ ರೂ. ಮತ್ತೊಬ್ಬ ವೈದ್ಯರಿಗೆ ಎರಡು ಸಾವಿರ ರೂ. ಹಂಚಬೇಕು ಎಂದು ಡಾ ಶಶಿಕಲಾ ಹೇಳಿರೋದು ಮೊಬೈಲ್‍ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ದೇಶದಲ್ಲೇ ಅಪಖ್ಯಾತಿ ಹೊಂದಿದ್ದ ನಿಮ್ಮಿಂದ ಪಾಠ ಕಲಿಯಬೇಕಿಲ್ಲ – ಅಮಿತ್ ಶಾ ವಿರುದ್ಧ ಓವೈಸಿ ಕಿಡಿ

    ಈಕೆಗೆ ಸಾಥ್ ನೀಡಿರೋದು ಅಲ್ಲಿನ ಮತ್ತೊಬ್ಬ ವೈದ್ಯೆ ಡಾ. ಐಶ್ವರ್ಯ. ನಿಮ್ಮೊಬ್ಬರ ಬಳಿ ಎರಡು ಸಾವಿರ ರೂ. ಪಡೆದುಕೊಂಡ್ರೆ ವಾರ್ಡ್‌ನಲ್ಲಿ ದಾಖಲಾಗಿರುವ ಎಲ್ಲರೂ ಹಾಗೆ ಮಾಡ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮುಗ್ಗರಿಸಿ ಬಿದ್ದ ದಿಗ್ವಿಜಯ್‌ ಸಿಂಗ್

    ಇನ್ನೂ ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗುತ್ತಿದ್ದಂತೆಯೇ ಎಚ್ಚೆತ್ತ ಜಿಲ್ಲಾ ಆರೋಗ್ಯಾಧಿಕಾರಿ ಕಾಂತರಾಜು ಅವರು ಇಬ್ಬರು ವೈದ್ಯ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಈ ಬಗ್ಗೆ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದ್ದನ್ನ ಗಮನಿಸಿದ್ದೇವೆ. ಬಳಿಕ ವೀಡಿಯೋ ಸಂಪೂರ್ಣವಾಗಿ ಪರಿಶೀಲಿಸಿ ಇಬ್ಬರನ್ನು ಅಮಾನತು ಮಾಡಿ ತನಿಖೆಗೆ ಒಳಪಡಿಸಿದ್ದೇವೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಪರೇಷನ್‍ಗೂ ಮುನ್ನ ರೋಗಿಗೆ ವೈದ್ಯನಿಂದಲೇ ರಕ್ತದಾನ – ಡಾಕ್ಟರ್ ಕಾರ್ಯಕ್ಕೆ ನೆಟ್ಟಿಗರಿಂದ ಸಲಾಂ

    ಆಪರೇಷನ್‍ಗೂ ಮುನ್ನ ರೋಗಿಗೆ ವೈದ್ಯನಿಂದಲೇ ರಕ್ತದಾನ – ಡಾಕ್ಟರ್ ಕಾರ್ಯಕ್ಕೆ ನೆಟ್ಟಿಗರಿಂದ ಸಲಾಂ

    ಡೆಹ್ರಾಡೂನ್: ಶಸ್ತ್ರ ಚಿಕಿತ್ಸೆಗೂ ಮುನ್ನ ರಕ್ತದ ಅನಿವಾರ್ಯವಿದ್ದ ರೋಗಿಗೆ ಡೆಹ್ರಾಡೂನ್‍ನ (Dehradun) ಡೂನ್ ಪಿಜಿ ವೈದ್ಯಕೀಯ ಕಾಲೇಜಿನ (Doon PG Medical College) ಮೂಳೆ ಶಸ್ತ್ರಚಿಕಿತ್ಸಕ (Orthopedic surgeon) ವೈದ್ಯರೊಬ್ಬರು ತಮ್ಮ ರಕ್ತವನ್ನೇ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಗುಂಡಿಯೊಂದಕ್ಕೆ ಬಿದ್ದು, ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಡೆಹ್ರಾಡೂನ್‍ನ ಡೂನ್ ಪಿಜಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಎದೆ, ಎಡಗೈ ಮತ್ತು ತೊಡೆಯ ಮೂಳೆ ಮುರಿದುಕೊಂಡು ರೋಗಿ ನೋವಿನಿಮದ ನರಳುತ್ತಿದ್ದರು. ಹೀಗಾಗಿ ವ್ಯಕ್ತಿಯನ್ನು ಮೂರು ದಿನಗಳ ಕಾಲ ಐಸಿಯುನಲ್ಲಿ ಇರಿಸಿದ ವೈದ್ಯರು ನಂತರ ಅವರಿಗೆ ತೊಡೆಯ ಮೂಳೆ ಶಸ್ತ್ರ ಚಿಕಿತ್ಸೆ ಮಾಡಲು ನಿರ್ಧರಿಸಿದರು. ಆದರೆ ರೋಗಿಗೆ ರಕ್ತದ ಕೊರತೆ ಇದ್ದಿದ್ದರಿಂದ ಆಪರೇಷನ್ ಮಾಡಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಬೇರೆಯವಳು ಕಾಲ್ ಪಿಕ್ ಮಾಡಿದ್ದಕ್ಕೆ ಬಾಯ್‍ಫ್ರೆಂಡ್ ಮನೆಗೆ ಬೆಂಕಿ ಇಟ್ಲು

    ನಂತರ ರಕ್ತ ನೀಡಲು ರೋಗಿಯ ಮಗಳು ಮುಂದಾದರು. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿದ್ದಿದ್ದರಿಂದ ಆಕೆಯಿಂದ ರಕ್ತವನ್ನು ಪಡೆಯಲು ಸಾಧ್ಯವಾಗಲಿಲ್ಲ. ಆಗ ಅದೇ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕ ಡಾ.ಶಶಾಂಕ್ ಸಿಂಗ್ ತಮ್ಮ ರಕ್ತವನ್ನು ರೋಗಿಗೆ ದಾನ ಮಾಡಲು ನಿರ್ಧರಿಸಿದರು. ಇದರ ಬೆನ್ನಲ್ಲೇ ಆಪರೇಷನ್ ಮಾಡಿ ರೋಗಿಯ ಪ್ರಾಣ ಉಳಿಸಿದ್ದಾರೆ. ಇದನ್ನೂ ಓದಿ: ಸುರೇಶ್ ಗೌಡ ಕೊಲೆಗೆ ಸುಪಾರಿ ಆರೋಪ- 5 ಕೋಟಿ ಡೀಲ್ ನಡೆದಿದೆ ಎಂದ ಮಾಜಿ ಶಾಸಕ

    Live Tv
    [brid partner=56869869 player=32851 video=960834 autoplay=true]

  • 2 ವರ್ಷದ ಮಗುವಿನ ಮೇಲೆ ಬೀದಿ ನಾಯಿ ಅಟ್ಯಾಕ್

    2 ವರ್ಷದ ಮಗುವಿನ ಮೇಲೆ ಬೀದಿ ನಾಯಿ ಅಟ್ಯಾಕ್

    ಬೀದರ್: ಮನೆಯ ಮುಂದಿನ ರಸ್ತೆಯಲ್ಲಿ ಆಟವಾಡುತ್ತಿದ್ದ ವೇಳೆ ಬೀದಿ ನಾಯಿಗಳು (Stray Dog) ಏಕಾಏಕಿ ದಾಳಿ ನಡೆಸಿದ್ದು, ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಗಾಡಿವಾನ ಓಣಿಯಲ್ಲಿ ನಡೆದಿದೆ.

    ಆಸ್ಮಾ ಸಮೀರ ಶೇಖ್ (2) ಮಗು ರಸ್ತೆಯಲ್ಲಿ ಆಟವಾಡುತ್ತಿದ್ದ ವೇಳೆ ಮೇಲೆರಗಿದ ಬೀದಿ ನಾಯಿ ಮುಖ ಹಾಗೂ ದೇಹದ ಹಲವು ಕಡೆ ಕಚ್ಚಿ ಗಾಯಗೊಳಿಸಿದೆ. ಬಾಲಕಿ ಚೀರಾಡುತ್ತಿದ್ದಂತೆ ಓಡಿ ಬಂದು ಪೋಷಕರು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಜೋಡೊ ಯಾತ್ರೆಗೆ ಬರೋ ಕಲಾವಿದರಿಗೆ ಕಾಂಗ್ರೆಸ್ ಹಣ ಕೊಟ್ಟಿದೆ – BJP ಟೀಕೆಗೆ ಖಡಕ್ ಉತ್ತರ ಕೊಟ್ಟ ನಟಿ]

    ಬೀದಿ ನಾಯಿ ದಾಳಿಯಿಂದ ಗಂಭೀರ ಗಾಯಗೊಂಡ ಮಗುವಿಗೆ ವೈದ್ಯರು 36ಕ್ಕೂ ಹೆಚ್ಚು ಹೊಲಿಗೆ ಹಾಕಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ (Bidar district Hospital) ದಾಖಲು ಮಾಡಲಾಗಿದೆ. ಇದನ್ನೂ ಓದಿ: ಉಗ್ರ ಕೃತ್ಯಕ್ಕೆ ಹಿಂದುತ್ವ ಹಣೆಪಟ್ಟಿಗೆ ಸಂಚು – ಮುಂಬೈ ಕಸಬ್‌ನಂತೆ ದಾಳಿಗೆ ಬಾಂಬರ್‌ ಶಾರೀಕ್ ಸ್ಕೆಚ್‌

    ಬಸವಕಲ್ಯಾಣ ನಗರಸಭೆಯ ನಿರ್ಲಕ್ಷ್ಯದಿಂದ ನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸ ಹೆಚ್ಚಾಗಿದೆ. ಸಿಕ್ಕ-ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ ಎಂದು ಬಾಲಕಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೀಟ್‍ನಲ್ಲಿ ರ‍್ಯಾಂಕ್ ಗಳಿಸಿದ ಕೊಪ್ಪಳ ಪ್ರತಿಭಾವಂತನಿಗೆ ಬೇಕಿದೆ ಸಹಾಯ ಹಸ್ತ

    ನೀಟ್‍ನಲ್ಲಿ ರ‍್ಯಾಂಕ್ ಗಳಿಸಿದ ಕೊಪ್ಪಳ ಪ್ರತಿಭಾವಂತನಿಗೆ ಬೇಕಿದೆ ಸಹಾಯ ಹಸ್ತ

    ಕೊಪ್ಪಳ: ಆತ ಚಿಕ್ಕ ವಯಸ್ಸಲ್ಲೆ ತನ್ನ ತಾಯಿಗೆ ವೈದ್ಯರು ಆಪರೇಷನ್ ಮಾಡಿ ಬದುಕಿಸಿದ್ದನ್ನ ಕಣ್ಣಾರೆ ಕಂಡಿದ್ದ. ತನ್ನ ತಾಯಿಗೆ ಆದ ನೋವು ಇನ್ಯಾರಿಗೂ ಆಗದಿರಲಿ ಅಂತ ಡಾಕ್ಟರ್ ಆಗೋಕೆ ಬೆಟ್ಟದಷ್ಟು ಕನಸು ಹೊತ್ತಿದ್ದ, ಇಷ್ಟೆಲ್ಲ ಆಸೆ ಹೊತ್ತವ ಸುಮ್ಮನೆ ಕೂರದೆ ಕಷ್ಟಪಟ್ಟು ಸೀಟ್ ಕೂಡ ಪಡೆದಿದ್ದಾನೆ. ಆದರೆ ಕಿತ್ತು ತಿನ್ನುವ ಬಡತನದಿಂದ ಆತನ ಬೆಟ್ಟದಷ್ಟು ಕನಸು ಕಮರಿ ಹೋಗದಿರಲಿ ಅಂತ ಪರದಾಡ್ತಿದ್ದಾನೆ.

    ಹೌದು. ಕೊಪ್ಪಳ (Koppala) ಜಿಲ್ಲೆ ಜಿನ್ನಾಪುರ ಎನ್ನುವ ಪುಟ್ಟ ಕುಗ್ರಾಮದ ನಿವಾಸಿಯ ಹೆಸರು ಪ್ರಶಾಂತ ಚಂಡೂರು. ಕೊಪ್ಪಳ ತಾಲೂಕಿನ ಜಿನ್ನಾಪುರ ಗ್ರಾಮದ ಯುವಕ. ಮನೆಯಲ್ಲಿ ಕಡು ಬಡತನ ಇದ್ದರೂ ಹೇಗೋ ತಾಯಿಯ ಕೂಲಿ ಹಣದಲ್ಲೆ ವಿದ್ಯಾಭ್ಯಾಸ ಮಾಡಿ, ಸದ್ಯ ನೀಟ್ ಪರೀಕ್ಷೆ (NEET Exam) ಯಲ್ಲಿ 68039ನೇ ರ‍್ಯಾಂಕ್ ಪಡೆದು ಕೊಡಗು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ MBBS ಸೀಟ್ ಗಿಟ್ಟಿಸಿಕೊಂಡಿದ್ದಾನೆ. ಆದರೆ ಸದ್ಯ ಆತನ ಬಳಿ ಸರ್ಕಾರಿ ಶುಲ್ಕ ಪಾವತಿಗೂ ಕೂಡ ಬಿಡಿಗಾಸಿಲ್ಲ. ಬಡತನ ಎಂಬ ಭೂತ ಈತನ ಕನಸಿಗೆ ಕೊಳ್ಳಿ ಇಡಲು ಮುಂದಾಗಿದೆ.

    ಶಾಲಾ ದಿನಗಳಿಂದಲೂ ಈ ಪ್ರಶಾಂತ ಸಾಕಷ್ಟು ಪ್ರತಿಭಾವಂತ, ಕಷ್ಟ ಪಟ್ಟು ರ‍್ಯಾಂಕ್ ಪಡೆದು ಸೀಟ್ ಗಿಟ್ಟಿಸಿಕೊಂಡಿದ್ದಾನೆ ಆದ್ರೆ ಆತನ ಬಳಿ ಹಣ ಇಲ್ಲದೆ ಪರದಾಡುತ್ತಿದ್ದಾನೆ. ಯಾರಾದರೂ ದಾನಿಗಳು ಬಂದು ಸಹಾಯ ಮಾಡಿದ್ರೆ ಆತನಿಗೆ ಸಹಾಯ ಆಗತ್ತೆ ಅಂತ ಆತನ ಶಿಕ್ಷಕರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಠ ಮುಂದುವರಿಸಿದ ಓಲಾ, ಉಬರ್‌ – ಎಷ್ಟು ಕಮಿಷನ್‌ಗೆ ಬೇಡಿಕೆ?

    ಸೀಟ್ ಸಿಗದೆ ಪರದಾಡುವ ಜನರ ಮದ್ಯೆ ಪ್ರತಿಭೆಯಿಂದ ಸೀಟ್ ಪಡೆದು ಹಣ ಕಟ್ಟಲಾಗದೆ ಒದ್ದಾಡುತ್ತಿರುವುದು ನಿಜಕ್ಕೂ ಶೋಚನೀಯ. ಈ ಯುವಕನಿಗೆ ಸದ್ಯ ಸಹಾಯ ಸಿಗಲಿ, ಮುಂದೊಂದು ದಿನ ಈ ಯುವಕ ಸಮಾಜದಲ್ಲಿ ಉತ್ತಮ ವೈದ್ಯನಾಗಿ ಸೇವೆ ಸಲ್ಲಿಸಲಿ ಎನ್ನುವುದೆ ಎಲ್ಲರ ಆಶಯವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಸರಗೋಡಿನ ದಂತ ವೈದ್ಯನ ಸಾವಿನ ಹಿಂದೆ ಲ್ಯಾಂಡ್ ಜಿಹಾದ್ ಸದ್ದು!

    ಕಾಸರಗೋಡಿನ ದಂತ ವೈದ್ಯನ ಸಾವಿನ ಹಿಂದೆ ಲ್ಯಾಂಡ್ ಜಿಹಾದ್ ಸದ್ದು!

    ಮಂಗಳೂರು: ಕಾಸರಗೋಡಿನ (Kasaragod) ವೈದ್ಯನ (Doctor) ಸಾವಿನ ಹಿಂದೆ ಅನೇಕ ಟ್ವಿಸ್ಟ್ ದೊರೆತಿದ್ದು, ಲ್ಯಾಂಡ್ ಜಿಹಾದ್‍ನಿಂದ ಅವರನ್ನು ಕೊಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ.

    ನ.10ರಂದು ಉಡುಪಿ (Udupi) ಜಿಲ್ಲೆಯ ಕುಂದಾಪುರದ ಹಟ್ಟಿಯಂಗಡಿ ಬಳಿ ರೈಲ್ವೆ ಹಳಿಯಲ್ಲಿ ಅಪರಿಚಿತ ಶವ ಪತ್ತೆ ಆಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆ ಮೃತ ದೇಹವನ್ನು ಕಾಸರಗೋಡಿನ ದಂತ ವೈದ್ಯ ಡಾ. ಕೃಷ್ಣಮೂರ್ತಿ ಎಂದು ಗುರುತಿಸಿದ್ದರು. ಈ ಬಗ್ಗೆ ಪ್ರಖ್ಯಾತ ದಂತ ವೈದ್ಯನ ಸಾವಿನ ಬಗ್ಗೆ ಕೊಲೆ ಮಾಡಲಾಗಿದೆ ಎಂದು ವಿಹೆಚ್‍ಪಿ ಗಂಭೀರ ಆರೋಪ ಮಾಡಿತ್ತು. ಈ ಹಿನ್ನೆಲೆಯಲ್ಲಿ ಹಾಗೂ ಕೃಷ್ಣಮೂರ್ತಿ ದೇಹದ ಮೇಲೆ ಆದ ಗಾಯವನ್ನು ನೋಡಿದ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದಾರೆ.

    ಕೃಷ್ಣಮೂರ್ತಿ ಅವರು ಸುಮಾರು 30 ವರ್ಷಗಳಿಂದ ಮಂಗಳೂರು ಗಡಿ ಭಾಗದ ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಆರು ತಿಂಗಳಿನಿಂದ ಜಾಗದ ವಿಚಾರದಲ್ಲಿ ಡಾ.ಕೃಷ್ಣಮೂರ್ತಿ ಅವರು ಲ್ಯಾಂಡ್ ಮಾಫಿಯಾ ಬೆನ್ನು ಬಿದ್ದಿತ್ತು. ಜಾಗ ಖರೀದಿ ವಿಚಾರದಲ್ಲಿ ಡಾ.ಕೃಷ್ಣಮೂರ್ತಿಗೆ ಸ್ಥಳೀಯ ಕೆಲ ಮುಸ್ಲಿಮರು ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅದಾದ ಬಳಿಕ ನ. 8ರಂದು ಬದಿಯಡ್ಕದ ಡಾ.ಕೃಷ್ಣಮೂರ್ತಿ ಅವರ ಕ್ಲಿನಿಕ್‍ಗೆ ಮುಸ್ಲಿಂ ಯುವತಿಯೊಬ್ಬಳು ಬಂದಿದ್ದಳು. ಈ ವೇಳೆ ಕ್ಲಿನಿಕ್‍ಗೆ ಬಂದಿದ್ದ ಮುಸ್ಲಿಂ ಯುವತಿ ಜೊತೆ ಕೃಷ್ಣಮೂರ್ತಿ ಅವರು ಅನುಚಿತ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

    ಈ ಹಿನ್ನೆಲೆಯಲ್ಲಿ ಯುವಕರ ತಂಡ ಕೃಷ್ಣಮೂರ್ತಿಗೆ ಬೆದರಿಕೆವೊಡ್ಡಿ ಹಲ್ಲೆಗೆ ಮುಂದಾಗಿದ್ದರು. ಆ ಘಟನೆ ಬಳಿಕ ಡಾ.ಕೃಷ್ಣಮೂರ್ತಿ ನಾಪತ್ತೆಯಾಗಿದ್ದರು. ಅದಾದ ಬಳಿಕ ಉಡುಪಿಯ ಕುಂದಾಪುರ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ಶವವಾಗಿ ಪತ್ತೆ ಆಗಿದ್ದರು. ಇದನ್ನೂ ಓದಿ: ಗಾಂಜಾ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಆರೋಪಿ ಸಾವು – ಸಿಐಡಿ ತನಿಖೆಗೆ ಶಿಫಾರಸು

    POLICE JEEP

    ಇದೀಗ ಈ ಸಾವಿಗೆ ಅನೇಕ ಟ್ವಿಸ್ಟ್ ದೊರೆತಿದ್ದು, ಮುಸ್ಲಿಂ ಯುವತಿ ಮೂಲಕ ವೈದ್ಯರನ್ನು ಬ್ಲ್ಯಾಕ್‌ಮೇಲ್ ಮಾಡಿದ್ರಾ? ಬ್ಲ್ಯಾಕ್ ಮೇಲ್‍ಗೆ ಬೆದರಿ ಆತ್ಮಹತ್ಯೆ ಮಾಡಿಕೊಂಡರಾ ಡಾ.ಕೃಷ್ಣಮೂರ್ತಿ? ಲಕ್ಷ ಲಕ್ಷ ಹಣಕ್ಕೆ ಯುವತಿ ಮುಂದಿಟ್ಟು ಬ್ಲ್ಯಾಕ್‌ಮೇಲ್? ಲ್ಯಾಂಡ್ ಜಿಹಾದ್‍ಗೆ ಬಗ್ಗದ ದಂತ ವೈದ್ಯನಿಗೆ ಯುವತಿ ಮುಂದಿಟ್ಟು ಬ್ಲ್ಯಾಕ್ ಮೇಲ್ ಮಾಡಿದ್ರಾ ಎಂಬ ಪ್ರಶ್ನೆ ಮೂಡುತ್ತಿದೆ. ಇದನ್ನೂ ಓದಿ: ಸಹೋದರ ಮೊಬೈಲ್ ಪಾಸ್‌ವರ್ಡ್ ಬದಲಾಯಿಸಿದ್ದಕ್ಕೆ ಯುವತಿ ಆತ್ಮಹತ್ಯೆ

    ಘಟನೆಗೆ ಸಂಬಂಧಿಸಿ ಮುಸ್ಲಿಂ ಲೀಗ್ ಮುಖಂಡ ಸೇರಿ ಐವರನ್ನು ಬದಿಯಡ್ಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಅಡಿಕೆ ವ್ಯಾಪಾರಿ ಹಾಗೂ ಮುಸ್ಲಿಂ ಲೀಗ್ ಕುಂಬ್ಡಾಜೆ ಪಂಚಾಯತ್ ಕಾರ್ಯದರ್ಶಿ ಅಲಿ ತುಪ್ಪಕಲ್ಲು, ಮುಸ್ಲಿಂ ಲೀಗ್ ಬದಿಯಡ್ಕ ಪಂಚಾಯತ್ ಪದಾಧಿಕಾರಿ ಮುಹಮ್ಮದ್ ಹನೀಫ್ ಯಾನೆ ಅನ್ವರ್, ಕುಂಬ್ಡಾಜೆ ನಿವಾಸಿ ಅಶ್ರಫ್, ಅನ್ನಡ್ಕ ನಿವಾಸಿ ಮುಹಮ್ಮದ್ ಶಿಯಾಬುದ್ದೀನ್, ವಿದ್ಯಾಗಿರಿ ನಿವಾಸಿ ಉಮರುಲ್ ಫಾರೂಕ್‍ನನ್ನು ವಶಪಡಿಸಿಕೊಳ್ಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕುಡಿದ ಮತ್ತಿನಲ್ಲಿ ಚಿಕಿತ್ಸೆ, ಮಹಿಳಾ ರೋಗಿಯನ್ನು ಥಳಿಸಿದ ಡಾಕ್ಟರ್

    ಕುಡಿದ ಮತ್ತಿನಲ್ಲಿ ಚಿಕಿತ್ಸೆ, ಮಹಿಳಾ ರೋಗಿಯನ್ನು ಥಳಿಸಿದ ಡಾಕ್ಟರ್

    ರಾಯ್ಪುರ: ಮದ್ಯದ ಅಮಲಿನಲ್ಲಿ ವೈದ್ಯನೊಬ್ಬ (Doctor) ಮಹಿಳಾ (Woman) ರೋಗಿಗೆ (Patient) ಚಿಕಿತ್ಸೆ ನೀಡಿದ್ದಲ್ಲದೇ ಆಕೆಗೆ ಥಳಿಸಿರುವ ಘಟನೆ ಛತ್ತೀಸ್‌ಗಢದ (Chhattisgarh) ಕೋರ್ಬಾ ಜಿಲ್ಲೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯನ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

    ಮಹಿಳೆ ಸುಖಮತಿ ಅವರ ಆರೋಗ್ಯ ತಡರಾತ್ರಿ ಹದಗೆಟ್ಟಿದ್ದ ಕಾರಣ ಅವರ ಮಗ ಶ್ಯಾಮ್ ಕುಮಾರ್ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯಲು 108 ಹಾಗೂ 112 ಸಹಾಯವಾಣಿಗೆ ಕರೆ ಮಾಡಿದ್ದರು. ಆದರೆ ಅವರು ಸ್ಥಳ ತಲುಪುವಾಗ ತಡವಾಗುತ್ತದೆ ಎಂದಿದ್ದಾರೆ. ತಮ್ಮ ತಾಯಿಯ ಆರೋಗ್ಯ ಕ್ಷೀಣಿಸುತ್ತಿದ್ದರಿಂದ ಗಾಬರಿಗೊಳಗಾದ ಕುಮಾರ್ ಆಟೋ ರಿಕ್ಷಾದ ಮೂಲಕ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ತಾಯಿಯನ್ನು ಆಸ್ಪತ್ರೆಗೆ ಸೇರಿಸಿದಾಗ ವೈದ್ಯ ಕುಡಿದ ಮತ್ತಿನಲ್ಲಿದ್ದು, ಈ ವೇಳೆ ಆತ ಅನಾರೋಗ್ಯ ಪೀಡಿತ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಕೋಪಗೊಂಡ ಕುಮಾರ್ ವೈದ್ಯನ ನಡೆಯನ್ನು ಪ್ರಶ್ನಿಸಿದ್ದಾನೆ. ಆದರೆ ವೈದ್ಯ ಸುಮ್ಮನಿರುವಂತೆ ಹೇಳಿ ಕುಮಾರ್‌ನ ಬಾಯಿ ಮುಚ್ಚಿಸಿದ್ದಾನೆ. ಇದನ್ನೂ ಓದಿ: ಪ್ಯಾಂಟ್ ಜಿಪ್ ತೆಗೆದು ಬಸ್‍ನಲ್ಲಿ ವೈದ್ಯೆ ಜೊತೆ ಅಸಭ್ಯ ದುರ್ವತನೆ – ಕ್ಲೀನರ್ ಅರೆಸ್ಟ್

    ವೈದ್ಯ ಮಹಿಳಾ ರೋಗಿಗೆ ಥಳಿಸುತ್ತಿರುವುದನ್ನು ಅಲ್ಲೇ ಇದ್ದವರೊಬ್ಬರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ.

    ವೈದ್ಯ ಕುಡಿದ ಅಮಲಿನಲ್ಲಿ ರೋಗಿಗೆ ಥಳಿಸಿರುವ ವಿಚಾರ ತಮ್ಮ ಗಮನಕ್ಕೆ ಬಂದಿದ್ದು, ವೈದ್ಯನ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಡೀನ್ ಡಾ. ಅವಿನಾಶ್ ಮೆಶ್ರಾಮ್ ತಿಳಿಸಿದ್ದಾರೆ. ಇದನ್ನೂ ಓದಿ: ಮಾಟಗಾರ್ತಿ ನೀನು, ನನಗೆ ಮದ್ವೆ ಆಗಲು ಬಿಡಲ್ಲ- ಮಗನಿಂದ ತಾಯಿಯ ಹತ್ಯೆ

    Live Tv
    [brid partner=56869869 player=32851 video=960834 autoplay=true]

  • ಮಾವಿನ ಗೊರಟೆ ಗಂಟಲಿಗೆ ಚುಚ್ಚಿ ಮಹಿಳೆ ಆಸ್ಪತ್ರೆಗೆ ದಾಖಲು

    ಮಾವಿನ ಗೊರಟೆ ಗಂಟಲಿಗೆ ಚುಚ್ಚಿ ಮಹಿಳೆ ಆಸ್ಪತ್ರೆಗೆ ದಾಖಲು

    ಲಂಡನ್: ಮಾವಿನ ಉಪ್ಪಿನಕಾಯಿಯನ್ನು (Mango Pickle) ಸೇವಿಸಿದ ನಂತರ ಗೊರಟೆ ಗಂಟಲಿಗೆ ಸಿಕ್ಕಿಕೊಂಡು 57 ವರ್ಷದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹಣ್ಣು ತಿಂದ ಬಳಿಕ ನುಂಗಲು ತೊಂದರೆಯಾಗುತ್ತಿದೆ ಎಂದ ಮಹಿಳೆಯನ್ನು ಸ್ಥಳೀಯ ಎಪ್ಸಮ್ ಆಸ್ಪತ್ರೆಯ (Epsom Hospital) ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ. ಮಾವಿನಹಣ್ಣಿನಂತಹ ಮೃದುವಾದ ಹಣ್ಣು ಇಂತಹ ಹಾನಿಯನ್ನುಂಟುಮಾಡುತ್ತದೆ ಅಂತ ನಂಬಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ಬೆರಗಾಗಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರನ್ನು ಕೂಡಲೇ ವಜಾಗೊಳಿಸಿ – ರಾಷ್ಟ್ರಪತಿಗಳಿಗೆ ಡಿಎಂಕೆ ಪತ್ರ

    ವೈದ್ಯಕೀಯ ಪರೀಕ್ಷೆ ವೇಳೆ ಮಹಿಳೆ ಜೊಲ್ಲು ಸುರಿಸುತ್ತಿದ್ದಳು ಮತ್ತು ನುಂಗಲು ಸಮರ್ಥಳಾಗಿದ್ದಳು. ವೈದ್ಯರು ಕೂಡ ಪರೀಕ್ಷೆಯಲ್ಲಿ ದೇಹದ ಒಳಗಡೆ ಯಾವುದೇ ಪದಾರ್ಥ ಕಂಡು ಬಂದಿಲ್ಲ. ಜಠರದ ಉರಿತದಿಂದ ಸಮಸ್ಯೆ ಉಂಟಾಗಿರಬಹುದು ಎಂದು ಮಹಿಳೆಗೆ ತಿಳಿಸಲಾಗಿದೆ. ಒಂದು ವೇಳೆ ಆರೋಗ್ಯ ಹೆಚ್ಚು ಹದಗೆಟ್ಟರೆ ಮತ್ತೆ ಹಿಂತಿರುಗುವಂತೆ ತಿಳಿಸಲಾಯಿತು ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ- ಅನ್ಯ ಕೋಮಿನ ಯುವಕನ ಪ್ರೀತಿ ಮಾಡಿದ್ದಕ್ಕೆ ತಂದೆಯಿಂದ್ಲೇ ಮಗಳ ಕೊಲೆ

    ನಾಲ್ಕು ದಿನಗಳ ನಂತರ ಸೆಪ್ಸಿಸ್‍ನ ಲಕ್ಷಣಗಳಿದ್ದರಿಂದ ಮತ್ತೆ ಆಸ್ಪತ್ರೆಗೆ ಮಹಿಳೆ ಹಿಂದಿರುಗಿ, ನುಂಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಸಿಟಿ ಸ್ಕ್ಯಾನ್ ನಡೆಸಿದಾಗ ಅನ್ನನಾಳದಲ್ಲಿ ಹುಣ್ಣಾಗಿ ಎದೆ ಉರಿ ಉಂಟಾಗಿರುವುದು ತಿಳಿದುಬಂದಿದೆ. ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಗೊರಟೆಯನ್ನು ತೆಗೆಸಿಕೊಳ್ಳಲು ಮಹಿಳೆ ನಂತರ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾದರು ಮತ್ತು ಒಂದು ವಾರ ಆಸ್ಪತ್ರೆಯಲ್ಲಿದ್ದರು ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]