Tag: Diwali Gift

  • GST 2.0 ರಿಪೋರ್ಟ್ ಕಾರ್ಡ್ ಜನರ ಮುಂದಿಟ್ಟ ಕೇಂದ್ರ – ಜಿಎಸ್‌ಟಿ  ಉಳಿತಾಯ ಉತ್ಸವ ಸಾಧನೆ – ಯಾವ ವಸ್ತು, ಎಷ್ಟು ಸೇಲಾಯ್ತು?

    GST 2.0 ರಿಪೋರ್ಟ್ ಕಾರ್ಡ್ ಜನರ ಮುಂದಿಟ್ಟ ಕೇಂದ್ರ – ಜಿಎಸ್‌ಟಿ ಉಳಿತಾಯ ಉತ್ಸವ ಸಾಧನೆ – ಯಾವ ವಸ್ತು, ಎಷ್ಟು ಸೇಲಾಯ್ತು?

    – ನಿರ್ಮಲಾ ಸೀತಾರಾಮನ್, ಪೀಯೂಷ್ ಗೋಯಲ್, ಅಶ್ವಿನಿ ವೈಷ್ಣವ್‌ರಿಂದ ಜಿಎಸ್‌ಟಿ ದೀಪಾವಳಿ ಗಿಫ್ಟ್ ಸಾಧನೆಗಳ ವಿವರಣೆ

    ನವದೆಹಲಿ: ಜಿಎಸ್‌ಟಿ 2.0 (GST 2.0) ರಿಪೋರ್ಟ್‌ ಕಾರ್ಡನ್ನು ಕೇಂದ್ರ ಸರ್ಕಾರ ಜನರ ಮುಂದಿಟ್ಟಿದೆ. ಪ್ರಧಾನಿ ಮೋದಿ ಅವರ ದೀಪಾವಳಿ ಉಡುಗೊರೆ ವಿತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ತಿಳಿಸಿದ್ದಾರೆ.

    ನವದೆಹಲಿಯಲ್ಲಿ ಇಂದು ಜಿಎಸ್‌ಟಿ ಉಳಿತಾಯ ಉತ್ಸವದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಉಪಸ್ಥಿತರಿದ್ದರು. ಜಿಎಸ್‌ಟಿ 2.0 ಸುಧಾರಣೆಗಳು ದೇಶದ ಆರ್ಥಿಕತೆಗೆ ಪ್ರಮುಖ ಉತ್ತೇಜನ ನೀಡಿದ್ದು, ಹಬ್ಬದ ಋತುವಿನಲ್ಲಿ ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ಮತ್ತು ಗ್ರಾಹಕ ವಸ್ತುಗಳಂತಹ ಪ್ರಮುಖ ವಲಯಗಳಲ್ಲಿ ದಾಖಲೆಯ ಮಾರಾಟಕ್ಕೆ ಕಾರಣವಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ.‌ ಇದನ್ನೂ ಓದಿ: PublicTv Explainer: ಬೆಳ್ಳಿಗೂ ಬಂತು ಬಂಗಾರದ ಹೊಳಪು – ದಿಢೀರ್‌ ಏರಿಕೆ ಯಾಕೆ?

    ಸರ್ಕಾರವು ದಿನನಿತ್ಯ ಬಳಸುವ 54 ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಅವುಗಳಲ್ಲಿ ಪ್ರತಿಯೊಂದರಲ್ಲೂ ಜಿಎಸ್‌ಟಿ ಸುಧಾರಣೆಗಳಿಂದಾಗಿ ತೆರಿಗೆ ಪ್ರಯೋಜನವನ್ನು ಅಂತಿಮವಾಗಿ ಗ್ರಾಹಕರಿಗೆ ವರ್ಗಾಯಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಪ್ರಧಾನ ಮಂತ್ರಿಯವರ ದೀಪಾವಳಿ ಉಡುಗೊರೆಯನ್ನು ತಲುಪಿಸಲಾಗಿದೆ ಎಂದು ಹೇಳಿದ್ದಾರೆ.

    ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಈ ವರ್ಷದ ನವರಾತ್ರಿ ಉತ್ಸವದಲ್ಲಿ ದಾಖಲೆಯ ಮಾರಾಟ ನಡೆದಿದೆ. ಹಿಂದಿನ ನವರಾತ್ರಿ ಉತ್ಸವದಲ್ಲಿ ದಾಖಲಾದ ಮಾರಾಟಕ್ಕೆ ಹೋಲಿಸಿದರೆ ಈ ವರ್ಷದ ನವರಾತ್ರಿ ಋತುವಿನಲ್ಲಿ ಎಲೆಕ್ಟ್ರಾನಿಕ್ಸ್ ಮಾರಾಟದಲ್ಲಿ ಶೇ.25 ರಷ್ಟು ಹೆಚ್ಚಳವಾಗಿದೆ. ಜಿಎಸ್ಟಿ ಸುಧಾರಣೆಗಳಿಂದಾಗಿ ಆಹಾರದ ಬೆಲೆಗಳು ಕಡಿಮೆಯಾಗುತ್ತಿವೆ. ಎಲೆಕ್ಟ್ರಾನಿಕ್ಸ್‌ಗೆ ಹೆಚ್ಚುತ್ತಿರುವ ಬೇಡಿಕೆಯು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಉದ್ಯಮಕ್ಕೆ ನೇರವಾಗಿ ಪ್ರಯೋಜನವನ್ನು ನೀಡುತ್ತಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: 24 ಗಂಟೆಯಲ್ಲಿ 300 ನಕ್ಸಲರ ಶರಣಾಗತಿ – ಭಯೋತ್ಪಾದನೆ ಮುಕ್ತ ಪ್ರದೇಶಗಳಲ್ಲಿ ಈ ಬಾರಿ ಶಾಂತಿಯ ದೀಪಾವಳಿ: ಮೋದಿ

    ಕಳೆದ ತಿಂಗಳು ಸರ್ಕಾರವು ಜಿಎಸ್ಟಿ ಪರಿಷ್ಕರಿಸಿತು. ಆಹಾರ ಮತ್ತು ದಿನನಿತ್ಯದ ಅಗತ್ಯ ವಸ್ತುಗಳು‌, ಟಿವಿಗಳು ಮತ್ತು ಫ್ರಿಡ್ಜ್‌ಗಳಂತಹ ಗ್ರಾಹಕ ಬಾಳಿಕೆ ಬರುವ ವಸ್ತುಗಳ ಮೇಲಿನ ದರಗಳಲ್ಲಿ ತೀವ್ರ ಕಡಿತವನ್ನು ಘೋಷಿಸಿತು. ಜಿಎಸ್ಟಿ ಸುಧಾರಣೆಗಳು ನವರಾತ್ರಿಯ ಆರಂಭದ ಸೆ.22 ರಂದು ಜಾರಿಗೆ ಬಂದವು.

  • ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ – ಕೊಟ್ಟಿರಬಹುದೇನೋ ಎಂದ ಆರಗ ಜ್ಞಾನೇಂದ್ರ

    ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ – ಕೊಟ್ಟಿರಬಹುದೇನೋ ಎಂದ ಆರಗ ಜ್ಞಾನೇಂದ್ರ

    ಶಿವಮೊಗ್ಗ: ನನಗೆ ಗೊತ್ತಿರುವ ಹಾಗೆ ಸ್ವೀಟ್ಸ್, ಈ ಗಿಫ್ಟ್‌ಗಳನ್ನ (Diwali Gift) ಎಲ್ಲಾ ಸರ್ಕಾರದಲ್ಲೂ (Government) ಯಾವುದಾರೂ ಒಂದು ಸಂದರ್ಭದಲ್ಲಿ ಕೊಡ್ತಾರೆ. ಹಾಗೆ ಕೊಟ್ಟಿರಬಹುದೇನೋ ನನಗೆ ಏನೂ ಅರಿವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.

    ಸಿಎಂ ಕಚೇರಿಯಿಂದ ಪತ್ರಕರ್ತರಿಗೆ (Journalists) ಗಿಫ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಮಾತನಾಡಿದ ಸಚಿವರು, ಗಿಫ್ಟ್ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು (Chief Minister) ಈಗಾಗಲೇ ಎಲ್ಲಾ ಹೇಳಿದ್ದಾರೆ, ನಾನೇನು ಪ್ರತಿಕ್ರಿಯೆ ನೀಡಲ್ಲ. ಅದರ ಬಗ್ಗೆ ನನಗೆ ಮಾಹಿತಿಯೂ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ನಾನು ಯಾರಿಗೂ ಹಣ ನೀಡುವಂತೆ ಸೂಚನೆ ಕೊಟ್ಟಿಲ್ಲ : ಬೊಮ್ಮಾಯಿ

    ನನಗೆ ಗೊತ್ತಿರುವ ಹಾಗೆ ಸ್ವೀಟ್ಸ್ (Sweets), ಅದು-ಇದು ಗಿಫ್ಟ್‌ಗಳನ್ನ ಎಲ್ಲಾ ಸರ್ಕಾರಗಳು ನೀಡಿವೆ. ಯಾವುದಾರೂ ಸಂದರ್ಭದಲ್ಲಿ ಕೊಡ್ತಾರೆ. ಹಾಗೇ ಕೊಟ್ಟಿರಬಹುದೇನೋ ನನಗೆ ಏನೂ ಅರಿವಿಲ್ಲ. ಹಣ ಕೊಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

    ಇನ್ಸ್ಪೆಕ್ಟರ್ ನಂದೀಶ್ ಹೃದಯಾಘಾತ (Heart Attack) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಿಪಿಐ (CPI) ಅನಾರೋಗ್ಯದಿಂದ ತೀರಿ ಹೋಗಿದ್ದಾರೆ. ನನಗೆ ಬಂದಿರೋ ಮಾಹಿತಿ ಪ್ರಕಾರ, ಅವರ ಆರೋಗ್ಯ ಸರಿ ಇರಲಿಲ್ಲ ಎಂದು ಜಾರಿಕೊಂಡಿದ್ದಾರೆ.

    ಇನ್ನೂ `ಪೊಲೀಸ್ (Polic) ಹುದ್ದೆಗೆ 70-80 ಲಕ್ಷಕೊಟ್ಟು ಬರಬೇಕಿದೆ’ ಎನ್ನುವ ಎಂಟಿಬಿ ನಾಗರಾಜ್ ಆಡಿಯೋ ಹೇಳಿಕೆ ಬಗ್ಗೆ ಅವರೇ ಹೇಳಬೇಕು. ಲಂಚ ಕೊಟ್ಟಿರೋ ಬಗ್ಗೆ ನಿರ್ದಿಷ್ಟವಾಗಿ ಯಾರಾದರೂ ದೂರು ಕೊಟ್ಟರೆ ಪೊಲೀಸರಿಂದ ತನಿಖೆ ಮಾಡಿಸಬಹುದು ಎಂದು ಹಾರಿಕೆ ಉತ್ತರ ನೀಡಿದರು. ಇದನ್ನೂ ಓದಿ: ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಕಿಡ್ನ್ಯಾಪ್ ನಾಟಕವಾಡಿದ 12ರ ಬಾಲಕ

    ಶಿವಮೊಗ್ಗದಲ್ಲಿನ ಗಲಾಟೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಇಲ್ಲಿನ ಕೆಲವು ಶಕ್ತಿಗಳಿಗೆ ಕಾನೂನು ಅಂದ್ರೆ ಭಯ ಇಲ್ಲದಂತಾಗಿದೆ. ಅವರನ್ನು ಕಾನೂನು ವ್ಯಾಪ್ತಿಗೆ ತಂದು ಧಮನ ಮಾಡುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಹಿಂದೆ ಶಿವಮೊಗ್ಗ ರೌಡಿಗಳ ಟ್ರೈನಿಂಗ್‌ ಸೆಂಟರ್ ಆಗಿತ್ತು. ಈಗ ಕಡಿಮೆ ಆಗಿದೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಂದು ದರ್ಶನ್ ಅವರಿಂದ ಅಭಿಮಾನಿಗಳಿಗೆ ದೀಪಾವಳಿ ಗಿಫ್ಟ್

    ಇಂದು ದರ್ಶನ್ ಅವರಿಂದ ಅಭಿಮಾನಿಗಳಿಗೆ ದೀಪಾವಳಿ ಗಿಫ್ಟ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ದೀಪಾವಳಿ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಉಡುಗೊರೆ ನೀಡಲು ನಿರ್ಧಾರ ಮಾಡಿದ್ದಾರೆ.

    ನಟ ದರ್ಶನ್ ಅವರ 53ನೇ ಸಿನಿಮಾದ ಶೂಟಿಂಗ್ ಕೆಲಸಗಳು ನಡೆಯುತ್ತಿದ್ದು, ಈ ಮಧ್ಯೆ ಸಿನಿಮಾ ತಂಡ ಸಿನಿಮಾದ ಥೀಮ್ ಪೋಸ್ಟರ್ ಬಿಡುಗಡೆ ಮಾಡಲು ಚಿಂತನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಅವರು ಟ್ವೀಟ್ ಮಾಡುವ ಮೂಲಕ ಸ್ವತಃ ದೀಪಾವಳಿ ಪ್ರಯುಕ್ತ ಸಿನಿಮಾ ಥೀಮ್ ಪೋಸ್ಟರ್ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ದರ್ಶನ್ ಅವರು, “ದೀಪಾವಳಿ ಹಬ್ಬದ ಪ್ರಯುಕ್ತ ಸಂಜೆ 6 ಗಂಟೆಗೆ ನನ್ನ ಟ್ವಿಟ್ಟರ್/ಫೇಸ್ ಬುಕ್ ಖಾತೆಯಲ್ಲಿ #D53 ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಲಿದ್ದೇನೆ. ನಿಮ್ಮ ಪ್ರೀತಿ-ಅಭಿಮಾನಕ್ಕಾಗಿ ನಾ ಸದಾ ಚಿರಋಣಿ – ನಿಮ್ಮ ದಾಸ ದರ್ಶನ್” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ದರ್ಶನ್ ಟ್ವೀಟ್ ಮಾಡಿದ ತಕ್ಷಣ ಅಭಿಮಾನಿಗಳು ಕಾಯುತ್ತಿದ್ದೇವೆ ಬಾಸ್ ಎಂದು ರೀಟ್ವೀಟ್ ಮಾಡುತ್ತಿದ್ದಾರೆ. ಇತ್ತೀಚೆಗೆಷ್ಟೆ ದರ್ಶನ್ ಅವರು ತಮ್ಮ ಮಗ ವಿನೀಶ್ ಬರ್ತ್ ಡೇ ಪಾರ್ಟಿ ಯನ್ನು ಅದ್ಧೂರಿಯಾಗಿ ಆಚರಿಸಿದ್ದರು. ಬರ್ತ್ ಡೇ ಪಾರ್ಟಿಗೆ ಸಂಬಂಧಿಕರು ಮತ್ತು ಸಿನಿಮಾ ರಂಗದ ಸ್ನೇಹತರೆಲ್ಲರೂ ಬಂದು ಪಾಲ್ಗೊಂಡಿದ್ದರು.

    ಮಗ ವಿನೀಶ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ಸಂತಸದಿಂದ ಇದ್ದರು. ಪಾರ್ಟಿಗೆ ಬಂದಿದ್ದ ಅತಿಥಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಪಾರ್ಟಿಯಲ್ಲಿ ಅಚ್ಚರಿ ಎಂದು ದರ್ಶನ್ ಅವರಿಗೆ ಅಪಘಾತ ನಂತರ ಚಿಕಿತ್ಸೆ ಮಾಡಿ ಬ್ಯಾಂಡೇಜ್ ಹಾಕಿದ್ದರು. ಆದರೆ ಪಾಟಿಯಲ್ಲಿ ಬ್ಯಾಂಡೇಜ್ ತೆಗೆದು ನಾರ್ಮಲ್ ಆಗಿ ಇದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv