Tag: Diwakar

  • ಕೆಪಿಸಿಸಿ ವಕ್ತಾರ ದಿವಾಕರ್‌ ಆಪ್‌ ಸೇರ್ಪಡೆ

    ಕೆಪಿಸಿಸಿ ವಕ್ತಾರ ದಿವಾಕರ್‌ ಆಪ್‌ ಸೇರ್ಪಡೆ

    ಬೆಂಗಳೂರು: ಖ್ಯಾತ ವಕೀಲ ಹಾಗೂ ಕೆಪಿಸಿಸಿ ವಕ್ತಾರ ದಿವಾಕರ್ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದಾರೆ.

    ಇಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಆಮ್ ಆದ್ಮಿ ಪಕ್ಷವನ್ನು ದಿವಾಕರ್‌ ಸೇರಿದ್ದಾರೆ.

    ಮುಂದಿನ ವಿಧಾನಸಭೆ ಚುನಾವಣೆಯಲ್ಲಿ‌  ಶಿವಮೊಗ್ಗದ ಸಾಗರ ವಿಧಾನಸಭಾ ಕ್ಷೇತ್ರದಿಂದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ದಿವಾಕರ್ ಸ್ಪರ್ಧಿಸಲಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಿ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿದ ತಾಲಿಬಾನ್‌ ವಕ್ತಾರ

  • ಸಿದ್ದರಾಮಯ್ಯರನ್ನು ಟೀಕಿಸಿದ್ರೆ ನೀವು ಹಿಂದುಳಿದ ವರ್ಗದ ನಾಯಕರಾಗುವುದಿಲ್ಲ : ಈಶ್ವರಪ್ಪಗೆ ದಿವಾಕರ್ ಟಾಂಗ್

    ಸಿದ್ದರಾಮಯ್ಯರನ್ನು ಟೀಕಿಸಿದ್ರೆ ನೀವು ಹಿಂದುಳಿದ ವರ್ಗದ ನಾಯಕರಾಗುವುದಿಲ್ಲ : ಈಶ್ವರಪ್ಪಗೆ ದಿವಾಕರ್ ಟಾಂಗ್

    ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸಿದರೆ ನೀವು ಹಿಂದುಳಿದ ವರ್ಗದ ನಾಯಕರಾಗುವುದು ಇರಲಿ, ನಿಮ್ಮ ಜನಾಂಗದ ನಾಯಕರಾವುದಕ್ಕೂ ಸಾಧ್ಯವಿಲ್ಲ ಎಂದು ಕೆಪಿಸಿಸಿ ವಕ್ತಾರ ದಿವಾಕರ್ ಅವರು ಸಚಿವ ಈಶ್ವರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಜಿಲ್ಲೆಯಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡಿದ ಅವರು, ಈಶ್ವರಪ್ಪ ವಾರದಲ್ಲಿ 4 ದಿನ ಸಿದ್ದರಾಮಯ್ಯ ಅವರನ್ನು ಟೀಕೆ ಮಾಡುವುದರಲ್ಲಿಯೇ ಕಾಲ ಹರಣ ಮಾಡುತ್ತಿದ್ದಾರೆ. ನೀವು ಸಿದ್ದರಾಮಯ್ಯ ಅವರನ್ನು ಟೀಕೆ ಮಾಡಿದ ತಕ್ಷಣ ಹಿಂದುಳಿದ ವರ್ಗದ ನಾಯಕರಾಗುವುದು ಇರಲಿ, ನಿಮ್ಮ ಜನಾಂಗದ ನಾಯಕರು ಆಗುವುದಕ್ಕೂ ಸಾಧ್ಯವಿಲ್ಲ ಎಂದು ಮಾತಿನ ಚಾಟಿ ಬೀಸಿದರು.

    ನೆರೆ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದಿವಾಕರ್ ಆರೋಪಿಸಿದರು. ಇಂದಿಗೂ ನೆರೆ ಪೀಡಿತರು ಸಂಕಷ್ಟದಲ್ಲಿದ್ದಾರೆ. ಆದರೂ ಕೂಡ ಸರ್ಕಾರ ಪರಿಹಾರ ವಿತರಿಸಲು ವಿಫಲವಾಗಿದೆ. ಅಲ್ಲದೆ ಕೇಂದ್ರ ಸರ್ಕಾರದಿಂದ ಸಮರ್ಪಕ ಪರಿಹಾರ ಪಡೆಯಲು ಸಹ ಸಾಧ್ಯವಾಗಿಲ್ಲ. ಪ್ರಧಾನಿಯವರ ಬಳಿ ಹೆಚ್ಚಿನ ಪರಿಹಾರ ಕೇಳಲು ನಿಮಗೆ ಸಾಧ್ಯವಾಗದಿದ್ದರೆ, ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿ ಎಂದು ಆಗ್ರಹಿಸಿದರು.

  • ಬಿಗ್ ಬಾಸ್ ರನ್ನರ್ ಅಪ್ ದಿವಾಕರ್‌ಗೆ  ಸಿಕ್ತು ಬಂಪರ್ ಆಫರ್!

    ಬಿಗ್ ಬಾಸ್ ರನ್ನರ್ ಅಪ್ ದಿವಾಕರ್‌ಗೆ ಸಿಕ್ತು ಬಂಪರ್ ಆಫರ್!

    ಬೆಂಗಳೂರು: ಬಿಗ್ ಬಾಸ್ ಕನ್ನಡ-5 ಕಾರ್ಯಕ್ರಮದಲ್ಲಿ ಮೊದಲ ದಿನದಿಂದಲೇ ಗದ್ದಲ-ಗಲಾಟೆಯಿಂದ ಗುರುತಿಸಿಕೊಂಡಿದ್ದ ಕಾಮನ್ ಮ್ಯಾನ್ ದಿವಾಕರ್ ಅವರಿಗೆ ಬಂಪರ್ ಆಫರ್ ವೊಂದು ಹುಡುಕಿಕೊಂಡು ಬಂದಿದೆ.

    ದಿವಾಕರ್ ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದರೂ ‘ಬಿಗ್ ಬಾಸ್’ ಅಂತ ದೊಡ್ಡ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಸ್ಥಾನ ಗಿಟ್ಟಿಸಿದ ಬಳಿಕ ಕೆಂಪು ಕಲರ್ ಸ್ವಿಫ್ಟ್ ಕಾರು ಖರೀದಿ ಮಾಡಿದ್ದರು. ಅಷ್ಟೇ ಅಲ್ಲದೇ ಸಿನಿಮಾಗಳಲ್ಲಿ ನಟಿಸಬೇಕು ಎಂಬ ತಮ್ಮ ಇಚ್ಛೆಯನ್ನ ಹೊರ ಹಾಕಿದ್ದರು.

    `ಬಿಗ್ ಬಾಸ್’ ಮನೆಯಲ್ಲಿ ಇದ್ದಾಗ ಕುಡುಕನಾಗಿ ತಮ್ಮ ನಟನಾ ಪ್ರತಿಭೆಯನ್ನು ದಿವಾಕರ್ ಹೊರ ಹಾಕಿದ್ದರು. ಈಗ ಅದೆಲ್ಲವೂ ದಿವಾಕರ್ ಭವಿಷ್ಯಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಈಗ ಚಿತ್ರವೊಂದರ ಪ್ರಮುಖ ಪಾತ್ರದಲ್ಲಿ ನಟಿಸುವ ಸುವರ್ಣಾವಕಾಶ ದಿವಾಕರ್ ಅವರಿಗೆ ಲಭಿಸಿದೆ.

    `ಸಾಹೇಬ’, `ಬೃಹಸ್ಪತಿ’ ಸಿನಿಮಾಗಳ ಬಳಿಕ ನಟ ಮನೋರಂಜನ್ ರವಿಚಂದ್ರನ್ ಅಭಿನಯಿಸಲು ಒಪ್ಪಿಕೊಂಡಿರುವ ಸಿನಿಮಾ `ಚಿಲ್ಲಂ’. ಇದೇ ಚಿತ್ರದ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚುವ ಅವಕಾಶ ದಿವಾಕರ್ ಪಾಲಾಗಿದೆ. ಈ ಚಿತ್ರದಲ್ಲಿ ಹೀರೋ ಮನೋರಂಜನ್ ರವಿಚಂದ್ರನ್ ಗೆಳೆಯನ ಪಾತ್ರದಲ್ಲಿ ದಿವಾಕರ್ ಕಾಣಿಸಿಕೊಳ್ಳಲಿದ್ದಾರೆ. ನೆಗೆಟಿವ್ ಶೇಡ್ ನಲ್ಲಿ ಮಿಂಚಲಿರುವ ದಿವಾಕರ್ ಇಡೀ ಸಿನಿಮಾದಲ್ಲಿ ಹೀರೋ ಜೊತೆಯಲ್ಲೇ ಇರಲಿದ್ದಾರೆ.

    ಈ ಚಿತ್ರದಲ್ಲಿ ಮನೋರಂಜನ್ ಗಾಂಜಾ ಸ್ಮಗ್ಲರ್ ಪಾತ್ರ ನಿರ್ವಹಿಸಲಿದ್ದಾರೆ. ‘ಚಿಲ್ಲಂ’ ಚಿತ್ರಕಥೆ ಡ್ರಗ್ಸ್ ಮಾಫಿಯಾ ಸುತ್ತ ಸುತ್ತಲಿದ್ದು, ಪಕ್ಕಾ ಮಾಸ್ ಲುಕ್ ನಲ್ಲಿ ಮನೋರಂಜನ್ ಕಾಣಿಸಿಕೊಳ್ಳಲಿದ್ದಾರೆ.

    ಇದೇ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ವಿಲನ್ ಆಗಿ ಅಭಿನಯಿಸಲಿದ್ದಾರೆ. ಮುಖ್ಯ ಪಾತ್ರದಲ್ಲಿ ಹಿರಿಯ ನಟಿ ಸರಿತಾ ನಟಿಸಲಿದ್ದಾರೆ. ಇಷ್ಟೆಲ್ಲ ವಿಶೇಷತೆಗಳು ಇರುವ ‘ಚಿಲ್ಲಂ’ ಚಿತ್ರಕ್ಕೆ ಜೆ.ಚಂದ್ರಕಲಾ ಆಕ್ಷನ್ ಕಟ್ ಹೇಳಲಿದ್ದಾರೆ.

  • ದಿವಾಕರ್ ಹೊಸ ಕಾರ್ ಖರೀದಿಸಿ ಮೊದಲು ಹೋಗಿದ್ದು ಇವರ ಮನೆಗೆ

    ದಿವಾಕರ್ ಹೊಸ ಕಾರ್ ಖರೀದಿಸಿ ಮೊದಲು ಹೋಗಿದ್ದು ಇವರ ಮನೆಗೆ

    ಬೆಂಗಳೂರು: ಬಿಗ್‍ಬಾಸ್- 5ರಲ್ಲಿ ಕಾಮನ್ ಮ್ಯಾನ್ ಆಗಿ ಹೋಗಿದ್ದ ದಿವಾಕರ್ ಈಗ ಯಾವ ಸೆಲಬ್ರಿಟಿಗೂ ಕಡಿಮೆ ಇಲ್ಲ. ದಿವಾಕರ್ ಇತ್ತೀಚಿಗೆ ಒಂದು ಕಾರನ್ನು ಖರೀದಿಸಿದ್ದಾರೆ. ಕಾರನ್ನು ಶೋ ರೂಂನಿಂದ ಮನೆಗೆ ತೆಗೆದುಕೊಂಡು ಹೋಗದೇ ನೇರವಾಗಿ ಕಿಚ್ಚ ಸುದೀಪ್ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

    ದಿವಾಕರ್ ಕೆಂಪು ಬಣ್ಣದ ಸ್ವಿಫ್ಟ್ ಕಾರನ್ನು ಖರೀದಿಸಿ ಆ ಕಾರನ್ನು ನೇರವಾಗಿ ಶೋ ರೂಮಿನಿಂದ ಜೆ.ಪಿ ನಗರದಲ್ಲಿರುವ ಕಿಚ್ಚ ಸುದೀಪ್ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಸುದೀಪ್ ಅವರಿಗೆ ಸಿಹಿ ಕೊಟ್ಟು ತಮ್ಮ ಹೊಸ ಕಾರನ್ನು ತೋರಿಸಿದ್ದಾರೆ. ಸುದೀಪ್ ಸಿಹಿ ತಿಂದ ಮೇಲೆ ದಿವಾಕರ್ ಕಾರಿನಲ್ಲಿ ಒಂದು ರೌಂಡ್ ಓಡಿಸಿದ್ದಾರೆ.

    ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಾನು ರನ್ನರ್ ಅಪ್ ಆದಾಗ ಸುದೀಪ್ ನನ್ನ ಅಣ್ಣನ ಸ್ಥಾನದಲ್ಲಿ ನಿಂತು ಜೀವನದ ಬಗ್ಗೆ ಸಾಕಷ್ಟು ಸಲಹೆ ನೀಡಿದ್ದರು. ನಾನು ಹೊಸ ಕಾರನ್ನು ಖರೀದಿಸಿದಾಗ ಅದನ್ನು ಮೊದಲು ಸುದೀಪ್ ಅವರಿಂದ ಡ್ರೈವ್ ಮಾಡಿಸಬೇಕು ಎಂಬ ಆಸೆಯಿತ್ತು. ಆದರೆ ಈಗ ಆ ಆಸೆ ನೇರವೇರಿತು ಎಂದು ದಿವಾಕರ್ ತಿಳಿಸಿದ್ದಾರೆ.

    ದಿವಾಕರ್ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಅವರಿಗೆ ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಗಳ ಆಫರ್ ಬರುತ್ತಿದೆ ಎಂದು ಹೇಳಲಾಗಿದೆ. ದಿವಾಕರ್ ಈಗ ಒಂದು ಚಿತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರದಲ್ಲಿ ಜಯಶ್ರೀನಿವಾಸನ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

  • ಬಿಗ್ ಬಾಸ್ ಹಣದಲ್ಲಿ ದಿವಾಕರ್ ಗೂ ಕೊಡ್ಬೇಕಿತ್ತು ಅಂದವ್ರಿಗೆ ಚಂದನ್ ನೀಡಿದ ಚೆಂದದ ಉತ್ತರ!

    ಬಿಗ್ ಬಾಸ್ ಹಣದಲ್ಲಿ ದಿವಾಕರ್ ಗೂ ಕೊಡ್ಬೇಕಿತ್ತು ಅಂದವ್ರಿಗೆ ಚಂದನ್ ನೀಡಿದ ಚೆಂದದ ಉತ್ತರ!

    ಬೆಂಗಳೂರು: ಬಿಗ್‍ಬಾಸ್ ಸೀಸನ್ ಐದರ ಆಟ ಮುಗಿದಿದೆ. ಈ ಕಾರ್ಯಕ್ರಮದಲ್ಲಿ ತಮ್ಮ ಸ್ನೇಹದಿಂದ ಚಂದನ್ ಶಟ್ಟಿ ಹಾಗೂ ದಿವಾಕರ್ ಕರುನಾಡ ಜನತೆಯ ಮನ ಗೆದ್ದಿದ್ದಾರೆ. ಬಿಗ್ ಬಾಸ್ ಚಂದನ್ ಗೆದಿದ್ದಕ್ಕೆ ಕೆಲವರು ಸಂತೋಷಪಟ್ಟರೆ, ಇನ್ನೂ ಕೆಲವರು ಸಾಮಾಜಿಕ ಜಾಲತಣದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನೀನ್ ಗೆಲ್ಲಬೇಕು. ಗೆದ್ದ ಹಣವನ್ನು ನನ್ನ ಜೀವನದಲ್ಲಿ ನಾನು ಹೇಗೋ ಸಂಪಾದನೆ ಮಾಡುತ್ತೇನೆ ಎಂದು ಚಂದನ್ ಬಿಗ್ ಬಾಸ್ ಮನೆಯಲ್ಲಿ ದಿವಾಕರ್‍ಗೆ ಹೇಳಿದ್ದರು. ಈಗ ಚಂದನ್ ಶೆಟ್ಟಿ ಬಿಗ್ ಬಾಸ್ ಪಟ್ಟ ಪಡೆದು 50 ಲಕ್ಷ ರೂ. ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಗೆದ್ದ ಹಣದಲ್ಲಿ ಚಂದನ್ ದಿವಾಕರ್‍ಗೂ ಸ್ವಲ್ಪ ಕೋಡಬೇಕಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಹೇಳುತ್ತಿದ್ದಾರೆ.

    ಈಗ ಈ ವಿಷಯದ ಬಗ್ಗೆ ಚಂದನ್ ಶೆಟ್ಟಿ ಪ್ರತಿಕ್ರಿಯಿಸಿ, ಗೆದ್ದ ಹಣದಲ್ಲೇ ದಿವಾಕರ್‍ಗೆ ಸಹಾಯ ಮಾಡಬೇಕು ಎಂದೇನಿಲ್ಲ. ನಾನು ದಿವಾಕರ್ ಗೆ ಕೊಡಬೇಕಾಗಿರುವುದು ತುಂಬಾ ಇದೆ. ಬೇರೆ ರೀತಿಯಲ್ಲೂ ನಾನು ದಿವಾಕರ್ ಗೆ ಸಹಾಯ ಮಾಡಬಹುದು. ಸಹಾಯ ಮಾಡುತ್ತೀನಿ ಎಂದು ಚಂದನ್ ಶೆಟ್ಟಿ ಖಡಕ್ ಉತ್ತರ ನೀಡಿದ್ದಾರೆ.

    ನಾನು ಈ ಮೊದಲು ಕೆಲ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು, ಈಗ ನನ್ನ ಗೆಳೆಯ ದಿವಾಕರ್ ನಟಿಸುವ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡುತ್ತೇನೆ. ನನ್ನ ಕಲ್ಪನೆಯ ದಿವಾಕರ್ ನನ್ನು ಇಟ್ಟುಕೊಂಡು ‘ದಿವಾಕರ್- ದಿ ಸೇಲ್ಸ್ ಮ್ಯಾನ್’ ಎಂದು ಒಂದು ಕಥೆ ಮಾಡಿದ್ದೇನೆ. ಅದನ್ನು ನಾನೇ ನಿರ್ದೇಶನ ಮಾಡುತ್ತೇನೆ ಎಂದು ಚಂದನ್ ಶೆಟ್ಟಿ ತಿಳಿಸಿದ್ದಾರೆ.

    ಚಂದನ್ ಶೆಟ್ಟಿ ನಿರ್ದೇಶಕನಾಗಬೇಕೆಂದು ಸ್ಯಾಂಡಲ್ ವುಡ್ ಗೆ ಬಂದಿದ್ದರು. ಆದರೆ ಡೈರೆಕ್ಟ್ ಆಗಿ ಡೈರೆಕ್ಟರ್ ಕ್ಯಾಪ್ ಹಾಕಿಕೊಳ್ಳಲು ಗಾಂಧಿನಗರದಲ್ಲಿ ಸಾಧ್ಯವಿರದ ಕಾರಣ ಟ್ರ್ಯಾಕ್ ಸಿಂಗರ್, ಲಿರಿಕ್ ರೈಟರ್, ರ‍್ಯಾಪ್ ಸಿಂಗಿಂಗ್ ಕಮ್ ಡೈರೆಕ್ಷನ್ ಮತ್ತು ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದರು. ಆಲ್ಬಂ ಸಾಂಗ್‍ಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಹುಟ್ಟು ಹಾಕಿದರು.