Tag: DKS

  • ಪೆಟ್ರೋಲ್ ಬೆಲೆ ಶತಕ, ಲಸಿಕೆ ಮಂದಗತಿ, ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಡಿ.ಕೆ ಶಿವಕುಮಾರ್

    ಪೆಟ್ರೋಲ್ ಬೆಲೆ ಶತಕ, ಲಸಿಕೆ ಮಂದಗತಿ, ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಡಿ.ಕೆ ಶಿವಕುಮಾರ್

    ಬೆಂಗಳೂರು: ಜನವರಿಯಿಂದ ಪೆಟ್ರೋಲ್ ದರ 43 ಬಾರಿ ಏರಿಕೆಯಾಗಿದೆ. ಇದು ದೇಶದ ಆರ್ಥಿಕ ಮತ್ತು ಆಡಳಿತಾತ್ಮಕ ರಂಗಗಳಲ್ಲಿ ಸರ್ಕಾರದ ಅಸಮರ್ಥತೆಯನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಿಡಿಕಾರಿದರು.

    ರಾಮನಗರ ಜಿಲ್ಲೆಯ ಕೂಟಗಲ್ ಹೋಬಳಿಯ ಜಾಲಮಂಗಲ ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಡವರಿಗೆ ಆಹಾರ ಮತ್ತು ತರಕಾರಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು: ಇಂದು ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ₹100, ಅಡುಗೆ ಎಣ್ಣೆ ಬೆಲೆ ಲೀಟರ್ ₹220 ತಲುಪಿದೆ. ಲಸಿಕೆ ಅಭಿಯಾನ ಆರಂಭವಾಗಿ 5 ತಿಂಗಳಾದರೂ ಕೇವಲ 3.17% ಭಾರತೀಯರು ಮಾತ್ರ ಕೋವಿಡ್ ಲಸಿಕೆ ಪಡೆದಿದ್ದಾರೆ. ಇದು ಕೂಡ ಸರ್ಕಾರದ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ.

    ಜಾತಿ ಮತ್ತು ಧರ್ಮಗಳನ್ನು ಲೆಕ್ಕ ಹಾಕದೆ ಎಲ್ಲಾ ಜನರಿಗೆ ಕಾಂಗ್ರೆಸ್ ಉಚಿತ ಲಸಿಕೆ ನೀಡುತ್ತಿದೆ. ನಿನ್ನೆಯಷ್ಟೇ ನಾನು 3 ಲಕ್ಷ ಜನರಿಗೆ ಉಚಿತ ಲಸಿಕೆ ಹಾಕುವ ಅಭಿಯಾನವನ್ನು ದಾವಣಗೆರೆಯಲ್ಲಿ ಪ್ರಾರಂಭಿಸಿದೆ. ಆದರೆ ಮತ್ತೊಂದೆಡೆ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರತಿ ಲಸಿಕೆಗೆ ₹900 ದರ ನಿಗದಿ ಪಡಿಸಿದ್ದಾರೆ. ಇದು ಬಿಜೆಪಿ ಸರ್ಕಾರಕ್ಕಿರುವ ಸಾರ್ವಜನಿಕರ ಮೇಲಿನ ಉದಾಸೀನತೆಗೆ ಸಾಕ್ಷಿ.

    ಬಿಜೆಪಿ ಸರ್ಕಾರವು ಕಾಂಗ್ರೆಸ್ ನ ವ್ಯಾಕ್ಸಿನೇಷನ್ ಯೋಜನೆಗೆ ಅನುಮತಿ ನೀಡಿದರೆ, ಇಡೀ ರಾಜ್ಯಾದ್ಯಂತ ಉಚಿತ ಲಸಿಕೆ ಹಾಕುವ ₹100 ಕೋಟಿ ಯೋಜನೆ ಜಾರಿಗೆ ತಯಾರಿದ್ದೇವೆ ಎಂದರು. ಇದನ್ನೂ ಓದಿ: ದಿನಕ್ಕೆ ಕೋಟಿ ಜನರಿಗೆ ಕೋವಿಡ್‌ ಲಸಿಕೆ ಕೊಡಿ: ರಾಜ್ಯಪಾಲರಿಗೆ ಕೈ ನಾಯಕರ ಮನವಿ

    ಬೆಲೆ ಏರಿಕೆ ಬರೆ: ಕೇಂದ್ರದ ಬಿಜೆಪಿ ಸರ್ಕಾರ ಜನವರಿಯಲ್ಲಿ 10 ಬಾರಿ, ಫೆಬ್ರವರಿಯಲ್ಲಿ 16 ಬಾರಿ, ಮೇ ತಿಂಗಳಲ್ಲಿ 16 ಬಾರಿ ಮತ್ತು ಜೂನ್ ಮೊದಲ ವಾರದಲ್ಲಿ ಒಮ್ಮೆ ಪೆಟ್ರೋಲ್ ದರವನ್ನು ಹೆಚ್ಚಿಸಿದೆ. ಅದು ಜನಸಾಮಾನ್ಯರಿಗೆ ಪೆಟ್ರೋಲ್ ಕೈಗೆಟುಕದಂತೆ ಮಾಡಲು ನಿರ್ಧರಿಸಿದೆ. ನಾವೆಲ್ಲರೂ ಪೆಟ್ರೋಲ್ ಪಂಪ್‌ಗಳ ಮುಂದೆ ಪ್ರತಿಭಟನೆ ಮಾಡೋಣ ಎಂದು ಕರೆ ನೀಡಿದರು.

    ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಬಿಜೆಪಿ ಇಂಧನ ಬೆಲೆ ಹೆಚ್ಚಿಸಿಲ್ಲ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಹೆಚ್ಚಿನ ಸಮಯ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಚಿವ ಶಾಮನೂರ್ ಶಿವಶಂಕರಪ್ಪ ಅವರು ತಮ್ಮ ಕ್ಷೇತ್ರ ದಾವಣಗೆರೆಯಲ್ಲಿ ಶುಕ್ರವಾರ ಲಸಿಕೆ ಕಾರ್ಯಕ್ರಮ ಪ್ರಾರಂಭಿಸಿದರು. ವ್ಯಾಕ್ಸಿನೇಷನ್ ಡ್ರೈವ್ ಅನ್ನು ರಾಜ್ಯದ ಇತರ ಭಾಗಗಳಲ್ಲಿ ಜೂನ್ ತಿಂಗಳಲ್ಲಿ ವಿಸ್ತರಿಸಲು ಕಾಂಗ್ರೆಸ್ ಪಕ್ಷ ಯೋಜಿಸಿದೆ. 6.6 ಕೋಟಿ ಲಸಿಕೆಗಳನ್ನು ರಫ್ತು ಮಾಡುವ ಮೂಲಕ ಸರ್ಕಾರ ತನ್ನದೇ ಜನರ ಆರೋಗ್ಯ ಮತ್ತು ಜೀವನದೊಂದಿಗೆ ರಾಜಿ ಮಾಡಿಕೊಂಡಿದೆ ಮತ್ತು ಆ ಮೂಲಕ ದೇಶದಲ್ಲಿ ಮರಣ ಪ್ರಮಾಣವನ್ನು ಹೆಚ್ಚಿಸಿದೆ ಎಂದರು.

  • ಧರ್ಮಸ್ಥಳಕ್ಕೆ ಡಿಕೆಶಿ ಭೇಟಿ

    ಧರ್ಮಸ್ಥಳಕ್ಕೆ ಡಿಕೆಶಿ ಭೇಟಿ

    ಉಜಿರೆ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳವಾರ ರಾತ್ರಿ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು.

    ಇದೇ ವೇಳೆ ಅವರು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ವೀರೇಂದ್ರ ಹೆಗ್ಗಡೆ ಅವರು ಡಿಕೆ ಶಿವಕುಮಾರ್ ಅವರನ್ನು ಕ್ಷೇತ್ರದ ಪರವಾಗಿ ಗೌರವಿಸಿದರು. ಧರ್ಮಸ್ಥಳದ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ತಂಗಿದ್ದ ಅವರು ಬುಧವಾರ ಬೆಳಿಗ್ಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

  • ಬ್ಲೂಫಿಲಂನಲ್ಲಿರೋದು ನೀನೇ ಅಂತ ಪತ್ನಿಗೆ ಕಾಟ- ಪ್ರಶ್ನೆ ಮಾಡಿದ್ರೆ ದೊಡ್ಡವರು ಗೊತ್ತೆಂದು ಡಿಕೆಶಿ ಆಪ್ತನಿಂದ ಧಮ್ಕಿ!

    ಬ್ಲೂಫಿಲಂನಲ್ಲಿರೋದು ನೀನೇ ಅಂತ ಪತ್ನಿಗೆ ಕಾಟ- ಪ್ರಶ್ನೆ ಮಾಡಿದ್ರೆ ದೊಡ್ಡವರು ಗೊತ್ತೆಂದು ಡಿಕೆಶಿ ಆಪ್ತನಿಂದ ಧಮ್ಕಿ!

    ಬೆಂಗಳೂರು: ಬ್ಲೂಫಿಲಂ ನೋಡಿ ಪತ್ನಿಗೆ ನಿತ್ಯ ಟಾರ್ಚರ್ ಕೊಡುತ್ತಿದ್ದಾನೆಂದು ಇಂಧನ ಸಚಿವ ಡಿ ಕೆ ಶಿವಕುಮಾರ್ ಆಪ್ತನ ಮೇಲೆ ಆರೋಪ ಕೇಳಿ ಬಂದಿದೆ.

    ಚನ್ನಪಟ್ಟಣದಲ್ಲಿ ಡಿಕೆಶಿ ಜೊತೆ ಗುರುತಿಸಿಕೊಂಡಿರುವ ಕಾಂತರಾಜ್, 30 ವರ್ಷಗಳ ಹಿಂದೆ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ. ಪತ್ನಿ ಬೇರೆ ಜಾತಿ ಎಂದು ಮನೆಯವರು ವಿರೋಧಿಸಿದ್ದರಿಂದ ಮತ್ತೊಂದು ಮದುವೆ ಮಾಡಿಸಿಕೊಂಡಿದ್ದಾನೆ.

    ಕಾಂತರಾಜ್ ಮೊದಲ ಪತ್ನಿಯನ್ನು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಪ್ಪನ ಪಾಳ್ಯದಲ್ಲಿ ಇರಿಸಿದ್ದನು. ಇತ್ತ ಇತ್ತೀಚಿಗೆ ಮಂಡ್ಯದಲ್ಲಿ ಬೇರೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ಆ ಬಳಿಕ ವಿನಾಕಾರಾಣ ಟಾರ್ಚರ್ ಕೊಡುತ್ತಿದ್ದಾರೆಂದು ಮೊದಲ ಪತ್ನಿ ಇದೀಗ ಆರೋಪಿಸಿದ್ದಾರೆ.

    ಅಷ್ಟೇ ಅಲ್ಲದೇ ಕಾಂತರಾಜ್ ಬ್ಲೂಫಿಲಂ ನೋಡಿ ನೀಲಿ ಚಿತ್ರದಲ್ಲಿರುವುದು ನೀನೇ ಎಂದು ನಿತ್ಯ ಟಾರ್ಚರ್ ನೀಡುತ್ತಿದ್ದಾನೆ. ಕಾಂತರಾಜ್ ಬೇರೋಬ್ಬಳನ್ನು ನೋಡಿ ನೀಲಿ ಚಿತ್ರದಲ್ಲಿರುವ ಮುಖ ನಿನ್ನ ಮುಖದ ಚಹರೆ ಒಂದೇ ರೀತಿ ಇದೆ ಎಂದು ಕಿರುಕುಳ ನೀಡುತ್ತಿದ್ದಾನೆ ಅಂತ ಅವರು ಆರೋಪಿಸಿದ್ದಾರೆ.

    ನೀನು ನೀಲಿ ಚಿತ್ರದ ದಂಧೆಗೆ ಇಳಿದ್ದಿದ್ದೀಯಾ. ನಿನ್ನ ಸಹವಾಸ ನನಗೆ ಬೇಡ ಎಂದು ಕಾಂತರಾಜ್ ಮೊದಲ ಪತ್ನಿಯನ್ನು ದೂರ ಮಾಡಲು ಮುಂದಾಗಿದ್ದಾನೆ. ಅಷ್ಟೇ ಅಲ್ಲದೇ ಆ ವಿಡಿಯೋವನ್ನು
    ಗೆಳೆಯರೆಲ್ಲರಿಗೂ ಕಳಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾನೆಂದು ಪತ್ನಿ ಆರೋಪಿಸಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪತಿ ಕಾಂತರಾಜು ವಿರುದ್ಧ ದೂರು ನೀಡಿದ್ದಾರೆ.

    ಕಾಂತರಾಜ್ ಎರಡು ಮದುವೆ ಸಾಲದೆಂದು ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದನು. ಮಂಡ್ಯದಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ಪತ್ನಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಸ್ತ್ರೀ ಲೋಲ ಕಾಂತರಾಜ್ ನಡೆ ಬಗ್ಗೆ ಪ್ರಶ್ನಿಸಿದ್ರೆ ಧಮ್ಕಿ ಹಾಕುತ್ತಾನೆ. ನನಗೆ ಸಿಎಂ ಹಾಗೂ ಡಿಕೆಶಿ ಗೊತ್ತು. ಅದೇನ್ ಮಾಡ್ಕೊಳ್ತಿ ಮಾಡ್ಕೋ ಎಂದು ಕಾಂತರಾಜ್ ಬೆದರಿಸುತ್ತಾನೆ ಅಂತ ಅವರು ದೂರಿನಲ್ಲಿ ತಿಳಿಸಿದ್ದಾರೆ.

    ಕಾಂತರಾಜ್ ಚನ್ನಪಟ್ಟಣದಲ್ಲಿ ಕಾಂಗ್ರೆಸ್‍ನ ಸ್ಥಳೀಯ ಮುಖಂಡನಾಗಿ ಗುರುತಿಸಿಕೊಂಡಿದ್ದು, ಸದ್ಯ ಪತಿಯ ನಡೆಯಿಂದ ಮೊದಲ ಪತ್ನಿ ಹಾಗೂ ಇಬ್ಬರು ಮಕ್ಕಳು ಕಂಗಾಲಾಗಿದ್ದಾರೆ.