Tag: DK Shiv Kumar

  • ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ ರದ್ದು

    ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ ರದ್ದು

    ಬೆಂಗಳೂರು: ಕೋವಿಡ್‌ 19 ನಿರ್ಬಂಧ ಇದ್ದರೂ ಸರ್ಕಾರದ ನಿರ್ಧಾರಕ್ಕೆ ಸಡ್ಡು ಹೊಡೆದ ಆರಂಭಿಸಿದ್ದ ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್‌ ನಾಯಕರು ಕೊನೆಗೊಳಿಸಿದ್ದಾರೆ.

    ಸರ್ಕಾರದ ಆದೇಶ ಮತ್ತು ಹೈಕೋರ್ಟ್‌ ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ಇಂದು ರಾಮನಗರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಪಾದಯಾತ್ರೆಯನ್ನು ಕೊನೆಗೊಳಿಸುವ ಬಗ್ಗೆಯೇ ಹೆಚ್ಚಿನ ನಾಯಕರು ಒಲವು ವ್ಯಕ್ತಪಡಿಸಿದ್ದರಿಂದ ಇಂದಿಗೆ ಪಾದಯಾತ್ರೆ ಕೊನೆಯಾಗಿದೆ.  12 ದಿನಗಳ ಪಾದಯಾತ್ರೆಯನ್ನು 5 ದಿನಕ್ಕೆ ಮೊಟಕುಗೊಳಿಸಿದ್ದು, ಕೊರೊನಾ ಸೋಂಕು ಕಡಿಮೆಯಾದ ನಂತರ ರಾಮನಗರದಿಂದಲೇ ಮತ್ತೆ ಪಾದಯಾತ್ರೆಯನ್ನು ಪ್ರಾರಂಭಿಸಲು ನಾಯಕರು ನಿರ್ಧರಿಸಿದ್ದಾರೆ.

    ಸಭೆಯಲ್ಲಿ ಏನಾಯ್ತು?:
    ಹೇಗಿದ್ದರೂ ನ್ಯಾಯಾಲಯ ನಾಳೆ ಪಾದಯಾತ್ರೆ ರದ್ದು ಮಾಡುವ ಬಗ್ಗೆ ಸೂಚನೆ ನೀಡಲಿದೆ. ಆ ಕಾರಣಕ್ಕೆ ಸರ್ಕಾರ ಈಗ ನಿರ್ಬಂಧ ವಿಧಿಸಿದೆ. ನಾವು ಅದನ್ನು ಮೀರಿದರೆ ಕೋರ್ಟ್ ಅಸಮಾಧಾನ ಹೊರ ಹಾಕಿ ಕಟು ಪದಗಳಿಂದ ತರಾಟೆಗೆ ತೆಗೆದುಕೊಳ್ಳಬಹುದು.

    ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡು ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸಿತು ಎನ್ನಿಸಿಕೊಳ್ಳುವುದು ಒಂದು ರೀತಿಯ ಹಿನ್ನಡೆ ಆದಂತೆ. ಅದೇ ಸರ್ಕಾರ ಪಾದಯಾತ್ರೆ ಮೇಲೆ ನಿರ್ಬಂಧ ಹೇರಿದ ಕಾರಣಕ್ಕೆ ಪಾದಯಾತ್ರೆ ಕೊನೆಯಾದರೆ ಪಕ್ಷಕ್ಕೆ ಇದರಿಂದ ಲಾಭ. ನಮ್ಮ ನೀರಿನ ಹೋರಾಟಕ್ಕೆ ಬಿಜೆಪಿ ತಡೆ ಹಾಕಿತು ಎಂದು ಬಿಂಬಿಸಿದರೆ ಲಾಭ ಹೆಚ್ಚು. ಇದನ್ನೂ ಓದಿ: ನಿಮ್ದು ದುರ್ಯೋಧನನ ರೀತಿ ಕೆಟ್ಟ ಹಠ: ಸಿದ್ದು, ಡಿಕೆಶಿಗೆ ಅಶೋಕ್ ಗುದ್ದು

    ಇಂದೇ ಪಾದಯಾತ್ರೆಯನ್ನ ಕೊನೆಗೊಳಿಸಿ ಘೋಷಣೆ ಮಾಡೋಣ. ಕೊರೊನಾ ಕಡಿಮೆಯಾದ ನಂತರ ಇಲ್ಲಿಂದಲೇ ಪಾದಯಾತ್ರೆ ಮುಂದುವರಿಸೋಣ. ಈಗ ಪಾದಯಾತ್ರೆಯನ್ನು ಜನರ ಮತ್ತು ನಮ್ಮ ಆರೋಗ್ಯದ ದೃಷ್ಟಿಯಿಂದ ಕೈ ಬಿಡುವುದು ಸೂಕ್ತ ಎಂದು ಹಿರಿಯರ ಸಲಹೆ ನೀಡಿದ್ದರು. ಇದನ್ನೂ ಓದಿ: ಅನಿವಾರ್ಯತೆ ಬಂದ್ರೆ ಮೇಕೆದಾಟು ಪಾದಯಾತ್ರೆ ನಿಲ್ಲಿಸಿ: ಕೈ ಹೈಕಮಾಂಡ್‌ ಸೂಚನೆ

    ಪ್ರತಿಭಟನೆ ಮುಂದುವರಿಸಬೇಕೇ? ಬೇಡವೇ ಎಂಬುದರ ಬಗ್ಗೆ ಕಾಂಗ್ರೆಸ್‌ನಲ್ಲೇ ಗೊಂದಲ ಇತ್ತು. ಕೆಲ ನಾಯಕರು ಕೋವಿಡ್‌ ಇರುವ ಕಾರಣ ಸ್ಥಗಿತ ಮಾಡುವುದು ಉತ್ತಮ ಎಂದು ಸಲಹೆ ನೀಡಿದರೆ ಕೆಲ ನಾಯಕರು ಮುಂದುವರಿಸುವುದು ಉತ್ತಮ ಎಂದಿದ್ದರು.

    ರೈತರ ಹೋರಾಟದ ವಿಚಾರದಲ್ಲಿ ಪ್ರತಿಭಟಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹೀಗಾಗಿ ಈ ವಿಚಾರವನ್ನು ಕೋರ್ಟ್‌ನಲ್ಲಿ ಪ್ರಸ್ತಾಪ ಮಾಡಿ ಪ್ರತಿಭಟನೆಯನ್ನು ಮುಂದುವರಿಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

  • ಅಂದು ಡಿಕೆಶಿ ನೀನು ಸಭೆ ಮಾಡಬೇಡ, ಇಂದು ಇಬ್ಬರು ಸೇರಿ ಸಭೆ ಮಾಡೋಣ ಬಾ

    ಅಂದು ಡಿಕೆಶಿ ನೀನು ಸಭೆ ಮಾಡಬೇಡ, ಇಂದು ಇಬ್ಬರು ಸೇರಿ ಸಭೆ ಮಾಡೋಣ ಬಾ

    ಬೆಂಗಳೂರು: ಏ ಡಿಕೆ ನನ್ನ ಜಿಲ್ಲೆಯಲ್ಲಿ ನಾನಿಲ್ಲದಾಗ ಸಭೆ ಮಾಡಬೇಡ ಎಂದು ಹೇಳಿದ್ದ ಸಿದ್ದರಾಮಯ್ಯ ಈಗ ಡಿ.ಕೆ.ಶಿವಕುಮಾರ್ ಜೊತೆಗೂಡಿ ಮೇಕೆದಾಟು ಪಾದಯಾತ್ರೆ ಪೂರ್ವಭಾವಿ ಸಭೆ ನಡೆಸಲು ಮುಂದಾಗಿದ್ದಾರೆ.

    ಹೌದು. ಬೆಳಗಾವಿಯಲ್ಲಿ ಅದಿವೇಶನ ನಡೆಯುತ್ತಿದ್ದಾಗ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ವಾರ್ನ್ ಮಾಡಿ ಸಿದ್ದರಾಮಯ್ಯ ಸಭೆ ನಿಲ್ಲಿಸಿದ್ದರು. ಆದರೆ ಈಗ ಸಿದ್ದರಾಮಯ್ಯರಿಂದ ಭಾನುವಾರ ಹಾಗೂ ಸೋಮವಾರ ಮೇಕೆ ದಾಟು ಪಾದಯಾತ್ರೆ ಸಭೆ ನಡೆಯಲಿದೆ. ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ – ಕರ್ನಾಟಕದಿಂದ 1007.18 ಕೋಟಿ ರೂ. ಬಿಡುಗಡೆ

    ಭಾನುವಾರ ಚಾಮರಾಜನಗರದಲ್ಲಿ ಹಾಗೂ ಸೋಮವಾರ ಮೈಸೂರಿನಲ್ಲಿ ಮೇಕೆದಾಟು ಸಂಬಂಧ ಸಭೆ ನಡೆಸಲಿರುವ ಸಿದ್ದರಾಮಯ್ಯ ಜೊತೆಗೆ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದರೆ.

    ಬೆಳಗಾವಿ ಅದಿವೇಶನದ ಸಂದರ್ಭದಲ್ಲಿ ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ನಾಯಕರ ಸಭೆ ನಡೆಸಲು ಡಿಕೆಶಿ ಮುಂದಾಗಿದ್ದರು. ನಾನಿಲ್ಲದಾಗ ನನ್ನ ಜಿಲ್ಲೆಯಲ್ಲಿ ಸಭೆ ನಡೆಸಬಾರದು ಎಂದು ಸುವರ್ಣ ಸೌಧದ ಲಾಂಜ್‍ನಲ್ಲೇ ಡಿಕೆಶಿಗೆ ಸಿದ್ದರಾಮಯ್ಯ ವಾರ್ನ್ ಮಾಡಿದ್ದರು. ಸಿದ್ದರಾಮಯ್ಯ ಮಾತಿಗೆ ಸಭೆ ನಡೆಸದೇ ಡಿಕೆಶಿ ಸೈಲೆಂಟಾಗಿದ್ದರು. ಇದನ್ನೂ ಓದಿ: ಸಚಿವರಲ್ಲಿ ಯಾರು ಪಾಸ್? ಫೇಲ್?: ಎಕ್ಸಾಂ ನಡೆಸಲು ಬರ್ತಾರಂತೆ ಅಮಿತ್ ಶಾ

  • ಮಾಜಿ ಸಿಎಂ ಎಚ್‌ಡಿಕೆ ಒಳ್ಳೆಯ ನಾಯಕ ಹಾಗೂ ಸಾಹಿತಿ: ಡಿಕೆಶಿ ವ್ಯಂಗ್ಯ

    ಮಾಜಿ ಸಿಎಂ ಎಚ್‌ಡಿಕೆ ಒಳ್ಳೆಯ ನಾಯಕ ಹಾಗೂ ಸಾಹಿತಿ: ಡಿಕೆಶಿ ವ್ಯಂಗ್ಯ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಳ್ಳೆ ನಾಯಕರು, ಹಿರಿಯರು ಹಾಗೂ ಒಳ್ಳೆಯ ಸಾಹಿತಿಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೊಡ್ಡ ರಾಜಕೀಯ ಕುಟುಂಬದ ಹಿನ್ನೆಲೆಯಿದೆ. ಅವರು ಹೋರಾಟ ಮಾಡಿಕೊಂಡೇ ಬಂದಿದ್ದಾರೆ. ಸಾಹಿತ್ಯ, ನಿರ್ದೇಶನ, ನಿರ್ಮಾಣ ಎಲ್ಲವೂ ಚೆನ್ನಾಗಿದೆ. ಮೋದಿ ಅವರಿಂದ ಪಂಚೆ ಉಡುವುದನ್ನು ಕಲಿತಿದ್ದೇನೆ ಎಂದಿದ್ದಾರೆ. ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ಕೊಡಬೇಕು, ಕೊಡುತ್ತಿದ್ದೇನೆ ಎಂದು ಟೀಕಿಸಿದರು.

    ಮೇಕೆದಾಟು ಕುರಿತು ಟ್ವೀಟ್ ಮಾಡಿರುವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದ ಅವರು, ಎಚ್‌ಡಿಕೆ ಏನೇನು ಹೇಳುತ್ತಾರೋ ಹೇಳಲಿ. ನಾನು ಬಂಡೆ, ಮಣ್ಣು, ಕಬ್ಬಿಣ, ನೀರು, ಎಲ್ಲಾ ನುಂಗಿದ್ದೇನೆ. ಇವೆಲ್ಲಾ ಹಳೆಯ ವಿಷಯಗಳಾಗಿವೆ. ಎಚ್‌ಡಿಕೆ ದೆಹಲಿಗೆ ಹೋಗಿ ಏನು ಮಾಡಿ ಬಂದರು ಎನ್ನುವುದು ನನಗೆ ಗೊತ್ತು. ನನ್ನ ವಿರುದ್ಧ ದೆಹಲಿಯಲ್ಲಿ ಎರಡೂ ಪಕ್ಷಗಳು ಷಡ್ಯಂತ್ರ ರೂಪಿಸಿವೆ ಎನ್ನುವುದು ನನಗೆ ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನೀರಿನ ಮುಂದೆ ʼಕಪಟ ನಾಟಕʼ ಮಾಡುವ ಸಿದ್ದಹಸ್ತ, ಕಲ್ಲುಬಂಡೆಗಳನ್ನೇ ನುಂಗಿದ ʼರಕ್ಕಸ ರಾಜಕಾರಣ’

    ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ಕೈಗೊಂಡಿರುವ ಹೋರಾಟ ಪಕ್ಷಾತೀತ. ಇದನ್ನು ಟೀಕೆ ಮಾಡುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರೂ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದಿದ್ದಾರೆ ಕೆಪಿಸಿಸಿ ಅಧ್ಯಕ್ಷರು. ಅವರು ನನ್ನನ್ನೂ ಸೇರಿಸಿ 83 ತಾಲೂಕುಗಳ ಜನರಿಗೆ ಮೇಕೆದಾಟು ಮಕ್ಮಲ್ ಟೋಪಿ ಹಾಕಲು ಹೊರಟಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಕರ್ನಾಟಕ ಬಂದ್ ದಿನಾಂಕ ಮುಂದೂಡಲು ವಾಟಾಳ್ ನಾಗರಾಜ್‌ಗೆ ಕರವೇ ಪತ್ರ

  • ಡಿಕೆಶಿ ಅಕ್ರಮ ಆಸ್ತಿ ಗಳಿಸಿದ್ದಾರೆಂದು ಒಪ್ಪಿಕೊಂಡಿದ್ದಾರೆ: ಸಿಟಿ ರವಿ

    ಡಿಕೆಶಿ ಅಕ್ರಮ ಆಸ್ತಿ ಗಳಿಸಿದ್ದಾರೆಂದು ಒಪ್ಪಿಕೊಂಡಿದ್ದಾರೆ: ಸಿಟಿ ರವಿ

    ಬೆಂಗಳೂರು: ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್‌ನಲ್ಲಿ ಅಕ್ರಮ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಟಾಂಗ್ ನೀಡಿದರು.

    ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯ ಎಸ್ ಸಿ ಮೋರ್ಚಾಗಳ ಪದಾಧಿಕಾರಿಗಳ ಜೊತೆ ಸಂವಾದ ಸಭೆ ನಡೆಸಿದ ಅವರು, ಡಿಕೆಶಿ ಜೈಲಿಗೆ ಹೋಗಿದ್ದು ಬಿಜೆಪಿಗೆ ಬಂದಿಲ್ಲ ಎಂದಲ್ಲ. ಬದಲಿಗೆ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಚಾರ್ಜ್ ಶೀಟ್, ಎಫ್‌ಐಆರ್ ಹಾಕಲಾಗಿದೆ. ಇದರಿಂದಾಗಿ ಜೈಲಿಗೆ ಹೋಗಿದ್ದಾರೆ ಎಂದು ಡಿಕೆಶಿಗೆ ತಿರುಗೇಟು ನೀಡಿದರು.

    ಕೇಸ್‌ನಿಂದ ಬಚಾವಾಗುವ ಅವಕಾಶ ಇದ್ದಿದ್ದರೆ ಡಿಕೆಶಿ ಮೊದಲೇ ಬಂದು ಬಿಜೆಪಿಗೆ ಸೇರುತ್ತಿದ್ದರು. ಆದರೆ ಕಾಂಗ್ರೆಸ್‌ನಲ್ಲಿ ಅಂತರ್ಯುದ್ಧ ನಡೆಯತ್ತಿದೆ. ಆಂತರಿಕ ಗೊಂದಲದಿಂದ ಪಾರಾಗಲು, ಕೇಸ್ ಮರೆ ಮಾಚಲು ಇಂತಹ ಹೇಳಿಕೆಯನ್ನು ನೀಡಿದ್ದಾರೆ ಎಂದರು. ಇದನ್ನೂ ಓದಿ: ಬಿಜೆಪಿಗೆ ಸೇರಿಲ್ಲ ಅಂತ ನನ್ನ ತಿಹಾರ್ ಜೈಲಿಗೆ ಕಳುಹಿಸಿದ್ರು: ಡಿ.ಕೆ ಶಿವಕುಮಾರ್

    ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುತ್ತದೆ. ಬಿಜೆಪಿಗೆ ಕಾಂಗ್ರೆಸ್ ಏಳು ದಶಕಗಳಿಂದಲೂ ವಿರೋಧ ಪಕ್ಷವಾಗಿದೆ. ಇದರಿಂದಾಗಿ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡುವುದರ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತನಾಡಿದ್ದಾರೆ. ಜೆಡಿಎಸ್ ಬೆಂಬಲ ಬಗ್ಗೆ ನಾನು ಮಾತಾಡಲ್ಲ. ರಾಜಕೀಯದಲ್ಲಿ ಶತ್ರುಗಳು ಅಂತ ಯಾರೂ ಇಲ್ಲ. ಆದರೆ ರಾಜಕೀಯ ವಿರೋಧಿಗಳು ಇದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಚಿಕಿತ್ಸೆ ನೆಪದಲ್ಲಿ ರೋಗಿಗೆ ಲೈಂಗಿಕ ಕಿರುಕುಳ – ಸರ್ಕಾರಿ ವೈದ್ಯನ ಅಮಾನತು

    ಬದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಕಾಂಗ್ರೆಸ್‌ನ ಮಾಜಿ ಸಚಿವ ಬಿಬಿ ಚಿಮ್ಮನಕಟ್ಟಿಯಿಂದಲೇ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಸಿದ್ದರಾಮಯ್ಯರನ್ನು ಪ್ರಶ್ನಾತೀತ ನಾಯಕರೆಂದು ಕರೆಯಲಾಗುತ್ತಿತ್ತು. ಅಷ್ಟೇ ಅಲ್ಲದೇ ಭವಿಷ್ಯದ ಪಿಎಂ ಎನ್ನಲಾಗುತ್ತಿತ್ತು. ಆದರೆ ಈಗ ಎಂಥ ದುರವಸ್ಥೆ ಬಂದಿದೆ ಎಂದರೆ ಸಿದ್ದರಾಮಯ್ಯಗೆ ಸರಿಯಾದ ನೆಲೆ ದೊರೆಯುತ್ತಿಲ್ಲ. ಕಾಂಗ್ರೆಸ್‌ನಲ್ಲಿ ದೊಡ್ಡ ವರ್ಗ ಸಿದ್ದರಾಮಯ್ಯ ವಿರುದ್ಧ ಕುದಿಯುತ್ತಿದೆ. ಸಿದ್ದರಾಮಯ್ಯಗೆ ಈ ಸ್ಥಿತಿ ಬರಬಾರದಾಗಿತ್ತು ಎಂದು ಹೇಳಿದ ಸಿಟಿ ರವಿ ಸಿದ್ದರಾಮಯ್ಯರ ಕಾಲೆಳೆದರು. ಇದನ್ನೂ ಓದಿ: ಚಿಕಿತ್ಸೆ ನೆಪದಲ್ಲಿ ರೋಗಿಗೆ ಲೈಂಗಿಕ ಕಿರುಕುಳ – ಸರ್ಕಾರಿ ವೈದ್ಯನ ಅಮಾನತು

  • ಬಿಜೆಪಿಗೆ ಸೇರಿಲ್ಲ ಅಂತ ನನ್ನ ತಿಹಾರ್ ಜೈಲಿಗೆ ಕಳುಹಿಸಿದ್ರು: ಡಿ.ಕೆ ಶಿವಕುಮಾರ್

    ಬಿಜೆಪಿಗೆ ಸೇರಿಲ್ಲ ಅಂತ ನನ್ನ ತಿಹಾರ್ ಜೈಲಿಗೆ ಕಳುಹಿಸಿದ್ರು: ಡಿ.ಕೆ ಶಿವಕುಮಾರ್

    ಬೆಳಗಾವಿ: ಬಿಜೆಪಿಗೆ ಸೇರಲಿಲ್ಲ ಎಂದು ನನ್ನನ್ನು ತಿಹಾರಿ ಜೈಲಿಗೆ ಕಳಿಸಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಚಿವ ಈಶ್ವರಪ್ಪನಿಗೆ ಟಾಂಗ್ ಕೊಟ್ಟರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರಿಗೆ ಸಪೋರ್ಟ್ ಮಾಡಲಿಲ್ಲ ಎಂದು ನನ್ನನ್ನು ತಿಹಾರಿ ಜೈಲಿಗೆ ಕಳಿಸಿದ್ದರು. ಇದಕ್ಕೆಲ್ಲಾ ದಾಖಲೆ ಇದೆ ಎಂದು ತಿಳಿಸಿದರು.

    ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇವೆ ಎಂಬ ಬಿಎಸ್‌ವೈ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರಿಗಾದ ನೋವನ್ನು ಬಿಜೆಪಿ ಅವರ ಮೇಲೆ ಹೇಳಲು ಆಗುವುದಿಲ್ಲ. ಅದರಿಂದಾಗಿ ಅವರ ಕೋಪ-ತಾಪವನ್ನು ಕಾಂಗ್ರೆಸ್ ಅವರ ಮೇಲೆ ಹೊರ ಹಾಕುತ್ತಿದ್ದಾರೆ ಎಂದರು.

    ಕಾಂಗ್ರೆಸ್ಸನ್ನು ಶಾಶ್ವತವಾಗಿ ವಿಪಕ್ಷ ಸ್ಥಾನದಲ್ಲಿ ಕೂರಿಸುತ್ತಾರೆ ಎಂದಿದ್ದಾರೆ. ಆದರೆ ಅವರ ಪಕ್ಷದಲ್ಲೇ ಏನಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸರ್ಕಾರದ ಸ್ಥಿರತೆಯನ್ನು ನಾವು ಹಾಳು ಮಾಡುತ್ತಿಲ್ಲ. ಬದಲಿಗೆ ಅವರ ಪಕ್ಷದವರೇ ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

    ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಸ ಮಾಡಿ, ಕಾರ್ಯಕರ್ತರ ಕುಂದು ಕೊರತೆಗಳನ್ನು ಆಲಿಸಿದ್ದೇನೆ. ಒಂದು ಕಡೆ ಭಿನ್ನಾಭಿಪ್ರಾಯ ಇತ್ತು. ಅದನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಕಡೆ ಒಮ್ಮತದ ಅಭ್ಯರ್ಥಿ ಆಯ್ಕೆ ಸೂಚಿಸಿದ್ದಾರೆ. ಎಲ್ಲೆಡೆ ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವುದೇ ಕಾಂಗ್ರೆಸ್‌ನ ಗೆಲುವು. ಆದರೆ ಬಿಜೆಪಿಯಲ್ಲಿ ಹಾಗಿಲ್ಲ, ಸಿಂಗಲ್ ಕ್ಯಾಂಡಿಡೇಟ್ ಹಾಕಿದ್ದಾರೆ. ಒಂದೇ ಸ್ಟೇಜ್, ಒಬ್ಬರೇ ಎರಡು ಭಾಷಣ ಮಾಡುವಷ್ಟು ಬಿಜೆಪಿ ಇಷ್ಟು ವೀಕ್ ಆಗಿದೆ ಅಂತಾ ನಾನು ತಿಳಿದುಕೊಂಡಿರಲಿಲ್ಲ ಎಂದು ವ್ಯಂಗ್ಯವಾಡಿದರು.

    ನಮ್ಮಲ್ಲಿ ರೆಬಲ್ ಯಾರೂ ಇಲ್ಲ ಜೊತೆಗೆ ಪಕ್ಷಕ್ಕೆ ಮೋಸ ಮಾಡಿದವರಿಲ್ಲ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಡಿಕೆಶಿ ಟಾಂಗ್ ನೀಡಿದರು. ಇದೇ ವೇಳೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಂದ ನಂತರ ಅಧಿವೇಶನ ಮಾಡಿರಲಿಲ್ಲ. ನಾವು ಒತ್ತಾಯ ಮಾಡಿದಾಗ ಒತ್ತಡದ ಮೇಲೆ ಅಧಿವೇಶನ ಮಾಡುತ್ತಿದ್ದಾರೆ. ಇಷ್ಟಾದರೂ ಮುಂದೆ ಹಾಕುವ ಪ್ರಯತ್ನ ಪಡುತ್ತಿದ್ದರು. ಆದರೆ ನಾವು ಬದಲಾವಣೆ ಮಾಡಿದರೆ ಸಾಮೂಹಿಕವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ಸ್ಪೀಕರ್‌ಗೆ ಹೇಳಿದ್ದೆವು. ಇದರಿಂದಾಗಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ವಿಶೇಷ ಕ್ಲಸ್ಟರ್‌ನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೋಂಕು ಹೆಚ್ಚು: ಬೊಮ್ಮಾಯಿ

    ನಿನ್ನೆ ರಾಯಭಾಗದಲ್ಲಿ 40 ನೆರೆ ಸಂತ್ರಸ್ತ ಹೆಣ್ಣುಮಕ್ಕಳು ಸಾಮೂಹಿಕ ಆತ್ಮಹತ್ಯೆಗೆ ಅವಕಾಶ ಮಾಡಿಕೊಡಿ ಎಂದು ಅರ್ಜಿ ಕೊಟ್ಟಿದ್ದಾರೆ. ಈ ಕುರಿತಾಗಿ ಅಧಿವೇಶನದಲ್ಲಿ ಖಂಡಿತವಾಗಿ ಹೋರಾಟ ಮಾಡುತ್ತೇವೆ. ಸರ್ಕಾರದ ವೈಫಲ್ಯ ಬಗ್ಗೆ ಧ್ವನಿ ಎತ್ತುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: 7 ಬಿಳಿ ಕುದುರೆಗಳ ಜೊತೆ ಮಂಟಪಕ್ಕೆ ವಿಕ್ಕಿ ಕೊಡಲಿದ್ದಾರೆ ರಾಯಲ್ ಎಂಟ್ರಿ

    ಮಹದಾಯಿ ವಿಚಾರವಾಗಿ ಮಾತನಾಡಿದ ಅವರು, ತೀರ್ಪು ಬಂದಿರುವುದರಿಂದ ಮಹದಾಯಿಯ ಕೆಲಸವನ್ನು ಮಾಡಲು ಬಿಜೆಪಿ ಅವರಿಗೆ ಏನು ತೊಂದರೆಯಾಗಿದೆ. ಮಹದಾಯಿ ತೀರ್ಪು ಬಂದಿದ್ದರಿಂದ ತಕ್ಷಣ ಕೆಲವನ್ನು ಆರಂಭಿಸಬೇಕು. ಬಸವರಾಜ್ ಬೊಮ್ಮಾಯಿ ಅವರಿಗೆ ಜಲಸಂಪನ್ಮೂಲ ಸಚಿವರಾಗಿ ಅನುಭವವಿದೆ. ಆದರೂ ಯಾಕೆ ವಿಳಂಬ ಮಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.

  • ಜಾತಿ ಗಣತಿ ವರದಿಯನ್ನು ಸಿದ್ದರಾಮಯ್ಯ ಸಾಯಿಸಿದ್ರೆ, ಡಿಕೆಶಿ ಮಣ್ಣು ಮಾಡಿದ್ದಾರೆ: ಈಶ್ವರಪ್ಪ

    ಜಾತಿ ಗಣತಿ ವರದಿಯನ್ನು ಸಿದ್ದರಾಮಯ್ಯ ಸಾಯಿಸಿದ್ರೆ, ಡಿಕೆಶಿ ಮಣ್ಣು ಮಾಡಿದ್ದಾರೆ: ಈಶ್ವರಪ್ಪ

    ಬಳ್ಳಾರಿ: ಚುನಾವಣೆ ಒಳಗೆ ಮಾಜಿ ಸಿಎಂ ಸಿದ್ದರಾಮಯ್ಯ ಜಾತಿಗಣತಿ ವರದಿ ಬಿಡುಗಡೆ ಮಾಡ್ತೀನಿ ಅಂದಿದ್ರು. ಆದ್ರೆ ಈಗ ಕೇಳಿದ್ರೆ ಕಾಂತರಾಜ್ ಸಮಯಕ್ಕೆ ಸರಿಯಾಗಿ ವರದಿ ಕೊಡಲಿಲ್ಲ ಅಂತ ಸುಳ್ಳು ಹೇಳುತ್ತಿದ್ದಾರೆ. ಜಾತಿ ಗಣತಿಯನ್ನು ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರು ಸೇರಿ ಸಾಯಿಸಿ ಹೂತಾಕಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹರಿಹಾಯ್ದರು.

    ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿಯೂ ಗಣತಿಯನ್ನು ಬಿಡುಗಡೆ ಮಾಡಲಿಲ್ಲ. ಕೇಳಿದ್ರೆ ಕುಮಾರಸ್ವಾಮಿ ಬೇಡ ಅಂದ್ರು ಅಂತಾರೆ. ಕುಮಾರಸ್ವಾಮಿ ಕೇಳಿದ್ರೇ ಸಿದ್ದರಾಮಯ್ಯ ನನ್ನನ್ನು ಕೇಳಿಯೇ ಇಲ್ಲ ಎನ್ನುತ್ತಾರೆ. ಕಾಂಗ್ರೆಸ್ಸಿಗೆ ವರದಿ ಮೇಲೆ ನಂಬಿಕೆ ಇದ್ದಿದ್ರೆ ಅನ್ಯಾಯ ಮಾಡ್ತಿರಲಿಲ್ಲ. ಅಧಿಕಾರಕ್ಕಾಗಿ ಜಾತಿಗಳ ಹೆಸರು ಬಳಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ:ಎತ್ತಿನಹೊಳೆ ಯೋಜನೆ ಜಾರಿ ವಿಚಾರದಲ್ಲಿ ಸರ್ಕಾರಕ್ಕೆ ಬದ್ಧತೆಯೇ ಇಲ್ಲ: ಪರಮೇಶ್ವರ್

    ಸೋಲಿನ ಭೀತಿಯಿಂದ ಕಾಂಗ್ರೆಸ್ ವರದಿ ಬಿಡುಗಡೆ ಮಾಡಲಿಲ್ಲ. ಈಗ ಬಿಜೆಪಿ ದಲಿತ ವಿರೋಧಿ ಎನ್ನುತ್ತಿದ್ದಾರೆ. ಇದೀಗ ಡಿಕೆಶಿ ಯಾರು ಜಾತಿ ಗಣತಿ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದಾರೆ. ನಮ್ಮದೇನಾದ್ರು ತಪ್ಪಿದ್ರೇ ಹೇಳಿ ಕಾಂಗ್ರೆಸ್ ನವರೇ ನೀವೂ ಜಾತಿಗಣತಿಗೆ ಬೆಲೆ ಇಲ್ಲದಂತೆ ಮಾಡಿದ್ದಾರೆ ಎಂದರು.  ಇದನ್ನೂ ಓದಿ:ಎಲ್ಲರೂ ಸೇರಿ ಕೆಲಸ ಮಾಡಿದಾಗ ಯಾವುದೂ ಅಸಾಧ್ಯವಲ್ಲ: ಸಿಎಂ ಬೊಮ್ಮಾಯಿ

    ದಲಿತರು ಹಿಂದುಳಿದವರನ್ನು ಇವರ ಆಸ್ತಿಯಂತೆ ಬಳಸಿಕೊಂಡರು. ಸಮಿತಿಗೆ ಸೆಕ್ರೆಟರಿ, ಮೆಂಬರ್ ನೇಮಕ ಮಾಡಿರಲಿಲ್ಲ. ಜಾತಿಗಣತಿಗೆ ವರದಿಗೆ ಸಿದ್ದರಾಮಯ್ಯ ಸಹಿ ಸಹ ಮಾಡಲಿಲ್ಲ. ಈ ಬಗ್ಗೆ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಮಾಹಿತಿ ನೀಡಿದ್ದಾರೆ. ವರದಿ ನೀಡಿದ ಬಳಿಕ ಜಾರಿ ಬಗ್ಗೆ ಚಿಂತನೆ ಮಾಡ್ತೇವೆ. ಈ ವರದಿ ಸಿದ್ದಪಡಿಸೋಕೆ 180 ಕೋಟಿ ವೆಚ್ಚ ಮಾಡಿದ್ದಾರೆ. ಆದ್ರೇ ಈವರೆಗೂ ವರದಿ ಸಿದ್ದವಾಗಿಲ್ಲ. ಅದಕ್ಕೆ ಸಿದ್ದರಾಮಯ್ಯ ಕಾರಣ ಎಂದು ಹೇಳಿದರು.

    ಸಿದ್ದರಾಮಯ್ಯ ಡಿಕೆಶಿ ಅಧಿಕಾರಕ್ಕಾಗಿ ಕಚ್ಚಾಡ್ತಿದ್ದಾರೆ. ಅಧಿಕಾರ ಬೇಕು, ಮುಖ್ಯಮಂತ್ರಿ ಸ್ಥಾನಬೇಕು, ಆದ್ರೇ ವರದಿ ಬಿಡುಗಡೆ ಮಾತ್ರ ಮಾಡಲಿಲ್ಲ. ಇನ್ನು ಸದ್ಯಕ್ಕೆ ಮುಸ್ಲಿಂ ಮಾತ್ರ ಕಾಂಗ್ರೆಸ್ ಜೊತೆ ಇದ್ದಾರೆ. ಮುಂದೆ ಅವರು ನಮ್ಮ ಜೊತೆಗೆ ಬರುತ್ತಾರೆ. ಜಮೀರ್, ರೋಷನ್ ಎಷ್ಟು ಆಟವಾಡ್ತಿದ್ದಾರೆ ಗೋತ್ತಿದೆ. ಅದಕ್ಕೆ ರೋಷನ್ ಬೇಗ್ ಅವರನ್ನು ಬಿಜೆಪಿ ಹತ್ತಿರ ಸೇರಿಸಿಕೊಂಡಿಲ್ಲ. ಕುರುಬರಷ್ಟೇ ಅಲ್ಲ ಎಲ್ಲರೂ ಮೀಸಲಾತಿ ಕೇಳ್ತಿದ್ದಾರೆ. ಈ ಬಗ್ಗೆ ಚರ್ಚೆ ಮಾಡಿ ಕೇಂದ್ರಕ್ಕೆ ಕಳುಹಿಸುತ್ತೇವೆ ಎಂದರು.

  • ಬೆಂಗಳ್ಳೂರಲ್ಲಿ ಮೆಟ್ರೋ ಓಡಾಡ್ತಿದ್ದರೆ ಅದಕ್ಕೆ ಅನಂತಕುಮಾರ್ ಕಾರಣ

    ಬೆಂಗಳ್ಳೂರಲ್ಲಿ ಮೆಟ್ರೋ ಓಡಾಡ್ತಿದ್ದರೆ ಅದಕ್ಕೆ ಅನಂತಕುಮಾರ್ ಕಾರಣ

    ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ವಿಷಯಗಳಿಗೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಅನಂತಕುಮಾರ್ ಅವರು ಮಾತ್ರ ಹೊಂದಿದ್ದು, ಇಂದು ನಗರದಲ್ಲಿ ಮೆಟ್ರೋ ಓಡಾಡುತ್ತಿದ್ದರೆ ಅದಕ್ಕೆ ಅವರೇ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಅನಂತ್ ಕುಮಾರ್ ಅವರ ಅಂತಿಮ ದರ್ಶನ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲೇ ಅನಂತ್ ಕುಮಾರ್ ಅವರು ನಿಧನರಾಗಿದ್ದು ಅತ್ಯಂತ ನೋವು ತಂದಿದೆ. ರಾಜಕಾರಣದಲ್ಲಿ ತಮ್ಮದೇ ಅದ ಛಾಪು ಮೂಡಿಸಿದ್ದ ಅವರು ಮುಖ್ಯಮಂತ್ರಿ ಆಗಬೇಕು ಎಂಬ ಅಭಿಲಾಷೆಯನ್ನು ಹೊಂದಿದ್ದೆ ಎಂದು ಹೇಳಿದರು.

    ಅತಿ ಚಿಕ್ಕ ವಯಸ್ಸಿನಲ್ಲೇ ಕೇಂದ್ರ ಸಚಿವ ಸಂಪುಟದ ಸದಸ್ಯರಾಗಿದ್ದ ಅನಂತ್ ಕುಮಾರ್ ಅವರು ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಿದ ಪ್ರಮುಖ ನಾಯಕರು. ಅವರಿಗೆ ಭವಿಷ್ಯದಲ್ಲಿ ಇನ್ನು ಹೆಚ್ಚಿನ ಸ್ಥಾನಮಾನ ಗಳಿಸುವ ಅವಕಾಶ ಇತ್ತು. ಆದರೆ ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಿ, ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನು ಆಗಲಿಸಿದ್ದಾರೆ ಎಂದರು.

    ಇದೇ ವೇಳೇ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು, ನಾನು ರಾಜಕೀಯಕ್ಕೆ ಪ್ರವೇಶಿಸಿದಾಗ ಮೊದಲು ಅಭಿನಂಧನೆ ಸಲ್ಲಿಸಿದವರು ಅನಂತಕುಮಾರ್ ಅವರು. ಬೆಂಗಳೂರಿನ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರ. ಅನಂತಕುಮಾರ್ ನಿಧನದಿಂದ ತುಂಬಾಲಾರದ ನಷ್ಟವಾಗಿದೆ ಎಂದು ಹೇಳಿದರು.

    https://www.youtube.com/watch?v=hpYQXErCasA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews