Tag: diu

  • ಟೇಕಾಫ್ ವೇಳೆ ಅಹಮದಾಬಾದ್-ದಿಯು ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ಬೆಂಕಿ – ಹಾರಾಟ ಸ್ಥಗಿತ

    ಟೇಕಾಫ್ ವೇಳೆ ಅಹಮದಾಬಾದ್-ದಿಯು ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ಬೆಂಕಿ – ಹಾರಾಟ ಸ್ಥಗಿತ

    ಗಾಂಧೀನಗರ: ಅಹಮದಾಬಾದ್‌ನಿಂದ (Ahmedabad) ದಿಯುಗೆ (Diu) ತೆರಳುತ್ತಿದ್ದ ಇಂಡಿಗೋ ವಿಮಾನ ಟೇಕ್ ಆಫ್ ಆಗುವಾಗ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಿಮಾನಯಾನವನ್ನು ಸ್ಥಗಿತಗೊಳಿಸಲಾಯಿತು.

    ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 11 ಗಂಟೆಗೆ ಇಂಡಿಗೋ ವಿಮಾನ 6ಇ7966 60 ಪ್ರಯಾಣಿಕರನ್ನು ಹೊತ್ತು ದಿಯುಗೆ ಹೊರಟಿತ್ತು. ಆದರೆ ಟೇಕ್ ಆಫ್ ಆಗುವಾಗ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಹಿನ್ನೆಲೆ ವಿಮಾನಯಾನವನ್ನು ರದ್ದುಗೊಳಿಸಲಾಗಿದೆ.ಇದನ್ನೂ ಓದಿ: ಉಡುಪಿ, ಮಂಗಳೂರು ತಾಲೂಕಿನ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ

    ಟೇಕ್ ಆಫ್ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಮೇಡೇ ಘೋಷಿಸಿದ ಪೈಲಟ್ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದರು. ವಿಮಾನದ ಕಾರ್ಯಾಚರಣೆಯನ್ನು ಪುನರಾರಂಭಿಸುವ ಮುನ್ನ ವಿಮಾನವನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಸೋಮವಾರ (ಜು.21) ಗೋವಾದಿಂದ ಇಂದೋರ್‌ಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಪರಿಣಾಮ ವಿಮಾನವನ್ನು ಮತ್ತೆ ಗೋವಾದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಯಿತು.ಇದನ್ನೂ ಓದಿ: 5 ವರ್ಷದ ಬಳಿಕ ಚೀನಿಯರಿಗೆ ಭಾರತ ಪ್ರವಾಸಕ್ಕೆ ಅನುಮತಿ

  • ಪ್ಯಾರಾಸೈಲಿಂಗ್ ವೇಳೆ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ

    ಪ್ಯಾರಾಸೈಲಿಂಗ್ ವೇಳೆ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ

    ಗಾಂಧಿನಗರ: ಪ್ಯಾರಾಸೈಲಿಂಗ್‍ನಲ್ಲಿ ಹಾರಾಟ ಮಾಡುತ್ತಿದ್ದಾಗ ಹಗ್ಗ ತುಂಡಾಗಿ ದಂಪತಿ ಸಮುದ್ರಕ್ಕೆ ಬಿದ್ದ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಗುಜರಾತ್ ಮೂಲದ ಅಜಿತ್ ಕಥಾಡ್ ಮತ್ತು ಸರಳಾ ಕಥಾಡ್ ದಂಪತಿ ದಿಯುನಲ್ಲಿರುವ ನಗೋವಾ ಬೀಚ್‍ನಲ್ಲಿ ವಾರಾಂತ್ಯದ ದಿನವನ್ನು ಎಂಜಾಯ್ ಮಾಡುತ್ತಿದ್ದರು. ಈ ವೇಳೆ ಅಲ್ಲಿದ್ದ ಪ್ಯಾರಾಸೈಲಿಂಗ್‍ನಲ್ಲಿ ಹಾರಾಟ ಮಾಡಬೇಕೆಂದೆನಿಸಿದೆ. ಅದರಂತೆ ಇಬ್ಬರು ಕೂಡ ಪ್ಯಾರಾಸೈಲಿಂಗ್‍ನಲ್ಲಿ ಹಾರಾಡುತ್ತಿದ್ದಂತೆ ಏಕಾಏಕಿ ಅದರ ಹಗ್ಗ ತುಂಡಾಗಿದೆ. ಹಗ್ಗ ತುಂಡಾಗುತ್ತಿದ್ದಂತೆ ದಂಪತಿ ಸಮುದ್ರಕ್ಕೆ ಬಿದ್ದಿದ್ದಾರೆ. ಇದನ್ನೂ ಓದಿ: ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧ: ಗುಜರಾತ್‌ ಸಿಎಂ ಸಮರ್ಥನೆ

    ಸಮುದ್ರಕ್ಕೆ ಬಿದ್ದೊಡನೆ ಅವರು ಧರಿಸಿದ್ದ ಲೈಫ್ ಜಾಕೆಟ್‍ನಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋದಲ್ಲಿ ದಂಪತಿ ಪ್ಯಾರಾಸೈಲಿಂಗ್‍ನಲ್ಲಿ ಹಾರಾಡುತ್ತಾ ತುಂಬಾ ಎತ್ತರವೇರಿದ್ದಾರೆ. ನೋಡ ನೋಡುತ್ತಿದ್ದಂತೆ ಹಗ್ಗ ಕಟ್ ಆಗಿದೆ. ದಂಪತಿ ಸಹಾಯಕ್ಕಾಗಿ ಕಿರುಚುತ್ತಿದ್ದು, ಕೂಡಲೇ ಅಲ್ಲಿದ್ದ ರಕ್ಷಕರು ಅವರಿಬ್ಬರನ್ನು ಕೂಡ ರಕ್ಷಿಸಿದ್ದಾರೆ. ಇದನ್ನೂ ಓದಿ: ಸ್ನಾನಕ್ಕೆ ನದಿಗಿಳಿದು ಅಪಾಯಕ್ಕೆ ಸಿಲುಕಿದ ವ್ಯಕ್ತಿ ಬದುಕುಳಿದಿದ್ದೆ ರೋಚಕ

  • ವಿಡಿಯೋ: ಪ್ರಾಣಕ್ಕೆ ಎರವಾದ ಸೆಲ್ಫೀ- ನೋಡನೋಡ್ತಿದ್ದಂತೆ ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋದ್ರು

    ವಿಡಿಯೋ: ಪ್ರಾಣಕ್ಕೆ ಎರವಾದ ಸೆಲ್ಫೀ- ನೋಡನೋಡ್ತಿದ್ದಂತೆ ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋದ್ರು

    ರಾಜ್‍ಕೋಟ್: ರಾಜಸ್ಥಾನ ಮೂಲದ ಮೂವರು ಯುವಕರು ಡಿಯು ವಿನ ಪ್ರಸಿದ್ಧ ನಾಗೋವಾ ಬೀಚ್‍ನಲ್ಲಿ ಸೆಲ್ಫೀ ತೆಗೆಯುವ ವೇಳೆ ಅಲೆಗಳೊಂದಿಗೆ ಕೊಚ್ಚಿ ಹೋದ ಘಟನೆ ಭಾನುವಾರದಂದು ನಡೆದಿದೆ.

    ಯುವಕರು ಸಮುದ್ರದ ಮಧ್ಯೆ ಸೆಲ್ಫೀ ತೆಗೆಯುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ಡಿಯು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಇಲ್ಲಿನ ಅಧೀಕಾರಿಗಳು ಸಮುದ್ರದಲ್ಲಿ ಸೆಲ್ಫೀ ತೆಗೆಯಬಾರದೆಂದು ಎಚ್ಚರಿಕೆ ನೀಡಿದ್ದರೂ ಕೂಡ ಯುವಕರು ನಿಯಮವನ್ನು ಗಾಳಿಗೆ ತೂರಿ ಸೆಲ್ಫೀ ತೆಗೆಯುತ್ತಿದ್ದರು. ಈ ವೇಳೆ ಅಲೆಗಳ ಅಬ್ಬರ ಜೋರಾಗಿತ್ತು. ಯುವಕರಿದ್ದ ಬಂಡೆಯ ಮೇಲೆ ಜೋರಾದ ಅಲೆ ಬಂದಿದ್ದು, ನೋಡನೋಡ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

    ಘಟನೆಯಲ್ಲಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಓರ್ವ ಯುವಕ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಯುವಕರೆಲ್ಲರೂ ಡಿಯುವಿನ ಕೆವ್ಡಿ ಗ್ರಾಮದಲ್ಲಿ ಕೆಲಸಕ್ಕಾಗಿ ಬಂದಿದ್ದರು ಎಂದು ವರದಿಯಾಗಿದೆ.

    https://www.youtube.com/watch?v=5cwGtIMOYLw