Tag: divya bharathi

  • ಮದುವೆ ಆದವನೊಂದಿಗೆ ನಾನು ಸುತ್ತಾಡಲ್ಲ- ಜಿ.ವಿ ಪ್ರಕಾಶ್‌ ಜೊತೆಗಿನ ಡೇಟಿಂಗ್‌ ಸುದ್ದಿಗೆ ದಿವ್ಯಾ ಪ್ರತಿಕ್ರಿಯೆ

    ಮದುವೆ ಆದವನೊಂದಿಗೆ ನಾನು ಸುತ್ತಾಡಲ್ಲ- ಜಿ.ವಿ ಪ್ರಕಾಶ್‌ ಜೊತೆಗಿನ ಡೇಟಿಂಗ್‌ ಸುದ್ದಿಗೆ ದಿವ್ಯಾ ಪ್ರತಿಕ್ರಿಯೆ

    ಟ ಕಮ್ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ (G.V Prakash) ಜೊತೆ ದಿವ್ಯಾ ಭಾರತಿ (Divya Bharathi) ಡೇಟಿಂಗ್ ಬಗ್ಗೆ ಹಲವು ದಿನಗಳಿಂದ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ದಿವ್ಯಾ ರಿಯಾಕ್ಟ್ ಮಾಡಿದ್ದಾರೆ. ಮದುವೆ ಆದ ವ್ಯಕ್ತಿಯೊಡನೆ ನಾನೇಕೆ ಸುತ್ತಲಿ, ಇದೊಂದು ಸುಳ್ಳು ವದಂತಿ ಎಂದು ನಟಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ನನಗೆ ವಯಸ್ಸು 29 ಆಗ್ತಿದೆ: ಬರ್ತ್‌ಡೇ ಆಚರಿಸುವ ಸಂಭ್ರಮ ಹಂಚಿಕೊಂಡ ರಶ್ಮಿಕಾ ಮಂದಣ್ಣ

    ನನ್ನ ಹೆಸರನ್ನು ಖಾಸಗಿ ಕುಟುಂಬದ ವಿಚಾರಕ್ಕೆ ಅನಗತ್ಯವಾಗಿ ಎಳೆದು ತರಲಾಗಿದೆ. ಜಿ.ವಿ ಪ್ರಕಾಶ್ ಅವರ ಕೌಟುಂಬಿಕ ಸಮಸ್ಯೆಗೂ ನನಗೂ ಸಂಬಂಧವಿಲ್ಲ. ನಾನು ಯಾವುದೇ ನಟರೊಂದಿಗೆ ಡೇಟಿಂಗ್ ಮಾಡುವುದಿಲ್ಲ. ಅದರಲ್ಲೂ ವಿವಾಹ ಆದವನೊಂದಿಗೆ ಸುತ್ತಾಡಲ್ಲ ಎಂದು ಖಡಕ್ ಆಗಿ ನಟಿ ಹೇಳಿದ್ದಾರೆ. ಇದನ್ನೂ ಓದಿ:‘ಸ್ತ್ರೀ 2’ ಸಕ್ಸಸ್ ಬಳಿಕ ಶ್ರದ್ಧಾ ಕಪೂರ್‌ಗೆ ಒಲಿದ ಅದೃಷ್ಟ- ನಟಿಗೆ ಬಿಗ್ ಚಾನ್ಸ್

    ಇಂತಹ ವಿಚಾರಗಳಿಗೆ ಗಮನ ಕೊಡುವುದು ಬೇಡ ಎಂದು ನಾನು ಭಾವಿಸಿ ಸುಮ್ಮನಿದ್ದೆ, ಆದರೀಗ ಎಲ್ಲವೂ ಮಿತಿ ಮೀರಿದೆ. ನಾನು ಸ್ವಾವಲಂಬಿ ಮಹಿಳೆ, ಈ ರೀತಿ ನಿಜವಲ್ಲದ ಆರೋಪಗಳಿಗೆ ನನ್ನ ಇಮೇಜ್ ಹಾಳಾಗಲು ನಾನು ಬಿಡುವುದಿಲ್ಲ. ಹೀಗೆ ನೆಗೆಟಿವಿ ಹರಡುವ ಬದಲು ಉತ್ತಮ ಜಗತ್ತನ್ನು ನಿರ್ಮಿಸುವತ್ತ ಗಮನ ಹರಿಸೋಣ. ಈ ವಿಚಾರದ ಬಗ್ಗೆ ಇದೇ ನನ್ನ ಮೊದಲ ಹಾಗೂ ಕಡೆಯ ಪ್ರತಿಕ್ರಿಯೆ ಎಂದು ನಟಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Divyabharathi (@divyabharathioffl)

    2021ರಲ್ಲಿ ‘ಬ್ಯಾಚುಲರ್’ ಸಿನಿಮಾದಲ್ಲಿ ಜಿ.ವಿ ಪ್ರಕಾಶ್ ಮತ್ತು ದಿವ್ಯಾ ಭಾರತಿ ಒಟ್ಟಿಗೆ ಕೆಲಸ ಮಾಡಿದ್ದರು. ಅಂದಿನಿಂದ ಇಬ್ಬರ ನಡುವೆ ಲವ್ವಿ ಡವ್ವಿ ಇದೆ ಎಂದೇ ಸುದ್ದಿ ಹಬ್ಬಿತ್ತು. ಈ ವಿಚಾರ ಸುಳ್ಳು ಇಬ್ಬರೂ ಈ ಮೊದಲೇ ತಿರಸ್ಕರಿಸಿದ್ದರು. ಬಳಿಕ ಕಳೆದ ವರ್ಷ ಸೈಂಧವಿ ಜೊತೆ ಜಿ.ವಿ ಪ್ರಕಾಶ್ ಡಿವೋರ್ಸ್ ಘೋಷಿಸಿದ್ದರು. 10 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದರು. ಈ ಬೆನ್ನಲ್ಲೇ ಮತ್ತೆ ದಿವ್ಯಾ ಮತ್ತು ಪ್ರಕಾಶ್ ಡೇಟಿಂಗ್ ಬಗ್ಗೆ ಗುಸು ಗುಸು ಶುರುವಾಗಿತ್ತು. ಅದಕ್ಕೆಲ್ಲಾ ನಟಿ ಈಗ ತಕ್ಕ ಉತ್ತರ ಕೊಟ್ಟಿದ್ದಾರೆ.

  • ಶ್ರೀದೇವಿ ಥರನೇ ಇದ್ದ, ಅಕಾಲಿಕ ಮರಣ ಹೊಂದಿದ ನಟಿ ದಿವ್ಯ ಭಾರತಿ ಬಗ್ಗೆ ನಿಮಗೆ ಗೊತ್ತಾ?

    ಶ್ರೀದೇವಿ ಥರನೇ ಇದ್ದ, ಅಕಾಲಿಕ ಮರಣ ಹೊಂದಿದ ನಟಿ ದಿವ್ಯ ಭಾರತಿ ಬಗ್ಗೆ ನಿಮಗೆ ಗೊತ್ತಾ?

    ನವದೆಹಲಿ: ಹಿರಿಯ ನಟಿ ಶ್ರೀದೇವಿಯ ಅಕಾಲಿಕ ಮರಣ ಇಡೀ ಭಾರತೀಯ ಚಿತ್ರರಂಗಕ್ಕೆ ಆಘಾತ ತಂದಿದೆ. 54 ವರ್ಷ ವಯಸ್ಸಿನ ಶ್ರೀದೇವಿ ಹೃದಯಾಘಾತದಿಂದ ಶನಿವಾರದಂದು ದುಬೈನಲ್ಲಿ ವಿಧಿವಶರಾದ್ರು. ಶ್ರೀದೇವಿ ನಿಧನ ಅವರ ಸಮಕಾಲೀನ ನಟಿಯಾದ ದಿವ್ಯ ಭಾರತಿ ಅವರ ನೆನಪು ತರಿಸುತ್ತದೆ.

    ದಿವ್ಯ ಭಾರತಿ ಕೂಡ 43ನೇ ವಯಸ್ಸಿಗೆ ಅಕಾಲಿಕ ಮರಣ ಹೊಂದಿದ್ದರು. ದಿವ್ಯ ಮುಖಚಹರೆಯಲ್ಲಿ ಶ್ರೀದೇವಿ ಅವರನ್ನೇ ಹೋಲುತ್ತಿದ್ದರಿಂದ ಎಷ್ಟೋ ಬಾರಿ ಅವರನ್ನ ಶ್ರೀದೇವಿ ಅವರ ತಂಗಿ ಎಂದೇ ಕರೆಯಲಾಗುತ್ತಿತ್ತು.

    90ರ ದಶಕದ ಆರಂಭದಲ್ಲಿ ದಿವ್ಯ ಭಾರತಿ ತನ್ನ ಅಭಿನಯದ ಮೂಲಕ ಶ್ರೀದೇವಿ ಅವರ ಸ್ಥಾನಕ್ಕೆ ಬಂದುಬಿಡುತ್ತಾರೆ ಎಂದು ಜನ ನಂಬಲು ಶುರುಮಾಡಿದ್ದರು. ಆದ್ರೆ ದಿವ್ಯ ಕೂಡ ಅಕಾಲಿಕವಾಗಿ ನಿಧನ ಹೊಂದಿದಾಗ ಇಡೀ ಚಿತ್ರರಂಗಕ್ಕೆ ಆಘಾತವಾಗಿತ್ತು. ಅಲ್ಲದೆ ದಿವ್ಯ ಜನಿಸಿದ್ದು 1974ರ ಫೆಬ್ರವರಿ 25ರಂದು. ಶ್ರೀದೇವಿ ಅವರ ನಿಧನದ ಒಂದು ದಿನ ಬಳಿಕ ದಿವ್ಯ ಭಾರತಿ ಜನ್ಮ ವಾರ್ಷಿಕೋತ್ಸವ.

    90ರ ದಶಕದ ಆರಂಭದಲ್ಲಿ ದಿವ್ಯಾ ಹಿಂದಿ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿದರು. ಕೆಲವೇ ತಿಂಗಳುಗಳಲ್ಲಿ ಅವರ ಅನೇಕ ಚಿತ್ರಗಳು ಒಂದರ ನಂತರ ಒಂದು ಬಿಡುಗಡೆಯಾದವು. ಈ ವೇಳೆಗೆ ದಿವ್ಯ ಚಿತ್ರರಂಗದಲ್ಲಿ ಅದ್ಭುತ ಕಲಾವಿದೆಯಾಗಿ ಬೆಳೆದಿದ್ದರು. ವರದಿಗಳ ಪ್ರಕಾರ ಕೇವಲ ಮೊದಲ ಮೂರು ವರ್ಷದ ಅವಧಿಯಲ್ಲಿ ಸುಮಾರು 13 ಸಿನಿಮಾಗಳಲ್ಲಿ ದಿಯ ನಟಿಸಿದ್ದರು. ಹಾಗೇ ಅನೇಕ ದೊಡ್ಡ ಬಜೆಟ್ ಸಿನಿಮಾಗಳನ್ನ ಕೈಗೆತ್ತಿಕೊಂಡಿದ್ದರು.

    ಆದ್ರೆ 1993ರ ಏಪ್ರಿಲ್ 5ರಂದು ದಿವ್ಯಾ ದುರಂತ ಸಾವು ಕಂಡರು. ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ದಿವ್ಯ ಬಾಲ್ಕನಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದರು. ದಿವ್ಯ ಭಾರತಿಯ ಹಠಾತ್ ಸಾವಿನಿಂದ ಅವರು ಸಹಿ ಹಾಕಿದ್ದ ಮುಂದಿನ ಸಿನಿಮಾಗಳು ಅರ್ಧಕ್ಕೆ ನಿಂತವು.

    ಅದರಲ್ಲಿ ಒಂದು ಸಿನಿಮಾ ಲಾಡ್ಲಾ. ದಿವ್ಯ ಸಾವಿಗೂ ಮುನ್ನ ಈ ಚಿತ್ರದ ಬಹುತೇಕ ಭಾಗ ಚಿತ್ರೀಕರಣವಾಗಿತ್ತು. ಆದ್ರೆ ಆಕೆಯ ದುರಂತ ಸಾವಿನ ನಂತರ ಚಿತ್ರ ತಯಾರಕರು ಮತ್ತೆ ಶ್ರೀದೇವಿ ಅವರನ್ನ ಕರೆತಂದರು. ಶ್ರೀದೇವಿ ಅವರ ಜೊತೆ ಮತ್ತೊಮ್ಮೆ ಆ ಸಿನಿಮಾದ ಚಿತ್ರೀಕರಣ ಮಾಡಲಾಗಿತ್ತು. ಈ ಚಿತ್ರದಲ್ಲಿ ಶ್ರೀದೇವಿ ಅನಿಲ್ ಕಪೂರ್ ಮತ್ತು ರವೀನಾ ಟಂಡನ್ ಜೊತೆ ಕಾಣಿಸಿಕೊಂಡಿದ್ದರು. ಹಾಗೂ ಈ ಚಿತ್ರ ಬ್ಲಾಕ್‍ಬಾಸ್ಟರ್ ಹಿಟ್ ಆಯ್ತು. ಆ ಘಟ್ಟದಲ್ಲಿ ಶ್ರೀದೇವಿ ಹಾಗೂ ದಿವ್ಯ ಭಾರತಿ ಇಬ್ಬರನ್ನೂ ಒಬ್ಬರಿಗೊಬ್ಬರು ಪರ್ಯಾಯ ಎಂದೇ ಪರಿಗಣಿಸಲಾಗಿತ್ತು.