Tag: district hospital

  • ಮಕ್ಕಳು, ಬಾಣಂತಿಯರಿಗೆ ನೆಲವೇ ಹಾಸಿಗೆ-ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ತಪ್ಪದ ಯಾತನೆ

    ಮಕ್ಕಳು, ಬಾಣಂತಿಯರಿಗೆ ನೆಲವೇ ಹಾಸಿಗೆ-ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ತಪ್ಪದ ಯಾತನೆ

    ಚಿತ್ರದುರ್ಗ: ನಗರದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯರಿಂದ ಉತ್ತಮ ಚಿಕಿತ್ಸೆಯೇನೋ ಸಿಗುತ್ತಿದೆ. ಆದರೆ ಆಸ್ಪತ್ರೆಗೆ ದಾಖಲಾದರೆ ಮಾತ್ರ ಇಲ್ಲಿಯ ನರಕಯಾತನೆಯನ್ನು ಅನುಭವಿಸಬೇಕಾಗುತ್ತದೆ.

    ಬಾಣಂತಿಯರು ಮತ್ತು ಮಕ್ಕಳು ನೆಲದ ಮೇಲೆಯೇ ಮಲಗುವ ಪರಿಸ್ಥಿತಿಯಿದೆ. ಈ ಆಸ್ಪತ್ರೆಯಲ್ಲಿ ಸುಮಾರು 400 ಬೆಡ್‍ಗಳಿವೆ. ದಿನವೊಂದಕ್ಕೆ ಜಿಲ್ಲೆಯ 6 ತಾಲೂಕುಗಳಿಂದ ಸುಮಾರು 500ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಾರೆ. ಹೆರಿಗೆಯಾದ ಬಳಿಕ ಬೆಡ್‍ಗಳ ಕೊರತೆಯಿರುವುದರಿಂದ ತಾಯಿ-ಮಕ್ಕಳು ನೆಲದ ಮೇಲೆ ಮಲಗಬೇಕಾದ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ.

    ಆಸ್ಪತ್ರೆಗೆ ಹೆಚ್ಚಿನ ಪ್ರಮಾಣದಲ್ಲಿ ಗರ್ಭಿಣಿಯರು ದಾಖಲಾಗುತ್ತಿದ್ದಾರೆ. ಹಾಗಾಗಿ ಬೆಡ್‍ಗಳ ಕೊರತೆ ಉಂಟಾಗಿದೆ. ಇಷ್ಟರಲ್ಲೆ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆರಂಭವಾಗುತ್ತದೆ. ಆಗ ಎಲ್ಲಾ ಸಮಸ್ಯೆ ಕೊನೆಯಾಗುತ್ತದೆ ಎಂದು ಜಿಲ್ಲಾ ಸರ್ಜನ್ ಡಾ. ಜಗದೀಶ್ ಹೇಳುತ್ತಾರೆ.

     

  • ಕೊಪ್ಪಳ: ನಾಲ್ಕು ತಿಂಗಳಲ್ಲಿ 157 ಶಿಶುಗಳ ಮರಣ

    ಕೊಪ್ಪಳ: ನಾಲ್ಕು ತಿಂಗಳಲ್ಲಿ 157 ಶಿಶುಗಳ ಮರಣ

    ಕೊಪ್ಪಳ: ನಗರದ ಜಿಲ್ಲಾಸ್ಪತ್ರೆಯಲ್ಲೂ ಮಕ್ಕಳ ಮರಣ ಮೃದಂಗ ಶುರುವಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಜಿಲ್ಲೆಯಲ್ಲಿ ಸುಮಾರು 157 ಶಿಶುಗಳ ಮರಣವಾಗಿದೆ. ಈ ಪೈಕಿ 47 ಮಕ್ಕಳು ಜಿಲ್ಲಾಸ್ಪತ್ರೆಯಲ್ಲೇ ಮೃತಪಟ್ಟಿವೆ.

    ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಸೇರಿದಂತೆ ವಿವಿಧ ಆಧುನಿಕ ವೈದ್ಯಕೀಯ ಉಪಕರಣ ಇಲ್ಲದಿರುವುದು ಶಿಶುಗಳ ಸಾವಿಗೆ ಕಾರಣ ಎನ್ನಲಾಗಿದೆ. ಇಷ್ಟು ಪ್ರಮಾಣದ ಮಕ್ಕಳು ಜಿಲ್ಲಾಸ್ಪತ್ರೆಯಲ್ಲಿ ಅಸುನೀಗುತ್ತಿದ್ದರೂ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ.

    ವೈದ್ಯರ ಮಾಹಿತಿ ಪ್ರಕಾರ 35 ಮಕ್ಕಳಲ್ಲಿ 19 ನವಜಾತ ಶಿಶುಗಳು ಗರ್ಭಿಣಿಯರಿಗೆ ಅವಧಿಗೂ ಮುನ್ನ ಹೆರಿಗೆಯಾಗಿದ್ದರಿಂದ ಹಾಗೂ ಮಕ್ಕಳ ತೂಕ ಪ್ರಮಾಣ ಕಡಿಮೆ ಇರೋದ್ರಿಂದ ಮರಣ ಹೊಂದಿವೆ ಎಂದು ಆರ್‍ಸಿಎಚ್ ಅಧಿಕಾರಿ ಡಾ. ಅಲಕನಂದಾ ಹೇಳಿದ್ದಾರೆ.

    ನವಜಾತ ಶಿಶುಗಳು ಹೆರಿಗೆ ಸಮಯದಲ್ಲಿ ಉಸಿರಾಟದ ತೊಂದರೆಯಿಂದ ಬಳಲಿ ಸಾವನ್ನಪ್ಪಿವೆ. ಮಕ್ಕಳು ಲೋ ಬಿಪಿ ಹಾಗೂ ಅಪೌಷ್ಟಿಕತೆ ತೊಂದರೆಯಿಂದ ಬಳಲಿ ಸಾವನ್ನಪ್ಪಿವೆ. ವೈದ್ಯರ ಪ್ರಕಾರ ಅವಧಿಗೂ ಮುನ್ನ ಹೆರಿಗೆಯಿಂದ ಅತೀ ಹೆಚ್ಚು ಮಕ್ಕಳ ಸಾವಾಗಿವೆ. ಆದರೆ ಬಾಲ್ಯ ವಿವಾಹ ಮತ್ತು ಮಹಿಳೆ 20 ವರ್ಷಕ್ಕೂ ಮೊದಲೇ ತಾಯಿಯಾಗುತ್ತಿರುವುದು ಶಿಶು ಮರಣಕ್ಕೆ ಕಾರಣ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದಾನರೆಡ್ಡಿ ಹೇಳಿದ್ದಾರೆ.

  • ಕರ್ನಾಟಕದ ಗೋರಖ್‍ಪುರ ಆಗ್ತಿದೆ ಕೋಲಾರದ ಜಿಲ್ಲಾಸ್ಪತ್ರೆ!

    ಕರ್ನಾಟಕದ ಗೋರಖ್‍ಪುರ ಆಗ್ತಿದೆ ಕೋಲಾರದ ಜಿಲ್ಲಾಸ್ಪತ್ರೆ!

    ಕೋಲಾರ: ಆರೋಗ್ಯ ಸಚಿವ ರಮೇಶ್‍ಕುಮಾರ್ ಅವರ ತವರು ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ಜಿಲ್ಲಾಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ಜನ ಮಕ್ಕಳು ಬಲಿಯಾಗಿದ್ದಾರೆ.

    ಬರದ ನಾಡು ಕೋಲಾರ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ, ಮಕ್ಕಳ ಬೆಳವಣಿಗೆ ಕುಂಠಿತ, ಪೋಷಕಾಂಶಗಳ ಕೊರತೆ, ತೂಕ ಕಡಿಮೆ ಸೇರಿ ವಿವಿಧ ಅನಾರೋಗ್ಯದಿಂದ ಶಿಶುಗಳು ಸಾವನ್ನಪ್ಪಿವೆ.

    ಸೋಮವಾರ ಒಂದೇ ದಿನ ಮೂರು ಹಸುಗೂಸುಗಳ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿರುವ ಬಾಣಂತಿಯರು ಹಾಗೂ ಮಕ್ಕಳ ಪೋಷಕರಲ್ಲಿ ಆತಂಕ ಶುರುವಾಗಿದೆ. ಹಾಗಾಗಿ ಖಾಸಗಿ ಆಸ್ಪತ್ರೆಗೆ ಹೋಗಲು ಬಾಣಂತಿ ಮಹಿಳೆಯರು ಹಾಗೂ ಪೋಷಕರು ಚಿಂತನೆ ನಡೆಸಿದ್ದು, ಆಸ್ಪತ್ರೆ ವೈದ್ಯರ ವಿರುದ್ಧ ನವಜಾತ ಶಿಶುಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

     

  • ಮನೆಬಾಗಿಲು ತಟ್ಟಿದ್ರೂ ತಲೆಕೆಡಿಸಿಕೊಳ್ಳದ ವೈದ್ಯೆ- ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ 9ರ ಬಾಲಕಿ ದುರ್ಮರಣ!

    ಮನೆಬಾಗಿಲು ತಟ್ಟಿದ್ರೂ ತಲೆಕೆಡಿಸಿಕೊಳ್ಳದ ವೈದ್ಯೆ- ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ 9ರ ಬಾಲಕಿ ದುರ್ಮರಣ!

    ಚಿತ್ರದುರ್ಗ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ರು. ಇದೀಗ ಮತ್ತೆ 9 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

    ತೀವ್ರ ಉಸಿರಾಟದ ತೊಂದ್ರೆಯಿಂದ ತಡರಾತ್ರಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದ ಐಶ್ವರ್ಯಳನ್ನ ಕರೆದುಕೊಂಡು ಬರಲಾಗಿತ್ತು. ತುರ್ತು ಚಿಕಿತ್ಸಾ ಘಟಕದಲ್ಲಿದ್ದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಮಹಿಳಾ ವೈದ್ಯೆ ಸರೋಜ ಅವರ ಬಳಿ ಕಳುಹಿಸಿದ್ದಾರೆ.

    ಮನೆಯಲ್ಲಿ ನಿದ್ದೆ ಮಾಡುತ್ತಾ ಇದ್ದ ಡಾ. ಸರೋಜ ಅವರ ಮನೆಯ ಬಾಗಿಲು ತಟ್ಟಿದ್ದಾರೆ. ಆದ್ರೆ ಇದಕ್ಕೆ ತಲೆ ಕೆಡಿಸಿಕೊಳ್ಳದ ಡಾ. ಸರೋಜ ಆಸ್ಪತ್ರೆ ಕಡೆ ತಲೆಹಾಕಿಲ್ಲ. ಸುಮಾರು ಒಂದು ಗಂಟೆ ನಂತ್ರ ಮತ್ತೆ ಆಸ್ಪತ್ರೆಯ ಸಿಬ್ಬಂದಿ ಹೋಗಿ ವೈದ್ಯರನ್ನ ಮನೆಯಿಂದ ಕರೆದುಕೊಂಡು ಬಂದಿದ್ದಾರೆ.

    ಆದ್ರೆ ದುರಾದೃಷ್ಟವಶಾತ್ ಐಶ್ವರ್ಯಾಳ ಉಸಿರು ನಿಂತು ಹೋಗಿತ್ತು. ಇದೀಗ ಮಗಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತಾ ಪೋಷಕರು ಆರೋಪಿಸಿದ್ದಾರೆ.

     

  • ಹಾಡಹಗಲೇ ಚೂರಿಯಿಂದ ಇರಿದುಕೊಂಡ ವ್ಯಾಪಾರಿಗಳು- ಮೂವರ ಸ್ಥಿತಿ ಗಂಭೀರ

    ಹಾಡಹಗಲೇ ಚೂರಿಯಿಂದ ಇರಿದುಕೊಂಡ ವ್ಯಾಪಾರಿಗಳು- ಮೂವರ ಸ್ಥಿತಿ ಗಂಭೀರ

    ಬೆಳಗಾವಿ: ಬೀದಿ ಬದಿ ವ್ಯಾಪಾರಿಗಳ ಮಧ್ಯೆ ನಡೆದ ಗಲಾಟೆ ತಾರಕಕ್ಕೇರಿ, ಹಾಡಹಗಲೇ ಚೂರಿಯಿಂದ ಇರಿದುಕೊಂಡು ಮೂವರು ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಗಣಪತಿ ಗಲ್ಲಿಯಲ್ಲಿ ನಡೆದಿದೆ.

    ಇಂತಿಯಾಜ್ ಪಠಾಣ್, ಅಯಾಜ್ ಪಠಾಣ್, ಸಮೀರ್ ಪಠಾಣ್ ಸೇರಿ 10 ಜನರಿಂದ ಹಲ್ಲೆ ನಡೆದಿದೆ. ಸಲೀಂ, ಶಾಬಾಜ್ ಹಾಗೂ ತೈಬಾಜ್ ಘಟನೆಯಲ್ಲಿ ತೀವ್ರ ಗಾಯಗೊಂಡವರು.

    ಹಣ್ಣಿನ ದರ ನಿಗದಿ ಮತ್ತು ಸ್ಥಳದ ವಿಚಾರವಾಗಿ ವ್ಯಾಪಾರಿಗಳ ಮಧ್ಯೆ ಗಲಾಟೆ ನಡೆದಿದೆ. ಪರಿಣಾಮ ವ್ಯಾಪಾರಿಗಳು ನಡುರಸ್ತೆಯಲ್ಲಿಯೇ ಪರಸ್ಪರ ಚೂರಿಯಿಂದ ಹೊಡೆದಾಡಿಕೊಂಡು ಮೂವರು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಸದ್ಯ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳಕ್ಕೆ ಡಿಸಿಪಿ ಅಮರನಾಥ ರಡ್ಡಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಒಂದೇ ಹಾಸಿಗೆ ಮೇಲೆ ಇಬ್ಬರು ರೋಗಿಗಳು- ಸೀರಿಯಸ್ ಪೇಷಂಟ್‍ಗೂ ನೆಲದ ಮೇಲೆ ಚಿಕಿತ್ಸೆ

    ಒಂದೇ ಹಾಸಿಗೆ ಮೇಲೆ ಇಬ್ಬರು ರೋಗಿಗಳು- ಸೀರಿಯಸ್ ಪೇಷಂಟ್‍ಗೂ ನೆಲದ ಮೇಲೆ ಚಿಕಿತ್ಸೆ

    ಚಾಮರಾಜನಗರ: ನಾವು ಈ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೀಲ್ ಚೇರ್ ಇಲ್ಲವೆಂದು ರೋಗಿಯನ್ನು ಎಳೆದುಕೊಂಡು ಹೋಗುವ ದೃಶ್ಯವನ್ನು ನೋಡಿದ್ದೆವು. ಆದರೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆಗಳ ಅಭಾವದಿಂದ ರೋಗಿಗಳು ನೆಲದ ಮೇಲೆ ಹಾಗೂ ಒಂದೇ ಹಾಸಿಗೆ ಮೇಲೆ ಇಬ್ಬರು ರೋಗಿಗಳು ಮಲಗುವ ಸ್ಥಿತಿ ಎದುರಾಗಿದೆ.

    300 ಹಾಸಿಗೆಗಳ ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆಗಳ ಅಭಾವದಿಂದ ಒಂದೊಂದು ಹಾಸಿಗೆಯಲ್ಲಿ ಇಬ್ಬರು ರೋಗಿಗಳು ಮಲಗುವಂತ ಸ್ಥಿತಿ ನಿರ್ಮಾಣವಾಗಿದ್ರೆ, ಇನ್ನೂ ಕೆಲವು ರೋಗಿಗಳು ನೆಲದ ಮೇಲೆ ಮಲಗುವಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಜಿಲ್ಲೆಯಲ್ಲಿ ಆವರಿಸಿರುವ ಡೆಂಗ್ಯೂ ಹಾಗೂ ವೈರಲ್ ಫೀವರ್.

    ಪ್ರತಿ ನಿತ್ಯ 250 ಡೆಂಗ್ಯೂ ಲಕ್ಷಣಗಳಿರುವ ರೋಗಿಗಳು, 1500 ವೈರಲ್ ಫೀವರ್ ಇರುವ ರೋಗಿಗಳು ಹಾಗೂ ಇನ್ನಿತರ ರೋಗಗಳಿರುವ ನೂರಾರು ಮಂದಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಯಲ್ಲಿ ಹಾಸಿಗೆಗಳ ಅಭಾವ ಎದುರಾಗಿದೆ. ಇದರಿಂದ ರೋಗಿಗಳು ಪರಿತಪಿಸುತ್ತಿದ್ದಾರೆ.

     

  • ವಿಡಿಯೋ: ಶಸ್ತ್ರ ಚಿಕಿತ್ಸೆಯ ಸಮವಸ್ತ್ರದಲ್ಲಿಯೇ ಆಸ್ಪತ್ರೆಯಿಂದ ಹೊರ ಬಂದ ರೋಗಿ!

    ವಿಡಿಯೋ: ಶಸ್ತ್ರ ಚಿಕಿತ್ಸೆಯ ಸಮವಸ್ತ್ರದಲ್ಲಿಯೇ ಆಸ್ಪತ್ರೆಯಿಂದ ಹೊರ ಬಂದ ರೋಗಿ!

    ಬೆಳಗಾವಿ: ಶಸ್ತ್ರ ಚಿಕಿತ್ಸೆಯ ಸಮವಸ್ತ್ರದಲ್ಲಿಯೇ ರೋಗಿಯೊಬ್ಬರು ಆಸ್ಪತ್ರೆಯಿಂದ ಹೊರ ಬಂದ ಘಟನೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಬಾಳಾ ಜಾಧವ್ ಎಂಬವರೇ ಹೊರ ಹೋದ ವ್ಯಕ್ತಿಯಾಗಿದ್ದಾರೆ.

    ಬಾಳಾ ಜಾಧವ್ ಮದ್ಯಪಾನ ವ್ಯಸನಿಯಾಗಿದ್ದು, ಹಲ್ಲೆಗೊಳಗಾಗಿ ಇದೇ ಜೂನ್ 1ರಂದು ಆಸ್ಪತ್ರೆ ದಾಖಲಾಗಿದ್ದರು. ಆದ್ರೆ ಇಂದು ಯಾರಿಗೂ ಹೇಳದೆ ಆಸ್ಪತ್ರೆಯಿಂದ ಹೊರ ಹೋಗಿದ್ದಾರೆ. ಈ ಬಗ್ಗೆ ಬಿಮ್ಸ್ ಅಧಿಕಾರಿಗಳಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಸದ್ಯ ಆಸ್ಪತ್ರೆ ಸಮವಸ್ತ್ರದಲ್ಲಿಯೇ ರೋಗಿ ಹೊರಬರುತ್ತಿರುವ ವಿಡಿಯೋವೊಂದನ್ನು ಅಲ್ಲಿ ನರೆದಿದ್ದವರು ಮಾಡಿದ್ದು, ಈ ವಿಡಿಯೋ ಪಬ್ಲಿಕ್ ಟಿವಿಗೆ ದೊರೆತಿದೆ.

    ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://youtu.be/plkILctomHs

  • ರಾಜ್ಯದ ಈ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಹಣ ಕೊಡಲಿಲ್ಲ ಅಂದ್ರೆ ಶವ ಕೊಡಲ್ಲ

    ರಾಜ್ಯದ ಈ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಹಣ ಕೊಡಲಿಲ್ಲ ಅಂದ್ರೆ ಶವ ಕೊಡಲ್ಲ

    ವಿಜಯಪುರ: ಹಣ ಅಂದ್ರೆ ಹೆಣವೂ ಬಾಯ್ಬಿಡುತ್ತೆ ಅನ್ನೋ ಮಾತಿದೆ. ಪ್ರಭಾವಿ ಸಚಿವರಾಗಿರುವ ಎಂಬಿ ಪಾಟೀಲ್ ಜಿಲ್ಲೆಯಲ್ಲಿ ಹಣ ಇಲ್ಲಾಂದ್ರೆ ಏನೂ ಆಗಲ್ಲ. ಆಸ್ಪತ್ರೆಯಲ್ಲಿ ಸತ್ತಿರುವ ಶವನೂ ಹೊರಗೆ ಹೋಗಲ್ಲ.

    ಹೌದು. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿರುವ ಶವಾಗಾರದ ಸಹಾಯಕ ಈರಣ್ಣನ ಕೈಬಿಸಿ ಮಾಡಿಲ್ಲ ಅಂದ್ರೆ ಸರ್ಕಾರಿ ಶವಗಾರದಿಂದ ಒಂದೇ ಒಂದು ಹೆಣವೂ ಹೊರಗೆ ಹೋಗಲ್ಲ. ದುಡ್ಡು ಕೊಡಿ ಸ್ವಾಮಿ ಅಂತಾ ನಾಚಿಕೆ ಮಾನ-ಮರ್ಯಾದೆ ಇಲ್ಲದೇ ಬಾಯ್ಬಿಟ್ಟು ಕೇಳ್ತಾನೆ. ಒಂದು ಹೆಣಕ್ಕೆ ಕಮ್ಮಿಯಂದ್ರೂ ಎರಡರಿಂದ ನಾಲ್ಕು ಸಾವಿರ ರೂ. ಕೊಡ್ಲೇಬೇಕು.

    ಈರಣ್ಣ ಸೊಲ್ಹಾಪುರ ಮೂಲದವರಿಂದ ಲಂಚ ಪೀಕ್ತಿರುವ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮೃತನ ಕುಟುಂಬಸ್ಥರು ಸಾವಿನ ಶೋಕದಲ್ಲಿ ಕಣ್ಣೀರು ಹಾಕ್ತಿದ್ರೆ ಅತ್ತ ಹೇಗೋ ನನ್ನ ಜೇಬು ತುಂಬ್ತಲ್ಲ ಬಿಡಿ ಅನ್ನೋ ಖುಷಿ ಈರಣ್ಣನದ್ದು.

    ಯಾವಾಗ ಈರಣ್ಣನ ಭ್ರಷ್ಟಾಚಾರದ ವೀಡಿಯೋದಲ್ಲಿ ಸೆರೆ ಆಯ್ತೋ ಈಗ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಚಾವ್ಹಾಣ್ ಸಮಜಾಯಿಷಿ ಕೊಟ್ಟಿದ್ದಾರೆ.

  • ಹಾಸಿಗೆಗಳು ಖಾಲಿ ಇಲ್ಲ, ರೋಗಿಗಳು ಆಸ್ಪತ್ರೆಗೆ ಬರಬೇಡಿ: ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಬೋರ್ಡ್

    ಹಾಸಿಗೆಗಳು ಖಾಲಿ ಇಲ್ಲ, ರೋಗಿಗಳು ಆಸ್ಪತ್ರೆಗೆ ಬರಬೇಡಿ: ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಬೋರ್ಡ್

    ಚಿತ್ರದುರ್ಗ: ಹಾಸಿಗೆಗಳು ಖಾಲಿ ಇರುವುದಿಲ್ಲ. ಹೀಗಾಗಿ ಏನೇ ಆದ್ರೂ ನಮ್ಮ ಆಸ್ಪತ್ರೆಗೆ ಬರಲೇಬೇಡಿ. ಬೇರೆ ಎಲ್ಲಾದ್ರೂ ಕರ್ಕೊಂಡು ಹೋಗಿ ಅನ್ನೋ ಮುನ್ನೆಚ್ಚರಿಕಾ ಸಂದೇಶವಿರೋ ಬೋರ್ಡ್ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಹಾಕಲಾಗಿದೆ.

    ನೂರು ಹಾಸಿಗೆಗಳಿರುವ ಈ ಆಸ್ಪತ್ರೆಗೆ ದಿನನಿತ್ಯ 20ಕ್ಕೂ ಅಧಿಕ ಗರ್ಭಿಣಿಯರು ಬರ್ತಾರೆ. ಆದ್ರೆ ಅವರಲ್ಲಿ ದಾಖಲಾತಿಗೆ ಅವಕಾಶ ಸಿಕ್ಕರೆ ಅವರೇ ಪುಣ್ಯವಂತರು. ಸಹಜ ಹೆರಿಗೆಯಾದರೆ 2 ದಿನ ಮತ್ತು ಸಿಸೇರಿಯನ್ ಆದ್ರೆ ಒಂದು ವಾರ ಆಸ್ಪತ್ರೆಯಲ್ಲೇ ಉಳಿಯುವುದು ಅನಿವಾರ್ಯ. ಹೆರಿಗೆಗೆ ಬರುವವರ ಸಂಖ್ಯೆ ಹೆಚ್ಚಾಗಿರೋದ್ರಿಂದ ನೂರು ಬೆಡ್ ಸಾಕಾಗ್ತಿಲ್ಲ.

    ಅತ್ತ ಚಾಮರಾಜನಗರದ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್‍ನಲ್ಲಿರೋದು ಕೇವಲ ಎಂಟೇ ಬೆಡ್. ಆಸ್ಪತ್ರೆಗೆ ಬರುವ ಗರ್ಭಿಣಿಯರ ಸಂಖ್ಯೆ ಹೆಚ್ಚಾದರೂ ಬೆಡ್ ಮತ್ತು ಅಗತ್ಯ ಸಿಬ್ಬಂದಿಯ ಸೇವೆಯಲ್ಲಿ ಹೆಚ್ಚಳವಾಗಿಲ್ಲ. ಸ್ವಚ್ಛ ಕುಡಿಯುವ ನೀರಿನ ಪೂರೈಕೆ ಇಲ್ಲದೇ ಸ್ವಚ್ಛತೆಯೂ ಇಲ್ಲದೇ ಸರ್ಕಾರಿ ಆಸ್ಪತ್ರೆ ಗಬ್ಬು ನಾರುತ್ತಿದೆ. ನೂರಾರು ಕಿಲೋ ಮೀಟರ್ ದೂರದಿಂದ ಬರುವ ಮಂದಿಗೆ ಈ ಆಸ್ಪತ್ರೆಯೇ ಅನಿವಾರ್ಯವಾಗಿರೋದ್ರಿಂದ ಹೊಂದಿಕೊಂಡು ಹೋಗ್ತಿದ್ದಾರೆ.

  • ಹೊಸ ಬಟ್ಟೆ, ಕೈ,ಕಾಲಲ್ಲಿ ಬೆಳ್ಳಿ ಒಡವೆ- 3 ತಿಂಗಳ ಹೆಣ್ಣು ಮಗುವನ್ನ ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋದ್ರು

    ಹೊಸ ಬಟ್ಟೆ, ಕೈ,ಕಾಲಲ್ಲಿ ಬೆಳ್ಳಿ ಒಡವೆ- 3 ತಿಂಗಳ ಹೆಣ್ಣು ಮಗುವನ್ನ ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋದ್ರು

    ಕೋಲಾರ: ಅನಾರೋಗ್ಯ ಪೀಡಿತ ಮೂರು ತಿಂಗಳ ಮುದ್ದಾದ ಹೆಣ್ಣು ಮಗುವೊಂದನ್ನ ಪೋಷಕರು ಬಿಟ್ಟು ಹೋಗಿರುವ ಘಟನೆ ಕೋಲಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದಿದೆ.

    ಕಳೆದ ರಾತ್ರಿ ಹತ್ತು ಗಂಟೆ ಸುಮಾರಿಗೆ ಕೋಲಾರ ಜಿಲ್ಲಾಸ್ಪತ್ರೆಯ ಹಿಂಭಾಗದಲ್ಲಿ ಮಗುವನ್ನು ಬಿಟ್ಟು ಹೋಗಿದ್ದು, ಮಗು ಅಳುವ ಶಬ್ದವನ್ನು ಕೇಳಿ ಆಸ್ಪತ್ರೆ ಸಿಬ್ಬಂದಿ ಹೋಗಿ ನೋಡಿದ್ದಾರೆ. ಸುಮಾರು ಮೂರು ತಿಂಗಳ ಹೆಣ್ಣು ಮಗುವೊಂದು ಅನಾಥವಾಗಿ ಅಳುತ್ತಾ ಮಲಗಿದ್ದನ್ನು ಕಂಡ ಆಸ್ಪತ್ರೆ ಸಿಬ್ಬಂದಿ ಮಗುವನ್ನು ತಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

    ಮಗುವಿಗೆ ಪಿಡ್ಸ್ ಇದ್ದು ಚಿಕಿತ್ಸೆ ಅಗತ್ಯವಿದೆ. ಹೀಗಾಗಿ ಸದ್ಯ ಜಿಲ್ಲಾಸ್ಪತ್ರೆ ಸಿಬ್ಬಂದಿ ಮಗುವಿಗೆ ಆರೈಕೆ ಮಾಡುತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಾಗೂ ಕೋಲಾರ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

    ಮಗು ನೀಲಿ ಬಣ್ಣದ ಬಟ್ಟೆ ಧರಿಸಿದ್ದು, ಕಾಲಿಗೆ ಬೆಳ್ಳಿ ಕಾಲೊಂದಿಗೆ, ಕೈಗೆ ಬಳೆಗಳನ್ನೆಲ್ಲಾ ಹಾಕಲಾಗಿದೆ. ಮಗುವನ್ನ ನೋಡಿದ್ರೆ ಯಾರೋ ಸ್ಥಿತಿವಂತರ ಮನೆಯ ಮಗು ಎಂದು ತಿಳಿದುಬರುತ್ತಿದೆ. ಆದ್ರೆ ಮಗುವನ್ನು ಯಾಕೆ ಆಸ್ಪತ್ರೆ ಬಳಿ ಬಿಟ್ಟುಹೋಗಿದ್ದಾರೆ ಅನ್ನೋದು ತಿಳಿದುಬಂದಿಲ್ಲ. ಪೋಷಕರಿಂದ ದೂರಾಗಿ ಅನಾಥವಾಗಿರುವ ಮಗು ಸದ್ಯ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯ ಪ್ರೀತಿಯ ಆರೈಕೆಯಲ್ಲಿದೆ.