Tag: dks hivakumar

  • ಕೊರಿಯರ್ ಗರ್ಲ್ ಆಗಿ ಹೋಗಿ ಪ್ರಚಾರ ಮಾಡಿದ್ದೆ: ಡಿಕೆಶಿ ಪುತ್ರಿ

    ಕೊರಿಯರ್ ಗರ್ಲ್ ಆಗಿ ಹೋಗಿ ಪ್ರಚಾರ ಮಾಡಿದ್ದೆ: ಡಿಕೆಶಿ ಪುತ್ರಿ

    – ದಯವಿಟ್ಟು ಬಂದು ನಿಮ್ಮ ಜವಾಬ್ದಾರಿಯನ್ನು ಪೂರೈಸಿ

    ಬೆಂಗಳೂರು: ನಾನು ನನ್ನ ಚಿಕ್ಕಪ್ಪ ಮಾಡಿರುವ ಕೆಲಸಗಳ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕೊರಿಯರ್ ಗರ್ಲ್ ಆಗಿ ಪ್ರಚಾರ ಮಾಡಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ (Aishwarya) ಹೇಳಿದ್ದಾರೆ.

    ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಚಿಕ್ಕಪ್ಪನ ಪರವಾಗಿ ಅಪಾರ್ಟ್ ಮೆಂಟ್‍ಗಳಲ್ಲಿ ಮತಪ್ರಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲವೊಮದು ಬಾರಿ ನಮ್ಮ ಬ್ಯುಸಿ ಶೆಡ್ಯೂಲ್‍ನಲ್ಲಿ ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ನಾವು ಮರೆತಿರುತ್ತೇವೆ. ಹೀಗಾಗ ಕೊರಿಯರ್ ಗರ್ಲ್ ಆಗಿ ಅವರು ಮಾಡಿರುವ ಕೆಲಸವನ್ನು ಜನಕ್ಕೆ ಹೇಲುವಂತಹ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

    ನನಗೂ ಹೆಮ್ಮೆ ಇದೆ. ನಮ್ಮ ಸಂಸದನ ಮೇಲೆ ಹಾಗೂ ಅವರು ಮಾಡಿರುವ ಕೆಲಸದ ಮೇಲೆ ಮಗಳಿಗಿಂತ ಹೆಚ್ಚಾಗಿ ಒಬ್ಬಳು ವಿದ್ಯಾವಂತೆ ಆಗಿ, ನನಗೆ ಗೊತ್ತಿರುವುದನ್ನು ಜನಕ್ಕೆ ಹೇಳುವುದು ನನ್ನ ಕರ್ತವ್ಯ ಅಂದುಕೊಂಡು ಹೋಗಿ ಪ್ರಚಾರ ಮಾಡಿದ್ದೇನೆ. ಈ ಪ್ರಚಾರಕ್ಕೆ ತಕ್ಕ ಪ್ರತಿಫಲ ಸಿಗುತ್ತೆ ಅನ್ನುವ ವಿಶ್ವಾಸವಿದೆ. ಅಲ್ಲದೇ ಚಿಕ್ಕಪ್ಪ ಗೆದ್ದೇ ಗೆಲ್ತಾರೆ ಎಂಬ ಆತ್ಮವಿಶ್ವಾಸ ಕುಟುಂಬಕ್ಕಿದೆ ಎಂದರು.

    ಮತದಾನ ಮಾಡುವುದು ಹಕ್ಕು ಮಾತ್ರವಲ್ಲ ನಮ್ಮ ಜವಾಬ್ದಾರಿ ಕೂಡ ಆಗಿದೆ. ಹೀಗಾಗಿ ದಯವಿಟ್ಟು ಬಂದು ನಿಮ್ಮ ಜವಾಬ್ದಾರಿಯನ್ನು ಪೂರೈಸಿ. ಯಾಕೆಂದರೆ ಇವತ್ತು ನೀವು ಜವಾಬ್ದಾರಿಯಿಂದ ಮತ ಹಾಕಿದ್ರೆ ಮಾತ್ರ ನಾಳೆ ನಿಮಗೆ ಹಕ್ಕು ಸಿಗುವುದು. ಮುಂದೆ ಏನದ್ರೂ ತೊಂದರೆ ಆದ್ರೆ ನಿಮಗೆ ಪ್ರಶ್ನೆ ಮಾಡುವ ಹಕ್ಕಿದೆ. ದಯವಿಟ್ಟು ಬಂದು ನಿಮ್ಮ ಮತ ಚಲಾಯಿಸಿ. ನಿಮಗೆ ಯಾರು ಸರಿ ಅನಿಸ್ತಾರೋ ಅವರಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಎಂದರು.

  • ರಾಜ್ಯದಲ್ಲಿ ಜೋಡೆತ್ತು ಸರ್ಕಾರಕ್ಕೆ ಕ್ಷಣಗಣನೆ- ಜನರ ಮನಗೆಲ್ಲಲು ಮಾಸ್ಟರ್ ಪ್ಲಾನ್

    ರಾಜ್ಯದಲ್ಲಿ ಜೋಡೆತ್ತು ಸರ್ಕಾರಕ್ಕೆ ಕ್ಷಣಗಣನೆ- ಜನರ ಮನಗೆಲ್ಲಲು ಮಾಸ್ಟರ್ ಪ್ಲಾನ್

    ಬೆಂಗಳೂರು: ರಾಜ್ಯದಲ್ಲಿ ಜೋಡೆತ್ತು ಸರ್ಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಕ್ಯಾಬಿನೆಟ್‍ (Cabinet) ನಲ್ಲೇ ಬಂಪರ್ ಗಿಫ್ಟ್ ಘೋಷಣೆಯಾಗುವ ಸಾಧ್ಯತೆಗಳಿವೆ.

    ಹೌದು. ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿ ಜನರ ಮನಗೆಲ್ಲಲು ಕಾಂಗ್ರೆಸ್ (Congress) ಲೆಕ್ಕಾಚಾರ ಹಾಕಿದೆ. 5 ಗ್ಯಾರಂಟಿಗಳಿಗೆ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸುವ ಹಾಗೂ 5 ಭರವಸೆಗಳ ಜಾರಿಗೆ ಮೊದಲ ಕ್ಯಾಬಿನೆಟ್ ಸಾಕ್ಷಿಯಾಗುವ ಸಾಧ್ಯತೆ ಇದೆ.

    ಕಾಂಗ್ರೆಸ್‍ನ 5 ಪ್ರಮುಖ ಭರವಸೆಗಳೇನು..?
    1. ಗೃಹಿಣಿಯರಿಗೆ ತಿಂಗಳಿಗೆ 2,000 ರೂ.
    2. 200 ಯುನಿಟ್ ಉಚಿತ ವಿದ್ಯುತ್
    3. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
    4. ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ
    5. ನಿರುದ್ಯೋಗಿಗಳಿಗೆ ತಿಂಗಳಿಗೆ 3,000 ಹಾಗೂ 1,500 ನಿರುದ್ಯೋಗಿ ಭತ್ಯೆ

    ಇಂದು ಸಿಎಂ ಸಿದ್ದರಾಮಯ್ಯ (Siddramaiah) , ಡಿಸಿಎಂ ಡಿಕೆಶಿ (DK Shivakumar) ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರು 2ನೇ ಬಾರಿಗೆ ಗದ್ದುಗೆ ಏರಲಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಅದ್ಧೂರಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: 2,000 ರೂ. ಮುಖಬೆಲೆಯ ನೋಟ್ ಬ್ಯಾನ್ – ಕೇಂದ್ರ ಬಿಜೆಪಿ ವಿರುದ್ಧ ನಿಯೋಜಿತ ಸಿಎಂ ಸಿದ್ದರಾಮಯ್ಯ ಕಿಡಿ

    ಪ್ರಮಾಣ ವಚನಕ್ಕೆ ಕೆಂಪುಹಾಸಿನ ವೇದಿಕೆ, ಗಣ್ಯರಿಗೆ ವಿಶೇಷ ಚೇರ್ ವ್ಯವಸ್ಥೆ ಮಾಡಲಾಗಿದೆ. ವಿಐಪಿ, ವಿವಿಐಪಿಗಳಿಗೆ ಪ್ರತ್ಯೇಕ ಗೇಟ್, ಸಾರ್ವಜನಿಕರಿಗೆ ಮುಕ್ತ ಅವಕಾಶ (ಪಾಸ್ ವ್ಯವಸ್ಥೆ ಇರಲ್ಲ) ಹಾಗೂ ಕಾರ್ಯಕ್ರಮ ವೀಕ್ಷಣೆಗೆ ಎಲ್‍ಇಡಿ ಪರದೆ ಇರುತ್ತದೆ. ಸಮಾರಂಭದಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟೇಡಿಯಂಗೆ ಬಿಗಿ ಭಧ್ರತೆ ಒದಗಿಸಲಾಗಿದ್ದು, 1,500 ಪೊಲೀಸರ ನಿಯೋಜನೆ ಮಾಡಲಾಗಿದೆ.

  • ಇಂದು ಸಂಜೆಯೊಳಗೆ ಮುದ್ದಹನುಮೇ ಗೌಡ ಕಾಂಗ್ರೆಸ್‍ಗೆ ಗುಡ್‍ಬೈ

    ಇಂದು ಸಂಜೆಯೊಳಗೆ ಮುದ್ದಹನುಮೇ ಗೌಡ ಕಾಂಗ್ರೆಸ್‍ಗೆ ಗುಡ್‍ಬೈ

    ಬೆಂಗಳೂರು: ನಾನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಬಿಡುಗಡೆ ಮಾಡಿ ಎಂದು ಮನವಿ ಮಾಡಿ ಬಂದಿದ್ದೇನೆ. ಒಂದು ಪಕ್ಷ ಬಿಡಲು ಬಲವಾದ ಕಾರಣ, ಅದು ಪಕ್ಷದಿಂದ ಆಗಿರಬೇಕು ಇಲ್ಲವೇ ನನ್ನಿಂದ ಆಗಿರಬೇಕು. ಅದು ನನ್ನ ಕಡೆಯಿಂದ ಆದ್ರೆ ಪಕ್ಷ ಸ್ಪಷ್ಟವಾಗಿ ಹೇಳಬೇಕು ಎಂದು ಮಾಜಿ ಸಂಸದ ಮುದ್ದಹನುಮೆಗೌಡ ಕಿಡಿಕಾರಿದ್ದಾರೆ.

    ಸಿದ್ದರಾಮಯ್ಯ ಹಾಗೂ ಡಿಕೆಶಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ರಾಷ್ಟ್ರೀಯ ಪಕ್ಷ ಬಿಡಲು ಬಲವಾದ ಕಾರಣದಿಂದ ಇರಬೇಕು ತಾನೇ..? ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಮತ್ತು ಡಿಕೆಶಿ ಭೇಟಿ ಮಾಡಿ ನನ್ನ ಸ್ಪಷ್ಟ ನಿರ್ಧಾರ ತಿಳಿಸಿದ್ದೇನೆ. 1989ರಲ್ಲಿ ಕಾಂಗ್ರೆಸ್ ಬಿ ಫಾರಂ ಕೊಟ್ಟು ನಂತರ ಬೇರೆಯವರಿಗೆ ಕೊಟ್ಟಿದ್ರು. ಬಳಿಕ 2019ರಲ್ಲಿ ಸಂಸದ ಆಗಿದ್ದರೂ ನಿಲ್ಲಲು ಅವಕಾಶ ಕೊಡಲಿಲ್ಲ. ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದನ್ನು ತಪ್ಪಿಸಲಾಗಿದೆ. ಕಾಂಗ್ರೆಸ್ ಪಕ್ಷ ಶಾಸಕ, ಸಂಸದರಾಗಿ ಆಯ್ಕೆಯಾಗಲು ಅವಕಾಶ ಕೊಟ್ರು ಎಂದರು.

    ನಾನು ಅತ್ಯಂತ ಕ್ರೀಯಾಶೀಲನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷಕ್ಕೆ ನನ್ನದೇ ಆದ ಅಳಿಲು ಸೇವೆ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನನ್ನ ಸೇವೆಯೂ ಇದೆ. ನನ್ನ ಕ್ರಿಯಾಶೀಲ ರಾಜಕೀಯ ನಿಂತಿಲ್ಲ. ಪಕ್ಷಕ್ಕೆ ಕೂಡ ನನ್ನ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ. ನಾಲ್ಕು ಬಾರಿ ಸ್ಪರ್ಧೆಯಿಂದ ತಪ್ಪಿಸುವಂತಹ ಅನಿವಾರ್ಯ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಸೌದಿ ಮಹಿಳೆಗೆ 45 ವರ್ಷ ಜೈಲು ಶಿಕ್ಷೆ

    ನನ್ನ ರಾಜಕೀಯ ಜೀವನವನ್ನು ಯಾವ ರೀತಿ ಎದುರಿಸಿದೆ ಎಂದು ಜನರಿಗೆ ಗೊತ್ತಿದೆ. ಪಕ್ಷದಿಂದ ಬಿಡುಗಡೆ ಮಾಡಿ ಎಂದು ಕೇಳಿದ್ದೇನೆ. ಇಷ್ಟು ವರ್ಷಗಳ ನಡೆದ ರಾಜಕೀಯ ದೊರಣೆಗಳು ಇಂತಹ ಪರಿಸ್ಥಿತಿಗೆ ಕಾರಣ. ಇವತ್ತು ಈ ನಿರ್ಧಾರ ಮಾಡಿದ್ದೇನೆ, ಮುಂದೆ ಒಳ್ಳೆಯ ಅವಕಾಶಗಳು ಬರುತ್ತವೆ ಎಂದರು.

    ಸುರ್ಜೇವಾಲಾ ದೂರವಾಣಿ ಮೂಲಕ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಮಾತನಾಡಿದ್ರು. ಇತ್ತಿಚೆಗೆ ನನ್ನ ಜೊತೆ ಮಾತನಾಡಿಲ್ಲ. 2023ಕ್ಕೆ ನಾನು ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿ ಆಗುವುದು ಖಚಿತ. ನಾನು ಕಾಂಗ್ರೆಸ್ ನಿಂದ ದೂರ ಸರಿದಿದ್ದೇನೆ ಸಾಂಕೇತಿಕವಾಗಿ ಭೇಟಿ ಮಾಡಬೇಕಿತ್ತು. ಹೀಗಾಗಿ ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ನಿಂದ ದೂರ ಹೋಗಿದ್ದೇನೆ. ಇಂದು ಸಂಜೆ ಒಳಗೆ ಅಧಿಕೃತವಾಗಿ ರಾಜೀನಾಮೆ ಕೊಡ್ತೀನಿ ಎಂದು ಮುದ್ದಹನುಮೇಗೌಡ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಮಾನಮರ್ಯಾದೆ ಇಲ್ಲದ ಸರ್ಕಾರದ ವಿರುದ್ಧ ಜನರ ಧ್ವನಿಯಾಗಿ ಹೋರಾಟ: ಡಿ.ಕೆ ಶಿವಕುಮಾರ್

    ಮಾನಮರ್ಯಾದೆ ಇಲ್ಲದ ಸರ್ಕಾರದ ವಿರುದ್ಧ ಜನರ ಧ್ವನಿಯಾಗಿ ಹೋರಾಟ: ಡಿ.ಕೆ ಶಿವಕುಮಾರ್

    ಬೆಂಗಳೂರು: ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಹೀಗಾಗಿ ಜನರ ಧ್ವನಿಯಾಗಿ ಈ ಹೋರಾಟ ನಡೆಸುತ್ತಿದ್ದೇವೆ ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಟಾಂಗಾ ಜಾಥಾ ನಡೆಸುತ್ತಿದ್ದ ವೇಲೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಿಕೆಶಿ, ಜನರ ಗಮನ ಸೆಳೆಯಲು ಈ ಹೋರಾಟ ನಡೆಸುತ್ತಿದ್ದೇವೆ. ಪ್ರತಿ ಗ್ರಾಮ, ವಾರ್ಡ್ ಗಳಲ್ಲಿ ಹೋರಾಟ ರೂಪಿಸ್ತೀವಿ. ಮಾನಮರ್ಯಾದೆ ಇಲ್ಲದ ಸರ್ಕಾರ ಇದಾಗಿದ್ದು, ಜನರ ಧ್ವನಿಯಾಗಿ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.  ಇದನ್ನೂ ಓದಿ:  ಸೆ.27ರ ಭಾರತ್ ಬಂದ್‍ಗೆ ಪಾಪ್ಯುಲರ್ ಫ್ರಂಟ್‍ನಿಂದ ಸಂಪೂರ್ಣ ಬೆಂಬಲ

    ಎಲ್ಲಾ ಬೆಲೆಗಳು ಗಗನಕ್ಕೆ ಏರಿದೆ. ಸಾಮಾನ್ಯ ಜನ ಮನೆ ಕಟ್ಟಲು ಆಗುತ್ತಿಲ್ಲ. ಜನರ ಪಿಕ್ ಪಾಕೆಟ್ ಮಾಡುತ್ತಿದೆ. ಸರ್ಕಾರಕ್ಕೆ ಕಣ್ಣು ಇಲ್ಲ ಕಿವಿನೂ ಇಲ್ಲ. ಜನರ ಧ್ವನಿಯಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಅಕ್ಟೋಬರ್ ನಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತೇವೆ. ಜನರೇ ಈ ಸರ್ಕಾರ ಕಿತ್ತೊಗೆಯಬೇಕು. ರೈತರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ. ನಮ್ಮ ಹೋರಾಟ ಮುಂದುವರೆಯುತ್ತೆ ಎಂದು ಡಿಕೆಶಿ ಹೇಳಿದರು.

    ಎತ್ತಿನ ಬಂಡಿ ಆಯ್ತು, ಸೈಕಲ್ ಸವಾರಿ ಆಯ್ತು ಈಗ ಟಾಂಗಾ ಜಾಥಾ. ಇದು ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಇಂದು ಹಮ್ಮಿಕೊಂಡಿರುವ ವಿಭಿನ್ನ ಪ್ರತಿಭಟನೆ. ಕೇಂದ್ರ ಸರ್ಕಾರದ ನಿರಂತರ ಇಂಧನ ಬೆಲೆ ಹಾಗೂ ದಿನಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಇಂದು ಟಾಂಗಾ ಜಾಥಾ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೂಲೆಗುಂಪಾಗಿರೋ ಕಾಂಗ್ರೆಸ್ ಟಾಂಗಾ, ಸೈಕಲ್ ಓಡಿಸೋದಕ್ಕೆ ಮಾತ್ರ ಸೀಮಿತ: ಆರ್. ಅಶೋಕ್

    ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧಕ್ಕೆ ಟಾಂಗಾ ಗಾಡಿಯಲ್ಲಿ ಹೋಗುವ ಮೂಲಕ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರುಗಳು ಜಾಥಾದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಹೇರ್ ಕಟ್ ಎಡವಟ್ಟು-ಮಾಡೆಲ್‍ಗೆ 2ಕೋಟಿ ಪರಿಹಾರ ನೀಡುವಂತೆ ಆದೇಶ

  • ಕಾಂಗ್ರೆಸ್ಸಲ್ಲಿ ಸಮನ್ವಯ ಸಮಿತಿ ಸಾಧ್ಯತೆ – ಇತ್ತ ಸಿದ್ದರಾಮಯ್ಯ ಫೋಟೋ ಕಿತ್ತಾಕಿದ್ರು ಡಿಕೆಶಿ

    ಕಾಂಗ್ರೆಸ್ಸಲ್ಲಿ ಸಮನ್ವಯ ಸಮಿತಿ ಸಾಧ್ಯತೆ – ಇತ್ತ ಸಿದ್ದರಾಮಯ್ಯ ಫೋಟೋ ಕಿತ್ತಾಕಿದ್ರು ಡಿಕೆಶಿ

    ಬೆಂಗಳೂರು: ರಾಜ್ಯ ಕಾಂಗ್ರೆಸ್‍ನಲ್ಲಿ ‘ಮುಂದಿನ ಸಿಎಂ’ ಕುರ್ಚಿ ಕದನಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ನಾಯಕರ ಕಚ್ಚಾಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್, ಆಗಸ್ಟ್ ನಲ್ಲಿ ಸಮನ್ವಯ ಸಮಿತಿ ರಚಿಸಲು ತೀರ್ಮಾನಿಸಿದೆ.

    ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸೇರಿದಂತೆ 6 ರಿಂದ 7 ಜನ ಸಮಿತಿಯಲ್ಲಿ ಇರಲಿದ್ದಾರೆ. ಮೂಲ ಕಾಂಗ್ರೆಸ್‍ನ ಕೆಲ ಹಿರಿಯ ನಾಯಕರಿಗೆ ಸಮನ್ವಯ ಸಮಿತಿಯಲ್ಲಿ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಏನೇ ತೀರ್ಮಾನ ಕೈಗೊಳ್ಳುವುದಿದ್ದರೂ ಸಮನ್ವಯ ಸಮಿತಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಇಂಥದ್ದೊಂದು ಮೇಜರ್ ಸರ್ಜರಿಗೆ ಹೈಕಮಾಂಡ್ ಮುಂದಾಗಿದೆ.

    ಸಿದ್ದರಾಮಯ್ಯಗೆ ಡಿಕೆಶಿ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಕಾಂಗ್ರೆಸ್ ಪ್ರಚಾರದ ಕಾರಿನಲ್ಲಿದ್ದ ಸಿದ್ದರಾಮಯ್ಯರ ಫೋಟೊವನ್ನು ಡಿಕೆಶಿ ತೆಗೆಸಿದ್ದಾರೆ. ಡಿಕೆಶಿ ನಿವಾಸದಲ್ಲಿರುವ ಪ್ರಚಾರದ ಕಾರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ರಾಹುಲ್ ಗಾಂಧಿ, ಸಿದ್ದರಾಮಯ್ಯರ ಫೋಟೋ ಇತ್ತು. ಈ ಮೂಲಕ ಡಿಕೆ ಬ್ರದರ್ಸ್ ಸಿದ್ದರಾಮಯ್ಯ ವಿರುದ್ಧ ನೇರ ಸಮರಕ್ಕೆ ನಿಂತ್ರಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದನ್ನೂ ಓದಿ: ಅಮೆರಿಕದ ಮಡೆರ್ನಾ ಬಳಕೆಗೆ ಕೇಂದ್ರ ಅನುಮತಿ

    ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ನಮ್ಮಲ್ಲಿ ಯಾವುದೇ ಬಣಗಳಿಲ್ಲ, ಜಗಳಗಳಿಲ್ಲ. ಪಕ್ಷದ ಆಂತರಿಕ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೇವೆ ಅಂದಿದ್ದಾರೆ. ಈ ಮಧ್ಯೆ ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಹಾಗೂ ನಲ್‍ಪಾಡ್ ಮಧ್ಯೆ ಡಿಕೆಶಿ ಸಂಧಾನ ಯತ್ನ ನಡೆಸಿದ್ದಾರೆ.

  • ಸಂತೋಷ್ ಟಾಂಗ್‍ಗೆ ರೆಸ್ಟ್ ತಗೊಳೋಣ ಅಂದ್ರು ಡಿಕೆಶಿ

    ಸಂತೋಷ್ ಟಾಂಗ್‍ಗೆ ರೆಸ್ಟ್ ತಗೊಳೋಣ ಅಂದ್ರು ಡಿಕೆಶಿ

    ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಹೇಳಿದಂತೆ ರೆಸ್ಟ್ ತೆಗೆದುಕೊಳ್ಳೋಣ ಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ರೆಸ್ಟ್ ತೆಗೆದುಕೊಳ್ಳಲು ಡಿಕೆಶಿ ಆಸ್ಪತ್ರೆ ಸೇರಿಕೊಳ್ಳಲಿ ಎಂಬ ಸಂತೋಷ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂತೋಷ್ ಯಾಕೆ ಆತ್ಮಹತ್ಯೆಗೆ ಯತ್ನ ಮಾಡಿಕೊಂಡರು ಎಂದು ಅವರ ಧರ್ಮ ಪತ್ನಿ ಹೇಳಿದ್ದಾರೆ. ತನಿಖೆ ಮಾಡಬೇಕೋ ಬೇಡವೋ ಎಂದು ಪ್ರಶ್ನಿಸಿದರು.

    ಪಕ್ಷದ ಆಂತರಿಕ ವಿಚಾರ ಮುಚ್ಚಿಕೊಳ್ಳಲು ಏನು ಬೇಕಾದರೂ ಅವರ ಕೈಯಲ್ಲಿ ಹೇಳಿಸಿಕೊಳ್ಳಲಿ. ಅವರು ಕೇವಲ ಪಿಎ ಅಲ್ಲಾ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ. ಆಯ್ತು ಅವರು ಹೇಳಿದಂತೆ ರೆಸ್ಟ್ ತೆಗೆದುಕೊಳ್ಳೋಣ ಬಿಡಿ ಎಂದು ಡಿಕೆಶಿ ತಿಳಿಸಿದರು. ಇದನ್ನೂ ಓದಿ: ರೆಸ್ಟ್‌ಗಾಗಿ ಆಸ್ಪತ್ರೆ ಸೇರಿಕೊಳ್ಳಲಿ: ಡಿಕೆಶಿಗೆ ಸಂತೋಷ್ ಟಾಂಗ್

    ಸಂತೋಷ್ ಹೆಳಿದ್ದೇನು..?
    ಡಿಕೆಶಿ ಸೋತಿದಕ್ಕೆ ಈ ರೀತಿಯ ಹೇಳಿಕೆ ಕೊಡ್ತಾ ಇದ್ದಾರೆ. ಇದು ಮೊದಲ ಬಾರಿಗೆ ಈ ಆರೋಪ ಅಲ್ಲ. ತನಿಖಾ ಸಂಸ್ಥೆ ದಾಳಿ ಮಾಡಿದಾಗಲೂ ಇದೇ ರೀತಿ ಆರೋಪ ಮಾಡುತ್ತಾರೆ. ಡಿಕೆಶಿ ಅವರಿಗೆ ರೆಸ್ಟ್ ಕೊಟ್ಟು ಒಂದು ತಿಂಗಳು ಆಸ್ಪತ್ರೆಗೆ ಸೇರಿಕೊಳ್ಳಲಿ ಎಂದು ಸಂತೋಷ್ ವಾಗ್ದಾಳಿ ನಡೆಸಿದರು. ನಿದ್ರೆ ಬರದೆ ಇದ್ದಾಗ ಮಾತ್ರೆ ತೆಗೆದುಕೊಳ್ಳುತ್ತಾ ಇದ್ದೆ. ಈ ಮಾತ್ರೆಯಲ್ಲಿ ಬದಲಾವಣೆ ಆಗಿದ್ದರಿಂದ ಈ ರೀತಿ ಆಗೋಯ್ತು ಎಂದು ಸಂತೋಷ್ ಸ್ಪಷ್ಟಪಡಿಸಿದರು. ಇನ್ನು ಬಿಎಸ್‍ವೈ ಅವರ ಬಗ್ಗೆ ಮಾತನಾಡಬೇಡಿ. ನಾನು ಗಟ್ಟಿಯಾಗಿದ್ದೀನಿ ನನಗೆ ಯಾವುದೇ ತೊಂದರೆ ಆಗಿಲ್ಲ. ನಾನು ಮಾನಸಿಕವಾಗಿ ದೃಢವಾಗಿ ಇದ್ದೀನಿ. ಇನ್ನೆರಡು ದಿನ ಬಿಟ್ಟು ಯಡಿಯೂರಪ್ಪ ಅವರನ್ನು ಭೇಟಿ ಮಾಡ್ತೀನಿ ಎಂದರು. ಇದನ್ನೂ ಓದಿ: ಮಿಸ್‌ ಆಗಿ ನಿದ್ದೆ ಮಾತ್ರೆ ತೆಗೆದುಕೊಂಡಿದ್ದೆ: ಎನ್‌.ಆರ್‌. ಸಂತೋಷ್‌

    ಡಿಕೆಶಿ ಹೇಳಿದ್ದೇನು?:
    ಇತ್ತ ಕಾರವಾರದಲ್ಲಿ ಈ ವಿಚಾರವಾಗಿ ಮಾತನಾಡಿದ್ದ ಡಿಕೆಶಿ, ಸಂತೋಷ್‍ರವರು ಯಾವುದೋ ವೀಡಿಯೋ ಮಾಡಿ ಎಂಎಲ್‍ಸಿಗೆ ಮತ್ತು ಮಿನಿಸ್ಟರ್ ಕೈಗೆ ಕೊಟ್ಟಿದ್ದಾರೆ. ಅದನ್ನು ಮಿನಿಸ್ಟರ್ ಮತ್ತು ಎಂಎಲ್‍ಸಿಗೆ ಸೇರಿ ದೆಹಲಿ ನಾಯಕರಿಗೆ ತಲುಪಿಸಿದ್ದಾರೆ ಎನ್ನುವುದು ಮಾಹಿತಿ ಇದೆ. ದೆಹಲಿ ನಾಯಕರಿಗೆ 2-3 ದಿನದ ಹಿಂದೆ ಅವರ ಪರ್ಸನಲ್ ವೀಡಿಯೋ ತೋರಿಸಿದ್ದಾರೆ. ಹೀಗಾಗಿ ಬೇಸರದಿಂದ ಆತ್ಮಹತ್ಯೆಗೆ ಯತ್ನಿಸಿರಬಹುದು. ಈ ಬಗ್ಗೆ ಸರ್ಕಾರ ತನಿಖೆ ಮಾಡಿದರೆ ಅರ್ಥವಿಲ್ಲ. ಇದರಲ್ಲಿ ಗೌಪ್ಯ ವಿಚಾರ ಅಡಗಿದೆ. ಹೀಗಾಗಿ ಬೇರೆ ತನಿಖೆ ಆಗಬೇಕು. ಸತ್ಯಾಂಶ ಏನಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದರು.

    ಆಗಿದ್ದೇನು..?
    ನಿದ್ದೆ ಮಾತ್ರೆ ಸೇವಿಸಿ ಸಂತೋಷ್ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಯ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ಸಂಬಂಧ ಮಾತನಾಡಿದ್ದ ಸಂತೋಷ್ ಪತ್ನಿ ಜಾಹ್ನವಿ, ರಾಜಕೀಯ ಅಸಮತೋಲನದಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದರು. ಸದ್ಯ ಸಂತೋಷ್ ಆರೋಗ್ಯ ಸುಧಾರಿಸಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.  ಇದನ್ನೂ ಓದಿ: ಸಂತೋಷ್ ಪರ್ಸನಲ್ ವೀಡಿಯೋ ದೆಹಲಿ ತಲುಪಿರುವ ಮಾಹಿತಿ ಇತ್ತು: ಡಿಕೆಶಿ