Tag: dk ravi

  • ರೂಪಾ ಮೌದ್ಗಿಲ್ ವಿರುದ್ಧ ಡಿ.ಕೆ.ರವಿ ತಾಯಿ ಗೌರಮ್ಮ ಕಿಡಿ

    ರೂಪಾ ಮೌದ್ಗಿಲ್ ವಿರುದ್ಧ ಡಿ.ಕೆ.ರವಿ ತಾಯಿ ಗೌರಮ್ಮ ಕಿಡಿ

    ರಾಮನಗರ: ನನ್ನ ಮಗ ಸತ್ತು 8 ವರ್ಷಗಳು ಕಳೆದಿವೆ. ಆದರೆ ಈಗ ಯಾಕೆ ನನ್ನ ಮಗನನ್ನು ಬೀದಿಗೆ ತರುತ್ತಿದ್ದಾರೆ ಎಂದು ಡಿ.ಕೆ.ರವಿ (DK Ravi) ತಾಯಿ ಗೌರಮ್ಮ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ (Roopa Maudgil) ವಿರುದ್ಧ ಹರಿಹಾಯ್ದಿದ್ದಾರೆ.

    ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ (Rohini Sindhuri) ನಡುವೆ ಜಟಾಪಟಿ ನಡೆಯುತ್ತಿದೆ. ಇದರ ಮಧ್ಯೆ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ವಿಚಾರವನ್ನು ತೆಗೆದುಕೊಂಡಿರುವ ವಿಚಾರವಾಗಿ ಡಿ.ಕೆ.ರವಿ ತಾಯಿ ಗೌರಮ್ಮ ಗರಂ ಆಗಿದ್ದಾರೆ.

    ಈ ಕುರಿತು ಚನ್ನಪಟ್ಟಣ ತಾಲೂಕಿನ ಕದರಮಂಗಲ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಹಿಣಿಯಮ್ಮ ನನ್ನ ಮಗ ಸ್ನೇಹಿತರಾಗಿದ್ದರು. ಒಂದೆರಡು ಬಾರಿ ರೋಹಿಣಿಯವರು ನಮ್ಮ ಮನೆಗೆ ಬಂದಿದ್ದರು. ಆದರೆ ರೂಪಾ ಈಗ ಯಾಕೆ ನನ್ನ ಮಗನ ಸುದ್ದಿ ತರುತ್ತಿದ್ದಾರೆ. ಇದು ಸರಿಯಲ್ಲ ಎಂದು ಕಿಡಿ ಕಾರಿದರು.

    ನಿಮ್ಮ ವ್ಯವಹಾರ ಮಾಡಿಕೊಳ್ಳಿ, ಆದರೆ ಇದರಲ್ಲಿ ನನ್ನ ಮಗನ ವಿಚಾರ ತರಬೇಡಿ. ಈ ತಾಯಿಗೆ ನೋವು ಕೊಡಬೇಡಿ ಎಂದು ವಿನಂತಿಸಿಕೊಂಡರು. ಇದನ್ನೂ ಓದಿ: ನನ್ನ ಧರ್ಮಪತ್ನಿಯ ತೇಜೋವಧೆ ಮಾಡಿದ್ದಾರೆ – ರೂಪಾ ವಿರುದ್ಧ ದೂರು ಕೊಟ್ಟ ಸಿಂಧೂರಿ ಪತಿ

    ಡಿ.ಕೆ.ರವಿ ಐಎಎಸ್ ಸಂಭಾವಿತ ವ್ಯಕ್ತಿ. ಸಿಬಿಐ ರಿಪೋರ್ಟ್‌ನಲ್ಲಿ ಅವರ ಚಾಟ್ಸ್‌ಗಳ ಬಗ್ಗೆ ಉಲ್ಲೇಖವಿದ್ದು ರವಿ ಅವರು ಎಂದಾದರೂ ಲಿಮಿಟ್ ಕ್ರಾಸ್ ಮಾಡಿದ ತಕ್ಷಣವೇ ಅವರನ್ನು ಬ್ಲಾಕ್ ಮಾಡಬಹುದಿತ್ತು. ಅವರನ್ನು ಈಕೆ ಪರ್ಮನೆಂಟ್ ಆಗಿ ಬ್ಲಾಕ್ ಮಾಡಲಿಲ್ಲ. ಬ್ಲಾಕ್ ಮಾಡದೇ ಇದ್ದದ್ದು ಉತ್ತೇಜನ ಕೊಡುವ ಹಾಗೆ ಕಾಣುತ್ತದೆ ಎಂಬುವುದು ಅನೇಕರ ಅಭಿಪ್ರಾಯ ಎಂದು ರೂಪಾ ಆರೋಪ ಹೊರಿಸಿದ್ದರು. ಇದನ್ನೂ ಓದಿ: ರೋಹಿಣಿ-ರೂಪಾ ವಿರುದ್ಧ ಕಾನೂನು ‌ಕ್ರಮಕ್ಕೆ ಸಿಎಂ ಬೊಮ್ಮಾಯಿ ಸೂಚನೆ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರ್ಮ ಯಾರನ್ನೂ ಬಿಡಲ್ಲ, ನಾನು ದೇವರನ್ನು ನಂಬ್ತೀನಿ: ಕುಸುಮಾ

    ಕರ್ಮ ಯಾರನ್ನೂ ಬಿಡಲ್ಲ, ನಾನು ದೇವರನ್ನು ನಂಬ್ತೀನಿ: ಕುಸುಮಾ

    ಬೆಂಗಳೂರು: ಐಎಎಸ್ ಮತ್ತು ಐಪಿಎಸ್ ಬೆಳವಣಿಗೆ ಬಗ್ಗೆ ನಾನು ಮಾತಾಡಲ್ಲ. ಆದರೆ ನಾನು ದೇವರನ್ನು ನಂಬುತ್ತೇನೆ ಎಂದು ಡಿ.ಕೆ ರವಿ (DK Ravi) ಪತ್ನಿ ಕುಸುಮಾ (Kusuma) ತಿಳಿಸಿದ್ದಾರೆ.

    ಐಪಿಎಸ್‌ ಅಧಿಕಾರಿ ರೂಪಾ (Roopa IPS) ಹಾಗೂ ರೋಹಿಣಿ ಸಿಂಧೂರಿಯ (Rohin Sindhuri) ಜಟಾಪಟಿಗೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ಮ ಯಾರನ್ನು ಬಿಡುವುದಿಲ್ಲ. ಇದೇ ಜನ್ಮದಲ್ಲಿ ಇಲ್ಲೇ ಅನುಭವಿಸುತ್ತೇವೆ ಎಂಬ ನಂಬಿಕೆ ಇಟ್ಟಿಕೊಂಡಿದ್ದೇನೆ. ನಾನು ಯಾರ ಪರನೂ ನಿಲ್ಲಲ್ಲ. ಆದರೆ ನನಗೆ ಆದ ನೋವು ಬೇರೆ ಯಾರಿಗೂ ಆಗಬಾರದು ಅನ್ನೋದಷ್ಟೇ ನನ್ನ ಉದ್ದೇಶವಾಗಿದೆ ಎಂದು ಹೇಳಿದರು.

    ನನಗೆ ಆದ ನೋವು, ನನ್ನ ಕುಟುಂಬಕ್ಕೆ ಆದ ನೋವು ಬೇರೆ ಯಾರಿಗೂ ಆಗಬಾರದು. ಸಿಬಿಐ ರಿಪೋರ್ಟ್ ಬಂದ ಮೇಲೆ, ಅದರಲ್ಲಿ ಏನಿತ್ತು ಎನ್ನುವುದನ್ನು ಯಾರು ತಿಳಿದುಕೊಳ್ಳಲಿಲ್ಲ. ಇನ್ನೂ ಹಲವು ಸತ್ಯಗಳಿವೆ. ಅದನ್ನು ಯಾರು ಯೋಚನೆ ಮಾಡಿಲ್ಲ. ರಿಪೋರ್ಟ್‍ನಲ್ಲಿ ಎಲ್ಲವೂ ವಿಸ್ತಾರವಾಗಿ ವಿವರಣೆ ಇದೆ. ಅದು ಎಲ್ಲರಿಗೂ ಗೊತ್ತಾಗಲಿ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಣಕ್ಕಾಗಿ ಪೀಡಿಸುತ್ತಿದ್ದ ಪ್ರಾಣ ಸ್ನೇಹಿತನನ್ನೇ ಹತ್ಯೆಗೈದ

    ಯಾವ ಕಾರಣಕ್ಕೆ ರವಿ ಸಾವನ್ನಪ್ಪಿದ್ರು ಅನ್ನೋದು ಸಿಬಿಐ ವರದಿಯಲ್ಲಿದೆ. ಡಿ.ಕೆ ರವಿಗೆ ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆ ಇರಲಿಲ್ಲ. ಆ ರೀತಿಯ ಹೇಳಿಕೆ ನೀಡುತ್ತಿರುವುದು ಡಿ.ಕೆ ರವಿಗೆ ನೀಡಿರುವ ಅವಮಾನವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಲ್ಲು-ಬಾಣಕ್ಕೆ 2000 ಕೋಟಿ ಡೀಲ್ – ಸಂಜಯ್ ರಾವತ್ ಬಾಂಬ್

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗ್ತಿವೆ : ಕಾಂಗ್ರೆಸ್‌

    ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗ್ತಿವೆ : ಕಾಂಗ್ರೆಸ್‌

    ಬೆಂಗಳೂರು: ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ (CBI) ಬೆತ್ತಲಾಗುತ್ತಲೇ ಇವೆ ಎಂದು ಬಿಜೆಪಿ (BJP) ನಾಯಕರ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

    ಪರೇಶ್ ಮೇಸ್ತಾದು ಕೊಲೆಯಲ್ಲ ಬದಲಿಗೆ ಆಕಸ್ಮಿಕ ಸಾವು ಎಂದು ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಪರಿಷತ್ ಸದಸ್ಯ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಸಿಬಿಐ ವರದಿಯನ್ನು ನಾವು ಒಪ್ಪುವುದಿಲ್ಲ. ಪರೇಶ್ ಮೇಸ್ತಾದು (Paresh Mesta) ಕೊಲೆಯೇ. ಇವತ್ತು ಏನಾದ್ರು ಸಾಕ್ಷಿ ಸಿಗದಿದ್ದರೆ ಅದಕ್ಕೆ ಸಿದ್ದರಾಮಯ್ಯ (Siddaramaiah) ಸರ್ಕಾರವೇ ಕಾರಣ ಎಂದು ಆರೋಪಿಸಿದ್ದರು.

    ಅಷ್ಟೇ ಅಲ್ಲದೇ ಸಾಕ್ಷಿ ನಾಶ ಮಾಡಿದ್ದು ಹಾಗೂ ಪಿಎಫ್‍ಐ ಘೋಷಣೆ ಮಾಡಿದ್ದಕ್ಕೆ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ವಿಧಾನಸಭೆ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಕಾಂಗ್ರೆಸ್‍ನವರು ಹೇಳುವುದೆಲ್ಲ ಸತ್ಯ ಅಲ್ಲ ಎಂದು ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದೆ.

    ಟ್ವೀಟ್‍ನಲ್ಲಿ ಏನಿದೆ?: ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ. ಡಿ.ಕೆ. ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ನೀಡಿದೆ. ಇನ್ನೂ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೂ ಸರ್ಕಾರಕ್ಕೆ ಸಂಬಂಧವಿಲ್ಲ ಎಂದು ಹೇಳಿದರೆ, ಪರೇಶ್ ಮೇಸ್ತಾ ಪ್ರಕರಣವನ್ನು ಸಹಜ ಸಾವು ಎಂದು ತಿಳಿಸಿದೆ. ಈ ರೀತಿ ಸುಳ್ಳು ಹೇಳಿದ್ದ ಬಿಜೆಪಿ ರಾಜ್ಯದ ಕ್ಷಮೆ ಕೇಳಬೇಕು. ಇದನ್ನೂ ಓದಿ: ಪರೇಶ್‌ ಮೇಸ್ತಾ ಕೇಸ್‌ ರೀ ಓಪನ್‌ ಆಗಲಿ; CBIನದ್ದು ಮೋಸದ ವರದಿ – ಮುತಾಲಿಕ್‌

    ಏನಿದು ಪ್ರಕರಣ?: 2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಹೊನ್ನಾವರದ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8ರಂದು ಹೊನ್ನಾವರ ನಗರದ ಶನಿದೇವಾಸ್ಥಾನದ ಹಿಂಭಾಗದ ಶಟ್ಟಿ ಕೆರೆಯಲ್ಲಿ ಶವವಾಗಿ ಪರೇಶ್ ಮೇಸ್ತಾ ಪತ್ತೆಯಾಗಿದ್ದ. ಆತನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಆರೋಪಿಸಿದ್ದರು. ಅಷ್ಟೇ ಅಲ್ಲದೇ ಈತನನ್ನು ಹಿಂದೂ ಸಂಘಟನೆಗಳು ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿದ್ದರಿಂದ ಕೊಮು ಸಂಘರ್ಷಕ್ಕೆ ಕಾರಣವಾಗಿತ್ತು.

    ಹೊನ್ನಾವರ ರಣರಂಗವಾಗುತ್ತಿದ್ದಂತೆ ಎಚ್ಚೆತ್ತ ಅಂದಿನ ಸಿದ್ದರಾಮಯ್ಯ ಸರ್ಕಾರ ಪರೇಶ್ ಮೇಸ್ತಾ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ನಂತರ ಘಟನೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಲಾಗಿತ್ತು. ನಾಲ್ಕೂವರೆ ವರ್ಷದ ನಂತರ ಸಿಬಿಐನಿಂದ ಪರೇಶ್ ಮೇಸ್ತಾದು ಕೊಲೆಯಲ್ಲ, ಆಕಸ್ಮಿಕ ಸಾವು ಎಂದು ವರದಿ ಸಲ್ಲಿಸಿದೆ. ಇದನ್ನೂ ಓದಿ: ಪರೇಶ್ ಮೇಸ್ತಾದು ಕೊಲೆಯೇ, ಸಿದ್ದು ಸರ್ಕಾರದಿಂದ ಸಾಕ್ಷ್ಯ ನಾಶ: ರವಿಕುಮಾರ್‌ ಕಿಡಿ

    Live Tv
    [brid partner=56869869 player=32851 video=960834 autoplay=true]

  • ತಮ್ಮ ದುಡುಕಿನ ನಿರ್ಧಾರದಿಂದಲೇ ಡಿ.ಕೆ ರವಿ ಆತ್ಮಹತ್ಯೆ: ಸಿದ್ದರಾಮಯ್ಯ

    ತಮ್ಮ ದುಡುಕಿನ ನಿರ್ಧಾರದಿಂದಲೇ ಡಿ.ಕೆ ರವಿ ಆತ್ಮಹತ್ಯೆ: ಸಿದ್ದರಾಮಯ್ಯ

    – ಡಿ.ಕೆ.ರವಿ ಸ್ವಲ್ಪ ಮಟ್ಟಿನ ಪ್ರಚಾರ ಪ್ರಿಯರಾಗಿದ್ರು
    – ಸ್ವಲ್ಪ ಸಮಯದಲ್ಲೇ ಜನಪ್ರಿಯತೆ ಗಳಿಸಿಕೊಂಡಿದ್ರು

    ಬೆಂಗಳೂರು: ದಿ. ಐಎಎಸ್ ಅಧಿಕಾರಿ ಡಿಕೆ ರವಿ ಸ್ವಲ್ಪ ಮಟ್ಟಿನ ಪ್ರಚಾರ ಪ್ರಿಯರಾಗಿದ್ದರು. ಸ್ವಲ್ಪ ಸಮಯದಲ್ಲೇ ಜನಪ್ರಿಯತೆಯನ್ನು ಬೆಳೆಸಿಕೊಂಡರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದ ಸ್ಕೌಟ್ಸ್ ಹಾಗೂ ಗೈಡ್ಸ್ ಸಭಾಂಗಣದಲ್ಲಿ ಹಿರಿಯ ಪತ್ರಕರ್ತರಾದ ರಾಮಕೃಷ್ಣ ಉಪಾಧ್ಯಯರಿಂದ ರಚಿತವಾಗಿ ಅನು ಪ್ರಕಾಶ ಹೊರತಂದಿರುವ “ನಗ್ನ ಸತ್ಯ ಹಾಗೂ Land, Lust & Audiotapes” ಪುಸ್ತಕಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ತಮ್ಮ ದುಡುಕಿನ ಹಲವಾರು ನಿರ್ಧಾರಗಳಿಂದ ಡಿಕೆ ರವಿ ಅವರು ಆತ್ಮಹತ್ಯೆಯಂತಹ ಕ್ರಮಕ್ಕೆ ಮುಂದಾದರು ಎನ್ನುವುದು ಎಲ್ಲಾ ತನಿಖೆಗಳಲ್ಲೂ ಸಾಬೀತಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

    ಯವ ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ ರವಿಕುಮಾರ್ ಅವರು ಆತ್ಮಹತ್ಯೆ ಮಾಡಿಕೊಂಡಂತಹ ಸಂದರ್ಭದಲ್ಲಿ ವಿಧಾನಸಭೆಯ ಅಧಿವೇಶನ ನಡೆಯುತ್ತಿತ್ತು. ಈ ಪ್ರಕರಣದ ಮೂಲಕ ನನ್ನ ನೇತೃತ್ವದ ಸರ್ಕಾರಕ್ಕೆ ಕಳಂಕ ತರುವ ಪ್ರಯತ್ನವನ್ನು ವಿರೋಧ ಪಕ್ಷಗಳು ಮಾಡಿದವು. ಆದರೆ ಈ ಪ್ರಕರಣಕ್ಕೂ ಹಾಗೂ ನಮ್ಮ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲದೇ ಇದ್ದ ಕಾರಣ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎನ್ನುವ ಉದ್ದೇಶದಿಂದ ಸಿಬಿಐ ತನಿಖೆಗೆ ವಹಿಸಲಾಯಿತು. ಒಂದು ವಾರದೊಳಗೆ ನಡೆದಂತಹ ಘಟನೆಗಳು ಆಗಿನ ಗೃಹ ಸಚಿವರಾಗಿದ್ದ ಕೆ.ಜೆ ಜಾರ್ಜ್ ಅವರ ಮೇಲೆ ಕಳಂಕ ತರಲು ಪ್ರಯತ್ನ ನಡೆಯಿತು ಎಂದರು. ಇದನ್ನೂ ಓದಿ: ಕಾಂಗ್ರೆಸ್ ನಿಂದ ಅಸಂಬದ್ಧ ಸುಳ್ಳು ಹೇಳಿಕೆ- ಅಮರೀಂದರ್ ಸಿಂಗ್

    ಮೂಲತಃ ಮಹತ್ವಾಕಾಂಕ್ಷಿ ಆಗಿದ್ದ ಡಿ.ಕೆ ರವಿ, ತಾವು ಅಧಿಕಾರಿಯಾಗಿದ್ದ ಸಂದರ್ಭದಲ್ಲಿಯೇ ಹೊಸದೊಂದು ವ್ಯಾಪಾರಕ್ಕೆ ಮುಂದಾಗಿದ್ದರು. ಅಲ್ಲದೆ ಈ ಪ್ರಕರಣದ ತನಿಖೆಯನ್ನು ಸಿಓಡಿ ಒಳ್ಳೆಯ ರೀತಿಯಲ್ಲಿ ನಡೆಸಿತ್ತು. ಈ ಎಲ್ಲಾ ವಿಚಾರಗಳ ಬಗ್ಗೆ ಸಿಬಿಐ ತನ್ನ ವರದಿಯಲ್ಲಿ ವಿಸ್ತ್ರುತವಾಗಿ ತಿಳಿಸಿದೆ. ನಾವು ನಮ್ಮ ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇರುವ ದೃಷ್ಟಿಯಿಂದ ತನಿಖೆಗೆ ಆದೇಶ ನೀಡಿದ್ದೆವು. ಅಪ್ರಾಮಾಣಿಕ ರಾಜಕಾರಣ ಮಾಡುವಲ್ಲಿ ನಿಸ್ಸೀಮರಾಗಿರುವ ಬಿಜೆಪಿಯವರು ತಾವೇ ಆರೋಪಿಸುತ್ತಿದ್ದ ಸಂಸ್ಥೆಗೆ ಈ ಪ್ರಕರಣವನ್ನು ವಹಿಸುವಂತೆ ಆಗ್ರಹಿಸಿದ್ದರು ಎಮದು ಹೇಳಿದರು. ಇದನ್ನೂ ಓದಿ:  ಅಂಡರ್‌ವಾಟರ್‌ನಲ್ಲಿ ಚಿನ್ನದ ಹುಡುಗ- ವೀಡಿಯೋ ನೋಡಿ

    ನನ್ನ ಅಧಿಕಾರಾವಧಿಯಲ್ಲಿ ಸುಮಾರು 5 ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೇವೆ. ಆದರೆ ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಒಂದೇ ಒಂದು ಪ್ರಕರಣವನ್ನೂ ನೀಡುವ ಧೈರ್ಯ ಮಾಡಿಲ್ಲ ಎಂದು ಕುಟುಕಿದರು. ಯುವ ಅಧಿಕಾರಿಯಾಗಿ, ಸ್ವಲ್ಪ ಮಟ್ಟಿನ ಪ್ರಚಾರ ಪ್ರಿಯರಾಗಿದ್ದ ಅವರು ಸ್ವಲ್ಪ ಸಮಯದಲ್ಲೇ ಜನಪ್ರಿಯತೆಯನ್ನು ಬೆಳೆಸಿಕೊಂಡರು. ಆದರೆ ತಮ್ಮ ದುಡುಕಿನ ಹಲವಾರು ನಿರ್ಧಾರಗಳಿಂದ ಆತ್ಮಹತ್ಯೆಯಂತಹ ಕ್ರಮಕ್ಕೆ ಮುಂದಾದರು ಎನ್ನುವುದು ಎಲ್ಲಾ ತನಿಖೆಗಳಲ್ಲೂ ಸಾಬೀತಾಗಿದೆ. ಈ ವರದಿಗಳ ಬಗ್ಗೆ ಹಾಗೂ ಆದ ಘಟನೆಗಳ ಬಗ್ಗೆ ಜನರಿಗೆ ಅರಿವು ಇದ್ದಿದ್ದರಿಂದ ತಾವು ಸಿಬಿಐ ವರದಿಯನ್ನು ಸದನದ ಮುಂದೆ ಇಡಲಿಲ್ಲ ಎಂದು ಹೇಳಿದರು.

    ನಾವು ನಮ್ಮ ಅಧಿಕಾರಾವಧಿಯಲ್ಲಿ ಸಾಧ್ಯವಾದಷ್ಟು ಪಾರದರ್ಶಕ ಹಾಗೂ ಪ್ರಾಮಾಣಿಕತೆಯ ಕಾರ್ಯವನ್ನು ಮಾಡಿದ್ದೇವೆ. ಈಗ ಪರಿಸ್ಥಿತಿಯೇ ಬದಲಾಗಿದೆ. ಎಲ್ಲ ಕಡೆ ಭ್ರಷ್ಟತೆ, ಜಾತಿಯ ಮೇಲಿನ ವ್ಯಾಮೋಹ ಹಾಗೂ ಚುನಾವಣೆಯಲ್ಲಿ ಹಣಬಲ ಹಾಸುಹೋಕ್ಕಾಗಿದೆ. ಇದಕ್ಕೆ ನಾವೆಲ್ಲರೂ ಕಾರಣಕರ್ತರು. ಆಡಳಿತದಲ್ಲಿ ಪ್ರಾಮಾಣಿಕ ಅಧಿಕಾರಿಗಳೂ ಇದ್ದಾರೆ ಹಾಗೆಯೇ ಭ್ರಷ್ಟ ಅಧಿಕಾರಿಗಳೂ ಇದ್ದಾರೆ. ಅದೇ ರೀತಿ ಜನಪ್ರತಿನಿಧಿಗಳೂ ಕೂಡಾ. ಈ ವ್ಯವಸ್ಥೆಯನ್ನು ಸರಿಪಡಿಸುವ ಶಕ್ತಿ ಸಮಾಜಕ್ಕೆ ಬರಬೇಕು. ಆಗ ಮಾತ್ರ ನಾವು ಈ ಭ್ರಷ್ಟ ವ್ಯವಸ್ಥೆಯನ್ನು ಹೊಡೆದೋಡಿಸಲು ಸಾಧ್ಯ ಎಂದರು.

  • ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪಗೆ ಕೊರೊನಾ ಸೋಂಕು

    ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪಗೆ ಕೊರೊನಾ ಸೋಂಕು

    ಬೆಂಗಳೂರು: ಕಾಂಗ್ರೆಸ್ ನಾಯಕಿ ಹಾಗೂ ಐಎಎಸ್ ಅಧಿಕಾರಿ ದಿವಂಗತ ಡಿ.ಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಅವರಿಗೆ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

    ಈ ಬಗ್ಗೆ ಕುಸುಮಾ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ‘ನನ್ನ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವ ಕಾರಣ ಮನೆಯಲ್ಲಿಯೇ ಐಸೋಲೇಟ್ ಆಗಿದ್ದು, ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕಕೆ ಬಂದಿರುವವರು ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.

    ಮಹಾಮಾರಿ ಕೊರೊನಾ ಎರಡನೇ ಅಲೆಯು ತೀವ್ರ ತರವಾಗಿದ್ದು ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಕ್ಯಾಪ್ಷನ್ ಹಾಕಿಕೊಳ್ಳುವ ಮೂಲಕ ಹಂಚಿಕೊಂಡಿದ್ದಾರೆ.

    ಈ ಹಿಂದೆ ರಾಜರಾಜೇಶ್ವರಿ ನಗರದ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಸ್ಪರ್ಧಿಸಿದ್ದರು.

  • ಒನ್ ಟೇಕ್ ಆರ್ಟಿಸ್ಟ್ ಚೆನ್ನಾಗಿ ಮಾತಾಡಿದ್ದಾರೆ – ಗೌರಮ್ಮ ವಿರುದ್ಧ ಮುನಿರತ್ನ ಪರೋಕ್ಷ ಅಸಮಾಧಾನ

    ಒನ್ ಟೇಕ್ ಆರ್ಟಿಸ್ಟ್ ಚೆನ್ನಾಗಿ ಮಾತಾಡಿದ್ದಾರೆ – ಗೌರಮ್ಮ ವಿರುದ್ಧ ಮುನಿರತ್ನ ಪರೋಕ್ಷ ಅಸಮಾಧಾನ

    ಬೆಂಗಳೂರು: ಒನ್ ಟೇಕ್ ಆರ್ಟಿಸ್ಟ್ ಚೆನ್ನಾಗಿ ಮಾತನಾಡಿದ್ದಾರೆ. ನಮ್ಮ ಕಲಾವಿದರಿಗೆ ಬುದ್ಧಿ ಇಲ್ಲಾ ಹತ್ತು ಟೇಕ್ ತೆಗೆದುಕೊಳ್ತಾರೆ. ಇವರು ಒಂದೇ ಟೇಕ್ ತೆಗೆದುಕೊಂಡಿದ್ದಾರೆ ಎಂದು ಮುನಿರತ್ನ ಹೇಳಿದ್ದಾರೆ.

    ಡಿ.ಕೆ ರವಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಅವರು, 10 ದಿನದ ಹಿಂದೆ ಜಗಲಿ ಮೇಲೆ ಕುಳಿತು ಏನೋ ಮಾತನಾಡಿದ್ದರು. ಈಗ 3.5 ಲಕ್ಷದ ಸೋಫಾ ಮೇಲೆ ಕುಳಿತು ಮಾತನಾಡಿದ್ದಾರೆ. ಒಂದೇ ಟೇಕ್ ನಲ್ಲಿ ಹೇಳಿ ಮುಗಿಸಿದ್ದಾರೆ ಎಂದರು.

    ಇದೇ ವೇಳೆ ಚುನಾವಣೆಯ ಬಗ್ಗೆ ಮಾತನಾಡಿದ ಮುನಿರತ್ನ, ಕೊರೊನಾ ಸಮಯದಲ್ಲಿ ಶೇ.45 ರಷ್ಟು ಮತದಾನವಾಗಿರೋದು ಒಳ್ಳೆಯ ಮತದಾನ. ಕಳೆದ ಬಾರಿಗಿಂತ ಶೇ.7 ರಷ್ಟು ಮತದಾನ ಕಡಿಮೆಯಾಗಿದೆ. ಕಡಿಮೆ ಮತದಾನವಾಗಿ ಯಾರಿಗೆ ಲಾಭ ಅನ್ನೋ ಪ್ರಶ್ನೆ ಬರಲ್ಲ ಎಂದು ತಿಳಿಸಿದರು.

    ಕಳೆದ 134 ವರ್ಷಗಳಿಂದ ಅದನ್ನೇ ಹೇಳಿಕೊಂಡು ಬರ್ತಿದ್ದಾರೆ. ಕಡಿಮೆ ಪರ್ಸೆಂಟೆಜ್ ಆದರೆ ನಮಗೆ ಲಾಭ ಅಂತ ಹೇಳ್ತಾ ಬರುತ್ತಿದ್ದಾರೆ. ಆದರೆ ಜನರು ತುಂಬಾ ಬುದ್ಧಿವಂರಿದ್ದಾರೆ. ಶೇ.20 ಆಗ್ಲಿ ಶೇ.30 ಆಗಲಿ ಅಭಿವೃದ್ಧಿ ಮಾಡಿದವರಿಗೆ ಜನರು ವೋಟ್ ಹಾಕ್ತಾರೆ. ಕಡಿಮೆ ಮತದಾನವಾದ್ರೆ ನಮಗೆ ಲಾಭ ಅಗುತ್ತೆ ಅನ್ನೋದನ್ನ ಬಿಟ್ಟು ಮುಂದೆ ಜನರ ಜೊತೆ ಯಾವ ರೀತಿ ಬೆರೆಯಬೇಕು ಎಂಬುದು ಚಿಂತೆ ಮಾಡಿದ್ರೆ ಕಾಂಗ್ರೆಸ್ ಉಳಿಯುತ್ತೆ ಎಂದು ವಾಗ್ದಾಳಿ ನಡೆಸಿದರು.

    50 ಸಾವಿರ ಮತಗಳಿಂದ ಮುನಿರತ್ನ ಗೆಲ್ತಾರೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಯಡಿಯೂರಪ್ಪನವರ ಹಿರಿತನದ ಆಧಾರದಲ್ಲಿ ಹೇಳಿದ್ದಾರೆ. ನಾನು ಮತದಾರರಲ್ಲಿ ಮತಭಿಕ್ಷೆ ಕೇಳಿದ್ದೇನೆ. ಎಷ್ಟು ಮತಗಳಿಂದ ಗೆಲ್ಲುತ್ತೇನೆ ಅನ್ನೋದನ್ನ ಈಗ ಹೇಳೋದಿಲ್ಲ. ಯಡಿಯೂರಪ್ಪ ಕೊಟ್ಟ ಮಾತು ತಪ್ಪೋದಿಲ್ಲ. ಇದು ಸೂರ್ಯಚಂದ್ರ ಇರೋವರೆಗೂ ಸತ್ಯ. ಆ ಮಾತು ಪ್ರಕಾರ ಈಗಾಗಲೇ ಎಲ್ಲರನ್ನೂ ಸಚಿವರನ್ನಾಗಿ ಮಾಡಿದ್ದಾರೆ. ನನ್ನ ಕರ್ತವ್ಯ ಮಾತು ಕೊಟ್ಟಂತೆ ಮಂತ್ರಿ ಮಾಡ್ತೀನಿ ಅಂತ ನನಗೂ ಹೇಳಿದ್ದಾರೆ ಎಂದರು.

    ಸಚಿವ ಸ್ಥಾನ ನೀಡುವ ಬಗ್ಗೆ ನಾನು ಈಗಲೇ ನಾನು ಏನು ಹೇಳುದಿಲ್ಲ. ಮುಂದಿನ ಭವಿಷ್ಯ ಏನು ಅನ್ನೋದು ಯಾರಿಗೆ ಗೊತ್ತಿಲ್ಲ. ಅದಕ್ಕೆ ಕಾಲವೇ ಉತ್ತರ ಕೊಡುತ್ತೆ ಎಂದು ತಿಳಿಸಿದರು.

  • ಲವ್ ಜಿಹಾದ್‍ಗೆ ಯುಪಿ ಮಾದರಿ ಕಾನೂನು ತರಬೇಕು: ಆರ್. ಅಶೋಕ್

    ಲವ್ ಜಿಹಾದ್‍ಗೆ ಯುಪಿ ಮಾದರಿ ಕಾನೂನು ತರಬೇಕು: ಆರ್. ಅಶೋಕ್

    ಬೆಂಗಳೂರು: ಕರ್ನಾಟಕದಲ್ಲೂ ಉತ್ತರ ಪ್ರದೇಶ ಮಾದರಿಯಲ್ಲಿ ಲವ್ ಜಿಹಾದ್ ಗೆ ಕಾನೂನು ತರಬೇಕು. ಈ ಸಂಬಂಧ ಗೃಹ ಸಚಿವರು ಮತ್ತು ಸಿಎಂ ಜೊತೆ ಮಾತನಾಡುತ್ತೇನೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲೂ ಲವ್ ಜಿಹಾದ್ ಪ್ರಕರಣಗಳು ಆಗುತ್ತಿವೆ. ಲವ್ ಮಾಡಿ ಮದುವೆಯಾಗಿ ಮತಾಂತರ ಮಾಡಲೆಂದೇ ಯುವಕರಿಗೆ ತರಬೇತಿ ನೀಡುವ, ಬೈಕ್, ಬಟ್ಟೆ ಕೊಡಿಸುವ ಗುಂಪುಗಳು ರಾಜ್ಯದಲ್ಲಿ ಸಕ್ರೀಯವಾಗಿವೆ. ಲವ್ ಜಿಹಾದ್ ಗೆ ಬಲಿಯಾಗಿ ಬದುಕು ಬರ್ಬಾದ್ ಮಾಡಿಕೊಳ್ಳುವ ಹೆಣ್ಣುಮಕ್ಕಳ ರಕ್ಷಣೆಗಾಗಿ ಕಾನೂನು ತರಬೇಕಾಗಿದೆ ಎಂದರು.

    ಇದೇ ವೇಳೆ ಆರ್.ಆರ್.ನಗರದಲ್ಲಿನ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸ್ವ ಗ್ರಾಮಗಳಿಗೆ ಮರು ವಲಸೆ ಹೋಗಿದ್ದರು. ಹಾಗಾಗಿ ಆರ್.ಆರ್.ನಗರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಇಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ಎಂದು ನಂಬಿದ್ದವರು ಮತ ಚಲಾವಣೆ ಮಾಡಿಲ್ಲ. ಆದರೆ ಸ್ಥಳೀಯರು ಹಾಗೂ ಬಿಜೆಪಿಯ ಪಾರಂಪರಿಕ ಮತದಾರರೆಲ್ಲಾ ಬಂದು ವೋಟ್ ಮಾಡಿದ್ದಾರೆ. ಇದರಿಂದಾಗಿ ಆರ್.ಆರ್.ನಗರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಕನಿಷ್ಟ 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ತಿಳಿಸಿದರು.

    ಸೊಸೆ ನನಗೆ ಮಗಳಿದ್ದಂತೆ ಎಂದು ಡಿ.ಕೆ ರವಿ ತಾಯಿ ಹೇಳಿಕೆ ಪ್ರತಿಕ್ರಿಯಿಸಿದ ಸಚಿವರು, ಡಿ.ಕೆ ರವಿಯವರ ತಾಯಿಯಿಂದ ಹೇಳಿಕೆ ಕೊಡಿಸಿರೋದು ಡಿ.ಕೆ ಸಹೋದರರ ಗಿಮಿಕ್ ಅಷ್ಟೇ. ಡಿ.ಕೆ ರವಿಯವರ ತಾಯಿ ಬೇಕಾದರೆ ಮಾಧ್ಯಮಗಳ ಮುಂದೆ ಬಂದು ಹೇಳಬೇಕಾಗಿತ್ತು. ಆದರೂ ಅವರ ಸಂಸಾರ ಸರಿಹೋಗಲಿ. ಕಿತ್ತಾಡಿಕೊಂಡಿರುವ ಅತ್ತೆ ಸೊಸೆ ಸರಿಹೋಗಲಿ ಎಂದು ನಾವು ಬಯಸುತ್ತೇವೆ ಎಂದು ಹೇಳಿದರು.

  • ಅತ್ತೆ-ಸೊಸೆ, ತಾಯಿ-ಮಗಳಂತೆ ಚೆನ್ನಾಗಿರಲಿ: ಸಿ.ಟಿ ರವಿ

    ಅತ್ತೆ-ಸೊಸೆ, ತಾಯಿ-ಮಗಳಂತೆ ಚೆನ್ನಾಗಿರಲಿ: ಸಿ.ಟಿ ರವಿ

    ಚಿಕ್ಕಮಗಳೂರು: ಕಾಂಗ್ರೆಸ್ಸಿನಂತಹ ಜನರನ್ನು ನೀವು ಎಲ್ಲೂ ನೋಡಿರಲು ಸಾಧ್ಯವಿಲ್ಲ. ಏಕೆಂದರೆ ಅವರು ಚುನಾವಣೆಯಲ್ಲಿ ಗೆದ್ದರೆ ಜನಾದೇಶ ಅಂತಾರೆ, ಸೋತರೆ ಇವಿಎಂ ಮೇಲೆ ಆರೋಪಿಸುತ್ತಾರೆ. ಈ ರೀತಿಯ ಜನರನ್ನು ನೀವೆಲ್ಲೂ ನೋಡಲು ಆಗುವುದಿಲ್ಲ ಎಂದು ಸಚಿವ ಸಿ.ಟಿ ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಎಐಟಿ ಕಾಲೇಜು ಬಳಿ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಬಳಿಕ ಮಾತನಾಡಿದ ಅವರು, ಆರ್.ಆರ್.ನಗರದಲ್ಲಿ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಹಾಗೂ ಶಿರಾದಲ್ಲಿ 10 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಕಾಂಗ್ರೆಸ್ ಸೋಲು ಗ್ಯಾರಂಟಿಯಿಂದ ಇವಿಎಂ ಮೇಲೆ ಆರೋಪಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ಇವಿಎಂಗೆ ಇಂಟರ್ ನೆಟ್ ಕನೆಕ್ಷನ್ ಇರುವುದಿಲ್ಲ. ಅವರು ಈ ಆರೋಪಗಳಿಗೆ ಸಾಕ್ಷಿ ಕೂಡ ನೀಡಿಲ್ಲ. ಈ ರೀತಿಯ ಆರೋಪ ಮಾಡಿದಾಗ ಚುನಾವಣಾ ಆಯೋಗ ನೀಡಿದ ನೋಟಿಸ್‍ಗೆ ಉತ್ತರಿಸಲಾಗದೆ ತಡಪಡಿಸಿದ್ದಾರೆ. ನ್ಯಾಯಾಲಯದ ತೀರ್ಪ ಬಂದರೆ ನ್ಯಾಯಾಧೀಶರನ್ನೇ ಅನುಮಾನಿಸೋದು, ಚುನಾವಣೆಯಲ್ಲಿ ಸೋತರೆ ಇವಿಎಂ ಮೇಲೆ ಗೂಬೆ ಕೂರಿಸೋದು, ಕಾಂಗ್ರೆಸ್ಸಿನವರಿಗೆ ಇದೊಂದು ಕೆಟ್ಟ ಖಾಯಿಲೆ. 2018ರ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಗೆದ್ದಾಗ ಯಾವುದು ಕೆಲಸ ಮಾಡಿತ್ತು. ಇದೇ ಇವಿಎಂನಲ್ಲಿ ತಾನೇ ಗೆದ್ದದ್ದು ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.

    ಇದೇ ವೇಳೆ ಡಿ.ಕೆ.ರವಿ ತಾಯಿ ಸೊಸೆಯನ್ನು ಗೆಲ್ಲಿಸುವಂತೆ ಮಾಡಿದ ಮನವಿಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಟಿ.ರವಿ, ಅತ್ತೆ ಸೊಸೆ, ತಾಯಿ ಮಗಳಂತೆ ಇರಲಿ. ಅತ್ತೆ-ಸೊಸೆ ಜಗಳವಾಡಲಿ ಎಂದು ನಾವು ಹೇಳೂ ಇಲ್ಲ, ಬಯಸಿದ್ದೂ ಇಲ್ಲ. ಚುನಾವಣೆ ಮುಗಿದ ಮೇಲೂ ಚೆನ್ನಾಗಿರಲಿ. ಮುಖವನ್ನೇ ನೋಡುವುದಿಲ್ಲ ಎಂದವರು ನೋಡುವಂತಾಗಿರೋದು ಸಂತೋಷದ ಸಂಗತಿ ಎಂದಿದ್ದಾರೆ. ನಾವು ನಮ್ಮ ಪಕ್ಷ ಗೆಲ್ಲಬೇಕು ಎಂದು ಬಯಸುತ್ತೇವೆ. ನಮ್ಮ ತಾತ್ವಿಕ ಹೋರಾಟ ಕಾಂಗ್ರೆಸ್-ಜೆಡಿಎಸ್ ವಿರುದ್ಧ ಎಂದು ತಿಳಿಸಿದರು.

  • ಮಗನ ಫೋಟೋ ಹಾಕ್ಕೊಂಡ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ರವಿ ತಾಯಿ ಆಕ್ರೋಶ

    ಮಗನ ಫೋಟೋ ಹಾಕ್ಕೊಂಡ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ರವಿ ತಾಯಿ ಆಕ್ರೋಶ

    – ನನ್ನ ಮಗನ ದುಡ್ಡೆಲ್ಲ ನುಂಗಿ ನೀರು ಕುಡಿದ್ಳು

    ತುಮಕೂರು: ಆರ್‌ಆರ್‌ನಗರ ಉಪಾಚುನಾವಣೆಯಲ್ಲಿ ಡಿಕೆ ರವಿ ಪತ್ನಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ಲಾನ್ ಮಾಡಿಕೊಂಡಿವೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಸೊಸೆ ವಿರುದ್ಧ ರವಿ ತಾಯಿ ಗೌರಮ್ಮ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಕುಣಿಗಲ್‍ನ ದೊಡ್ಡಕೊಪ್ಪಲಿನಲ್ಲಿ ಮಾತನಾಡಿರುವ ಅವರು, ನನ್ನ ಮಗನ ಜೊತೆ ಅವಳೂ ಹೋಗಿ ಬಿಟ್ಲು ಅಂತ ತಿಳಿಕೊಂಡಿದ್ದೇನೆ. ನನ್ನ ಮಗನ ದುಡ್ಡಲ್ಲಿ ಒಂದು ರೂಪಾಯಿ ನಮ್ಮ ಕಷ್ಟಕ್ಕೆ ಕೊಡಲಿಲ್ಲ. ಲೋಫರ್ ಅವ್ಳು, ನನ್ನ ಮಗನ ಹೇಸರೇಳಿಕೊಂಡು ಯಾಕೆ ಚುನಾವಣೆಗೆ ನಿಂತ್ಕೋಬೇಕು ಎಂದು ಕಿಡಿಕಾರಿದ್ದಾರೆ.

    ಮಗ ಸಾವನ್ನಪ್ಪಿದ ಸಂದರ್ಭದಲ್ಲಿ ಮಣ್ಣು ಬಿಸಾಕಿ ಹೋದವಳು ಇಂದಿನವರೆಗೂ ಬಂದಿಲ್ಲ. ಡಿ.ಕೆ ರವಿ ಹೆಂಡ್ತಿ ಅನ್ನೋ ಯೋಗ್ಯತೆ 6 ವರ್ಷದಲ್ಲೇ ಕಳೆದುಕೊಂಡಳು. ನನ್ನ ಕಣ್ಣೆದುರೇ ಅವರ ಅಪ್ಪ-ಅಮ್ಮನೂ ನನ್ನ ಹಾಗೆಯೇ ಆಗ್ತಾರೆ ಕಾಯ್ತಾ ಇದ್ದೀನಿ ಎಂದು ಹಿಡಿಶಾಪ ಹಾಕಿದ್ದಾರೆ. ಇದನ್ನೂ ಓದಿ: ಉಪ ಚುನಾವಣೆ: RR ‌ನಗರದಲ್ಲಿ ಡಿ.ಕೆ ರವಿ ಪತ್ನಿ ಕಣಕ್ಕಿಳಿಸಲು ಜೆಡಿಎಸ್, ಕಾಂಗ್ರೆಸ್ ಪ್ಲಾನ್?

    ಚುನಾವಣೆ ನಿಂತುಕೊಂಡರೂ ನನ್ನ ಮಗನ ಹೆಸರು ಹಾಗೂ ಫೋಟೋ ಹಾಕಬಾರದು. ಒಂದು ವೇಳೆ ಹಾಕಿಕೊಂಡರೆ ನಾನೇ ಹುಡುಗನ್ನ ಕರೆದುಕೊಂಡು ಹೋಗಿ ಬೆಂಕಿ ಹಚ್ಚಿಸ್ತೀನಿ. ನಾನು ಕಷ್ಟಪಟ್ಟು ಓದಿಸಿದ್ರೆ, ನನ್ನ ಮಗನ ದುಡ್ಡೆಲ್ಲ ನುಂಗಿ ನೀರು ಕುಡಿದ್ಳು ಎಂದು ಕುಸುಮಾ ವಿರುದ್ಧ ಡಿಕೆ ರವಿ ತಾಯಿ ಗೌರಮ್ಮ ವಾಗ್ದಾಳಿ ನಡೆಸಿದ್ದಾರೆ.

    ಒಟ್ಟಿನಲ್ಲಿ ಆರ್.ಆರ್.ನಗರದ ಉಪಸಮರದಲ್ಲಿ ಡಿಕೆ ರವಿ ಪತ್ನಿಗೆ ಟಿಕೆಟ್ ಸಾಧ್ಯತೆ ಇದ್ದು, ಇದಕ್ಕೆ ಡಿಕೆ ರವಿ ತಾಯಿ ಕುಟುಂಬಸ್ಥರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

  • ‘ಚಂಬಲ್’ನಲ್ಲಿ ಅಡಗಿದ್ಯಾ ಡಿ.ಕೆ.ರವಿ ಸಾವಿನ ರಹಸ್ಯ – ಸತೀಶ್ ನೀನಾಸಂ ಹೇಳಿದ್ದೇನು?

    ‘ಚಂಬಲ್’ನಲ್ಲಿ ಅಡಗಿದ್ಯಾ ಡಿ.ಕೆ.ರವಿ ಸಾವಿನ ರಹಸ್ಯ – ಸತೀಶ್ ನೀನಾಸಂ ಹೇಳಿದ್ದೇನು?

    ಬೆಂಗಳೂರು: ನಟ ಸತೀಶ್ ನೀನಾಸಂ ಅಭಿನಯದ ‘ಚಂಬಲ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಇದು ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಜೀವನದ ಕಥೆ ಆಧಾರಿತ ಸಿನಿಮಾವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಟ ಸತೀಶ್ ನೀನಾಸಂ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ಸತೀಶ್ ನೀನಾಸಂ, ‘ಚಂಬಲ್’ ಸಿನಿಮಾ ಒಬ್ಬ ಐಎಎಸ್ ದಕ್ಷ ಅಧಿಕಾರಿ ಕಥೆಯಾಗಿದೆ. ನಾನು ಈ ಸಿನಿಮಾದಲ್ಲಿ ಸುಭಾಶ್ ಎಂಬ ಪಾತ್ರ ಮಾಡುತ್ತಿದ್ದೇನೆ. ನಾನು ಮಾಡಿದ ಸಿನಿಮಾದಲ್ಲಿ ನನಗೆ ಶಿಕ್ಷಣ ಇರುತ್ತಿರಲಿಲ್ಲ. ಆದರೆ ಈ ಸಿನಿಮಾದಲ್ಲಿ ಒಳ್ಳೆಯ ಶಿಕ್ಷಣ ಇದ್ದು, ಐಎಎಸ್ ಅಧಿಕಾರಿಯಾಗಿದ್ದೇನೆ. ನಾನು ಎಸ್‍ಎಸ್‍ಎಲ್‍ಸಿ ಮಾಡಿ, ಡಿಪ್ಲೋಮಾ ಮಾಡಿದ್ದೇನೆ. ಆದರೆ ಈ ಸಿನಿಮಾದಲ್ಲಿ ನಾನು ಓದಿರುವುದಕ್ಕೂ, ಇದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ತುಂಬಾ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ ಎಂದು ತಿಳಿಸಿದ್ರು.

    ಚಿತ್ರದ ಕಥೆಗಾಗಿ ಕೆಲವು ಅಧಿಕಾರಿಗಳಿಂದ ಸ್ಪೂರ್ತಿ ಪಡೆದುಕೊಂಡಿದ್ದೇವೆ. ಆದರೆ ಯಾರು ಏನು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದು ಒಬ್ಬ ಐಎಎಸ್ ಅಧಿಕಾರಿಯ ಕಥೆಯಾಗಿದೆ. ನಮ್ಮಲ್ಲಿ ಒಳ್ಳೆಯ ಅಧಿಕಾರಿಗಳಿದ್ದು, ಕೆಲಸ ಮಾಡಿದ್ದಾರೆ. ಆದ್ದರಿಂದ ಈ ಸಿನಿಮಾ ಮಾಡಿದ್ದೇವೆ. ಲೂಸಿಯಾ ನಂತರ ಇದು ಒಂದೊಂದು ಅದ್ಭುತವಾದ ಸಿನಿಮಾವಾಗಿದೆ. ನಾವು ಕಾಣುವ ಸತ್ಯಕ್ಕಿಂತ, ನೀವು ಕಾಣುವ ಸತ್ಯವೇ ಮುಖ್ಯವಾಗಿದೆ. ಟ್ರೇಲರ್ ನೋಡಿ, ಬಳಿಕ ಸಿನಿಮಾ ನೋಡಿ ಎಂದು ಸತೀಶ್ ಹೇಳಿದ್ದಾರೆ.

    ಚಂಬಲ್ ಅನ್ನೋ ಹೆಸರಿನ ಸುತ್ತಾ ನಾನಾ ನಿಗೂಢಗಳು ಅಡಗಿಕೊಂಡಿವೆ. ಒಂದಷ್ಟು ಕ್ರೈಮುಗಳ ಸರಣಿಯೂ ಕಣ್ಮುಂದೆ ಸುಳಿದಾಡುತ್ತೆ. ಅದೇ ಹೆಸರನ್ನು ಶೀರ್ಷಿಕೆಯಾಗಿಸಿಕೊಂಡಿರೋ ಚಂಬಲ್ ಚಿತ್ರದ ಬಗ್ಗೆ ನಾನಾ ಕುತೂಹಲಗಳಿವೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಚಿತ್ರದ ಟೃಲರ್ ಬಿಡುಗಡೆ ಮಾಡಿದ್ದಾರೆ.

    ಸತೀಶ್ ನೀನಾಸಂ ಈ ಚಿತ್ರದಲ್ಲಿ ಭ್ರಷ್ಟಾಚಾರಿಗಳನ್ನ ಕಂಡ್ರೆ ಬೆಂಕಿಯುಂಡೆಯಂತಾಡೋ ಖಡಕ್ ಅಧಿಕಾರಿಯಾಗಿ ನಟಿಸಿರೋದರ ಸುಳಿವೂ ಕೂಡಾ ಸಿಕ್ಕಿದೆ. ಪ್ರತೀ ಹಂತದಲ್ಲಿಯೂ ಪ್ರೇಕ್ಷಕರನ್ನ ನಿಗಿ ನಿಗಿಸೋ ಕ್ಯೂರಿಯಾಸಿಟಿಯ ಕೆಂಡದ ಮೇಲೆ ತಂದು ಕೂರಿಸುವಂತೆ ಇಡೀ ಚಿತ್ರ ಮೂಡಿ ಬಂದಿದೆ ಎಂಬುದಕ್ಕೆ ಈ ಟ್ರೇಲರ್ ಸಾಕ್ಷಿಯೊದಗಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv