Tag: Diwali Day

  • ದೀಪಾವಳಿಯ ಫ್ಯಾಮಿಲಿ ಫೋಟೋ ಹಂಚಿಕೊಂಡು ಬಿಗ್ ಬಿ ಸಂಭ್ರಮ

    ದೀಪಾವಳಿಯ ಫ್ಯಾಮಿಲಿ ಫೋಟೋ ಹಂಚಿಕೊಂಡು ಬಿಗ್ ಬಿ ಸಂಭ್ರಮ

    ಮುಂಬೈ: ದೀಪಾವಳಿ ದಿನದಂದು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ತಮ್ಮ ಕುಟುಂಬದ ಮುದ್ದು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Amitabh Bachchan (@amitabhbachchan)

    ಈ ವರ್ಷ ದೀಪಾವಳಿಯ ಆಚರಣೆಗೆ ಬಚ್ಚನ್ ಮನೆ ತುಂಬಿಕೊಂಡಿದ್ದು, ಈ ಸಡಗರದಲ್ಲಿ ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಅವರ ಮಗಳು ಆರಾಧ್ಯ, ಶ್ವೇತಾ ಬಚ್ಚನ್ ನಂದಾ, ಅವರ ಮಗಳು ನವ್ಯಾ ಮತ್ತು ಮಗ ಅಗಸ್ತ್ಯ ಎಲ್ಲರೂ ಒಟ್ಟಿಗೆ ಕೂಡಿ ಹಬ್ಬ ಆಚಸಿದ್ದಾರೆ. ಈ ವೇಳೆ ತಾವು ಕಳೆದ ಕೆಲವು ಸಂತೋಷದ ಕ್ಷಣಗಳ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆ ರೋಗಿಗಳಲ್ಲಿ 30% ಹೆಚ್ಚಳ

    ಈ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಬಿಗ್ ಬಿ ಕುಟುಂಬ, ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಎಲ್ಲರೂ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚುತ್ತಿದ್ದಾರೆ.

    79ರ ಹರೆಯದಲ್ಲಿಯೂ ಬಿಗ್ ಬಿ ಫುಲ್ ಹ್ಯಾಂಡ್ಸಮ್ ಆಗಿ ಕಾಣಿಸುತ್ತಿದ್ದಾರೆ. ಐಶ್ವರ್ಯ ಮತ್ತು ಅಭಿಷೇಕ್ ಪೀಚ್ ಉಡುಪಿನಲ್ಲಿ, ಆರಾಧ್ಯ ನೀಲಿ ಉಡುಪಿನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಶೇರ್ ಮಾಡಿದ ಬಿಗ್ ಬಿ, ನಮ್ಮ ಕುಟುಂಬ ಒಟ್ಟಿಗೆ ಹಬ್ಬವನ್ನು ಆಚರಿಸಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಸರ್ ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ: ಇಮ್ರಾನ್ ಸರ್ದಾರಿಯಾ

    ಬಿಗ್ ಬಿ ಟ್ವಿಟ್ಟರ್‍ನಲ್ಲಿಯೂ ತಾವು, ಜಯ ಬಚ್ಚನ್, ಮಗ ಅಭಿಷೇಕ್ ಮತ್ತು ಮಗಳು ಶ್ವೇತ ಫೋಟೋ ಜೊತೆಗೆ ಚಿಕ್ಕ ವಯಸ್ಸಿನಲ್ಲಿ ತೆಗೆಸಿಕೊಂಡಿದ್ದ ಫೋಟೋವನ್ನು ಕೊಲಾಜ್ ಮಾಡಿ ಟ್ವೀಟ್ ಮಾಡಿದ್ದಾರೆ. ಈ ಚಿತ್ರಕ್ಕೆ, ಕೆಲವು ಜಾಗಗಳು ಸಮಯ ಬದಲಾದರೂ, ಬದಲಾಗುವುದಿಲ್ಲ ಎಂದು ಬರೆದು ಟ್ವೀಟ್ ಮಾಡಿದ್ದಾರೆ.