Tag: District President

  • ಟೋಲ್ ಪ್ಲಾಜಾ ನೌಕರರ ಮೇಲೆ ಬಿಜೆಪಿ ಮುಖಂಡನ ಗೂಂಡಾ ವರ್ತನೆ

    ಟೋಲ್ ಪ್ಲಾಜಾ ನೌಕರರ ಮೇಲೆ ಬಿಜೆಪಿ ಮುಖಂಡನ ಗೂಂಡಾ ವರ್ತನೆ

    ಭೋಪಾಲ್: ಟೋಲ್ ಪ್ಲಾಜಾ ಬಳಿ ಶಾಜಾದಪುರದ ಬಿಜೆಪಿ ಜಿಲ್ಲಾಧ್ಯಕ್ಷ ಅಂಬರಂ ಕರಡ ಗೂಂಡಾಗಿರಿ ಮೆರೆದಿದ್ದು, ಅವರ ಬೆಂಬಲಿಗರು ಟೋಲ್ ಪ್ಲಾಜಾದ ನೌಕರರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಘಟನೆಯ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೆಹೋರ್‌ನ ಪಟೇರಿಯಾ ಗೋಯಲ್ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾದ ಪ್ರಕರಣ ಇದಾಗಿದ್ದು, ಬಿಜೆಪಿ ಕಾರ್ಯಕರ್ತರು ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

    ಜಿಲ್ಲಾಧ್ಯಕ್ಷರು ಸ್ಥಳದಲ್ಲೇ ಇದ್ದು, ಜಗಳ ನಿಲ್ಲಿಸುವ ಬದಲು ಪ್ರಚಾರ ಮಾಡುತ್ತಿರುವಂತಿದೆ ಎಂದು ದೂರು ಕೇಳಿಬರುತ್ತಿದೆ. ಸ್ಥಳೀಯ ವ್ಯಕ್ತಿಯೊಬ್ಬರು ಸಿಬ್ಬಂದಿ ಮೇಲೆ ಹಲ್ಲೆ ಎಸಗುತ್ತಿರುವ ದೃಶ್ಯಾವಳಿಗಳನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಬಿಜೆಪಿ ಕಾರ್ಯಕರ್ತರ ದಬ್ಬಾಳಿಕೆ ಮುಂದೆ ಟೋಲ್ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • 2ನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೇರಿದ ಅನಿಲ್ ಬೆನಕೆ

    2ನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೇರಿದ ಅನಿಲ್ ಬೆನಕೆ

    ಬೆಳಗಾವಿ: ಶಾಸಕ ಅನಿಲ್ ಬೆನಕೆ ಅವರನ್ನು ಬೆಳಗಾವಿ ಬಿಜೆಪಿ ನಗರ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಶಾಸಕರಾಗುವುದಕ್ಕಿಂತ ಮೊದಲೇ ಬೆನಕೆ ಬೆಳಗಾವಿ ಮಹಾನಗರ ಅಧ್ಯಕ್ಷರಾಗಿದ್ದರು. ಇದೀಗ 2ನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ.

    ಹಾಲಿ ಶಾಸಕರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ ಬಗ್ಗೆ ಬೆಳಗಾವಿ ರಾಜಕಾರಣದಲ್ಲಿ ಬಿಸಿಬಿಸಿ ಚರ್ಚೆಗಳು ಆರಂಭಗೊಂಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅನಿಲ್ ಬೆನಕೆಗೆ ಬಿಜೆಪಿ ಟಿಕೆಟ್ ಕೈ ತಪ್ಪುತ್ತಾ? ಪಕ್ಷ ಸಂಘಟನೆ ದೃಷ್ಟಿಯಿಂದ ಈ ಜವಾಬ್ದಾರಿ ನೀಡಲಾಗಿದೆಯೇ? ಎಂಬ ಬಗ್ಗೆ ಚರ್ಚೆಗಳು ನಡೆದಿವೆ. ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ 9 ತಿಂಗಳಷ್ಟೇ ಆಯಸ್ಸು: ಸಿಎಂ ಇಬ್ರಾಹಿಂ

    ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಅನಿಲ್ ಬೆನಕೆಗೆ ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನ ನೀಡಿರುವುದು ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದ – ಸಿಎಂ ಮಧ್ಯಪ್ರವೇಶಕ್ಕೆ ಸಾಹಿತಿಗಳ ಆಗ್ರಹ

     

  • ಕೊಲೆ ಯತ್ನ- ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಂಧನ

    ಕೊಲೆ ಯತ್ನ- ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಂಧನ

    ಚಿಕ್ಕಬಳ್ಳಾಪುರ: ಹಲ್ಲೆ, ಕೊಲೆಯತ್ನ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್ ಬಂಧನವಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಕೈವಾರ ಶ್ರೀನಿವಾಸ್ ಪಕ್ಕದ ಮನೆಯ ನಿವಾಸಿಗಳಾದ ನಾರಾಯಣಸ್ವಾಮಿ ಹಾಗೂ ಕುಟುಂಬಸ್ಥರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಬಗ್ಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸರು ಕೈವಾರ ಶ್ರೀನಿವಾಸ್ ಹಾಗೂ ಆತನ ಇಬ್ಬರು ಸಹೋದರರು ಸೇರಿದಂತೆ ಒರ್ವ ಸ್ನೇಹಿತ ಸೇರಿ ಒಟ್ಟು ನಾಲ್ವರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಇಡಿ ದಾಳಿ ಪ್ರಕರಣ- ದೆಹಲಿಯಲ್ಲಿ ಮೊದಲ ಬಾರಿ ವಿಚಾರಣೆಗೆ ಹಾಜರಾದ ಜಮೀರ್

    ಏನಿದು ಪ್ರಕರಣ?
    ಚಿಂತಾಮಣಿ ತಾಲೂಕಿನ ಕೈವಾರ ಗ್ರಾಮದ ನಿವಾಸಿ ಕಸಾಪಾ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಪಕ್ಕದ ಮನೆಯವರಾದ ನಾರಾಯಣಸ್ವಾಮಿಯವರಿಗೂ ಜಮೀನು, ನಿವೇಶನ ಸಂಬಂಧ ವಿವಾದಗಳಿದ್ದು, ಈ ವಿವಾದ ಸಂಬಂಧ ಪದೇ ಪದೇ ಮಾತುಕತೆ, ವಾಗ್ವಾದ, ರಾಜೀ ಪಂಚಾಯತಿ ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಇದೇ ವಿಚಾರವಾಗಿ ಎರಡೂ ಕುಟುಂಬಸ್ಥರ ನಡುವೆ ಗಲಾಟೆಯಾಗಿದ್ದು, ಕೈವಾರ ಶ್ರೀನಿವಾಸ್ ಕುಟುಂಬಸ್ಥರು ನಾರಾಯಣಸ್ವಾಮಿ ಹಾಗೂ ಆತನ ಸಹೋದರ ಅಶ್ವತ್ಥನಾರಾಯಣ ಹಾಗೂ ಪತ್ನಿ ಉಮಾದೇವಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ. ಹಲ್ಲೆಗೆ ಒಳಗಾಗಿರುವ ನಾರಾಯಣಸ್ವಾಮಿ ಆತನ ಸಹೋದರ ಹಾಗೂ ಪತ್ನಿ ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕೈವಾರ ಶ್ರೀನಿವಾಸ್ ಸಹ ದೂರು ನೀಡಿದ್ದು, ತನಿಖೆಯ ಹಂತದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಬಿಜೆಪಿಯಲ್ಲಿ ವಯಸ್ಸಿನ ಗುದ್ದಾಟ- 55 ವರ್ಷದೊಳಗಿನವರು ಜಿಲ್ಲಾಧ್ಯಕ್ಷರು

    ಬಿಜೆಪಿಯಲ್ಲಿ ವಯಸ್ಸಿನ ಗುದ್ದಾಟ- 55 ವರ್ಷದೊಳಗಿನವರು ಜಿಲ್ಲಾಧ್ಯಕ್ಷರು

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಚದುರಾಂಗದಾಟ ದೊಡ್ಡಮಟ್ಟದಲ್ಲಿ ಎದುರಾಗಿದೆ. ದೇಶದಲ್ಲಿ ಜಾರಿಯಾದ ವಯಸ್ಸಿನ ಮಿತಿ ನಿಯಮ ರಾಜ್ಯದ ಜಿಲ್ಲೆಗಳಲ್ಲೂ ಜಾರಿಯಾಗ್ತಿದೆ. ರಾಜ್ಯದ ಮುಖ್ಯಮಂತ್ರಿಗಿಲ್ಲದ ವಯಸ್ಸಿನ ಮಿತಿ ಪ್ರಯೋಗವನ್ನ ಜಿಲ್ಲೆಗಳಲ್ಲಿ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿ ಘಟಕ ಜಿಲ್ಲಾಧ್ಯಕ್ಷರ ನೇಮಕಕ್ಕೆ ವಯಸ್ಸಿನ ಮಿತಿ ಹೇರಿದೆ.

    55 ವರ್ಷದೊಳಗಿನವರು ಮಾತ್ರ ಜಿಲ್ಲಾಧ್ಯಕ್ಷ ಹುದ್ದೆಗೆ ಅರ್ಜಿ ಸಲ್ಲಿಸಬಹುದು. 55 ವರ್ಷ ಆದವರು ಜಿಲ್ಲಾಧ್ಯಕ್ಷರಾಗುವಂತಿಲ್ಲ. ಅಷ್ಟೇ ಅಲ್ಲ ಮಂಡಲ ಅಧ್ಯಕ್ಷರ ವಯಸ್ಸಿನ ಮಿತಿಯೂ 50ಕ್ಕೆ ಸೀಮಿತವಾಗಿದೆ. 50 ವರ್ಷ ದಾಟಿದವರು ಕೂಡ ಮಂಡಲ ಅಧ್ಯಕ್ಷರಾಗುವಂತಿಲ್ಲ.

    ಇದೇ ಮೊದಲ ಬಾರಿಗೆ ಜಿಲ್ಲಾಧ್ಯಕ್ಷ, ಮಂಡಲ ಅಧ್ಯಕ್ಷ ಸ್ಥಾನಕ್ಕೆ ವಯಸ್ಸಿನ ಮಿತಿ ಏರಿರೋದು ಅಚ್ಚರಿ ತಂದಿದೆ. ಇಷ್ಟು ದಿನ ಇಲ್ಲದ ವಯಸ್ಸಿನ ಮಿತಿ ಹೇರಿಕೆ ಈಗೇಕೆ ಅನ್ನೋ ಲೆಕ್ಕಚಾರಗಳು ಬಿಜೆಪಿ ವಲಯದಲ್ಲಿ ಸದ್ದು ಮಾಡಿವೆ. ರಾಷ್ಟ್ರ ಮಟ್ಟದಲ್ಲೂ ವಯಸ್ಸಿನ ಮಿತಿ ಹೇರಿದಾಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಆದ್ರೆ ಕರ್ನಾಟಕದ ವಿಚಾರಕ್ಕೆ ಬಂದಾಗ, ಆದರಲ್ಲೂ ಯಡಿಯೂರಪ್ಪ ವಿಚಾರಕ್ಕೆ ಬಂದಾಗ ಇದೊಂದಿ ವಿಶೇಷ ಪ್ರಕರಣ ಅಂತಾ ವಯಸ್ಸಿನ ಮಿತಿ ಹೇರಿರಲಿಲ್ಲ.

    ಜಿಲ್ಲಾಧ್ಯಕ್ಷ ಮಟ್ಟದಿಂದಲೇ ವಯಸ್ಸಿನ ಮಿತಿ ಹೇರುತ್ತಿರುವುದು ಬಿಜೆಪಿಯ ಮೇಲಾಟಕ್ಕೆ ಸಾಕ್ಷಿಯಾಗುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ. ಸಂಘಟನೆಯ ದೃಷ್ಟಿಯಿಂದ ಬಿಜೆಪಿ ಒಟ್ಟು 36 ಜಿಲ್ಲಾಧ್ಯಕ್ಷರನ್ನ ನೇಮಕ ಮಾಡಿಕೊಳ್ಳುತ್ತಿತ್ತು. ಈ ಬಾರಿ ಎರಡ್ಮೂರು ಹೆಚ್ಚಾಗುವ ಸಾಧ್ಯತೆಯೂ ಇದೆ ಅಂತಾ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ. ವಯಸ್ಸಿನ ಮಿತಿ ಆಧಾರದ ಮೇಲೆ ಈಗಾಗಲೇ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರ ನೇಮಕ ಆಗಿದ್ದು, ಮುಂದೆ ಎಲ್ಲಾ ಜಿಲ್ಲಾಧ್ಯಕ್ಷರ ನೇಮಕವೂ ವಯಸ್ಸಿನ ಮಿತಿ ನಿಯಾಮವಳಿಯಂತೆ ನಡೆಯುತ್ತಾ ಕಾದು ನೋಡಬೇಕಿದೆ.

  • ಗೂಳಿಹಟ್ಟಿ ಶೇಖರ್ ಆರೋಪಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ತಿರುಗೇಟು

    ಗೂಳಿಹಟ್ಟಿ ಶೇಖರ್ ಆರೋಪಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ತಿರುಗೇಟು

    -ಚಾಡಿ ಹೇಳಿ ಅನುಧಾನ ನಿಲ್ಲಿಸೋ ಥರ್ಡ್ ಕ್ಲಾಸ್ ನಾನಲ್ಲ ಎಂದ ಜಿಲ್ಲಾಧ್ಯಕ್ಷ

    ಚಿತ್ರದುರ್ಗ: ಒಗ್ಗಟ್ಟಿನ ಮಂತ್ರ ಜಪಿಸುತ್ತಾ ವಿಧಾನಸಭೆ ಚುನಾವಣೆಯಲ್ಲಿ ಗೂಳಿಹಟ್ಟಿ ಶೇಖರ್ ಪರ ಓಡಾಡಿದ್ದ ಚಿತ್ರದುರ್ಗ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಶುರುವಾಗಿದೆ. ಈ ನಡುವೆ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಕ್ಕೆ ಜಿಲ್ಲಾಧ್ಯಕ್ಷ ನವೀನ್ ತಿರುಗೇಟು ನೀಡಿದ್ದಾರೆ.

    ಹೊಸದುರ್ಗದ ಬನಶಂಕರಿ ಭವನದಲ್ಲಿ ಭಾನುವಾರ ಸ್ವಾಭಿಮಾನಿ ಗೂಳಿಹಟ್ಟಿ ಶೇಖರ್ ಬಳಗದಿಂದ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಗೂಳಿಹಟ್ಟಿ ಶೇಖರ್ ಜಿಲ್ಲಾಧ್ಯಕ್ಷರ ವಿರುದ್ಧ ಆರೋಪ ಮಾಡಿದ್ದರು. ಈ ಆರೋಪಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಚಿತ್ರದುರ್ಗ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ, ಹೊಸದುರ್ಗ ಬಿಜೆಪಿ ಟಿಕೆಟ್ ಆಕಾಂಕ್ಷಿ ನವೀನ್, ತಮ್ಮ ವಿರುದ್ಧ ವರಿಷ್ಠರ ಬಳಿ ಇಲ್ಲಿನ ಬಿಜೆಪಿ ಮುಖಂಡರು ಚಾಳಿ ಹೇಳುತ್ತಿದ್ದಾರೆ ಎಂದು ಶಾಸಕರು ಆರೋಪಿಸಿದ್ದರು. ಗೂಳಿಹಟ್ಟಿ ಶೇಖರ್ ಹೇಳುವಂತೆ ನಾವು, ಚಾಡಿ ಹೇಳಿ ಅನುದಾನ ನಿಲ್ಲಿಸುವಂತಹ ಥರ್ಡ್ ಕ್ಲಾಸ್ ಮೆಂಟಾಲಿಟಯವರಲ್ಲ. ನಾನು ಯಾರ ಬಗ್ಗೆಯೂ ಚಾಡಿ ಹೇಳುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.

    ಇದೇ ವೇಳೆ ತಾಲೂಕು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಶಾಸಕರ ಕಡೆಗಣನೆ ವಿಚಾರವಾಗಿ ಪ್ರತಿಕ್ರಿಯಿಸಿದ ನವೀನ್, ಈ ವಿಷಯವನ್ನು ಕಾರ್ಯಕರ್ತರ ಸಭೆಯಲ್ಲಿ ಹೇಳುವಂತಹ ಅವಶ್ಯಕತೆ ಇರಲಿಲ್ಲ. ಜೊತೆಗೆ ನಾವು ಶಾಸಕರನ್ನು ಸೈಡ್ ಲೈನ್ ಮಾಡಿಲ್ಲ. ರಾಜ್ಯದ ಯಾವುದೇ ಶಾಸಕರು ಕೂಡ ಈ ರೀತಿ ಬೆಂಬಲಿಗರ ಸಭೆ ಕರೆಯುವುದಿಲ್ಲ. ಆದರೆ ಇವರು ಮಾತ್ರ ನಾನು ಬಿಜೆಪಿಗೆ ಬಂದು ತಪ್ಪು ಮಾಡಿದೆ ಎಂದು ಈ ಹಿಂದೆಯೂ ಹೇಳಿಕೆ ಕೊಟ್ಟಿದ್ದರು. ಈ ರೀತಿಯ ಹೇಳಿಕೆಯನ್ನು ನೀಡಬೇಡಿ ಎಂದು ಮನವಿ ಮಾಡಿದ್ದೇವೆ. ಅಲ್ಲದೇ ನಿಮ್ಮ ಅಭಿಮಾನಿಗಳು ಎಷ್ಟು ಪ್ರೀತಿಯಿಟ್ಟು ಮತ ಹಾಕಿದ್ದಾರೋ, ಅದರ ಎರಡರಷ್ಟು ಅಭಿಮಾನ ಇಟ್ಟು ಬಿಜೆಪಿ ಕಾರ್ಯಕರ್ತರು ನಿಮಗೆ ಮತ ಹಾಕಿದ್ದಾರೆ ಎಂದು ಟಾಂಗ್ ಕೊಟ್ಟರು. ಇದನ್ನು ಓದಿ: ಬಿಜೆಪಿ ವಿರುದ್ಧ ಮತ್ತೆ ಮುನಿದ ಗೂಳಿಹಟ್ಟಿ – ಮುಂದಿನ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸೋ ಇಂಗಿತ

    ಶೇಖರ್ ಅವರು ತಮ್ಮ ಎಲ್ಲಾ ಸಭೆಗಳಲ್ಲಿ ನನ್ನ ಅಭಿಮಾನಿಗಳು ಬಿಜೆಪಿಗೆ ಹೊಂದಿಕೊಳ್ಳುತ್ತಿಲ್ಲ ಎಂದು ಹೇಳುತ್ತಾರೆ. ಅವರಿಗೆ ಇಂತವರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಹೇಳುವ ನೈತಿಕತೆಯೇ ಇಲ್ಲ. ನಾನು ಬಿಜೆಪಿ, ನನ್ನ ಬೆಂಬಲಿಗರು ಬಿಜೆಪಿಯವರು ಎನ್ನುವ ಮನಸ್ಥಿತಿ ಅವರಲಿಲ್ಲ. ಇಂತಹ ಮನಸ್ಥಿತಿಯನ್ನು ಅವರು ಹೊಂದಿದ್ದಾರೆ ಎಂದು ಶಾಸಕರ ವಿರುದ್ಧ ನವೀನ್ ಗುಟುರು ಹಾಕಿದ್ದಾರೆ.

    ಕೆಲವರು ಶಾಸಕರಾಗಲು ತುದಿಗಾಲಲ್ಲಿ ನಿಂತಿದ್ದಾರೆ ಎಂಬ ಶಾಸಕ ಗೂಳಿಹಟ್ಟಿ ಶೇಖರ್ ಅವರ ಹೇಳಿಕೆ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, ಇಂತಹ ಮನೋಭವ ನನಗೆ ಇದ್ದಿದ್ದರೆ 2008 ರಲ್ಲೇ ಅವರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದೆ. ಆದರೆ ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಅವರ ಪಕ್ಷ ವಿರೋಧಿ ಹೇಳಿಕೆಗಳಿಗೆ ಸಮಯದ ಬಂದಾಗ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷೇತರವಾಗಿ ನಿಲ್ಲಬೇಕೆಂದಿರೋ ಶಾಸಕರಿಗೆ ಚುನಾವಣೆ ಸಂದರ್ಭದಲ್ಲಿ ತಕ್ಕ ಉತ್ತರ ಕೊಡುತ್ತೇವೆ. ಆದರೆ ನಮ್ಮ ಪಕ್ಷ ಅವರೇ ಬೇಕು ಎಂದರೂ ಸಹ ಅವರ ಪರವಾಗಿ ಕೆಲಸ ಮಡುತ್ತೇವೆ ಎಂದು ಪಕ್ಷನಿಷ್ಠೆಯನ್ನು ವ್ಯಕ್ತಪಡಿಸಿದರು.

  • ರಾಮನಗರದಲ್ಲಿ ಬಿಜೆಪಿಗೆ ಮತ್ತೊಂದು ಬಿಗ್ ಶಾಕ್

    ರಾಮನಗರದಲ್ಲಿ ಬಿಜೆಪಿಗೆ ಮತ್ತೊಂದು ಬಿಗ್ ಶಾಕ್

    ರಾಮನಗರ: ಇಲ್ಲಿನ ಅಭ್ಯರ್ಥಿ ಎಲ್ ಚಂದ್ರಶೇಖರ್ ಅವರು ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಇದೀಗ ಜಿಲ್ಲಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನಿಡಲು ಮುಂದಾಗಿದ್ದಾರೆ.

    ಹೌದು. ರಾಮನಗರ ಬಿಜೆಪಿ ಜಿಲ್ಲಾದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ರುದ್ರೇಶ್ ಮುಂದಾಗಿದ್ದಾರೆ. ಪಕ್ಷದ ನಾಯಕರ ಸಹವಾಸ ಸಾಕಾಗಿದೆ. ರಾಜೀನಾಮೆ ತೀರ್ಮಾನಕ್ಕೆ ಬಂದಿದ್ದೇನೆ. ನಾಳೆ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನು ತಿಳಿಸುತ್ತೇನೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಉಪಚುನಾವಣೆಗೆ ಸ್ಫೋಟಕ ಟ್ವಿಸ್ಟ್-ಚುನಾವಣೆ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ

    ಅಲ್ಲದೇ ಕಾರ್ಯಕರ್ತರ ಹಾಗೂ ಮುಖಂಡರ ನಡುವಿನ ಭಿನ್ನಾಭಿಪ್ರಾಯದಿಂದ ಬೇಸರವಾಗಿದೆ. ಚುನಾವಣೆಯಲ್ಲಿ ಅಭ್ಯರ್ಥಿ ದಿಢೀರ್ ಕೈ ಕೊಟ್ಟು ಮತ್ತೆ ಕಾಂಗ್ರೆಸ್ ಸೇರ್ಪಡೆಯಾದ ಹಿನ್ನೆಲೆಯಲ್ಲಿ ರುದ್ರೇಶ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=SUz3348T4QA

  • ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಸವರಾಜ್ ಹಿಟ್ನಾಳ್ ರಾಜೀನಾಮೆ!

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಸವರಾಜ್ ಹಿಟ್ನಾಳ್ ರಾಜೀನಾಮೆ!

    – ಮಾಜಿ ಸಚಿವ ಶಿವರಾಜ್ ತಂಗಡಗಿ ಮುಂದಿನ ಕೊಪ್ಪಳದ ಜಿಲ್ಲಾಧ್ಯಕ್ಷ?

    ಕೊಪ್ಪಳ: ಕಳೆದ 8 ವರ್ಷದಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ ಬಸವರಾಜ ಹಿಟ್ನಾಳ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರುವುದಾಗಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 5 ಕ್ಷೇತ್ರದಲ್ಲಿ, ಕೇವಲ 2 ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಈ ಕಾರಣಕ್ಕಾಗಿ ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹಿಟ್ನಾಳ್ ಪತ್ರದಲ್ಲಿ ತಿಳಿಸಿದ್ದಾರೆ. ಜೂನ್ 7 ರಂದು ಹಿಟ್ನಾಳ್ ರಾಜೀನಾಮೆ ಸಲ್ಲಿಸಿದ್ದು, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಶಿವರಾಜ್ ತಂಗಡಗಿ ಹೆಸರು ಕೇಳಿ ಬರುತ್ತಿದೆ.

    ಮಾಜಿ ಸಿಎಂ ಸಿದ್ದರಾಮಯ್ಯ ತಂಗಡಗಿಗೆ ಜಿಲ್ಲಾ ಅಧ್ಯಕ್ಷ ಸ್ಥಾನ ಕೊಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಂದಿನ ದಿನದಲ್ಲಿ ಶಿವರಾಜ್ ತಂಗಡಗಿ ಕೊಪ್ಪಳ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಏರಲಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv