Tag: Divya Kakran

  • ನೆರವು ಕೇಳಿದ್ದಕ್ಕೆ ನೀವು ದೆಹಲಿ ಪ್ರತಿನಿಧಿಸಿದ್ರಾ ಎಂದು ಪ್ರಶ್ನಿಸಿದ್ದ AAP ಶಾಸಕನಿಗೆ ಸರ್ಟಿಫಿಕೇಟ್‌ ತೋರಿಸಿ ತಿರುಗೇಟು ಕೊಟ್ಟ ಕುಸ್ತಿಪಟು

    ನೆರವು ಕೇಳಿದ್ದಕ್ಕೆ ನೀವು ದೆಹಲಿ ಪ್ರತಿನಿಧಿಸಿದ್ರಾ ಎಂದು ಪ್ರಶ್ನಿಸಿದ್ದ AAP ಶಾಸಕನಿಗೆ ಸರ್ಟಿಫಿಕೇಟ್‌ ತೋರಿಸಿ ತಿರುಗೇಟು ಕೊಟ್ಟ ಕುಸ್ತಿಪಟು

    ನವದೆಹಲಿ: ದೆಹಲಿ ಸರ್ಕಾರದಿಂದ ಆರ್ಥಿಕ ಸಹಕಾರ ನೀಡುವಂತೆ ಮನವಿ ಮಾಡಿದ್ದಕ್ಕೆ, ʼನೀವು ದೆಹಲಿ ರಾಜ್ಯವನ್ನು ಪ್ರತಿನಿಧಿಸಿದ್ರಾʼ ಎಂದು ಪ್ರಶ್ನಿಸಿದ್ದ ಆಮ್‌ ಆದ್ಮಿ ಪಕ್ಷದ ಶಾಸಕನಿಗೆ ಸರ್ಟಿಫಿಕೇಟ್‌ ತೋರಿಸುವ ಮೂಲಕ ಕುಸ್ತಿಪಟು ದಿವ್ಯಾ ಕಕ್ರನ್‌ ತಿರುಗೇಟು ನೀಡಿದ್ದಾರೆ.

    61ನೇ ರಾಷ್ಟ್ರೀಯ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ದೆಹಲಿಯನ್ನು ಪ್ರತಿನಿಧಿಸಿದ್ದಾರೆ ಎಂದು ತಿಳಿಸಿರುವ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಪ್ರಮಾಣಪತ್ರವನ್ನು ದಿವ್ಯಾ ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ. ʼನಾನು 2011 ರಿಂದ 2017 ರವರೆಗೆ ದೆಹಲಿಯನ್ನು ಪ್ರತಿನಿಧಿಸಿದ್ದೇನೆ. ಇದು ದೆಹಲಿ ರಾಜ್ಯದಿಂದ ನನ್ನ ಪ್ರಮಾಣಪತ್ರವಾಗಿದೆ. ನೀವು ಇನ್ನೂ ನನ್ನನ್ನು ನಂಬದಿದ್ದರೆ, ನಾನು 17 ಚಿನ್ನದ ಪದಕಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಅಪ್‌ಲೋಡ್ ಮಾಡುತ್ತೇನೆ ಎಂದು ಎಎಪಿ ಶಾಸಕ ಸೌರಭ್‌ ಭಾರಧ್ವಾಜ್‌ ಅವರಿಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಮನವಿ ಮಾಡಿದ್ರೂ ನನಗೆ ದೆಹಲಿ ಸರ್ಕಾರದಿಂದ ಸಹಾಯವೇ ಸಿಗಲಿಲ್ಲ; ಗೆದ್ದಾಗ ಪ್ರಶಂಸಿಸುತ್ತಿದ್ದಾರೆ – ಕಾಮನ್‌ವೆಲ್ತ್‌ನಲ್ಲಿ ಕಂಚು ಗೆದ್ದ ಕ್ರೀಡಾಪಟು ಬೇಸರ

    ನಡೆದಿದ್ದೇನು?
    ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ಕುಸ್ತಿಪಟು ದಿವ್ಯಾ ಕಕ್ರನ್‌ ಅವರು ದೆಹಲಿ ಸರ್ಕಾರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಕಳೆದ 20 ವರ್ಷಗಳಿಂದ ದೆಹಲಿಯಲ್ಲಿ ವಾಸವಾಗಿದ್ದು, ಸ್ಪರ್ಧೆಗಾಗಿ ಅಭ್ಯಾಸ ಮಾಡುತ್ತಿದ್ದೆ. ಆದರೆ ಈವರೆಗೂ ನನಗೆ ದೆಹಲಿ ಸರ್ಕಾರದಿಂದ ಯಾವುದೇ ಸಹಾಯ ಸಿಗಲಿಲ್ಲ ಎಂದು ನೊಂದು ನುಡಿದಿದ್ದರು. ಅಲ್ಲದೇ ದೆಹಲಿಯವರೇ ಆಗಿದ್ದರೂ ಬೇರೆ ರಾಜ್ಯದ ಪರ ಆಡುತ್ತಿರುವ ಇತರ ಆಟಗಾರರನ್ನು ಗೌರವಿಸುವ ರೀತಿಯಲ್ಲಿಯೇ ನನ್ನನ್ನು ಗೌರವಿಸಬೇಕೆಂಬುದು ಟ್ವೀಟ್‌ ಮೂಲಕ ಮನವಿ ಮಾಡಿದ್ದರು.

    ಈ ವೇಳೆ ದಿವ್ಯಾ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ಶಾಸಕ ಸೌರಭ್ ಭಾರದ್ವಾಜ್ ಅವರು, ಸಹೋದರಿ, ಇಡೀ ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ. ಆದರೆ ನೀವು ದೆಹಲಿಯ ಪರ ಆಡಿದ್ದು ನನಗೆ ನೆನಪಿಲ್ಲ. ಆದರೆ ನೀವು ಉತ್ತರ ಪ್ರದೇಶವನ್ನು ಪ್ರತಿನಿಧಿಸಿ ಆಡಿದ್ದೀರಿ. ಆದರೆ ಒಬ್ಬ ಆಟಗಾರ ದೇಶಕ್ಕೆ ಸೇರಿದವನು. ಯೋಗಿ ಆದಿತ್ಯನಾಥ್ ಅವರಿಂದ ನೀವು ಯಾವುದೇ ಪ್ರಶಸ್ತಿಗಳನ್ನು ನಿರೀಕ್ಷಿಸುವುದಿಲ್ಲ. ದೆಹಲಿ ಸಿಎಂ ನಿಮ್ಮ ಮನವಿಗೆ ಸ್ಪಂದಿಸುತ್ತಾರೆಂಬ ಭರವಸೆ ನನಗಿದೆ ಎಂದು ಟ್ವೀಟ್‌ ಮಾಡಿದ್ದರು. ಇದನ್ನೂ ಓದಿ: Well Done Girls: ಗೋಲ್ಡ್‌ ಜಸ್ಟ್‌ ಮಿಸ್‌ – ಚೊಚ್ಚಲ ಪ್ರಯತ್ನದಲ್ಲೇ ಬೆಳ್ಳಿಗೆದ್ದ ವನಿತೆಯರು

    ದೆಹಲಿ ಸರ್ಕಾರವು ದೇಶದ ಎಲ್ಲಾ ಕ್ರೀಡಾಪಟುಗಳನ್ನು ಗೌರವಿಸುತ್ತದೆ. ಅವರ ಉಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತದೆ. ದಿವ್ಯಾ ಕಕ್ರನ್ ಸದ್ಯ ಉತ್ತರಪ್ರದೇಶ ಪರ ಆಡುತ್ತಿದ್ದಾರೆ. ಅವರು ದೆಹಲಿಯ ಪರವಾಗಿ ಆಡಿದ್ದರೆ ಅಥವಾ ದೆಹಲಿಯಲ್ಲಿ ಯಾವುದೇ ಕ್ರೀಡಾ ಯೋಜನೆಯ ಭಾಗವಾಗಿದ್ದರೆ ಅಥವಾ ಅಂತಹ ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ರಾಜ್ಯ ಸರ್ಕಾರ ಖಂಡಿತವಾಗಿಯೂ ಅದನ್ನು ಪರಿಶೀಲಿಸುತ್ತದೆ ಎಂದು ಸಹ ವಕ್ತಾರ ಪ್ರತಿಕ್ರಿಯಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • CWG 2022: ಭಾರತಕ್ಕೆ ಕಂಚು – ಮೂರೇ ನಿಮಿಷದಲ್ಲಿ ಪಂದ್ಯ ಗೆದ್ದ ಮೋಹಿತ್

    CWG 2022: ಭಾರತಕ್ಕೆ ಕಂಚು – ಮೂರೇ ನಿಮಿಷದಲ್ಲಿ ಪಂದ್ಯ ಗೆದ್ದ ಮೋಹಿತ್

    ಬರ್ಮಿಗ್‌ಹ್ಯಾಮ್: ಭಾರತೀಯ ಕುಸ್ತಿಪಟು ಮೋಹಿತ್ ಗ್ರೆವಾಲ್ ಪುರುಷರ 125 ಕೆಜಿ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

    ಕೊವೆಂಟ್ರಿ ಅರೆನಾ ವ್ರೆಸ್ಲಿಂಗ್ ಮ್ಯಾಟ್-ಬಿ ನಲ್ಲಿ ಜಮೈಕಾದ ಎದುರಾಳಿ ಆರನ್ ಜಾನ್ಸನ್ ಅವರನ್ನು 5-0 ಅಂತರದಲ್ಲಿ ಸೋಲಿಸುವ ಮೂಲಕ ಕಂಚಿನ ಪಕದ ಗೆದ್ದಿದ್ದಾರೆ. ಅಲ್ಲದೇ ಗ್ರೆವಾಲ್ ಕೇವಲ 3:30 ನಿಮಿಷಗಳಲ್ಲೇ ಪಂದ್ಯವನ್ನು ಕೈವಶ ಮಾಡಿಕೊಂಡಿದ್ದು ವಿಶೇಷ. ಇದನ್ನೂ ಓದಿ: CWG-2022: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತೀಯ ದೀಪಕ್ ಪೂನಿಯಾಗೆ ಚಿನ್ನದ ಹಾರ

    ದಿವ್ಯಾ ಕಣ್ಣಲ್ಲಿ ಕಂಚಿನ ಹೊಳಪು: ಅಂತೆಯೇ ಮಹಿಳೆಯರ ವಿಭಾಗದ 68 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ದಿವ್ಯಾ ಕಕ್ರಾನ್‌ಗೆ ಕಂಚಿನ ಪದಕ ಲಭಿಸಿದೆ. ಕೊವೆಂಟ್ರಿ ಅರೆನಾ ವ್ರೆಸ್ಲಿಂಗ್ ಮ್ಯಾಟ್-ಬಿ ನಲ್ಲಿ ನಡೆದ ಪಂದ್ಯಲ್ಲಿ 2-0 ಅಂತರದಲ್ಲಿ ಎದುರಾಳಿಯನ್ನು ಬಗ್ಗು ಬಡಿಯುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: ಕುಸ್ತಿಯಲ್ಲಿ ಬ್ಯಾಕ್ ಟು ಬ್ಯಾಕ್ ಚಿನ್ನ – ಸಾಕ್ಷಿ ಮಲಿಕ್ ಬಂಗಾರದ ಹುಡುಗಿ

    ಇದಕ್ಕೂ ಮುನ್ನ 8ನೇ ದಿನದ ಅಖಾಡದಲ್ಲಿ ಭಾರತ 5 ಪದಕಗಳನ್ನು ಪಡೆದುಕೊಂಡಿದೆ. 62 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್, 65 ಕೆಜಿ ವಿಭಾಗದಲ್ಲಿ ಭಜರಂಗ್ ಪೂನಿಯಾ, 86 ಕೆಜಿ ವಿಭಾಗದಲ್ಲಿ ಕುಸ್ತಿಪಟು ದೀಪಕ್ ಪೂನಿಯಾ ಬಂಗಾರದ ಪದಕಗಳನ್ನ ಬಾಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]