Tag: DMK Councillor

  • ಡಿಎಂಕೆ ಕೌನ್ಸಿಲರ್‌ನಿಂದ ಹಲ್ಲೆ- ಗಂಭೀರ ಗಾಯಗೊಂಡಿದ್ದ ಯೋಧ ಸಾವು

    ಡಿಎಂಕೆ ಕೌನ್ಸಿಲರ್‌ನಿಂದ ಹಲ್ಲೆ- ಗಂಭೀರ ಗಾಯಗೊಂಡಿದ್ದ ಯೋಧ ಸಾವು

    ಚೆನ್ನೈ: ಡಿಎಂಕೆ ಕೌನ್ಸಿಲರ್‌ನಿಂದ (DMK Councillor) ಹಲ್ಲೆಗೊಳಗಾಗಿದ್ದ 29 ವರ್ಷದ ಯೋಧ (Soldier) ಮೃತಪಟ್ಟ ಘಟನೆ ತಮಿಳುನಾಡಿನ (Tamil Nadu) ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.

    ಪ್ರಭು (29) ಮೃತ ಯೋಧ. ಇವರು ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಸೇವೆ ಸಲ್ಲಿಸುತ್ತಿದ್ದರು. ಫೆ. 8ರಂದು ಸಾರ್ವಜನಿಕ ಟ್ಯಾಂಕ್‍ನಲ್ಲಿ ಬಟ್ಟೆ ಒಗೆಯುವ ವಿಚಾರದಲ್ಲಿ ಯೋಧ ಪ್ರಭು ಹಾಗೂ ಡಿಎಂಕೆ ಕೌನ್ಸಿಲರ್ ಚಿನ್ನಸ್ವಾಮಿ ನಡುವೆ ವಾಗ್ವಾದ ನಡೆದಿತ್ತು. ಈ ವಾಗ್ವಾದವೇ ಮಿತಿ ಮೀರಿದ್ದು, ಹೊಡೆದಾಟ ನಡೆದಿದೆ. ಈ ವೇಳೆ ಕೌನ್ಸಿಲರ್ ಹಾಗೂ ಆತನ ಕಡೆಯವರು ಯೋಧನ ಮೇಲೆ ಹಲ್ಲೆ ನಡೆಸಿದ್ದರು. ಅಷ್ಟೇ ಅಲ್ಲದೇ ಯೋಧನ ಮೇಲೆ ಮರದ ದಿಮ್ಮಿಗಳನ್ನು ಬಳಸಿ ಹಲ್ಲೆ ನಡೆಸಿದ್ದಾರೆ.

    ಇದರಿಂದಾಗಿ ಗಂಭೀರ ಗಾಯಗೊಂಡಿದ್ದ ಪ್ರಭು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗ ದಾಖಲಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ (ಮಂಗಳವಾರ) ಪ್ರಭು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಹಲ್ಲೆಯ ವೇಳೆ ಸಹೋದರ ಪ್ರಭಾಕರನ್ ಎನ್ನುವವರು ಇದ್ದು, ಅವರು ಗಾಯಗೊಂಡಿದ್ದರು.

    ಘಟನೆಗೆ ಸಂಬಂಧಿಸಿದಂತೆ ಫೆ. 9ರಂದು 6 ಜನರನ್ನು ಪೊಲೀಸರು ಬಂಧಿಸಿದ್ದರು. ಇಂದು (ಬುಧವಾರ) ಡಿಎಂಕೆ ಕೌನ್ಸಿಲರ್ ಸೇರಿದಂತೆ ಇನ್ನೂ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕಸದ‌ ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ

    ಘಟನೆಗೆ ಸಂಬಂಧಿಸಿ ಆಡಳಿತಾರೂಢ ಡಿಎಂಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಬಿಜೆಪಿ ರಾಜ್ಯ ಮುಖ್ಯಸ್ಥ ಅಣ್ಣಾಮಲೈ ಮಾತನಾಡಿ, ಸೇನಾ ಸಿಬ್ಬಂದಿಗೆ ಅವರ ಸ್ವಂತ ಊರಿನಲ್ಲಿ ಸುರಕ್ಷತೆ ಇಲ್ಲ. ಗೃಹ ಖಾತೆ ಹೊಂದಿರುವ ಮುಖ್ಯಮಂತ್ರಿಯನ್ನು ಜನರು ಗಮನಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಒಂದು ಗುಂಪು, ಒಬ್ಬ ವ್ಯಕ್ತಿಯಿಂದ ದೇಶ ಕಟ್ಟಲು ಸಾಧ್ಯವಿಲ್ಲ : ಮೋಹನ್ ಭಾಗವತ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಡುಗೋಲು ಹಿಡಿದು ಫಿಲ್ಮಂ ಸ್ಟೈಲ್‍ನಲ್ಲಿ ವ್ಯಕ್ತಿಯನ್ನು ಅಟ್ಟಾಡಿಸಿದ ಕೌನ್ಸಿಲರ್ ಪತಿ

    ಕುಡುಗೋಲು ಹಿಡಿದು ಫಿಲ್ಮಂ ಸ್ಟೈಲ್‍ನಲ್ಲಿ ವ್ಯಕ್ತಿಯನ್ನು ಅಟ್ಟಾಡಿಸಿದ ಕೌನ್ಸಿಲರ್ ಪತಿ

    ಚೆನ್ನೈ: ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಕೌನ್ಸಿಲರ್ ಒಬ್ಬರ ಪತಿ ಹಾಡಹಗಲೇ ಫಿಲ್ಮಿಂ ರೀತಿಯಲ್ಲಿ ಕುಡುಗೋಲು ಹಿಡಿದು ವ್ಯಕ್ತಿಗಳ ಗುಂಪನ್ನು ಬೆನ್ನಟ್ಟಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಈ ವ್ಯಕ್ತಿಯನ್ನು ವೆಟ್ರಿಚೆಲ್ವನ್ ಎಂದು ಗುರುತಿಸಲಾಗಿದ್ದು, ಮನಚನೆಲ್ಲೂರ್ ಬ್ಲಾಕ್‍ನ ದಕ್ಷಿಣ ತಥಮಂಗಲಂನ ಡಿಎಂಕೆ ಕೌನ್ಸಿಲರ್ ಆಗಿರುವ ನಿತ್ಯಾ ಅವರ ಪತಿಯಾಗಿದ್ದಾರೆ. ವೆಟ್ರಿಚೆಲ್ವನ್ ಅವರು ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೋರೇಷನ್ ಲಿಮಿಟೆಡ್ (TASMAC) ಮದ್ಯದ ಘಟಕವನ್ನು ನಡೆಸುತ್ತಿದ್ದಾರೆ. ಇದೀಗ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಗುಣಶೇಖರನ್ ಮತ್ತು ಅವರ ಸಹೋದರಿಗೆ ಕುಡುಗೋಲಿನಿಂದ ಬೀಸುತ್ತಾ ವೆಟ್ರಿಚೆಲ್ವನ್ ಬೆನ್ನಟ್ಟಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಇನ್ಮುಂದೆ ಮಾಸ್ಕ್ ಧರಿಸಿಲ್ಲ ಅಂದ್ರೆ ಮತ್ತೆ 500ರೂ. ಫೈನ್

    ವೆಟ್ರಿಚೆಲ್ವನ್ ಅವರು ಗುಣಶೇಖರ್ ಎಂಬುವವರಿಂದ ವೆಟ್ರಿಚೆಲ್ವನ್ 2.60 ಲಕ್ಷ ಸಾಲ ಪಡೆದು ವಾಪಸ್ ನೀಡಿರಲಿಲ್ಲ. ಅಲ್ಲದೇ ವೆಟ್ರಿಚೆಲ್ವನ್ ಗುಣಶೇಖರ್ ಅವರಿಗೆ ಈ ಹಿಂದೆ ಬೆದರಿಕೆಯೊಡ್ಡಿದ್ದರು. ಹೀಗಾಗಿ ಆತನನ್ನು ಹೆದರಿಸಲು ಬುಧವಾರ ಗುಣಶೇಖರ್ ಅವರ ಸಹೋದರರೊಂದಿಗೆ ಹೋಗಿದ್ದರು. ಈ ವೇಳೆ ವೆಟ್ರಿಚೆಲ್ವನ್ ಕುಡುಗೋಲು ಹಿಡಿದುಕೊಂಡು ಏಕಾಏಕಿ ಗುಣಶೇಖರ್ ಹಾಗೂ ಅವರ ಸಹೋದರರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ಊಟ ಹಾಕ್ಲೋ, ಸಾಯಿಸ್ಲೋ – ಬೆಲೆ ಏರಿಕೆ ಖಂಡಿಸಿ ಪಾಕ್ ಪ್ರಧಾನಿಗೆ ಮಹಿಳೆಯಿಂದ ಕ್ಲಾಸ್

    Live Tv
    [brid partner=56869869 player=32851 video=960834 autoplay=true]