Tag: divya urudaga

  • ಕುತೂಹಲ ಮೂಡಿಸುವ ನೈಜಘಟನೆ ಆಧಾರಿತ ‘ರಾಂಚಿ’ ಚಿತ್ರದ ಟೀಸರ್

    ಕುತೂಹಲ ಮೂಡಿಸುವ ನೈಜಘಟನೆ ಆಧಾರಿತ ‘ರಾಂಚಿ’ ಚಿತ್ರದ ಟೀಸರ್

    ರುದ್ರಾನಂದ ಆರ್ ಎನ್ ಹಾಗೂ ಅರುಣ್ ಕುಮಾರ್ ಎನ್ ನಿರ್ಮಾಣ‌ದ, ಶಶಿಕಾಂತ್ ಗಟ್ಟಿ (Shashikant Gatti) ನಿರ್ದೇಶನದ, ನೈಜಘಟನೆ ಆಧಾರಿತ  “ರಾಂಚಿ” (Ranchi) ಚಿತ್ರದ ಟೀಸರ್ (Teaser) ಬಿಡುಗಡೆಯಾಗಿದೆ. ನಾನು ಐ ಪಿ ಸಿ ಸೆಕ್ಷನ್ 300 ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದೆ. ಆಗ ನನಗೆ “ರಾಂಚಿ”ಯಿಂದ ಒಂದು ಕರೆ ಬರುತ್ತದೆ. ನೀವು ರೈಲ್ವೆ ಇಲಾಖೆ ಕುರಿತು ಒಂದು ಡಾಕ್ಯುಮೆಂಟರಿ ಮಾಡಿಕೊಡಬೇಕು. ರಾಂಚಿಗೆ ಬನ್ನಿ. ಅವರ ಪರಿಶುದ್ಧ ಹಿಂದಿ ಭಾಷೆ ಕೇಳಿ,   ಇದು ಸರ್ಕಾರದಿಂದ ಬಂದಿರುವ ಕರೆ ಎಂದು ತಿಳಿದು ಸಂತೋಷವಾಯಿತು. ಆಮೇಲೆ ಯೋಚನೆ ಮಾಡಿದೆ. ಸರ್ಕಾರ ಇಂತಹ ವಿಷಯವನ್ನು ಟೆಂಡರ್ ಮೂಲಕ ಕರೆಯುತ್ತಾರೆ. ಇದು ಸುಳ್ಳು ಇರಬಹುದು ಎಂದು ಅಲ್ಲಿನ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್ ಅವರಿಗೆ ಫೋನ್ ಮಾಡಿ ಈ ಬಗ್ಗೆ ಕೇಳಿದೆ. ಅವರು ಇದೆಲ್ಲಾ ಸುಳ್ಳು. ನೀವು ಇಲ್ಲಿಗೆ ಬರಬೇಡಿ ಎಂದರು. ಈ ರೀತಿ ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಈ ರೀತಿಯ ಕರೆಯಿಂದ ಮೋಸ ಹೋಗಿದ್ದಾರೆ. ಈ ವಿಷಯವನ್ನಿಟ್ಟುಕೊಂಡೆ “ರಾಂಚಿ” ಸಿನಿಮಾ ಮಾಡಿದ್ದೇವೆ.

    ನಾಯಕ ಪ್ರಭು ಮುಂಡ್ಕರ್ (Prabhu Mundkar) ಕಥೆ ಕೇಳಿ ನಟಿಸಲು ಒಪ್ಪಿದರು. ರುದ್ರಾನಂದ ಹಾಗೂ ಅರುಣ್‌ ಕುಮಾರ್ ನಿರ್ಮಾಣಕ್ಕೆ ಮುಂದಾದರು. ನೈಜಘಟನೆ ಆಧಾರಿತ ಸಿನಿಮಾ‌ವಿದು. “ರಾಂಚಿ”ಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ‌. 2020 ರಲ್ಲೇ ಸೆನ್ಸಾರ್ ಆಗಿತ್ತು. ಕೊರೋನ ಕಾರಣದಿಂದ ಬಿಡುಗಡೆ ವಿಳಂಬವಾಯಿತು.  ಒಂದೊಳ್ಳೆ ಸಿನಿಮಾ ಮಾಡಿರುವ ಖುಷಿಯಿದೆ. ದಿವ್ಯ ಉರುಡಗ (Divya Urudaga), ಟೋಟ ರಾಯ್ ಚೌಧರಿ, ಆರತಿ ನಾಯರ್, ಲಕ್ಷ್ಮಣ್ ಗೌಡ, ಸುರೇಶ್ ಹೆಬ್ಳೀಕರ್, ಉಷಾ ಭಂಡಾರಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಚಿತ್ರದ ಕುರಿತು ನಿರ್ದೇಶಕ ಶಶಿಕಾಂತ್ ಗಟ್ಟಿ ಮಾಹಿತಿ ನೀಡಿದರು. ಇದನ್ನೂ ಓದಿ:‘ಅರ್ಧಂಬರ್ಧ ಪ್ರೇಮಕಥೆ’ಯಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ

    ಕೋವಿಡ್ ನಂತರ ಜನ ಸಿನಿಮಾ ನೋಡುವ ರೀತಿ ಬದಲಾಗಿದೆ. ಜನರ  ನಿರೀಕ್ಷೆ ಬೇರೆ ತರಹ ಇದೆ. ” ಕೆ.ಜಿ.ಎಫ್”, “ಚಾರ್ಲಿ”, ” ಕಾಂತಾರ” ದಂತಹ ಚಿತ್ರಗಳ ಗೆಲುವು ಇದಕ್ಕೆ ಸಾಕ್ಷಿ. ನಾನು ಸೈಂಟಿಸ್ಟ್ ಆಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಆನಂತರ ಚಿತ್ರರಂಗಕ್ಕೆ ಬಂದೆ. ನಾನು “ಡಬಲ್ ಇಂಜಿನ್” ಚಿತ್ರದಲ್ಲಿ ನಟಿಸಬೇಕಾದರೆ ಶಶಿಕಾಂತ್ ಈ ಚಿತ್ರದ ಕಥೆ ಹೇಳಿದರು. ನನಗೂ ನೈಜಘಟನೆ ಆಧಾರಿತ ಚಿತ್ರದಲ್ಲಿ ನಟಿಸಬೇಕೆಂಬ ಆಸೆಯಿತ್ತು. ಆ ಸಮಯದಲ್ಲಿ ಈ ಕಥೆ ಕೇಳಿ, ನಟಿಸಲು ಒಪ್ಪಿದೆ ಎಂದರು ನಟ ಪ್ರಭು ಮುಂಡ್ಕರ್.

    ಪ್ರಭು ಅವರ ಮೂಲಕ ನಿರ್ದೇಶಕ ಶಶಿಕಾಂತ್ ಗಟ್ಟಿ ಅವರ ಪರಿಚಯವಾಯಿತು. ಅವರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ನಿರ್ಮಾಣಕ್ಕೆ ಮುಂದಾದೆ ಎಂದು ನಿರ್ಮಾಪಕ ಅರುಣ್ ಕುಮಾರ್ ತಿಳಿಸಿದರು. ಚಿತ್ರದಲ್ಲಿ ನಟಿಸಿರುವ ಆರತಿ ನಾಯರ್, ಲಕ್ಷ್ಮಣ್ ಗೌಡ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ದಿವ್ಯಾ ಉರುಡುಗಗೆ ಸಿಕ್ತು ಬಿಗ್ ಚಾನ್ಸ್

    ದಿವ್ಯಾ ಉರುಡುಗಗೆ ಸಿಕ್ತು ಬಿಗ್ ಚಾನ್ಸ್

    ಬಿಗ್‍ಬಾಸ್ ಸೀಸನ್ 8ರ ಫಿನಾಲೆಗೆ ದಿನಗಣನೆ ಪ್ರಾರಂಭವಾಗುತ್ತಿದೆ. ಎಲ್ಲ ಸ್ಪರ್ಧಿಗಳು ಗೆಲ್ಲಬೇಕು ಎನ್ನುವ ಹಂಬಲದಿಂದ ಆಟವನ್ನು ಪ್ರಾರಂಭಿಸಿದ್ದಾರೆ. ಹೀಗಿರುವಾಗ ದಿವ್ಯಾ ಉರುಡುಗಗೆ ಒಂದು ಬಿಗ್‍ಚಾನ್ಸ್ ಸಿಕ್ಕಿದೆ.

    ಇನ್ನೇನು ಕೆಲವೇ ದಿನಗಳು ಕಳೆದರೆ, ಬಿಗ್‍ಬಾಸ್ ಗ್ರ್ಯಾಂಡ್ ಫಿನಾಲೆ ಬರಲಿದೆ. ಸ್ಪರ್ಧಿಗಳ ಪ್ರತಿ ನಡೆಯೂ ಬಹುಮುಖ್ಯವಾಗಿರುತ್ತದೆ. ಪ್ರತಿಯೊಬ್ಬರ ವೈಯಕ್ತಿಕ ಆಟ ಗಣನೆಗೆ ಬರುತ್ತದೆ. ಹೀಗಿರುವಾಗ ದಿವ್ಯಾ ಉರುಡುಗಗೆ ಒಂದು ಬಿಗ್ ಚಾನ್ಸ್ ಸಿಕ್ಕಿರುವುದು ಫಿನಾಲೆಗೆ ಹೋಗುವ ಸ್ಪರ್ಧಿಗಳ ಪಟ್ಟಿಯಲ್ಲಿ ದಿವ್ಯಾ ಇರಲಿದ್ದಾರೆ ಎನ್ನುವುದು ಬಹುತೇಕ ಖಚಿತವಾಗಿದೆ.

    ಕ್ಯಾಪ್ಟನ್ ಆದ ದಿವ್ಯಾ ಉರುಡುಗ

    ಮುಂದಿನ ವಾರಕ್ಕೆ ಯಾರು ಕ್ಯಾಪ್ಟನ್ ಆಗುತ್ತಾರೋ, ಅವರು ನಾಮಿನೇಷನ್‍ನಿಂದ ಹೊರಗೆ ಉಳಿಯುತ್ತಾರೆ. ಗ್ರ್ಯಾಂಡ್ ಫಿನಾಲೆಗೆ ಹತ್ತಿರ ಇರುವಾಗ ನಾಮಿನೇಷನ್‍ನಿಂದ ದೂರ ಇರುವುದು ಬಹಳ ಒಳ್ಳೆಯ ನಡೆ. ಸದ್ಯ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅತ್ಯುತ್ತಮವಾಗಿ ಆಟ ಆಡಿ, ದಿವ್ಯಾ ಉರುಡುಗ ಮುಂದಿನ ವಾರಕ್ಕೆ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಶಮಂತ್, ವೈಷ್ಣವಿ, ಮಂಜು ಪಾವಗಡ, ಅರವಿಂದ್ ಮತ್ತು ದಿವ್ಯಾ ಉರುಡುಗ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ದಿವ್ಯಾಗೆ ಗೆಲುವು ಸಿಕ್ಕಿತು. ಅವರೀಗ ಕ್ಯಾಪ್ಟನ್ ಆಗಿರುವುದರಿಂದ ನಾಮಿನೇಷನ್‍ನಿಂದ ಬಚಾವ್ ಆಗಿದ್ದಾರೆ. ಅಲ್ಲಿಗೆ ಟಾಪ್ 5ರಲ್ಲಿ ದಿವ್ಯಾಗೆ ಸ್ಥಾನ ಸಿಗುವುದು ಖಚಿತವಾಗಿದೆ.

    ಈ ವಾರ ಅತ್ಯುತ್ತಮ ಪಟ್ಟ ಯಾರಿಗೆ ನೀಡಬೇಕು ಎಂಬ ಚರ್ಚೆಯೂ ನಡೆಯಿತು. ಬಹುತೇಕರ ಉತ್ತರ ದಿವ್ಯಾ ಉರುಡುಗ ಆಗಿತ್ತು. ಕಾರಣ, ಕಳೆದ ವಾರ ದಿವ್ಯಾ ಕೈಗೆ ಗಾಯವಾಗಿತ್ತು. ಬ್ಯಾಂಡೇಜ್ ಸುತ್ತಿಕೊಂಡೇ, ಈ ವಾರ ಪೂರ್ತಿ ಅವರು ಟಾಸ್ಕ್‍ಗಳನ್ನು ಆಡಿದರು. ಯಾವುದೇ ಕಾರಣಕ್ಕೂ ತಮ್ಮ ಕೈಯಲ್ಲಿ ಆಗುವುದಿಲ್ಲ ಎಂಬ ನೆಪ ಹೇಳದೇ, ಎಲ್ಲ ಟಾಸ್ಕ್‌ಗಳನ್ನು ಆಡಿದರು. ಈ ಅಂಶವನ್ನು ಗಮನಿಸಿದ ಮನೆಯ ಕೆಲವು ಸದಸ್ಯರು ದಿವ್ಯಾಗೆ ವೋಟ್ ಮಾಡಿದರು. ಒಂದೇ ದಿನ ಕ್ಯಾಪ್ಟನ್ ಪಟ್ಟ ಮತ್ತು ಅತ್ಯುತ್ತಮ ಪಟ್ಟ ದಿವ್ಯಾ ಉರುಡುಗಗೆ ಸಿಕ್ಕಿತು. ಗ್ರ್ಯಾಂಡ್ ಫಿನಾಲೆ ಹತ್ತಿರ ಇರುವಾಗ ಇದೆಲ್ಲವು ಗಣನೆಗೆ ಬರುತ್ತದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

    ನೂರು ದಿನಗಳನ್ನು ಮುಗಿಸಿರುವ ಬಿಗ್‍ಬಾಸ್ ದಿವ್ಯಾಗೆ ಕ್ಯಾಪ್ಟನ್ ಪಟ್ಟ ಸಿಕ್ಕಿರುವುದು ಇದು ಎರಡನೇ ಬಾರಿಗೆ. ಅಲ್ಲದೆ, ಬಿಗ್‍ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್ ಆದ ಮಹಿಳಾ ಅಭ್ಯರ್ಥಿ ಕೂಡ ದಿವ್ಯಾ ಉರುಡುಗ ಅವರೇ ಆಗಿದ್ದಾರೆ. ಅವರ ನಂತರ ಅರವಿಂದ್, ದಿವ್ಯಾ ಸುರೇಶ್ ಮನೆಯ ಕ್ಯಾಪ್ಟನ್ ಆಗಿದ್ದರು. ಇದೀಗ ಶೋನ ಕೊನೇ ಸಮಯದಲ್ಲಿ ದಿವ್ಯಾ ಉರುಡುಗ ಮತ್ತೊಮ್ಮೆ ಕ್ಯಾಪ್ಟನ್ ಪಟ್ಟ ಗಳಿಸಿಕೊಂಡಿದ್ದಾರೆ. ಕಳೆದ ವಾರ ಕೂಡಾ ಕಿಚ್ಚನ ಚಪ್ಪಾಳೆಯನ್ನು ದಿವ್ಯಾ ಪಡೆದುಕೊಂಡಿದ್ದಾರೆ. ಹೀಗಾಗಿ ದಿವ್ಯಾ ಫಿನಾಲೆಯಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳ ಪಟ್ಟಿಯಲ್ಲಿ ಇರಲಿದ್ದಾರೆ.

  • ನಾಳೆ ಬೆಳಗ್ಗೆ ಆ್ಯಪಲ್ ಪಲ್ಯ ಮಾಡೋಣ: ಮಂಜು

    ನಾಳೆ ಬೆಳಗ್ಗೆ ಆ್ಯಪಲ್ ಪಲ್ಯ ಮಾಡೋಣ: ಮಂಜು

    ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ವಿಜೇತರಾಗಿ ಬಿಗ್‍ಬಾಸ್ ಸೀಸನ್-8 ರಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಸದಸ್ಯರಲ್ಲಿ ದಿವ್ಯಾ ಉರುಡುಗ ಕ್ಯಾಪ್ಟನ್ ಆಗಿದ್ದು, ಮನೆಯ ಪುರುಷರಿಗೆ ಕಿಚನ್ ಏರಿಯಾದ ಜವಾಬ್ದಾರಿ ನಿಭಾಯಿಸುವಂತೆ ತಿಳಿಸಿದ್ದಾರೆ.

    ಇಷ್ಟು ದಿನ ದೊಡ್ಮನೆಯಲ್ಲಿ ಅಡುಗೆ ಮಾಡುವ ಕೆಲಸ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ವಾರ ಕ್ಯಾಪ್ಟನ್ ಆಗಿರುವ ದಿವ್ಯಾ ಉರುಡುಗ ವಿಶೇಷವಾಗಿ ಮನೆಯ ಎಲ್ಲಾ ಸದಸ್ಯರಿಗೆ ಅಡುಗೆ ಮಾಡಲು ಪುರುಷ ಸದಸ್ಯರಿಗೆ ಸೂಚಿಸಿದ್ದಾರೆ.

    ಅದರಂತೆ ಈ ವಿಚಾರವಾಗಿ ಮಂಜು ಹಾಗೂ ಅರವಿಂದ್ ಕಿಚನ್‍ನಲ್ಲಿ ಚರ್ಚೆ ನಡೆಸಿದ್ದಾರೆ. ಈ ವಾರದಲ್ಲಿ ನೀನೆಷ್ಟು ಅಡುಗೆ ಕಲಿಯುತ್ತಿಯಾ ಹಾಗೂ ನಾನು ಎಷ್ಟು ಕಲಿಯುತ್ತೀನಿ ನೋಡೋಣ. ಅಲ್ಲದೇ ಮುಂದಿನ ವಾರ ಕೂಡ ನಾವೇ ಮಾಡಬೆಕಾಗುತ್ತೇನೋ ನನಗೆ ಅದು ಬೇರೆ ಟೆನ್ಷನ್ ಆಗುತ್ತಿದೆ ಎಂದು ಮಂಜು ಅರವಿಂದ್‍ಗೆ ಹೇಳುತ್ತಾರೆ.

    ನಂತರ ನಾವು ಅಡುಗೆಯ ರುಚಿಯನ್ನು ಸ್ವಲ್ಪ ಕಡಿಮೆ ಮಾಡೋಣ ಇಲ್ಲ ಅಂದರೆ ಲಾಕ್ ಆಗಿ ಬಿಡುತ್ತೇವೆ ಎಂದು ಮಂಜು ಅಂದಾಗ, ರುಚಿ ಏನಾದರೂ ಜಾಸ್ತಿಯಾಯಿತು ಎಂದರೆ ಹುಳಿ ಹಿಂಡಿ ಬೀಡೋಣ ಎಂದು ಅರವಿಂದ್ ಹೇಳುತ್ತಾರೆ.

    ಎಲ್ಲರೂ ಟೆಸ್ಟಿಂಗ್ ಪೌಡರ್ ಕೇಳುತ್ತಾರೆ ಆದರೆ ನಾವು ಟೆಸ್ಟ್ ಲೇಸ್ ಪೌಡರ್ ಕೇಳೋಣ. ನಾವು ಮಾಡುವುದು ಚೆನ್ನಾಗಿಯೇ ಇರುತ್ತದೆ. ಹಾಗಾಗಿ ಟೆಸ್ಟ್ ಲೇಸ್ ಪೌಡರ್ ಹಾಕುವುದು ಉತ್ತಮ. ನಾಳೆ ಬೆಳಗ್ಗೆ ಆ್ಯಪಲ್ ಪಲ್ಯ ಮಾಡೋಣ ಎಂದು ಮಂಜು ಹೇಳುತ್ತಾರೆ. ಆಗ ದಿವ್ಯಾ ಉರುಡಗ, ಅರವಿಂದ್ ಜೋರಾಗಿ ನಗುತ್ತಾರೆ.

  • ಹುಡುಗಿಯರಿಗೆ ಒಲಿಯದ ಕ್ಯಾಪ್ಟನ್ ಪಟ್ಟ

    ಹುಡುಗಿಯರಿಗೆ ಒಲಿಯದ ಕ್ಯಾಪ್ಟನ್ ಪಟ್ಟ

    ಬಿಗ್‍ಬಾಸ್ ಇತಿಹಾಸಲ್ಲಿ ಮೊದಲ ಬಾರಿ ಇಷ್ಟುದಿನಗಳ ಕಾಲ ಒಬ್ಬ ಮಹಿಳಾ ಸ್ಪರ್ಧಿಯು ಕ್ಯಾಪ್ಟನ್ ಪಟ್ಟವನ್ನು ಪಡೆದಿಲ್ಲ. ಈ ವಿಚಾರವಾಗಿ ಮಹಿಳಾ ಸ್ಪರ್ಧಿಗಳಲ್ಲಿ ಕೊಂಚ ಮನಸ್ತಾಪವಾಗಿದೆ.

    ಮೊದಲ ಇನ್ನಿಂಗ್ಸ್‌ನಲ್ಲಿ ಬಿಗ್‍ಬಾಸ್ ಮನೆಯ ಮಹಿಳಾ ಸ್ಪರ್ಧಿಗಳು ಯಾರು ಕ್ಯಾಪ್ಟನ್ ಆಗಿರಲಿಲ್ಲ. ಆದರೆ ಸೆಕೆಂಡ್ ಇನ್ನಿಂಗ್ಸ್‌ನ ಮೊದಲ ವಾರವೇ ಕ್ಯಾಪ್ಟನ್ಸ್ ಟಾಸ್ಕ್ ಕೂಡ ಕೈ ತಪ್ಪಿ ಹೋಗಿದೆ. ಮೊದಲ ವಾರದಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆದಿದೆ. ಈ ಟಾಸ್ಕ್​ನಲ್ಲಿ ಮತ್ತೆ ಹುಡುಗರೇ ಮೇಲುಗೈ ಸಾಧಿಸಿದ್ದಾರೆ. ಈ ಸಲವೂ ಯಾವೊಬ್ಬ ಹುಡುಗಿಯೂ ಕ್ಯಾಪ್ಟನ್ ಆಗಿ ಆಯ್ಕೆಯಾಗಿಲ್ಲ. ಮಂಜು ಪಾವಗಡ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

    ಕ್ಯಾಪ್ಟನ್ಸಿ ಟಾಸ್ಕ್​ಗೆ ಚಾಲೆಂಜರ್ಸ್ ತಂಡದವರು ಆಯ್ಕೆಯಾಗಿದ್ದರು. ದಿವ್ಯಾ ಉರುಡುಗ, ಪ್ರಿಯಾಂಕ, ಮಂಜು, ಅರವಿಂದ್, ಶಮಂತ್, ರಘು ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಭಾಗವಹಿಸಿದ್ದರು. ಖಾಲಿ ಗ್ಲಾಸ್, ಮೊಟ್ಟೆಯನ್ನು ಇರಿಸಲಾಗಿತ್ತು. ಮೊಟ್ಟೆ ಇರುವ ಗ್ಲಾಸ್ ಒಡೆದರೆ ಔಟ್, ಬರೀ ಗ್ಲಾಸನ್ನು ಮಾತ್ರ ಕೈಯಿಂದ ಒಡೆಯಬೇಕು ಎನ್ನುವುದು ಈ ಟಾಸ್ಕ್ ನಿಯಮವಾಗಿತ್ತು.   ಈ ಆಟದಲ್ಲಿ ಮಹಿಳಾ ಮಣಿಗಳಿಗೆ ಲಕ್ ಕೈ ಕೊಟ್ಟಿದೆ.  ಮಂಜು ಕ್ಯಾಪ್ಟನ್ ಆಗಿದ್ದಾರೆ.

    38 ಗಂಟೆಗೂ ಹೆಚ್ಚಿನ ಸಮಯ ಕುರ್ಚಿ ಪಾಲಿಟಿಕ್ ಟಾಸ್ಕ್​ನಲ್ಲಿ ಭಾಗಿಯಾಗುವ ಮೂಲಕ ಮಂಜು ಪಾವಗಡ ಗೆಲ್ಲುವ ಮೂಲಕ ಪ್ರಶಾಂತ್ ಸಂಬರಗಿ ಅವರನ್ನು ಸೋಲಿಸಿದ್ದಾರೆ. ನಂತರ ಚಾಲೆಂಜರ್ಸ್ ತಂಡದ ಕಡೆಯಿಂದ ನಡೆದ ಮೊಟ್ಟೆ ಹಾಗೂ ಗ್ಲಾಸ್ ಟಾಸ್ಕ್​ನಲ್ಲಿ ಮಂಜು ಗೆಲ್ಲುವ ಮೂಲಕ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಗೆದ್ದಿದ್ದಾರೆ. ಹೀಗಾಗಿ ಈ ಬಾರಿಯೂ ಕ್ಯಾಪ್ಟನ್ ಪಟ್ಟ ಹುಡುಗರ ಪಾಲಾಗಿದೆ.

    ಈ ಕುರಿತಾಗಿ ಸುದೀಪ್ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕೇಳಿದಾಗ ಮಹಿಳಾ ಮಣಿಗಳು ಸ್ಪರ್ಧೆ ಮಾಡುತ್ತಿದ್ದೇವೆ, ಆದರೆ ಲಕ್ ಇಲ್ಲ ಎಂದು ಎನ್ನಿಸುತ್ತದೆ ಎಂದು ಹಾರಿಕೆ ಉತ್ತರವನ್ನು ಕೊಟ್ಟಿದ್ದಾರೆ.   ಮುಂದಿನ ಬಾರಿ ಕ್ಯಾಪ್ಟನ್ ಪಟ್ಟಕ್ಕೆ ಪ್ರಯತ್ನಿಸಿ, ನಾವು ಪ್ರಯತ್ನಿಸಿದ್ದೇವೆ ಸಾಧ್ಯವಾಗಿಲ್ಲ ಎನ್ನುವುದು ಸಮಂಜಸವಲ್ಲ ಎಂದು ಕಿವಿಮಾತು ಹೇಳಿ ಸುದೀಪ್ ಪ್ರೋತ್ಸಾಹವನ್ನು ಕೊಟ್ಟಿದ್ದಾರೆ. ಮುಂದಿನವಾರವಾದರೂ ಮಹಿಳಾ ಸ್ಪರ್ಧಿಗಳು ಕ್ಯಾಪ್ಟನ್ ಆಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

  • ಮದುವೆ ಆಗೋಕೆ ಸ್ವಲ್ಪ ಟೈಮ್ ಕೊಡಿ: ಅರವಿಂದ್

    ಮದುವೆ ಆಗೋಕೆ ಸ್ವಲ್ಪ ಟೈಮ್ ಕೊಡಿ: ಅರವಿಂದ್

    ಬೆಂಗಳೂರು: ಬಿಗ್‍ಬಾಸ್ ರಿಯಾಲಿಟಿ ಶೋನಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅರವಿಂದ್ ಒಂಟಿ ಮನೆಯಿಂದ ಆಚೆ ಬಂದ ಮೇಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ.

    ಬಿಗ್‍ಬಾಸ್ ಮನೆಯಿಂದ ಆಚೆ ಬರುತ್ತಿದ್ದಂತೆ ದಿವ್ಯಾ, ಅರವಿಂದ್ ಅವರು ಬಿಗ್‍ಬಾಸ್ ಮನೆಯಲ್ಲಿ ಕಳೆದಿರುವ ಕೆಲವು ಕ್ಯೂಟ್ ವೀಡಿಯೋಗಳು ಸಖತ್ ವೈರಲ್ ಆಗಿದ್ದವು. ಇದೀಗ ಅವರ ಕೆಲವು ಹೇಳಿಕೆಯ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಮದುವೆ, ಸಿನಿಮಾ, ದಿವ್ಯಾ ಅವರ ಕುರಿತಾಗಿ ಅರವಿಂದ್ ಅವರಿಗೆ ಸಾಕಷ್ಟು ಪ್ರಶ್ನೆಗಳು ಎದುರಾಗುತ್ತಿವೆ. ಅರವಿಂದ್ ಕೊಟ್ಟಿರುವ ಉತ್ತರಗಳು ಮಾತ್ರ ಬುದ್ಧಿವಂತಿಕೆಯಿಂದ ಕೂಡಿದೆ.

    ಮನೆಯಲ್ಲಿರುವ 20 ಜನರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದ ಅರವಿಂದ್, ಜೋಡಿ ಟಾಸ್ಕ್ ನಂತರ ನಟಿ ದಿವ್ಯಾ ಉರುಡುಗ ಜೊತೆಯಾಗಿದ್ದರು. ಆಗಿನಿಂದ ಇಬ್ಬರ ನಡುವೆ ಒಂದು ಉತ್ತಮವಾದ ಸ್ನೇಹವಿತ್ತು. ಬಿಗ್‍ಬಾಸ್‍ನಲ್ಲಿ ಇಬ್ಬರು ಒಟ್ಟಿಗೆ ಇರುವ ಕೆಲವಷ್ಟು ಕ್ಯೂಟ್ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು.

    ಬಿಗ್‍ಬಾಸ್ ಮನೆಯಿಂದ ಹೊರ ಬಂದ ನಂತರ ಸ್ಪರ್ಧಿಗಳು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಚಾಟ್ ಮೂಲಕ ಅಭಿಮಾನಿಗಳ ಜೊತೆ ಹಾಗೂ ಬಿಗ್ ಬಾಸ್ ಸ್ಪರ್ಧಿಗಳು ಮಾತನಾಡುತ್ತಿದ್ದಾರೆ. ಪ್ರತಿ ಸಲ ಲೈವ್ ಬಂದಾಗಲೂ ಅರವಿಂದ್‍ಗೆ ದಿವ್ಯಾ ಕುರಿತಾಗಿ ಪ್ರಶ್ನೆಗಳು ಬಂದಿವೆ. ಅರವಿಂದ್ ನೀಡಿರುವ ಉತ್ತರಗಳು ಮಾತ್ರ ಸಖತ್ ವೈರಲ್ ಆಗುತ್ತಿವೆ.

    ಸಿನಿಮಾ, ಸೀರಿಯಲ್ ಅಥವಾ ವೆಬ್‍ಸಿರೀಸ್ ಯಾವುದೇ ಅವಕಾಶಗಳು ಸಿಕ್ಕರೂ ಕೂಡ ನಾನು ಬಳಸಿಕೊಳ್ಳಲು ಇಷ್ಟಪಡುತ್ತೇನೆ. ಸದ್ಯ ಗಾಡಿ ಓಡಿಸಲು ಆಗ್ತಿಲ್ಲ, ಫಿಟ್‍ನೆಸ್ ಮುಖ್ಯ, ಹೀಗಾಗಿ ನಾನು ತಯಾರಿ ನಡೆಸುತ್ತಿದ್ದೇನೆ. ಬಿಗ್‍ಬಾಸ್ ಯಾರಿಗೂ ಅನ್ಯಾಯ ಮಾಡಲ್ಲ ಎನ್ನುವ ನಂಬಿಕೆ ಇದೆ. ವಿನ್ನರ್ ಯಾರು ಎಂದು ಹೇಳುತ್ತಾರೆ.

    ದಿವ್ಯಾ ನನಗೆ ಲಕ್ಕಿ ಚಾರ್ಮ್…ಆಕೆ ಜೊತೆಗೆ ನಾನು ಒಂದು ಟಾಸ್ಕ್ ಕೂಡ ಸೋತಿಲ್ಲ. ಒಳ್ಳೆಯ ವ್ಯಕ್ತಿ ಹಾಗೂ ತುಂಬಾನೇ ಪಾಸಿಟಿವ್ ಆಗಿರುತ್ತಾರೆ. ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳಿಗೂ ಕಾಂಪಿಟೇಷನ್ ಕೊಡುವ ಹುಡುಗಿ ಈಕೆ. ಇಬ್ಬರ ಸ್ನೇಹ ಹೀಗೆ ಮುಂದುವರಿದುಕೊಂಡು ಹೋಗಬೇಕು ಅಂದುಕೊಂಡಿರುವೆ. ನೋಡೋಣ ಹೇಗೆ ಏನು ಆಗುತ್ತದೆ ಎಂದು…ಮದುವೆ ಆಗೋಕೆ ಸ್ವಲ್ಪ ಟೈಮ್ ಕೊಡಿ ಎಂದ ಬಿಗ್ ಬಾಸ್ ಕೆಪಿ ಅರವಿಂದ್ ಹೇಳಿದ್ದಾರೆ

    ಅರವಿಂದ್, ದಿವ್ಯಾ ಜೋಡಿಯನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಇಬ್ಬರ ಜೋಡಿ ಕುರಿತಾಗಿ ನೆಟ್ಟಿಗರು ತುಂಬಾ ಪ್ರೀತಿಯಿಂದ ಮಾತನಾಡಿಕೊಳ್ಳುತ್ತಿದ್ದಾರೆ.

  • ಸಕಲಕಲಾ ವಲ್ಲಭನ ಫೇಸ್ ಟು ಫೇಸ್

    ಸಕಲಕಲಾ ವಲ್ಲಭನ ಫೇಸ್ ಟು ಫೇಸ್

    ಸಂದೀಪ್ ಜನಾರ್ಧನ್ ನಿರ್ದೇಶನದ ಫೇಸ್ ಟು ಫೇಸ್ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಹೊಸ ಥರದ ಕಥೆ, ಸ್ಕ್ರೀನ್ ಪ್ಲೇ ಮುಂತಾದ ವಿಶೇಷತೆಗಳನ್ನು ಹೊಂದಿರೋ ಈ ಚಿತ್ರದ ಮೂಲಕ ರೋಹಿತ್ ಭಾನು ಪ್ರಕಾಶ್ ಎಂಬ ಸಕಲಕಲಾ ವಲ್ಲಭ ನಾಯಕನಾಗಿ ಗ್ರ್ಯಾಂಡ್ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.

    ರೋಹಿತ್ ಈ ಹಿಂದೆ ರವಿಚಂದ್ರನ್ ಅಭಿನಯದ ದೃಶ್ಯ ಚಿತ್ರದಲ್ಲಿ ಖಳನಾಗಿ ಅಬ್ಬರಿಸಿದ್ದವರು. ಆ ನಂತರವೂ ಹಲವಾರು ಚಿತ್ರಗಳಲ್ಲಿ ನಟಿಸಿ ಗುರುತಾಗಿದ್ದರು. ಪ್ರೋ ಕಬಡ್ಡಿ ಪಂದ್ಯಾಟದ ಕಾಮೆಂಟರಿಗೂ ಧ್ವನಿಯಾಗುತ್ತಾ ಮತ್ತೊಂದೆಡೆ ಹೋಟೆಲ್ ವ್ಯವಹಾರವನ್ನೂ ನಡೆಸುತ್ತಿರೋ ಅವರ ಪಾಲಿಗೆ ನಟನೆ ಪ್ರಧಾನ ಗುರಿ. ಹಲವಾರು ವರ್ಷಗಳಿಂದ ನಾಯಕ ನಟನಾಗಬೇಕೆಂಬ ಹಂಬಲ ಹೊಂದಿ, ಹಂತ ಹಂತವಾಗಿ ಬೆಳೆದು ಬಂದಿರೋ ಅವರೀಗ ಫೇಸ್ ಟು ಫೇಸ್ ಮೂಲಕ ನಾಯಕನಾಗೋ ಕನಸನ್ನು ನನಸು ಮಾಡಿಕೊಂಡಿದ್ದಾರೆ.

    ಈ ಚಿತ್ರದಲ್ಲಿ ಪೂರ್ವಿ ಜೋಷಿ ಮತ್ತು ಹುಲಿರಾಯ ಖ್ಯಾತಿಯ ದಿವ್ಯಾ ಉರುಡಗ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಇವರೆಲ್ಲರ ಪಾತ್ರಗಳನ್ನೂ ಕೂಡಾ ಭಿನ್ನವಾಗಿಯೇ ಸಂದೀಪ್ ಕಟ್ಟಿ ಕೊಟ್ಟಿದ್ದಾರಂತೆ. ಈಗಾಗಲೇ ಇದರ ಒಂದಷ್ಟು ಹಾಡುಗಳು ಟ್ರೆಂಡಿಂಗ್‍ನಲ್ಲಿವೆ. ಟ್ರೈಲರ್ ಕೂಡಾ ಜನಮನ ಸೆಳೆದಿದೆ. ಈ ಮೂಲಕವೇ ಎಲ್ಲ ವರ್ಗದ ಪ್ರೇಕ್ಷಕರ ಆಸಕ್ತಿಯ ಕೇಂದ್ರಬಿಂದುವಾಗಿರೋ ಈ ಚಿತ್ರ ಥೇಟರಿಗೆ ಬರಲು ದಿನಗಣನೆ ಶುರುವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv