Tag: Dobara

  • ದೋಬಾರಾ ಸಿನಿಮಾ ಆಸ್ಕರ್‌ಗೆ ಕಳುಹಿಸಿ: ಅನುರಾಗ್ ಕಶ್ಯಪ್‌ಗೆ ವ್ಯಂಗ್ಯ ಮಾಡಿದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ

    ದೋಬಾರಾ ಸಿನಿಮಾ ಆಸ್ಕರ್‌ಗೆ ಕಳುಹಿಸಿ: ಅನುರಾಗ್ ಕಶ್ಯಪ್‌ಗೆ ವ್ಯಂಗ್ಯ ಮಾಡಿದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಆಸ್ಕರ್ ಪ್ರಶಸ್ತಿಗೆ ಕಳುಹಿಸುವ ವಿಚಾರದಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ಆಡಿದ ಮಾತಿಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿರುಗೇಟು ಕೊಟ್ಟಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಆಸ್ಕರ್ ಗೆ ಹೋಗುವ ಅರ್ಹತೆ ಇಲ್ಲ ಎಂದು ಹೇಳಿರುವ ಅನುರಾಗ್ ಕಶ್ಯಪ್ ನಿರ್ದೇಶನದ ದೋಬಾರಾ ಸಿನಿಮಾವನ್ನೇ ಕಳುಹಿಸಿ ಎಂದು ಟಾಂಗ್ ಕೊಟ್ಟಿದ್ದಾರೆ.

    ನಿನ್ನೆಯಷ್ಟೇ ಅನುರಾಗ್ ಕಶ್ಯಪ್ ನಿರ್ದೇಶನದ, ತಾಪ್ಸಿ ಪನ್ನು ನಟನೆಯ ದೋಬಾರಾ ಸಿನಿಮಾ ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ. ಥಿಯೇಟರ್ ಖಾಲಿ ಖಾಲಿ ಹೊಡೆಯುತ್ತಿವೆ ಎಂದು ರಿಪೋರ್ಟ್ ಆಗಿದೆ. ಹಾಗಾಗಿಯೇ ವಿವೇಕ್ ಅಗ್ನಿಹೋತ್ರಿ ವ್ಯಂಗ್ಯವಾಗಿಯೇ ಇಂತಹ ಸಿನಿಮಾವನ್ನು ಆಸ್ಕರ್ ಗೆ ಕಳುಹಿಸಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಸಮಾಜದಲ್ಲಿ ದ್ವೇಷವನ್ನು ಬಿತ್ತುತ್ತಿದೆ. ಕಲಾತ್ಮಕ ಯಾವುದೇ ಅಂಶಗಳು ಇಲ್ಲದ ಸಿನಿಮಾ ಇದಾಗಿದೆ. ಹಾಗಾಗಿ ಇಂತಹ ಸಿನಿಮಾವನ್ನು ಆಸ್ಕರ್ ಗೆ ಕಳುಹಿಸಿದರೆ, ದೇಶದ ಮಾನ ಹರಾಜಾಗುತ್ತದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಇಂತಹ ಸಿನಿಮಾಗಳು ದೇಶದಲ್ಲಿ ನಿರ್ಮಾಣ ಆಗುವುದೇ ತಲೆತಗ್ಗಿಸುವಂಥದ್ದು ಎಂದು ಹೇಳಿದ್ದರು. ಕಶ್ಯಪ್ ಮಾತು ಭಾರೀ ಚರ್ಚೆಗೆ ಕಾರಣವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಮಾಜಿ ಪತ್ನಿಯರ ಜೊತೆ ಫೋಟೋಗೆ ಪೋಸ್ ಕೊಟ್ಟ ಅನುರಾಗ್ ಕಶ್ಯಪ್

    ಮಾಜಿ ಪತ್ನಿಯರ ಜೊತೆ ಫೋಟೋಗೆ ಪೋಸ್ ಕೊಟ್ಟ ಅನುರಾಗ್ ಕಶ್ಯಪ್

    ಬಾಲಿವುಡ್ ಸ್ಟಾರ್ ನಿರ್ಮಾಪಕರಲ್ಲಿ ಒಬ್ಬರಾಗಿರುವ ಅನುರಾಗ್ ಕಶ್ಯಪ್ ಸದ್ಯ `ದೋಬಾರಾ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅನುರಾಗ್ ತನ್ನ ಮಾಜಿ ಪತ್ನಿಯರ ಜತೆ ಫೋಟೋ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

    ಹಿಂದಿ ಚಿತ್ರರಂಗದಲ್ಲಿ ನಟ, ನಿರ್ದೇಶನ, ನಿರ್ಮಾಪಕನಾಗಿ ಛಾಪೂ ಮೂಡಿಸಿದವರು ಅನುರಾಗ್ ಕಶ್ಯಪ್ ಇದೀಗ ʻದೋಬಾರಾʼ ಚಿತ್ರದ ಪ್ರಚಾರ ಭರ್ಜರಿ ಆಗಿ ನಡೆಯುತ್ತಿದೆ. ಈ ಮಧ್ಯೆ ಮಾಜಿ ಪತ್ನಿಯರೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:Bigg Boss: `ನಾನು ಪ್ರೀತಿಯಲ್ಲಿ ಕೊಲ್ತೀನಿ’ ಎಂದು ಸಾನ್ಯ ಅಯ್ಯರ್ ಹೇಳಿದ್ಯಾರಿಗೆ?

     

    View this post on Instagram

     

    A post shared by Anurag Kashyap (@anuragkashyap10)

    ಅನುರಾಗ್ ಕಶ್ಯಪ್ ಅವರು 1997ರಲ್ಲಿ ಆರತಿ ಬಜಾಜ್ ಮತ್ತು 2011ರಲ್ಲಿ ನಟಿ ಕಲ್ಕಿ ಅವರನ್ನ ಮದುವೆಯಾಗಿ ನಂತರ ಇಬ್ಬರಿಗೂ ಡಿವೋರ್ಸ್ ನೀಡಿದ್ದರು. ಇದೀಗ `ನನ್ನ ಎರಡು ಕಂಬಗಳು’ ಎಂದು ಮಾಜಿ ಪತ್ನಿಯರ ಜೊತೆಯಿರುವ ಫೋಟೋ ಶೇರ್ ಮಾಡಿದ್ದಾರೆ. ನನ್ನ ಜೀವನದ ಆಧಾರ ಕಂಬಗಳು ಎಂಬ ಅರ್ಥದಲ್ಲಿ, ಅನುರಾಗ್‌ ಬರೆದು ಫೋಟೋ ಪೋಸ್ಟ್‌ ಮಾಡಿದ್ದಾರೆ. ಈ ಫೋಟೋಗೆ ಅನುರಾಗ್ ಮತ್ತು ಆರತಿ ಪುತ್ರಿ ಆಲಿಯಾ `ಐಕಾನಿಕ್’ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನಟಿ ತಾಪ್ಸಿ ಪನ್ನು ಸ್ತನದ ಬಗ್ಗೆ ಕಾಮೆಂಟ್ ಮಾಡಿ ಉಗಿಸಿಕೊಂಡ ನಿರ್ದೇಶಕ ಕಶ್ಯಪ್

    ನಟಿ ತಾಪ್ಸಿ ಪನ್ನು ಸ್ತನದ ಬಗ್ಗೆ ಕಾಮೆಂಟ್ ಮಾಡಿ ಉಗಿಸಿಕೊಂಡ ನಿರ್ದೇಶಕ ಕಶ್ಯಪ್

    ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಸುಮ್ಮನೆ ಇರುವಂತಹ ಜಾಯಮಾನದವರೇ ಅಲ್ಲ. ಬಹುಶಃ ಅವರಿಗೆ ವಿವಾದ ಮಾಡಿಕೊಳ್ಳದೇ ಇದ್ದರೆ ನಿದ್ದೆಯೇ ಬರುವುದಿಲ್ಲ ಅನಿಸುತ್ತದೆ. ಹಾಗಾಗಿ, ಆಗಾಗ್ಗೆ ವಿವಾದಿತ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಇದೀಗ ತಾಪ್ಸಿ ಪನ್ನು ಮುಖ್ಯ ಭೂಮಿಕೆಯ ದೋಬಾರಾ ಸಿನಿಮಾಗೆ ಇವರು ನಿರ್ದೇಶನ ಮಾಡಿದ್ದು, ಸದ್ಯ ಅದು ಬಿಡುಗಡೆ ಕೂಡ ಆಗಲಿದೆ.

    ದೋಬಾರಾ ಸಿನಿಮಾವನ್ನು ಜನರಿಗೆ ತಲುಪಿಸಲೇಬೇಕು ಎಂದು ಹಠ ತೊಟ್ಟಿರುವ ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು, ಕಾಲಿಗೆ ಚಕ್ರಕಟ್ಟಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಹಲವಾರು ಊರುಗಳಿಗೆ ಮತ್ತು ಮಾಧ್ಯಮಗಳ ಮುಂದೆ ಬಂದು ಸಿನಿಮಾ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಮಾಧ್ಯಮವೊಂದರಲ್ಲಿ ಪ್ರಚಾರಾರ್ಥವಾಗಿ ನಡೆದ ಸಂದರ್ಶನದಲ್ಲಿ ಕಶ್ಯಪ್ ಎಡವಟ್ಟು ಮಾಡಿಕೊಂಡಿದ್ದಾರೆ. ಇದನ್ನೂ ಓದಿ:`ಅರ್ಜುನ್ ರೆಡ್ಡಿ’ ಚಿತ್ರದ ನಂತರ ಕರಣ್ ಜೋಹರ್ ಚಿತ್ರವನ್ನು ವಿಜಯ್ ತಿರಸ್ಕರಿಸಿದ್ದೇಕೆ?

    ಸಂದರ್ಶಕರು ರಣವೀರ್ ಸಿಂಗ್ ಬೆತ್ತೆಲೆ ಫೋಟೋ ಬಗ್ಗೆ ಪ್ರಶ್ನೆ ಮಾಡಿದಾಗ, ಅದರ ಪರವಾಗಿ ಕಶ್ಯಪ್ ಮಾತನಾಡುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲವೆಂದು ಹೇಳುತ್ತಾರೆ. ಆದರೆ, ಅದನ್ನು ಪನ್ನು ಒಪ್ಪಿಕೊಳ್ಳುವುದಿಲ್ಲ. ಆಗ ಕಶ್ಯಪ್, ‘ ಈ ತಾಪ್ಸಿಗೆ ಹುಡುಗರನ್ನು ಕಂಡರೆ ಹೊಟ್ಟೆ ಉರಿ, ಈಕೆಯ ಸ್ತನಗಳಿಗಿಂತ ನನ್ನವು ದೊಡ್ಡದಿವೆ’ ಎಂದು ಕಾಮೆಂಟ್ ಮಾಡುತ್ತಾರೆ. ಈ ಮಾತನ್ನು ಕೇಳಿ ತಾಪ್ಸಿ ಶಾಕ್ ಆಗುತ್ತಾರೆ.

    ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕಶ್ಯಪ್ ಅವರು ಆಡಿದ ಮಾತಿಗೆ ನಾನಾ ರೀತಿಯಲ್ಲಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಸರಿಯಾಗಿಯೇ ಹೇಳಿದ್ದೀಯಾ ಅಂದರೆ, ಇನ್ನೂ ಕೆಲವರು ಕಶ್ಯಪ್ ಮಾತಿಗೆ ಉಗಿದಿದ್ದಾರೆ. ಇನ್ನೂ ಕೆಲವರಂತೂ ಇದೊಂದು ಸಿನಿಮಾ ಪ್ರಚಾರದ ಗಿಮಿಕ್ ಎಂದು ಆಡಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]