Tag: DNA

  • ಲವ್ ಜಿಹಾದ್‌ಗೆ ಬಲಿಯಾದ್ರೆ ಇದೇ ಗತಿ – ಹೊಸ ಆಯಾಮದಲ್ಲಿ ತನಿಖೆ ನಡೆಸುವಂತೆ VHP ಮನವಿ

    ಲವ್ ಜಿಹಾದ್‌ಗೆ ಬಲಿಯಾದ್ರೆ ಇದೇ ಗತಿ – ಹೊಸ ಆಯಾಮದಲ್ಲಿ ತನಿಖೆ ನಡೆಸುವಂತೆ VHP ಮನವಿ

    ನವದೆಹಲಿ: ದೆಹಲಿಯ ಭೀಕರ ಹತ್ಯೆ ಪ್ರಕರಣವನ್ನು ಲವ್ ಜಿಹಾದ್ (Love Jihad) ಆಯಾಮದಲ್ಲಿ ತನಿಖೆ ನಡೆಸುವಂತೆ ವಿಶ್ವಹಿಂದೂ ಪರಿಷತ್ (VHP) ಪೊಲೀಸರಿಗೆ (Delhi Police) ಮನವಿ ಮಾಡಿದೆ.

    ಹಿಂದೂ ಸಂಘಟನೆಗಳು (Hindu Organization) ಈ ಬಗ್ಗೆ ಧ್ವನಿ ಎತ್ತಿದ್ದು, ಲವ್ ಜಿಹಾದ್‌ಗೆ (Love Jihad) ಶ್ರದ್ಧಾ ಬಲಿಯಾಗಿದ್ದಾಳೆ ಎಂದು ವಾದಿಸುತ್ತಿವೆ. ಈ ಬೆನ್ನಲ್ಲೇ ವಿಶ್ವಹಿಂದೂ ಪರಿಷತ್ ಲವ್ ಜಿಹಾದ್ ಆಯಾಮದಲ್ಲಿ ತನಿಖೆ ಮಾಡುವಂತೆ ದೆಹಲಿ ಪೊಲೀಸರಿಗೆ (Delhi Police) ಮನವಿ ಮಾಡಿದೆ. ಅಲ್ಲದೇ ಲವ್ ಜಿಹಾದ್‌ಗೆ ಬಲಿಯಾದ್ರೇ ಇದೇ ಗತಿ ಅಂತಾನೂ ಪೋಸ್ಟ್ಗಳನ್ನು ಹಾಕುತ್ತಿವೆ. ಇದನ್ನೂ ಓದಿ: ಮನೆಯಲ್ಲಿ ಶ್ರದ್ಧಾಳ ದೇಹದ ಪೀಸ್‍ಗಳಿದ್ರೂ ಬೇರೆ ಯುವತಿಯನ್ನು ಮನೆಗೆ ಕರೆದು ಸೆಕ್ಸ್ ಮಾಡ್ತಿದ್ದ!

    ಅಫ್ತಾಬ್‌ಗೆ ಹಿಂದಿ ಗೊತ್ತಿಲ್ಲ:
    ಪೊಲೀಸರ ಬಳಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಆರೋಪಿ ಅಫ್ತಾಬ್ ತನಗೆ ಇಂಗ್ಲಿಷ್ ಭಾಷೆ (English Language) ಮಾತ್ರ ಬರುತ್ತದೆ. ಹಿಂದಿ ಭಾಷೆ (Hindi Language) ಬರೋದಿಲ್ಲ ಎಂದು ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 7,600 ಶಾಲಾ ಕೊಠಡಿಗಳ ಮುಂದೆ ವಿವೇಕಾನಂದ ಭಾವಚಿತ್ರ ಮುದ್ರಿಸಲು ಸರ್ಕಾರ ಪ್ಲ್ಯಾನ್‌

    ರಾಷ್ಟ್ರ ರಾಜಧಾನಿಯಲ್ಲಿ ತನ್ನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ (live In Relationship) ನಲ್ಲಿದ್ದ ಗೆಳತಿಯ ಹತ್ಯೆ ಮಾಡಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಅನೇಕ ಭಯಾನಕ ಸಂಗತಿಗಳು ಹೊರಬಿದ್ದಿವೆ. ಆರೋಪಿ ಅಫ್ತಾಬ್ ಹಾಗೂ ಶ್ರದ್ಧಾ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ ಮೇ 18ರಂದು ಜಗಳವಾದಾಗ ಶ್ರದ್ಧಾಳ ಎದೆಯ ಮೇಲೆ ಕುಳಿತು ಆಕೆಯ ಕತ್ತುಹಿಸುಕಿ ಸಾಯಿಸಿದ್ದಾನೆ.

    ಬಳಿಕ ದೇಹವನ್ನು ಕತ್ತರಿಸೋದು ಹೇಗೆ? ಅದನ್ನು ಡಿಎನ್‌ಎಗಳ ಸಾಕ್ಷ್ಯಾಧಾರವೂ ಸಿಗದಂತೆ ದೇಹವನ್ನ ವಿಲೇವಾರಿ ಮಾಡೋದು ಹೇಗೆ ಎಂಬ ಮಾಹಿತಿಗಳ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿದ್ದಾನೆ. ನಂತರ ದೇಹವನ್ನು 35 ಪೀಸ್‌ಗಳಾಗಿ ತಂಡು ಮಾಡಿದ್ದು, ಅದನ್ನು ಸಂಗ್ರಹಿಸಲು 300 ಲೀಟರ್ ಸಾಮರ್ಥ್ಯದ ಹೊಸ ಫ್ರಿಡ್ಜ್ ಸಹ ಖರೀದಿಸಿದ್ದಾನೆ. ದೇಹದ ಮಾಂಸದ ವಾಸನೆ ಹರಡಬಾರದೆಂದು ದಿನವೂ ಅಗರಬತ್ತಿ ಹಚ್ಚಿಡುತ್ತಿದ್ದ. ಈ ನಡುವೆ ಶ್ರದ್ಧಾಳನ್ನು ಕೊಲೆ ಮಾಡಿ ಕೆಲ ದಿನಗಳ ನಂತರ ಮತ್ತೊಬ್ಬ ಮಹಿಳೆಯನ್ನು ತನ್ನ ಅಪಾರ್ಟ್ಮೆಂಟ್‌ಗೆ ಕರೆದು ಸೆಕ್ಸ್ ಮಾಡ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಹೆರಿಗೆ ವೇಳೆ ಮಗು ಅದಲು-ಬದಲು – DNA ಪರೀಕ್ಷೆ ನಂತ್ರ ತಾಯಿಯ ಮಡಿಲು ಸೇರಿದ ಮಕ್ಕಳು

    ಹೆರಿಗೆ ವೇಳೆ ಮಗು ಅದಲು-ಬದಲು – DNA ಪರೀಕ್ಷೆ ನಂತ್ರ ತಾಯಿಯ ಮಡಿಲು ಸೇರಿದ ಮಕ್ಕಳು

    ರಾಜಸ್ಥಾನ: ಹೆರಿಗೆ ಸಮಯದಲ್ಲಿ ಅದಲು ಬದಲಾಗಿದ್ದ ಶಿಶುಗಳು(Babies) ಡಿಎನ್‍ಎ ಪರೀಕ್ಷೆ ನಂತರ ತಮ್ಮ ಪೋಷಕರ ಕೈ ಸೇರಿದ ಘಟನೆ ಜೈಪುರದ(Jaipur) ಮಹಿಳಾ ಚಿಕಿತ್ಸಾಲಯದಲ್ಲಿ(Mahila Chikitsalaya) ನಡೆದಿದೆ.

    ಸೆಪ್ಟೆಂಬರ್ 1 ರಂದು ಈ ಘಟನೆ ನಡೆಸಿದ್ದು, ಆಸ್ಪತ್ರೆಯ ಸಿಬ್ಬಂದಿ(Hospital Staff) ನಿರ್ಲಕ್ಷ್ಯದಿಂದ ಶಿಶುಗಳು ಬದಲಾಗಿದ್ದವು. ಹೀಗಾಗಿ ಇಬ್ಬರು ತಾಯಂದಿರು ತಮ್ಮ ಮಗುವನ್ನು ಭೇಟಿಯಾಗಲು 10 ದಿನಗಳ ಕಾಲ ಬೇಕಾಯಿತು ಎಂದು ಆರೋಪಿಸಲಾಗಿದೆ. ಆಸ್ಪತ್ರೆ ಆಡಳಿತವು ಪೊಲೀಸರ ಸಹಾಯದಿಂದ ಎರಡು ಮಗುವಿನ ಡಿಎನ್‍ಎ(DNA) ಪರೀಕ್ಷೆ ನಡೆಸಿ ಇದೀಗ ಪೋಷಕರಿಗೆ ಹಸ್ತಾಂತರಿಸಿದೆ. ಇದನ್ನೂ ಓದಿ: ಮದರಸಾದಲ್ಲಿ ಮರ್ಡರ್ – ಬಾಲಕನನ್ನು ಕೊಂದ ಮತ್ತೋರ್ವ ವಿದ್ಯಾರ್ಥಿ ಬಂಧನ

    ಹೆರಿಗೆಯಾದ ಮೂರು ದಿನಗಳ ನಂತರ ಆಸ್ಪತ್ರೆ ಸಿಬ್ಬಂದಿಗೆ ತನ್ನ ತಪ್ಪಿನ ಅರಿವು ಆಗಿದೆ. ನಿಶಾ (Nisha) ಗಂಡು ಮಗುವಿಗೆ ಜನ್ಮ ನೀಡಿದ್ದರೆ, ರೇಷ್ಮಾ (Reshma) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆರಂಭದಲ್ಲಿ ಮಕ್ಕಳು ಪರಸ್ಪರ ಬದಲಾಗಿದ್ದಾರೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಪೋಷಕರು ನಿರಾಕರಿಸಿದರು. ಹೀಗಾಗಿ ಆಸ್ಪತ್ರೆಯ ಆಡಳಿತ ಮಂಡಳಿಯು ಮಕ್ಕಳಿಗೆ ಡಿಎನ್‍ಎ ಪರೀಕ್ಷೆ ನಡೆಸಿತು ಎಂದು ಆಸ್ಪತ್ರೆ ಆಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಹಗರಣ: ನಾನು ಯಾವುದೇ ತಪ್ಪು ಮಾಡಿಲ್ಲ, ಆಡಿಯೋದಲ್ಲಿ ಮಾತನಾಡಿದ್ದು ನಾನಲ್ಲ: ಬಸವರಾಜ ದಡೇಸಗೂರು

    Live Tv
    [brid partner=56869869 player=32851 video=960834 autoplay=true]

  • ಹಿಂದುತ್ವದಲ್ಲಿ ನಂಬಿಕೆ ಇದ್ದವರು ಭಾರತೀಯರ DNA ಒಂದೇ ಎಂದು ಭಾವಿಸುತ್ತಾರೆ: ರಾಹುಲ್

    ಹಿಂದುತ್ವದಲ್ಲಿ ನಂಬಿಕೆ ಇದ್ದವರು ಭಾರತೀಯರ DNA ಒಂದೇ ಎಂದು ಭಾವಿಸುತ್ತಾರೆ: ರಾಹುಲ್

    ನವದೆದಲಿ: ಹಿಂದೂಗಳು ಪ್ರತಿಯೊಬ್ಬರ ಡಿಎನ್‍ಎ ವಿಶಿಷ್ಟ ಮತ್ತು ವಿಭಿನ್ನ ಎಂದು ನಂಬುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

    40,000 ವರ್ಷಗಳಿಂದ ಎಲ್ಲಾ ಭಾರತೀಯರ ಡಿಎನ್‍ಎ ಒಂದೇ ಆಗಿದೆ ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇತ್ತೀಚೆಗೆ ಹೇಳಿದ್ದರು. ಮೋಹನ್ ಭಾಗವತ್ ಅವರ ಹೇಳಿಕೆಗೆ ರಾಹುಲ್ ಪ್ರತಿಕ್ರಿಯಿಸಿದ್ದಾರೆ. ಹಿಂದುತ್ವದಲ್ಲಿ ನಂಬಿಕೆಯುಳ್ಳವರು ಎಲ್ಲಾ ಭಾರತೀಯರ ಡಿಎನ್‍ಎ ಒಂದೇ ಎಂದು ಭಾವಿಸುತ್ತಾರೆ. ಹಿಂದೂಗಳಾದವರು ಮಾತ್ರ ಪ್ರತಿಯೊಬ್ಬ ವ್ಯಕ್ತಿಯೂ ವಿಶಿಷ್ಟವಾದ ಡಿಎನ್‍ಎ ಹೊಂದಿರುವುದಾಗಿ ನಂಬುತ್ತಾರೆ ಎಂದು ಸೋಶಿಯಲ್ ಮೀಡಿಯಾ ಮೂಲಕವಾಗಿ ಹೇಳಿದ್ದಾರೆ. ಇದನ್ನೂ ಓದಿ: 40 ಸಾವಿರ ವರ್ಷಗಳಿಂದ ಭಾರತೀಯರ ಡಿಎನ್‌ಎ ಒಂದೇ ಆಗಿದೆ: ಆರ್‌ಎಸ್‌ಎಸ್‌ ಮುಖ್ಯಸ್ಥ

    ಟ್ವೀಟ್‍ನಲ್ಲಿ ಏನಿದೆ?: ಪ್ರತಿಯೊಬ್ಬ ವ್ಯಕ್ತಿಯ ಡಿಎನ್‍ಎ ವಿಭಿನ್ನ ಮತ್ತು ವಿಶಿಷ್ಟವಾಗಿದೆ ಎಂದು ಹಿಂದೂಗಳು ನಂಬುತ್ತಾರೆ. ಹಿಂದುತ್ವದಲ್ಲಿ ನಂಬಿಕೆ ಇರುವವರು ಎಲ್ಲಾ ಭಾರತೀಯರ ಡಿಎನ್‍ಎ ಒಂದೇ ಎಂದು ನಂಬುತ್ತಾರೆ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

    ಮೋಹನ್ ಭಾಗವತ್ ಹೇಳಿದ್ದೇನು?: ಹಿಮಾಚಲ ಪ್ರದೇಶದ ಧರ್ಮಶಾಲದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, 40 ಸಾವಿರ ವರ್ಷಗಳಿಂದಲೂ ಭಾರತೀಯರ ಡಿಎನ್‍ಎ ಒಂದೇ ಆಗಿದೆ. ಪೂರ್ವಜರೆಲ್ಲ ನಮ್ಮ ಕುಲದವರು. ಆ ಪೂರ್ವಜರಿಂದಾಗಿ ನಮ್ಮ ದೇಶ ಅಭಿವೃದ್ಧಿ ಸಾಧಿಸಿದೆ. ನಮ್ಮ ಸಂಸ್ಕ್ರತಿ ಮುಂದುವರಿದಿದೆ ಎಂದು ತಿಳಿಸಿದರು. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಇದನ್ನೂ ಓದಿ: ಉಪಯೋಗಿ ಅಲ್ಲ, ನಿರುಪಯೋಗಿ: ಮೋದಿ ಬಣ್ಣನೆಗೆ ಅಖಿಲೇಶ್‌ ಯಾದವ್‌ ಲೇವಡಿ

  • 40 ಸಾವಿರ ವರ್ಷಗಳಿಂದ ಭಾರತೀಯರ ಡಿಎನ್‌ಎ ಒಂದೇ ಆಗಿದೆ: ಆರ್‌ಎಸ್‌ಎಸ್‌ ಮುಖ್ಯಸ್ಥ

    40 ಸಾವಿರ ವರ್ಷಗಳಿಂದ ಭಾರತೀಯರ ಡಿಎನ್‌ಎ ಒಂದೇ ಆಗಿದೆ: ಆರ್‌ಎಸ್‌ಎಸ್‌ ಮುಖ್ಯಸ್ಥ

    ಶಿಮ್ಲಾ: 40 ಸಾವಿರ ವರ್ಷಗಳಿಂದ ಭಾರತದ ಎಲ್ಲ ಜನರ ಡಿಎನ್‌ಎ ಒಂದೇ ಆಗಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟರು.

    ಹಿಮಾಚಲ ಪ್ರದೇಶದ ಧರ್ಮಶಾಲದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, 40 ಸಾವಿರ ವರ್ಷಗಳಿಂದಲೂ ಭಾರತೀಯರ ಡಿಎನ್‌ಎ ಒಂದೇ ಆಗಿದೆ. ಪೂರ್ವಜರೆಲ್ಲ ನಮ್ಮ ಕುಲದವರು. ಆ ಪೂರ್ವಜರಿಂದಾಗಿ ನಮ್ಮ ದೇಶ ಅಭಿವೃದ್ಧಿ ಸಾಧಿಸಿದೆ. ನಮ್ಮ ಸಂಸ್ಕೃತಿ ಮುಂದುವರಿದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಉಪಯೋಗಿ ಅಲ್ಲ, ನಿರುಪಯೋಗಿ: ಮೋದಿ ಬಣ್ಣನೆಗೆ ಅಖಿಲೇಶ್‌ ಯಾದವ್‌ ಲೇವಡಿ

    ಬಿಜೆಪಿ ಕುರಿತು ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಆರ್‌ಎಸ್‌ಎಸ್‌ ನಿಯಂತ್ರಿಸುತ್ತಿಲ್ಲ. ಬಿಜೆಪಿಯವರು ತಮ್ಮದೇ ಆದ ವಿಭಿನ್ನ ನಿಯಮಗಳು, ಕಾರ್ಯವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. ನಮ್ಮ ಸಂಘದ ಆಲೋಚನೆ, ಸಂಸ್ಕೃತಿ ಪರಿಣಾಮಕಾರಿಯಾಗಿದೆ. ಸಂಘಕ್ಕೆ ಸೇರಿದ ಕೆಲವು ಮುಖ್ಯ ವ್ಯಕ್ತಿಗಳು ಸರ್ಕಾರದಲ್ಲಿ ಕೆಲಸ ಮಾಡುತ್ತಿರಬಹುದು. ಅವರು ಸಂಘಕ್ಕೆ ಋಣಿಯಾಗಿದ್ದಾರಷ್ಟೆ. ರಿಮೇಟ್‌ ಕಂಟ್ರೋಲ್‌ ಎನ್ನುವಂತೆ ಸರ್ಕಾರದ ಮೇಲೆ ಸಂಘದ ಯಾವುದೇ ನಿಯಂತ್ರಣವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಅಲಪ್ಪುಳದಲ್ಲಿ SDPI ನಾಯಕ, ಬಿಜೆಪಿ ಮುಖಂಡನ ಹತ್ಯೆ – ಸೆಕ್ಷನ್ 144 ಜಾರಿ

    ಎಷ್ಟೋ ಸರ್ಕಾರಗಳು ಸಂಘದ ವಿರುದ್ಧ ಇದ್ದವು. ಸಂಘವು ಅಂತಹ ಎಲ್ಲ ಅಡೆತಡೆಗಳನ್ನು ದಾಳಿ 96 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಸಂಘದಲ್ಲಿರುವ ಸ್ವಯಂ ಸೇವಕರು ಸುಮ್ಮನೆ ಮನೆಯಲ್ಲಿ ಕೂರುವುದಿಲ್ಲ. ಸಮಾಜದಲ್ಲಿ ಅಗತ್ಯ ಇರುವ ಕಡೆ ನಮ್ಮ ಸ್ವಯಂಸೇವಕರು ಸದಾ ಇರುತ್ತಾರೆ. ಸಮಾಜದ ಜನರನ್ನು ತಮ್ಮೊಟ್ಟಿಗೆ ಕರೆದೊಯ್ಯುತ್ತಾರೆ. ಅವರು ಸ್ವತಂತ್ರರು ಎಂಬುದನ್ನು ಸಾಬೀತುಪಡಿಸಿದ್ದಾರೆಂದು ಭಾಗವತ್‌ ಬಣ್ಣಿಸಿದರು.

  • DNA ಲಸಿಕೆ ಅಭಿವೃದ್ಧಿಪಡಿಸಿದ ಮೊದಲ ದೇಶ ಭಾರತ: ಮೋದಿ

    DNA ಲಸಿಕೆ ಅಭಿವೃದ್ಧಿಪಡಿಸಿದ ಮೊದಲ ದೇಶ ಭಾರತ: ಮೋದಿ

    ನ್ಯೂಯಾರ್ಕ್: 12 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ನೀಡಬಹುದಾದ ಡಿಎನ್‍ಎ(DNA) ಲಸಿಕೆಯನ್ನು ಅಭಿವೃದ್ಧಿಪಡಿಸಿರುವ ಮೊದಲ ದೇಶ ಭಾರತ ಎಂದು ಪ್ರಧಾನಿ ಮೋದಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದಾರೆ.

    ಸೇವಾ ಪರಮೋ ಧರ್ಮ ( ಸೇವೆಯೇ ಮುಖ್ಯ ಕರ್ತವ್ಯ) ಎಂಬ ತತ್ವವನ್ನು ಭಾರತ ಜೀವಿಸುತ್ತಿದ್ದು, ಸೀಮಿತ ಸಂಪನ್ಮೂಲಗಳ ನಡುವೆಯೂ ಲಸಿಕೆ ಅಭಿವೃದ್ಧಿ ಹಾಗೂ ಉತ್ಪಾದನೆಯನ್ನು ಮಾಡಿದೆ. ಭಾರತ ವಿಶ್ವದ ಮೊದಲ ಡಿಎನ್‍ಎ ಲಸಿಕೆಯನ್ನು ತಯಾರಿಸಿದೆ ಎಂದು ಯುಎನ್‌ಜಿಎ( United Nations General Assembly) ಗೆ ಹೇಳುತ್ತಿದ್ದೇನೆ ಎಂದಿದ್ದಾರೆ ಮೋದಿ. ಇದನ್ನೂ ಓದಿ:  ದ್ವೇಷದ ವಿಷವನ್ನು ಬಿತ್ತಿರುವಾಗ ಅಮೃತ ಮಹೋತ್ಸವಕ್ಕೆ ಅರ್ಥವಿದೆಯೇ?: ರಾಹುಲ್

    ಕಳೆದ ತಿಂಗಳು ಭಾರತದ ಔಷಧ ನಿಯಂತ್ರಕ ಝೈಡಸ್ ಕ್ಯಾಡಿಲಾಗೆ ತುರ್ತು ಬಳಕೆಗೆ ಅನುಮೋದನೆ ನೀಡಿತ್ತು. ಇದನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಇದು 12 ವರ್ಷ ಹಾಗೂ ಮೇಲ್ಪಟ್ಟವರಿಗೆ ನೀಡಬಹುದಾಗಿರುವ ಸೂಜಿ ರಹಿತ ಕೋವಿಡ್ -19 ಲಸಿಕೆಯಾಗಿದೆ. (ಎಂಆರ್‌ಎನ್‌ಎ)ಫೈಝುರ್ ಲಸಿಕೆ ಕೊನೆಯ ಹಂತದ ಅಭಿವೃದ್ಧಿಯಲ್ಲಿದ್ದು, ಕೊರೊನಾಗೆ ಮೂಗಿನ ಲಸಿಕೆ ಅಭಿವೃದ್ಧಿಪಡಿಸುವುದಕ್ಕೂ ಭಾರತದಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ. ಮನುಕುಲದೆಡೆಗೆ ಭಾರತ ತನ್ನ ಜವಾಬ್ದಾರಿಯನ್ನು ಅರಿತು ಭಾರತ ವಿಶ್ವದಲ್ಲಿ ಅಗತ್ಯವಿರುವವರಿಗೆ ನೀಡಲು ಮುಂದಾಗಿದೆ. ಭಾರತದಲ್ಲಿ ಲಸಿಕೆಯನ್ನು ಉತ್ಪಾದಿಸಲು ಜಗತ್ತಿನ ಲಸಿಕೆ ತಯಾರಕರಿಗೆ ನಾನು ಕರೆ ನೀಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.

  • ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ – 16 ತಿಂಗಳ ನಂತರ ಸಿಕ್ಕ ಕುಟುಂಬದ ಮೂಲ

    ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ – 16 ತಿಂಗಳ ನಂತರ ಸಿಕ್ಕ ಕುಟುಂಬದ ಮೂಲ

    – 2019 ಪ್ರಕರಣಕ್ಕೆ ಸಿಕ್ತು ಟ್ವಿಸ್ಟ್

    ಮುಂಬೈ: ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟು 16 ತಿಂಗಳ ನಂತರ, ಡಿಎನ್‍ಎ ಮಾದರಿಯ ಮೂಲಕ ಆ ವ್ಯಕ್ತಿಯ ಕುಟುಂಬವನ್ನು ರೈಲ್ವೆ ಪೊಲೀಸರು ಪತ್ತೆ ಮಾಡಿದ್ದಾರೆ.

    2019ರಲ್ಲಿ ಬೋಯಿಸಾರ್ ರೈಲ್ವೆ ನಿಲ್ದಾಣದ ಹಳಿಯ ಮೇಲೆ 32 ವರ್ಷದ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವ್ಯಕ್ತಿಯ ಶವ ಗುರುತು ಸಿಗಲಾದರದಂತಹ ಪರಿಸ್ಥಿತಿಯಲ್ಲಿ ಸಿಕ್ಕಿತ್ತು. ಹೀಗಾಗಿ ಮೃತ ವ್ಯಕ್ತಿಯ ಮೂಳೆಗಳನ್ನು ಡಿಎನ್‍ಎ ಪರೀಕ್ಷೆಗಾಗಿ ಮುಂಬೈನ ಪ್ರಯೋಗಾಲಯದಲ್ಲಿ ಸಂಗ್ರಹಿಸಿಡಲಾಗಿತ್ತು. ಡಿಎನ್‍ಎ ವರದಿ ಬಂದ ನಂತರ ತನಿಖೆ ಮಾಡಿದಾಗ ವ್ಯಕ್ತಿಯ ಕುಟುಂಬ ಪತ್ತೆಯಾಗಿದೆ.

    ರೈಲ್ವೆ ಹಳಿ ಆಸು-ಪಾಸಿನ ಹಳ್ಳಿಗಳಿಗೆ ಭೇಟಿ ನೀಡಿ, ಮನೆಯಲ್ಲಿ ಯಾರಾದರೂ ನಾಪತ್ತೆಯಾಗಿದ್ದಾರಾ ಎಂದು ವಿಚಾರಿಸಲಾಗಿತ್ತು. ಈ ವೇಳೆ ಕಾರ್ಮಿಕರೊಬ್ಬರು ನನ್ನ ಮಗ ಕಾಣೆಯಾಗಿದ್ದಾನೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಮಾಹಿತಿ ಪಡೆದ ಪೊಲೀಸರು ಆ ವ್ಯಕ್ತಿಯ ರಕ್ತದ ಮಾದರಿ ಮತ್ತು ಡಿಎನ್‍ಎ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದರು. ಆಗ ಮೃತ ವ್ಯಕ್ತಿಯ ಕುಟುಂಬ ಪತ್ತೆಯಾಗಿದೆ.

    ಮೃತವ್ಯಕ್ತಿ ಮತ್ತು ಕಾರ್ಮಿಕನ ರಕ್ತದ ಮಾದರಿಗಳು ಒಂದಕ್ಕೊಂದು ಹೋಲಿಕೆಯಾಗುತ್ತಿದ್ದವು. ಹೀಗಾಗಿ ಮೃತವ್ಯಕ್ತಿ ಆತನ ಕುಟುಂಬದವರೆಂದು ತಿಳಿದು ಬಂದಿದೆ. ಈ ಮೂಲಕ 16 ತಿಂಗಳ ನಂತರ ಈ ಪ್ರಕರಣಕ್ಕೆ ಒಂದು ಅಂತ್ಯ ಸಿಕ್ಕಿದೆ. ಮೃತ ವ್ಯಕ್ತಿಯ ಕುಟುಂಬಕ್ಕೆ ತಿಳಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

  • ರಾಜ್ಯ ರಾಜಕಾರಣದಲ್ಲಿ ಡಿಎನ್‍ಎ ದಂಗಲ್? – ಮೋದಿ ಬಂದಾಗ ಸಾಲು ಸಾಲು ಡಿಎನ್‍ಎ ಪ್ರತ್ಯಕ್ಷ!

    ರಾಜ್ಯ ರಾಜಕಾರಣದಲ್ಲಿ ಡಿಎನ್‍ಎ ದಂಗಲ್? – ಮೋದಿ ಬಂದಾಗ ಸಾಲು ಸಾಲು ಡಿಎನ್‍ಎ ಪ್ರತ್ಯಕ್ಷ!

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ‘ಡಿಎನ್‍ಎ’ ದಂಗಲ್ ಆರಂಭವಾಗಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಿದ ‘ಡಿಎನ್‍ಎ’ ನಾಯಕರಿಂದಾಗಿ ಈ ಪ್ರಶ್ನೆ ಈಗ ಎದ್ದಿದೆ.

    ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ನೀಡದ ಸಂಬಂಧ ಕೇಳಲಾದ ಪ್ರಶ್ನೆಗೆ, ಪಕ್ಷ ಸಂಘಟನೆ ಮುಖ್ಯ. ಡಿಎನ್‍ಎಗಳನ್ನು ನೋಡಿ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಚಾಮರಾಜನಗರದಲ್ಲಿ ಹೇಳಿದ್ದರು. ಈ ಹೇಳಿಕೆಯ ನಂತರ ರಾಜ್ಯ ಬಿಜೆಪಿಯಲ್ಲಿ ಡಿಎನ್‍ಎ ದಂಗಲ್ ಆರಂಭವಾಗಿದೆ.

    ಮೋದಿಯವರನ್ನು ಸ್ವಾಗತಿಸುತ್ತಿರುವ ಅಶೋಕ್ ಪುತ್ರರು

    ಈ ಹೇಳಿಕೆಯಿಂದ ಬೆಂಗಳೂರು ಬಿಜೆಪಿಯಲ್ಲಿ ಸಂತೋಷ್ ವರ್ಸಸ್ ಡಿಎನ್‍ಎ ನಡುವಿನ ಫೈಟ್ ಜೋರಾಗಿದ್ದು ಬೆಂಗಳೂರಿನ ಮೋದಿ ಕಾರ್ಯಕ್ರಮದಲ್ಲಿನ ಸಿದ್ಧತೆ ವೇಳೆ ಇದು ಬಯಲಾಗಿದೆ. ಡಿಎನ್‍ಎ ಚರ್ಚೆ ಪಕ್ಷದ ಒಳಗಡೆಯೇ ನಡೆಯುತ್ತಿರುವಾಗಲೇ ಮೋದಿ ಬೆಂಗಳೂರಿನ ಅರಮನೆ ಮೈದಾನದ ಕಾರ್ಯಕ್ರಮದ ವೇಳೆ ಸಾಲು ಸಾಲು ಡಿಎನ್‍ಎ ನಾಯಕರು ಸ್ವಾಗತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಡಿಸಿಎಂ ಆರ್.ಅಶೋಕ್ ಅವರ ಪುತ್ರರು ಮತ್ತು ಸೋಮಣ್ಣ ಪುತ್ರ ಸ್ವಾಗತಿಸಿದ್ದಾರೆ.

    ಮೋದಿಯವರ ಜೊತೆ ಕೃಷ್ಣಪ್ಪ ಅಳಿಯ ಸುಪ್ರೀತ್

    ಆರ್.ಅಶೋಕ್ ಹಿರಿಯ ಪುತ್ರ ಶರತ್ ಮತ್ತು ಕಿರಿಯ ಪುತ್ರರಿಬ್ಬರನ್ನ ಮೋದಿ ಕೈ ಕುಲುಕಿದ್ದು ಇವರು ಹೂಗುಚ್ಛ ಕೊಟ್ಟಿದ್ದಾರೆ. ಮಾಜಿ ಸಚಿವ ವಿ.ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಕೂಡ ಮೋದಿ ಅವರನ್ನು ಮಾತನಾಡಿಸಿದರು. ಶಾಸಕ ಕೃಷ್ಣಪ್ಪ ಅಳಿಯ ಸುಪ್ರೀತ್, ಮಾಜಿ ಶಾಸಕ ಮುನಿರಾಜು ಅಳಿಯ ಅನಿಲ್‍ಕುಮಾರ್ ಸಹ ಮೋದಿಯನ್ನು ಸ್ವಾಗತಿಸಿದ್ದಾರೆ.

    ಪ್ರಧಾನಿಗಳಿಗೆ ಕೈ ಮುಗಿಯುತ್ತಿರುವ ಮುನಿರಾಜು ಅಳಿಯ ಅನಿಲ್‍ಕುಮಾರ್

    ಮೋದಿ ಅವರನ್ನು ನಾಯಕರ ಮಕ್ಕಳು ಸ್ವಾಗತಿಸಿದ ವಿಚಾರ ಈಗ ಪಕ್ಷದ ಆಂತರಿಕ ವಲಯದಲ್ಲೇ ಭಾರೀ ಚರ್ಚೆಯಾಗುತ್ತಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಕಾರ್ಯಕರ್ತರು, ಬೇರೆ ಮುಖಂಡರು ಇರಲೇ ಇಲ್ಲವಾ? ಬಿಎಲ್ ಸಂತೋಷ್ ಅವರ ಡಿಎನ್‍ಎ ಹೇಳಿಕೆಗೆ ತಿರುಗೇಟು ನೀಡಲೆಂದೇ ರಾಜ್ಯ ನಾಯಕರು ಪುತ್ರರನ್ನು ಸ್ವಾಗತಿಸಲು ನಿಲ್ಲಿಸಿದ್ರಾ? ಮಾಜಿ ಡಿಸಿಎಂ ಆರ್.ಅಶೋಕ್ ಅವರ ಸೇನೆಯ ಡಿಎನ್‍ಎಗಳೇ ಸ್ವಾಗತಕ್ಕೆ ಬೇಕಿತ್ತಾ ಎನ್ನುವ ಪ್ರಶ್ನೆಗಳು ಈಗ ಎದ್ದಿದೆ.