Tag: DJ music

  • ಗಣೇಶ ವಿಸರ್ಜನೆ ವೇಳೆ ಡಿಜೆ ಬಂದ್ ಖಂಡಿಸಿ ಪ್ರತಿಭಟನೆ – ಕೊಪ್ಪಳದಲ್ಲಿ ಲಘು ಲಾಠಿ ಪ್ರಹಾರ

    ಗಣೇಶ ವಿಸರ್ಜನೆ ವೇಳೆ ಡಿಜೆ ಬಂದ್ ಖಂಡಿಸಿ ಪ್ರತಿಭಟನೆ – ಕೊಪ್ಪಳದಲ್ಲಿ ಲಘು ಲಾಠಿ ಪ್ರಹಾರ

    ಕೊಪ್ಪಳ: ಇಲ್ಲಿನ ಗಂಗಾವತಿ ನಗರದ ಗಾಂಧಿ ಸರ್ಕಲ್‌ನಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಪೊಲೀಸರು ಡಿಜೆ (DJ Music) ಬಂದ್ ಮಾಡಲು ಮುಂದಾದ ಮೇಲೆ ಯುವಕರು ಪ್ರತಿಭಟನೆಗೆ ಮುಂದಾಗಿದ್ದು, ಪೊಲೀಸರು (Koppala Police) ಲಘು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.

    ಛಲುವಾದಿ ಓಣಿಯ ಯುವಕ ಮಂಡಳಿಯವರು ಗಣೇಶ ವಿಸರ್ಜನೆ ಮೆರವಣಿಗೆ ಮಾಡಿಕೊಂಡು ಗಣೇಶ ವೃತ್ತದವರೆಗೂ ಆಗಮಿಸಿದ್ದಾರೆ. ಸಮಯ ರಾತ್ರಿ 2 ಗಂಟೆ ಆಗಿರುವ ಹಿನ್ನೆಲೆಯಲ್ಲಿ ಪೊಲೀಸರು ಡಿಜಿ ಬಂದ್ ಮಾಡಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಸುವಂತೆ ಸೂಚಿಸಿದ್ದಾರೆ. ಒಪ್ಪದ ಯುವಕರು ಡಿಜೆ ಹಾಕಿಕೊಂಡು ಡ್ಯಾನ್ಸ್ ಮಾಡಲು ಮುಂದಾಗಿದ್ದಾರೆ. ನಂತರ ಒತ್ತಾಯದ ಮೇಲೆ ಪೊಲೀಸರು ಡಿಜೆ ಬಂದ್ ಮಾಡಿಸಿದ್ದಾರೆ.

    ನಂತರ ಪೊಲೀಸರು ಡಿಜೆ ಬಂದ್‌ ಮಾಡಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ʻದಲಿತರ ಗಣೇಶ ಹಬ್ಬ ಆಚರಣೆಗೆ ಪೊಲೀಸರಿಂದ ವಿರೋಧʼ ಎಂದು ಘೋಷಣೆ ಕೂಗುತ್ತಾ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಮನವೊಲಿಸಲು ಮುಂದಾಗಿದ್ದರು. ಆದ್ರೂ ಪ್ರಯೋಜನವಾಗದ ಹಿನ್ನೆಲೆ ಲಘು ಲಾಠಿ ಪ್ರಹಾರ ನಡೆಸಿ, ಪ್ರತಿಭಟನೆ ಚದುರಿಸಿದರು.

    ನಂತರ ಮತ್ತೆ ದಲಿತ ಯುವಕ ಸಂಘದವರು ಡಿಜೆ ಬಂದ್ ಮಾಡಲು ಬಿಡುವುದಿಲ್ಲ ಎಂದು ಘೋಷಣೆ ಕೂಗಿಕೊಂಡು, ಡಿಜೆ ಹಾಕುವವರೆಗೂ ಗಣೇಶ ವಿಸರ್ಜನೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಪೊಲೀಸ ಇಲಾಖೆಯ ಅಧಿಕಾರಿಗಳು ಯುವಕರ ಮನವೊಲಿಸಿ, ಡಿಜೆ ಬಂದ್ ಮಾಡಿ, ಗಣೇಶ ವಿಸರ್ಜನೆಗೆ ಕಳುಹಿಸಲಾಯಿತು. ಸ್ಥಳದಲ್ಲಿಯೇ ಎಸ್ಪಿ, ಡಿವೈಎಸ್ಪಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

  • ಡಿಜೆ ಮ್ಯೂಸಿಕ್ ಶಬ್ದಕ್ಕೆ 63 ಕೋಳಿ ಬಲಿ

    ಡಿಜೆ ಮ್ಯೂಸಿಕ್ ಶಬ್ದಕ್ಕೆ 63 ಕೋಳಿ ಬಲಿ

    ಭುವನೇಶ್ವರ: ನೆರೆ ಮನೆಯವರ ಮದುವೆ ಕಾರ್ಯಕ್ರಮದ ಪ್ರಯುಕ್ತ ಡಿಜೆ ಮ್ಯೂಸಿಕ್ ನುಡಿಸಿದ್ದ ಪರಿಣಾಮ ಕೋಳಿ ಫಾರಂ ಒಂದರಲ್ಲಿ 63 ಕೋಳಿಗಳು ಬಲಿಯಾದ ವಿಚಿತ್ರ ಘಟನೆ ಒಡಿಶಾದ ಬಾಲಸೋರ್ ಎಂಬಲ್ಲಿ ನಡೆದಿದೆ. ನೆರೆಮನೆಯವರು ಮದುವೆ ಮನೆಯ ವಿರುದ್ಧ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

    ಕರದಂಗಡಿ ಗ್ರಾಮ ನಿವಾಸಿ ಕೋಳಿ ಫಾರಂ ಮಾಲಿಕ ರಂಜಿತ್ ಪರಿದಾ ಎಂಬುವವರು ನೀಲಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮ್ಮ ನೆರೆಮನೆಯ ರಾಮಚಂದ್ರ ಪರಿದಾ ಅವರ ಮದುವೆ ಮೆರವಣಿಗೆಯಲ್ಲಿ ಜೋರಾಗಿ ಡಿಜೆ ಮ್ಯೂಸಿಕ್ ಬಾರಿಸುತ್ತಿದ್ದರಿಂದ ಕೋಳಿಗಳು ಹೃದಯಾಘಾತಗೊಂಡು ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾರೆ  ಇದನ್ನೂ ಓದಿ: ಮದುವೆಗೆ ವರ ಗೈರು – ಮನೆ ಮುಂದೆ ಧರಣಿ ಕುಳಿತ ವಧು

    ರಂಜಿತ್ ಪ್ರಕಾರ ಭಾನುವಾರ ರಾತ್ರಿ 11:30ರ ಸುಮಾರಿಗೆ ಡಿಜೆ ಬ್ಯಾಂಡ್ ಅವರ ಜಮೀನಿನ ಮುಂದೆ ಸಾಗಿದೆ. ಡಿಜೆ ಅವರ ಫಾರ್ಮ್ ಸಮೀಪಿಸುತ್ತಿದ್ದಂತೆ ಕೋಳಿಗಳು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದವು. ವಾಲ್ಯೂಮ್ ಕಡಿಮೆ ಮಾಡುವಂತೆ ಡಿಜೆಗೆ ರಂಜಿತ್ ವಿನಂತಿಸಿದರು. ಆದರೂ ಅವರು ಕೇಳದೆ ಹೋದಾಗ ತಮ್ಮ 63 ಕೋಳಿಗಳು ಸಾವನ್ನಪ್ಪಿದೆ ಎಂದು ಹೇಳಿಕೆ ನೀಡಿದ್ದಾರೆ.

    ಕೋಳಿಗಳು ಕುಸಿದುಬಿದ್ದಾಗ ಅವುಗಳನ್ನು ಬದುಕಿಸಲು ಕೋಳಿ ಫಾರಂ ಮಾಲಿಕರು ವ್ಯರ್ಥ ಪ್ರಯತ್ನ ಮಾಡಿದ್ದಾರೆ. ನಂತರ ಅವರು ಸ್ಥಳೀಯ ಪಶುವೈದ್ಯರನ್ನು ಸಂಪರ್ಕಿಸಿದಾಗ ಅವುಗಳು ಅತಿಯಾದ ಶಬ್ದದಿಂದ ಆಘಾತಕ್ಕೊಳಗಾಗಿ ಸಾವನ್ನಪ್ಪಿವೆ ಎಂದಿದ್ದಾರೆ.

    ರಂಜಿತ್ ಎಂಜಿನಿಯರಿಂಗ್ ಪದವೀಧರರಾಗಿದ್ದು, ಉದ್ಯೋಗ ಸಿಗದಿದ್ದಾಗ 2019ರಲ್ಲಿ 2 ಲಕ್ಷ ರೂ. ಸಾಲ ಪಡೆದು ಬ್ರೈಲರ್ ಫಾರ್ಮ್ ಆರಂಭಿಸಿದ್ದರು. ಮೊದಲಿಗೆ ನೆರೆಮನೆಯ ರಾಮಚಂದ್ರನ ಬಳಿ ಪರಿಹಾರ ಕೇಳಲು ಹೋಗಿದ್ದಾಗ ಅವರು ನಿರಾಕರಿಸಿದ್ದರು. ಬೇರೆ ದಾರಿ ತೋಚದಿದ್ದಾಗ ರಂಜಿತ್ ರಾಮಚಂದ್ರನ ವಿರುದ್ಧ ನೀಲಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಕ್ರಿಪ್ಟೋಕರೆನ್ಸಿಗೆ ನಿಷೇಧವಿಲ್ಲ- ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ

    ಈ ಆರೋಪವನ್ನು ಪರಿಶೀಲಿಸಿ ಎರಡೂ ಕಡೆಯವರಿಗೆ ನ್ಯಾಯಸಮ್ಮತ ಪರಿಹಾರ ನೀಡಲಾಗುವುದು ಎಂದು ಬಾಲಸೋರ್ ಪೊಲೀಸ್ ಎಸ್ಪಿ ಸುಧಾಂಶು ಮಿಶ್ರಾ ಹೇಳಿದ್ದಾರೆ. ಆದರೆ ರಾಮಚಂದ್ರ ಈ ಆರೋಪವನ್ನು ವ್ಯಂಗ್ಯ ಮಾಡಿದ್ದಾರೆ. ಲಕ್ಷಗಟ್ಟಲೆ ಕೋಳಿಗಳನ್ನು ಅತಿಯಾದ ಶಬ್ದದ ಹಾರ್ನ್‍ಗಳಿರುವ ರಸ್ತೆಯಲ್ಲಿ ಸಾಗಿಸಲಾಗುತ್ತದೆ. ಆಗ ಸಾಯದೇ ಇರುವ ಕೋಳಿಗಳು ಡಿಜೆ ಮ್ಯೂಸಿಕ್‍ನಿಂದ ಸಾಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅವರು ನನ್ನ ಬಳಿ ಬಂದು ಮನವಿ ಮಾಡಿದಾಗ ಡಿಜೆ ಧ್ವನಿಯನ್ನು ಕಡಿಮೆ ಮಾಡಿದ್ದೆ ಎಂದಿದ್ದಾರೆ.