Tag: dj tillu

  • ರಶ್ಮಿಕಾ, ಶ್ರೀಲೀಲಾ ನಡುವೆ ಕಾಣೆಯಾದ್ರಾ ಕುಡ್ಲದ ಬೆಡಗಿ ನೇಹಾ ಶೆಟ್ಟಿ?

    ರಶ್ಮಿಕಾ, ಶ್ರೀಲೀಲಾ ನಡುವೆ ಕಾಣೆಯಾದ್ರಾ ಕುಡ್ಲದ ಬೆಡಗಿ ನೇಹಾ ಶೆಟ್ಟಿ?

    ಟಾಲಿವುಡ್ ಅಂಗಳದಲ್ಲಿ ಸದ್ಯ ಕನ್ನಡತಿಯರ ಹವಾ ಜಾಸ್ತಿ ಆಗಿದೆ. ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾಗೆ (Sreeleela) ತೆಲುಗಿನಲ್ಲಿ ಭಾರೀ ಬೇಡಿಕೆಯಿದೆ. ಇವರ ನಡುವೆ ಕುಡ್ಲದ ಕುವರಿ ನೇಹಾ ಶೆಟ್ಟಿಗೆ ಬೇಡಿಕೆ ಕಮ್ಮಿಯಾಗಿದ್ಯಾ? ಎಂಬ ಗುಸು ಗುಸು ಶುರುವಾಗಿದೆ. ಹಾಗಾದ್ರೆ ಕರಾವಳಿ ನಟಿ ಕೈಯಲ್ಲಿ ಅದೆಷ್ಟು ಸಿನಿಮಾಗಳಿವೆ. ನೇಹಾ ಈಗ ಏನ್ಮಾಡ್ತಿದ್ದಾರೆ? ಇಲ್ಲಿದೆ ಮಾಹಿತಿ.

    ‘ಮುಂಗಾರು ಮಳೆ 2’ (Mungaru Male 2) ಚಿತ್ರದಿಂದ ಸಿನಿಮಾ ಕೆರಿಯರ್ ಶುರು ಮಾಡಿದ ಮಂಗಳೂರಿನ ಬೆಡಗಿ ನೇಹಾ ಶೆಟ್ಟಿ (Neha Shetty) ಸದ್ಯ ಟಾಲಿವುಡ್‌ನಲ್ಲಿ ಗುರುತಿಸಿಕೊಳ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್‌ಗೆ (Golden Star Ganesh) ನಾಯಕಿಯಾಗಿ ನಟಿ ನೇಹಾ ತೆಲುಗು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

    Neha Shetty

    ತೆಲುಗಿನ ಮೆಹಬೂಬಾ, ಗಲ್ಲಿ ಬಾಯ್, ಡಿಜೆ ಟಿಲ್ಲು ಚಿತ್ರಗಳ ಮೂಲಕ ಗಮನ ಸೆಳೆದ ನೇಹಾ ಶೆಟ್ಟಿಗೆ ಈಗ ಅವಕಾಶಗಳು ಕಮ್ಮಿಯಾಗಿದೆ. ಕೆರಿಯರ್‌ನಲ್ಲಿ ಬಿಗ್ ಬ್ರೇಕ್ ಸಿಗದೇ ನಟಿ ಕಂಗಾಲಾಗಿದ್ದಾರೆ. ಸದ್ಯ ತೆಲುಗಿನಲ್ಲಿ ಸೌಂಡ್ ಮಾಡುತ್ತಿರುವ ಹೆಸರು ಅಂದರೆ ರಶ್ಮಿಕಾ ಮಂದಣ್ಣ, ಶ್ರೀಲೀಲಾ. ನೇಹಾ ಶೆಟ್ಟಿ ಠಕ್ಕರ್ ಕೊಟ್ಟಿದ್ದಾರೆ. ಸ್ಟಾರ್‌ ನಟರ ಸಿನಿಮಾಗಳಿಗೆ ರಶ್ಮಿಕಾ ಅಥವಾ ಶ್ರೀಲೀಲಾನೇ ಬೇಕು ಅನ್ನುವಷ್ಟರ ಮಟ್ಟಿಗೆ ಅವರಿಗೆ ಬೇಡಿಕೆ ಇದೆ. ರಶ್ಮಿಕಾ ತೆಲುಗಿನ ಜೊತೆ ಬಾಲಿವುಡ್‌ನತ್ತ ಮುಖ ಮಾಡಿದ್ರೆ, ಶ್ರೀಲೀಲಾ ಕಾಲಿವುಡ್‌ನಲ್ಲಿ ಹೊಸ ಹೆಜ್ಜೆ ಇಡಲು ಪ್ಲ್ಯಾನ್‌ ಮಾಡಿದ್ದಾರೆ. ಇದನ್ನೂ ಓದಿ:ಹೊಸ ಹುಡುಗಿ ಜೊತೆ ವರ್ಮಾ ನೈಟ್ ಪಾರ್ಟಿ

    ‘ಡಿಜೆ ಟಿಲ್ಲು’ (Dj Tillu) ಸಿನಿಮಾದಲ್ಲಿ ಸಿದ್ದು ಜೊತೆ ನೇಹಾ ಬೋಲ್ಡ್ ಆಗಿ ನಟಿಸಿದ್ದರು. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಟಿ ಮೋಡಿ ಮಾಡಿದ್ದರು. ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾದಲ್ಲಿ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದಾರೆ. ಸದ್ಯ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾ ಬಿಟ್ಟು ಯಾವುದೇ ಹೊಸ ಚಿತ್ರವನ್ನು ನಟಿ ಒಪ್ಪಿಕೊಂಡಿಲ್ಲ. ಇದೇ ಮೇನಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ.

    ‘ಗ್ಯಾಂಗ್ಸ್ ಆಫ್ ಗೋದಾವರಿ’ ಚಿತ್ರದ ನಂತರ ನೇಹಾ ಶೆಟ್ಟಿ ಲಕ್ ಬದಲಾಗುತ್ತಾ? ಈ ಚಿತ್ರ ಮುಂಗಾರು ಮಳೆ 2 ನಟಿಯ ಕೈ ಹಿಡಿಯುತ್ತಾ? ಎಂದು ಕಾದುನೋಡಬೇಕಿದೆ.

  • ಶ್ರೀಲೀಲಾ ಕೈಬಿಟ್ಟ ಸಿನಿಮಾದಿಂದ ಹೊರನಡೆದ ನಟಿ ಅನುಪಮಾ ಪರಮೇಶ್ವರನ್

    ಶ್ರೀಲೀಲಾ ಕೈಬಿಟ್ಟ ಸಿನಿಮಾದಿಂದ ಹೊರನಡೆದ ನಟಿ ಅನುಪಮಾ ಪರಮೇಶ್ವರನ್

    ನ್ನಡದ `ನಟಸಾರ್ವಭೌಮ’ (Natasarwbhowma) ಚಿತ್ರದಿಂದ ಕನ್ನಡಕ್ಕೆ ಪರಿಚಿತರಾದ ನಟಿ ಅನುಪಮಾ ಪರಮೇಶ್ವರನ್ `ಡಿಜೆ ಟಿಲ್ಲು’ ಪಾರ್ಟ್ 2 (DJ Tillu 2) ಚಿತ್ರದಿಂದ ಹೊರನಡೆದಿದ್ದಾರೆ. ತೆಲುಗಿನ ಚಿತ್ರದಿಂದ ಹಠಾತ್ತನೆ ಹೊರನಡೆದಿದ್ದಾರೆ.

    ಕನ್ನಡದ ಜೊತೆ ಪರಭಾಷೆಗಳಲ್ಲಿ ಮೋಡಿ ಮಾಡಿರುವ ಪುನೀತ್ ನಾಯಕಿ ಅನುಪಮಾ ಪರಮೇಶ್ವರನ್(Anupama Parameshwaran) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿದ್ದು ಜೊನ್ನಲಗೊಂಡ ನಟನೆಯ `ಡಿಜೆ ಟಿಲ್ಲು’ (Dj Tillu) ಚಿತ್ರದ ಸಕ್ಸಸ್ ನಂತರ ಈ ಚಿತ್ರದ ಮುಂದುವರೆದ ಭಾಗದ ಚಿತ್ರೀಕರಣ ನಡೆಯುತ್ತಿದೆ. ಆದರೆ ಈಗ ಹಠಾತ್ತನೆ ನಟಿ ಅನುಪಮಾ ಈ ಚಿತ್ರವನ್ನ ಕೈಬಿಟ್ಟಿದ್ದಾರೆ.

    ಇನ್ನೂ ಅನುಪಮಾ ಆಯ್ಕೆಗೂ ಮುನ್ನ ಈ ಚಿತ್ರಕ್ಕೆ ಆಯ್ಕೆಯಾಗಿದ್ದು ಭರಾಟೆ ನಟಿ ಶ್ರೀಲೀಲಾ(Sreeleela), ನಂತರ ಅವರ ಬದಲು ಅನುಪಮಾ ಅವರನ್ನ ಆ ಜಾಗಕ್ಕೆ ಹಾಕಿಕೊಳ್ಳಲಾಗಿತ್ತು. ಈಗ ಪ್ರಾಜೆಕ್ಟ್ನಿಂದ ಅನುಪಮಾ ಅವರು ಹೊರನಡೆದಿದ್ದಾರೆ.

    ಅನುಪಮಾ ಪರಮೇಶ್ವರನ್ ಅವರು ಸಿನಿಮಾದ ಶೂಟಿಂಗ್ ಆರಂಭಿಸಿ ಕೆಲ ದಿನಗಳ ಕಾಲ ಚಿತ್ರೀಕರಣದಲ್ಲಿಯೂ ಪಾಲ್ಗೊಂಡಿದ್ದರು. ಆದರೆ ಈಗ ಹಠಾತ್ತನೆ ಚಿತ್ರೀಕರಣ ತ್ಯಜಿಸಿ ಹೋಗಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸೂಕ್ತ ಕಾರಣಗಳನ್ನು ಚಿತ್ರತಂಡ ನೀಡಿಲ್ಲವಾದರೂ, ಚಿತ್ರೀಕರಣ ಮಾಡುತ್ತಿರುವ ರೀತಿಗೂ ಹೇಳಿದ್ದ ಕತೆಗೂ ಸಂಬಂಧವಿಲ್ಲವೆಂದು ಅನುಪಮಾ ಆರೋಪಿಸಿ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ತಮಿಳು ಸೀರಿಯಲ್‌ನಿಂದ ಹೊರನಡೆದ `ಪಾರು’ ನಟಿ ಮೋಕ್ಷಿತಾ ಪೈ

    ಅಭಿಮಾನಿಗಳು ಈ ಹಿಂದಿನ ಡಿಜೆ ಟಿಲ್ಲು ನಾಯಕಿ ನೇಹಾ ಶೆಟ್ಟಿಯನ್ನೇ ಹಾಕಿಕೊಳ್ಳಿ ಎಂದು ಮನವಿ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಅದ್ಯಾವ ನಟಿ ಈ ಚಿತ್ರಕಥೆಗೆ ಫೈನಲ್ ಆಗುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]