Tag: District

  • ರಾಜ್ಯದಲ್ಲಿ ಮಳೆರಾಯನ ಆರ್ಭಟ- ಕೊಡಗಿನಲ್ಲಿ 2 ದಿನ ರೆಡ್ ಅಲರ್ಟ್

    ರಾಜ್ಯದಲ್ಲಿ ಮಳೆರಾಯನ ಆರ್ಭಟ- ಕೊಡಗಿನಲ್ಲಿ 2 ದಿನ ರೆಡ್ ಅಲರ್ಟ್

    – ಉತ್ತರ ಭಾರತದಲ್ಲೂ ಮಳೆ, ಗುಜರಾತ್‍ನಲ್ಲಿ ಪ್ರವಾಹ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟದ ಮಧ್ಯೆ ಹಲವೆಡೆ ಧಾರಾಕಾರ ಮಳೆ ಆಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

    ಕೊಡಗು ಜಿಲ್ಲೆಯ ಭಾಗಮಂಡಲ-ತಲಕಾವೇರಿ ಸುತ್ತಮುತ್ತ ಭಾರೀ ಮಳೆ ಆಗಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದೆ. ನಾಪೋಕ್ಲು ಭಾಗಮಂಡಲ ರಸ್ತೆ ಸಂಪರ್ಕ ಬಂದ್ ಆಗಿದೆ. ಚೇರಂಗಾಲದ ಬಳಿ ಗುಡ್ಡ ಕುಸಿದಿದ್ದು, ವಾಹನ ಸಂಚಾರ ಬಂದ್ ಆಗಿದೆ. ಮಡಿಕೇರಿಯ ರಾಜಾಸೀಟ್ ರಸ್ತೆಯಲ್ಲಿ ತಡೆಗೋಡೆಯೊಂದು ಕುಸಿದು ಬಿದ್ದಿದೆ.

    ಮುಂದಿನ 2 ದಿನಗಳ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರಿನ ಕಳಸ ತಾಲೂಕಿನಲ್ಲಿರೋ ಹೆಬ್ಬಾಳೆ ಸೇತುವೆ ಈ ಬಾರಿಯೂ ಮುಳುಗಡೆಯಾಗೋ ಸಾಧ್ಯತೆ ಹೆಚ್ಚಿದೆ. ಈಗಾಗ್ಲೇ ಧಾರಾಕಾರ ಮಳೆಯಾಗಿರೋದ್ರಿಂದ ಸೇತುವೆ ಮುಳುಗಡೆಗೆ ಮೂರು ಅಡಿ ಮಾತ್ರ ಬಾಕಿಯಿದೆ.

    ಶಿವಮೊಗ್ಗದ ಸಾಗರ, ತೀರ್ಥಹಳ್ಳಿಯಲ್ಲೂ ಧಾರಾಕಾರ ಮಳೆಯಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ವಿವಿಧೆಡೆ ಸುರಿಯುತ್ತಿರುವ ಮಳೆ ರೈತರ ಮೊಗದಲ್ಲಿ ನಗು ತರಿಸಿದೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗೋಳಿಕಟ್ಟೆಯಲ್ಲಿ ಭಾರೀ ಮಳೆಗೆ ಕಾಂಪೌಂಡ್ ಕುಸಿದು ಮಹಿಳೆ ಮೃತಪಟ್ಟಿದ್ದಾರೆ.

    ರಾಜ್ಯದಲ್ಲಿ ಮಳೆಯ ಅವಾಂತರ ಇಷ್ಟಾದರೆ ಇನ್ನು ಉತ್ತರ ಭಾರತದಲ್ಲೂ ವ್ಯಾಪಕ ಮಳೆ ಆಗ್ತಿದೆ. ಭಾರೀ ಮಳೆಯಿಂದಾಗಿ ಗುಜರಾತ್‍ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್‍ಕೋಟ್ ಮತ್ತು ಜಾಮ್‍ನಗರ ಸಂಪೂರ್ಣ ಜಲಾವೃತವಾಗಿವೆ. ಹತ್ತಾರು ಕಾರುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಜುನಾಘಡದಲ್ಲಿ 30 ವರ್ಷದ ಹಳೆಯ ಸೇತುವೆಯೊಂದು ಕೊಚ್ಚಿಹೋಗಿದೆ. ನೀರಿನ ರಭಸಕ್ಕೆ ಟ್ರಕ್ ಪೇಪರ್ ದೋಣಿಯಂತೆ ತೇಲಿ ಹೋಗಿದೆ. ನೀರಿನ ರಭಸಕ್ಕೆ ಸಿಕ್ಕ ವಾಹನದಲ್ಲಿದ್ದವರ ಜೀವ ಉಳಿಯಲೇ ಇಲ್ಲ.

  • ಕೊಪ್ಪಳದಲ್ಲಿ ಇಬ್ಬರು ಸೋಂಕಿತರು ಗುಣಮುಖ, ಡಿಸ್ಚಾರ್ಜ್

    ಕೊಪ್ಪಳದಲ್ಲಿ ಇಬ್ಬರು ಸೋಂಕಿತರು ಗುಣಮುಖ, ಡಿಸ್ಚಾರ್ಜ್

    ಕೊಪ್ಪಳ: ಕೋವಿಡ್-19 ಸೋಂಕಿನಿಂದ ಗುಣಮುಖರಾಗಿರುವ ಕೊಪ್ಪಳ ಜಿಲ್ಲೆಯ ಇಬ್ಬರನ್ನು ಇಂದು ಜಿಲ್ಲಾ ಆಸ್ಪತ್ರೆಯಿಂದ ಆರೋಗ್ಯ ಇಲಾಖೆಯ ತಂಡದಿಂದ ಚಪ್ಪಾಳೆ ತಟ್ಟುವುದರ ಮೂಲಕ ಬಿಡುಗಡೆ ಮಾಡಲಾಯಿತು.

    ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಶಸ್ತ್ರ ಚಿಕಿತ್ಸಕಾ ಎಸ್.ಬಿ ದಾನ್‍ರೆಡ್ಡಿ, ರೋಗಿ-1174 20 ವರ್ಷದ ಮಹಿಳೆ ಮಹಾರಾಷ್ಟ್ರದಿಂದ ಹಾಗೂ ರೋಗಿ-1175 25 ವರ್ಷದ ಪುರುಷ ಚೆನ್ನೈನಿಂದ ಜಿಲ್ಲೆಗೆ ಆಗಮಿಸಿದ ಕಾರಣ ಇವರಿಬ್ಬರನ್ನು ಕ್ವಾರಂಟೈನ್‍ಗೆ ಒಳಪಡಿಸಿ ಮೇ.15 ರಂದು ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಇವರಿಗೆ 14 ದಿನಗಳ ಕಾಲ ಜಿಲ್ಲಾ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಿ, ಮೇ.27 ರಂದು ಮತ್ತೊಮ್ಮೆ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದರು.

    ರೋಗಿ-1174 ಮತ್ತು ರೋಗಿ-1175 ಕೋವಿಡ್-19 ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳು ಇಬ್ಬರು ತಮ್ಮ ಮನೆಗಳಿಗೆ ತೆರಳಿದ ನಂತರ 14 ದಿನ ಹೋಂ ಕ್ವಾರಂಟೈನ್‍ನಲ್ಲಿ ಇದ್ದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅಲ್ಲದೆ ಈ ಇಬ್ಬರು ವ್ಯಕ್ತಿಗಳಿಗೆ ಆಯುಷ್ ಇಲಾಖೆಯಿಂದ ಆರ್ಯುವೇದಿಕ್ ಔಷಧಿಗಳನ್ನು ನೀಡಲಾಗಿದೆ. ಗುಣಮುಖರಾದವರಿಂದ ಸಾರ್ವಜನಿಕರು ಯಾವುದೇ ರೀತಿಯ ಕೀಳರಿಮೆಯಿಂದ ಕಾಣುವುದು ಮಾಡಬಾರದು ಎಂದು ವೈದರು ತಿಳಿಸಿದಾರೆ.

    ಜಿಲ್ಲೆಯಲ್ಲಿ 20 ಜನರಲ್ಲಿ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಅವರ ಗಂಟಲು ದ್ರವವನ್ನು ಸಂಗ್ರಹಿಸಿ ಮೂರು ಬಾರಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆ ಮೂರು ಪರೀಕ್ಷೆಗಳಲ್ಲಿನ ವರದಿ ನೆಗೆಟಿವ್ ವರದಿ ಬಂದರೆ ಮಾತ್ರ ಅವರನ್ನು ಮನೆಗೆ ಕಳುಹಿಸಲಾಗುತ್ತದೆ. 20 ಪ್ರಕರಣಗಳ ಪೈಕಿ 4 ವ್ಯಕ್ತಿಗಳು ಗುಣಮುಖರಾಗಿದ್ದು, 16 ವ್ಯಕ್ತಿಗಳ ವರದಿಯು ಬಾಕಿ ಉಳಿದಿದೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ನೆಗಡಿ, ಕೆಮ್ಮು, ಜ್ವರಗಳಿಗೆ ಜಿಲ್ಲೆಯ ಎರಡು ಸ್ಥಳಗಳಲ್ಲಿ ಫಿವರ್ ಕ್ಲಿನಿಕ್‍ಗಳನ್ನು ತೆರೆಯಲಾಗಿದೆ.

  • ತಡವಾದ ವರದಿ ತಂದ ಆತಂಕ- ಕ್ವಾರಂಟೈನ್‍ನಿಂದ ಮನೆಗೆ ಬಂದವನಿಗೆ ಕೊರೊನಾ

    ತಡವಾದ ವರದಿ ತಂದ ಆತಂಕ- ಕ್ವಾರಂಟೈನ್‍ನಿಂದ ಮನೆಗೆ ಬಂದವನಿಗೆ ಕೊರೊನಾ

    ರಾಯಚೂರು: ಮುಂಬೈನಿಂದ ಬಂದಿದ್ದ ರಾಯಚೂರಿನ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ಇಂದು ಬಂದಿರುವ ವರದಿಯಲ್ಲಿ ದೃಢವಾಗಿದೆ. ಈ ಮೂಲಕ ರಾಯಚೂರಿನ ಕೊರೊನಾ ಸೋಂಕಿತರ ಸಂಖ್ಯೆ 72ಕ್ಕೇರಿದೆ.

    ಕ್ವಾರಂಟೈನ್ ಅವಧಿ ಮುಗಿದ ಬಳಿಕ ಬಂದಿರುವ ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಹೋಂ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿಯನ್ನು ಪುನಃ ಸರ್ಕಾರಿ ಕ್ವಾರಂಟೈನ್‍ಗೆ ದಾಖಲಿಸಲಾಗಿದೆ. ಪ್ರಯೋಗಾಲಯದ ವರದಿ ತುಂಬಾ ತಡವಾಗಿ ಬಂದಿದ್ದು, ಕ್ವಾರಂಟೈನ್ ಅವಧಿ ಮುಗಿಸಿ ಹೊರ ಬಂದ ವ್ಯಕ್ತಿ ರಾಯಚೂರು ನಗರದಲ್ಲಿ ಓಡಾಡಿದ್ದಾನೆ. 39 ವರ್ಷದ ವ್ಯಕ್ತಿ ರೋಗಿ ಸಂಖ್ಯೆ-2423ಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ.

    ಮೇ 11ರಂದು ತಾಯಿಯೊಂದಿಗೆ ಮುಂಬೈನಿಂದ ಬಂದಿದ್ದ ವ್ಯಕ್ತಿ. ಸರ್ಕಾರಿ ಕ್ವಾರಂಟೈನ್‍ಗೆ ದಾಖಲಾಗಿದ್ದ. ಮೇ 14ರಂದು ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದೆ. ಈಗ ತೀವ್ರ ತರದ ಉಸಿರಾಟದ ತೊಂದರೆಯಿಂದ ವ್ಯಕ್ತಿ ಬಳಲುತ್ತಿದ್ದಾನೆ. ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಿರುವ ಜಿಲ್ಲಾಡಳಿತ. ತಾಯಿ, ಪತ್ನಿ, ಮಗುವಿನ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಿದೆ.

    ತಾಯಿಗೆ ಮುಂಬೈನಲ್ಲೇ ಈ ಹಿಂದೆ ಪರೀಕ್ಷೆ ಮಾಡಿದ್ದು ನೆಗೆಟಿವ್ ಬಂದಿದ್ದರಿಂದ ಮನೆಯಲ್ಲೇ ಕ್ವಾರಂಟೈನ್‍ನಲ್ಲಿ ಇದ್ದರು. ಈಗ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಮನೆಯವರ ಮೇಲೂ ನಿಗಾ ಇಡಲಾಗಿದೆ. ವ್ಯಕ್ತಿ ನಗರದ ವಿವಿಧೆಡೆ ಓಡಾಡಿರುವ ಹಿನ್ನೆಲೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ 72 ಕೇಸ್‍ಗಳಲ್ಲಿ ತಲೆನೋವಾದ ಮೂರನೇ ಕೇಸ್ ಇದಾಗಿದೆ. ಮಲಿಯಾಬಾದ್ ಬಾಲಕಿ, ಮಸ್ಕಿ ಬ್ಯಾಂಕ್ ಉದ್ಯೋಗಿ ಬಳಿಕ ಟ್ರಾವೆಲ್ ಹಿಸ್ಟರಿ ಹಾಗೂ ಸೋಂಕು ತಗುಲಿರುವ ಕಾರಣ ಸರಿಯಾಗಿ ಸಿಗದೆ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.

  • ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಆಸ್ಪತ್ರೆ ಬಾತ್ ರೂಂನಲ್ಲಿ ನೇಣಿಗೆ ಶರಣು

    ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಆಸ್ಪತ್ರೆ ಬಾತ್ ರೂಂನಲ್ಲಿ ನೇಣಿಗೆ ಶರಣು

    ದಾವಣಗೆರೆ: ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಆಸ್ಪತ್ರೆಯ ಬಾತ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ದಾವಣಗೆರೆಯ ಬಸಾಪುರ ನಿವಾಸಿ ಕಂಟೈನ್ಮೆಂಟ್ ಏರಿಯಾದಲ್ಲಿ ವಾಸಿಸುತ್ತಿದ್ದರು. ಇವರಿಗೆ ಕೆಮ್ಮು ಜ್ವರದಂತಹ ಲಘು ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು.

    ಕೊರೊನಾ ಲಕ್ಷಣ ಕಾಣಿಸಿಕೊಂಡ ವ್ಯಕ್ತಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಜೊತೆಗೆ ಮೇ 20ರಂದು ಗಂಟಲು ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ವರದಿ ಬರವುದಕ್ಕೂ ಮುನ್ನವೇ ಇಂದು ಬೆಳಗ್ಗೆ 7.30ರ ಸುಮಾರಿಗೆ ಆಸ್ಪತ್ರೆಯ ಬಾತ್ ರೊಂನಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

    ಈ ಸಂಬಂಧ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆತ ಕೊರೊನಾ ಬಂದರೆ ನನ್ನ ಕ್ವಾರಂಟೈನ್ ಮಾಡುತ್ತಾರೆ ಎಂಬ ಭಯದಿಂದ ಈ ರೀತಿ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

  • ಕೊರೊನಾ ಹರಡದಂತೆ ಜಿಲ್ಲಾಡಳಿತದಿಂದ ಎವರ್ ಗ್ರೀನ್ ಚಾಮರಾಜನಗರ ಅಭಿಯಾನ

    ಕೊರೊನಾ ಹರಡದಂತೆ ಜಿಲ್ಲಾಡಳಿತದಿಂದ ಎವರ್ ಗ್ರೀನ್ ಚಾಮರಾಜನಗರ ಅಭಿಯಾನ

    ಚಾಮರಾಜನಗರ: ರಾಜ್ಯದ ಎಲ್ಲೆಡೆ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಹಸಿರು ವಲಯದಲ್ಲಿದ್ದ ಹಲವು ಜಿಲ್ಲೆಗಳಿಗೂ ಈಗ ಕೊರೊನಾ ವಕ್ಕರಿಸಿದೆ. ಈ ಹಿನ್ನೆಲೆಯಲ್ಲಿ ಇದುವರೆಗೂ ಯಾವುದೇ ಸೋಂಕು ತಗಲುದೆ ಸುರಕ್ಷಿತವಾಗಿರುವ ಚಾಮರಾಜನಗರ ಜಿಲ್ಲೆಯನ್ನು ಹಸಿರು ವಲಯದಲ್ಲೇ ಉಳಿಸಿಕೊಳ್ಳಲು ಜಿಲ್ಲಾಡಳಿತ ಎವರ್ ಗ್ರೀನ್ ಚಾಮರಾಜನಗರ ಅಭಿಯಾನ ಆರಂಭಿಸಿದೆ.

    ಕೊರೊನಾ ಸೋಂಕು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಲಾಕ್‍ಡೌನ್ ನಿಯಮಗಳ ಪಾಲನೆ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಹೊರಗಿನಿಂದ ಬಂದವರನ್ನು ಗುರುತಿಸಿ ಮಾಹಿತಿ ನೀಡುವುದು ಹೀಗೆ ವಿವಿಧ ಜವಬ್ದಾರಿಗಳನ್ನು ನಿರ್ವಹಿಸಲು ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲು ಟಾಸ್ಕ್ ಪೋರ್ಸ್ ರಚಿಸಲಾಗಿದೆ.

    ಲಾಕ್‍ಡೌನ್ ನಿಯಮಗಳ ಪಾಲನೆಯ ಬಗ್ಗೆ ನಿಗಾ ವಹಿಸಲು ಈಗಾಗಲೇ ನೇಮಕ ಮಾಡಲಾಗಿರುವ ಸ್ಪೆಷಲ್ ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್‍ಗಳಿಗೆ ಮತ್ತಷ್ಟು ಬಲ ನೀಡಲಾಗುವುದು. ಗಡಿಭಾಗಗಳಲ್ಲಿ ಸ್ಥಾಪಿಸಿರುವ 12 ಚೆಕ್‍ಪೋಸ್ಟ್ ಗಳಲ್ಲಿ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ಹತ್ತಾರು ಕ್ರಮಗಳನ್ನು ಜಿಲ್ಲಾಡಳಿತ ಕೈಗೊಡಿದೆ.

    ಈ ಅಭಿಯಾನದಲ್ಲಿ ಸಾರ್ವಜನಿಕರು ಕೈಜೋಡಿಸಬೇಕು, ಪ್ರತಿಯೊಬ್ಬರು ಕೊರೊನಾ ವಾರಿಯರ್ಸ್ ಆಗಬೇಕು ಈ ಮೂಲಕ ಎವರ್ ಗ್ರೀನ್ ಚಾಮರಾಜನಗರ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಮನವಿ ಮಾಡಿಕೊಂಡಿದ್ದಾರೆ.

  • 80 ವರ್ಷದ ವೃದ್ಧೆಗೆ ಕೊರೊನಾ ದೃಢ- ಕಲಬುರಗಿಯಲ್ಲಿ 83ಕ್ಕೇರಿದ ಸೋಂಕಿತರ ಸಂಖ್ಯೆ

    80 ವರ್ಷದ ವೃದ್ಧೆಗೆ ಕೊರೊನಾ ದೃಢ- ಕಲಬುರಗಿಯಲ್ಲಿ 83ಕ್ಕೇರಿದ ಸೋಂಕಿತರ ಸಂಖ್ಯೆ

    ಕಲಬುರಗಿ: ನಗರದಲ್ಲಿ ಗುರುವಾರ 80 ವರ್ಷದ ವೃದ್ಧೆ ಸೇರಿ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಸೋಂಕಿತ ಸಂಖ್ಯೆ 83ಕ್ಕೆ ಏರಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

    ಕಲಬುರಗಿ ನಗರದ ಮೃತ ರೋಗಿ ಸಂಖ್ಯೆ-587ರ ಸಂಪರ್ಕದಲ್ಲಿ ಬಂದ ಸರಾಫ್ ಬಜಾರ್-ಪುಟಾಣಿ ಗಲ್ಲಿ ಪ್ರದೇಶದ 80 ವರ್ಷದ ವೃದ್ಧೆ(ಪಿ-983) ಮತ್ತು ರೋಗಿ ಸಂಖ್ಯೆ-610 ಸಂಪರ್ಕದಲ್ಲಿ ಬಂದ ಗಾಜೀಪುರ ಪ್ರದೇಶದ 28 ವರ್ಷದ ಯುವಕನಿಗೆ (ಪಿ-984) ಕೊರೊನಾ ಸೋಂಕು ಕಂಡುಬಂದಿದೆ.

    ಜಿಲ್ಲೆಯಲ್ಲಿ ಕೊರೋನಾ ಪೀಡಿತ 83 ರೋಗಿಗಳಲ್ಲಿ 7 ಜನ ನಿಧನರಾಗಿದ್ದು, 46 ರೋಗಿಗಳು ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದಂತೆ 30 ರೋಗಿಗಳಿಗೆ ಚಿಕಿತ್ಸೆ ಮುಂದುವರಿದಿದೆ.

  • ಮಾವಿನಹಣ್ಣು  ವ್ಯಾಪಾರಿಗೆ ಕೊರೊನಾ ಸೋಂಕು ದೃಢ- ಹಾವೇರಿಯಲ್ಲಿ 3ನೇ ಪಾಸಿಟಿವ್ ಪ್ರಕರಣ

    ಮಾವಿನಹಣ್ಣು ವ್ಯಾಪಾರಿಗೆ ಕೊರೊನಾ ಸೋಂಕು ದೃಢ- ಹಾವೇರಿಯಲ್ಲಿ 3ನೇ ಪಾಸಿಟಿವ್ ಪ್ರಕರಣ

    ಹಾವೇರಿ: ಗ್ರೀನ್‍ಝೋನ್‍ನಲ್ಲಿದ್ದ ಹಾವೇರಿ ಜಿಲ್ಲೆ ಮೇ4 ರಂದು ಮೊದಲ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಹಳದಿ ವಲಯಕ್ಕೆ ಸೇರಿತ್ತು. ಮರುದಿನ ಮೊದಲು ಕೊರೊನಾ ಪಾಸಿಟಿವ್ ಬಂದಿದ್ದ ರೋಗಿ ಪಿ-639 ಜೊತೆ ಸಂಪರ್ಕ ಹೊಂದಿದ್ದ ಪಿ-672ಗೂ ಕೊರೊನಾ ಸೋಂಕು ವಕ್ಕರಿಸಿತ್ತು. ಇದು ಜಿಲ್ಲೆಯ ಜನರು ಬೆಚ್ಚಿ ಬೀಳುವಂತೆ ಮಾಡಿತ್ತು. ಲಾಕ್‍ಡೌನ್‍ನಲ್ಲಿ ಸಡಿಲಿಕೆಯಾದರೂ ಎರಡು ಕೊರೊನಾ ಕೇಸ್‍ಗಳು ದೃಢಪಟ್ಟ ನಂತರ ಜನರು ಮನೆಯಿಂದ ಹೊರಬರಲು ಹಿಂಜರಿಯೋ ಸ್ಥಿತಿ ನಿರ್ಮಾಣ ಆಗಿತ್ತು.

    ಮೊದಲ ಮತ್ತು 2ನೇ ಪ್ರಕರಣದ ರೋಗಿಗಳ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದವರ ಲ್ಯಾಬ್ ವರದಿ ನೆಗಟಿವ್ ಬಂದವು. ಇದಾದ ಮೇಲೆ ಜನರು ಮತ್ತೆ ಓಡಾಡೋಕೆ ಶುರು ಮಾಡಿದ್ದರು. ಆದರೆ ಇಂದು ಮತ್ತೆ ಜಿಲ್ಲೆಯ ಜನರಿಗೆ ಆಘಾತಕಾರಿ ಸುದ್ದಿ ಬಂದಿದ್ದು, ರೈತರ ಜಮೀನುಗಳಿಗೆ ಹೋಗಿ ಮಾವಿನ ಹಣ್ಣುಗಳನ್ನ ಖರೀದಿಸಿಕೊಂಡು ಮುಂಬೈ ಮಾರ್ಕೆಟ್‍ಗೆ ಹೋಗಿ ಮಾರಾಟ ಮಾಡಿ ಬಂದಿದ್ದ 25 ವರ್ಷದ ವಯಸ್ಸಿನ ಹಣ್ಣಿನ ವ್ಯಾಪಾರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಇವತ್ತು ಸೋಂಕು ದೃಢಪಟ್ಟ ವ್ಯಾಪಾರಿ ಏಪ್ರಿಲ್ 23 ರಿಂದ ಮೂರು ಬಾರಿ ಮುಂಬೈನ ವಾಸಿಯಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ಹೋಗಿ ಮಾವಿನ ಹಣ್ಣುಗಳನ್ನ ಮಾರಾಟ ಮಾಡಿ ಬಂದಿದ್ದ. ಮುಂಬೈಗೆ ಹೋಗಿ ಬಂದಿರೋ ವಿಷಯ ತಿಳಿದ ಮೇಲೆ ಸ್ಥಳೀಯರ ಮಾಹಿತಿ ಆಧಾರಿಸಿ ಮೇ 7ರಂದು ವ್ಯಾಪಾರಿಯ ಗಂಟಲು ದ್ರವ ಸಂಗ್ರಹಿಸಿ ಬೆಂಗಳೂರು ಲ್ಯಾಬ್‍ಗೆ ಕಳಿಸಿದ್ದರು. ವ್ಯಾಪಾರಿಯ ಲ್ಯಾಬ್ ವರದಿ ಇಂದು ಬಂದಿದ್ದು, ವ್ಯಾಪಾರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಸೋಂಕಿತ ವ್ಯಾಪಾರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಹಾನಗಲ್ ತಾಲೂಕಿನ ವಿವಿಧ ಗ್ರಾಮಗಳಿಗೆ ಹೋಗಿ ರೈತರ ತೋಟಗಳಲ್ಲಿ ಮಾವಿನ ಹಣ್ಣುಗಳನ್ನ ಖರೀದಿಸಿಕೊಂಡು ಹೋಗಿ ಮುಂಬೈನಲ್ಲಿ ಮಾರಾಟ ಮಾಡಿ ಬಂದಿದ್ದಾನೆ. ಹೀಗಾಗಿ ಸೋಂಕಿತ ವ್ಯಾಪಾರಿ ಪಿ-853 ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 14 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ 23 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ವಾಸವಾಗಿದ್ದ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ. ಸೋಂಕಿತ ವಾಸವಿದ್ದ ಪ್ರದೇಶದಿಂದ 7ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಜಿಲ್ಲಾಡಳಿತ ಬಫರ್ ಝೋನ್ ಎಂದು ಗುರುತಿಸಿದ್ದಾರೆ. ಒಟ್ಟಿನಲ್ಲಿ ಈವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೂರಕ್ಕೇರಿದೆ. ಇದು ಜನರಲ್ಲಿ ಮತ್ತಷ್ಟು ಆತಂಕವನ್ನ ಉಂಟು ಮಾಡಿದೆ.

  • ಕೇರಳ ಕಾರ್ಮಿಕರನ್ನು ಕೊಡಗಿನ ಮೂಲಕ ಸ್ಥಳಾಂತರಿಸುವುದಕ್ಕೆ ಕೆ.ಜಿ.ಬೋಪಯ್ಯ ವಿರೋಧ

    ಕೇರಳ ಕಾರ್ಮಿಕರನ್ನು ಕೊಡಗಿನ ಮೂಲಕ ಸ್ಥಳಾಂತರಿಸುವುದಕ್ಕೆ ಕೆ.ಜಿ.ಬೋಪಯ್ಯ ವಿರೋಧ

    ಮಡಿಕೇರಿ: ಕೆಲಸ ಹರಸಿ ಬಂದು ಮೈಸೂರಿನಲ್ಲಿ ಸಿಲುಕಿದ್ದ 60 ಕ್ಕೂ ಹೆಚ್ಚು ಕೇರಳ ಕಾರ್ಮಿಕರನ್ನು ಕೊಡಗಿನ ಮೂಲಕ ಕೇರಳಕ್ಕೆ ಸ್ಥಳಾಂತರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಘಟನೆ ಕೊಡಗಿನ ಕುಶಾಲನಗರ ಚೆಕ್‍ಪೋಸ್ಟ್ ನಲ್ಲಿ ನಡೆಯಿತು.

    ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಕುಶಾಲನಗರದ ಚೆಕ್ ಪೋಸ್ಟಿಗೆ ಭೇಟಿ ನೀಡಿದ್ದರು. ಇದೇ ವೇಳೆ ಮೈಸೂರಿನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಮೈಸೂರು ಜಿಲ್ಲಾಡಳಿತ ಮೂರು ಬಸ್‍ಗಳಲ್ಲಿ ಕೊಡಗಿನ ಮೂಲಕ ಕೇರಳಕ್ಕೆ ಸಾಗಿಸುತಿತ್ತು. ಕುಶಾಲನಗರ ಚೆಕ್ ಪೋಸ್ಟ್ ಮೂಲಕ ಕೊಡಗಿಗೆ ಬಸ್‍ಗಳು ಪ್ರವೇಶ ಮಾಡಿದಕ್ಕೆ ಶಾಸಕ ಕೆ.ಜಿ. ಬೋಪಯ್ಯ ಕೆಂಡಾಮಂಡಲವಾದರು.

    ಚೆಕ್‍ಪೋಸ್ಟಿನಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗರಂ ಆದರು. ಕೊಡಗು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಆದರೂ ಮೈಸೂರು ಕಮಿಷನರ್ ಈ ಬಸ್‍ಗಳನ್ನು ಕೊಡಗಿನ ಮೂಲಕ ಕೇರಳಕ್ಕೆ ಕಳುಹಿಸಲು ಮುಂದಾಗಿದ್ದು ಏಕೆ? ಇಷ್ಟು ಕಾರ್ಮಿಕರನ್ನು ಕೇರಳಕ್ಕೆ ಸಾಗಿಸುವಾಗ ಮಾರ್ಗ ಮಧ್ಯೆದಲ್ಲಿ ಕಾಫಿ, ಟೀಗೆ ಅಥವಾ ಊಟಕ್ಕೆ ಎಂದು ಇಳಿಯದೇ ಇರುವುದಿಲ್ಲ. ಈ ವೇಳೆ ಯಾರಿಗಾದರೂ ವೈರಸ್ ಇದ್ದು, ಕೊಡಗಿನ ಜನತೆಗೆ ಹರಡಿದರೆ ಅದಕ್ಕೆ ಹೊಣೆ ಯಾರು? ಹೀಗಾಗಿ ಕೊಡಗಿನ ಮೂಲಕ ಕಾರ್ಮಿಕರನ್ನು ಸಾಗಿಸಬಾರದು ಎಂದು ಶಾಸಕರು ಬಸ್‍ಗಳನ್ನು ತಡೆ ಹಿಡಿದರು.

    ಬೇರೆ ಯಾವ ಮಾರ್ಗದಲ್ಲಿ ಕಾರ್ಮಿಕರನ್ನು ಕೇರಳಕ್ಕೆ ಕಳುಹಿಸಲಿ ಎಂದು ಮೈಸೂರು ಜಿಲ್ಲೆಯಿಂದ ಆಗಮಿಸಿದ್ದ ಮೂರು ಬಸ್‍ಗಳನ್ನು ವಾಪಸ್ ಕಳುಹಿಸಿದರು. ಅಲ್ಲದೆ ಚೆಕ್‍ಪೋಸ್ಟ್ ನಲ್ಲಿರುವ ಅಧಿಕಾರಿಗಳು ಇನ್ನಷ್ಟು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿ ಕೆಲಸ ಮಾಡಲಿ ಎಂದರು.

  • ತುಮಕೂರು ಜಿಲ್ಲಾಡಳಿತ ಮಹಾ ಎಡವಟ್ಟು- ವರದಿ ಬರುವ ಮುನ್ನವೇ ಶವ ಹಸ್ತಾಂತರ

    ತುಮಕೂರು ಜಿಲ್ಲಾಡಳಿತ ಮಹಾ ಎಡವಟ್ಟು- ವರದಿ ಬರುವ ಮುನ್ನವೇ ಶವ ಹಸ್ತಾಂತರ

    – ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಶವ ಸಂಸ್ಕಾರ

    ತುಮಕೂರು: ತುಮಕೂರಿನಲ್ಲಿ ಕೊರೊನಾಗೆ ಎರಡನೇ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಹಾ ಎಡವಟ್ಟು ಮಾಡಿದ್ದು, ಸ್ಯಾಂಪಲ್ಸ್ ವರದಿ ಬರುವ ಮುನ್ನವೇ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಿದೆ. ಇದೀಗ ವರದಿ ಪಾಸಿಟಿವ್ ಬಂದಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮನೆ ಮಾಡಿದೆ.

    ಏ.25 ರಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿ 26 ರಂದು ಮೃತಪಟ್ಟಿದ್ದ. ಏ.25, 26ರಂದು ಎರಡು ಬಾರಿ ಸ್ಯಾಂಪಲ್ಸ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ವರದಿ ಬರುವ ಮುನ್ನವೇ ಏ.26 ರಂದು ಕುಟುಂಬಸ್ಥರಿಗೆ ಮೃತ ದೇಹ ಹಸ್ತಾಂತರ ಮಾಡಲಾಗಿದೆ. ಶವ ನೀಡುತ್ತಿದ್ದಂತೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಕುಟುಂಬಸ್ಥರು ತುಮಕೂರು ಗ್ರಾಮಾಂತರದ ಲಾಯ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಿದ್ದು, ಇದೀಗ ಮೃತ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಲಾಯ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಜಿಲ್ಲಾಡಳಿತದ ಮಹಾ ಎಡವಟ್ಟಿಗೆ ಜನ ಕಂಗಾಲಾಗಿದ್ದಾರೆ.

    ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರು ರೋಗಿ ನಂ.535 ಮೃತ ವ್ಯಕ್ತಿಗೆ ಕೊರೊನಾ ವೈರಸ್ ತಗುಲಿದ್ದನ್ನು ದೃಢಪಡಿಸಿದ್ದಾರೆ. ಈ ಮೂಲಕ ತುಮಕೂರಿನಲ್ಲಿ ಕೊರೊನಾ ಗೆ ಎರಡನೇ ಬಲಿಯಾದಂತಾಗಿದೆ. ನಗರದ ಕೆ.ಹೆಚ್.ಪಿ ಕಾಲೋನಿ ವಾಸಿಯಾಗಿದ್ದ ರೋಗಿ ನಂ.535, ಏ.25 ರಂದು ಉಸಿರಾಟದ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. 26 ರಂದು ಮೃತಪಟ್ಟಿದ್ದ. ಈತನಿಗೆ ಟ್ರಾವೆಲ್ ಹಿಸ್ಟರಿ ಇರಲಿಲ್ಲ.

    ಉಸಿರಾಟದ ತೊಂದರೆ ಪ್ರಕರಣಗಳು ತುಮಕೂರು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಮೃತ ವ್ಯಕ್ತಿಯ ನಿವಾಸದ 100 ಮೀ. ವ್ಯಾಪ್ತಿಯನ್ನು ಇದೀಗ ಕಂಟೈನ್‍ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಮೃತ ಕುಟುಂಬದ ನಾಲ್ಕು ಮಂದಿಯನ್ನು ಐಸೋಲೇಷನ್‍ನಲ್ಲಿಡಲಾಗಿದ್ದು, ಪ್ರಾಥಮಿಕ ಸಂಪರ್ಕ ಹೊಂದಿದ್ದ 51 ಮಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ವಿವರಿಸಿದ್ದಾರೆ.

  • ಲಾಕ್‍ಡೌನ್ ಸಡಿಲಿಕೆ: ಸಹಜ ಸ್ಥಿತಿಯತ್ತ ಗ್ರೀನ್ ಝೋನ್ ಯಾದಗಿರಿ

    ಲಾಕ್‍ಡೌನ್ ಸಡಿಲಿಕೆ: ಸಹಜ ಸ್ಥಿತಿಯತ್ತ ಗ್ರೀನ್ ಝೋನ್ ಯಾದಗಿರಿ

    – ವಿಶೇಷ ಬಸ್ ಮೂಲಕ ಊರಿನತ್ತ ಕಾರ್ಮಿಕರು

    ಯಾದಗಿರಿ: ಕೊರೊನಾ ಗ್ರೀನ್ ಝೋನ್‍ನಲ್ಲಿರುವ ಯಾದಗಿರಿಗೆ ಲಾಕ್‍ಡೌನ್‍ನಿಂದ ಮತ್ತಷ್ಟು ಸಡಿಲಿಕೆ ಲಭಿಸಿದ್ದು, ನಗರದಲ್ಲಿ ವ್ಯಾಪಾರ-ವಹಿವಾಟು ಜೋರಾಗಿದೆ.

    ಜಿಲ್ಲೆ ಗ್ರೀನ್ ಝೋನ್‍ನಲ್ಲಿರುವ ಕಾರಣ ಲಾಕ್‍ಡೌನ್ ಸಂಪೂರ್ಣ ಸಡಲಿಕೆ ಎಂಬಂತೆ ಯಾದಗಿರಿ ನಗರದಲ್ಲಿ ಬಾಸವಾಗುತ್ತಿದೆ. ಅಗತ್ಯ ವಸ್ತುಗಳ ಪೂರೈಕೆ ಅಂಗಡಿಗಳ ಜೊತೆಗೆ ಮೊಬೈಲ್ ಶಾಪ್, ಎಲೆಕ್ಟ್ರಿಕ್ ಮತ್ತು ಬುಕ್ ಸ್ಟಾಲ್, ಸಿಮೆಂಟ್, ಕಾರ್ ರಿಪೇರಿ ಗ್ಯಾರೇಜ್ ಸಹ ತೆರೆಯಲಾಗಿದೆ. ನಗರದಲ್ಲಿ ಬೃಹತ್ ವಾಹನಗಳ ಸಂಚಾರ ಸಹ ಆರಂಭವಾಗಿದೆ. ಕಲಬುರಗಿ ಜಿಲ್ಲೆಯ ವಾಡಿಯಲ್ಲಿರುವ ಸಿಮೆಂಟ್ ತಯಾರಿಕಾ ಘಟಕಗಳಿಗೆ ಬೇಕಾಗುವ ಕಚ್ಚಾವಸ್ತುಗಳು ಸಾಗಾಟ ಮತ್ತೆ ಆರಂಭವಾಗಿದೆ.

    ಲಾಕ್‍ಡೌನ್ ಸಡಿಲಿಕೆ ಆಗಿರುವ ಹಿನ್ನೆಲೆಯಲ್ಲಿ ಊರಿಗೆ ತೆರಳಲಾಗದೆ ಆಶ್ರಯ ಕೇಂದ್ರಗಳಲ್ಲಿದ್ದ ದೂರದೂರಿನ ಕಾರ್ಮಿಕರು ತಮ್ಮ ಮನೆಗಳತ್ತ ಮುಖ ಮಾಡಿದ್ದಾರೆ. ಜಿಲ್ಲಾಡಳಿತದ ಕೂಲಿ ಕಾರ್ಮಿಕರು ತೆರಳಲು ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಕೆಎಸ್ಆರ್‌ಟಿಸಿ ಸಂಸ್ಥೆಯ ಸಹಾಯದಿಂದ ವಿಶೇಷ ಬಸ್ ಮೂಲಕ ಕಾರ್ಮಿಕರನ್ನು ಅವರ ಊರಿಗೆ ಕರೆದುಕೊಂಡು ಹೋಗಲಾಗುತ್ತಿದೆ.

    ರಾಜ್ಯದ ವಿವಿಧ ಜಿಲ್ಲೆಯ ಕಾರ್ಮಿಕರು ಸೇರಿದಂತೆ ಅಂತರ್ ರಾಜ್ಯದ ಒಟ್ಟು 500 ಕಾರ್ಮಿಕರಿಗೆ ಜಿಲ್ಲಾಡಳಿತ ಜಿಲ್ಲೆಯ ಯಾದಗಿರಿ, ಸುರಪುರ, ಶಹಪುರದ ಸರ್ಕಾರದ ವಿವಿಧ ಹಾಸ್ಟೆಲ್‍ಗಳಲ್ಲಿ, ತಾತ್ಕಾಲಿಕ ವಸತಿ ಮತ್ತು ಊಟಸ ವ್ಯವಸ್ಥೆ ಕಲ್ಪಿಸಿತ್ತು. ಲಾಕ್ ಡೌನ್ ಘೋಷಣೆ ಮಾಡಿದ ದಿನದಿಂದಲ್ಲೂ ಕಾರ್ಮಿಕರು ಇಲ್ಲೇ ಕಾಲ ಕಳೆಯುತ್ತಿದ್ದರು. ಸರ್ಕಾರ ಲಾಕ್‍ಡೌನ್ ಸಡಿಲ ಮಾಡಿದ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಅವರ ಊರಿಗಳಿಗೆ ತೆರಳು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದೆ.