Tag: Doctor Couple

  • ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ವೈದ್ಯ ದಂಪತಿ ಶವವಾಗಿ ಪತ್ತೆ

    ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ವೈದ್ಯ ದಂಪತಿ ಶವವಾಗಿ ಪತ್ತೆ

    ಹೈದರಾಬಾದ್: ಕಳೆದೆರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ವೈದ್ಯ ದಂಪತಿ ಗುರುವಾರ ಹೈದರಾಬಾದ್‍ನಲ್ಲಿರುವ (Hyderabad) ತಮ್ಮ ನಿವಾಸದ ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಸ್ನಾನಗೃಹದ ಗೀಸರ್ ವೈಯರ್‌ನ ಕರೆಂಟ್ ಶಾಕ್‍ನಿಂದ ದಂಪತಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತರನ್ನು ಡಾ. ಸೈಯದ್ ನಿಸಾರುದ್ದೀನ್(26) ಮತ್ತು ಅವರ ಪತ್ನಿ ಉಮ್ಮೆ ಮೊಹಿಮೀನ್ ಸೈಮಾ (22) ಎಂದು ಗುರುತಿಸಲಾಗಿದ್ದು, ಈ ದಂಪತಿ ಖಾದರ್‍ಬಾಗ್ ಪ್ರದೇಶದ (Khaderbagh locality) ನಿವಾಸಿಯಾಗಿದ್ದಾರೆ. ಇದನ್ನೂ ಓದಿ: ನಿಮ್ಮ ಬಳಿ ಬಟ್ಟೆ ಹಾವಿದ್ರೆ, ನನ್ನ ಬಳಿ ನಿಜವಾದ ಹಾವಿದೆ: ಬಿಜೆಪಿ ನಾಯಕರಿಗೇ ಯತ್ನಾಳ್ ಟಾಂಗ್

    ಮನೆಯೊಳಗೆ ಪ್ರವೇಶಿಸಿದ ನಮಗೆ ಏನೋ ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಿ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದೆವು. ನಂತರ ಕಿಟಕಿಯ ಮೂಲಕ ನೋಡಿದಾಗ ದಂಪತಿ ಸಾವನ್ನಪ್ಪಿರುವುದು ಕಂಡುಬಂದಿದೆ ಎಂದು ಉಮ್ಮೆ ಮೊಹಿಮೀನ್ ಸೈಮಾ ಅವರ ತಂದೆ ಹೇಳಿದ್ದಾರೆ.

    ಬುಧವಾರ ರಾತ್ರಿ ಸೂರ್ಯಪೇಟೆಯಿಂದ ದಂಪತಿ ಮರಳಿದ್ದರು. ಗುರುವಾರ ಬೆಳಗ್ಗೆ ಈ ಘಟನೆ ನಡೆದಿರಬಹುದು. ಆದರೆ ಸಂಜೆವರೆಗೂ ಈ ಬಗ್ಗೆ ಯಾರಿಗೂ ತಿಳಿದುಬಂದಿಲ್ಲ. ಆದರೆ ರಾತ್ರಿ 11:30ಕ್ಕೆ ನಮಗೆ ಈ ಬಗ್ಗೆ ಮಾಹಿತಿ ದೊರೆಯಿತು. ನಂತರ ಘಟನಾ ಸ್ಥಳಕ್ಕೆ ಹೋದಾಗ ದಂಪತಿ ಶವವಾಗಿ ಪತ್ತೆಯಾಗಿದ್ದಾರೆ. ಪತಿ ಪತ್ನಿಯನ್ನು ಉಳಿಸಲು ಹೋದಾಗ ಪತಿ ಕೂಡ ಸಾವನ್ನಪ್ಪಿದ್ದಾರೆ ಎಂದು ತನಿಖಾಧಿಕಾರಿ ಸಬ್ ಇನ್ಸ್‌ಪೆಕ್ಟರ್ ಎಸ್ ಶೃತಿ ತಿಳಿಸಿದ್ದಾರೆ. ಇದನ್ನೂ ಓದಿ: ದಲಿತ ಯುವಕನ ಮುಖಕ್ಕೆ ಮಸಿ ಬಳಿದು, ಕಂಬಕ್ಕೆ ಕಟ್ಟಿ ಥಳಿತ – ಇಬ್ಬರು ಅರೆಸ್ಟ್

    ಸೈಮಾ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದರೆ, ಆಕೆಯ ಪತಿ ಸೈಯದ್ ನಿಸಾರುದ್ದೀನ್ ಸೂರ್ಯಪೇಟೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ಬೆಳಗ್ಗೆ ತಂದೆ ಜೊತೆಗೆ ಮಾತನಾಡಿದ್ದ ಸೈಮಾ, ಮತ್ತೆ ಕರೆ ಮಾಡುವುದಾಗಿ ಹೇಳಿದ್ದರು. ಆದರೆ ಪುನಃ ಯಾವುದೇ ಕರೆ ಮಾಡಲಿಲ್ಲ. ಇಬ್ಬರೂ ಕೆಲಸಕ್ಕೆ ಹೋಗಿರಬೇಕು ಎಂದು ಅವರ ತಂದೆ ಅಂದುಕೊಂಡಿದ್ದರು. ಆದರೆ ಸಂಜೆ ಕರೆ ಮಾಡಿದಾಗ ಕರೆ ಸ್ವೀಕರಿಸದೇ ಇದ್ದಿದ್ದರಿಂದ ಅನುಮಾನಗೊಂಡ ಕುಟುಂಬಸ್ಥರು ಅಪಾರ್ಟ್‍ಮೆಂಟ್‍ಗೆ ಬಂದು ನೋಡಿದ್ದಾರೆ. ಈ ವೇಳೆ ಘಟನೆ ಬಗ್ಗೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಚಿತ ಊಟ ವಿತರಿಸುತ್ತಿರೋ ವೈದ್ಯ ದಂಪತಿ

    ಉಚಿತ ಊಟ ವಿತರಿಸುತ್ತಿರೋ ವೈದ್ಯ ದಂಪತಿ

    ಚಿಕ್ಕಬಳ್ಳಾಪುರ: ಕೋವಿಡ್ ಚಿಕಿತ್ಸೆ ಜೊತೆ ಜೊತೆಗೆ ಮಾನವೀಯತೆ ಮರೆಯುತ್ತಿರೋ ಚಿಕ್ಕಬಳ್ಳಾಪುರ ನಗರದ ಮಾನಸ ಖಾಸಗಿ ಆಸ್ಪತ್ರೆಯ ವೈದ್ಯ ದಂಪತಿ ನಗರದಲ್ಲಿ ನಿರ್ಗತಿಕರಿಗೆ ಊಟ ಹಂಚುವ ಕಾರ್ಯ ಮಾಡುತ್ತಿದ್ದಾರೆ.

    ಮಾನಸ ಆಸ್ಪತ್ರೆಯ ಮಧುಕರ್-ಸುಷ್ಮಾ ದಂಪತಿ ಉಚಿತ ಊಟ ಹಂಚಿಕೆ ಕಾರ್ಯ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಕೊರೊನಾ ಮುಂಚೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಎದುರು ಪ್ರತಿನಿತ್ಯ ಅನ್ನಪೂರ್ಣ ಹೆಸರಲ್ಲಿ ರೋಗಿಗಳು ಹಾಗೂ ಸಂಬಂಧಿಕರು ಊಟ ನೀಡುತ್ತಿದ್ದರು. ಆದ್ರೆ ಜನ ಒಂದೆಡೆ ಸೇರಬಾರದು ಅಂತ ಊಟ ಕೊಡೊದನ್ನ ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಆದ್ರೆ ಈಗ ಮತ್ತೆ ಅನ್ನಪೂರ್ಣ ಯೋಜನೆ ಮೂಲಕ ನಗರದ ವಿವಿಧೆಡೆ ತೆರಳಿ ನಿರ್ಗತಿಕರ ಹೊಟ್ಟೆ ತುಂಬಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

    ಖಾಸಗಿ ಆಸ್ಪತ್ರೆ ಜೊತೆಗೆ ಮಾನಸ ವೃದ್ಧಾಶ್ರಮ ಸಹ ನಡೆಸ್ತಿರೋ ಈ ದಂಪತಿ ಅದೇ ಆಶ್ರಮದಲ್ಲಿ ಆಡುಗೆ ತಯಾರಿಸುತ್ತಿದ್ದಾರೆ. ಈಗ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮಾಡ್ತಿದ್ದಾರೆ. ಜಿಲ್ಲಾಸ್ಪತ್ರೆ ಬಳಿ ಬಡವರ ಹೊಟ್ಟೆ ತುಂಬಿಸುವ ಅನ್ನಪೂರ್ಣ ಯೋಜನೆಗೆ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಖ್ಯಾತಿಗೂ ಈ ದಂಪತಿ ಭಾಜನರಾಗಿದ್ದರು.

  • ಹಳ್ಳಿಯಲ್ಲಿ ಬಡ ಜನರಿಗೆ ಚಿಕಿತ್ಸೆ ಜೊತೆ ಗೋವುಗಳ ರಕ್ಷಣೆ

    ಹಳ್ಳಿಯಲ್ಲಿ ಬಡ ಜನರಿಗೆ ಚಿಕಿತ್ಸೆ ಜೊತೆ ಗೋವುಗಳ ರಕ್ಷಣೆ

    ದಾವಣಗೆರೆ: ವೈದ್ಯರು ಅಂದರೆ ಸಾಕು ಯಾವಾಗಲೂ ಆಸ್ಪತ್ರೆ, ಕ್ಲಿನಿಕ್, ರೋಗಿ ಅಂತನೇ ಇರುತ್ತಾರೆ. ಆದರೆ ದಾವಣಗೆರೆಯ ಈ ವೈದ್ಯರು ಎಲ್ಲಾ ವೈದ್ಯರಿಗಿಂತ ವಿಭಿನ್ನವಾಗಿದ್ದು, ರೋಗಿಗಳಿಗೆ ಚಿಕಿತ್ಸೆ ಕೊಡುವುದರ ಜೊತೆಗೆ ಗೋವುಗಳ ರಕ್ಷಣೆ ಮಾಡುತ್ತಿದ್ದಾರೆ.

    ಹೊನ್ನಾಳಿ ತಾಲೂಕಿನ ಬಸವಪಟ್ಟಣದಲ್ಲಿ ನೆಲಸಿರುವ ವೈದ್ಯ ಬಸವನಗೌಡ ಕುಸನೂರು ಮತ್ತು ವಿಜಯಲಕ್ಷ್ಮಿ ದಂಪತಿ. ವೈದ್ಯಕೀಯ ವೃತ್ತಿ ಜೊತೆಗೆ ಗೋವುಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ. ಮೂಲತಃ ರಾಣೆಬೆನ್ನೂರು ಮೂಲದವರಾದ ಈ ದಂಪತಿ ಹೊನ್ನಾಳಿಯಲ್ಲಿ ಸಾಕಷ್ಟು ವರ್ಷಗಳಿಂದ ನೆಲೆಸಿದ್ದು, ಇಲ್ಲಿಯೇ ಒಂದು ಕ್ಲಿನಿಕ್ ನಡೆಸುತ್ತಾ ಅತಿ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ಜೊತೆಗೆ ಗೋ ರಕ್ಷಣೆ, ಗೋ ಸಾಕಣೆಯಲ್ಲಿ ನಿರತರಾಗಿದ್ದಾರೆ.

    ಯಾರಾದರೂ ಹಸು, ಎತ್ತುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದರೆ ಅವರಿಗೆ ಹೇಳಿ ತಂದು ತಮ್ಮ ಹೊಲದಲ್ಲಿ ಕಟ್ಟಿ ಸಾಕುತ್ತಿದ್ದಾರೆ. ಕೇವಲ ಸಾಕುವುದಷ್ಟೇ ಅಲ್ಲ, ರೈತರಿಗೆ ಭೂಮಿ ಉಳುಮೆ ಮಾಡಲು ಉಚಿತವಾಗಿ ರಾಸುಗಳನ್ನು ಕೊಡುತ್ತಾರೆ. ಇಲ್ಲಿಯವರೆಗೂ 20 ಜೊತೆ ಎತ್ತುಗಳನ್ನು ರೈತರಿಗೆ ಉಚಿತವಾಗಿ ನೀಡಿದ್ದಾರೆ. ಸದ್ಯ 50ಕ್ಕೂ ಹೆಚ್ಚು ಗೋವುಗಳ ಪಾಲನೆಯಲ್ಲಿ ನಿರತರಾಗಿದ್ದಾರೆ. ಇದರಿಂದ ತಮ್ಮ ಮನಸ್ಸಿಗೆ ನೆಮ್ಮದಿ ಎಂದು ವೈದ್ಯರಾದ ಬಸನಗೌಡ ಕುಸನೂರು ಅವರು ಹೇಳಿದ್ದಾರೆ.

    ಬಸವನಗೌಡರಿಗೆ ಗೋವುಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಚಿಕ್ಕ ವಯಸ್ಸಿನಲ್ಲಿ ಬಸವನಗೌಡರ ಮನೆಯಲ್ಲಿದ್ದ ಮೂರು ಹಸುಗಳನ್ನು ಮನೆಯವರು ಮಾರಲು ಮುಂದಾದ್ದರು. ಆದರೆ ಬಸವನಗೌಡರು ಪಟ್ಟು ಹಿಡಿದು ಮಾರಲು ಬಿಟ್ಟಿರಲಿಲ್ಲ. ಅಂದು ಗೋವುಗಳ ಮೇಲೆ ಹುಟ್ಟಿದ ಪ್ರೀತಿ ಇಂದಿಗೂ ಮುಂದುವರಿದಿದೆ. ಬಸವನಗೌಡರ ಗೋ ಪ್ರೀತಿಗೆ ಅವರ ಪತ್ನಿ ಡಾ.ವಿಜಯಲಕ್ಷ್ಮಿಯ ಬೆಂಬಲವೂ ಇದೆ.