Tag: District Office

  • ಸೂರ್ಯ ಗ್ರಹಣದ ಎಫೆಕ್ಟ್ – ಸಾರ್ವಜನಿಕರು ಬಾರದೆ ಸರ್ಕಾರಿ ಕಚೇರಿಗಳು ಖಾಲಿ ಖಾಲಿ

    ಸೂರ್ಯ ಗ್ರಹಣದ ಎಫೆಕ್ಟ್ – ಸಾರ್ವಜನಿಕರು ಬಾರದೆ ಸರ್ಕಾರಿ ಕಚೇರಿಗಳು ಖಾಲಿ ಖಾಲಿ

    ಚಿಕ್ಕಬಳ್ಳಾಪುರ: ಸೂರ್ಯ ಗ್ರಹಣದ ಎಫೆಕ್ಟ್ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನಕ್ಕೂ ತಟ್ಟಿದ್ದು ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಬಾರದೆ ಕಚೇರಿಗಳೆಲ್ಲವೂ ಖಾಲಿ ಖಾಲಿ ಹೊಡೆದಿದ್ದವು.

    ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಸಾರ್ವಜನಿಕರಿಲ್ಲದೇ ಭಣಗುಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗ್ರಹಣ ಭೀತಿ ಹಿನ್ನೆಲೆ ಮನೆಯಿಂದ ಜನ ಹೊರ ಹಾರದ ಕಾರಣ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದತ್ತ ಸಾರ್ವಜನಿಕರು ಸುಳಿದಾಡಲೇ ಇಲ್ಲ. ಕೇವಲ ಬೆರಳಣಿಕೆಯಷ್ಟು ಕೆಲ ಸಾರ್ವಜನಿಕರು ಗ್ರಹಣ ಮುಗಿದ ತರುವಾಯ ಮಧ್ಯಾಹ್ನ ನಂತರ ಆಗಮಿಸಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡರು.

    ನಿನ್ನೆ ಕ್ರಿಸ್ ಮಸ್ ರಜೆ ಇಂದು ಗ್ರಹಣದ ಹಿನ್ನೆಲೆ ಬಹುತೇಕ ಅಧಿಕಾರಿ ಸಿಬ್ಬಂದಿ ಕೂಡ ರಜೆ ಹಾಕಿದ್ದು ಕಚೇರಿಗಳಿಗೆ ಬಂದಿರಲಿಲ್ಲ. ಒಂದು ಕಡೆ ಕ್ರಿಸ್ ಮಸ್ ರಜೆಯ ಎಫೆಕ್ಟ್ ಮತ್ತೊಂದೆಡೆ ಗ್ರಹಣದ ಭೀತಿಯಿಂದ ಸಾರ್ವಜನಿಕರಿಲ್ಲದೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನವೇ ಸಂಪೂರ್ಣ ಬಿಕೋ ಎನ್ನುವಂತಾಗಿತ್ತು.

  • ನನಗೆ ತಲಾಕ್ ಬೇಡ ಗಂಡ ಬೇಕು – ಡಿಸಿ ಕಚೇರಿ ಎದುರು ಉಪವಾಸ ಕುಳಿತ ಮಹಿಳೆ

    ನನಗೆ ತಲಾಕ್ ಬೇಡ ಗಂಡ ಬೇಕು – ಡಿಸಿ ಕಚೇರಿ ಎದುರು ಉಪವಾಸ ಕುಳಿತ ಮಹಿಳೆ

    ಶಿವಮೊಗ್ಗ: ಪತಿ ತಲಾಕ್ ನೀಡಿರುವುದನ್ನು ವಿರೋಧಿಸಿ ಇದೀಗ ಆತನ ಪತ್ನಿ ಹಾಗು ಮಗಳು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

    ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ರದ್ದುಗೊಳಿಸಿ ನೂತನ ಕಾಯ್ದೆ ಜಾರಿಗೆ ತಂದಿದ್ದರೂ ಶಿವಮೊಗ್ಗದಲ್ಲಿ ವಾಟ್ಸಾಪ್ ಮೂಲಕ ಪತಿ ಮಹಾಶಯನೋರ್ವ ಪತ್ನಿಗೆ ಮೂರು ಬಾರಿ ತಲಾಕ್ ಎಂದು ಹೇಳುವ ಮೂಲಕ ವಿಚ್ಛೇದನ ನೀಡಿದ್ದಾನೆ.

    ನಗರದ ಟ್ಯಾಂಕ್ ಮೊಹಲ್ಲಾ ನಿವಾಸಿ ಮುಸ್ತಫಾ ಬೇಗ್ ಹಾಗು ಆಯಿಷಾ ಕಳೆದ 21 ವರ್ಷಗಳ ಹಿಂದೆ ಪರಸ್ವರ ಪ್ರೀತಿಸಿ ವಿವಾಹವಾಗಿದ್ದರು. ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಮುಸ್ತಫಾ ಬೇಗ್ ತನ್ನ ಪತ್ನಿಯನ್ನು ಶಿವಮೊಗ್ಗದಲ್ಲಿಯೇ ಉಳಿಸಿದ್ದ. ಆದರೆ ಒಂದು ತಿಂಗಳ ಹಿಂದೆ ಇದ್ದಕಿದ್ದಂತೆ ದುಬೈನಲ್ಲಿಯೇ ಕುಳಿತು ಪತ್ನಿ ಆಯಿಷಾಗೆ ವಾಟ್ಸಾಪ್ ನಲ್ಲಿಯೇ ತಲಾಕ್ ನೀಡಿ ಕೈ ತೊಳೆದುಕೊಂಡಿದ್ದಾನೆ.

    ಪತ್ನಿ ಆಯಿಷಾ ಮಾತ್ರ ನನಗೆ ತಲಾಕ್ ಬೇಡ ಪತಿಯೇ ಬೇಕು ನಾನು ಆತನ ಜೊತೆಯೇ ಸಂಸಾರ ನಡೆಸಬೇಕು. ನನಗೆ ಜೀವನ ಸಾಗಿಸುವುದೇ ಕಷ್ಟಕರವಾಗಿದೆ ನನಗೆ ನ್ಯಾಯ ಕೊಡಿಸಿ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ತಾಯಿ ಮಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

    ಧರಣಿ ಸ್ಥಳಕ್ಕೆ ಆಗಮಿಸಿ ನೊಂದ ಮಹಿಳೆಯ ಮನವಿ ಆಲಿಸಿದ ಅಪರ ಜಿಲ್ಲಾಧಿಕಾರಿ ಅನುರಾಧ ಅವರು ನಿಮಗೆ ಕಾನೂನಿನಡಿಯಲ್ಲಿ ನ್ಯಾಯ ಕೊಡಿಸುತ್ತೇನೆ. ಉಪವಾಸ ಸತ್ಯಾಗ್ರಹ ಕೈಬಿಡಿ ಎಂದು ತಿಳಿಸಿದರೂ ನನಗೆ ನ್ಯಾಯ ಸಿಗುವವರೆಗು ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಮಹಿಳೆ ಪಟ್ಟು ಹಿಡಿದು ಪ್ರತಿಭಟಿಸುತ್ತಿದ್ದಾರೆ.

  • ಹೊಸ ಬೋರ್‌ವೆಲ್‌ ಹಾಕಿ ಗ್ರಾಮದಿಂದ ಹೊರಡಿ- ನೀರಿಗಾಗಿ ರೊಚ್ಚಿಗೆದ್ದ ಗ್ರಾಮಸ್ಥರು

    ಹೊಸ ಬೋರ್‌ವೆಲ್‌ ಹಾಕಿ ಗ್ರಾಮದಿಂದ ಹೊರಡಿ- ನೀರಿಗಾಗಿ ರೊಚ್ಚಿಗೆದ್ದ ಗ್ರಾಮಸ್ಥರು

    ಬೀದರ್: ಹನಿ ನೀರಿಗಾಗಿ ಎಲ್ಲೆಡೆ ಹಾಹಾಕಾರ ಎದುರಾಗಿದೆ. ಈ ನಡುವೆ ಗ್ರಾಮಕ್ಕೆ ಬೋರ್‌ವೆಲ್‌ ರೀ-ಬೋಟಿಂಗ್ ಮಾಡಲು ಬಂದು ನೀರು ಸಿಗದೇ ವಿಫಲವಾದ ಬೋರ್‌ವೆಲ್‌ ಗಾಡಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಟ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಬೋರ್ ರೀ-ಬೋಟಿಂಗ್ ಗೆ ಚಟ್ನಹಳ್ಳಿ ಗ್ರಾಮಕ್ಕೆ ಬೋರ್ ವೇಲ್ ಗಾಡಿಯೊಂದು ಬಂದಿತ್ತು. ಆದರೆ ರೀ-ಬೋಟಿಂಗ್ ಮಾಡಿದರು ಬೋರ್ ನಲ್ಲಿ ಹನಿ ನೀರು ಕೂಡ ಸಿಗಲಿಲ್ಲ. ಆದ್ದರಿಂದ ಬಂದ ಕೆಲಸ ವಿಫಲವಾದರಿಂದ ಬೋರ್‌ವೆಲ್‌ ಗಾಡಿ ವಾಪಾಸ್ ಹೊರಟಿತ್ತು. ಆದರೆ ಈ ವೇಳೆ ಏಕಾಏಕಿ ಗ್ರಾಮಸ್ಥರು ಗಾಡಿಯನ್ನು ಮುತ್ತಿಗೆ ಹಾಕಿ ಹೊಸ ಬೋರ್‌ವೆಲ್‌ ಕೊರೆಸಿ, ಬಳಿಕ ಗ್ರಾಮದಿಂದ ಹೋಗಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

    ನೀರಿನ ಸಮಸ್ಯೆಯಿಂದ ಕೆಂಗೆಟ್ಟಿದ್ದ ಗ್ರಾಮಸ್ಥರು ಈ ರೀತಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಗ್ರಾಮದಲ್ಲಿ ಒಂದೇ ಬೋರ್‌ವೆಲ್‌ ಇದ್ದ ಕಾರಣ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಇತ್ತ ಜಿಲ್ಲಾಡಳಿತ ವತಿಯಿಂದ ಅಧಿಕಾರಿಗಳು ಬೋರ್‌ವೆಲ್‌ ರೀ ಬೋಟಿಂಗ್ ಕಳಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಹೊಸ ಬೋರ್‌ವೆಲ್‌ ಕೊರೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.