Tag: DNA

  • Air India Crash | 215 ಡಿಎನ್‌ಎ ಮ್ಯಾಚ್‌ – 198 ಮೃತದೇಹ ಹಸ್ತಾಂತರ

    Air India Crash | 215 ಡಿಎನ್‌ಎ ಮ್ಯಾಚ್‌ – 198 ಮೃತದೇಹ ಹಸ್ತಾಂತರ

    ಅಹಮದಾಬಾದ್‌: ಏರ್‌ ಇಂಡಿಯಾವಿಮಾನ ದುರಂತದಲ್ಲಿ (Air India Crash) ಮೃತಪಟ್ಟವರ ಪೈಕಿ ಈವರೆಗೆ ಒಟ್ಟು 215 ಮಂದಿ ಗುರುತು ಪತ್ತೆಯಾಗಿದ್ದು, 198 ಮೃತ ದೇಹಗಳನ್ನ ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅಹಮದಾಬಾದ್ ಸಿವಿಲ್ ಹಾಸ್ಪಿಟಲ್ ಅಧೀಕ್ಷಕ ರಾಕೇಶ್ ಜೋಶಿ ತಿಳಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಒಟ್ಟು 215 ಡಿಎನ್‌ಎ (DNA) ವರದಿಗಳು ಮ್ಯಾಚ್‌ ಆಗಿವೆ. ಈ ಪೈಕಿ 198 ಮೃತದೇಹಗಳನ್ನ ಹಸ್ತಾಂತರಿಸಲಾಗಿದೆ. ಈ ಪೈಕಿ 149 ಭಾರತೀಯರು, 7 ಪೋರ್ಚುಗೀಸ್‌, 32 ಬ್ರಿಟಿಷ್‌ ಮತ್ತಿ ಕೆನಡಿಯನ್‌ ಪ್ರಜೆಗಳ ಮೃತದೇಹಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

    15 ಮೃತದೇಹಗಳನ್ನು ಏರ್‌ ಅಂಬುಲೆನ್ಸ್‌ ಹಾಗೂ 183 ಮೃತದೇಹಗಳನ್ನು ರೋಡ್‌ ಅಂಬುಲೆನ್ಸ್‌ ಮೂಲಕ ಸಾಗಿಸಲಾಗಿದೆ. ಇದೆಲ್ಲವೂ ಸೇರಿ ಒಟ್ಟಾರೆ 222 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. 8 ಮಂದಿ ಮೃತದೇಹಗಳ ಗುರುತು ಮಾತ್ರ ಪತ್ತೆಯಾಗಿಲ್ಲ ಎಂದು ವಿವರಿಸಿದ್ದಾರೆ.

    ಬ್ಲ್ಯಾಕ್‌ ಬಾಕ್ಸ್‌ ಅಮೆರಿಕಗೆ ರವಾನೆ
    ಸದ್ಯ ಪತನವಾಗಿರುವ ಏರ್‌ ಇಂಡಿಯಾ ಬೋಯಿಂಗ್-787 ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಅನ್ನು ಡಿಕೋಡ್‌ ಮಾಡಲು ಅಮೆರಿಕಕ್ಕೆ ಕಳುಹಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜೂನ್‌ 13ರಂದು ಬಿಜೆ ಮೆಡಿಕಲ್‌ ಹಾಸ್ಟೆಲಿನ ಮೇಲ್ಛಾವಣಿಯಲ್ಲಿದ್ದ ಏರ್‌ ಇಂಡಿಯಾ ವಿಮಾನದ ಬ್ಲ್ಯಾಕ್‌ ಬಾಕ್ಸ್‌ (Black Box) ಅನ್ನು‌ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವಶಪಡಿಸಿಕೊಂಡಿತ್ತು. ಆದ್ರೆ ಬ್ಲ್ಯಾಕ್‌‌ ಬಾಕ್ಸ್‌ಗೆ ಬೆಂಕಿ ಬಿದ್ದು ಬಾಹ್ಯವಾಗಿ ಹಾನಿಯಾಗಿದೆ. ಇದರಿಂದ ಸ್ಥಳೀಯ ತನಿಖಾಧಿಕಾರಿಗಳಿಂದ ಮಾಹಿತಿ ಹೊರ ತೆಗೆಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಡೇಟಾ ರಿಕವರಿಗಾಗಿ ಬ್ಲ್ಯಾಕ್‌ಬಾಕ್ಸ್‌ ಅನ್ನು ಅಮೆರಿಕಾಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

  • Ahmedabad Tragedy | ಡಿಎನ್‌ಎ ಮ್ಯಾಚ್ – 3 ದಿನಗಳ ಬಳಿಕ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

    Ahmedabad Tragedy | ಡಿಎನ್‌ಎ ಮ್ಯಾಚ್ – 3 ದಿನಗಳ ಬಳಿಕ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

    – ರಾಜಕೋಟ್‌ನಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ

    ಅಹಮದಾಬಾದ್‌: ಇಲ್ಲಿನ ಮೇಘನಿ ನಗರದಲ್ಲಿ ಏರ್‌ ಇಂಡಿಯಾ ವಿಮಾನ ದುರಂತ (Air India Crash) ಸಂಭವಿಸಿದ ಮೂರು ದಿನಗಳ ನಂತರ ಗುಜರಾತ್‌ನ ಮಾಜಿ ಸಿಎಂ ವಿಜಯ್‌ ರೂಪಾನಿ (Vijay Rupani) ಅವರ ಮೃತದೇಹದ ಗುರುತು ಪತ್ತೆಯಾಗಿದೆ. ಅಪಘಾತ ಸ್ಥಳದಲ್ಲಿ ಪತ್ತೆಯಾದ ಮೃತದೇಹದೊಂದಿಗೆ ಡಿಎನ್‌ಎ ಮ್ಯಾಚ್ ಆಗಿದ್ದು, ಮೃತದೇಹ ಹಸ್ತಾಂತರಕ್ಕೆ ತಯಾರಿ ನಡೆದಿದೆ.

    ಈ ಕುರಿತು ರಾಜ್ಯದ ಗೃಹ ಸಚಿವ ಹರ್ಷ್ ಸಾಂಘವಿ (Harsh Sanghavi )ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ 11:10ಕ್ಕೆ ಬಂದ ಡಿಎನ್‌ಎ ವರದಿಯಲ್ಲಿ ರೂಪಾನಿ ಅವರ ಡಿಎನ್‌ಎಗೆ ಮ್ಯಾಚ್‌ (DNA Match) ಆಗಿದೆ ಎಂದು ತಿಳಿಸಿದ್ದಾರೆ.

    ರೂಪಾನಿ ಅವರ ಸಹೋದರಿಯಿಂದ ಸ್ಯಾಂಪಲ್‌ ಪಡೆದು ಡಿಎನ್‌ಎ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆ ವೇಳೆ ಡಿಎನ್‌ಎ ಮಾಚ್‌ ಆಗಿದ್ದು ಮೂರು ದಿನಗಳ ಬಳಿಕ ಮೃತದೇಹದ ಗುರುತು ಪತ್ತೆಯಾಗಿದೆ. ಸದ್ಯ ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಶೀಘ್ರದಲ್ಲೇ ಅವರು ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಬಂದ ಬಳಿಕ ಮೃತದೇಹ ಹಸ್ತಾಂತರಿಸಲಾಗುತ್ತದೆ. ಹಾಲಿ ಸಿಎಂ ಭೂಪೇಂದ್ರ ಪಟೇಲ್‌ ಸಹ ಕುಟುಂಬಸ್ಥರೊಂದಿಗೆ ಇರಲಿದ್ದಾರೆ.

    ರಾಜಕೋಟ್‌ನಲ್ಲಿ ವಿಜಯ್ ರೂಪಾನಿ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದ್ದಾರೆ.

    ಏರ್ ಇಂಡಿಯಾ ವಿಮಾನ ಪತನ ದುರಂತದಲ್ಲಿ ಮೃತಪಟ್ಟವರ ಮೃತದೇಹಗಳಿಗಾಗಿ ಸಂಬಂಧಿಕರು ಇನ್ನೂ ಕಾಯುತ್ತಿದ್ದಾರೆ. ಸಿವಿಲ್ ಆಸ್ಪತ್ರೆಯಲ್ಲಿ ಹತ್ತಾರು ಕುಟುಂಬಗಳ ಕುಟುಂಬಸ್ಥರು ಮೃತದೇಹಕ್ಕಾಗಿ ಕಾಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಡಿಎನ್‌ಎ ಮ್ಯಾಚ್ ಮಾಡುವ ಕಾರ್ಯ ನಡೆಯುತ್ತಿದೆ. ಶನಿವಾರದವರೆಗೆ 31 ಮೃತ ದೇಹಗಳ ಡಿಎನ್‌ಎ ಮ್ಯಾಚ್ ಆಗಿದ್ದು, 12 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ಇಂದು ಇನ್ನಷ್ಟು ಮೃತದೇಹಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ.

  • ಮುಂಬೈ ವಿಕ್ಟರಿ ಪರೇಡ್‌ ಉಲ್ಲೇಖಿಸಿ ಕಾಲ್ತುಳಿತಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದ ಡಿಎನ್‌ಎ

    ಮುಂಬೈ ವಿಕ್ಟರಿ ಪರೇಡ್‌ ಉಲ್ಲೇಖಿಸಿ ಕಾಲ್ತುಳಿತಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದ ಡಿಎನ್‌ಎ

    – ಕೆಎಸ್‌ಸಿಎ ಅನುಮತಿ ನೀಡಿದ್ದರಿಂದ ಪೋಸ್ಟ್‌
    – ಕೇವಲ ಆಟಗಾರರನ್ನು ತರುವುದು ಮಾತ್ರ ನಮ್ಮ ಕೆಲಸ
    – ಕ್ಷಣ ಕ್ಷಣದ ಪ್ಲಾನ್ ರೂಪಿಸಿದ್ದು ಸಿಎಸ್‌

    ಬೆಂಗಳೂರು: ವಿಧಾನಸೌಧದಲ್ಲಿ (Vidhana Soudha) ನಡೆದ ಆರ್‌ಸಿಬಿ (RCB) ಆಟಗಾರರ ಸನ್ಮಾನ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರವೇ (Karnataka Government) ಆಯೋಜಿಸಿತ್ತು. ಪೊಲೀಸರು ಲಾಠಿಚಾರ್ಜ್ ನಡೆಸಿದ್ದರಿಂದ ಕಾಲ್ತುಳಿತ (Stampede) ಸಂಭವಿಸಿದೆ ಎಂದು ಆರ್‌ಸಿಬಿಯ ಕಾರ್ಯಕ್ರಮ ನಿರ್ವಹಣೆ ಮಾಡಿದ್ದ ಡಿಎನ್‌ಎ (DNA) ಸಂಸ್ಥೆ ಹೈಕೋರ್ಟ್‌ಗೆ ಹೇಳಿದೆ.

    11 ಮಂದಿ ಕಾಲ್ತುಳಿತಕ್ಕೆ ಸಂಬಂಧಿಸಿದ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಹಾಗೂ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಹೈಕೋರ್ಟ್‌ಗೆ (High Court) ರಿಟ್ ಅರ್ಜಿ ಸಲ್ಲಿಸಿವೆ. ಇದರಲ್ಲಿ ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡಲಾಗಿದೆ. ಕಾಲ್ತುಳಿತ ಸಂಭವಿಸಲು ಸರ್ಕಾರವೇ ಕಾರಣ ಎಂದು ನೇರವಾಗಿ ದೂರಲಾಗಿದೆ.

    ಡಿಎನ್‌ಎ ಆರೋಪ ಏನು?
    ಈ ಹಿಂದೆ ಭಾರತ ಟಿ-20 ವಿಶ್ವಕಪ್ ಗೆದ್ದಾಗ ಮುಂಬೈನಲ್ಲಿ ವಿಕ್ಟರಿ ಪರೇಡ್ ನಡೆಸಲಾಗಿತ್ತು. 3 ಲಕ್ಷ ಜನರಿದ್ದರೂ ಯಾವುದೇ ಅವಘಡಗಳಾಗಿರಲಿಲ್ಲ. ವಾಂಖೇಡೆ ಸ್ಟೇಡಿಯಂ ಸಾಮರ್ಥ್ಯ 32,000 ಇದ್ದರೂ ಸಮಸ್ಯೆ ಆಗಲಿಲ್ಲ. ಜೂ.3 ರಂದೇ ಆರ್‌ಸಿಬಿ ವಿಕ್ಟರಿ ಪರೇಡ್‌ಗೆ ಅನುಮತಿ ಕೋರಿ ಪತ್ರವನ್ನು ಬರೆಯಲಾಗಿತ್ತು. ಆದರೆ ತೆರೆದ ಬಸ್ ಪರೇಡ್‌ಗೆ ಪೊಲೀಸರು ಅನುಮತಿ ನಿರಾಕರಣೆ ಮಾಡಿದ್ದರು. ಇದನ್ನೂ ಓದಿ: ಜಾತ್ರೆಯಲ್ಲಿ ಲವ್‌… ಓಯೋ ರೂಮಲ್ಲಿ ಕೆಲಸ ಮುಗಿದ್ಮೇಲೆ ಆಂಟಿಯನ್ನ ಇರಿದು ಕೊಂದ ಟೆಕ್ಕಿ

    ವಿಧಾನಸೌಧ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿತ್ತು. ಸ್ಟೇಡಿಯಂ ಬಳಿ ಅಗತ್ಯವಿದ್ದಷ್ಟು ಪೊಲೀಸರು ನಿಯೋಜನೆ ಮಾಡದ ಕಾರಣ ಡಿಎನ್‌ಎನಿಂದಲೇ 584 ಖಾಸಗಿ ಸಿಬ್ಬಂದಿ ನೇಮಕ ಮಾಡಲಾಗಿತ್ತು. ಸರ್ಕಾರ ತನ್ನ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಬಂಧನಕ್ಕೆ ಆದೇಶಿಸಿದೆ.

    ಘಟನೆ ದಿನ ಪೊಲೀಸರಿಗೆ 2,450 ಆಹಾರ ಪೊಟ್ಟಣ ಸಿದ್ದಪಡಿಸಲಾಗಿತ್ತು. ಆದರೆ ಪೊಲೀಸರು ಕಡಿಮೆ ಸಂಖ್ಯೆಯಲ್ಲಿದ್ದ ಕಾರಣ ಮಧ್ಯಾಹ್ನ 600 ಮಂದಿ ಮಾತ್ರ ಆಹಾರ ಪೊಟ್ಟಣ ಸ್ವೀಕರಿಸಿದ್ದರು. ರಾತ್ರಿ ಭೋಜನಕ್ಕೆ ಮಾತ್ರ 2,450 ಆಹಾರ ಪೊಟ್ಟಣ ಸ್ವೀಕರಿಸಿದ್ದರು. ಮಧ್ಯಾಹ್ನ 3:30ಕ್ಕೆ ಗೇಟ್ ತೆರೆದ ಬಳಿಕವೂ ಅಭಿಮಾನಿಗಳ ದಟ್ಟಣೆ ಹೆಚ್ಚಿತ್ತು. ಬಳಿಕ ಬಂದ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರಿಂದ ಕಾಲ್ತುಳಿತವಾಗಿದೆ. ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯ‌ದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್‌ ಬಗ್ಗೆ ಬಿಚ್ಚಿಟ್ಟ ಅತ್ತೆ

    ಸರ್ಕಾರ ಮತ್ತು ಕೆಎಸ್‌ಸಿಎ ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂನ ಕಾರ್ಯಕ್ರಮದ ಪ್ಲ್ಯಾನ್‌ ಮಾಡಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಚರ್ಚಿಸಿ ಕ್ಷಣ ಕ್ಷಣದ ಪ್ಲಾನ್ ರೂಪಿಸಿದ್ದರು. ವಿಜಯೋತ್ಸವದಲ್ಲಿ ಭಾಗಿಯಾಗುವಂತೆ ಸರ್ಕಾರವೇ ಕರೆ ನೀಡಿತ್ತು. ಇದರಿಂದಾಗಿ ಲಕ್ಷಾಂತರ ಜನ ವಿಧಾನಸೌಧಕ್ಕೆ ಬಂದು, ಸ್ಟೇಡಿಯಂಗೂ ಬಂದಿದ್ದರಿಂದ ಕಾಲ್ತುಳಿತ ಸಂಭವಿಸಿದೆ.

    ಆರ್‌ಸಿಬಿ ವಾದವೇನು?
    ನಮಗೂ, ಈ ಕಾರ್ಯಕ್ರಮಕ್ಕೆ ಯಾವುದೇ ಸಂಬಂಧವಿಲ್ಲ. ಕೇವಲ ಆಟಗಾರರನ್ನು ಕರೆದು ತರುವುದಷ್ಟೇ ನಮ್ಮ ಕೆಲಸ. ಸರ್ಕಾರದ ಅನುಮತಿ ಪಡೆದ ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲಾಗಿದೆ. ಜೂ.3ರಂದೇ ಅನುಮತಿ ಸಿಕ್ಕಿದ್ದೇ ಎಂದೇ ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಳಿ(KSCA) ದೃಢೀಕರಿಸಿತ್ತು. ಕೆಎಸ್‌ಸಿಎ ಮಾಹಿತಿ ಆಧರಿಸಿಯೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ನಾವು ಯಾವುದೇ ತಪ್ಪು ಮಾಡಿಲ್ಲ.

  • ಬೆಂಗಳೂರು ಕಾಲ್ತುಳಿತಕ್ಕೆ 11 ಸಾವು ಕೇಸ್‌ – ಆರ್‌ಸಿಬಿ, ಕೆಎಸ್‌ಸಿಎ ಪ್ರತಿನಿಧಿಗಳ ಬಂಧನಕ್ಕೆ ಸಿಎಂ ಸೂಚನೆ

    ಬೆಂಗಳೂರು ಕಾಲ್ತುಳಿತಕ್ಕೆ 11 ಸಾವು ಕೇಸ್‌ – ಆರ್‌ಸಿಬಿ, ಕೆಎಸ್‌ಸಿಎ ಪ್ರತಿನಿಧಿಗಳ ಬಂಧನಕ್ಕೆ ಸಿಎಂ ಸೂಚನೆ

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣದಲ್ಲಿ ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ ಪ್ರತಿನಿಧಿಗಳನ್ನು ಬಂಧಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

    ಕಾಲ್ತುಳಿತ ಪ್ರಕರಣದಲ್ಲಿ ಆರ್‌ಸಿಬಿ ಫ್ರಾಂಚೈಸಿ- ಎ1, ಡಿಎನ್‌ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ (ಈವೆಂಟ್‌ ಮ್ಯಾನೇಜ್‌ಮೆಂಟ್‌) ಎ2, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯು ಎ3 ಆರೋಪವನ್ನು ಹೊತ್ತಿವೆ. ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

    ಪ್ರಕರಣ ಸಂಬಂಧ ಕೆಎಸ್‌ಸಿಎ, ಸಮಾರಂಭ ಆಯೋಜಿಸಿದ್ದ ಆರ್‌ಸಿಬಿ ಫ್ರಾಂಚೈಸಿ, ವಿಜಯೋತ್ಸವದ ವೇಳೆ ಭದ್ರತೆ ಹೊಣೆ ಹೊತ್ತಿದ್ದ ಡಿಎನ್‌ಎ ಈವೆಂಟ್‌ ಮ್ಯಾನೇಜ್‌ಮೆಂಟ್‌ಗೆ ನೋಟಿಸ್‌ ಜಾರಿ ಮಾಡಲಾಗಿದೆ.

  • ಅತ್ಯಾಚಾರ ಕೇಸ್‌ – ಪ್ರಜ್ವಲ್‌ ರೇವಣ್ಣಗೆ ಸೀರೆ ಸಂಕಷ್ಟ!

    ಅತ್ಯಾಚಾರ ಕೇಸ್‌ – ಪ್ರಜ್ವಲ್‌ ರೇವಣ್ಣಗೆ ಸೀರೆ ಸಂಕಷ್ಟ!

    – ಸಂತ್ರಸ್ತೆಯ ಸೀರೆಯಲ್ಲಿ ವೀರ್ಯ, ಕೂದಲು ಪತ್ತೆ
    – ಡಿಎನ್‌ಎ ಪರೀಕ್ಷೆಯ ವರದಿಗಾಗಿ ಕಾಯುತ್ತಿರುವ ಎಸ್‌ಐಟಿ ಪೊಲೀಸರು

    ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್‌ ರೇವಣ್ಣಗೆ (Prajwal Revana) ಸಂತ್ರಸ್ತೆಯ ಸೀರೆ ದೊಡ್ಡ ಸಂಕಷ್ಟ ತರುವ ಸಾಧ್ಯತೆಯಿದೆ. ಸಂತ್ರಸ್ತೆಯ ಸೀರೆಯಲ್ಲಿ ವೀರ್ಯ ಮತ್ತು ಕೂದಲು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಜ್ವಲ್‌ ರೇವಣ್ಣಗೆ ಡಿಎನ್‌ಎ ಪರೀಕ್ಷೆ (DNA Test) ಮಾಡಲಾಗಿದೆ.

    ಸಂತ್ರಸ್ತೆಯ ಬಳಿ ನಾಲ್ಕು ಸೀರೆ ವಶಕ್ಕೆ ಪಡೆದಿದ್ದ ಎಸ್‌ಐಟಿ (SIT) ಅದನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಿತ್ತು. ಡಿಎನ್‌ಎ ಪರೀಕ್ಷೆಯಲ್ಲಿ ವೀರ್ಯ ಮತ್ತು ಕೂದಲು ಪತ್ತೆಯಾಗಿದೆ. ಪತ್ತೆಯಾಗಿರುವ ವೀರ್ಯ ಮತ್ತು ಕೂದಲು ಯಾರದ್ದು ಎಂದು ತಿಳಿಯುವ ಉದ್ದೇಶದಿಂದ ಪ್ರಜ್ವಲ್‌ ರೇವಣ್ಣಗೆ ಡಿಎನ್‌ಎ ಪರೀಕ್ಷೆ ಮಾಡಲಾಗಿದೆ. ಎಸ್‌ಐಟಿ ಪೊಲೀಸರು ಈಗ ವಿಧಿ ವಿಜ್ಞಾನ ಪ್ರಯೋಗಾಲಯದ (FSL) ಡಿಎನ್‌ಎ ಪರೀಕ್ಷಾ ವರದಿಗೆ ಕಾಯುತ್ತಿದ್ದಾರೆ. ಡಿಎನ್‌ಎ ಪರೀಕ್ಷೆಯಲ್ಲಿ ವೀರ್ಯ ಮತ್ತು ತಲೆಕೂದಲಿಗೆ ಸಾಮ್ಯತೆ ಕಂಡು ಬಂದರೆ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಪ್ರಕರಣ ಬಿಗಿಯಾಗಲಿದೆ.  ಇದನ್ನೂ ಓದಿ: ಗ್ಯಾರಂಟಿಯಿಂದಾಗಿ ಅನುದಾನ ಸಿಗ್ತಿಲ್ಲ: ದರ್ಶನ್ ಪುಟ್ಟಣ್ಣಯ್ಯ

     

    ತಮ್ಮ ಮನೆ ಕೆಲಸದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ನ್ಯಾಯಾಲಯಕ್ಕೆ ಎಸ್‌ಐಟಿ ಆರೋಪ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಡಿಎನ್‌ಎ ಪರೀಕ್ಷೆ ವಿಚಾರವು ಬೆಳಕಿಗೆ ಬಂದಿದೆ. ಅಲ್ಲದೆ ವೈದ್ಯಕೀಯ ಪರೀಕ್ಷಾ ವರದಿ ಬಾಕಿ ಇದ್ದು, ಆ ವರದಿ ಬಂದ ನಂತರ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸುವುದಾಗಿ ಕೋರ್ಟ್‌ಗೆ ಎಸ್‌ಐಟಿ ಮಾಹಿತಿ ನೀಡಿದೆ.

    ಚಾರ್ಜ್‌ಶೀಟ್‌ನಲ್ಲಿ ಏನಿದೆ? ಬನ್ನಿಕೋಡ ತೋಟದ ಮನೆಯಲ್ಲಿದ್ದಾಗ ಕುಡಿಯಲು ಒಂದು ಚೆಂಬು ನೀರು ತೆಗೆದುಕೊಂಡು ಬಾ ಪ್ರಜ್ವಲ್‌ ಹೇಳಿದ್ದರು. ನೀರು ತೆಗೆದುಕೊಂಡು ರೂಮ್ ಒಳಗೆ ಹೋಗ್ತಿದ್ದಂತೆ ಬಾಗಿಲನ್ನು ಲಾಕ್ ಮಾಡಿ ಪ್ರಜ್ವಲ್‌ ರೇವಣ್ಣ ದೌರ್ಜನ್ಯ ಎಸಗಿದ್ದರು. ಬಲವಂತವಾಗಿ ಸೀರೆ ಮತ್ತು ಬ್ಲೌಸ್ ತೆಗೆ ಎಂದು ಹೇಳಿ ಅತ್ಯಾಚಾರ ಎಸಗಿ ಪ್ರಜ್ವಲ್‌ ರೇವಣ್ಣ ವಿಡಿಯೋ ಮಾಡಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ರಸ್ತೆಗಿಳಿಯಲ್ಲ ಡಬ್ಬಲ್ ಡೆಕ್ಕರ್ ಬಸ್ – ಯೋಜನೆ ಕೈಬಿಟ್ಟ ಬಿಎಂಟಿಸಿ

    ಇದಾದ ಬಳಿಕ ಬೆಂಗಳೂರಿನ ಬಸವನಗುಡಿಯ ಮನೆ ಕ್ಲೀನ್‌ಗೆ ಬಂದಾಗ ಸಹ ಇದೇ ರೀತಿಯ ವರ್ತನೆ ತೋರಿದ್ದರು. ಒಗೆಯಲು ಬಟ್ಟೆ ತೆಗೆದುಕೊಂಡು ಹೋಗು ಎಂದು ಪ್ರಜ್ವಲ್ ರೂಂಗೆ ಕರೆದಿದ್ದರು. ರೂಂಗೆ ಹೋಗಲು ಹಿಂಜರಿದಾಗ ಪ್ರಜ್ವಲ್ ಗದರಿದ್ದರು.

    ಒಳಗೆ ಹೋಗುತ್ತಿದ್ದಂತೆ ಚಿಲಕ ಹಾಕಿದ್ದ ಪ್ರಜ್ವಲ್ ಬಲವಂತವಾಗಿ ಅತ್ಯಾಚಾರ ಎಸಗಿದ್ದರು. ಹೊರಗಡೆ ವಿಚಾರ ಬಾಯಿಬಿಟ್ಟರೆ ವೀಡಿಯೊವನ್ನ ನಿನ್ನ ಮಗನಿಗೆ ತೋರಿಸುವುದಾಗಿ ಬೆದರಿಕೆ ಹಾಕಿದರು. ಸಂಸದ ಎಂಬ ಭಯದಲ್ಲಿ ನಾನು ಅಂದು ಸುಮ್ಮನಾಗಿದ್ದೆ ಎಂದು ಸಂತ್ರಸ್ತೆ ಹೇಳಿರುವ ವಿಚಾರ ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

     

  • ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಿಲ್ಲವೇ? – ವಕೀಲರು ಕೊಟ್ಟ ಉತ್ತರವೇನು?

    ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಿಲ್ಲವೇ? – ವಕೀಲರು ಕೊಟ್ಟ ಉತ್ತರವೇನು?

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿಂದು (Renukaswamy Case) ಮತ್ತೆ ನ್ಯಾಯಾಲಯದ ಮುಂದೆ ನಟ ದರ್ಶನ್‌ ಸೇರಿ ಬಂಧಿತ 17 ಆರೋಪಿಗಳನ್ನು ಪೊಲೀಸರು ಹಾಜರುಪಡಿಸಲಿದ್ದಾರೆ. ನ್ಯಾಯಾಲಯ ಆರೋಪಿಯನ್ನು ಮತ್ತೆ ಪೊಲೀಸ್‌ ಕಸ್ಟಡಿಗೆ (Police Custody) ನೀಡಲಿದೆಯೇ ಅಥವಾ ನ್ಯಾಯಾಂಗ ಬಂಧನ ವಿಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

    ಕೋರ್ಟ್‌ಗೆ ದರ್ಶನ್‌ರನ್ನ (Darshan) ಹಾಜರು ಪಡಿಸುವುದಕ್ಕೂ ಮುನ್ನ ದರ್ಶನ್ ಪರ ವಕೀಲರಾದ ರಂಗನಾಥ್ ರೆಡ್ಡಿ ಹಾಗೂ ಅನಿಲ್ ಬಾಬು (Anil Babu) ಆರೋಪಿಯನ್ನ ಪೊಲೀಸ್‌ ಠಾಣೆಯಲ್ಲಿ ಭೇಟಿ ಮಾಡಿದ್ದಾರೆ. ಇದನ್ನೂ ಓದಿ: ತೈಲ ದರ ಏರಿಕೆ ಖಂಡಿಸಿ ಸೈಕಲ್ ಜಾಥಾ – ವಿಜಯೇಂದ್ರ, ಅಶ್ವಥ್ ನಾರಾಯಣ್ ಸೇರಿ ಬಿಜೆಪಿ ನಾಯಕರು ವಶಕ್ಕೆ

    ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲರು, ಪೊಲೀಸ್‌ ಕಸ್ಟಡಿ ಅವಧಿ ಇಂದಿಗೆ (ಗುರುವಾರ) ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಯೊಳಗೆ ಕೋರ್ಟ್‌ಗೆ ಹಾಜರುಪಡಿಸಬೇಕಾಗುತ್ತದೆ. ಬಹುತೇಕ ಎಲ್ಲ ಆಯಾಮಗಳ ತನಿಖೆ ಮುಗಿದಿರಬಹುದು. ಆದ್ದರಿಂದ ಪೊಲೀಸರು ಮತ್ತೆ ಕಸ್ಟಡಿ ಕೇಳುವ ಸಾಧ್ಯತೆಗಳಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಜ್ ಯಾತ್ರೆಗೆ ತೆರಳಿದ್ದ ಬೆಂಗ್ಳೂರಿನ ಇಬ್ಬರು ಸಾವು – ಕರ್ನಾಟಕದ 10,000ಕ್ಕೂ ಹೆಚ್ಚು ಮಂದಿ ಸೇಫ್‌!

    ದರ್ಶನ್‌ ಪರ ಜಾಮೀನು ಅರ್ಜಿ ಸಲ್ಲಿಸಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಎಸ್‌ಪಿಪಿ ಅವರು ಮತ್ತೆ ರಿಮ್ಯಾಂಡ್‌ ಅರ್ಜಿ ಹಾಕ್ತಾರಾ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮನವಿ ಮಾಡ್ತಾರಾ ಎಂಬುದನ್ನು ಕಾದುನೋಡಬೇಕು. ದರ್ಶನ್‌ ಜೊತೆ ಮಾತಾಡಿದ್ದೇವೆ. ಅವರ ಆರೋಗ್ಯ ಚೆನ್ನಾಗಿದೆ‌. ಜಾಮೀನು ಅರ್ಜಿ ಹಾಕೋದಕ್ಕೆ ಇನ್ನೂ ಸಮಯ ಇದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಒಂದು ವಾರದಲ್ಲಿ ಬೇಲ್‌ ಅರ್ಜಿ ಸಲ್ಲಿಸುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

    ದರ್ಶನ್ ಪರ ವಕೀಲ ರಂಗನಾಥ್ ರೆಡ್ಡಿ ಮಾತನಾಡಿ, ಕಸ್ಟಡಿಗೆ ಕೇಳೋದು ತನಿಖಾಧಿಕಾರಿಗಳ ನಿರ್ಧಾರ. ಆದರೆ ಬಹುತೇಕ ತನಿಖೆ ಮುಗಿದಿರಬಹುದು. ನಿನ್ನೆ ಆರೋಪಿಗಳಿಗೆ ಡಿಎನ್ಎ ಟೆಸ್ಟ್ ಮಾಡಿರುವುದಾಗಿ ಹೇಳಿದ್ದಾರೆ. ಡಿಎನ್‌ಎ ಟೆಸ್ಟ್‌ಗೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಅನುಮತಿ ಪಡೆಯಬೇಕು. ಸ್ಯಾಂಪಲ್‌ ಟೆಸ್ಟ್‌ ಮಾಡುವುದಕ್ಕೂ ಕೋರ್ಟ್‌ ಅನುಮತಿ ಬೇಕೇ ಬೇಕು. ಆದರೆ ಪೊಲೀಸರು ತಗೊಂಡಿದ್ದಾರಾ ಇಲ್ವಾ ಗೊತ್ತಿಲ್ಲ. ಡಿಎನ್ಎ ಟೆಸ್ಟ್ ಮಾಡಿದ್ರಾ ಇಲ್ವೊ ಅನ್ನೋದು ನಮಗೆ ಗೊತ್ತಿಲ್ಲ. ಅವರು ಚಾರ್ಜ್‌ಶೀಟ್‌ ಸಲ್ಲಿಸಿದ ಬಳಿಕ ನಮಗೆ ಮಾಹಿತಿ ತಿಳಿಯುತ್ತದೆ ಎಂದು ವಿವರಿಸಿದ್ದಾರೆ.

  • ʻಡಿʼ ಗ್ಯಾಂಗ್‌ ವಿರುದ್ಧ 9 ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲು – ಏನ್‌ ಹೇಳುತ್ತೆ ಸೆಕ್ಷನ್ಸ್‌?

    ʻಡಿʼ ಗ್ಯಾಂಗ್‌ ವಿರುದ್ಧ 9 ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲು – ಏನ್‌ ಹೇಳುತ್ತೆ ಸೆಕ್ಷನ್ಸ್‌?

    ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌ (Darshan) ಮತ್ತು ಗ್ಯಾಂಗ್‌ ವಿರುದ್ಧ ಪೊಲೀಸರು ಒಟ್ಟು 9 ಸೆಕ್ಷನ್‌ಗಳ (IPC Sections) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಆರಂಭದಲ್ಲಿ 302, 201 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ತನಿಖೆ ವೇಳೆ ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿರುವ ಪೊಲೀಸರು 9 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 302, 201, 120-ಬಿ, 355, 384, 143,147,148, ರೆ/ವಿ 149 ಅಡಿಯಲ್ಲಿ ಪ್ರಕರಣಗಳನ್ನ ದಾಖಲಿಸಲಾಗಿದೆ ಎಂದು ʻಪಬ್ಲಿಕ್‌ ಟಿವಿʼಯಲ್ಲಿ ಲಭ್ಯವಾದ ರಿಮ್ಯಾಂಡ್‌ ಕಾಪಿಯಲ್ಲಿ ಪೊಲೀಸರು (Bengaluru Police) ತಿಳಿಸಿದ್ದಾರೆ. ಯಾವ ಸೆಕ್ಷನ್‌ಗಳು ಏನು ಹೇಳುತ್ತವೆ ಎಂಬುದನ್ನು ನಾವಿಲ್ಲಿ ನೋಡಬಹುದು…

    ಸೆಕ್ಷನ್‌ 302 – ಕೊಲೆಗೆ ದಂಡನೆ
    ಸೆಕ್ಷನ್‌ 201 – ಅಪರಾಧಿಯನ್ನು ರಕ್ಷಿಸುವುದಕ್ಕಾಗಿ ತಪ್ಪು ಮಾಹಿತಿ ಕೊಡುವುದು, ಸಾಕ್ಷ್ಯ ನಾಶ
    ಸೆಕ್ಷನ್‌ 120(ಬಿ) – ಕೊಲೆ ಮಾಡಲು ಮಾಡಿಕೊಂಡ ಅಪರಾಧಿಕ ಒಳ ಸಂಚು. ಕೃತ್ಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ಶಿಕ್ಷೆ ವಿಧಿಸಬೇಕು
    ಸೆಕ್ಷನ್‌ 355 – ತೀವ್ರ ಉದ್ರೇಕದಿಂದಲ್ಲದೇ ವ್ಯಕ್ತಿಗೆ ಅವಮಾನ ಮಾಡಲು ಅವನ ಮೇಲೆ ಹಲ್ಲೆ, ಅಥವಾ ಅಪರಾಧಿಕ ಬಲಪ್ರಯೋಗ ಮಾಡುವುದು
    ಸೆಕ್ಷನ್‌ 384 – ಬಲಾಗ್ದ್ರ ಹಣಕ್ಕಾಗಿ ದಂಡನೆ / ಸುಲಿಗೆ
    ಸೆಕ್ಷನ್‌ 143 – ಕಾನೂನು ಬಾಹಿರ ಕೃತ್ಯ ಎಸಗಿದವರಿಗೆ 6 ತಿಂಗಳ ವರೆಗೆ ಜೈಲು ಅಥವಾ ಸಮಾನಾಂತರ ದಂಡ ವಿಧಿಸಬಹುದಾದ ದಂಡನೆ
    ಸೆಕ್ಷನ್‌ 147 – ದೊಂಬಿ ಗಲಾಟೆ ಮಾಡಿದರೆ ದಂಡನೆ
    ಸೆಕ್ಷನ್‌ 148 – ಮಾರಕ ಆಯುಧಗಳನ್ನು ಬಳಸಿ ದೊಂಬಿ ಮಾಡುವುದು
    ಸೆಕ್ಷನ್‌ 149 – ಒಂದೇ ಉದ್ದೇಶ ಈಡೇರಿಸಲು ಮಾಡಲಾದ ಅಪರಾಧಗಳ ಬಗ್ಗೆ ವಿಧಿಸಿರುವ ಕೂಟದ ಪ್ರತಿಯೊಬ್ಬ ಸದಸ್ಯನೂ ತಪ್ಪಿತಸ್ಥನಾಗುವುದು / ಕೃತ್ಯಕ್ಕೆ ಒಳ ಸಂಚು

    ʻಡಿ’ ಗ್ಯಾಂಗ್ ಪೊಲೀಸ್ ಕಸ್ಟಡಿ ಇಂದು ಅಂತ್ಯ:
    ಆರೋಪಿಗಳಾಗಿರುವ ನಟ ದರ್ಶನ್, ಪವಿತ್ರಾ ಗೌಡ, ವಿನಯ್ ಸೇರಿದಂತೆ ಹಲವರ ಪೊಲೀಸ್ ಕಸ್ಟಡಿ ಅವಧಿ ಇಂದು (ಗುರುವಾರ) ಮುಕ್ತಾಯಗೊಳ್ಳಲಿದೆ. ಜೂನ್ 11ರಂದು ಆರೋಪಿಗಳನ್ನು ಬಂಧಿಸಲಾಗಿದ್ದು, ಈವರೆಗೆ ಪೊಲೀಸರು ವಿವಿಧ ರೀತಿಯಲ್ಲಿ ವಿಚಾರಣೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಇಂದಿಗೆ 17 ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಹೀಗಾಗಿ, ಜೂನ್ 20ರ ಮಧ್ಯಾಹ್ನದ ನಂತರ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈಗಾಗಲೇ ದರ್ಶನ್ ಮತ್ತವರ ಗ್ಯಾಂಗ್‌ನ ಆರೋಪಿಗಳನ್ನ ಪೊಲೀಸರು ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದ್ದಾರೆ. ಸ್ಥಳ ಮಹಜರು ನಡೆಸಿ, ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ, ಸ್ವಇಚ್ಚಾ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಹೀಗಾಗಿ ಮತ್ತೆ ಡಿ ಗ್ಯಾಂಗ್ ನ ಪೊಲೀಸ್ ಕಸ್ಟಡಿಗೆ ಕೇಳದಿರಲು ತೀರ್ಮಾನಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಮನವಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

  • ʻಡಿʼ ಗ್ಯಾಂಗ್‌ ಪೊಲೀಸ್‌ ಕಸ್ಟಡಿ ಇಂದು ಅಂತ್ಯ – ʻದಾಸʼನಿಗೆ ನ್ಯಾಯಾಂಗ ಬಂಧನ ಸಾಧ್ಯತೆ!

    ʻಡಿʼ ಗ್ಯಾಂಗ್‌ ಪೊಲೀಸ್‌ ಕಸ್ಟಡಿ ಇಂದು ಅಂತ್ಯ – ʻದಾಸʼನಿಗೆ ನ್ಯಾಯಾಂಗ ಬಂಧನ ಸಾಧ್ಯತೆ!

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ನಟ ದರ್ಶನ್ (Darshan), ಪವಿತ್ರಾ ಗೌಡ (Pavithra Gowda), ವಿನಯ್ ಸೇರಿದಂತೆ ಹಲವರ ಪೊಲೀಸ್‌ ಕಸ್ಟಡಿ ಅವಧಿ ಇಂದು (ಗುರುವಾರ) ಮುಕ್ತಾಯಗೊಳ್ಳಲಿದೆ.

    ಜೂನ್ 11ರಂದು ಆರೋಪಿಗಳನ್ನು (Accused) ಬಂಧಿಸಲಾಗಿದ್ದು, ಈವರೆಗೆ ಪೊಲೀಸರು ವಿವಿಧ ರೀತಿಯಲ್ಲಿ ವಿಚಾರಣೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಇಂದಿಗೆ 17 ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಹೀಗಾಗಿ, ಜೂನ್‌ 20ರ ಮಧ್ಯಾಹ್ನದ ನಂತರ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

    ರೇಣುಕಾಸ್ವಾಮಿ ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ಜೂನ್ 11ರ ಮುಂಜಾನೆ ದರ್ಶನ್ ಅವರನ್ನು ಮೈಸೂರಿನ ರಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಬಂಧಿಸಲಾಯಿತು. ಆ ಬಳಿಕ ಪವಿತ್ರಾ ಗೌಡ ಸೇರಿ ಹಲವರ ಬಂಧನ ಆಗಿತ್ತು. ಅನುಮಾನ ಇರುವ ಎಲ್ಲರನ್ನೂ ಪೊಲೀಸರು ಬಂಧಿಸಿದರು. 2ನೇ ಬಾರಿಗೆ ಪೊಲೀಸ್ ಕಸ್ಟಡಿ ಅಂತ್ಯ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ಎದುರು ಆರೋಪಿಗಳನ್ನು ಪೊಲೀಸರು ಹಾಜರುಪಡಿಸಲಿದ್ದಾರೆ.

    ಈಗಾಗಲೇ ದರ್ಶನ್‌ ಮತ್ತವರ ಗ್ಯಾಂಗ್‌ನ ಆರೋಪಿಗಳನ್ನ ಪೊಲೀಸರು ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದ್ದಾರೆ. ಸ್ಥಳ ಮಹಜರು ನಡೆಸಿ, ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ, ಸ್ವಇಚ್ಚಾ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಹೀಗಾಗಿ ಮತ್ತೆ ಡಿ ಗ್ಯಾಂಗ್ ನ ಪೊಲೀಸ್ ಕಸ್ಟಡಿಗೆ ಕೇಳದಿರಲು ತೀರ್ಮಾನಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಮನವಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಏನೋ ಯಡವಟ್ಟು ಮಾಡ್ಕೊಂಡುಬಿಟ್ಟಿದ್ದಾನೆ, ಏನಾದ್ರೂ ಮಾಡಿ: ಪಕ್ಷಬೇಧ ಮರೆತು ತನಿಖಾಧಿಕಾರಿಗಳ ಮೇಲೆ ಒತ್ತಡ

    ದರ್ಶನ್‌ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದರೆ, ಅನ್ನಪೂರ್ಣೇಶ್ವರಿ ನಗರ ಠಾಣೆಯಿಂದ (AnnapoorneshwariNagar Police Station) ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಿದ್ದಾರೆ ಎಂದು‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ವೇವ್ ಘಟಕ ಸ್ಥಾಪಿಸಲು ನಡ್ಡಾ ಸೂಚನೆ 

  • ದರ್ಶನ್ ಸೇರಿ ಆರೋಪಿಗಳಿಗೆ DNA ಪರೀಕ್ಷೆ- ವಿಕ್ಟೋರಿಯಾದಲ್ಲಿ ಹೆಲ್ತ್ ಚೆಕಪ್

    ದರ್ಶನ್ ಸೇರಿ ಆರೋಪಿಗಳಿಗೆ DNA ಪರೀಕ್ಷೆ- ವಿಕ್ಟೋರಿಯಾದಲ್ಲಿ ಹೆಲ್ತ್ ಚೆಕಪ್

    – ನಾಳೆ ದರ್ಶನ್ & ಗ್ಯಾಂಗ್ ಕಸ್ಟಡಿ ಅಂತ್ಯ

    ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ (Renukaswamy Case) ಕಿಡ್ನಾಪ್ ಹಾಗೂ ಕೊಲೆ ಪ್ರಕರಣ ಸಂಬಂಧ ಗುರುವಾರ ದರ್ಶನ್ & ಗ್ಯಾಂಗ್ ಕಸ್ಟಡಿ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಆರೋಪಿಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಲ್ತ್ ಚೆಕಪ್ ನಡೆಸಲಾಯಿತು.

    ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಸೆಂಟರ್ ನಲ್ಲಿ ದರ್ಶನ ಸೇರಿ ಉಳಿದ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಬಳಿಕ ದರ್ಶನ್, ಪವಿತ್ರಾ ಗೌಡ ಸೇರಿ 10 ಆರೋಪಿಗಳಿಗೆ ಡಿಎನ್‍ಎ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಇದಕ್ಕಾಗಿ ಆರೋಪಿಗಳ ರಕ್ತ, ಕೂದಲಿನ ಮಾದರಿ ಸಂಗ್ರಹ ಮಾಡಲಾಗಿದೆ. ಕೊಲೆ ನಡೆದ ಜಾಗದಲ್ಲಿ ಪತ್ತೆಯಾದ ಕೂದಲು, ರಕ್ತದ ಮಾದರಿಗೂ ಮ್ಯಾಚ್ ಮಾಡುವ ಪ್ರಕ್ರಿಯೆ ನಡೆಸಲಾಗುತ್ತಿದೆ.

    ಎಫ್‍ಎಸ್‍ಎಲ್ ಗೆ ಈ ಕೂದಲು, ರಕ್ತದ ಮಾದರಿ ಕಳುಹಿಸಿ ತಾಳೆ ಹಾಕಲಾಗುತ್ತದೆ. ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಕೂದಲು, ರಕ್ತದ ಮಾದರಿಗಳು ಒಂದೇ ಆದಲ್ಲಿ ಕೊಲೆಗೆ ಮತ್ತಷ್ಟು ಸಾಕ್ಷ್ಯ ಲಭ್ಯವಾದಂತಾಗಲಿದೆ. ಹೀಗಾಗಿ ಆರೋಪಿಗಳ ಡಿಎನ್‍ಎ ಟೆಸ್ಟ್ ಗೆ ಪೊಲೀಸರು ಮುಂದಾಗಿದ್ದಾರೆ.

    ನಾಳೆ ದರ್ಶನ್ & ಗ್ಯಾಂಗ್ ಪೆÇಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ಹೀಗಾಗಿ ಗುರುವಾರ ಪೊಲೀಸರು ಆರೋಪಿಗಳನ್ನು ಕೋರ್ಟ್‍ಗೆ ಹಾಜರುಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಡೆವಿಲ್ ಗ್ಯಾಂಗ್ ಪರಪ್ಪನ ಅಗ್ರಹಾರ ಸೇರೋದು ಫಿಕ್ಸಾ ಎಂಬ ಪ್ರಶ್ನೆ ಎದ್ದಿದೆ.

  • ನಟ ರವಿ ಕಿಶನ್ ನನ್ನ ತಂದೆ, ಡಿಎನ್ಎ ಚೆಕ್ ಮಾಡಿ ಎಂದು ನಟಿ ಸಲ್ಲಿಸಿದ್ದ ಅರ್ಜಿ ವಜಾ

    ನಟ ರವಿ ಕಿಶನ್ ನನ್ನ ತಂದೆ, ಡಿಎನ್ಎ ಚೆಕ್ ಮಾಡಿ ಎಂದು ನಟಿ ಸಲ್ಲಿಸಿದ್ದ ಅರ್ಜಿ ವಜಾ

    ಭೋಜಪುರಿ ಖ್ಯಾತನಟ, ಹಾಗೂ ಬಿಜೆಪಿ ಮುಖಂಡ ರವಿ ಕಿಶನ್ (Ravi Kishan) ವಿರುದ್ಧ ಕೆಲವು ದಿನಗಳಿಂದ ತಾಯಿ-ಮಗಳು ನಿರಂತರ ಆರೋಪ ಮಾಡುತ್ತಿದ್ದಾರೆ. ನಟಿ ಶಿನೋವಾ ಮತ್ತು ಅವರ ತಾಯಿ ಇಬ್ಬರೂ ರವಿ ಕಿಶನ್ ಬಗ್ಗೆ ಸಾಕಷ್ಟು ಆರೋಪ ಮಾಡಿದ್ದಾರೆ. ನನಗೆ ಮಗಳನ್ನು ಕೊಟ್ಟು ರವಿ ಕೈ ಕೊಟ್ಟಿದ್ದಾರೆ ಎಂದು ಮೊನ್ನೆಯಷ್ಟೇ ಶಿನೋವಾ ಅಮ್ಮ ಅಪರ್ಣಾ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

    ಭೋಜಪುರಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ಶಿನೋವಾ (Shinova), ಇದೀಗ ಕೋರ್ಟ್ ಮೆಟ್ಟಿಲು ಏರಿದ್ದರು, ರವಿ ಕಿಶನ್ ನನ್ನ ತಂದೆ ಎಂದು ಸಾಬೀತು ಪಡಿಸೋದಕ್ಕಾಗಿ ಡಿಎನ್ಎ (DNA) ಪರೀಕ್ಷೆಗೂ ಸಿದ್ಧ ಎಂದಿದ್ದರು. ಡಿಎನ್ಎ ಚೆಕ್ ಮಾಡಿಸೋಕಾಗಿ ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿಯನ್ನೂ ಅವರು ಸಲ್ಲಿಸಿದ್ದರು. ಈ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.

     

    ಈ ಎಲ್ಲ ಆರೋಪವನ್ನೂ ರವಿ ಕಿಶನ್ ನಿರಾಕರಿಸುತ್ತಲೇ ಬಂದಿದ್ದಾರೆ. ದುಡ್ಡಿಗಾಗಿ ತಾಯಿ ಮತ್ತು ಮಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. 20 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಹಣ ಕೊಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ಹಾಕುವುದಾಗಿ ಬೆದರಿಸುತ್ತಿದ್ದಾರೆ ಎಂದು ಕಿಶನ್ ಪರ ವಕೀಲರು ಹೇಳಿದ್ದಾರೆ.