Tag: divya spandana

  • ಕಾಂಗ್ರೆಸ್‌ಗೆ ಸ್ವೀಟೆಸ್ಟ್‌ ವಿಕ್ಟರಿ – ರೇವಂತ್‌ ರೆಡ್ಡಿಗೆ ಅಭಿನಂದನೆ ಸಲ್ಲಿಸಿದ ನಟಿ ರಮ್ಯಾ

    ಕಾಂಗ್ರೆಸ್‌ಗೆ ಸ್ವೀಟೆಸ್ಟ್‌ ವಿಕ್ಟರಿ – ರೇವಂತ್‌ ರೆಡ್ಡಿಗೆ ಅಭಿನಂದನೆ ಸಲ್ಲಿಸಿದ ನಟಿ ರಮ್ಯಾ

    ಹೈದರಾಬಾದ್: ಪಂಚರಾಜ್ಯ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ (4 State Election Results) ಹೊರಬಿದ್ದಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್‌ ಜಯ ಸಾಧಿಸಿದೆ. 119 ಸ್ಥಾನಗಳ ಪೈಕಿ 69 ಸ್ಥಾನಗಳಲ್ಲಿ ಸ್ಪಷ್ಟ ಬಹುಮತ ಕಾಯ್ದುಕೊಂಡಿದ್ದು, ಅಧಿಕೃತ ಘೋಷಣೆ ಆಗಬೇಕಿದೆ. ಆಡಳಿತಾರೂಢ BRS ಹಿಂದಿಕ್ಕಿ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಕಾಂಗ್ರೆಸ್‌ ಮುನ್ನಡೆಸಿದ ಶ್ರೇಯ ರೇವಂತ್ ರೆಡ್ಡಿ (Revanth Reddy) ಅವರಿಗೆ ಸಲ್ಲುತ್ತದೆ ಎಂಬುದನ್ನು ‘ಕೈ’ ನಾಯಕರು ಪ್ರತಿಪಾದಿಸಿದ್ದಾರೆ.

    ಈ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಸಂಸದೆ ಹಾಗೂ ಸ್ಯಾಂಡಲ್‌ವುಡ್‌ ನಟಿ ರಮ್ಯಾ (Actor Ramya), ರೇವಂತ್‌ ರೆಡ್ಡಿ ಹಾಗೂ ಕಾಂಗ್ರೆಸ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಸೋಶಿಯಲ್‌ ಮೀಡಿಯಾ X ಖಾತೆಯಲ್ಲಿ ರೇವಂತ್‌ ರೆಡ್ಡಿ ಫೋಟೋ ಹಂಚಿಕೊಂಡಿದ್ದು, ಕಾಂಗ್ರೆಸ್‌ಗೆ ಸ್ವೀಟೆಸ್ಟ್‌ ವಿಕ್ಷರಿ (ಅತ್ಯಂತ ಸಿಹಿಯಾದ ಜಯ) ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ಅನ್ನು ರೇವಂತಿ ರೆಡ್ಡಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್‌ಗೆ ಟ್ಯಾಗ್‌ ಮಾಡಿದ್ದಾರೆ. ಇದನ್ನೂ ಓದಿ: RSS, ABVP ಕಾರ್ಯಕರ್ತ ರೇವಂತ್‌ ರೆಡ್ಡಿ ಈಗ ಕಾಂಗ್ರೆಸ್‌ ಸಿಎಂ ರೇಸ್‌ನಲ್ಲಿ – ತೆಲಂಗಾಣಕ್ಕೆ ಸಿಎಂ ಯಾರು?

    ಸದ್ಯ ಪಕ್ಷದ ಗೆಲುವಿಗೆ ಕಾರಣರಾಗಿರುವ ರೇವಂತ್‌ ರೆಡ್ಡಿ ಅವರು ಸಿಎಂ ರೇಸ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ರೇವಂತ್ ರೆಡ್ಡಿ ಹೈದರಾಬಾದ್‌ನಲ್ಲಿರುವ ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ‘ಸಿಎಂ.. ಸಿಎಂ’ ಎಂದು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: 51,000 ಮತಗಳ ಅಂತರದ ಜಯ – ಗೆಲುವನ್ನು ಮೋದಿಗೆ ಅರ್ಪಿಸಿದ ವಸುಂಧರಾ ರಾಜೆ

    ಯಾರು ಈ ರೇವಂತ್ ರೆಡ್ಡಿ?
    ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (TPCC) ಅಧ್ಯಕ್ಷ ಅನುಮುಲಾ ರೇವಂತ್ ರೆಡ್ಡಿ, (56) ಅವರು ಪಕ್ಷದ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಆದರೆ ಇದಕ್ಕೂ ಮೊದಲು ರೇವಂತ್ ರೆಡ್ಡಿ ಆರ್‌ಎಸ್‌ಎಸ್ ಮತ್ತು ಎಬಿವಿಪಿ ಯಿಂದ ಗುರುತಿಸಿಕೊಂಡಿದ್ದವರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ರೆಡ್ಡಿ ಅವರು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಪರ ಅವರು ಕ್ಯಾಂಪೇನ್ ನಡೆಸುತ್ತಿದ್ದಾಗ, ಅವರ ಹಿನ್ನೆಲೆ ಹೆಚ್ಚು ಚರ್ಚೆಯಾಗುತ್ತಿದೆ. ರೇವಂತ್ ರೆಡ್ಡಿ ಆರ್‌ಎಸ್‌ಎಸ್ ಕೈಗೊಂಬೆ ಎಂದು ಅನೇಕರು ಟೀಕಿಸಿದ್ದೂ ಉಂಟು.

    ರೇವಂತ್ ರೆಡ್ಡಿ ಅವರು ಎಬಿವಿಪಿಯಿಂದ ರಾಜಕೀಯ ಜೀವನ ಆರಂಬಿಸಿದರು. ನಂತರ ಟಿಡಿಪಿಗೆ ಹೋದರು. 2009 ಮತ್ತು 2014 ರ ಚುನಾವಣೆಯಲ್ಲಿ ಕೊಡಂಗಲ್ ಕ್ಷೇತ್ರದಿಂದ ಗೆಲುವು ಸಾಧಿಸಿದರು. ಲಂಚ ಹಗರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದ ನಂತರ ಅವರು ಟಿಡಿಪಿ ತೊರೆದರು. 2017 ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್‌ ಸೇರಿದರು. 2018 ರ ಚುನಾವಣೆಯಲ್ಲಿ ಬಿಆರ್‌ಎಸ್‌ ವಿರುದ್ಧ ಸ್ಪರ್ಧಿಸಿ ಕೊಡಂಗಲ್‌ನಿಂದ ಸೋತರು. ಆದರೆ ಮತ್ತೆ ಪುಟಿದೆದ್ದು 2019 ರ ಲೋಕಸಭೆ ಚುನಾವಣೆಯಲ್ಲಿ ಮಲ್ಕಾಜ್‌ಗಿರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದರು. ಜೂನ್ 2021 ರಲ್ಲಿ ಅವರನ್ನು TPCC ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

  • ಲಾಂಗ್ ಶರ್ಟ್ ನಲ್ಲಿ ಕಾಣಿಸಿಕೊಂಡ ಸ್ಯಾಂಡಲ್ ವುಡ್ ಕ್ವೀನ್: ಫ್ಯಾನ್ಸ್ ಕಾಮೆಂಟ್ ಬೆಂಕಿ

    ಲಾಂಗ್ ಶರ್ಟ್ ನಲ್ಲಿ ಕಾಣಿಸಿಕೊಂಡ ಸ್ಯಾಂಡಲ್ ವುಡ್ ಕ್ವೀನ್: ಫ್ಯಾನ್ಸ್ ಕಾಮೆಂಟ್ ಬೆಂಕಿ

    ತ್ತಿಚೀನ ವರ್ಷಗಳಲ್ಲಿ ಮೋಹಕ ತಾರೆ ರಮ್ಯಾ (Ramya)  ಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುವುದು ರೂಢಿಯಾಗಿತ್ತು. ಅದರಲ್ಲೂ ರಾಜಕಾರಣಕ್ಕೆ ಪ್ರವೇಶ ಪಡೆದ ನಂತರ ರಮ್ಯಾ ಕಾಟನ್ ಸೀರೆಯಲ್ಲಿ ಮಿಂಚುತ್ತಿದ್ದರು. ಸಿನಿಮಾ ಕಾರ್ಯಕ್ರಮವಿರಲಿ, ರಾಜಕೀಯದ ಪಡಸಾಲೆಯಲ್ಲೇ ಕಾಣಿಸಿಕೊಳ್ಳಲಿ ಗರಿಗರಿ ಸೀರೆಯಲ್ಲಿ ಅವರು ಕಂಗೊಳಿಸುತ್ತಿದ್ದರು. ಆದರೆ, ಅಚ್ಚರಿ ಎನ್ನುವಂತೆ ರಮ್ಯಾ ಲಾಂಗ್ ಶರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.

    ಬಿಡುವಿನ ಸಮಯದಲ್ಲಿ ವಿದೇಶಗಳನ್ನು ಸುತ್ತುವ ಅವರು, ಇದೀಗ ಯುರೋಪ್ (Europe) ದೇಶದ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ವೇಳೆ ಲಾಂಗ್ ಶರ್ಟ್ (Long Shirt) ಧರಿಸಿದ್ದು, ಆ ಫೋಟೋವನ್ನು ಅವರು ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋ ಸಖತ್ ವೈರಲ್ ಕೂಡ ಆಗಿದ್ದು, ರಮ್ಯಾ ಹೀಗೂ ಉಂಟಾ? ಎಂದು ಪ್ರಶ್ನೆ ಮಾಡಿದ್ದಾರೆ. ಯುರೋಪ ಸೌಂದರ್ಯವನ್ನೂ ಮೀರಿಸುವಂತೆ ರಮ್ಯಾ ಆ ಫೋಟೋದಲ್ಲಿ ಕಂಡಿದ್ದಾರೆ. ಈ ಫೋಟೋಗೆ ರಮ್ಯಾ ಅಭಿಮಾನಿಗಳು ಪಾಸಿಟಿವ್ ಮತ್ತು ನೆಗೆಟಿವ್ ಕಾಮೆಂಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ:ಪ್ಯಾರಿಸ್‌ನ ರೊಮ್ಯಾಂಟಿಕ್‌ ಫೋಟೋ ಹಂಚಿಕೊಂಡ ಅದಿತಿ ಪ್ರಭುದೇವ

    ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಗೆ ಮತ್ತೆ ಪ್ರವೇಶ ಮಾಡಿರುವ ರಮ್ಯಾ, ಒಂದು ಸಿನಿಮಾವನ್ನು ಆಗಲೇ ನಿರ್ಮಾಣ ಮಾಡಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹೆಸರಿನ ಸಿನಿಮಾ ಸಂಪೂರ್ಣ ಶೂಟಿಂಗ್ ಮುಗಿಸಿದೆ. ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದ್ದು, ಮೊದ ಮೊದಲು ಈ ಚಿತ್ರಕ್ಕೆ ರಮ್ಯಾ ಅವರೇ ನಾಯಕಿ ಎಂದು ಹೇಳಲಾಗಿತ್ತು. ನಂತರ ಅದು ಬದಲಾಯಿತು. ಈ ಚಿತ್ರದಲ್ಲಿ ರಮ್ಯಾ ಇಲ್ಲ ಎನ್ನುವುದು ಅಭಿಮಾನಿಗಳಿಗೆ ನಿರಾಸೆ ತರಿಸಿತ್ತು.

     

     

    View this post on Instagram

     

    A post shared by Ramya|Divya Spandana (@divyaspandana)

    ಈ ನಡುವೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ ರಮ್ಯಾ. ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿರುವ ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮುಹೂರ್ತವಾಗಿದ್ದು ಇನ್ನೂ ಶೂಟಿಂಗ್ ಶುರುವಾಗಿಲ್ಲ. ಹಾಗಾಗಿ ಈ ಸಿನಿಮಾದಲ್ಲಿ ಅವರು ಇರುತ್ತಾರಾ? ಅಥವಾ ಈ ಅವಕಾಶವನ್ನೂ ಕೈ ಬಿಡ್ತಾರಾ ಗೊತ್ತಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಭಿಮಾನಿಗಳಿಗೆ ನಾಳೆ  ಸಿಹಿ ಸುದ್ದಿ ಕೊಡ್ತಾರಂತೆ ‘ಸ್ಯಾಂಡಲ್ ವುಡ್ ಕ್ವೀನ್’ ರಮ್ಯಾ

    ಅಭಿಮಾನಿಗಳಿಗೆ ನಾಳೆ ಸಿಹಿ ಸುದ್ದಿ ಕೊಡ್ತಾರಂತೆ ‘ಸ್ಯಾಂಡಲ್ ವುಡ್ ಕ್ವೀನ್’ ರಮ್ಯಾ

    ದೇಶಕ್ಕೆಲ್ಲ ಒಂದು ಕಡೆ ಗಣೇಶ್ ಹಬ್ಬವಾದರೆ, ಮತ್ತೊಂದು ಕಡೆ ರಮ್ಯಾ ಅಭಿಮಾನಿಗಳಿಗೆ ಡಬಲ್ ಧಮಾಕಾ. ಯಾಕೆಂದರೆ, ಗಣೇಶ್ ಹಬ್ಬದ ದಿನದಂದು ಸ್ಯಾಂಡಲ್ ವುಡ್ ಕ್ವೀನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡಲಿದ್ದಾರಂತೆ. ಈ ಕುರಿತು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾಳೆ ಹನ್ನೊಂದು ಗಂಟೆಗೆ ಸಿಹಿ ಸುದ್ದಿ ಕೊಡುವೆ. ಈ ಸುದ್ದಿಯನ್ನು ಕೊಡಲು ನಾನು ಎಕ್ಸೈಟ್ ಆಗಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

    RAMYA

    ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಲು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದೊಂದು ವರ್ಷದಿಂದ ಅವರು ಸಿನಿಮಾ ರಂಗಕ್ಕೆ ವಾಪಸ್ಸಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈಗದು ನಿಜವಾಗುವ ಕಾಲ ಬಂದಿದೆ. ಬಹುಶಃ ಅದೇ ಸುದ್ದಿಯನ್ನೇ ನಾಳೆ ಅಭಿಮಾನಿಗಳಿಗೆ ಕೊಡಲಿದ್ದಾರೆ ಎನ್ನುವುದು ಹಲವರ ಊಹೆ. ಅದು ನಿಜವೂ ಆಗಿರಬಹುದು. ಯಾಕೆಂದರೆ,  ಅನೇಕ ದಿನಗಳಿಂದ ಅವರು ಸಿನಿಮಾ ಸಂಬಂಧಿ ನಾನಾ ರೀತಿಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಸೋನುಗೆ ಚೈತ್ರಾ ಚಪ್ಪಲಿ ಗಿಫ್ಟ್ ಕೊಟ್ಟಿದ್ಯಾಕೆ..?

    ಮೂಲಗಳ ಪ್ರಕಾರ ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಲಿರುವ ಸಿನಿಮಾವನ್ನು ರಮ್ಯಾ ಅವರು ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಇದೇ ಸಿನಿಮಾದಲ್ಲಿ ಅವರು ಪಾತ್ರವನ್ನೂ ಮಾಡಲಿದ್ದಾರಂತೆ. ಬಹುಶಃ ನಾಳೆ ಅದೇ ಸಿಹಿ ಸುದ್ದಿಯನ್ನು ಅವರು ಅಭಿಮಾನಿಗಳಿಗೆ ಕೊಡಬಹುದು ಎನ್ನಲಾಗುತ್ತಿದೆ. ಅದೇನು ಅಂತ ತಿಳಿದುಕೊಳ್ಳಲು ನಾಳೆವರೆಗೂ ಕಾಯಬೇಕು.

    Live Tv
    [brid partner=56869869 player=32851 video=960834 autoplay=true]

  • 18ನೇ ವಯಸ್ಸಿನಲ್ಲಿ ಮೋಹಕತಾರೆ ರಮ್ಯಾ ಹೇಗಿದ್ದರು ನೋಡಿ

    18ನೇ ವಯಸ್ಸಿನಲ್ಲಿ ಮೋಹಕತಾರೆ ರಮ್ಯಾ ಹೇಗಿದ್ದರು ನೋಡಿ

    ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಆಗ್ತಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ರಮ್ಯಾ ಅವರ ಹಳೆಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ತಾರೆಯರು ತಮ್ಮ ಹಳೆಯ ಫೋಟೋಗಳ ಜೊತೆಗೆ ಆ ನೆನಪನ್ನ ಮೆಲುಕು ಹಾಕೋದು ಸಹಜ. ಇದೀಗ ರಮ್ಯಾ ತಮ್ಮ 18ನೇ ವಯಸ್ಸಿನ ಫೋಟೋವನ್ನ ಶೇರ್ ಮಾಡಿದ್ದಾರೆ. ಈ ಫೋಟೋ ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ. ತನ್ನ 21ನೇ ವಯಸ್ಸಿಗೆ ಸ್ಯಾಂಡಲ್‌ವುಡ್‌ಗೆ `ಅಭಿ’ ಚಿತ್ರದ ಮೂಲಕ ರಮ್ಯಾ ಎಂಟ್ರಿ ಕೊಟ್ಟಿದ್ದರು. ಈ ಫೋಟೋ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ಕಾಲೇಜಿನ ಐಡಿ ಕಾರ್ಡ್‌ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಬೈಕಾಟ್ ಲಾಲ್ ಸಿಂಗ್ ಚಡ್ಡಾ: ಕ್ಯಾರೆ ಅನಬಾರದು ಎಂದು ಟಾಂಗ್ ಕೊಟ್ಟ ನಟಿ ಕರಿಷ್ಮಾ

    `18ನೇ ವಯಸ್ಸಿನಲ್ಲಿ ನಾನು’ ಎಂಬ ಅಡಿಬರಹದೊಂದಿಗೆ ರಮ್ಯಾ ಶೇರ್ ಮಾಡಿದ್ದಾರೆ. ನಟಿಯ ಕಾಲೇಜು ದಿನದ ಲುಕ್ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಅಂದಿನಿಂದ ಇಂದಿನವೆರೆಗೂ ರಮ್ಯಾ ಅವರ ಚಾರ್ಮ್, ಆಕೆಯ ಮೇಲಿರುವ ಕ್ರೇಜ್ ಅಭಿಮಾನಿಗಳಿಗೆ ಕಿಂಚಿಂತೂ ಕಡಿಮೆ ಆಗಿಲ್ಲ. ಸದ್ಯ ರಮ್ಯಾ ಸಿನಿಮಾಗೆ ಬರೋದನ್ನೇ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲೈವ್ ಬಂದಿದ್ದೇ ಬಂದಿದ್ದು ರಮ್ಯಾ ಫುಲ್ ಟ್ರೋಲ್..!

    ಲೈವ್ ಬಂದಿದ್ದೇ ಬಂದಿದ್ದು ರಮ್ಯಾ ಫುಲ್ ಟ್ರೋಲ್..!

    – ಕ್ವೀನ್ ಬ್ಯೂಟಿಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್, ಮೋಹಕ ನಟಿ ರಮ್ಯಾ ಅವರು ಹಲವು ವರ್ಷಗಳ ಬಳಿಕ ಲೈವ್ ಬಂದು ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ. ಅಲ್ಲದೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬರೀ ರಮ್ಯಾರದ್ದೇ ಹವಾ ಎನ್ನುವಂತಾಗಿದೆ.

    ಹೌದು. ಶುಕ್ರವಾರ ರಾತ್ರಿ ಆರ್ ಜೆ ಒಬ್ಬರು, ರಮ್ಯಾ ಅವರನ್ನು ಇನ್‍ಸ್ಟಾದಲ್ಲಿ ಲೈವ್ ಗೆ ಕೂರಿಸಿದ್ದಾರೆ. ಈ ವೇಳೆ ರಮ್ಯಾ ತಮ್ಮ ಹಲವು ವಿಚಾರಗಳನ್ನು ಅವರೊಂದಿಗೆ ಹಂಚಿಕೊಂಡಿದ್ದಾರೆ. ಮದುವೆ, ಊಟ, ಇಷ್ಟವಾಗಿರುವ ವಸ್ತುಗಳು, ಬ್ಯೂಟಿ ಸೀಕ್ರೆಟ್ ಬಗ್ಗೆ ರಮ್ಯಾ ಅವರು ಲೈವ್ ನಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ನಟಿ ಲೈವ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಆಕೆಗಾಗಿ ಕಾಯುತ್ತಿದ್ದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ಲೈವ್ ನಿಂದ ಅವರ ಫೋಟೋಗಳನ್ನು ಕಟ್ ಮಾಡಿಕೊಂಡು ವೈರಲ್ ಮಾಡಿದ್ದಾರೆ. ಇದನ್ನೂ ಓದಿ: ನಾನು ಇನ್ನೂ ಲಸಿಕೆ ಪಡೆದುಕೊಂಡಿಲ್ಲ: ರಮ್ಯಾ

    ಸದ್ಯ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗಿದ್ದಾರೆ. ಇಷ್ಟು ದಿನ ಕೆಲವು ಫೋಟೋಗಳನ್ನು ಮಾತ್ರ ಶೇರ್ ಮಾಡಿಕೊಳ್ಳುತ್ತಿದ್ದ ರಮ್ಯಾ, ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಅಭಿಮಾನಿಗಳಿಗೂ ಅವರನ್ನು ನೋಡುವ ಕುತೂಹಲ ಹೆಚ್ಚಾಗಿತ್ತು. ಇದೀಗ ಏಕಾಏಕಿ ಲೈವ್ ಗೆ ಬಂದು ರಮ್ಯಾ ತಮ್ಮ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಕೊನೆಗೂ ಲೈವ್ ಬಂದು ತಮ್ಮ ದರ್ಶನ ಮಾಡಿಸಿದ್ದರಿಂದ ಅಭಿಮಾನಿಗಳು ನಟಿಯ ಬ್ಯೂಟಿಗೆ ಫಿದಾ ಆಗಿದ್ದಾರೆ. ಹಲವು ವರ್ಷಗಳ ಬಳಿಕ ಕಂಡ ನಟಿಯನ್ನು ಮತ್ತೊಮ್ಮೆ ಚಿತ್ರರಂಗಕ್ಕೆ ಬರುವಂತೆ ಒತ್ತಾಯಿಸಿ ಟ್ರೋಲ್ ಮಾಡಿದ್ದಾರೆ. ಕೇವಲ ಫೋಟೋಗಳು ಮಾತ್ರವಲ್ಲದೆ ಹಾಡುಗಳನ್ನು ಕೂಡ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನೂ ಓದಿ: ನನ್ನ ಮದುವೆಗೆ ಯಾರೂ ಬರಲ್ಲ ಅಂತೆ: ರಮ್ಯಾ

    ‘ಯಾರೇ ಬರಲಿ, ಯಾರೇ ಇರಲಿ, ನಿನ್ನ ರೇಂಜಿಗೆ ಯಾರೂ ಇಲ್ಲ’ ಎಂದು ನಟಿಯ ಬ್ಯೂಟಿಯನ್ನು ಅಭಿಮಾನಿಗಳು ಬಣ್ಣಿಸಿದ್ದಾರೆ. ಅಲ್ಲದೆ ‘ನೀವು ನಮ್ಮ ಆಲ್ ಟೈಂ ಪೇವರೇಟ್.. ಕನ್ನಡ ಚಿತ್ರರಂಗ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದೆ. ದಯವಿಟ್ಟು ಮತ್ತೆ ನಟಿಸಿ’ ಎಂದು ಒತ್ತಡ ಹಾಕಿದ್ದಾರೆ. ಇನ್ನೂ ‘ಲೈವ್ ಬಂದಿದಕ್ಕೇ ಇಷ್ಟೊಂದು ಹವಾ, ಇನ್ನು ತೆರೆ ಮೇಲೆ ಬಂದ್ರೆ ಹೆಂಗೆ..’ ಎಂದು ಪ್ರಶ್ನಿಸುವ ಮೂಲಕ ಟ್ರೋಲ್ ಮಾಡಿದ್ದಾರೆ. ಇತ್ತ ನಟಿ ಕೂಡ ಮತ್ತೊಮ್ಮೆ ತಮ್ಮ ಇನ್ ಸ್ಟಾ ಖಾತೆಯಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಬಳಿ ಎಲ್ಲರಿಗೂ ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ ಕ್ಷಮಿಸಿ ಎಂದು ಹೇಳುತ್ತಾ ಧನ್ಯವಾದ ಅರ್ಪಿಸಿದ್ದಾರೆ. ಇದನ್ನೂ ಓದಿ: ನಾನು ಈ ಮೂರು ವಸ್ತುಗಳನ್ನು ಮರೆಯುತ್ತೇನೆ: ರಮ್ಯಾ

    ಒಟ್ಟಿನಲ್ಲಿ ಇದ್ದಷ್ಟು ದಿನ ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿದ್ದ ರಮ್ಯಾ ಅವರು ಕ್ರಮೇಣ ರಾಜಕಾರಣದತ್ತ ಮುಖ ಮಾಡಿದ್ದರು. ಹೀಗಾಗಿ ಚಿತ್ರರಂಗದಿಂದ ಕೊಂಚ ದೂರವೇ ಉಳಿದಿದ್ದು, ಅಭಿಮಾನಿಗಳು ಅವರನ್ನು ತುಂಬಾನೇ ಮಿಸ್ ಮಾಡಿಕೊಂಡಿದ್ದರು. ತಮ್ಮ ನಟನೆ ಹಾಗೂ ಬ್ಯೂಟಿಯಿಂದಲೇ ಮನೆಮಾತಾಗಿದ್ದ ಅವರನ್ನು ಇದೀಗ ಹಲವು ಸಮಯಗಳ ಬಳಿಕ ಕಂಡ ಅಭಿಮಾನಿಗಳು ಪುಳಕಿತರಾಗಿದ್ದಂತೂ ಸತ್ಯ.

  • ಚಿರು ಅದ್ಭುತ ಸಹನಟ- ರಮ್ಯಾ ಸಂತಾಪ

    ಚಿರು ಅದ್ಭುತ ಸಹನಟ- ರಮ್ಯಾ ಸಂತಾಪ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣಕ್ಕೆ ನಿಧನಕ್ಕೆ ನಟಿ ರಮ್ಯಾ ಸಂತಾಪ ಸೂಚಿಸಿದ್ದಾರೆ.

    ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿರಂಜೀವಿ ಸರ್ಜಾ ಅವರು ಇಂದು ಹೃದಯಾಘತದಿಂದ ಸಾವನ್ನಪ್ಪಿದ್ದಾರೆ. ಈ ಸುದ್ದಿಯಿಂದ ಇಡೀ ಚಂದನವನಕ್ಕೆ ಸಿಡಿಲು ಬಡಿದಂತೆ ಆಗಿದೆ. 25ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿ ಮುಂದೆ ಒಳ್ಳೆಯ ಸಿನಿಮಾ ಮಾಡಬೇಕು ಎಂದು ಕನಸು ಕಂಡಿದ್ದ ಚಿರು ಸಾವಿಗೆ ಹಲವಾರು ನಟರು ಸಂತಾಪ ಸೂಚಿಸಿದ್ದಾರೆ.

    ಚಿರಂಜೀವಿ ಸರ್ಜಾ ಅವರೊಂದಿಗಿನ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿರುವ ರಮ್ಯಾ, “ಚಿರು ಅದ್ಭುತ ಸಹನಟ. ಯಾವಾಗಲೂ ಹರ್ಷಚಿತ್ತದಿಂದ ಇರುತ್ತಿದ್ದ ಅವರು ಸಕಾರಾತ್ಮಕ ಮನೋಭಾವವನ್ನು ಹೊಂದಿದ್ದರು. ಅವರೊಂದಿಗೆ ಕೆಲಸ ಮಾಡಿದ್ದನ್ನು ಆಹ್ಲಾದಕರ ಮತ್ತು ಸ್ಮರಣೀಯ ಅನುಭವವನ್ನಾಗಿಸಿದ್ದರು. ಇಂತಹ ಕ್ಷಣದಲ್ಲಿ ಅವರ ಪ್ರೀತಿಪಾತ್ರರು, ಕುಟುಂಬಸ್ಥರನ್ನು ಸಮಾಧಾನಪಡಿಸುವ ಪದಗಳು ಆಡುವುದು ತುಂಬಾ ಕಷ್ಟ. ಅವರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ಸಿಗಲಿ. ಅವರ ಆತ್ಮಕೆ ಶಾಂತಿ ಸಿಗಲಿ. ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ.

    https://www.facebook.com/178427215195/posts/10158042562045196/

    ಚಿರಂಜೀವಿ ಸರ್ಜಾ ಅವರು ರಮ್ಯಾ ಅವರೊಂದಿಗೆ ‘ದಂಡಂ ದಶಗುಣಂ’ ನಟಿಸಿದ್ದರು. 2011ರ ಏಪ್ರಿಲ್‍ನಲ್ಲಿ ತೆರೆ ಕಂಡ ಈ ಸಿನಿಮಾದಲ್ಲಿ ಚಿರು ಪೊಲೀಸ್ ಪಾತ್ರದಲ್ಲಿ ಮಿಂಚಿದ್ದರು.

    ಚಿರಂಜೀವಿ ಸರ್ಜಾ ಅವರಿಗೆ ನಿನ್ನೆ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಇಂದು ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ತಮ್ಮ 39ನೇ ವರ್ಷಕ್ಕೆ ಬಾರದ ಲೋಕಕ್ಕೆ ತೆರೆಳಿದ್ದಾರೆ.

  • ರಮ್ಯಾ – ರಾಗಿಣಿ ಮುನಿಸು ಮಾಯವಾಯ್ತಾ?

    ರಮ್ಯಾ – ರಾಗಿಣಿ ಮುನಿಸು ಮಾಯವಾಯ್ತಾ?

    ಮೋಹಕ ತಾರೆ ರಮ್ಯಾ ಇದೀಗ ಸಂಪೂರ್ಣವಾಗಿ ರಾಜಕಾರಣದಲ್ಲಿ ಕಳೆದು ಹೋಗಿದ್ದಾರೆ. ಆದರೆ ಈಗಲೂ ಕೂಡಾ ಹಲವಾರು ಮಂದಿ ಅವರು ಮತ್ತೆ ಬಂದು ಚಿತ್ರಗಳಲ್ಲಿ ನಟಿಸಲಿ ಎಂದೇ ಬಯಸುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ರಮ್ಯಾ ಜೊತೆ ಕಿತ್ತಾಡಿಕೊಂಡಿದ್ದ ರಾಗಿಣಿ ದ್ವಿವೇದಿ ಕೂಡಾ ಅದನ್ನೇ ಬಯಸುತ್ತಿದ್ದಾರಾ ಎಂಬ ಅಚ್ಚರಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಪತ್ತೆಯಾಗಿದೆ!

    ಟ್ವಿಟ್ಟರ್‍ನಲ್ಲಿ ರಮ್ಯಾ ಅಭಿಮಾನಿಯೊಬ್ಬರು ಅವರು ಮತ್ತೆ ಬರಬೇಕೆಂದು ಗೋಗರೆಯುವಂತೆ ಒಂದು ಟ್ವೀಟ್ ಮಾಡಿದ್ದರು. ಅದನ್ನು ರಾಗಿಣಿ ದ್ವಿವೇದಿ ಕೂಡಾ ರೀಟ್ವೀಟ್ ಮಾಡಿದ್ದಾರೆ. ಸಾಮಾನ್ಯವಾಗಿ ಒಂದು ವಿಚಾರಕ್ಕೆ ಸಹಮತ ವ್ಯಕ್ತಪಡಿಸಲು ಈ ರೀ ಟ್ವೀಟ್ ಬಳಕೆಯಾಗುತ್ತದೆ. ರಾಗಿಣಿ ಕೂಡಾ ಅದನ್ನೇ ಮಾಡಿರೋದರಿಂದ ಅವರೂ ಕೂಡಾ ಮುನಿಸು ಮರೆತು ಮತ್ತೆ ರಮ್ಯಾ ಚಿತ್ರ ರಂಗಕ್ಕೆ ಮರಳಲಿ ಅಂತ ಆಶಿಸುತ್ತಿದ್ದಾರಾ ಎಂಬ ಪ್ರಶ್ನೆ ಸಿನಿಪ್ರಿಯರನ್ನು ಕಾಡುತ್ತಿದೆ.

    ರಾಗಿಣಿ ದ್ವಿವೇದಿ ಅವರ ಈ ನಡೆ ಅಚ್ಚರಿ ಮೂಡಿಸಲು ಕಾರಣ ಇಲ್ಲದಿಲ್ಲ. ವರ್ಷಾಂತರಗಳ ಹಿಂದೆ ರಾಗಿಣಿ ರಮ್ಯಾ ವಿರುದ್ಧ ಮಾತಾಡಿದ್ದರೆಂಬ ಬಗ್ಗೆ ಗುಲ್ಲೆದ್ದಿತ್ತು. ಈ ವಿಚಾರವಾಗಿ ರಮ್ಯಾ ಕೂಡಾ ಪರೋಕ್ಷವಾಗಿ ರಾಗಿಣಿಯವರನ್ನು ಫೇಸ್ ಬುಕ್ ಮೂಲಕ ತಿವಿದಿದ್ದರು. ರಾಗಿಣಿ ಕೂಡಾ ಅದಕ್ಕೆ ಅಷ್ಟೇ ಮೊನಚಾಗಿ ಮಾರುತ್ತರ ನೀಡಿದ್ದರು.

    ಈ ಮೂಲಕ ರಮ್ಯಾ ಮತ್ತು ರಾಗಿಣಿ ವಿರುದ್ಧಾರ್ಥಕ ಪದಗಳಂತಾಗಿದ್ದರು. ಆದರೀಗ ಇವರಿಬ್ಬರ ನಡುವೆ ಮುನಿಸಿನ ಮುಸುಕು ಸರಿದಂತಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv