Tag: Divya hagaragi

  • ಪಿಎಸ್‍ಐ ಅಕ್ರಮ ಪ್ರಕರಣ – ಕಿಂಗ್ ಪಿನ್ ದಿವ್ಯಾ ಹಾಗರಗಿ ಸೇರಿ 26 ಆರೋಪಿಗಳಿಗೆ ಜಾಮೀನು

    ಪಿಎಸ್‍ಐ ಅಕ್ರಮ ಪ್ರಕರಣ – ಕಿಂಗ್ ಪಿನ್ ದಿವ್ಯಾ ಹಾಗರಗಿ ಸೇರಿ 26 ಆರೋಪಿಗಳಿಗೆ ಜಾಮೀನು

    ಕಲಬುರಗಿ: ಪಿಎಸ್‍ಐ ಪರೀಕ್ಷಾ ಅಕ್ರಮದಲ್ಲಿ (PSI Recruitment Scam) ಭಾಗಿಯಾಗಿ ಜೈಲು ಪಾಲಾದ ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ (Divya Hagaragi) ಸೇರಿ 26 ಜನ ಆರೋಪಿಗಳಿಗೆ (Accused) ಜಾಮೀನು ಮಂಜೂರಾಗಿದೆ. ಇಂದು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು (Bail) ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.

    ಪಿಎಸ್‍ಐ ಅಕ್ರಮ ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ಕಾಶಿನಾಥ್ ಚಿಲ್, ಡಿವೈಎಸ್‍ಪಿ ಮಲ್ಲಿಕಾರ್ಜುನ್ ಸಾಲಿ ಸೇರಿ 26 ಜನರಿಗೆ ಜಾಮೀನು ಮಂಜೂರಾಗಿದೆ. ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧಿಶರಾದ ಕೆ. ಬಿ. ಪಾಟೀಲ್ 26 ಮಂದಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಅಕ್ರಮ -ADGP ಅಮೃತ್‌ ಪೌಲ್ ಅರೆಸ್ಟ್‌

    ಏನಿದು ಪ್ರಕರಣ?
    2021ರ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಪಿಎಸ್‍ಐ ಪರೀಕ್ಷೆ ನಡೆದಿತ್ತು. ಕಲಬುರಗಿ ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಮತ್ತು ತಂಡ ಹಣ ಬಲ ಹೊಂದಿರುವ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸಿತ್ತು. ಲಕ್ಷಾಂತರ ರೂ. ನೀಡಿದವರ ಪರವಾಗಿ ಪರೀಕ್ಷೆಯಲ್ಲಿ ಅಕ್ರಮ ಮಾಡಲು ಸಹಕಾರ ನೀಡಿತ್ತು. ಪರೀಕ್ಷೆ ಮುಗಿದ ಬಳಿಕ ಕ್ಯಾಮೆರಾವನ್ನು ಬಂದ್ ಮಾಡಿ ಬಳಿಕ ಅಭ್ಯರ್ಥಿಗಳ ಒಎಂಆರ್ ಶೀಟ್‍ಗೆ ಸರಿ ಉತ್ತರವನ್ನು ಭರ್ತಿ ಮಾಡಲಾಗಿತ್ತು. ಆ ಬಳಿಕ ಈ ಪ್ರಕರಣ ಬೆಳಕಿಗೆ ಬಂದು ಎಡಿಜಿಪಿ ಅಮೃತ್ ಪೌಲ್, ದಿವ್ಯಾ ಹಾಗರಗಿ ಸೇರಿದಂತೆ ಹಲವು ಮಂದಿ ಬಂಧನಕ್ಕೊಳಗಾಗಿದ್ದರು. ಇದನ್ನೂ ಓದಿ: ಬಾಲಕನ ಕಿಡ್ನಾಪ್ – ಸಿಂಗಂ ಸ್ಟೈಲ್‌ನಲ್ಲಿ ಬಾಲಕನನ್ನು ರಕ್ಷಿಸಿದ ಸಿಪಿಐ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಿಎಸ್‍ಐ ಹಗರಣ ನೀವೇ ಸರಿಯಾಗಿ ಕೆಲಸ ಮಾಡ್ತಿರೋ? ಅಥ್ವಾ ಬೇರೆ ತನಿಖಾ ಸಂಸ್ಥೆಗೆ ವಹಿಸಬೇಕಾ: CID ವಿರುದ್ಧ ಹೈಕೋರ್ಟ್ ಗರಂ

    ಪಿಎಸ್‍ಐ ಹಗರಣ ನೀವೇ ಸರಿಯಾಗಿ ಕೆಲಸ ಮಾಡ್ತಿರೋ? ಅಥ್ವಾ ಬೇರೆ ತನಿಖಾ ಸಂಸ್ಥೆಗೆ ವಹಿಸಬೇಕಾ: CID ವಿರುದ್ಧ ಹೈಕೋರ್ಟ್ ಗರಂ

    ಬೆಂಗಳೂರು: ಪಿಎಸ್‍ಐ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಮೇಲೆ ಹೈಕೋರ್ಟ್ ಗರಂ ಆಗಿದೆ. ನೀವೇ ಸರಿಯಾಗಿ ಕೆಲಸ ಮಾಡ್ತಿರೋ? ಅಥ್ವಾ ಬೇರೆ ತನಿಖಾ ಸಂಸ್ಥೆಗೆ ಪ್ರಕರಣವನ್ನು ವಹಿಸಬೇಕಾ ಎಂದು ಖಡಕ್ಕಾಗಿ ಪ್ರಶ್ನಿಸಿದೆ.

    ಇದು ಸಮಾಜಕ್ಕೆ ಒಂದು ರೀತಿಯಲ್ಲಿ ಭಯೋತ್ಪಾದನಾ ಕೃತ್ಯ. ಕೆಲವು ಕ್ರಿಮಿನಲ್ಸ್ ಕೂಡ ರ್‍ಯಾಂಕ್ ಪಡೆದು ಹುದ್ದೆ ಪಡೆಯುತ್ತಿದ್ದಾರೆ. ಪರೀಕ್ಷೆ ರದ್ದು ಮಾಡುವುದು ಮಾತ್ರ ಪರಿಹಾರ ಅಲ್ಲ. ಇದರಲ್ಲಿ ಯಾವುದೇ ಮಿನಿಸ್ಟರ್ ಇದ್ರೂ ಸರಿ, ಅಧಿಕಾರಿಗಳು ಇದ್ರೂ ಸರಿ ಕ್ರಮ ಆಗಬೇಕು. ನಮಗೆ ಡಿಜಿಪಿ ಸಂಧು ಅವರ ಮೇಲೆ ಗೌರವ ಇದೆ. ಅವರ ಮೇಲ್ವಿಚಾರಣೆಯಲ್ಲಿ ತನಿಖೆ ಆಗಲಿ. ನಿಮಗೆ ಸ್ವತಂತ್ರವಾದ ಅಧಿಕಾರವನ್ನು ಕೊಟ್ಟಿದ್ದೇವೆ ಎಂದು ಹೈಕೋರ್ಟ್ ತಿಳಿಸಿದೆ. ಇದನ್ನೂ ಓದಿ: ಜುಲೈ 1ರಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಬ್ಯಾನ್ – ಮಾರಾಟ ಮಾಡಿದ್ರೆ ದುಬಾರಿ ದಂಡ

    ಇದು ಕೇವಲ ಪಿಎಸ್‍ಐ ಪರೀಕ್ಷೆಯಲ್ಲಿ ಮಾತ್ರವಲ್ಲ, ಎಲ್ಲಾ ಪರೀಕ್ಷೆಗಳಲ್ಲಿ ಅಕ್ರಮ ನಡೆಯುತ್ತಿವೆ. ಈ ಪ್ರಕರಣ ಸಂಪೂರ್ಣ ವರದಿ ಕೊಡಬೇಕು ಎಂದು ಡಿಜಿ ಸಂಧು ಅವರಿಗೆ ಹೈಕೋರ್ಟ್ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಜುಲೈ 7ಕ್ಕೆ ನಿಗದಿ ಮಾಡಿದ್ದು, ಈ ಸಂದರ್ಭದಲ್ಲಿ ತನಿಖಾ ಪ್ರಗತಿಯ ವರದಿ ಸಲ್ಲಿಸಲು ಹೆಚ್ಚು ಸಮಯ ನೀಡುವಂತೆ ಎಜಿ ಮಾಡಿದ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಲಿಲ್ಲ. ತಪ್ಪಿತಸ್ಥರ ವಿರುದ್ಧ ಶೀಘ್ರ ತನಿಖೆ ನಡೆಸಲು ಸೂಚಿಸಿದೆ.

    Live Tv

  • ಪಿಎಸ್‍ಐ ಅಕ್ರಮ – ದಿವ್ಯಾ ಹಾಗರಗಿ ಸೇರಿ ನಾಲ್ವರಿಗೆ ಜಾಮೀನು ನಿರಾಕರಿಸಿದ ಕೋರ್ಟ್

    ಪಿಎಸ್‍ಐ ಅಕ್ರಮ – ದಿವ್ಯಾ ಹಾಗರಗಿ ಸೇರಿ ನಾಲ್ವರಿಗೆ ಜಾಮೀನು ನಿರಾಕರಿಸಿದ ಕೋರ್ಟ್

    ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‍ಪಿನ್ ಆರ್.ಡಿ. ಪಾಟೀಲ್, ದಿವ್ಯಾ ಹಾಗರಗಿ ಸೇರಿ ನಾಲ್ವರಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಲು ಮತ್ತೆ ನಿರಾಕರಿಸಿದೆ. ಇದರೊಂದಿಗೆ ನಾಲ್ವರಿಗೂ ಜೈಲೇ ಗತಿಯಾಗಿದೆ.

    ಕಲಬುರಗಿ ಜಿಲ್ಲಾ 3ನೇ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ನ್ಯಾಯಾಲಯ ತೀರಸ್ಕರಿಸಿದೆ. ಬ್ಲೂಟೂತ್ ಡಿವೈಸ್ ಮೂಲಕ ಅಕ್ರಮದ ಮೂಲಕ ಅಭ್ಯರ್ಥಿಗಳು ತೇರ್ಗಡೆ ಆಗಲು ಸಹಕರಿಸುತ್ತಿದ್ದ ಆರೋಪಿ ಆರ್.ಡಿ ಪಾಟೀಲ್, ಎನ್.ವಿ. ಸುನೀಲ್, ತಮ್ಮ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಅಕ್ರಮ ನಡೆಸಲು ಸಹಕರಿಸಿದ ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಮತ್ತು ಇದೆ ಶಾಲೆಯ ಮುಖ್ಯಶಿಕ್ಷಕ ಕಾಶಿನಾಥ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?

    ಜಾಮೀನು ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಧೀಶ ಬಸವರಾಜ ನೇಸರಗಿ ಅವರ ನೇತೃತ್ವದ ಪೀಠ ತೀರಸ್ಕರಿಸಿದೆ. ಈ ಹಿಂದೆಯೂ ಆರೋಪಿಗಳು ಜಾಮೀನಿಗಾಗಿ ಸಲ್ಲಿಸಿದ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಆರೋಪಿಗಳಿಗೆ ಜಾಮೀನು ನೀಡದಂತೆ ಸಿಐಡಿ ತಕರಾರು ಅರ್ಜಿ ಈ ಹಿಂದೆ ಸಲ್ಲಿಸಿತ್ತು. ಇದನ್ನೂ ಓದಿ: ಬಾಂಗ್ಲಾ ಯುವತಿಯ ಮೇಲೆ ಬೆಂಗ್ಳೂರಿನಲ್ಲಿ ಗ್ಯಾಂಗ್‌ ರೇಪ್‌ – 7 ಮಂದಿಗೆ ಜೀವಾವಧಿ ಶಿಕ್ಷೆ

     

  • PSI ಪ್ರಕರಣದ ನಿಜವಾದ ಕಿಂಗ್‍ಪಿನ್‍ಗಳು ಬೆಂಗಳೂರಲ್ಲೇ ಇದ್ದಾರೆ, ಬಂಧಿತರೇ ಬೇರೆ: ಪ್ರಿಯಾಂಕ್ ಖರ್ಗೆ ಬಾಂಬ್

    PSI ಪ್ರಕರಣದ ನಿಜವಾದ ಕಿಂಗ್‍ಪಿನ್‍ಗಳು ಬೆಂಗಳೂರಲ್ಲೇ ಇದ್ದಾರೆ, ಬಂಧಿತರೇ ಬೇರೆ: ಪ್ರಿಯಾಂಕ್ ಖರ್ಗೆ ಬಾಂಬ್

    ಕಲಬುರಗಿ: ಕಾನ್ಸ್‌ಟೇಬಲ್‌ ನೇಮಕಾತಿಯಲ್ಲೂ ಅಕ್ರಮ ನಡೆದಿದೆ. ಅಲ್ಲದೇ ಕಾನ್ಸ್‌ಟೇಬಲ್‌ ನೇಮಕಾತಿಯಲ್ಲಿ ಅಕ್ರಮವೆಸಗಿದವರೇ ಪಿಎಸ್‍ಐ ಅಕ್ರಮದಲ್ಲೂ ಭಾಗಿಯಾಗಿದ್ದಾರೆ. ಇನ್ನೂ ಪ್ರಕರಣದಲ್ಲಿ ಬಂಧಿಸಲಾದ ದಿವ್ಯಾ ಹಾಗರಗಿ ಮತ್ತು ಆರ್‌.ಡಿ ಪಾಟೀಲ್ ಕಿಂಗ್‍ಪಿನ್ ಎಂದು ಹೇಳ್ತಿದ್ದಾರೆ. ಆದರೆ, ಪ್ರಮುಖ ಕಿಂಗ್‍ಪಿನ್‍ಗಳು ಬೇರೆ. ಅವರು ಬೆಂಗಳೂರಿನಲ್ಲೇ ಇದ್ದು ಅವರನ್ನು ಹೊರತರಬೇಕು ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್‌ ಸಿಡಿಸಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಎಸ್‍ಐ ಅಕ್ರಮ ನೇಮಕ ಪ್ರಕರಣದಲ್ಲಿ ಗೃಹ ಸಚಿವರು ಯಾರನ್ನು ಸೇಫ್ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ಆದರೆ, ಪ್ರಕರಣದಲ್ಲಿ ಗೃಹ ಸಚಿವರೇ ಬಲಿಪಶು ಆಗುವುದಂತೂ ಪಕ್ಕಾ. ಇದರಿಂದ ಅವರ ಕೆರಿಯರ್ ಹಾಳಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ಕುರಿತು ಸರ್ಕಾರಕ್ಕೆ ಪ್ರೆಶ್ನೆಗಳ ಸುರಿಮಳೆಗೈದು ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗೃಹ ಸಚಿವರು ನನಗೆ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಡವೆಂದಿದ್ದರು. ಆದರೆ ಇದೀಗ ಪಕ್ಷದ ಶಾಸಕ ಯತ್ನಾಳ್ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಪರೀಕ್ಷೆ ಬರೆದ 57 ಸಾವಿರ ಅಭ್ಯರ್ಥಿಗಳು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅವರಿಗೆ ಸ್ವಾಭಿಮಾನ ಇದ್ದಿದ್ದರೆ ರಾಜೀನಾಮೆ ಕೊಟ್ಟು ಕುರ್ಚಿ ಬಿಟ್ಟು ಹೋಗಬೇಕಿತ್ತು. ಅಧಿಕಾರದ ಮೋಹದಿಂದ ಅಥವಾ ಯಾರನ್ನೋ ರಕ್ಷಿಸಲು ಅವರು ಹೀಗೆ ಮಾಡುತ್ತಿದ್ದಾರೋ ಏನೋ ಗೊತ್ತಿಲ್ಲ. ಆದರೆ, ಇದರಿಂದ ಅವರ ಭವಿಷ್ಯ ಹಾಳಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲೇ ವಕೀಲೆ, ಆಕೆಯ ಪತಿ ಮೇಲೆ ಮಾರಣಾಂತಿಕ ಹಲ್ಲೆ

    ಬಂಧಿತರ ನಿಖರ ಲಿಸ್ಟ್ ಎಲ್ಲಿದೆ?:
    ಈವರೆಗೂ ಬಂಧಿತರಾದವರ ನಿಖರ ಲಿಸ್ಟ್ ಅನ್ನು ಸರ್ಕಾರ ಕೊಟ್ಟಿಲ್ಲ. ಬಂಧನವಾಗಿರುವ ಆರೋಪಿಗಳ ವಿವರವನ್ನು ಸರ್ಕಾರ ಯಾಕೆ ನೀಡುತ್ತಿಲ್ಲ. ಈವರೆಗೆ ತಲೆಮರೆಸಿಕೊಂಡಿರುವವರು ಎಷ್ಟು ಜನ? ಸರ್ಕಾರವನ್ನು ರಕ್ಷಣೆ ಮಾಡಲು ಮಾತ್ರವಷ್ಟೇ ತನಿಖೆ ನಡೆಸಲಾಗುತ್ತಿದೆ. ಒಟ್ಟು ಎಷ್ಟು ಜನರಿಗೆ ನೋಟಿಸ್ ನೀಡಿದ್ದೀರಿ ಎಷ್ಟು ಜನರಿಗೆ ವಿಚಾರಣೆ ನಡೆಸಿದ್ದೀರಿ? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಬೆಳಗಿನ ಜಾವ ಮೈಕ್‌ ಮೂಲಕ ಆಜಾನ್‌ ಕೂಗದಿರಲು ಮುಸ್ಲಿಂ ಧರ್ಮ ಗುರುಗಳು ನಿರ್ಧಾರ

    ಅಧಿಕೃತ ವರದಿ ಏನಾಗಿದೆ?:
    ಐದು ಅಭ್ಯರ್ಥಿಗಳು ಪಿಎಸ್‍ಐ ಅಕ್ರಮದ ಬಗ್ಗೆ ದೂರು ಸಲ್ಲಿಸಿರುತ್ತಾರೆ ಎಂದು ಗೃಹ ಸಚಿವರೇ ಹೇಳಿದ್ದಾರೆ. ದೂರುಗಳು ಬಂದಿವೆ. ಆದರೆ, ಇದನ್ನು ನಾವು ಮೇಲಧಿಕಾರಿಯ ಪರಿಶೀಲನೆಗೆ ನೀಡಿದ್ದೇನೆ ಎಂದಿದ್ದಾರೆ. ಅರ್ಹತೆ ಪ್ರಕಾರ ಅಂಕ ನೀಡಲಾಗಿದೆ ಎಂದು ಹೇಳಿದ್ದಾರೆ. ಗೃಹ ಸಚಿವರು ಅಕ್ರಮ ನಡೆದಿಲ್ಲ ಎಂದು ಹೇಳಿದ್ದಾರೆ. ಈಗ ತನಿಖೆಯಲ್ಲಿ ಲೋಪ ಕಂಡು ಬಂದಿದೆ. ತನಿಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. 12 ಜನರನ್ನು ಸಸ್ಪೆಂಡ್ ಸಹ ಮಾಡಲಾಗಿದೆ. ತನಿಖೆ ನಡೆಸಿದ ಹಿರಿಯ ಅಧಿಕಾರಿಗಳು ಯಾರು? ತನಿಖೆ ನಡೆದಿದ್ದು ಹೇಗೆ? ಆ ವರದಿ ಎಲ್ಲಿದೆ? ಗೃಹ ಸಚಿವರು ಸದನದಲ್ಲಿ ಉತ್ತರ ಕೊಟ್ಟ ಮೇಲೆ ಆಫಿಷಿಯಲ್ ವರದಿ ಏನಾಗಿದೆ? ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಹಿಂದುಳಿದ ವರ್ಗಗಳಿಗೆ ಮೀಸಲಾತಿ ತಪ್ಪಲು ಕಾಂಗ್ರೆಸ್ಸೇ ಕಾರಣ: ಸಿ.ಟಿ.ರವಿ

     

  • ಬಂಧನಕ್ಕೆ ತೆರಳಿದ್ದ ವೇಳೆ ಹೈಡ್ರಾಮಾ- ಹೊಸ ಮೊಬೈಲ್ ಬಿಸಾಕಿದ ದಿವ್ಯಾ ಹಾಗರಗಿ

    ಬಂಧನಕ್ಕೆ ತೆರಳಿದ್ದ ವೇಳೆ ಹೈಡ್ರಾಮಾ- ಹೊಸ ಮೊಬೈಲ್ ಬಿಸಾಕಿದ ದಿವ್ಯಾ ಹಾಗರಗಿ

    ಕಲಬುರಗಿ: ಪಿಎಸ್‍ಐ (PSI)  ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದ ಡೀಲ್ ರಾಣಿ ದಿವ್ಯಾ ಹಾಗರಗಿ(Divya Hagaragi) ಯನ್ನ ಸಿಐಡಿ (CID) ಅಧಿಕಾರಿಗಳು ಬಂಧನಕ್ಕೆ ತೆರಳಿದ್ದ ವೇಳೆ ಹೈಡ್ರಾಮಾ ಕ್ರಿಯೇಟ್ ಮಾಡಿ ಮೊಬೈಲ್ ಬಿಸಾಕಿದ್ದಳು.

    ಸಿಐಡಿ ಅಧಿಕಾರಿಗಳು ಬಂಧನದ ವೇಳೆ ಗಾಬರಿ ಬಿದ್ದು ಮಹಾರಾಷ್ಟ್ರದಲ್ಲಿ ಬಳಕೆ ಮಾಡೋದಕ್ಕೆ ಖರೀದಿ ಮಾಡಿದ್ದ ಹೊಸ ಮೊಬೈಲ್ ದಿವ್ಯಾ ಬಿಸಾಕಿದ್ದಳಂತೆ. ಆದರೆ ಅಕ್ರಮಕ್ಕೆ ಬಳಸಿದ ಹಳೆಯ ಮೊಬೈಲ್ ತನ್ನ ಬಳಿಯೇ ಇಟ್ಟುಕೊಂಡಿದ್ದಳು ಅನ್ನೋದು ಇದೀಗ ಸಿಐಡಿ ಅಧಿಕಾರಿಗಳ ತನಿಖೆಯ ವೇಳೆಯಲ್ಲಿ ಬಯಲಾಗಿದೆ.

    ದಿವ್ಯಾ ಹಾಗರಗಿ ಅಕ್ರಮಕ್ಕೆ ಬಳಸಿದ್ದ ಮೊಬೈಲ್ ಪತ್ತೆಯಾದ ಹಿನ್ನೆಲೆ ಇದೀಗ ದಿವ್ಯಾ ಮೊಬೈಲ್ ನ ಜನ್ಮ ಜಾಲಾಡೋದಕ್ಕೆ ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ. ಮೊಬೈಲ್ ಪತ್ತೆಯಾದ ಹಿನ್ನೆಲೆಯಲ್ಲಿ ಅಕ್ರಮದಲ್ಲಿ ಇನ್ಯಾರ್ಯಾರು ಭಾಗಿಯಾಗಿದ್ದಾರೆ. ಜೊತೆಗೆ ದಿವ್ಯಾ ಹಾಗರಗಿ ಹಿಂದಿರುವ ದಿವ್ಯ ಶಕ್ತಿಗಳ ಬಗ್ಗೆಯು ಕೂಡ ಸಿಐಡಿ ಅಧಿಕಾರಿಗಳು ತಲಾಶ್ ನಡೆಸೋದಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: PSI ಎಕ್ಸಾಂ ಗೋಲ್ಮಾಲ್ – ಜೈಲಿನಲ್ಲಿ ಪತಿ ಕಂಡು ಕಿಂಗ್‍ಪಿನ್ ಕಣ್ಣೀರು

    ಇತ್ತ ಅಕ್ರಮದಲ್ಲಿ ಭಾಗಿಯಾಗಿ ಜೈಲು ಪಾಲಾಗಿರುವ ರಾಜೇಶ್ ಹಾಗರಗಿಯನ್ನ 21 ದಿನಗಳ ಬಳಿ ದಿವ್ಯಾ ಹಾಗಾರಗಿ ಜೈಲಿನಲ್ಲಿರುವ ಗಂಡ ರಾಜೇಶ್ ಹಾಗರಗಿಯನ್ನ ಕಂಡ ತಕ್ಷಣ ಕುಸಿದು ಬಿದ್ದು ಅರ್ಧ ಗಂಟೆಗಿಂತಲೂ ಹೆಚ್ಚು ಕಣ್ಣೀರು ಹಾಕಿದ್ದಾಳಂತೆ. ದಿವ್ಯಾ ಹಾಗರಗಿ ಕುಸಿದು ಬಿದ್ದು ಕಣ್ಣೀರು ಹಾಕ್ತಿದ್ದಂತೆಯೇ ಕಂಬಿ ಹಿಂದೆಯಿಂದಲೇ ಪತಿ ರಾಜೇಶ್ ಮೊಮ್ಮಲ ಕರಗಿ ಆತನು ಕೂಡ ಕಣ್ಣೀರು ಹಾಕಿದ್ದಾನೆ. ಅದಾದ ಬಳಿಕ ಜೈಲಿನಲ್ಲಿರುವ ಮಹಿಳೆಯರ ಸಿಂಗಲ್ ಬ್ಯಾರಕ್ ನಲ್ಲಿ ದಿವ್ಯಾ ಹಾಗರಗಿಯನ್ನ ಹಾಕಿದ್ದಾರೆ. ಆದರೆ ದಿವ್ಯಾ ಹಾಗರಗಿ ನನಗೆ ಸಿಂಗಲ್ ಬ್ಯಾರಕ್ ಇರುವ ಕೊಠಡಿ ಬೇಡ ತನ್ನ ಶಾಲೆಯ ಶಿಕ್ಷಕರು ಇರುವ ಮಹಿಳೆಯರ ಬ್ಯಾರಕ್ ನಲ್ಲೆ ಹಾಕುವಂತೆ ಮನವಿ ಮಾಡಿಕೊಂಡಿದ್ದಳಂತೆ. ಆದರೆ ದಿವ್ಯಾ ಹಾಗರಗಿಯ ಮನವಿ ಸ್ಪಂದಿಸದ ಜೈಲು ಸಿಬ್ಬಂದಿ ಸಿಂಗಲ್ ಬ್ಯಾರಕ್ ನಲ್ಲೆ ಹಾಕಿ ಲಾಕ್ ಮಾಡಿದ್ದಾರಂತೆ. ಇದನ್ನೂ ಓದಿ: ಸಿಐಡಿಗೆ ಪ್ರಕರಣ ದಾಖಲಾಗ್ತಿದ್ದಂತೆ ಡ್ಯಾಂಗೆ ಮೊಬೈಲ್ ಎಸೆದ ಆರೋಪಿ

    Divya hagaragi (2)

    ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೆ ಪಿಡಬ್ಲುಡಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮವನ್ನು ಬಯಲು ಮಾಡಿದ್ದಾರೆ. ಹಾಗಾಗಿಯೆ ಸಿಐಡಿ ಅಧಿಕಾರಿಗಳು ಪಿಎಸ್‍ಐ ನೇಮಕಾತಿಯ ಪರೀಕ್ಷೆಯ ಅಕ್ರಮದ ತನಿಖಾ ವರದಿಯಲ್ಲಿ ಪಿಡಬ್ಲುಡಿ ಪರೀಕ್ಷೆಯ ಅಕ್ರಮದ ಬಗ್ಗೆಯು ಕೂಡ ಸಿಐಡಿ ಅಧಿಕಾರಿಗಳು ಉಲ್ಲೇಖ ಮಾಡಿದ್ದಾರೆ. ಸಿಐಡಿ ಅಧಿಕಾರಿಗಳು ಪಿಡಬ್ಲುಡಿ ಅಕ್ರಮದ ಬಗ್ಗೆ ಉಲ್ಲೇಖ ಮಾಡಿದ ಬೆನ್ನಲ್ಲೇ ಇದೀಗ ಅಕ್ರಮದ ಕಿಂಗ್ ಪಿನ್ ಗಳಾಗಿರುವ ಆರ್ ಡಿ ಪಾಟೀಲ್ ಆಂಡ್ ಮಂಜುನಾಥ್ ಮೇಳಕುಂದಿಗೆ ಪಿಡಬ್ಲುಡಿ ಕೇಸ್ ಕೂಡ ಉರುಳಾಗೋದು ಎರಡು ಮಾತಿಲ್ಲ.

  • PSI ಎಕ್ಸಾಂ ಗೋಲ್ಮಾಲ್ – ಜೈಲಿನಲ್ಲಿ ಪತಿ ಕಂಡು ಕಿಂಗ್‍ಪಿನ್ ಕಣ್ಣೀರು

    PSI ಎಕ್ಸಾಂ ಗೋಲ್ಮಾಲ್ – ಜೈಲಿನಲ್ಲಿ ಪತಿ ಕಂಡು ಕಿಂಗ್‍ಪಿನ್ ಕಣ್ಣೀರು

    ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಆರೋಪಿ ದಿವ್ಯಾ ಹಾಗರಗಿ ಕಲಬುರಗಿ ಸೆಂಟ್ರಲ್ ಜೈಲು ಸೇರಿಕೊಂಡಿದ್ದು, ಕಣ್ಣೀರಾಕುತ್ತಿದ್ದಾಳೆ.

    ಜೈಲಿನ ಬ್ಯಾರಕ್ ಹಿಂದೆ ಇದ್ದ ಪತಿ ರಾಜೇಶ್ ಕಂಡು ದಿವ್ಯಾ ಹಾಗರಗಿ ಕಣ್ಣೀರು ಹಾಕಿದ್ದಾಳೆ. ದೂರದಿಂದಲೇ ಪತಿ ರಾಜೇಶ್‍ನನ್ನು ನೋಡ್ತಿದ್ದ ಹಾಗೆಯೇ ಕುಸಿದು ಬಿದ್ದು ಕಣ್ಣೀರು ಸುರಿಸಿದ್ದಾಳೆ. ಇತ್ತ ದಿವ್ಯಾ ಕಂಡು ಜೈಲಿನ ಬ್ಯಾರಕ್ ಹಿಂದೆಯಿಂದ ರಾಜೇಶ್ ಕೂಡ ಅತ್ತಿದ್ದಾರೆ. ಒಟ್ಟಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಗಂಡ-ಹೆಂಡತಿ ಕಣ್ಣೀರು ಹಾಕಿದರು. ಬಳಿಕ ದಿವ್ಯಾ ಹಾಗರಗಿಯನ್ನ ಮಹಿಳಾ ಬ್ಯಾರಕ್ ನಲ್ಲಿ ಹಾಕಿ ಸಿಬ್ಬಂದಿ ಲಕ್ ಮಾಡಿದರು.

    ದಿವ್ಯಾ ಜ್ಞಾನ ಜ್ಯೋತಿ ಶಾಲೆಯ ಶಿಕ್ಷಕರ ಮಹಿಳಾ ಬ್ಯಾರಕ್ ನಲ್ಲಿ ಹಾಕುವಂತೆ ಪಟ್ಟು ಹಿಡಿದಿದ್ದಳು. ತನ್ನ ಶಾಲೆಯ ಶಿಕ್ಷಕರ ಬ್ಯಾರಕ್ ನಲ್ಲಿಯೇ ಇರೊದಾಗಿ ಹಠ ಮಾಡಿದ್ದಳು. ಆದರೆ ಜೈಲು ಸಿಬ್ಬಂದಿ ದಿವ್ಯಾ ಹಣಕ್ಕೆ ಮಣಿಯದೆ 18219 ದಿವ್ಯಾಳ ಕೈದಿ ನಂಬರ್ ನೀಡಿ ಪ್ರತ್ಯೇಕ 9ನೇ ಬ್ಯಾರಕ್ ನಲ್ಲಿ ಕೂಡಿ ಹಾಕಿದ್ದಾರೆ. ದಿನದ 24 ಗಂಟೆಯು ಲಾಕ್ ಆಗಿರುವ ಬ್ಯಾರಕ್ ನಲ್ಲಿ ದಿವ್ಯಾಳನ್ನ ಹಾಕಿದ್ದಾರೆ.

    ದಿವ್ಯಾಳ ಯಾವ ಬೇಡಿಕೆಯನ್ನ ಪೂರೈಸೋದಕ್ಕೆ ಆಗೋದಿಲ್ಲ. ಜೈಲಿನಲ್ಲಿ ಎಲ್ಲ ಕೈದಿಗಳಿಗೆ ನೀಡುವ ಸವಲತ್ತೇ ನೀಡುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಸಿಎಂ ಬೊಮ್ಮಾಯಿ – ಇಂದು ಹೈಕಮಾಂಡ್‍ನಿಂದ ಬಿಗ್ ಸಂದೇಶ ನಿರೀಕ್ಷೆ

  • ಡಿಕೆಶಿ ಜೊತೆ ದಿವ್ಯಾ ಹಾಗರಗಿ ಫೋಟೋ ತೆಗೆಸಿಕೊಂಡ ರಹಸ್ಯ ಬಯಲು

    ಡಿಕೆಶಿ ಜೊತೆ ದಿವ್ಯಾ ಹಾಗರಗಿ ಫೋಟೋ ತೆಗೆಸಿಕೊಂಡ ರಹಸ್ಯ ಬಯಲು

    ಬೆಂಗಳೂರು: ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿರುವ ದಿವ್ಯಾ ಹಾಗರಗಿ ರಾಜಕೀಯ ಮುಖಂಡರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದ ಹಿಂದಿನ ರಹಸ್ಯ ಬಯಲಾಗಿದೆ.

    ದಿವ್ಯಾ ಹಾಗರಗಿ ಕಂಡ ಕಂಡ ರಾಜಕೀಯ ಮುಖಂಡರ ಬಳಿ ಫೋಟೋ ತೆಗೆಸಿಕೊಂಡಿರುವುದು ಪಿಎಸ್‍ಐ ಹಗರಣದಲ್ಲಿ ಸಿಲುಕಿಕೊಂಡ ಬಳಿಕ ಬಯಲಾಗಿತ್ತು. ಈ ವೇಳೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಜೊತೆಗೂ ಹಾಗರಗಿ ಫೋಟೋ ತೆಗೆಸಿಕೊಂಡಿದ್ದರು. ಇದೀಗ ಈ ಫೋಟೋ ಹಿಂದಿನ ಅಸಲಿಯತ್ತು ಬಯಲಾಗಿದೆ. ಇದನ್ನೂ ಓದಿ: ನಿನ್ನಿಂದ್ಲೇ ಎಲ್ಲಾ ಆಗಿದ್ದು ನಿನ್ನಿಂದ ಅಪ್ಪ ಜೈಲಿಗೆ ಹೋಗಿದ್ದು – ದಿವ್ಯಾ ಹಾಗರಗಿಯನ್ನು ತರಾಟೆಗೆ ತೆಗೆದುಕೊಂಡ ಪುತ್ರ

    DK SHIVAKUMAR

    ಡಿ.ಕೆ ಶಿವಕುಮಾರ್ ಮನೆಗೆ ಬಂದು ಹಾಗರಗಿ ಫೋಟೋ ಕೂಡ ತೆಗಿಸಿಕೊಂಡಿದ್ಲು ಈ ಬಗ್ಗೆ ಪ್ರಶ್ನಿಸಿದಾಗ ಡಿ.ಕೆ ಶಿವಕುಮಾರ್, ಮನೆಗೆ ಬಂದವರು ಫೋಟೋ ತೆಗಿಸಿಕೊಳ್ತಾರೆ ಅದ್ರಲ್ಲಿ ಏನಿದೆ ಎಂದಿದ್ದರು. ಅದು ನಿಜ, ದಿವ್ಯಾ ಹಾಗರಗಿ ಪದೇ ಪದೇ ಡಿ.ಕೆ ಶಿವಕುಮಾರ್ ಮನೆಗೆ ಬರ್ತಾ ಇದ್ದಳು. ತನ್ನ ಕಾರ್ಯ ಸಿದ್ಧಿಗಾಗಿ, ಒಮ್ಮೆ ಮಾತ್ರ ಬಂದಿದಲ್ಲ ಸಾಕಷ್ಟು ಬಾರಿ ಬಂದಿದ್ದಾಳೆ. ಅದು ತನ್ನ ಕಾಲೇಜ್ ತೆರೆಯಲು ಪರವಾನಿಗೆ ಪಡೆಯೋದಕ್ಕಾಗಿ ಎಂಬ ಸತ್ಯ ಇದೀಗ ಬಯಲಾಗಿದೆ. ಇದನ್ನೂ ಓದಿ: ಪಿಎಸ್‌ಐ ಸಮವಸ್ತ್ರ ಧರಿಸಿ ಬಿಲ್ಡಪ್‌ – ಬೆಂಗಳೂರಿನ ಕಾನ್‌ಸ್ಟೇಬಲ್‌ ಅಮಾನತು

    ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಡಿ.ಕೆ ಶಿವಕುಮಾರ್ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಈ ವೇಳೆ ಡಿ.ಕೆ ಶಿವಕುಮಾರ್ ಅವರೇ ದಿವ್ಯಾ ಹಾಗರಗಿ ನರ್ಸಿಂಗ್ ಕಾಲೇಜ್‍ಗೆ ಪರವಾಗಿನಿಗೆ ನೀಡಿದ್ದರು. ಈ ಪರವಾನಿಗೆ ಪಡೆಯಲು ದಿವ್ಯಾ ಹಾಗರಗಿ, ಡಿ.ಕೆ ಶಿವಕುಮಾರ್ ಮನೆಗೆ ಬಂದಿದ್ದಳು.

    ಡಿಕೆಶಿ ಮಾತ್ರವಲ್ಲ ಉಳಿದ ರಾಜಕೀಯ ಮುಖಂಡರ ಜೊತೆ ಕೂಡ ತೆಗೆಸಿ ಕೊಂಡ ಫೋಟೋ ಹಿಂದಿನ ಸತ್ಯ ಮಾತ್ರ ಗೊತ್ತಾಗುತ್ತಿರಲಿಲ್ಲ. ದಿವ್ಯಾ ಹಾಗರಗಿ ಸುಖಾ ಸುಮ್ಮನೆ ಫೋಟೋ ತೆಗಿಸಿಕೊಳ್ತಾ ಇರಲಿಲ್ಲ. ತನ್ನ ಕಾರ್ಯ ಸಿದ್ಧಿಗಾಗಿಯೇ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಳು. ಆ ಮಾಸ್ಟರ್ ಪ್ಲಾನ್‍ಗಳು ಕೂಡ ಹಾಗೇ ಸಕ್ಸಸ್ ಕೂಡ ಆಗುತ್ತಿತ್ತು ಎಂಬ ಸ್ಫೋಟಕ ಸತ್ಯ ಬಯಲಾಗಿದೆ.

  • PSI ಹಗರಣ CBI ತನಿಖೆಗೆ ಒಪ್ಪಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹ

    PSI ಹಗರಣ CBI ತನಿಖೆಗೆ ಒಪ್ಪಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹ

    ಬೆಳಗಾವಿ: PSI ಹಗರಣದಲ್ಲಿ ರಾಜಕಾರಣಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವುದು ಕಂಡುಬಂದಿದೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.

    PSI SCAM

    ಇಲ್ಲಿನ ಗೋಕಾಕ್‌ ನಗರದ ಹಿಲ್ಲ್ ಗಾರ್ಡನ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಹಗರಣದಲ್ಲಿ ಸಚಿವರು, ಶಾಸಕರ ಹೆಸರು ಕೇಳಿಬಂದಿದೆ. ನೆನ್ನೆಯಷ್ಟೇ ಮಾಜಿ ಸಿಎಂ ಪುತ್ರನ ಹೆಸರೂ ಕೇಳಿ ಬಂದಿದೆ. ಪೊಲೀಸರೂ ಭಾಗಿಯಾಗಿರುವ ಈ ಪ್ರಕರಣದಲ್ಲಿ ಸರ್ಕಾರ ಪೊಲೀಸರಿಂದಲೇ ತನಿಖೆ ನಡೆಸುವುದು ಎಷ್ಟರಮಟ್ಟಿಗೆ ಸೂಕ್ತ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಶ್ವಥ್ ನಾರಾಯಣಗೂ PSI ಅಕ್ರಮಕ್ಕೂ ಸಂಬಂಧವಿಲ್ಲ: ಮುನಿರತ್ನ

    ಒಂದೇ ಕೇಂದ್ರದಲ್ಲಿ ಪರಿಕ್ಷೆ ಬರೆದ ಅತಿಹೆಚ್ಚು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಈಗಾಗಲೇ ಬ್ಲೂಟೂತ್ ಬಳಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ಬಯಲಾಗಿದೆ. ಇದೆಲ್ಲವನ್ನು ಪ್ರಾಮಾಣಿಕವಾಗಿ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಸೂಕ್ತ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    Divya hagaragi (2)

    ಇದೇ ವೇಳೆ ದಿವ್ಯಾ ಹಾಗರಗಿಯನ್ನು ಕಾಂಗ್ರೆಸ್‌ನವರು ಮುಚ್ಚಿಡಲು ಆಕೆ ಸಣ್ಣ ಮಗು ಅಲ್ಲ. ಬಿಜೆಪಿ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮರಾಠಾ ಸಮುದಾಯದ ಶ್ರೀಮಂತ್ ಪಾಟೀಲ್ ಇಲ್ಲವೆ ನನಗೆ ಸಚಿವ ಸ್ಥಾನ ಬೇಕು: ಅನಿಲ್ ಬೆನಕೆ

    ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೇ 7, 8ರಂದು ಬೆಳಗಾವಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಾನೂ ಅವರೊಂದಿಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದರು.

    Siddaramaiah

    ಇದರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೇ 7ರಂದು ಮಧ್ಯಾಹ್ನ 3 ಗಂಟೆಗೆ ಬೆಳಗಾವಿ ನಗರ ಕಾಂಗ್ರೆಸ್ ಭವನದಲ್ಲಿ ವಿಧಾನ ಪರಿಷತ್ ನೈರುತ್ಯ ಪದವೀಧರರ ಕ್ಷೇತ್ರದಿಂದ ಚುನಾವಣೆ ಕುರಿತು ಸಭೆ ನಡೆಸಲಿದ್ದಾರೆ. ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

  • ದಿವ್ಯಾ ಹಾಗರಗಿಗೆ ಆಶ್ರಯ ಕೊಟ್ಟಿರೋದು ಕಾಂಗ್ರೆಸ್‌ನವರೇ: ಆರಗ ಜ್ಞಾನೇಂದ್ರ

    ದಿವ್ಯಾ ಹಾಗರಗಿಗೆ ಆಶ್ರಯ ಕೊಟ್ಟಿರೋದು ಕಾಂಗ್ರೆಸ್‌ನವರೇ: ಆರಗ ಜ್ಞಾನೇಂದ್ರ

    ತುಮಕೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್‌ನ ದೊಡ್ಡ ದೊಡ್ಡ ಮುಖಂಡರು ಸಿಕ್ಕಿ ಹಾಕಿಕೊಂಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅದರಲ್ಲಿ ಭಾಗಿಯಾಗಿದ್ದಾರೆ. ಪೂನಾದಲ್ಲಿ ದಿವ್ಯಾ ಹಾಗರಗಿಗೆ ಆಶ್ರಯ ಕೊಟ್ಟಿರೋದು ಕಾಂಗ್ರೆಸ್‌ನವರೇ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.

    ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾವುದೇ ಪಕ್ಷ ಪಂಗಡ ನೋಡದೇ, ಮೂಗು ತೂರಿಸದೇ ತನಿಖೆ ಮಾಡಲು ಬಿಟ್ಟಿದ್ದೇವೆ. ಯಾರ ದಾಖಲಾತಿ ಸಿಗುತ್ತದೆಯೋ ಅಂತವರನ್ನು ಅರೆಸ್ಟ್ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ತಂದೆ ಆಸೆಯಂತೆ ಮುಸ್ಲಿಂ ಸಮುದಾಯಕ್ಕೆ ಭೂಮಿ ದಾನಕೊಟ್ಟ ಹಿಂದೂ ಸಹೋದರಿಯರು

    ಕಾಂಗ್ರೆಸ್‌ನ ಅನೇಕ ಮುಖಂಡರು ನನ್ನ ಬಳಿ ಆ ವೀಡಿಯೋ ಇದೆ, ಈ ವೀಡಿಯೋ ಇದೆ ಎಂದು ಹೇಳಿದರು. ಆದರೇ ಅವರ್ಯಾರೂ ಅವುಗಳನ್ನು ತನಿಖಾಧಿಕಾರಿಗಳಿಗೆ ಒಪ್ಪಿಸುತ್ತಿಲ್ಲ. ಅದರ ಬದಲಾಗಿ ಯಾರ್ಯಾರದ್ದೋ ಚಾರಿತ್ರ‍್ಯ ಹರಣ ಮಾಡುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಪ್ರಾಮಾಣಿಕವಾದ ತನಿಖೆಯಲ್ಲಿ ನಂಬಿಕೆ ಇಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ವಿನಾಃಕಾರಣ ಸರ್ಕಾರವನ್ನು ಟೀಕಿಸುತ್ತಿದ್ದಾರೆ: ಆರಗ ಜ್ಞಾನೇಂದ್ರ

    araga jnanendra

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತನಾಡಲು ವಿಷಯಗಳೇ ಇಲ್ಲ ಎಂದು ಯಾರ್ಯಾರದ್ದೋ ಚಾರಿತ್ರ‍್ಯ ಹರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಕಾಲದ್ದೇ ಸಿಒಡಿ ಮೇಲೆ ಅವರಿಗೆ ನಂಬಿಕೆ ಇಲ್ಲ ಅಂದರೆ ಹೇಗೆ? ನಂಬಿಕೆ ಇಲ್ಲ ಎಂದಿದ್ದರೆ ಸಿಒಡಿಯನ್ನು ಆಗಲೇ ವಿಸರ್ಜನೆ ಮಾಡಬೇಕಿತ್ತು. ಲೋಕಾಯುಕ್ತದ ಕತ್ತು ಹಿಸುಕಿದವರು ಯಾರು? ಕಾಂಗ್ರೆಸ್ ಕಾಲದಲ್ಲಿ ಪ್ರಬಲವಾಗಿದ್ದ ಲೋಕಾಯುಕ್ತದ ಕತ್ತು ಹಿಸುಕಲಾಯಿತು. ಆಮೇಲೆ ಅವರೇ ಎಸಿಬಿ ಜಾರಿಗೆ ತಂದವರು ಎಂದು ಆರಗ ಜ್ಞಾನೇಂದ್ರ ಹರಿಹಾಯ್ದರು.

  • ನಿನ್ನಿಂದ್ಲೇ ಎಲ್ಲಾ ಆಗಿದ್ದು ನಿನ್ನಿಂದ ಅಪ್ಪ ಜೈಲಿಗೆ ಹೋಗಿದ್ದು – ದಿವ್ಯಾ ಹಾಗರಗಿಯನ್ನು ತರಾಟೆಗೆ ತೆಗೆದುಕೊಂಡ ಪುತ್ರ

    ನಿನ್ನಿಂದ್ಲೇ ಎಲ್ಲಾ ಆಗಿದ್ದು ನಿನ್ನಿಂದ ಅಪ್ಪ ಜೈಲಿಗೆ ಹೋಗಿದ್ದು – ದಿವ್ಯಾ ಹಾಗರಗಿಯನ್ನು ತರಾಟೆಗೆ ತೆಗೆದುಕೊಂಡ ಪುತ್ರ

    ಕಲಬುರಗಿ: ಇಂತಹ ಸ್ಥಿತಿ ಯಾವ ಅಮ್ಮನಿಗೂ ಬರಬಾರದು ಅನಿಸುತ್ತೆ. ನಿನ್ನಿಂದ್ಲೇ ಎಲ್ಲಾ ಆಗಿದ್ದು, ನಿನ್ನಿಂದ್ಲೇ ಅಪ್ಪ ಜೈಲಿಗೆ ಹೋದ್ರು. ನಾನು ಎಲ್ಲವನ್ನು ಟಿವಿಯಲ್ಲಿ ನೋಡಿದ್ದೇನೆ ಎಂದು ಬಂಧಿತೆ ದಿವ್ಯಾ ಹಾಗರಗಿಯನ್ನು ಅವರ ಪುತ್ರ ತರಾಟೆಗೆ ತೆಗೆದುಕೊಂಡಿದ್ದಾನೆ.

    ದಿವ್ಯಾ ಹಾಗರಗಿ ವಿರುದ್ಧ ಪುತ್ರ ಕಿಡಿಕಾರುತ್ತಿದ್ದಂತೆ ದಿವ್ಯಾ ಹಾಗರಗಿ ಪಶ್ಚತ್ತಾಪದಿಂದ ಗಳಗಳನೇ ಕಣ್ಣೀರಿಟ್ಟಿದ್ದಾರೆ. ಕಲಬುರಗಿಯನ್ನು ಕೇಂದ್ರವಾಗಿರಿಸಿಕೊಂಡು ಸಿಐಡಿ ತನಿಖೆ ತೀವ್ರಗೊಳಿಸಿದೆ. ಕೋರ್ಟ್ ನೀಡಿದ್ದ ಗಡುವು ನಾಳೆಗೆ ಮುಗಿಯಲಿರೋ ಹಿನ್ನೆಲೆಯಲ್ಲಿ ಪಿಎಸ್‍ಐ ಹಗರಣದ ಮತ್ತೋರ್ವ ಆರೋಪಿ, ಜ್ಞಾನಜ್ಯೋತಿ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್ ಸಿಐಡಿ ಮುಂದೆ ಇಂದು ಶರಣಾಗಿದ್ದಾರೆ. ಇದನ್ನೂ ಓದಿ: ಸಿಐಡಿ ಕಚೇರಿಗೆ ಹೊಸಬಟ್ಟೆ ಸಮೇತ ಆಗಮಿಸಿದ ಆರೋಪಿ ಸದ್ದಾಂ ಫ್ಯಾಮಿಲಿ

    ನೀರಾವರಿ ಇಲಾಖೆ ಜ್ಯೂನಿಯರ್ ಎಂಜಿನಿಯರ್ ಮಂಜುನಾಥ್ ಮೆಳಕುಂದಿ ನಡೆಸ್ತಿದ್ದ ಡೀಲಿಂಗ್ ಕಂಡು ಸ್ವತಃ ಅವ್ರ ಅಪ್ಪ ವಿಪರೀತವಾಗಿ ಮನನೊಂದಿದ್ರು. ಕೆಟ್ಟ ಕೆಲಸ ಮಾಡಿರೋ ನಿನಗೆ ನಮ್ಮ ಮನೆಯಲ್ಲಿ ಜಾಗ ಇಲ್ಲ. ನೀನು ಸರೆಂಡರ್ ಆಗದಿದ್ರೆ ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆತ್ತಪ್ಪ ವಾರ್ನಿಂಗ್ ನೀಡಿದ್ರು ಎನ್ನಲಾಗಿದೆ. ಪರಿಶೀಲನೆಗಾಗಿ ಮನೆಗೆ ಬಂದ ಸಿಐಡಿ ಅಧಿಕಾರಿಗಳಿಗೆ ಮಂಜುನಾಥ್ ತಂದೆ ಶಹಾಬ್ಬಾಶ್‍ಗಿರಿ ಕೊಟ್ಟಿದ್ರು. ನನಗೂ ಇದೇ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಸಂತೃಪ್ತಿ ಇದೆ. ನೂರಾರು ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನಿಮ್ಮಿಂದ ಉಪಕಾರ ಆಗಲಿ. ನಿಮ್ಮ ಕೆಲಸ ನೀವು ಮಾಡಿ ಎಂದು ಸಿಐಡಿ ಅಧಿಕಾರಿಗಳಿಗೆ ತಿಳಿಸಿದ್ರು. ಇದನ್ನೂ ಓದಿ: PSI ಟಾಪರ್ಸ್‍ಗಳ ಅಸಲಿ ಮುಖವಾಡ ಬಯಲು – ತಾತ್ಕಾಲಿಕ ಪಟ್ಟಿಯಲ್ಲಿ ಬೆಂಗ್ಳೂರಿನ 172 ಮಂದಿ ಆಯ್ಕೆ!

    ನಿನ್ನೆ ಮಂಜುನಾಥ್ ಮೆಳಕುಂದಿ ತಾವಾಗಿಯೇ ಬಂದು ಸಿಐಡಿ ಪೊಲೀಸರಿಗೆ ಶರಣಾಗಿದ್ದಾರೆ. ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಪಿಎಸ್‍ಐ ಹಗರಣದಲ್ಲಿ ಎಫ್‍ಐಆರ್ ದಾಖಲಾದ ಬಳಿಕ ನಾಪತ್ತೆ ಆಗಿದ್ದರು. ಈ ಹಿನ್ನೆಲೆಯಲ್ಲಿ 6 ದಿನಗೊಳಗೆ ಶರಣಾಗಬೇಕು, ಇಲ್ಲದಿದ್ದರೇ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಕೋರ್ಟ್ ಎಚ್ಚರಿಕೆ ನೀಡಿತ್ತು. ನಿನ್ನೆ ಆಟೋದಲ್ಲಿ ಒಬ್ಬನೇ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದರು.