Tag: Docking

  • ಇಸ್ರೋ ಸಾಧನೆ – ಡಾಕಿಂಗ್‌ ಪ್ರಕ್ರಿಯೆ ಹೇಗೆ ನಡೆಯಿತು? ಪ್ರಯೋಜನ ಏನು?

    ಇಸ್ರೋ ಸಾಧನೆ – ಡಾಕಿಂಗ್‌ ಪ್ರಕ್ರಿಯೆ ಹೇಗೆ ನಡೆಯಿತು? ಪ್ರಯೋಜನ ಏನು?

    ನವದೆಹಲಿ: ಹೊಸ ವರ್ಷದ ಆರಂಭದಲ್ಲಿಯೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಇತಿಹಾಸ ಸೃಷ್ಟಿಸಿದೆ. ಸ್ಪೇಡೆಕ್ಸ್ (SpaDEx)ಮಿಷನ್ ಭಾಗವಾಗಿ ಡಿಸೆಂಬರ್ 30ರಂದು ಭೂಕಕ್ಷೆಗೆ ಕಳಿಸಿದ್ದ ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಅಂತರಿಕ್ಷದಲ್ಲಿ ಅನುಸಂಧಾನ ಮಾಡಿದೆ. ಈ ಮೂಲಕ ಡಾಕಿಂಗ್ (Docking) ಘನತೆ ಸಾಧಿಸಿದ ಜಗತ್ತಿನ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿದೆ. ಅಮೆರಿಕಾ, ಚೀನಾ, ರಷ್ಯಾ ಸಾಲಿಗೆ ಭಾರತವೂ ಸೇರಿಕೊಂಡಿದೆ.

    ಡಿ.30 ರ ರಾತ್ರಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (SpaDEx) ಯೋಜನೆ ಭಾಗವಾಗಿ 2 ಉಪಗ್ರಹಗಳು ಉಡಾವಣೆಯಾಗಿತ್ತು. ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ (PSLV) ರಾಕೆಟ್ ಈ ಪ್ರಯೋಗದ ಭಾಗವಾಗಿದ್ದ ಎಸ್‌ಡಿಎಕ್ಸ್‌01 ಮತ್ತು ಎಸ್‌ಡಿಎಕ್ಸ್02 ಹೆಸರಿನ ಎರಡು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತ್ತು.

     

    ಭೂಮಿಯಿಂದ 475 ಕಿ.ಮೀ ದೂರದ ಕಕ್ಷೆಗೆ ಉಪಗ್ರಹಗಳನ್ನು ರಾಕೆಟ್‌ ಯಶಸ್ವಿಯಾಗಿ ಸೇರಿಸಿದ ಬಳಿಕ ಜನವರಿ ಮೊದಲ ವಾರದಲ್ಲಿ ಇಸ್ರೋ ಡಾಕಿಂಗ್‌ ಪ್ರಯೋಗ ನಡೆಸಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಪ್ರಯೋಗ ಮುಂದೂಡಿಕೆಯಾಗಿತ್ತು. ತನ್ನ ನಾಲ್ಕನೇ ಪ್ರಯತ್ನದಲ್ಲಿ ಇಸ್ರೋ ಡಾಕಿಂಗ್‌ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮೊದಲಿಗೆ ಎರಡು ಉಪಗ್ರಹಗಳನ್ನು 15 ಮೀಟರ್ ಸನಿಹಕ್ಕೆ ತರಲಾಯಿತು. ನಂತರ ಅಂತರವನ್ನು 3 ಮೀಟರ್‌ಗೆ ಕುಗ್ಗಿಸಲಾಯಿತು. ಅಲ್ಲಿಯೇ ಡಾಕಿಂಗ್ ಪ್ರಕ್ರಿಯೆ ಮೂಲಕ ಎರಡನ್ನು ಯಶಸ್ವಿಯಾಗಿ ಅನುಸಂಧಾನ ಮಾಡಲಾಯಿತು.

    ಈ ಐತಿಹಾಸಿಕ ಸಾಧನೆ ಮಾಡಿದ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳು ಸಂಭ್ರಮಿಸಿದರು. ಇದಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶ್ರಮಿಸಿದ ತಜ್ಞರಿಗೆ, ಕೋಟಿ ಕೋಟಿ ಭಾರತೀಯರಿಗೆ ಇಸ್ರೋ ಅಭಿನಂದನೆ ತಿಳಿಸಿತು. ರಾಷ್ಟ್ರಪತಿ, ಮೋದಿ ಸೇರಿ ಗಣ್ಯರು ಇಸ್ರೋ ಸಾಧನೆಯ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ.

    ಡಾಕಿಂಗ್ ಪ್ರಕ್ರಿಯೆ ಹೇಗೆ ನಡೆಯಿತು?
    20 ಕಿ.ಮೀ ಅಂತರದಲ್ಲಿ ಗಂಟೆಗೆ 28 ಸಾವಿರ ಕಿ.ಮೀ ವೇಗದಲ್ಲಿ 2 ಉಪಗ್ರಹಗಳು ಸುತ್ತುತ್ತಿದ್ದವು. ಮೊದಲಿಗೆ `ಟಾರ್ಗೆಟ್’ ವೇಗವನ್ನು ಕುಗ್ಗಿಸಲಾಯಿತು. ಹಂತಹಂತವಾಗಿ `ಚೇಸರ್’ ಸನಿಹಕ್ಕೆ ತರಲಾಯಿತು. `ಚೇಸರ್’ ಕೂಡ ಟಾರ್ಗೆಟ್ ವೇಗಕ್ಕೆ ಅನುಗುಣವಾಗಿ ತನ್ನ ವೇಗವನ್ನು ನಿಯಂತ್ರಿಸಿಕೊಳ್ಳುತ್ತಿತ್ತು.

    ಮೊದಲಿಗೆ 1.5ಕಿ.ಮೀ., 500ಮೀ., 15 ಮೀ., 3 ಮೀ., ಹೀಗೆ ಹಂತ ಹಂತವಾಗಿ ಎರಡನ್ನು ಸನಿಹಕ್ಕೆ ತರಲಾಯಿತು. ಅಂತರ 3 ಮೀ. ಇರುವಾಗ ಡಾಕಿಂಗ್ ಪ್ರಕ್ರಿಯೆ ಆರಂಭವಾಯಿತು. ಒಂದರ ಯಾಂತ್ರಿಕ ಹಸ್ತಗಳು ಇನ್ನೊಂದನ್ನು ಹಿಡಿದವು.

    ಟಾರ್ಗೆಟ್ ಡಾಕಿಂಗ್ ವ್ಯವಸ್ಥೆ ಪ್ರವೇಶ ಮಾಡಿದ ಚೇಸರ್ ವ್ಯವಸ್ಥೆ ಎರಡೂ ಪೋರ್ಟ್‌ಗಳು ಯಶಸ್ವಿಯಾಗಿ ಅನುಸಂಧಾನಗೊಂಡವು. ಡಾಕಿಂಗ್ ಪ್ರಕಿಯೆ ಮುಗಿದ ಬೆನ್ನಲ್ಲೇ ಒಂದೇ ವ್ಯವಸ್ಥೆಯಾಗಿ 2 ಉಪಗ್ರಹಗಳು ಮಾರ್ಪಟ್ಟವು.

    ಪ್ರಯೋಜನ ಏನು?
    ಮಾನವಸಹಿತ ಅಂತರಿಕ್ಷಯಾನ, ಚಂದ್ರನ ಅಂಗಳಕ್ಕೆ ಮನುಷ್ಯರನ್ನು ಕಳುಹಿಸಿ, ವಾಪಸ್‌ ಕರೆತರಲು ಇಸ್ರೋ ಈಗಾಗಲೇ ಯೋಜನೆ ರೂಪಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಂತೆ ಇಸ್ರೋ ತನ್ನದೇ ಆದ ಸ್ವದೇಶಿ ‘ಭಾರತೀಯ ಅಂತರಿಕ್ಷ ನಿಲ್ದಾಣ’ ಸ್ಥಾಪಿಸಲು ಸಿದ್ಧತೆ ಆರಂಭಿಸಿದೆ.

    ಆ ನಿಲ್ದಾಣಕ್ಕೆ ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್‌, ಅನ್‌ಡಾಕಿಂಗ್‌ ತಂತ್ರಜ್ಞಾನ ತಿಳಿದಿರಬೇಕು. ಡಾಕಿಂಗ್ ಪ್ರಕ್ರಿಯೆಯ ಯಶಸ್ಸು ಇದರ ಮೊದಲ ಹೆಜ್ಜೆ ಆಗಿದೆ. ಕಕ್ಷೆಯಲ್ಲಿ ಉಪಗ್ರಹ ರಿಪೇರಿ, ಇಂಧನ ಭರ್ತಿಗೂ ಇದು ಅನುಕೂಲಕರ.

  • ಇಸ್ರೋ ಐತಿಹಾಸಿಕ ಸಾಧನೆ| ಡಾಕಿಂಗ್‌ ಸಾಹಸ ಯಶಸ್ವಿ – ಸಾಧನೆಗೈದ ವಿಶ್ವದ 4ನೇ ದೇಶ ಭಾರತ

    ಇಸ್ರೋ ಐತಿಹಾಸಿಕ ಸಾಧನೆ| ಡಾಕಿಂಗ್‌ ಸಾಹಸ ಯಶಸ್ವಿ – ಸಾಧನೆಗೈದ ವಿಶ್ವದ 4ನೇ ದೇಶ ಭಾರತ

    ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ISRO) ಐತಿಹಾಸಿಕ ಸಾಧನೆ ಮಾಡಿದೆ. ಬಾಹ್ಯಾಕಾಶ ಉಪಗ್ರಹಗಳ ಡಾಕಿಂಗ್‌ (Docking) ಪ್ರಯೋಗ ಯಶಸ್ವಿಯಾಗಿದ್ದು ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

    ಎರಡು ಉಪಗ್ರಹಗಳನ್ನು ಜೋಡಿಸುವ ಹಾಗೂ ಬೇರ್ಪಡಿಸುವ ಪ್ರಯೋಗದಲ್ಲಿ ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಯಶಸ್ಸು ಕಂಡಿತ್ತು.

    ಡಿ.30 ರ ರಾತ್ರಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (SpaDEx) ಯೋಜನೆ ಭಾಗವಾಗಿ 2 ಉಪಗ್ರಹಗಳು ಉಡಾವಣೆಯಾಗಿತ್ತು. ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ (PSLV) ರಾಕೆಟ್ ಈ ಪ್ರಯೋಗದ ಭಾಗವಾಗಿದ್ದ ಎಸ್‌ಡಿಎಕ್ಸ್‌01 ಮತ್ತು ಎಸ್‌ಡಿಎಕ್ಸ್02 ಹೆಸರಿನ ಎರಡು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತ್ತು.

    ಭೂಮಿಯಿಂದ 475 ಕಿ.ಮೀ ದೂರದ ಕಕ್ಷೆಗೆ ಉಪಗ್ರಹಗಳನ್ನು ರಾಕೆಟ್‌ ಯಶಸ್ವಿಯಾಗಿ ಸೇರಿಸಿದ ಬಳಿಕ ಜನವರಿ ಮೊದಲ ವಾರದಲ್ಲಿ ಇಸ್ರೋ ಡಾಕಿಂಗ್‌ ಪ್ರಯೋಗ ನಡೆಸಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಪ್ರಯೋಗ ಮುಂದೂಡಿಕೆಯಾಗಿತ್ತು. ತನ್ನ ನಾಲ್ಕನೇ ಪ್ರಯತ್ನದಲ್ಲಿ  ಇಸ್ರೋ  ಡಾಕಿಂಗ್‌ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

    ಏನಿದು ಪ್ರಯೋಗ?
    ಈ ಎರಡು ಉಪಗ್ರಹಗಳು ತನ್ನಲ್ಲಿರುವ ಸೆನ್ಸರ್‌, ವ್ಯವಸ್ಥೆಯನ್ನು ಬಳಸಿ ಒಂದಕ್ಕೊಂದು ಜೋಡಣೆ ಆಗುವಂತೆ ಮಾಡುವುದು. ನಂತರ ಪರಸ್ಪರ ಬೇರೆಯಾಗುವಂತೆ ಮಾಡಲು ಇಸ್ರೋ ಈ ಪ್ರಯೋಗ ನಡೆಸಿತ್ತು. ಈ ಕಾರಣಕ್ಕೆ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (Spadex ) ಎಂಬ ಹೆಸರನ್ನು ಇಡಲಾಗಿತ್ತು. ತಲಾ 220 ಕೆಜಿ ತೂಗುವ ಸ್ಪೇಡೆಕ್ಸ್‌ 1 ಮತ್ತು ಸ್ಪೇಡೆಕ್ಸ್‌ 2 ನೌಕೆಗಳನ್ನು ಪರಸ್ಪರ ಕೇವಲ  ಪರಸ್ಪರ 15 ಮೀಟರ್‌ ಅಂತರಕ್ಕೆ ಆರಂಭದಲ್ಲಿ ತರಲಾಗಿತ್ತು. ನಂತರ  3 ಮೀಟರ್‌ ಸನಿಹಕ್ಕೆ ತಂದ ಬಳಿಕ ಈ ಡಾಕಿಂಗ್‌ ಪ್ರಕ್ರಿಯೆ ಆರಂಭಿಸಿತ್ತು.

    ಇಸ್ರೋ ಜ.7 ಮತ್ತು 8 ರಂದು ಪ್ರಯೋಗ ಮಾಡಲು ಮುಂದಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಪ್ರಯೋಗವನ್ನು ಮುಂದೂಡಿತ್ತು. ಜ.12 ರಂದು ಪ್ರಯೋಗ ಆರಂಭಿಸಿತ್ತು.

    ಯಾಕೆ ಇಷ್ಟೊಂದು ಮಹತ್ವ?
    ಮಾನವಸಹಿತ ಅಂತರಿಕ್ಷಯಾನ, ಚಂದ್ರನ ಅಂಗಳಕ್ಕೆ ಮನುಷ್ಯರನ್ನು ಕಳುಹಿಸಿ, ವಾಪಸ್‌ ಕರೆತರಲು ಇಸ್ರೋ ಈಗಾಗಲೇ ಯೋಜನೆ ರೂಪಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಂತೆ ಇಸ್ರೋ ತನ್ನದೇ ಆದ ಸ್ವದೇಶಿ ‘ಭಾರತೀಯ ಅಂತರಿಕ್ಷ ನಿಲ್ದಾಣ’ ಸ್ಥಾಪಿಸಲು ಸಿದ್ಧತೆ ಆರಂಭಿಸಿದೆ. ಆ ನಿಲ್ದಾಣಕ್ಕೆ ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್‌, ಅನ್‌ಡಾಕಿಂಗ್‌ ತಂತ್ರಜ್ಞಾನ ತಿಳಿದಿರಬೇಕು.

  • ಇಸ್ರೋದ ಸ್ಪೇಡೆಕ್ಸ್‌ ಉಪಗ್ರಹಕ್ಕೆ ರಾಜ್ಯದ ಬಿಜಿಎಸ್ ಕಾಲೇಜಿನ ಪೇಲೋಡ್ ಸೇರ್ಪಡೆ

    ಇಸ್ರೋದ ಸ್ಪೇಡೆಕ್ಸ್‌ ಉಪಗ್ರಹಕ್ಕೆ ರಾಜ್ಯದ ಬಿಜಿಎಸ್ ಕಾಲೇಜಿನ ಪೇಲೋಡ್ ಸೇರ್ಪಡೆ

    ಚಿಕ್ಕಬಳ್ಳಾಪುರ: ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (SpaDEx) ಯೋಜನೆ ಭಾಗವಾಗಿ 2 ಉಪಗ್ರಹಗಳು ಸೋಮವಾರ ರಾತ್ರಿ (ಇಂದು) ಉಡಾವಣೆಯಾಗಲಿದೆ. ಈ ಉಪಗ್ರಹಕ್ಕೆ ರಾಜ್ಯದ ಪ್ರತಿಷ್ಟಿತ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ವತಿಯಿಂದ `ಅರ್ಪಿತ್’ ಪೇಲೋಡ್ ಒದಗಿಸಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಚಿಕ್ಕಬಳ್ಳಾಪುರದ ಎಸ್‌ಜೆಸಿಐಟಿ ಇಂಜಿನಿಯರಿಂಗ್ ಕಾಲೇಜಿನ (SJCIT Engineering College) ತಂಡ ಮುಂದಾಗಿದೆ.

    ಅಂದಹಾಗೆ ಇಂದು ರಾತ್ರಿ 9 ಗಂಟೆ 58 ನಿಮಿಷಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 2 ಉಪಗ್ರಹಗಳು ಉಡಾವಣೆಯಾಗಲಿದೆ. ಇದಕ್ಕಾಗಿ ʻಅರ್ಪಿತ್ʼ ಹೆಸರಿನ ಪೇಲೋಡ್ ನಿರ್ಮಿಸಿರುವ ಎಸ್‌ಜೆಸಿಐಟಿ ಇಂಜಿನಿಯರಿಂಗ್ ಕಾಲೇಜಿನ ತಂಡ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ತಲುಪಿದೆ. ಇದನ್ನೂ ಓದಿ: ಡಾಕಿಂಗ್‌ ಸಾಹಸಕ್ಕೆ ಇಸ್ರೋ ರೆಡಿ – ಏನಿದು ಪ್ರಯೋಗ? ಇಷ್ಟೊಂದು ಮಹತ್ವ ಯಾಕೆ?

    ಈ ಪೇಲೋಡ್‌ನ ಮುಖ್ಯ ಉದ್ದೇಶ ಎಂದರೆ ಸಾರ್ವಜನಿಕರು ಸಹ ಸ್ಯಾಟಲೈಟ್ ಜೊತೆ ಸಂಪರ್ಕ ಸಾಧಿಸುವುದು, ಸ್ಯಾಟಲೈಟ್ ನಿಂದ ರೇಡಿಯೋ ತರಂಗಾಂತರ ಮೂಲಕ ಫೋಟೋ, ವಿಡಿಯೋ, ಆಡಿಯೋ ಹಂಚಿಕೊಳ್ಳಬಹುದಾಗಿದೆ. ಇದನ್ನೂ ಓದಿ: Bihar | ಮರುಪರೀಕ್ಷೆಗೆ ಆಗ್ರಹ – ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ

    ಇನ್ನೂ ಈ ಸ್ಪೈಡೆಕ್ಸ್ ಸ್ಯಾಟಲೈಟ್ ಯೋಜನೆ ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನ ಒಂದಕ್ಕೊಂದು ಸಂಪರ್ಕ ಜೋಡಿಸುವುದಾಗಿದೆ. ಈ ಯೋಜನೆಯ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು ಸಾಧಿಸಲಿದೆ. ಈ ಯೋಜನೆಯಲ್ಲಿ ಎರಡು ಉಗ್ರಹಗಳಿದ್ದು ಒಂದಕ್ಕೊಂದು ಸಂವಹನ ಸಾಧಿಸುವ ಪ್ರಯೋಗ ನಡೆಸಲಾಗುತ್ತದೆ.

    ಇದರಲ್ಲಿ 24 ಪೇಲೋಡ್ ಗಳಿದ್ದು 14 ಪೆಲೋಡ್ ಗಳನ್ನ ಇಸ್ರೋ ಸಂಸ್ಥೆ ನಿರ್ಮಾಣ ಮಾಡಿದ್ರೆ ಉಳಿದ 10 ಪೇಲೋಡ್ ಇತರೆ ಸಂಸ್ಥೆಗಳು ತಯಾರಿ ಮಾಡಿವೆ. ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸ್ಮಾರಕಕ್ಕೆ ಸ್ಥಳ ಪರಿಶೀಲನೆ

  • ಡಾಕಿಂಗ್‌ ಸಾಹಸಕ್ಕೆ ಇಸ್ರೋ ರೆಡಿ – ಏನಿದು ಪ್ರಯೋಗ? ಇಷ್ಟೊಂದು ಮಹತ್ವ ಯಾಕೆ?

    ಡಾಕಿಂಗ್‌ ಸಾಹಸಕ್ಕೆ ಇಸ್ರೋ ರೆಡಿ – ಏನಿದು ಪ್ರಯೋಗ? ಇಷ್ಟೊಂದು ಮಹತ್ವ ಯಾಕೆ?

    ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ISRO) ಇಂದು (ಡಿ.30) ಮಹತ್ವದ ದಿನ. ಸೋಮವಾರ ರಾತ್ರಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (SpaDEx) ಯೋಜನೆ ಭಾಗವಾಗಿ 2 ಉಪಗ್ರಹಗಳು ಉಡಾವಣೆಯಾಗಲಿದೆ.

    ಬಾಹ್ಯಾಕಾಶ ಉಪಗ್ರಹಗಳ ಡಾಕಿಂಗ್‌ (Docking) ಮತ್ತು ಅನ್‌ಡಾಕಿಂಗ್‌ (Undocking) ಪ್ರಯೋಗ ಯಶಸ್ವಿಯಾದಲ್ಲಿ ಸ್ಪೇಡೆಕ್ಸ್‌ನಲ್ಲಿ ಯಶ ಕಂಡ ವಿಶ್ವದ 4ನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಎರಡು ಉಪಗ್ರಹಗಳನ್ನು ಜೋಡಿಸುವ ಹಾಗೂ ಬೇರ್ಪಡಿಸುವ ಪ್ರಯೋಗದಲ್ಲಿ ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಯಶಸ್ಸು ಕಂಡಿದೆ.

    ಈ ಪ್ರಯೋಗದ ಭಾಗವಾಗಿ ಎಸ್‌ಡಿಎಕ್ಸ್‌01 ಮತ್ತು ಎಸ್‌ಡಿಎಕ್ಸ್02 ಹೆಸರಿನ ಎರಡು ಉಪಗ್ರಹಗಳನ್ನು ಹೊತ್ತ ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ (PSLV) ರಾಕೆಟ್ ಇಂದು ರಾತ್ರಿ 9:58ಕ್ಕೆ ಉಡಾವಣೆಯಾಗಲಿದೆ. ಭೂಮಿಯಿಂದ 476 ಕಿ.ಮೀ ದೂರದ ಕಕ್ಷೆಗೆ ಉಪಗ್ರಹಗಳನ್ನು ರಾಕೆಟ್‌ ಯಶಸ್ವಿಯಾಗಿ ಸೇರಿಸಿದ ಬಳಿಕ ಜನವರಿ ಮೊದಲ ವಾರದಲ್ಲಿ ಇಸ್ರೋ ಡಾಕಿಂಗ್‌ ಪ್ರಯೋಗ ನಡೆಯಲಿದೆ.


    ಏನಿದು ಪ್ರಯೋಗ?
    ಈ ಎರಡೂ ಉಪಗ್ರಹಗಳು ತನ್ನಲ್ಲಿರುವ ಸೆನ್ಸರ್‌, ವ್ಯವಸ್ಥೆಯನ್ನು ಬಳಸಿ ಒಂದಕ್ಕೊಂದು ಜೋಡಣೆ ಆಗುವಂತೆ ಮಾಡುವುದು. ನಂತರ ಪರಸ್ಪರ ಬೇರೆಯಾಗುವಂತೆ ಮಾಡಲು ಇಸ್ರೋ ಈ ಪ್ರಯೋಗ ನಡೆಸಲಿದೆ. ಈ ಕಾರಣಕ್ಕೆ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (ಸ್ಪೇಡೆಕ್ಸ್) ಎಂಬ ಹೆಸರನ್ನು ಇಡಲಾಗಿದೆ.

    ಯಾಕೆ ಇಷ್ಟೊಂದು ಮಹತ್ವ?
    ಮಾನವಸಹಿತ ಅಂತರಿಕ್ಷಯಾನ, ಚಂದ್ರನ ಅಂಗಳಕ್ಕೆ ಮನುಷ್ಯರನ್ನು ಕಳುಹಿಸಿ, ವಾಪಸ್‌ ಕರೆತರಲು ಇಸ್ರೋ ಈಗಾಗಲೇ ಯೋಜನೆ ರೂಪಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಂತೆ ಇಸ್ರೋ ತನ್ನದೇ ಆದ ಸ್ವದೇಶಿ ‘ಭಾರತೀಯ ಅಂತರಿಕ್ಷ ನಿಲ್ದಾಣ’ ಸ್ಥಾಪಿಸಲು ಸಿದ್ಧತೆ ಆರಂಭಿಸಿದೆ. ಆ ನಿಲ್ದಾಣಕ್ಕೆ ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್‌, ಅನ್‌ಡಾಕಿಂಗ್‌ ತಂತ್ರಜ್ಞಾನ ತಿಳಿದಿರಬೇಕು.

     

  • ಶ್ರೀಲಂಕಾದೊಂದಿಗೆ ತನ್ನ ವಿನಿಮಯಕ್ಕೆ ತೊಂದರೆ ಮಾಡುವುದನ್ನು ನಿಲ್ಲಿಸಿ – ಭಾರತಕ್ಕೆ ಚೀನಾ ಮನವಿ

    ಶ್ರೀಲಂಕಾದೊಂದಿಗೆ ತನ್ನ ವಿನಿಮಯಕ್ಕೆ ತೊಂದರೆ ಮಾಡುವುದನ್ನು ನಿಲ್ಲಿಸಿ – ಭಾರತಕ್ಕೆ ಚೀನಾ ಮನವಿ

    ಬೀಜಿಂಗ್: ಆಯಕಟ್ಟಿನ ಹಂಬಂಟೋಟಾ ಬಂದರಿನಲ್ಲಿ ಚೀನಾದ ಉನ್ನತ ತಂತ್ರಜ್ಞಾನದ ಸಂಶೋಧನಾ ನೌಕೆಯ ಯೋಜಿತ ಡಾಕಿಂಗ್ ಅನ್ನು ಮುಂದೂಡಲು ಶ್ರೀಲಂಕಾದ ಮನವಿಯಿಂದ ರೊಚ್ಚಿಗೆದ್ದ ಚೀನಾ, ಕೊಲಂಬೊದ ಮೇಲೆ ಒತ್ತಡ ಹೇರುವುದು ಅರ್ಥಹೀನ ಎಂದು ಸೋಮವಾರ ಭಾರತವನ್ನು ಕೇಳಿಕೊಂಡಿದೆ.

    ಕೊಲಂಬೊದ ವರದಿಗಳ ಪ್ರಕಾರ, ಭಾರತವು ಭದ್ರತಾ ಕಳವಳ ವ್ಯಕ್ತಪಡಿಸಿದೆ. ಈ ಕಾರಣ ಆಗಸ್ಟ್ 11 ರಿಂದ 17 ರವರೆಗೆ ಹಂಬನ್‍ತೋಟ ಬಂದರಿನಲ್ಲಿ ಡಾಕಿಂಗ್ ಮಾಡಲು ನಿಗದಿಯಾಗಿದ್ದ ಚೀನಾದ ಬಾಹ್ಯಾಕಾಶ ಮತ್ತು ಉಪಗ್ರಹ ಟ್ರ್ಯಾಕಿಂಗ್ ಸಂಶೋಧನಾ ನೌಕೆ ‘ಯುವಾನ್ ವಾಂಗ್ 5’ ಆಗಮನವನ್ನು ಮುಂದೂಡುವಂತೆ ಶ್ರೀಲಂಕಾ ಬೀಜಿಂಗ್‍ಗೆ ಕೇಳಿಕೊಂಡಿದೆ. ಇದನ್ನೂ ಓದಿ: ಅಕ್ರಮ ಗೋಹತ್ಯೆ ಮನೆ ಮೇಲೆ ದಾಳಿ – ವಿದ್ಯುತ್ ಸಂಪರ್ಕ ಕಟ್, ಶರಣಾಗಲು ಸೂಚನೆ 

    ವರದಿಗಳಿಗೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಬೀಜಿಂಗ್ ವರದಿಗಳನ್ನು ಗಮನಿಸಿದೆ. ಚೀನಾ ಮತ್ತು ಶ್ರೀಲಂಕಾ ನಡುವಿನ ಸಹಕಾರವು ಎರಡು ದೇಶಗಳ ಸ್ವತಂತ್ರ ಆಯ್ಕೆಯಾಗಿದೆ. ಎರಡು ದೇಶಗಳು ಸಾಮಾನ್ಯ ಹಿತಾಸಕ್ತಿಗಳನ್ನು ಪೂರೈಸುತ್ತದೆ. ಇದು ಯಾವುದೇ ಮೂರನೇ ವ್ಯಕ್ತಿಯನ್ನು ಗುರಿಯಾಗಿಸಿಲ್ಲ ಎಂದು ಟೀಕಿಸಿದರು.

    China Seeks Urgent Meeting After Sri Lanka Relents To India Pressure: Report

    ಭದ್ರತಾ ಕಾಳಜಿಯ ವಿಷಯವನ್ನು ಉಲ್ಲೇಖಿಸಿ ಶ್ರೀಲಂಕಾದ ಮೇಲೆ ಒತ್ತಡ ಹೇರುವುದು ಅರ್ಥಹೀನವಾಗಿದೆ. ಶ್ರೀಲಂಕಾ ಸಾರ್ವಭೌಮ ರಾಷ್ಟ್ರವಾಗಿದೆ. ಅದು ತನ್ನ ಸ್ವಂತ ಅಭಿವೃದ್ಧಿ ಹಿತಾಸಕ್ತಿಗಳ ಬೆಳಕಿನಲ್ಲಿ ಇತರ ದೇಶಗಳೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಬಹುದು ಎಂದು ತಿಳಿಸಿದರು. ಇದನ್ನೂ ಓದಿ:  ಉಕ್ರೇನ್ ಯುದ್ಧದಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ವೀಡಿಯೋ ಶೇರ್ ಮಾಡಿದ ರಷ್ಯಾ

    Live Tv
    [brid partner=56869869 player=32851 video=960834 autoplay=true]