Tag: Divider

  • ನಿಯಂತ್ರಣ ತಪ್ಪಿ ಡಿವೈಡರ್‌ಗೆ ಥಾರ್ ಡಿಕ್ಕಿ – ಐವರು ದುರ್ಮರಣ, ಓರ್ವ ಗಂಭೀರ

    ನಿಯಂತ್ರಣ ತಪ್ಪಿ ಡಿವೈಡರ್‌ಗೆ ಥಾರ್ ಡಿಕ್ಕಿ – ಐವರು ದುರ್ಮರಣ, ಓರ್ವ ಗಂಭೀರ

    ಚಂಡೀಗಢ: ವೇಗವಾಗಿ ಬಂದ ಥಾರ್ (Thar) ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ಹರಿಯಾಣದ ಗುರುಗ್ರಾಮದಲ್ಲಿ (Gurugram) ನಡೆದಿದೆ.

    ಶನಿವಾರ ಮುಂಜಾನೆ 4:30ರ ಸುಮಾರಿಗೆ ಗುರುಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಮೂವರು ಪುರುಷರು ಹಾಗೂ ಮೂವರು ಮಹಿಳೆಯರು ಸೇರಿದಂತೆ ಒಟ್ಟು ಆರು ಮಂದಿ ಕೆಲಸದ ನಿಮಿತ್ತ ಉತ್ತರ ಪ್ರದೇಶದಿಂದ ಗುರುಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಉಂಟಾಗಿದೆ. ಇದನ್ನೂ ಓದಿ: ಬುರುಡೆ ದೆಹಲಿಗೆ ಎತ್ತಿಕೊಂಡು ಹೋಗಿದ್ದು, ಸುಪ್ರೀಂ ಕೋರ್ಟ್‌ಗೆ ಹೋಗಿದ್ದು ಎಲ್ಲಾ ಗೊತ್ತು: ಡಿಕೆಶಿ ಬಾಂಬ್‌

    ಅತಿವೇಗದ ಚಾಲನೆಯಿಂದ ಚಾಲಕನ ನಿಯಂತ್ರಣ ತಪ್ಪಿ ಥಾರ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಇನ್ನೋರ್ವ ಗಾಯಾಳುವಿನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಭೀಕರ ಅಪಘಾತದ ಪರಿಣಾಮ ಥಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ನಿರಂತರ ಮಳೆ – ಮನೆಯ ಮೇಲ್ಛಾವಣಿ, ಗೋಡೆ ಕುಸಿದು ಬಾಲಕ ಸಾವು

  • ತಿಮ್ಮಾಪುರ ಬೆಂಬಲಿಗನಿಂದ ಗೊಬ್ಬರದ ಅಂಗಡಿಗಾಗಿ ಹೈವೇ ಡಿವೈಡರ್‌ ತೆರವು – ಗ್ರಾಮಸ್ಥರಿಂದ ಪ್ರತಿಭಟನೆ

    ತಿಮ್ಮಾಪುರ ಬೆಂಬಲಿಗನಿಂದ ಗೊಬ್ಬರದ ಅಂಗಡಿಗಾಗಿ ಹೈವೇ ಡಿವೈಡರ್‌ ತೆರವು – ಗ್ರಾಮಸ್ಥರಿಂದ ಪ್ರತಿಭಟನೆ

    ಬಾಗಲಕೋಟೆ: ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಆರ್ ಬಿ ತಿಮ್ಮಾಪುರ (R B Timmapur) ಬೆಂಬಲಿಗನೊಬ್ಬ ಧಾರವಾಡ-ವಿಜಯಪುರ (Dharwad V ijayapura) ಹೆದ್ದಾರಿಯಲ್ಲಿ ಡಿವೈಡರ್ ಒಡೆಸಿ ದರ್ಪ ತೋರಿರುವ ಘಟನೆ ಮುಧೋಳ ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿ ನಡೆದಿದೆ.

    ಕಾಂಗ್ರೆಸ್ (Congress) ಮುಖಂಡ ಕೃಷ್ಣಾ ಪರೆಡ್ಡಿ ಯಂತ್ರ ತರಿಸಿ ಮುಂದೆ ನಿಂತು ಡಿವೈಡರ್ ತೆರವುಗೊಳಿಸಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದಾರೆ.  ಇದನ್ನೂ ಓದಿ: ಬಿಹಾರ ಚುನಾವಣೆಗೆ ನಿತೀಶ್ ಸಜ್ಜು ಬಿಹಾರದ ಮಹಿಳೆಯರಿಗೆ ಉದ್ಯೋಗದಲ್ಲಿ 35% ಮೀಸಲಾತಿ ಘೋಷಣೆ

    ಕೃಷ್ಣಾ ಪರೆಡ್ಡಿ ತನ್ನ ಗೊಬ್ಬರದ ಅಂಗಡಿಗೆ ಡಿವೈಡರ್ ತೊಂದರೆಯಾಗುತ್ತದೆಂದು ಒಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಡಿವೈಡರ್ ತೆರವು ಖಂಡಿಸಿ ದಿಢೀರ್‌ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ.

    ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಸಾರ್ವಜನಿಕರ ಆಸ್ತಿಯಾದ ರಸ್ತೆ ವಿಭಜಕವನ್ನು ಹೇಗೆ ಒಡೆದು ಹಾಕುತ್ತಾರೆ? ಎಲ್ಲಾ ಗೊತ್ತಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ ಎಂದು ಮುದ್ದಾಪುರ ಗ್ರಾಮಸ್ಥರು ದೂರಿದರು.

  • ಅವೈಜ್ಞಾನಿಕ ಡಿವೈಡರ್ ಅಳವಡಿಕೆಗೆ ಚಿತ್ರದುರ್ಗದ ಜನ ಹೈರಾಣು

    ಅವೈಜ್ಞಾನಿಕ ಡಿವೈಡರ್ ಅಳವಡಿಕೆಗೆ ಚಿತ್ರದುರ್ಗದ ಜನ ಹೈರಾಣು

    – ರಸ್ತೆ ಅಗಲೀಕರಣಕ್ಕೆ ಮುಂದಾದ ಜಿಲ್ಲಾಡಳಿತ

    ಚಿತ್ರದುರ್ಗ: ಅಪಘಾತಗಳಿಗೆ ಬ್ರೇಕ್ ಹಾಕಲು ರಸ್ತೆ ಅಗಲೀಕರಣಕ್ಕಾಗಿ ಸರ್ಕಾರ ಅನುದಾನ ನೀಡಿತ್ತು. ಆದರೆ ರಸ್ತೆ ಅಗಲೀಕರಣ ಮಾಡದೇ ರಸ್ತೆ ಮಧ್ಯೆ ಅವೈಜ್ಞಾನಿಕವಾಗಿ ಡಿವೈಡರ್ ಅಳವಡಿಸಿದ ಪರಿಣಾಮ ಅವಘಡಗಳು ಮಿತಿಮೀರಿದ ಬೆನ್ನಲ್ಲೇ ಎಚ್ಚೆತ್ತ ಚಿತ್ರದುರ್ಗ (Chitradurga) ಜಿಲ್ಲಾಡಳಿತ ರಸ್ತೆ ಅಗಲೀಕರಣಕ್ಕೆ ಮುಂದಾಗಿದೆ.

    ಐತಿಹಾಸಿಕ ಹಿನ್ನೆಲೆಯ ಕೋಟೆನಾಡು ಚಿತ್ರದುರ್ಗ ಹೇಳಿಕೇಳಿ ರಾಜ್ಯದ ಪ್ರಮುಖ ಪ್ರವಾಸಿತಾಣ. ಈ ತಾಣದ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ. ಅನುದಾನ ನೀಡಿದೆ. ಇದನ್ನು ಸದುಪಯೋಗಪಡಿಸಿಕೊಂಡು ಸುಸಜ್ಜಿತ ರಸ್ತೆ ಮಾಡಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ಅಗಲೀಕರಣ (Road Widening) ಮಾಡದೇ ಅವೈಜ್ಞಾನಿಕವಾಗಿ ಡಿವೈಡರ್ ಅಳವಡಿಸಿರುವ ಪರಿಣಾಮ ಕೋಟೆನಾಡಿನ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಇದನ್ನೂ ಓದಿ: 12 ಮಹಿಳೆಯರು ಕಟ್ಟಿದ ಡೈರಿಯ ಯಶೋಗಾಥೆ – ಗದಗ ಜಿಲ್ಲೆಗೆ ಮಾದರಿ ಡೋಣಿ ಮಹಿಳಾ ಸಂಘ

     

    ಯೋಜನಬದ್ಧವಾಗಿ ರಸ್ತೆ ಅಗಲೀಕರಣ ಮಾಡದೇ, ಕಿಷ್ಕಿಂದೆಯಂತಹ ಪ್ರಮುಖ ರಸ್ತೆಯಲ್ಲಿ ಡಿವೈಡರ್ ಅಳವಡಿಸಿದ್ದು, ವಾಹನ ಸವಾರರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಿದೆ. ಎದುರಿಗೆ ಬರುವ ವಾಹನಗಳನ್ನು ತಪ್ಪಿಸಲು ಡಿವೈಡರ್ ಗಳಿಗೆ ವಾಹನ ಡಿಕ್ಕಿಯಾಗಿ ಅಪಘಾತ ಪ್ರಕರಣ ಹೆಚ್ಚಳವಾಗಿವೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ನ ಶಿವಣ್ಣನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ಹೀಗಾಗಿ ಪಿಡಬ್ಲ್ಯೂಡಿ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಕೂಡಲೇ ಯೋಜನೆಯಂತೆ ರಸ್ತೆಅಗಲಿಕರಣ ಮಾಡಬೇಕೆಂಬ ಒತ್ತಾಯ ನಾಗರೀಕರದ್ದಾಗಿದೆ. ಇನ್ನು ಪ್ರವಾಸಿತಾಣ ಹಾಗೂ ಕಿಷ್ಕಿಂದೆಯಂತಹ ರಸ್ತೆಗಳಲ್ಲಿ ನಿರ್ಮಾಣವಾದ ಡಿವೈಡರ್‌ಗಳಿಂದ ಅವಾಂತರ ನಿರ್ಮಾಣ ಆಗಿದ್ದು, ಅಲರ್ಟ್ ಆದ ಜಿಲ್ಲಾಡಳಿತ ರಸ್ತೆ ಅಗಲೀಕರಣಕ್ಕೆ ಯೋಚಿಸಿದ್ದಾರೆ. ಅಂತಿಮವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಹಾಗೂ ಶಾಸಕರ ಅನುಮತಿ ಪಡೆಯಲು ಅಧಿಕಾರಿಗಳು ಮುಂದಾಗಿರೋದು ಕೋಟೆನಾಡಿನ ಜನರಲ್ಲಿ ಸಂತಸ ತಂದಿದೆ. ಇದನ್ನೂ ಓದಿ: Christmas | ಮಕ್ಕಳಿಗೆ ಗಿಫ್ಟ್‌ ನೀಡುವ ಸಾಂತಾ ಕ್ಲಾಸ್‌ ಯಾರು? ಹಿನ್ನೆಲೆ ಏನು?

  • ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – ಐದು ಮಂದಿ ಸಜೀವ ದಹನ

    ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – ಐದು ಮಂದಿ ಸಜೀವ ದಹನ

    ಲಕ್ನೋ: ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ (Yamuna Expressway) ಕಾರ್-ಬಸ್ ನಡುವೆ ಡಿಕ್ಕಿಯಾಗಿ ಕನಿಷ್ಠ ಐವರು ಸಜೀವ ದಹನ ದಹನವಾಗಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

    ಮಥುರಾದ ಮಹಾವನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ (Divider) ಡಿಕ್ಕಿ ಹೊಡೆದ ಕಾರು, ನಂತರ ಅದೇ ಮಾರ್ಗವಾಗಿ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿದ್ದ ಐವರು ಸುಟ್ಟು ಕರಕಲಾಗಿದ್ದಾರೆ. ಆದ್ರೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಪಘಾತ (Accident) ಸಂಭವಿಸುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಎರಡೂ ವಾಹನಗಳು ಅಗ್ನಿಗೆ ಆಹುತಿಯಾಗಿವೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ. ಇದನ್ನೂ ಓದಿ: ಪಾಕಿಸ್ತಾನಿಯರು ಭಾರತದ ಅತಿದೊಡ್ಡ ಆಸ್ತಿ – ಕಾಂಗ್ರೆಸ್‌ ಮಾಜಿ ಸಚಿವ

    ಅಪಘಾತಕ್ಕೀಡಾದ ಬಸ್ ಆಗ್ರಾದಿಂದ ನೋಯ್ಡಾಗೆ ತೆರಳುತ್ತಿತ್ತು. ಇದನ್ನೂ ಓದಿ: ಆಂಧ್ರ ಸಿಎಂ ಜಗನ್‌ ತಮ್ಮ ಚಿಕ್ಕಪ್ಪನನ್ನೇ ಹತ್ಯೆಗೈದಿದ್ದಾರೆ – ಎನ್.ಚಂದ್ರಬಾಬು ನಾಯ್ಡು ಪುತ್ರ ಗಂಭೀರ ಆರೋಪ

  • ಡಿವೈಡರ್‌ನಲ್ಲಿ ಕುಳಿತಿದ್ದವರ ಮೇಲೆ ಹರಿದ ಅಪರಿಚಿತ ವಾಹನ – ನಾಲ್ವರು ಸ್ಥಳದಲ್ಲೇ ಸಾವು

    ಡಿವೈಡರ್‌ನಲ್ಲಿ ಕುಳಿತಿದ್ದವರ ಮೇಲೆ ಹರಿದ ಅಪರಿಚಿತ ವಾಹನ – ನಾಲ್ವರು ಸ್ಥಳದಲ್ಲೇ ಸಾವು

    ವಿಜಯಪುರ: ನಗರದ ಹೊರಭಾಗದಲ್ಲಿ ತಡರಾತ್ರಿ ಭೀಕರ ಅಪಘಾತ (Accident) ಸಂಭವಿಸಿದೆ. ದುರ್ಘಟನೆಯಲ್ಲಿ ಸ್ಥಳದಲ್ಲೇ ನಾಲ್ವರು ಸಾವಿಗೀಡಾಗಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ 50 ರಲ್ಲಿನ ಟೋಲ್ ಗೇಟ್ ಬಳಿಯ ಟ್ರಕ್ ಬೈಲೈನ್ ಬಳಿ ದುರ್ಘಟನೆ ನಡೆದಿದೆ. ಟ್ರಕ್ ಬೈಲ್ ಬಳಿಯ ಸರ್ವಿಸ್ ರಸ್ತೆಯ ಡಿವೈಡರ್ (Divider) ಮೇಲೆ ಕುಳಿತಿದ್ದ ನಾಲ್ವರ ಮೇಲೆ ಅಪರಿಚಿತ ವಾಹನ ಹರಿದು ಪರಾರಿಯಾಗಿದೆ.

    ಘಟನೆಯಲ್ಲಿ ಶಿವಾನಂದ ಚೌಧರಿ (25), ಸುನೀಲ್ ಖಾನಾಪೂರ (26), ಈರಣ್ಣ ಕೋಲಾರ (26) ಹಾಗೂ ಪ್ರವೀಣ್ ಪಾಟೀಲ್ (30) ಮೃತಪಟ್ಟಿದ್ದಾರೆ. ಮೃತರೆಲ್ಲರೂ ವಿಜಯಪುರ ನಗರದ ವಜ್ರ ಹನುಮಾನ್ ನಗರದ ವಾಸಿಗಳು. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ಒಂದು ವಾರ ಮಳೆ ಮುನ್ಸೂಚನೆ – ಎಲ್ಲೆಲ್ಲಿ ಜಾಸ್ತಿ ಮಳೆಯಾಗಲಿದೆ?

    ಅಪರಿಚಿತ ವಾಹನ ನಾಲ್ವರ ಮೇಲಲ್ಲದೇ ಅವರ ಬೈಕ್‌ಗಳ ಮೇಲೂ ಹರಿದಿದೆ. ಇದರಿಂದ 2 ಬೈಕ್‌ಗಳು ನಜ್ಜುಗುಜ್ಜಾಗಿವೆ. ಸ್ಥಳಕ್ಕೆ ವಿಜಯಪುರ (Vijaypur) ಗ್ರಾಮೀಣ ವಿಭಾಗದ ಡಿವೈಎಸ್‌ಪಿ ಗಿರಿನಲ್ಲ ತಳಕಟ್ಟಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಗಾಜಾ ಆಸ್ಪತ್ರೆಯ ಮೇಲೆ ರಾಕೆಟ್‌ ದಾಳಿಗೆ 500 ಬಲಿ – ದಾಳಿ ಮಾಡಿದವರು ಯಾರು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೈಕ್‌ ಸ್ಕಿಡ್‌ ಆಗಿ ಡಿವೈಡರ್‌ಗೆ ಡಿಕ್ಕಿ – ಕಾನೂನು ವಿದ್ಯಾರ್ಥಿ ದುರ್ಮರಣ

    ಬೈಕ್‌ ಸ್ಕಿಡ್‌ ಆಗಿ ಡಿವೈಡರ್‌ಗೆ ಡಿಕ್ಕಿ – ಕಾನೂನು ವಿದ್ಯಾರ್ಥಿ ದುರ್ಮರಣ

    ಶಿವಮೊಗ್ಗ: ಡಿವೈಡರ್‌ಗೆ (Divider) ಬೈಕ್‌ (Bike) ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ (Shivamogga) ಶರಾವತಿ ನಗರದಲ್ಲಿ ನಡೆದಿದೆ.

    ಮೃತ ಸವಾರನನ್ನು ಕಾಶಿಪುರ ನಿವಾಸಿ ಗೌತಮ್ (22) ಎಂದು ಗುರುತಿಸಲಾಗಿದೆ. ಈತ ಎನ್‌ಇಎಸ್ (NES) ಕಾಲೇಜಿನ ಲಾ ವಿದ್ಯಾರ್ಥಿಯಾಗಿದ್ದ. ಕಾಲೇಜಿನಲ್ಲಿ ಅಮೃತ ಮಹೋತ್ಸವ ಸಮಾರಂಭ ನಡೆಯುತ್ತಿದ್ದು, ಸಂಭ್ರಮಾಚರಣೆಯ ಸಿದ್ಧತೆಯಲ್ಲಿ ಭಾಗವಹಿಸಿದ್ದ ಈತ ನಸುಕಿನ ಜಾವ ಮನೆಗೆ ವಾಪಸ್ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಆತ್ಮೀಯ ಗೆಳೆಯನ ಜೊತೆಗೆ ತನ್ನ ಪತ್ನಿಯ ರಾಸಲೀಲೆ ನೋಡಿದ ಪತಿ ಮಟಾಶ್

    ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ಬೈಕ್ ಸ್ಕಿಡ್ ಆಗಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯ ಪರಿಣಾಮ ಗೌತಮ್ ಗಂಭಿರ ಗಾಯಗೊಂಡಿದ್ದ. ಈತನನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಘಟನೆಯ ಕುರಿತು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಣೆಯಾದ ಕವಿತಾ ಶವವಾಗಿ ಪತ್ತೆ- ಗೆಳೆಯ ಸಲೀಂನಿಂದಲೇ ಹತ್ಯೆ

  • ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ – ಕಂಟೇನರ್‌ ನಜ್ಜುಗುಜ್ಜು

    ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ – ಕಂಟೇನರ್‌ ನಜ್ಜುಗುಜ್ಜು

    ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್‌ವೊಂದು (Container) ಡಿವೈಡರ್‌ಗೆ (Divider) ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಹಾಸನ (Hassan) ನಗರದ ಭಗತ್‌ ಸಿಂಗ್‌ ಸರ್ಕಲ್‌ನಲ್ಲಿ ನಡೆದಿದೆ.

    ನಗರದ ಎನ್.ಆರ್. ವೃತ್ತದಿಂದ ಸಂತೆಪೇಟೆ ಮಾರ್ಗವಾಗಿ ಹೋಗುತ್ತಿದ್ದ ಕಂಟೇನರ್ ಭಗತ್‌‌ಸಿಂಗ್ ಸರ್ಕಲ್‌ನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.‌ ಈ ಕಂಟೇನರ್‌ ಪಲ್ಟಿ ಆಗಿದೆ. ಈ ರಭಸಕ್ಕೆ ಕಂಟೇನರ್‌ ನಜ್ಜುಗುಜ್ಜಾಗಿದೆ. ಆದರೆ ಅದೃಷ್ಟವಶಾತ್‌ ಚಾಲಕ (Driver) ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ-ಪುಟ್ಟ ಗಾಯಗಳಾಗಿದೆ. ಇದನ್ನೂ ಓದಿ: ನ್ಯೂ ಇಯರ್ ಮುಗಿಸಿ ವಾಪಸ್ಸಾಗ್ತಿದ್ದಾಗ KSRTC ಬಸ್‌ಗೆ ಕಾರು ಡಿಕ್ಕಿ – ನಾಲ್ವರು ಸ್ಥಳದಲ್ಲೇ ಸಾವು

    ಘಟನೆಗೆ ಸಂಬಂಧಿಸಿ ಚಾಲಕ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಂಟೇನರ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸೆಲ್ಫಿ ತೆಗೆದುಕೊಳ್ಳಲು ಮಹಿಳೆಯರಿಗೆ ಒತ್ತಾಯ- 2 ಗುಂಪುಗಳ ನಡುವೆ ಮಾರಾಮಾರಿ

    Live Tv
    [brid partner=56869869 player=32851 video=960834 autoplay=true]

  • ಡಿವೈಡರ್ ಮೇಲಿಂದ ಹಾರಿ ಬಸ್ಸಿಗೆ ಡಿಕ್ಕಿ ಹೊಡೆದ ಕಾರು – ಭೀಕರ ಅಪಘಾತಕ್ಕೆ ಐವರು ಬಲಿ

    ಡಿವೈಡರ್ ಮೇಲಿಂದ ಹಾರಿ ಬಸ್ಸಿಗೆ ಡಿಕ್ಕಿ ಹೊಡೆದ ಕಾರು – ಭೀಕರ ಅಪಘಾತಕ್ಕೆ ಐವರು ಬಲಿ

    ಮುಂಬೈ: ಕಾರೊಂದು ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ಭಾನುವಾರ ಮಧ್ಯರಾತ್ರಿ ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ನಡೆದಿದೆ.

    ಈ ಘಟನೆ ಔರಂಗಾಬಾದ್‍ನಿಂದ 60 ಕಿ.ಮೀ ದೂರದಲ್ಲಿರುವ ದೇವ್‍ಗಡ್ ಫಟಾದಲ್ಲಿ ನಡುರಾತ್ರಿ ಸುಮಾರು 2 ಗಂಟೆಗೆ ಸಂಭವಿಸಿದೆ.

    ಘಟನೆ ವಿಚಾರವಾಗಿ ಅಹ್ಮದ್‍ನಗರದ ಪೊಲೀಸ್ ನಿಯಂತ್ರಣ ಅಧಿಕಾರಿಯೊಬ್ಬರು, ಔರಂಗಾಬಾದ್ ಮಾರ್ಗದಿಂದ ಅಹ್ಮದ್ ನಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‍ಗೆ ಕಾರು ಡಿಕ್ಕಿ ಹೊಡೆದಿದೆ. ಅಲ್ಲದೆ ಕಾರು ರಸ್ತೆ ವಿಭಜಕಕ್ಕೆ(ಡಿವೈಡರ್) ಡಿಕ್ಕಿ ಹೊಡೆದು ಮೇಲೆ ಹಾರಿ ಬಳಿಕ ಎದುರಿಗೆ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.

    ಮೃತಪಟ್ಟ ಐವರು ಕೂಡ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಿವಾಸಿಗಳಾಗಿದ್ದು, ಶಾಂತನು ನಾರಾಯಣ್ ಕಾಕ್ಡೆ(35), ಕೈಲಾಸ್ ನ್ಯೂರೆ(35), ವಿಷ್ಣು ಚವಾಣ್(31), ರಮೇಶ್ ದಶರ್ ಘುಗೆ(40) ಮತ್ತು ಕಾರು ಚಾಲಕ ನಾರಾಯಣ್ ವರ್ಕಡ್(23) ಎಂದು ಗುರುತಿಸಲಾಗಿದೆ. ಇದೀಗ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದರು.

  • ಅಪಘಾತ ತಪ್ಪಿಸಲು ಹೋಗಿ ಡಿವೈಡರ್‌ಗೆ ಡಿಕ್ಕಿಯಾಗಿ ಕಾರು ಪಲ್ಟಿ – ಐವರು ಪಾರು

    ಅಪಘಾತ ತಪ್ಪಿಸಲು ಹೋಗಿ ಡಿವೈಡರ್‌ಗೆ ಡಿಕ್ಕಿಯಾಗಿ ಕಾರು ಪಲ್ಟಿ – ಐವರು ಪಾರು

    ಚಿಕ್ಕಮಗಳೂರು: ಎದುರಿಗೆ ಬಂದ ಕಾರನ್ನ ತಪ್ಪಿಸಲು ಹೋಗಿ ಅದೇ ಕಾರಿಗೆ ಉಜ್ಜಿಕೊಂಡು ರಸ್ತೆಯ ಮಧ್ಯದ ಡಿವೈಡರ್‍ಗೆ ಡಿಕ್ಕಿಯಾಗಿ ಕಾರು ಪಲ್ಟಿಯಾಗಿರೋ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ರಸ್ತೆಯ ತರಳಬಾಳು ಕಾನ್ವೆಂಟ್ ಬಳಿ ನಡೆದಿದೆ.

    ಕಾರು ಪಲ್ಟಿಯಾದ ರಭಸಕ್ಕೆ ಕಾರಿನಲ್ಲಿದ್ದ ಐವರಿಗೂ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನ ತರೀಕೆರೆ ಹಾಗೂ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಶಿವಮೊಗ್ಗ ತಾಲೂಕಿನ ಹೊನ್ನಾಳಿ ರಸ್ತೆಯ ಸಾಸಿವೆಹಳ್ಳಿಯಿಂದ ಐವರು ಫೀಗೋ ಕಾರಿನಲ್ಲಿ ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಿಗರಿ ಹಾಗೂ ಕೆಮ್ಮಣ್ಣುಗುಂಡಿಗೆ ಪ್ರವಾಸಕ್ಕೆ ಬಂದಿದ್ದರು. ಪ್ರವಾಸ ಮುಗಿಸಿ ಹೋಗುವಾಗ ತರೀಕೆರೆಯ ತರಳಬಾಳು ಕಾನ್ವೆಂಟ್ ಬಳಿ ಈ ಅಪಘಾತ ಸಂಭವಿಸಿದೆ.

    ಎದುರಿಗೆ ಬಂದ ನಿಸ್ಸಾನ್ ಕಾರನ್ನ ತಪ್ಪಿಸಲು ಹೋಗಿ ಅದೇ ಕಾರಿಗೆ ಒಂದು ಬದಿಯಿಂದ ಉಜ್ಜಿಕೊಂಡು ಹೋಗಿ ಫೀಗೋ ಕಾರು ಪಲ್ಟಿಯಾಗಿದೆ. ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದ ಐವರಿಗೂ ಗಾಯಗಳಾಗಿವೆ. ಸ್ಥಳೀಯರು ಕೂಡಲೇ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಲಿಂಗದಹಳ್ಳಿಯಿಂದ ತರೀಕೆರೆಯ ಈ ಮಾರ್ಗ ನೇರ ರಸ್ತೆಯಾಗಿದ್ದು ಕಾರು ವೇಗವಾಗಿದ್ದರಿಂದ ಈ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಟಯರ್ ಬ್ಲಾಸ್ಟ್ ಆಗಿ ಡಿವೈಡರ್ ಮೇಲೆ ಹತ್ತಿದ ಹೊಸ ಕಾರು

    ಟಯರ್ ಬ್ಲಾಸ್ಟ್ ಆಗಿ ಡಿವೈಡರ್ ಮೇಲೆ ಹತ್ತಿದ ಹೊಸ ಕಾರು

    ಬೆಂಗಳೂರು: ಕಾರಿನ ಟಯರ್ ಬ್ಲಾಸ್ಟ್ ಆದ ಪರಿಣಾಮ ಕಾರು ಡಿವೈಡರ್ ಮೇಲೆ ಹತ್ತಿರುವ ಘಟನೆ ಬೆಂಗಳೂರಿನಲ್ಲಿ ತಡರಾತ್ರಿ ನಡೆದಿದೆ.

    ಮೇಕ್ರಿ ಸರ್ಕಲ್ ಅಂಡರ್ ಪಾಸ್ ಬಳಿ ಈ ಘಟನೆ ನಡೆದಿದ್ದು, ಅವಘಡ ತಪ್ಪಿದಂತಾಗಿದೆ. ಹೊಸ ಕಾರನ್ನು ಓಡಿಸುತ್ತಿದ್ದ ವೇಳೆ ಅಂಡರ್ ಪಾಸ್‍ನಲ್ಲಿ ಇದ್ದಕ್ಕಿದ್ದಂತೆ ಕಾರಿನ ಟಯರ್ ಬ್ಲಾಸ್ಟ್ ಆಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಮೇಲೆ ಹತ್ತಿದೆ.

    ಈ ಅವಘಡದಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದ ಕಾರನ್ನು ಡಿವೈಡರ್‌ನಿಂದ ಕೆಳಗಿಳಿಸಿದ್ದಾರೆ. ಈ ಕುರಿತು ಸದಾಶಿವನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.