Tag: DNA Test

  • ಏರ್ ಇಂಡಿಯಾ ವಿಮಾನ ಪತನ – 80 ಜನರ ಡಿಎನ್‌ಎ ಮ್ಯಾಚ್, 33 ಮೃತದೇಹಗಳ ಹಸ್ತಾಂತರ

    ಏರ್ ಇಂಡಿಯಾ ವಿಮಾನ ಪತನ – 80 ಜನರ ಡಿಎನ್‌ಎ ಮ್ಯಾಚ್, 33 ಮೃತದೇಹಗಳ ಹಸ್ತಾಂತರ

    ಅಹಮದಾಬಾದ್: ತಾಂತ್ರಿಕ ದೋಷದಿಂದ ಅಹಮದಾಬಾದ್‌ನಲ್ಲಿ (Ahmedabad) ಏರ್ ಇಂಡಿಯಾ (Air India) ವಿಮಾನ ಪತನ ಘಟನೆಯಲ್ಲಿ ಮೃತಪಟ್ಟವರ ಡಿಎನ್‌ಎ ಟೆಸ್ಟ್ (DNA Test) ಪ್ರಕ್ರಿಯೆ ನಡೆಯುತ್ತಿದ್ದು, ಈವರೆಗೆ 80 ಜನರ ಡಿಎನ್‌ಎ ಮ್ಯಾಚ್ ಆಗಿದೆ. ಒಟ್ಟು 33 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

    ಅಹಮದಾಬಾದ್ ಮೂಲದ 12 ಮಂದಿ, ಬರೋಡಾದ ಐದು ಮಂದಿ, ಮೆಹ್ಸಾನಾದಿಂದ ನಾಲ್ಕು ಮಂದಿ, ಆನಂದ್‌ನಿಂದ ನಾಲ್ಕು ಮಂದಿ, ಖೇಡಾ, ಭರೂಚ್‌ನಿಂದ ತಲಾ ಇಬ್ಬರು, ಉದಯಪುರ, ಜೋಧ್‌ಪುರ ಬೋಟಾಡ್‌ನಿಂದ ತಲಾ ಒಬ್ಬರ ಮೃತದೇಹ ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರಿಸಿರುವುದಾಗಿ ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಹೆಚ್ಚುವರಿ ಸೂಪರಿಂಟೆಂಡೆಂಟ್ ಡಾ. ರಜನೀಶ್ ಪಟೇಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿಗೆ ಬ್ರೇಕ್ – ರಸ್ತೆಗಿಳಿದ್ರೆ ಬೈಕ್ ಸೀಜ್

    ವಿಮಾನ ದುರಂತ ಸಂಭವಿಸಿದ ಮೂರು ದಿನಗಳ ನಂತರ ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ಅವರ ಮೃತದೇಹದ ಗುರುತು ಪತ್ತೆಯಾಗಿದೆ. ಈ ಕುರಿತು ರಾಜ್ಯದ ಗೃಹ ಸಚಿವ ಹರ್ಷ್ ಸಾಂಘವಿ ಮಾಹಿತಿ ನೀಡಿದ್ದಾರೆ. ಭಾನುವಾರ ಬೆಳಗ್ಗೆ 11:10ಕ್ಕೆ ಬಂದ ಡಿಎನ್‌ಎ ವರದಿಯಲ್ಲಿ ರೂಪಾನಿ ಅವರ ಡಿಎನ್‌ಎಗೆ ಮ್ಯಾಚ್ ಆಗಿದೆ ಎಂದು ತಿಳಿಸಿದ್ದಾರೆ. ರೂಪಾನಿ ಅವರ ಸಹೋದರಿಯಿಂದ ಸ್ಯಾಂಪಲ್ ಪಡೆದು ಡಿಎನ್‌ಎ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆ ವೇಳೆ ಡಿಎನ್‌ಎ ಮಾಚ್ ಆಗಿದ್ದು ಮೂರು ದಿನಗಳ ಬಳಿಕ ಮೃತದೇಹದ ಗುರುತು ಪತ್ತೆಯಾಗಿದೆ. ಇಂದು ರಾಜ್‌ಕೋಟ್‌ನಲ್ಲಿ ವಿಜಯ್ ರೂಪಾನಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಮುಂದುವರಿದ ಮಳೆ ಆರ್ಭಟ – ಇಂದು ರಾಜ್ಯದ ಹಲವು ಜಿಲ್ಲೆಗಳಿಗೆ ಅಲರ್ಟ್

    ಏರ್ ಇಂಡಿಯಾ ವಿಮಾನ ಪತನ ದುರಂತದಲ್ಲಿ ಮೃತಪಟ್ಟವರ ಡಿಎನ್‌ಎ ಮ್ಯಾಚ್ ಮಾಡುವ ಕಾರ್ಯ ನಡೆಯುತ್ತಿದೆ. ಮೃತದೇಹಗಳಿಗಾಗಿ ಸಂಬಂಧಿಕರು ಇನ್ನೂ ಕಾಯುತ್ತಿದ್ದಾರೆ. ಸಿವಿಲ್ ಆಸ್ಪತ್ರೆಯಲ್ಲಿ ಹತ್ತಾರು ಕುಟುಂಬಗಳ ಕುಟುಂಬಸ್ಥರು ಮೃತದೇಹಕ್ಕಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ – 2ನೇ ಬ್ಲ್ಯಾಕ್ ಬಾಕ್ಸ್ ಪತ್ತೆ

  • ಶ್ರದ್ಧಾ ಹತ್ಯೆ ಕೇಸ್ – ಕಾಡಿನಲ್ಲಿ ದೊರೆತ ಮೂಳೆಗಳು ತಂದೆಯ ಡಿಎನ್‌ಎಗೆ ಮ್ಯಾಚ್

    ಶ್ರದ್ಧಾ ಹತ್ಯೆ ಕೇಸ್ – ಕಾಡಿನಲ್ಲಿ ದೊರೆತ ಮೂಳೆಗಳು ತಂದೆಯ ಡಿಎನ್‌ಎಗೆ ಮ್ಯಾಚ್

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಭೀಕರ್ ಹತ್ಯೆಯ ಪ್ರಕರಣಕ್ಕೆ ಇದೀಗ ದೊಡ್ಡ ಸಾಕ್ಷ್ಯ ದೊರೆತಿದೆ. ಕೊಲೆಗಾರ ಅಫ್ತಾಬ್ ಪೂನಾವಾಲಾ (Aftab Poonawala) ದೆಹಲಿಯ (Delhi) ಮೆಹ್ರೌಲಿ ಹಾಗೂ ಗುರುಗ್ರಾಮದ ಕಾಡುಗಳಲ್ಲಿ ಪೊಲೀಸರನ್ನು ಕರೆದೊಯ್ದಾಗ ದೊರೆತಿರುವ ಮೂಳೆಗಳು ಯುವತಿ ಶ್ರದ್ಧಾ ವಾಕರ್‌ದು (Shraddha Walkar) ಎಂಬುದು ದೃಢವಾಗಿದೆ.

    ಅಫ್ತಾಬ್ ಪೂನಾವಾಲಾ ಶ್ರದ್ಧಾ ಕೊಲೆ ನಡೆಸಿ, 35 ತುಂಡುಗಳನ್ನಾಗಿ ಮಾಡಿ ಕಾಡುಗಳಲ್ಲಿ ಹೂತು ಹಾಕಿದ್ದ. ಈ ದೇಹದ ಭಾಗಗಳನ್ನು ತನಿಖೆಯ ವೇಳೆ ಪೊಲೀಸರು ಸಂಗ್ರಹಿಸಿದ್ದರು. ಅವುಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದಾಗ ಶ್ರದ್ಧಾ ತಂದೆ ವಿಕಾಸ್ ವಾಕರ್ ಅವರ ಡಿಎನ್‌ಎಗೆ ಹೋಲಿಕೆಯಾಗುತ್ತದೆ ಎಂಬುದು ಪರೀಕ್ಷಾ ವರದಿಯಲ್ಲಿ ತಿಳಿದುಬಂದಿದೆ.

    ಅಫ್ತಾಬ್ ಮೇ ತಿಂಗಳಿನಲ್ಲಿ ತನ್ನ ಗೆಳತಿ ಶ್ರದ್ಧಾ ವಾಕರ್ ಹತ್ಯೆ ನಡೆಸಿ, 35 ತುಂಡುಗಳನ್ನಾಗಿ ಮಾಡಿ ಫ್ರಿಜ್‌ನಲ್ಲಿ ಸಂಗ್ರಹಿಸಿಟ್ಟಿದ್ದ. ಬಳಿಕ ದೇಹದ ತುಂಡುಗಳನ್ನು ಸುಮಾರು 18 ದಿನಗಳ ಕಾಲ ಒಂದೊಂದಾಗಿಯೇ ದೆಹಲಿಯಾದ್ಯಂತ ಕಾಡುಗಳಲ್ಲಿ ಹೂತು ಹಾಕಿದ್ದ. ಕಳೆದ ಒಂದು ತಿಂಗಳ ಹಿಂದೆ ಶ್ರದ್ಧಾ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಫ್ತಾಬ್‌ನನ್ನು ಬಂಧಿಸಿದ್ದರು. ಬಳಿಕ ತನಿಖೆಯ ವೇಳೆ ಶ್ರದ್ಧಾ ಹತ್ಯೆಯ ಹಿಂದಿನ ಭಯಾನಕ ಸತ್ಯವನ್ನು ಒಂದೊಂದಾಗಿಯೇ ಪೊಲೀಸರು ಬಯಲಿಗೆಳೆದಿದ್ದಾರೆ.

    ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಭೇಟಿಯಾದ ಅಫ್ತಾಬ್ ಹಾಗೂ ಶ್ರದ್ಧಾ ಇಬ್ಬರದ್ದೂ ಅಂತರ್ ಧರ್ಮೀಯ ಸಂಬಂಧ ಎಂಬ ಕಾರಣಕ್ಕೆ ಇಬ್ಬರ ಕುಟುಂಬದವರೂ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಜೋಡಿ ಮುಂಬೈನಿಂದ ದೆಹಲಿಗೆ ಸ್ಥಳಾಂತರಗೊಂಡು ಮೆಹ್ರೌಲಿಯ ಅಪಾರ್ಟ್ಮೆಂಟ್ ಒಂದರಲ್ಲಿ ಒಟ್ಟಿಗೆ ವಾಸವಿದ್ದರು. ಇತ್ತೀಚೆಗೆ ಶ್ರದ್ಧಾ ಹಲವು ತಿಂಗಳುಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ಆಕೆಯ ತಂದೆ ದೆಹಲಿಗೆ ತೆರಳಿ ಆಕೆಯ ಹುಡುಕಾಟ ನಡೆಸಿದ್ದರು. ಆದರೆ ಆಕೆಯ ಪತ್ತೆಯಾಗದ ಹಿನ್ನೆಲೆ ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ: ಡಿಕೆಶಿ ಪ್ರಶ್ನೆ

    ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಕಾಸ್ ವಾಕರ್, 2 ವರ್ಷಗಳ ಹಿಂದೆ ನನ್ನ ಮಗಳು ಅಫ್ತಾಬ್‌ನಿಂದ ಕಿರುಕುಳ ಅನುಭವಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಪೊಲೀಸರು ಅಂದೇ ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದರೆ ಇಂದು ಆಕೆ ಬದುಕಿರುತ್ತಿದ್ದಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮರಾಠಿ ಭಾಷಿಕ ಪುಂಡರ ಪುಂಡಾಟ- ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ

    Live Tv
    [brid partner=56869869 player=32851 video=960834 autoplay=true]

  • ಹೆಲಿಕಾಪ್ಟರ್ ದುರಂತ: ಇನ್ನೂ ಪತ್ತೆಯಾಗದ 7 ಶರೀರಗಳ ಗುರುತು

    ಹೆಲಿಕಾಪ್ಟರ್ ದುರಂತ: ಇನ್ನೂ ಪತ್ತೆಯಾಗದ 7 ಶರೀರಗಳ ಗುರುತು

    ಚೆನ್ನೈ: ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ 13 ಜನರ ಪೈಕಿ 6 ಜನರ ಗುರುತು ಪತ್ತೆಯಾಗಿದೆ. 7 ಜನರ ಪಾರ್ಥಿವ ಶರೀರದ ಗುರುತು ಇನ್ನೂ ಪತ್ತೆಯಾಗಿಲ್ಲ. 7 ಪಾರ್ಥಿವ ಶರೀರಗಳ ಗುರುತು ಪತ್ತೆಗಾಗಿ ಡಿಎನ್‌ಎ ಪರೀಕ್ಷೆ ನಡೆಸಲಾಗಿದೆ.

    ನಿನ್ನೆ ಪೃಥ್ವಿ ಸಿಂಗ್ ಚೌಹಾಣ್ ಪಾರ್ಥಿವ ಶರೀರದ ಗುರುತು ಪತ್ತೆ ಮಾಡಲಾಗಿತ್ತು. ಎಐಎಫ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಅಂತ್ಯಕ್ರಿಯೆ ಇಂದು ಉತ್ತರಪ್ರದೇಶದ ಆಗ್ರಾದಲ್ಲಿ ನಡೆಯಲಿದೆ. ದೆಹಲಿಯಿಂದ ಆಗ್ರಾಕ್ಕೆ ಮೃತದೇಹ ಕೊಂಡೊಯ್ಯಲಿದ್ದು, ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಪೃಥ್ವಿ ಸಿಂಗ್ ಪತನವಾದ ಹೆಲಿಕಾಪ್ಟರ್‌ನ ಪೈಲೆಟ್ ಆಗಿದ್ದರು. ಇದನ್ನೂ ಓದಿ: ಜೀವನ್ಮರಣ ಹೋರಾಟ ನಡೆಸುತ್ತಿರುವ ವರುಣ್ ಸಿಂಗ್ ಬರೆದಿದ್ದ ಸ್ಫೂರ್ತಿದಾಯಕ ಪತ್ರ ವೈರಲ್

    ಮೃತಪಟ್ಟಿದ್ದವರಲ್ಲಿ 6 ಜನರ ಗುರುತು ಮಾತ್ರ ಪತ್ತೆಯಾಗಿದೆ. ದುರಂತದಲ್ಲಿ ಮೃತ ಪಟ್ಟಿದ್ದ ಲ್ಯಾನ್ಸ್ ನಾಯಕ್ ಸಾಯಿ ತೇಜ ಮತ್ತು ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಗುರುತು ಪತ್ತೆಯಾಗಿದ್ದು, ಇಬ್ಬರ ಪಾರ್ಥಿವ ಶರೀರಗಳನ್ನು ಇಂದು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಇದನ್ನೂ ಓದಿ: ಸಿಎಂಎಸ್‍ಆರ್ ಮೋರೆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಿಎಂ ಬೊಮ್ಮಾಯಿ

  • ಶ್ರೀಲಂಕಾ ಸ್ಫೋಟ: ಡಿಎನ್‍ಎ ಪರೀಕ್ಷೆ ಹೇಗೆ? ಯಾಕೆ ಮಾಡುತ್ತಾರೆ?

    ಶ್ರೀಲಂಕಾ ಸ್ಫೋಟ: ಡಿಎನ್‍ಎ ಪರೀಕ್ಷೆ ಹೇಗೆ? ಯಾಕೆ ಮಾಡುತ್ತಾರೆ?

    ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿ ಘಟನೆಯಲ್ಲಿ ಕರ್ನಾಟಕ ಇಬ್ಬರು ನಾಪತ್ತೆಯಾಗಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ದೇಹಗಳು ಸಿಕ್ಕಿದ್ದು ಗುರುತು ಪತ್ತೆಯಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದು, ಸಾವನ್ನಪ್ಪಿದ್ದ ಬಗ್ಗೆ ಮಾಹಿತಿ ಪಡೆಯಲು ತಜ್ಞರು ಡಿಎನ್‍ಎ ಪರೀಕ್ಷೆ ಮೊರೆ ಹೋಗುವ ಸಾಧ್ಯತೆ ಇದೆ.

    ವ್ಯಕ್ತಿಯೊಬ್ಬರು ಸಾವನ್ನಪ್ಪಿ ಆತನ ಗುರುತು ಲಭ್ಯವಾಗದ ಸಂದರ್ಭದಲ್ಲಿ ಈ ವಿಧಾನವನ್ನು ತಜ್ಞರು ಬಳಕೆ ಮಾಡುತ್ತಾರೆ. ಅದರಲ್ಲೂ ಬಾಂಬ್ ದಾಳಿ ನಡೆದ ಸಂದರ್ಭದಲ್ಲಿ ಹೆಚ್ಚಿನ ಮಂದಿ ಸಾವನ್ನಪ್ಪಿದ ಪರಿಣಾಮ ಸದ್ಯ ಪ್ರಕ್ರಿಯೆ ತಡವಾಗಬಹುದು ಎಂದು ಬೆಂಗಳೂರಿನ ಸಂಶೋಧಕ, ವಿಧಿ ವಿಜ್ಞಾನ ತಜ್ಞ ಡಾ.ದಿನೇಶ್ ರಾವ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಡಿಎನ್‍ಎ ಪರೀಕ್ಷೆ ಹೇಗೆ?
    ವೈದಕೀಯ ಪರೀಕ್ಷೆಯಲ್ಲಿ ಡಿಎನ್‍ಎ ಪ್ರಕ್ರಿಯೆಯನ್ನು ಪ್ರೊಫೈಲಿಂಗ್ ಎಂದು ಕರೆಯುತ್ತಾರೆ. ಈ ವೇಳೆ ಟಿಶ್ಯೂ ಸ್ಯಾಂಪಲಿಂಗ್ ಮೂಲಕ ದೇಹದ ಗುರುತು ಪತ್ತೆ ಹಚ್ಚಲಾಗುತ್ತದೆ. ಸಾಮಾನ್ಯ ಪ್ರಕರಣದಲ್ಲಿ ಡಿಎನ್‍ಎ ಪರೀಕ್ಷೆ ನಡೆಸಲು ರಕ್ತದ ಮಾದರಿಯನ್ನೇ ಬಳಸುತ್ತಾರೆ. ವಿಶೇಷ ಸಂದರ್ಭದಲ್ಲಿ ಡಿಎನ್‍ಎ ಪರೀಕ್ಷೆ ಮಾಡಲು ಕೂದಲು, ಉಗುರು, ಚರ್ಮವನ್ನು ಪಡೆಯಲಾಗುತ್ತದೆ.

    ಯಾರ ಡಿಎನ್‍ಎ ಪಡೆಯುತ್ತಾರೆ?
    ಈ ಪರೀಕ್ಷೆಯನ್ನು ನಡೆಸಲು ಮೃತ ವ್ಯಕ್ತಿಯ ವ್ಯಕ್ತಿಯ ಮಗ, ಸಹೋದರರು, ತಂದೆ, ತಾಯಿ ಹಾಗೂ ರಕ್ತ ಸಂಬಂಧಿಕರ ಮಾದರಿಯನ್ನು ಪಡೆಯುತ್ತಾರೆ. ಆದರೆ ಪತ್ನಿ, ಪತಿಯ ಡಿಎನ್‍ಎ ನಿಂದ ಮೃತ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವುದು ಕಷ್ಟ ಸಾಧ್ಯವಾಗುತ್ತದೆ. ಸಂಬಂಧಿಕರ ಬಳಿ ಪಡೆದ ಮಾದರಿಯನ್ನು ಮೃತ ವ್ಯಕ್ತಿಯ ದೇಹದ ಡಿಎನ್‍ಎಗೆ ಹೋಲಿಕೆ ಮಾಡಿ ನೋಡಲಾಗುತ್ತದೆ. ವಿಶೇಷವೆಂದರೆ ಡಿಎನ್‍ಎ ಪರೀಕ್ಷೆಯಲ್ಲೂ ಶೇ.100ಕ್ಕೆ 100 ರಷ್ಟು ಹೊಂದಾಣಿಕೆ ಆಗುವುದಿಲ್ಲ. ಕೇವಲ ಶೇ.60 ರಿಂದ 70 ರಷ್ಟು ಹೊಂದಾಣಿಕೆಯಾಗುತ್ತದೆ. ಈ ಫಲಿತಾಂಶದ ಆಧಾರದಲ್ಲಿ ಮೃತ ದೇಹವನ್ನು ಗುರುತಿಸಲಾಗುತ್ತದೆ.

    ಡಿಎನ್‍ಎ ಪರೀಕ್ಷೆ ಏಕೆ?
    ಸಾಮಾನ್ಯ ಪ್ರಕರಣದಲ್ಲಿ ಡಿಎನ್‍ಎ ಪರೀಕ್ಷೆಯನ್ನು ವ್ಯಕ್ತಿಯ ಗುರುತು ಪತ್ತೆ ಮಾಡಲು ಬಳಕೆ ಮಾಡುತ್ತಾರೆ. ಆದರೆ ಇಂತಹ ಘೋರ ದಾಳಿ ಸಂದರ್ಭದಲ್ಲಿ ಮೃತ ವ್ಯಕ್ತಿಯ ದೇಹದ ಭಾಗಗಳು ಛಿದ್ರ ಛಿದ್ರವಾಗಿರುವ ಕಾರಣ ಪರೀಕ್ಷೆ ನಡೆಸುವುದು ಕಡ್ಡಾಯವಾಗುತ್ತದೆ. ಏಕೆಂದರೆ ಆತ್ಮಾಹುತಿ ದಾಳಿ ನಡೆಸಿದ ವ್ಯಕ್ತಿಯ ದೇಹದ ಭಾಗಗಳು ಇಲ್ಲಿ ಲಭ್ಯವಾಗುವುದರಿಂದ ಪೊಲೀಸ್ ತನಿಖೆ ನಡೆಸಲು ಪ್ರಮುಖ ಸಾಕ್ಷಿಯಾಗಿ ಲಭ್ಯವಾಗಲಿದೆ. ಇವುಗಳ ಆಧಾರ ಮೇಲೆಯೇ ಮುಂದಿನ ತನಿಖೆ ಬಹುಬೇಗ ನಡೆಯುವ ಸಾಧ್ಯತೆ ಇರುತ್ತದೆ. ಅಲ್ಲದೇ ದಾಳಿ ಹಿಂದಿನ ಆರೋಪಿಗಳ ಪತ್ತೆಗೂ ಇವು ನೆರವು ನೀಡಲಿದೆ.

    ಶ್ರೀಲಂಕಾದಲ್ಲಿ ನಡೆದ ಸ್ಫೋಟದಲ್ಲಿ ಹಲವು ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಮೃತದೇಹಗಳ ಸಂಖ್ಯೆ ಹೆಚ್ಚಾಗಿದ್ದು, ಡಿಎನ್‍ಎ ಪರೀಕ್ಷೆ ಸೇರಿದಂತೆ ಇತರೇ ಪರೀಕ್ಷೆಗಳನ್ನು ನಡೆಸಲು ಕಾಲಾವಕಾಶದ ಅಗತ್ಯವಿರುತ್ತದೆ. ವಿದೇಶಾಂಗ ಇಲಾಖೆ ಎಷ್ಟೇ ನಿರಂತರವಾಗಿ ಸಂಪರ್ಕ ಸಾಧಿಸಿ ನಮ್ಮವರ ಬಗ್ಗೆ ಮಾಹಿತಿ ಲಭಿಸಲು ಸಮಯ ಬೇಕಾಗುತ್ತದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

  • ಮೊಸರು ಕಳ್ಳಿಯನ್ನು ಪತ್ತೆಹಚ್ಚಲು ಪೊಲೀಸರು ಡಿಎನ್‍ಎ ಟೆಸ್ಟ್ ಮಾಡಿದ್ರು!

    ಮೊಸರು ಕಳ್ಳಿಯನ್ನು ಪತ್ತೆಹಚ್ಚಲು ಪೊಲೀಸರು ಡಿಎನ್‍ಎ ಟೆಸ್ಟ್ ಮಾಡಿದ್ರು!

    ಬೀಜಿಂಗ್: ತೈವಾನ್ ನಲ್ಲಿ ಮೊಸರು ಕಳ್ಳಿಯನ್ನು ಪತ್ತೆಹಚ್ಚಲು, ಪೊಲೀಸರು ಡೀಆಕ್ಸಿರೈಬೊ ನ್ಯೂಕ್ಲೀಯಿಕ್ ಆಮ್ಲ(ಡಿಎನ್‍ಎ) ಟೆಸ್ಟ್ ಮಾಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಚೈನಿಸ್ ಸಾಂಸ್ಕೃತಿಕ ವಿಶ್ವವಿದ್ಯಾನಿಲಯದ ಯುವತಿಯರು ತೈವಾನಿನ ತೈಪೆ ನಗರದಲ್ಲಿ ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು. ಈ ವೇಳೆ ಯುವತಿಯೊಬ್ಬಳು ರೂಮಿನಲ್ಲಿ ಮೊಸರಿನ ಬಾಟಲಿಯನ್ನು ತಂದಿದ್ದಳು. ಆದರೆ ಆ ಮೊಸರನ್ನು ರೂಮಿನಲ್ಲಿದ್ದವರ ಪೈಕಿ ಯಾರೋ ಒಬ್ಬರು ಕುಡಿದು ಖಾಲಿ ಮಾಡಿದ್ದರು. ರೂಮಿಗೆ ವಾಪಾಸ್ಸಾದ ಬಳಿಕ ಮೊಸರಿನ ಖಾಲಿ ಬಾಟಲಿಯನ್ನು ನೋಡಿ, ಉಳಿದವರನ್ನು ಪ್ರಶ್ನಿಸಿದ್ದಾಳೆ. ಆದರೆ ಯಾರೂ ಸಹ ಈ ಬಗ್ಗೆ ಒಪ್ಪಿಕೊಂಡಿಲ್ಲ. ಇದರಿಂದ ಸಿಟ್ಟಿಗೆದ್ದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾಳೆ.

    ಪೊಲೀಸರ ಮುಂದೆ ಆದ ಘಟನೆಯನ್ನೆಲ್ಲಾ ವಿವರಿಸಿದಾಗ, ಪೊಲೀಸರು ಆಕೆಯ ದೂರನ್ನು ಸ್ವೀಕರಿಸಿದ್ದಾರೆ. ಆದರೆ ಬಾಟಲಿ ತುಂಬಾ ತೇವದಿಂದ ಕೂಡಿದ್ದರಿಂದ, ಫಿಂಗರ್ ಪ್ರಿಂಟ್ ತೆಗೆದುಕೊಳ್ಳಲು ಅಸಾಧ್ಯವಾಗಿತ್ತು. ಈ ವೇಳೆ ಯುವತಿ ರೂಮಿನಲ್ಲಿರುವ ಎಲ್ಲಾ ಯುವತಿಯರನ್ನು ಕರೆಸಿ, ಡಿಎನ್‍ಎ ಟೆಸ್ಟ್ ಮಾಡಿಸುವಂತೆ ಕೇಳಿದ್ದಾಳೆ. ಅದಕ್ಕೆ ಒಪ್ಪಿದ ಪೊಲೀಸರು ಐವರು ಸಹಪಾಠಿಗಳನ್ನು ಕರೆಸಿ, ಪರೀಕ್ಷೆ ನಡೆಸಿದ್ದರು. ಡಿಎನ್‍ಎ ವರದಿ ಬಂದ ಬಳಿಕ, ಐವರ ಪೈಕಿ ಇಬ್ಬರ ಮೇಲೆ ದೂರು ದಾಖಲಿಸಿಕೊಂಡಿದ್ದರು.

    ಮೊಸರು ಕಳ್ಳಿಯನ್ನು ಪತ್ತೆಮಾಡಲು ಪೊಲೀಸರು ಡಿಎನ್‍ಎ ಟೆಸ್ಟ್ ಮಾಡಿಸಿದ್ದ ಸುದ್ದಿ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗೆ ಗುರಿಯಾಗಿತ್ತು. ಅಲ್ಲದೇ ಪೊಲೀಸರು ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದಾರೆಂದು ಸ್ಥಳೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿತ್ತು.

    ಈ ಕುರಿತು ಸ್ಥಳೀಯರಾದ ಲಿಯು ಎಂಬವರು ಮಾತನಾಡಿ, ಪೊಲೀಸರು ಕೇವಲ 2 ಡಾಲರ್(142 ರೂ.) ಗಾಗಿ ಡಿಎನ್‍ಎ ಟೆಸ್ಟ್ ನಡೆಸುವ ಮೂಲಕ ಸರ್ಕಾರಕ್ಕೆ 98 ಡಾಲರ್ (6,960ರೂ.) ಗಳನ್ನು ಖರ್ಚು ಮಾಡಿದ್ದಾರೆ. ದೂರು ನೀಡಲು ಬಂದಿದ್ದ ಯುವತಿಗೆ, ಅವರೇ ಸಮಾಧಾನ ಮಾಡಿ 2 ಡಾಲರ್ ಹಣ ಕೊಟ್ಟು ಮೊಸರನ್ನು ಕೊಡಿಸಬಹುದಿತ್ತು. ಪೊಲೀಸರು ತೆರಿಗೆದಾರರ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

    ಸಾಮಾನ್ಯವಾಗಿ ಕೊಲೆ, ಅತ್ಯಾಚಾರದಂತಹ ದೊಡ್ಡ ದೊಡ್ಡ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಕೊನೆಯದಾಗಿ ಡಿಎನ್‍ಎ ಪರೀಕ್ಷೆಯನ್ನು ಕೈಗೊಳ್ಳುತ್ತಾರೆ. ಆದರೆ ಚೀನಾದ ಪೊಲೀಸರು ಕೇವಲ ಮೊಸರು ಕಳ್ಳಿಯನ್ನು ಪತ್ತೆಹಚ್ಚಲು ಡಿಎನ್‍ಎ ಪರೀಕ್ಷೆ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ಜನರು ಕಿಡಿಕಾರಿದ್ದಾರೆ.

    ಏನಿದು ಡಿಎನ್‍ಎ?
    ಡಿಎನ್‍ಎ ವಿಸ್ತೃತ ರೂಪ ಡೀಆಕ್ಸಿರೈಬೊ ನ್ಯೂಕ್ಲೀಯಿಕ್ ಆಮ್ಲ ಆಗಿದೆ. ಮನುಷ್ಯರು ಮತ್ತು ಜೀವಿಗಳಲ್ಲಿರುವ ಅನುವಂಶಿಕ ದ್ರವ್ಯವಾಗಿದೆ. ಮನುಷ್ಯನ ಶರೀರದ ಬಹುತೇಕ ಜೀವಕೋಶಗಳಲ್ಲಿ ಡಿಎನ್‍ಎ ಇದ್ದು, ಇವುಗಳಲ್ಲಿ ಅಧಿಕ ಜೀವಕೋಶಗಳ ಡಿಎನ್‍ಎ ಗಳು ಒಂದೇ ರೀತಿಯಾಗಿರುತ್ತವೆ. ಜೀವಕೋಶಗಳ ಕೋಶಕೇಂದ್ರಗಳಲ್ಲಿ ತುಸು ಅಧಿಕಪ್ರಮಾಣದ ಮತ್ತು ಉಳಿದ ಭಾಗಗಳಲ್ಲಿ ಅಲ್ಪಪ್ರಮಾಣದ ಡಿಎನ್‍ಎ ಗಳು ಇರುತ್ತವೆ.

    ಡಿಎನ್‍ಎ ಬೆರಳಚ್ಚು ವಿಧಾನದಲ್ಲಿ ಒಂದು ನಿರ್ದಿಷ್ಟ ವಿಧದ ಡಿಎನ್‍ಎ ಅನುಕ್ರಮ (Sequence) ವಿಧಾನವನ್ನು ಅನುಸರಿಸಲಾಗುತ್ತಿದ್ದು, (ಇದನ್ನು micro satellite ಎನ್ನುತ್ತಾರೆ) ತನ್ಮೂಲಕ ಇವುಗಳನ್ನು ಗುರುತಿಸುವುದು ಸುಲಭಸಾಧ್ಯವೆನಿಸುತ್ತದೆ.

    ಮನುಷ್ಯನ ಜೀವಕೋಶದಲ್ಲಿರುವ ಡಿಎನ್‍ಎ ಗಳು ತಂದೆತಾಯಂದಿರಿಂದ ಅನುವಂಶಿಕವಾಗಿ ಬಂದಿರುವುದರಿಂದ, ಯಾವುದೇ ವ್ಯಕ್ತಿಯಲ್ಲೂ ತನ್ನ ತಂದೆತಾಯಂದಿರಲ್ಲಿ ಇರದಂತಹ ಡಿಎನ್‍ಎ ಗಳು ಇರಲು ಸಾಧ್ಯವಿಲ್ಲ. ಇದರಿಂದಾಗಿ ಒಬ್ಬ ವ್ಯಕ್ತಿಯ ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಮಕ್ಕಳಲ್ಲಿರುವ ಡಿಎನ್‍ಎ ಗಳಲ್ಲಿ ಸಾಮ್ಯತೆಗಳಿರುವುದರಿಂದ, ಈ ವ್ಯಕ್ತಿಯ ಡಿಎನ್‍ಎ ಗಳೊಂದಿಗೆ ಇವರೆಲ್ಲರ ಡಿಎನ್‍ಎ ಗಳು ತಾಳೆಯಾಗಲೇಬೇಕು. ಇದರಿಂದಾಗಿ ತನ್ನ ಪತ್ನಿ ಹೆತ್ತಿರುವ ಮಗುವಿನ ತಂದೆ ತಾನಲ್ಲ ಅಥವಾ ತಾನು ಇಂತಹ ವ್ಯಕ್ತಿಯೊಬ್ಬರ ಮಗನೆಂದು ನ್ಯಾಯಾಲಯದಲ್ಲಿ ಯಾರಾದರೂ ದಾವೆಯನ್ನು ಹೂಡಿದಾಗ, ಡಿಎನ್‍ಎ ಪರೀಕ್ಷೆಯ ಮೂಲಕವೇ ಇಂತಹ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv