Tag: Diya

  • ‘ಜೇನುಗೂಡಿ’ನಿಂದ ದಿಯಾ ಔಟ್- ಹೊಸ ನಟಿಯ ಆಗಮನ

    ‘ಜೇನುಗೂಡಿ’ನಿಂದ ದಿಯಾ ಔಟ್- ಹೊಸ ನಟಿಯ ಆಗಮನ

    ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಜೇನುಗೂಡಿʼನಿಂದ (Jenugudu) ನಟಿ ನಿತ್ಯಾ ಗೌಡ (Nithya Gowda), ದಿಯಾ ಪಾತ್ರಧಾರಿ ಹೊರ ಬಂದಿದ್ದಾರೆ. ದಿಯಾ ರೋಲ್‌ಗೆ ‘ಕನ್ನಡತಿ’ ನಟಿಯ ಎಂಟ್ರಿಯಾಗಿದೆ.

    ಶಶಾಂಕ್- ದಿಯಾ ಕ್ಯೂಟ್ ಲವ್ ಸ್ಟೋರಿ, ಕುಟುಂಬ ಮಹತ್ವ ಸಾರುವ ಕಥೆಯೇ ಜೇನುಗೂಡು ಸೀರಿಯಲ್. ಸದಾ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದ ಶಶಾಂಕ್- ದಿಯಾ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಆದರೆ ನಾಯಕಿ ನಟಿ ಈಗ ದಿಯಾ ಪಾತ್ರದಿಂದ ಹೊರ ಬರುವ ಮೂಲಕ ಪ್ರೇಕ್ಷಕರಿಗೆ ಶಾಕ್ ಕೊಟ್ಟಿದ್ದಾರೆ.

    ‘ಜೇನುಗೂಡು’ ಸೀರಿಯಲ್‌ನ ಕಥಾ ನಾಯಕಿಯ ಬದಲಾವಣೆ ಆಗಿದೆ.ಈಗಾಗಲೇ ಸೀರಿಯಲ್‌ಗೆ ಗುಡ್ ಬೈ ಹೇಳಿದ್ದಾರಂತೆ ದಿಯಾ ಅಲಿಯಾಸ್ ನಿತ್ಯಾ. ಅವರ ಪಾತ್ರಕ್ಕೆ ‘ಕನ್ನಡತಿ’ ಖ್ಯಾತಿಯ ಅಮೃತಾ ಮೂರ್ತಿ (Amrutha Murthy) ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಅಣ್ಣ ತಂಗಿ ಸೀರಿಯಲ್‌ಗೆ ‘ಟಗರು’ ನಟಿ ಮಾನ್ವಿತಾ ಸಾಥ್

    ಜನಪ್ರಿಯ ಸೀರಿಯಲ್ ‘ಕನ್ನಡತಿʼ ಹೀರೋ ಹರ್ಷನ ತಂಗಿಯಾಗಿ ನಟಿಸಿದ್ದ ಅಮೃತಾ ಬಳಿಕ ‘ಜೊತೆ ಜೊತೆಯಲಿ’ ಕೂಡ ನಟಿಸಿದರು. ಈಗ ದಿಯಾ ಪಾತ್ರಕ್ಕೆ ಜೀವತುಂಬಲು ಅಮೃತಾ ಸಜ್ಜಾಗಿದ್ದಾರೆ.

  • ಕೆ.ಆರ್.ಮಾರ್ಕೆಟ್ ನಲ್ಲಿ ಕಾಣಿಸಿಕೊಂಡ ದಿಯಾ ಬ್ಯೂಟಿ  ಖುಷಿ

    ಕೆ.ಆರ್.ಮಾರ್ಕೆಟ್ ನಲ್ಲಿ ಕಾಣಿಸಿಕೊಂಡ ದಿಯಾ ಬ್ಯೂಟಿ ಖುಷಿ

    ದಿಯಾ (Dia) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿ ಇಟ್ಟ ಸರಳ ಸಿಗ್ದ ಸುಂದರಿ ಖುಷಿ ರವಿ (Khushi Ravi) ಹೊಸ ಲುಕ್ ನಲ್ಲಿ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದಾರೆ. ಅದೂ ಅತ್ಯಂತ ಜನಬೀಡು ಪ್ರದೇಶವಾದ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ (K.R. Market) ಎನ್ನುವುದು ಮತ್ತೊಂದು ವಿಶೇಷ.

    ಬೆಂಗಳೂರಿನ ಕೆ ಆರ್ ಮಾರುಕಟ್ಟೆಯಲ್ಲಿ ಬೆಳಂ ಬೆಳಗ್ಗೆ ಹೂವುಗಳ ಮಧ್ಯೆ ಫೋಟೋಗೆ (Photoshoot) ಫೋಸ್ ಕೊಟ್ಟಿದ್ದಾರೆ. ತಿಳಿನೀಲಿ ಬಣ್ಣದ ಸೀರೆಯುಟ್ಟು ಹೋಮ್ಲಿ ಲುಕ್ ನಲ್ಲಿ ಕಂಗೊಳಿಸಿರುವ ಖುಷಿಯ ಚೆಂದದ ಪಟ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಇದನ್ನೂ ಓದಿ:ಹೊಸ ಫೋಟೋಶೂಟ್‌ನಿಂದ ಇಂಟರ್‌ನೆಟ್‌ ಬೆಂಕಿ ಹಚ್ಚಿದ ರಶ್ಮಿಕಾ ಮಂದಣ್ಣ

    ಹೂವುಗಳ‌ ಮಧ್ಯೆ ಮತ್ತೊಂದು ಹೂವು ನೋಡಿ ಫ್ಯಾನ್ಸ್ ಮನಮೋಹಕ ಎನ್ನುತ್ತಿದ್ದಾರೆ. ವಿಂಟೇಜ್ ಲುಕ್ ನಲ್ಲಿ ಬಹಳ ಸೊಗಸಾಗಿ ಮೂಡಿಬಂದಿರುವ ಫೋಟೋಶೂಟ್ ಹಿಂದಿನ ಶಕ್ತಿ ನಿರ್ಮಾಪಕ ನಾಗರಾಜ್ ಸೋಮಯಾಜಿ.

    ಈ ಸ್ಪೆಷಲ್ ಫೋಟೋಶೂಟ್ ಐಡಿಯಾ ಹಾಗೂ ಫೋಟೋಗ್ರಫಿ ಕೈಚಳಕ ಇವರದ್ದೆ. ತಮ್ಮದೇ ಫೋಕಸ್ ಸ್ಟುಡಿಯೋನಡಿ ಬ್ಯೂಟಿಫುಲ್ ಫೋಟೋಶೂಟ್ ಮಾಡಿದ್ದಾರೆ.  ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿ ಕಾರ್ಯಕ್ರಮಗಳು ಸೇರಿದಂತೆ ಒಂದಿಷ್ಟು ತಾರೆಯರಿಗೆ ಫೋಕಸ್ ಫೋಟೋಗ್ರಫಿ ಸ್ಟುಡಿಯೋ ಅಚ್ಚುಮೆಚ್ಚು.

    ಸೆಲೆಬ್ರಿಟಿಗಳ ಫೋಟೋಶೂಟ್, ವೆಡ್ಡಿಂಗ್ ಫೋಟೋಗ್ರಫಿ ಹಾಗೂ ನಾನಾ ಕಾರ್ಯಕ್ರಮಗಳ ಸೇರಿದಂತೆ ಇನ್ನಿತರ ಶುಭ ಸಂದರ್ಭದ ಚೆಂದದ ಫೋಟೋಗಳನ್ನು ಸೆರೆಹಿಡಿಯುವಲ್ಲಿ ನಾಗರಾಜ್ ಸೋಮಯಾಜಿ  (Nagaraj Somyaji)ಹೆಸರುವಾಸಿ.

  • ನಾನಿ ಸಿನಿಮಾದಲ್ಲಿ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಟನೆ

    ನಾನಿ ಸಿನಿಮಾದಲ್ಲಿ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಟನೆ

    ‘ದಿಯಾ’ (Diya) ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ದೀಕ್ಷಿತ್ ಶೆಟ್ಟಿ (Dixit Shetty) ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಬೆಳ್ಳಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ‘ದಿಯಾ’ ಸಿನಿಮಾದಲ್ಲಿ ಸಿಂಪಲ್ ಹುಡುಗನ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದ ದೀಕ್ಷಿತ್ ನ್ಯಾಚುರಲ್ ಸ್ಟಾರ್ ನಾನಿ (Nani) ಅಭಿನಯದ ‘ದಸರಾ’ (Dasara) ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಇದೇ ಮಾರ್ಚ್ 30ರಂದು ‘ದಸರಾ’ ವರ್ಲ್ಡ್ ವೈಡ್ ಬಿಡುಗಡೆಯಾಗುತ್ತಿದ್ದು, ಸೂರಿ ಪಾತ್ರದ ಮೂಲಕ ದೀಕ್ಷಿತ್ ಶೆಟ್ಟಿ ತೆರೆ ಮೇಲೆ ಬರ್ತಿದ್ದಾರೆ.

    ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ನ್ಯಾಚುರಲ್ ಸ್ಟಾರ್ ನಾನಿ, ಕೀರ್ತಿ ಸುರೇಶ್ ಅಭಿನಯದ ‘ದಸರಾ’ ಸಖತ್ ಬಝ್ ಕ್ರಿಯೇಟ್ ಮಾಡಿದೆ. ಟೀಸರ್ ಮೂಲಕ ವರ್ಲ್ಡ್ ವೈಡ್ ಸಖತ್ ಸೌಂಡ್ ಮಾಡಿರುವ ಈ ಚಿತ್ರ ನಾನಿ ಬಹು ನಿರೀಕ್ಷಿತ  ಪ್ಯಾನ್ ಇಂಡಿಯಾ ಪ್ರಾಜೆಕ್ಟ್. ಈ ಚಿತ್ರದಲ್ಲಿ ಕನ್ನಡದ ನಟ ದೀಕ್ಷಿತ್ ಶೆಟ್ಟಿ ನ್ಯಾಚುರಲ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಿರೋದು ವಿಶೇಷ. ಇದನ್ನೂ ಓದಿ: Biffes 2023- ಇಂದು ಸಂಜೆ 4.30ಕ್ಕೆ ಬೆಂಗಳೂರು ಚಿತ್ರೋತ್ಸವಕ್ಕೆ ಚಾಲನೆ

    ನಾನಿ ಸರ್ ಪ್ರೊಡಕ್ಷನ್ ಹೌಸ್ ನಡಿ ನಿರ್ಮಾಣವಾದ ‘ಮೀಟ್ ಕ್ಯೂಟ್’ ವೆಬ್ ಸೀರೀಸ್ ನಲ್ಲಿ ನಟಿಸಿದ್ದೆ. ವೆಬ್ ಸೀರೀಸ್ ಸಹ ನಿರ್ದೇಶಕರಾದ ವಿನಯ್ ನನ್ನ ಅಭಿನಯ ನೋಡಿ ದಸರಾ ಸಿನಿಮಾಗೆ ರೆಫರ್ ಮಾಡಿದ್ರು. ನಾನಿ ಸರ್ ಕೂಡ ವೆಬ್ ಸೀರೀಸ್ ನಲ್ಲಿ ನನ್ನ ಅಭಿನಯ ನೋಡಿ ಮೆಚ್ಚಿಕೊಂಡಿದ್ರು ಇದ್ರಿಂದ ದಸರಾ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ತು ಎನ್ನುತ್ತಾರೆ ದೀಕ್ಷಿತ್ ಶೆಟ್ಟಿ.

    ಚಿತ್ರದಲ್ಲಿ ಸೂರಿ ಎಂಬ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಇಡೀ ಸಿನಿಮಾದಲ್ಲಿ ಈ ಪಾತ್ರ ಕ್ಯಾರಿಯಾಗುತ್ತೆ. ಹತ್ತು ತಿಂಗಳು ‘ದಸರಾ’ ಸಿನಿಮಾ ತಂಡದೊಂದಿಗೆ ಕೆಲಸ ಮಾಡಿದ್ದೇನೆ. ಈ ಚಿತ್ರ ಅದ್ಭುತ ಅನುಭವ ನೀಡಿದೆ. ನಿರ್ದೇಶಕರ ಜೊತೆಗೆ ನಾನಿ ಸರ್ ಕೂಡ ನನ್ನ ಪಾತ್ರ ನಿರ್ವಹಿಸಲು ಒಂದಿಷ್ಟು ಸಲಹೆ ನೀಡುತ್ತಿದ್ರು ಎಂದು ತಮ್ಮ ಪಾತ್ರ ಹಾಗೂ ‘ದಸರಾ’ ತಂಡದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ ದೀಕ್ಷಿತ್ ಶೆಟ್ಟಿ.

    ‘ದಿಯಾ’ ನಂತರ ದೀಕ್ಷಿತ್ ಶೆಟ್ಟಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದೇ ರೀತಿಯ ಕಥೆ, ಪಾತ್ರಕ್ಕೆ ಸೀಮಿತವಾಗದೇ  ಅಳೆದು ತೂಗಿ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ‘ಕೆಟಿಎಂ’ ಹಾಗೂ ‘ಬ್ಲಿಂಕ್’ ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಗೆ ರೆಡಿಯಾಗಿವೆ.  ಅದಕ್ಕೂ ಮೊದಲು ‘ದಸರಾ’ ಮೂಲಕ ಸೂರಿ ಪಾತ್ರದಲ್ಲಿ ತೆರೆ ಮೇಲೆ ರಂಜಿಸಲು ರೆಡಿಯಾಗಿದ್ದಾರೆ ದೀಕ್ಷಿತ್ ಶೆಟ್ಟಿ.

  • ಹಿಂದಿ ಆಯ್ತು, ಇದೀಗ ಮರಾಠಿಯಲ್ಲೂ ಕನ್ನಡದ ದಿಯಾ

    ಹಿಂದಿ ಆಯ್ತು, ಇದೀಗ ಮರಾಠಿಯಲ್ಲೂ ಕನ್ನಡದ ದಿಯಾ

    ಪೃಥ್ವಿ ಅಂಬರ್ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದ ‘ದಿಯಾ’ ಸಿನಿಮಾ 2020ರಲ್ಲಿ ರಿಲೀಸ್ ಆಗಿ, ಬಾಕ್ಸ್ ಆಫೀಸ್ ಅನ್ನು ಭರ್ತಿ ಮಾಡಿತ್ತು. ಬಹುತೇಕ ಹೊಸಬರೇ ತುಂಬಿದ್ದ ಈ ಸಿನಿಮಾ ಕೇವಲ ಹಣ ಗಳಿಕೆಯಲ್ಲಿ ಮಾತ್ರವಲ್ಲ, ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ವಿಮರ್ಶೆಕರೂ ಮೆಚ್ಚಿಕೊಂಡಿದ್ದರು. ಹೀಗಾಗಿ ಪೃಥ್ವಿ ಅಂಬರ್ ಯುವ ಪೀಳಿಗೆಯ ಭರವಸೆಯ ನಟ ಅನಿಸಿಕೊಂಡರು. ಇದನ್ನೂ ಓದಿ : ಸಿಂಬು ನಟನೆಯ ಚಿತ್ರಕ್ಕೆ ಐಶ್ವರ್ಯ ರಜನೀಕಾಂತ್ ನಿರ್ದೇಶಕಿ

    ನಂತರ ಈ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಯಿತು. ಹಿಂದಿಯಲ್ಲಿ ರೀಮೇಕ್ ಆದರೂ, ನಿರ್ದೇಶಕ ಕೆ.ಎಸ್. ಅಶೋಕ್, ತನ್ನ ಹೀರೋನನ್ನು ತಮ್ಮೊಂದಿಗೆ ಬಾಲಿವುಡ್ ಗೂ ಕರೆದುಕೊಂಡು ಹೋದರೂ, ಇನ್ನೇನು ಆ ಸಿನಿಮಾ ಸಂಪೂರ್ಣ ಶೂಟಿಂಗ್ ಮುಗಿಸಿದೆ ಎನ್ನುವ ಹೊತ್ತಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಈ ಸಿನಿಮಾ ಇದೀಗ ಮರಾಠಿಯಲ್ಲೂ ರಿಮೇಕ್ ಆಗುತ್ತಿದೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಹೌದು, ಕನ್ನಡದ ದಿಯಾ, ಹಿಂದಿಯ ನಂತರ ಮರಾಠಿಯಲ್ಲೂ ಮೂಡಿ ಬರಲಿದೆ. ವಿಶೇಷ ಅಂದರೆ, ನಾಯಕ ಪೃಥ್ವಿ ಅಂಬರ್ ಮರಾಠಿ ಸಿನಿಮಾದಲ್ಲೂ ನಾಯಕನಾಗಿ ಮುಂದುವರೆಯಲಿದ್ದಾರೆ. ಸಿನಿಮಾ ಮರಾಠಿಯಲ್ಲಿ ಮೂಡಿ ಬಂದರೂ, ಕನ್ನಡದ ನೆಲದಲ್ಲೇ ಚಿತ್ರವನ್ನು ಶೂಟ್ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲೇ ಚಿತ್ರಕ್ಕೆ ಮುಹೂರ್ತ ನಡೆದಿದೆ. ಮೈಸೂರು, ಮಂಗಳೂರು ಸೇರಿದಂತೆ ಇತರ ಸ್ಥಳಗಳಲ್ಲಿ ಶೂಟಿಂಗ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ನಾಯಕಿಯಾಗಿ ರಿತಿಕಾ ಶ್ರೋತ್ರಿ ನಟಿಸುತ್ತಿದ್ದು, ಕಿರುತೆರೆ ನಟಿ ಅಜಿಂಕ್ಯಾ ರಾವುದ್, ಮೃಣಾಲ್ ಕುಲಕರ್ಣಿ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇರಲಿದ್ದಾರೆ.

  • ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ‘ದಿಯಾ’ ಬಿಡುಗಡೆಗೆ ಸಿದ್ಧ

    ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ‘ದಿಯಾ’ ಬಿಡುಗಡೆಗೆ ಸಿದ್ಧ

    2014ರಲ್ಲಿ ತೆರೆಕಂಡು ಯಶಸ್ಸು ಗಳಿಸಿದ ‘6-5 = 2′ ಎಂಬ ಹಾರಾರ್ ಸಿನಿಮಾ ನಿಮಗೆ ನೆನಪಿರಬಹುದು. ಅದೇ ಚಿತ್ರದ ನಿರ್ದೇಶಕ ಮತ್ತೆ ಸಸ್ಪೆನ್ಸ್ ಆ್ಯಂಡ್ ರೊಮ್ಯಾಂಟಿಕ್ ಸಬ್ಜೆಕ್ಟ್ ಜೊತೆಗೆ ಕಂ ಬ್ಯಾಕ್ ಮಾಡಿದ್ದಾರೆ. ಆ ಚಿತ್ರದ ಹೆಸರೇ `ದಿಯಾ’.

    ಸೋಶಿಯಲ್ ಮೀಡಿಯಾದಲ್ಲಿ ಟ್ರೈಲರ್ ಮೂಲಕ ಗಮನ ಸೆಳೆದಿರೋ ಈ ಚಿತ್ರ ನಿರ್ದೇಶಕರಿಗೆ ಮತ್ತೊಂದು ಗೆಲುವಿನ ಕಿರೀಟ ನೀಡೋದು ಖಂಡಿತ ಅಂತಿದ್ದಾರೆ ಟ್ರೈಲರ್ ಮೆಚ್ಚಿದ ಸಿನಿ ಮಂದಿ. ‘6-5 =2’ ಚಿತ್ರ ನಿರ್ದೇಶಿಸಿ ಗೆದ್ದಿದ್ದ ಅಶೋಕ್ ಕೆ.ಎಸ್ ಆರು ವರ್ಷದ ಬಳಿಕ ಮತ್ತೆ ಹೊಸ ಕಥೆ ಹೇಳಲು ಹೊಸ ತಂಡದೊಂದಿಗೆ ಬಂದಿದ್ದಾರೆ.

    ಮೊದಲ ಸಿನಿಮಾದಲ್ಲಿ ಹಾರಾರ್ ಎಲಿಮೆಂಟ್‍ನಿಂದ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದ್ದ ಅಶೋಕ್ `ದಿಯಾ’ ಚಿತ್ರದಲ್ಲಿ ರೊಮ್ಯಾಂಟಿಕ್ ಸಬ್ಜೆಕ್ಟ್ ಜೊತೆಗೆ ಪ್ರೇಕ್ಷಕರಿಗೆ ಸಸ್ಪೆನ್ಸ್ ಆ್ಯಂಡ್ ಥ್ರಿಲ್ ನೀಡೋಕೆ ಬಂದಿದ್ದಾರೆ. ಚಿತ್ರದ ಟ್ರೈಲರ್ ಎಲ್ಲರನ್ನು ಇಂಪ್ರೆಸ್ ಮಾಡಿದ್ದು, ದೀಕ್ಷಿತ್, ಖುಷಿ, ಪೃಥ್ವಿ ಅಂಬರ್, ಪವಿತ್ರ ಲೋಕೇಶ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಫೆ. 7ಕ್ಕೆ ಚಿತ್ರ ಬಿಡುಗಡೆಯಾಗುತ್ತಿದ್ದು, ಈ ಚಿತ್ರ ಯಾವ ರೀತಿ ಪ್ರೇಕ್ಷಕರಿಂದ ಪ್ರತಿಕ್ರಿಯೆ ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕು.

  • ದೀಪಾವಳಿಯ ದೀಪಾರಾಧನೆ-ಮನೆಯ ಮುಂಭಾಗ ಇರಿಸುವ ದೀಪಗಳೆಷ್ಟಿರಬೇಕು?

    ದೀಪಾವಳಿಯ ದೀಪಾರಾಧನೆ-ಮನೆಯ ಮುಂಭಾಗ ಇರಿಸುವ ದೀಪಗಳೆಷ್ಟಿರಬೇಕು?

    – ವ್ಯವಸ್ಥಿತ ದೀಪಾರಾಧನೆ ಹೇಗಿರಬೇಕು?

    ದೀಪಾವಳಿ ಬಂದ್ರೆ ಸಾಕು ಮಹಿಳೆಯರಿಗೆ ಮನೆ ಮುಂದೆ ದೀಪಗಳನ್ನು ಜೋಡಿಸುವುದೇ ಒಂದು ಸಂಭ್ರಮ. ಬಾಗಿಲು, ಕಿಟಕಿ, ರಂಗೋಲಿ, ಕಾಂಪೌಂಡ್, ಹೂ ಕುಂಡಗಳಲ್ಲಿ ಹೀಗೆ ಅನಕೂಲವಾಗುವ ಸ್ಥಳಗಳಲ್ಲಿ ದೀಪಗಳನ್ನಿಟ್ಟು ಮನೆಯನ್ನು ಅಲಂಕರಿಸುತ್ತಾರೆ. ಆದ್ರೆ ದೀಪಗಳನ್ನು ಇಂತಿಷ್ಟೇ ಸಂಖ್ಯೆಯಲ್ಲಿ ಹಚ್ಚಬೇಕೆಂದು ನಿಯಮಾವಳಿಗಳಿವೆ.

    ಪೂಜಾಗೃಹದಲ್ಲಿ ಗಜಲಕ್ಷ್ಮಿ ಸ್ವರೂಪದಲ್ಲಿರುವ ಕಾಮಾಕ್ಷಿ ದೀಪಗಳನ್ನು ಹಚ್ಚಬೇಕು. ದೀಪಗಳಿಗೆ ಮೂರು ಅಥವಾ ಐದು ಬಗೆಯ ಎಣ್ಣೆಯನ್ನು ಹಾಕುತ್ತಿರಬೇಕು. ಮನೆಯ ಮುಂಭಾಗ ಅಲಂಕರಿಸಲು ವ್ಯವಸ್ಥಿತ ದೀಪಗಳನ್ನು ಜೋಡಿಸಬೇಕೆಂದು ಹಿರಿಯರು ಹೇಳುತ್ತಾರೆ. ಹಾಗೆಯೇ ವ್ಯವಸ್ಥಿತವಾಗಿ ದೀಪಾಲಂಕಾರ ಮಾಡಬೇಕು.

    ನಿಮ್ಮ ಶಕ್ತಿಗನುಸಾರವಾಗಿ 12, 21, 28, 48, 54, 78, 108, 1008 ದೀಪಗಳನ್ನಿಟ್ಟು ದೀಪಾರಾಧನೆ ಮಾಡಬೇಕು. 12 ದೀಪಗಳಿಂದ ಆರಂಭವಾಗಿ 1008 ದೀಪಗಳವರೆಗೆ ನಿಮ್ಮ ಶಕ್ತಿಗನುಸಾರವಾಗಿ ಇರಿಸಿ ದೀಪಾರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ. ಅಲಂಕಾರ ಎಂದು ಹೆಚ್ಚು ದೀಪಗಳನ್ನು ಇರಿಸುವ ಬದಲು ಮಿತವಾಗಿ ದೀಪಗಳನ್ನು ಇರಿಸಿದರೆ ಉತ್ತಮ.

    ವ್ಯವಸ್ಥಿತವಾಗಿ ದೀಪಗಳನ್ನು ಇರಿಸುವುದರಿಂದ ದರಿದ್ರತನ, ಆಲಸ್ಯತನ ನಿವಾರಣೆಯಾಗಿ ಸುಲಭವಾಗಿ ಕಷ್ಟದ ಕೆಲಸ ಕಾರ್ಯಗಳು ನೆರವೇರುತ್ತವೆ. ಹೀಗೆ ವ್ಯವಸ್ಥಿತ ಮತ್ತು ಕ್ರಮಬದ್ಧ ದೀಪಾರಾಧನೆಯಿಂದ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು ಎನ್ನುವ ನಂಬಿಕೆಯಿದೆ.

    https://www.youtube.com/watch?v=bdq-b9Difjs