Tag: dkd

  • ಸ್ಪಂದನಾ ಅಗಲಿಕೆಯ ಬಳಿಕ ‘ಡಿಕೆಡಿ’ಯಲ್ಲಿ ವಿಜಯ ರಾಘವೇಂದ್ರ

    ಸ್ಪಂದನಾ ಅಗಲಿಕೆಯ ಬಳಿಕ ‘ಡಿಕೆಡಿ’ಯಲ್ಲಿ ವಿಜಯ ರಾಘವೇಂದ್ರ

    ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ(Spandana) ಹಠಾತ್ ನಿಧನ ಬಳಿಕ ಮತ್ತೆ ಡಿಕೆಡಿ (Dkd) ಶೋಗೆ ಭಾಗಿಯಾಗಿದ್ದಾರೆ. ಪತ್ನಿ ಅಗಲಿಕೆಯ ನೋವಿನಲ್ಲೇ ಮತ್ತೆ ಕೆಲಸಗಳತ್ತ ಆ್ಯಕ್ಟಿವ್ ಆಗಿದ್ದಾರೆ.

    ಸಿನಿಮಾ-ಕಿರುತೆರೆ ಎರಡರಲ್ಲೂ ವಿಜಯ ಆ್ಯಕ್ಟಿವ್ ಆಗಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7 (Dance Karnataka Dance 7) ಮತ್ತೆ ಜಡ್ಜ್ (Judge) ಆಗಿ ಭಾಗವಹಿಸಿದ್ದಾರೆ. ಡಿಕೆಡಿಯಲ್ಲಿ ಶಿವರಾಜ್‌ಕುಮಾರ್(Shivarajkumar), ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯ ಜೊತೆ ವಿಜಯ ಕೂಡ ಜಡ್ಜ್ ಆಗಿ ಗಮನ ಸೆಳೆದಿದ್ದರು. ಇದನ್ನೂ ಓದಿ:ಸೋಶಿಯಲ್ ಮೀಡಿಯಾ ಜಗತ್ತಿಗೆ ಕಾಲಿಟ್ಟ ನಯನತಾರಾ

    ವಿಜಯ-ಸ್ಪಂದನಾ ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಮಾದುವೆಯಾಗಿದ್ದರು. ಈ ಜೋಡಿಗೆ ಪುತ್ರ ಶೌರ್ಯ ಜನಿಸಿದರು. ಕಳೆದ ತಿಂಗಳು ಕುಟುಂಬದ ಆಪ್ತರ ಜೊತೆ ಥೈಲ್ಯಾಂಡ್‌ಗೆ ಹೋಗಿದ್ದಾಗ, ಹಾರ್ಟ್ ಅಟ್ಯಾಕ್‌ನಿಂದ ವಿಜಯ ಪತ್ನಿ ನಿಧನರಾದರು. ಸ್ಪಂದನಾ ಅಗಲಿಕೆ ವಿಜಯ ಕುಟುಂಬಕ್ಕೆ ಶಾಕ್ ಕೊಟ್ಟಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಡಿಕೆಡಿ’ಯಲ್ಲಿ ಪ್ರಭುದೇವ- ಅನುಶ್ರೀ ಜೊತೆ ಹೆಜ್ಜೆ ಹಾಕಿದ ಡ್ಯಾನ್ಸ್‌ಕಿಂಗ್

    ‘ಡಿಕೆಡಿ’ಯಲ್ಲಿ ಪ್ರಭುದೇವ- ಅನುಶ್ರೀ ಜೊತೆ ಹೆಜ್ಜೆ ಹಾಕಿದ ಡ್ಯಾನ್ಸ್‌ಕಿಂಗ್

    ಪ್ರಭುದೇವ…ಕನ್ನಡದವರೇ ಆಗಿದ್ದರೂ ಕನ್ನಡಿಗರಿಗೆ ಬಲು ಅಪರೂಪ. ವಿಶ್ವಾದ್ಯಂತ ಹೆಸರು ಮಾಡಿರೋ ಡ್ಯಾನ್ಸ್‌ ಕಿಂಗ್ ಪ್ರಭುದೇವ (Prabhudeva) ಕೆಲ ತಿಂಗಳ ಹಿಂದೆ ವೀಕೇಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದಲ್ಲಿ ಜೀವನತೆರೆದಿಟ್ಟಿದ್ರು. ಇದೀಗ ಅದೇ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲೂ ಕಾಣಿಸ್ಕೊಂಡು ಮಕ್ಕಳ ಜೊತೆ ಡ್ಯಾನ್ಸ್ ಮಾಡಿದ್ದಾರೆ.

    ಭಾರತದ ಮೈಕಲ್ ಜಾಕ್ಸನ್…ಆಲ್‌ರೌಂಡರ್ ಪ್ರಭುದೇವ ಭಾರತೀಯ ಸಿನಿಮೋದ್ಯಮದ ಅದ್ಭುತ ಕಲಾವಿದ. ವಿಶ್ವವ್ಯಾಪಿ ಅಭಿಮಾನಿಗಳನ್ನ ಹೊಂದಿರೋ ಪ್ರಭುದೇವ ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಅತಿಥಿಯಾಗಿ ಆಗಮಿಸಿದ್ರು.

    ಡಾನ್ಸ್ ಕಿಂಗ್ ಆಗಮನದಿಂದ ಡಿಕೆಡಿ ವೇದಿಕೆಯಲ್ಲಿ ಅದ್ದೂರಿ ಕಳೆ ಬಂದಿತ್ತು…ಸ್ಪರ್ಧಿಗಳೆಲ್ಲಾ ಅವರ ಆರಾಧ್ಯದೈವ ಪ್ರಭುದೇವ ಮುಂದೆ ಡಾನ್ಸ್ ಪ್ರದರ್ಶನ ಮಾಡಿ ಖುಷಿಯಿಂದ ಕುಣಿದ್ರು. ಓರ್ವ ಸ್ಪರ್ಧಿಯಂತೂ ಪ್ರಭುದೇವ ಆಶೀರ್ವಾದ ಸದಾ ತನ್ನೊಂದಿಗೆ ಇರಲೆಂದು ಕಾಲಿನ ಅಚ್ಚನ್ನೇ ಪಡೆದ. ಮಕ್ಕಳ ನೃತ್ಯವೆಂದ್ರೆ ಯಾರಿಗ್ ತಾನೇ ಇಷ್ಟವಿಲ್ಲ…ಹಾಗೇನೇ ಪ್ರಭುದೇವಾಗೂ ಇಷ್ಟ…ತಮ್ಮೆದುರು ಕುಣಿದ ಮಕ್ಕಳ ನೃತ್ಯಕ್ಕೆ ಮನಸೋತು ತಾವೂ ವೇದಿಕೆಗೆ ಹೋಗಿ ಕುಣಿದ್ರು. ಹೊಸ ಹೊಸ ಸ್ಟೆಪ್‌ಗಳ ಸೃಷ್ಟಿಕರ್ತ ಪ್ರಭುದೇವ. ಎಷ್ಟೋ ಹಾಡುಗಳು ಇಂದಿಗೂ ಎವರ್‌ಗ್ರೀನ್, ಅದರಲ್ಲೊಂದು ಚಂದಾರೇ ಹಾಡು…ಇದೇ ಹಾಡಿಗೆ ಪ್ರಭು , ಆ್ಯಂಕರ್ ಅನುಶ್ರೀ (Anushee) ಜೊತೆ ಹೆಜ್ಜೆ ಹಾಕಿದ್ರು. ಇದನ್ನೂ ಓದಿ:ಪವನ್ ಒಡೆಯರ್ ನಿರ್ದೇಶನದ ಬಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

    ಶಿವಣ್ಣ (Shivanna) ಹಾಗೂ ಪ್ರಭುದೇವ ಬೆಸ್ಟ್ ಫ್ರೆಂಡ್ಸ್. ಡಿಕೆಡಿ ಜಡ್ಜ್ ಆಗಿರೋ ಶಿವರಾಜ್‌ಕುಮಾರ್ (Shivarajkumar) ಜೊತೆಯೂ ಪ್ರಭುದೇವ ಸ್ಟೆಪ್ ಹಾಕಿದ್ರು. ಡ್ಯಾನ್ಸ್‌ ಕಿಂಗ್ ಸಿಗ್ನೇಚರ್ ಸ್ಟೆಪ್‌ನ್ನ ಇಡೀ ವೇದಿಕೆ ಮಾಡಿ ಖುಷಿ ಪಡ್ತು. ಭಾರತದಲ್ಲಿ ಡ್ಯಾನ್ಸ್ ಕಿಂಗ್‌ಗಳ ಕಿಂಗ್ ಅಂದ್ರೆ ಪ್ರಭುದೇವ, ಇಂಥಹ ಪ್ರಭುದೇವ ಆಗಮನದಿಂದ ಡಿಕೆಡಿ ವೇದಿಕೆ ಇನ್ನಷ್ಟು ರಂಗೇರಿದೆ. ಬ್ಯುಸಿ ಶೆಡ್ಯೂಲ್‌ನಲ್ಲೂ ಕನ್ನಡದ ಮೇಲಿನ ಪ್ರೀತಿಯಿಂದ ಪ್ರಭುದೇವ ಆಗಮನ ಇಂಟ್ರೆಸ್ಟಿಂಗ್.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]