Tag: district hospital

  • ಕಾರವಾರ| ಜಿಲ್ಲಾಸ್ಪತ್ರೆ ಹೊಸ ಕಟ್ಟಡದ ರೂಫಿಂಗ್ ಷೀಟ್ ಕುಸಿತ

    ಕಾರವಾರ| ಜಿಲ್ಲಾಸ್ಪತ್ರೆ ಹೊಸ ಕಟ್ಟಡದ ರೂಫಿಂಗ್ ಷೀಟ್ ಕುಸಿತ

    ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಜನ ಹೋರಾಟ ಮಾಡಿದರು. ಆದರೆ, 198.28 ಕೋಟಿ ವೆಚ್ಚದಲ್ಲಿ ಕಾರವಾರದ ಕ್ರಿಮ್ಸ್ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಇನ್ನೂ ಉದ್ಘಾಟನೆಯಾಗದಿದ್ರೂ ಕಟ್ಟಡದ ಹಲವು ಕಡೆ ಬಿರುಕು ಬಿಟ್ಟಿದ್ದು, ರೂಫಿಂಗ್ ಷೀಟ್‌ ಕುಸಿದಿವೆ.

    ಆಸ್ಪತ್ರೆ ನಿರ್ಮಾಣಗೊಂಡು ಎರಡು ವರ್ಷವಾದ್ರೂ ಉದ್ಘಾಟನೆ ಕಂಡಿರಲಿಲ್ಲ. ಇನ್ನು ಕಟ್ಟಡದಲ್ಲಿ ಹಲವು ಕಡೆ ಬಿರುಕು ಕಳೆಪೆ ಕಾಮಗಾರಿ ಮಾಡಲಾಗಿತ್ತು. ಹೋಗಾಗಿ ಕಟ್ಟಡ ನಿರ್ಮಾಣವಾಗಿ ಎರೆಡು ವರ್ಷಗಳು ಸಂದಿದ್ದರೂ ಕ್ರಿಮ್ಸ್‌ನಿಂದ ಹಸ್ತಾಂತರವಾಗಿರಲಿಲ್ಲ. ಆದರೆ, 1979 ರಲ್ಲಿ ನಿರ್ಮಾಣಗೊಂಡಿದ್ದ ಹಳೆಯ ಜಿಲ್ಲಾಸ್ಪತ್ರೆ ಶಿಥಿಲಗೊಂಡಿದ್ದು, ಅನಿವಾರ್ಯವಾಗಿ ಹಳೆ ಕಟ್ಟಡದಿಂದ ಹೊಸ ಕಟ್ಡಡದ ಎರಡು ಮಹಡಿಗಳಿಗೆ ರೋಗಿಗಳನ್ನು ಶಿಪ್ಟ್ ಮಾಡಲಾಗಿತ್ತು.

    ಆದರೆ, ಇದೀಗ ಎರಡನೇ ಮಹಡಿಯಲ್ಲಿರುವ ಸರ್ಜರಿ ವಿಭಾಗ ಹಾಗೂ ಶಸ್ತ್ರಕ್ರಿಯಾ ಕೊಠಡಿಗಳಿದ್ದ ಭಾಗದ ಪಕ್ಕದ ವೈದ್ಯರ ಹಾಗೂ ಉಪನ್ಯಾಸಕರ ಕೊಠಡಿ ಇರುವ ಭಾಗದ ಸಿಮೆಂಟ್ ಪ್ಲೋರ್ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಇಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಹಾನಿಯಾಗಿಲ್ಲ. ಆದರೆ, ಇದರ ಪಕ್ಕದಲ್ಲೇ ಸರ್ಜರಿ ವಿಭಾಗವಿದ್ದು ಅಲ್ಲಿಯೂ ಕುಸಿಯುವ ಆತಂಕ ವ್ಯಕ್ತವಾಗಿದೆ.

    ಗುಣಮಟ್ಟವೇ ಇಲ್ಲದ ಕಾಮಗಾರಿಯಿಂದ ಇದೀಗ ಎರಡನೇ ಮಹಡಿ ಭಾಗದಲ್ಲಿ ಕುಸಿತ ಕಂಡಿದೆ. ಇನ್ನು ಕುಸಿಯುವ ಆತಂಕ ಇದ್ದು ಮತ್ತೆ ಎಲ್ಲಿ ಏನು ಅನಾಹುತ ಸಂಭವಿಸಲಿದೆ ಎಂಬುವ ಪ್ರಶ್ನೆ ಏಳುವಂತೆ ಮಾಡಿದೆ.

    ಕಟ್ಟಡ ನಿರ್ಮಾಣವಾಗಿ ಕೆಲವೇ ವರ್ಷದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದ್ದು, ಈ ಕಟ್ಟಡ ಯಾವ ರೀತಿ ಕಳಪೆ ಕಾಮಗಾರಿ ಮಾಡಲಾಗಿದೆ ಎಂಬುದಕ್ಕೆ ನಿದರ್ಶನವಾಗಿದೆ.

  • ಟ್ರೈನಿ ನರ್ಸ್ ಪ್ರಿಯತಮೆಯನ್ನು ಕತ್ತು ಸೀಳಿ ಕೊಂದ ಪ್ರಿಯಕರ – ಬಳಿಕ ತಾನೂ ಆತ್ಮಹತ್ಯೆಗೆ ಯತ್ನ

    ಟ್ರೈನಿ ನರ್ಸ್ ಪ್ರಿಯತಮೆಯನ್ನು ಕತ್ತು ಸೀಳಿ ಕೊಂದ ಪ್ರಿಯಕರ – ಬಳಿಕ ತಾನೂ ಆತ್ಮಹತ್ಯೆಗೆ ಯತ್ನ

    – ವಿಫಲವಾದಾಗ ಸ್ಥಳದಿಂದ ಪರಾರಿ

    ಭೋಪಾಲ್: ಪ್ರಿಯಕರ ತನ್ನ ಪ್ರಿಯತಮೆಯನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ನರಸಿಂಗ್‌ಪುರದ (Narsingpur) ಜಿಲ್ಲಾ ಆಸ್ಪತ್ರೆಯೊಳಗೆ ನಡೆದಿದೆ.

    ಆರೋಪಿಯನ್ನು ಅಭಿಷೇಕ್ ಕೋಶ್ಟಿ ಹಾಗೂ ಮೃತ ವಿದ್ಯಾರ್ಥಿನಿಯನ್ನು ಟ್ರೈನಿ ನರ್ಸ್ ಆಗಿದ್ದ ಸಂಧ್ಯಾ ಚೌಧರಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಹೇಮಾವತಿ ನೀರಿಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧ: ಕುಣಿಗಲ್ ಶಾಸಕ ರಂಗನಾಥ್

    ಕೊಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಜೂ.27ರಂದು ಆಸ್ಪತ್ರೆಯ ತುರ್ತು ನಿಗಾ ಘಟಕದ ಬಳಿಕ ಈ ಕೃತ್ಯ ನಡೆದಿದೆ. ಮೊದಲಿಗೆ ಆರೋಪಿ ಆಸ್ಪತ್ರೆಗೆ ನುಗ್ಗಿ ಸಂಧ್ಯಾಳಿಗೆ ಕಪಾಳಮೋಕ್ಷ ಮಾಡಿ, ಬಳಿಕ ನೆಲಕ್ಕೆ ಬೀಳಿಸಿದ್ದಾನೆ. ಆಸ್ಪತ್ರೆಯಲ್ಲಿದ್ದ ರೋಗಿಗಳು, ವೈದ್ಯರು, ನರ್ಸ್ಗಳ ಮಧ್ಯೆಯೇ ಆಕೆಯ ಎದೆಯ ಮೇಲೆ ಕುಳಿತು ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

    ತೀವ್ರ ರಕ್ತಸ್ರಾವವಾಗಿ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಆರೋಪಿ ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳುತ್ತಿದ್ದರೂ ಕೂಡ ಸುತ್ತಲಿನ ಜನರು ಯಾರೂ ಆಕೆಯ ಸಹಾಯಕ್ಕೆ ಬರದೇ ಹಾಗೆ ನೋಡುತ್ತಾ ನಿಂತಿರುವುದು ವೈರಲ್ ಆದ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಆಕೆಯನ್ನು ಹತ್ಯೆಮಾಡಿದ ಬಳಿಕ ತಾನೂ ಕತ್ತು ಸೀಳಿಕೊಳ್ಳಲು ಯತ್ನಿಸಿದ್ದು, ಅದು ವಿಫಲವಾಗಿದೆ. ಬಳಿಕ ಅಲ್ಲಿಂದ ಹೊರನಡೆದು ತನ್ನ ಬೈಕ್ ತೆಗೆದುಕೊಂಡು ಪರಾರಿಯಾಗಿದ್ದಾನೆ.

    ಈ ಘಟನೆಯಿಂದ ಭಯಭೀತರಾಗಿ ವಾರ್ಡ್‌ನಲ್ಲಿದ್ದ 11 ರೋಗಿಗಳ ಪೈಕಿ 8 ಜನ ಆ ದಿನವೇ ಡಿಸ್ಚಾರ್ಜ್ ಆಗಿ ಹೋದರು. ಇನ್ನುಳಿದವರು ಮಾರನೇ ದಿನ ಹೊರಟುಹೋದರು ಎಂದು ಮೂಲಗಳು ತಿಳಿಸಿವೆ.

    ಆರೋಪಿ ಹಾಗೂ ಸಂಧ್ಯಾ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೊಲೆಯಾದ ದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿರುವ ತನ್ನ ಸ್ನೇಹಿತೆಯ ಅತ್ತಿಗೆಯನ್ನು ಭೇಟಿ ಮಾಡಲು ಹೋಗುವಾಗಿ ಹೇಳಿ ಸಂಧ್ಯಾ ಮನೆಯಿಂದ ತೆರಳಿದ್ದಳು. ಅವಳು ಆಸ್ಪತ್ರೆಗೆ ಹೋಗುವ ಮುನ್ನ ಆರೋಪಿ ಆಕೆಗಾಗಿ ಕಾಯುತ್ತಿದ್ದ. ಕೊಲೆಯಾಗುವ ಮುನ್ನ ಇಬ್ಬರು ರೂ. ನಂ 22ರ ಮುಂದೆ ನಿಂತು ಮಾತಾಡಿದ್ದರು ಎಂದು ತಿಳಿದು ಬಂದಿದೆ.

    ವಿಷಯ ತಿಳಿದ ಬಳಿಕ ಸಂಧ್ಯಾ ಮನೆಯವರು ಆಸ್ಪತ್ರೆಗೆ ಧಾವಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಕಾಲ್ತುಳಿತ ಕೇಸ್‌; IPS ಅಧಿಕಾರಿ ವಿಕಾಸ್‌ ಕುಮಾರ್‌ಗೆ ರಿಲೀಫ್‌ – ಅಮಾನತು ರದ್ದಿಗೆ CAT ಆದೇಶ

  • ತಾಪಮಾನ ಹೆಚ್ಚಳದಿಂದಾಗಿ ಮುಂಜಾಗ್ರತಾ ಕ್ರಮ – ಬಿಸಿಲಿನಿಂದ ಅಸ್ವಸ್ಥಗೊಂಡವರಿಗೆ ಹೀಟ್ ಸ್ಟ್ರೋಕ್ ವಾರ್ಡ್ ಆರಂಭ

    ತಾಪಮಾನ ಹೆಚ್ಚಳದಿಂದಾಗಿ ಮುಂಜಾಗ್ರತಾ ಕ್ರಮ – ಬಿಸಿಲಿನಿಂದ ಅಸ್ವಸ್ಥಗೊಂಡವರಿಗೆ ಹೀಟ್ ಸ್ಟ್ರೋಕ್ ವಾರ್ಡ್ ಆರಂಭ

    ಕೊಪ್ಪಳ: ಬೇಸಿಗೆ ಮುನ್ನವೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ಅಬ್ಬರ ಹೆಚ್ಚಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಮಾರ್ಚ್ ತಿಂಗಳಿನಿಂದಲೇ ಬಿಸಿಲು ಜೋರಾಗಿದ್ದು, ಜನ ಹೈರಾಣಾಗುತ್ತಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್ (Heat Stroke) ವಾರ್ಡ್ ಆರಂಭಿಸಲಾಗಿದೆ.

    ಕೊಪ್ಪಳ (Koppal) ಸೇರಿ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳನ್ನು ಬಿಸಿಲುನಾಡು ಎಂದೇ ಕರೆಯುತ್ತಾರೆ. ಈ ಭಾಗದಲ್ಲಿ ಬಿಸಿಲು ಈಗಾಗಲೇ 37 ಡಿಗ್ರಿ ತಲುಪಿದೆ. ಗಂಗಾವತಿ, ಕಾರಟಗಿ ಭಾಗದಲ್ಲಿ 38 ಹಾಗೂ 39 ಡಿಗ್ರಿವರೆಗೆ ತಾಪಮಾನ ದಾಖಲಾಗುತ್ತಿದೆ. ಬಿಸಿಲು ಈಗಾಗಲೇ ಜನರನ್ನು ಕಂಗಾಲಾಗಿಸಿದ್ದು, ಹಲವರು ಬಿಸಿಲಿನಿಂದಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್ ವಾರ್ಡ್ ಆರಂಭಿಸಲಾಗಿದೆ.ಇದನ್ನೂ ಓದಿ: ಪಿಜಾಗಿಂತ ನಿಮ್ಮ ಸೊಂಟನೇ ಹಾಟ್ ಆಗಿದೆ: ‘ವಜ್ರಕಾಯ’ ಬೆಡಗಿಗೆ ನೆಟ್ಟಿಗನ ಕಾಮೆಂಟ್

    ಹತ್ತು ಬೆಡ್‌ಗಳ ಪ್ರತ್ಯೇಕ ವಾರ್ಡ್ನ್ನು ಆರಂಭಿಸಲಾಗಿದ್ದು, ಅಲ್ಲಿ ಓರ್ವ ತಜ್ಞ ವೈದ್ಯರು, ಇಬ್ಬರು ನರ್ಸಿಂಗ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಸ್ವಸ್ಥರಿಗೆ ಹೀಟ್ ಸ್ಟ್ರೋಕ್‌ಗೆ ಸಂಬಂಧಿಸಿದ ಚಿಕಿತ್ಸೆ ನೀಡಲು ಬೇಕಾದ ಮೆಡಿಸಿನ್, ಡ್ರಿಪ್, ಸೇರಿದಂತೆ ಔಷಧಿಗಳನ್ನು ಕೂಡಾ ಸಂಗ್ರಹಿಸಿಡಲಾಗಿದೆ.

    ತಾಪಮಾನದಿಂದಾಗಿ ಯಾರಾದರೂ ಆಸ್ಪತ್ರೆಗೆ ಬಂದರೆ, ಅವರಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದರೆ ಅವರನ್ನು ಹೀಟ್ ಸ್ಟ್ರೋಕ್ ವಾರ್ಡ್ಗೆ ಶಿಪ್ಟ್ ಮಾಡಿ, ಚಿಕಿತ್ಸೆ ನೀಡಲಾಗುವುದು. ಈ ಕುರಿತು ವೈದ್ಯರು ಮಾಹಿತಿ ನೀಡಿದ್ದು, ಹೀಟ್ ಸ್ಟ್ರೋಕ್‌ ನಿಯಂತ್ರಣಕ್ಕಾಗಿ ಹೊರಗಡೆ ಓಡಾಡುವುದನ್ನು ಕಡಿಮೆ ಮಾಡಬೇಕು. ನೀರು, ಮಜ್ಜಿಗೆ ಸೇರಿದಂತೆ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸಬೇಕು. ನೆರಳಿನ ವ್ಯವಸ್ಥೆಯಿದ್ದಾಗ ಮಾತ್ರ ನೀವು ಬಿಸಿಲಿನಲ್ಲಿ ಕೆಲಸ ಮಾಡಬಹುದು. ಮನೆಯಲ್ಲಿ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಹೀಟ್ ಸ್ಟ್ರೋಕ್‌ನಿಂದ ಪಾರಾಗಬಹುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಶೀಘ್ರದಲ್ಲೇ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ – ಸಿದ್ದರಾಮಯ್ಯ ಭರವಸೆ

  • ಹೆರಿಗೆ ಮಾಡಲು ತಡ ಮಾಡಿದಕ್ಕೆ ಶಿಶು ಸಾವು – ವೈದ್ಯರ ವಿರುದ್ಧ ಕುಟುಂಬಸ್ಥರ ಆರೋಪ

    ಹೆರಿಗೆ ಮಾಡಲು ತಡ ಮಾಡಿದಕ್ಕೆ ಶಿಶು ಸಾವು – ವೈದ್ಯರ ವಿರುದ್ಧ ಕುಟುಂಬಸ್ಥರ ಆರೋಪ

    ರಾಯಚೂರು: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ನವಜಾತ ಶಿಶು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷದಿಂದ ಮಗು ಸಾವನ್ನಪ್ಪಿದೆ ಎಂದು ವೈದ್ಯರ ವಿರುದ್ಧ ಕುಟುಂಬಸ್ಥರು ಆರೋಪಿಸಿದ್ದಾರೆ.

    ರಾಯಚೂರು (Raichuru) ತಾಲೂಕಿನ ಮರ್ಚೇಡ್ ಗ್ರಾಮದ ಪಾರ್ವತಮ್ಮ ಹಾಗೂ ಚಂದ್ರಶೇಖರ್ ದಂಪತಿಯ ಮಗು ಸಾವನ್ನಪ್ಪಿದೆ.ಇದನ್ನೂ ಓದಿ: ಫ್ರಾನ್ಸ್‌ಗೆ ಪ್ರಯಾಣ ಬೆಳೆಸಿದ ಮೋದಿ – ಅಮೆರಿಕ ಭೇಟಿ ಬಗ್ಗೆ ಹೇಳಿದ್ದೇನು?

    ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯನ್ನು ವೈದ್ಯರು ತಪಾಸಣೆ ಮಾಡಿ ನಾರ್ಮಲ್ ಡೆಲಿವರಿ ಆಗುತ್ತದೆ ಎಂದು ತಿಳಿಸಿ 2 ದಿನ ಕಾಯಿಸಿದ್ದರು. ಗರ್ಭಿಣಿ ನೋವಿನಿಂದ ಬಳಲುತ್ತಿದ್ದರೂ ಕೂಡ ಹೆರಿಗೆ ಮಾಡಲು ವಿಳಂಬ ಮಾಡಿದ್ದರು.

    ಇದರಿಂದ ಗರ್ಭಿಣಿಯ ಕುಟುಂಬಸ್ಥರು ಸಿಸೇರಿಯನ್ ಮಾಡುವಂತೆ ವೈದ್ಯರಿಗೆ ತಿಳಿಸಿದ್ದಾರೆ. ಆದರೂ ಕೂಡ ವಿಳಂಬ ಮಾಡಿ ನಾರ್ಮಲ್ ಡೆಲಿವರಿ ಮಾಡಿದ್ದಾರೆ. ಈ ವೇಳೆ ಹೆರಿಗೆ ಮಾಡುವಾಗ ಮಗು ಸಾವನ್ನಪ್ಪಿದೆ. ಇದರಿಂದ ಹೆರಿಗೆ ಮಾಡಲು ತಡ ಮಾಡಿದ್ದಕ್ಕೆ ಮಗು ಸಾವನ್ನಪ್ಪಿದೆ ಎಂದು ಬಾಣಂತಿಯ ಪತಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಡಿಎಚ್‌ಓ ಡಾ.ಸುರೇಂದ್ರಬಾಬು ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣ ತಿಳಿದು ಸಮಗ್ರವಾಗಿ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.ಇದನ್ನೂ ಓದಿ: ಕೇಂದ್ರ ಸಚಿವ ಪಿಯೂಷ್ ಗೋಯಲ್‌ಗೆ ಕಾಮನ್ ಸೆನ್ಸ್ ಇಲ್ಲ: ರಾಮಲಿಂಗಾ ರೆಡ್ಡಿ ಆಕ್ರೋಶ

  • ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತ ಸುಮಯಾ ಕುಟುಂಬಕ್ಕೆ 5 ಲಕ್ಷ ಚೆಕ್‌ ವಿತರಣೆ

    ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತ ಸುಮಯಾ ಕುಟುಂಬಕ್ಕೆ 5 ಲಕ್ಷ ಚೆಕ್‌ ವಿತರಣೆ

    ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ (District Hospital) ಸಿಸೇರಿಯನ್‌ (Cesarean) ಬಳಿಕ ಸಾವನ್ನಪ್ಪಿದ ಬಾಣಂತಿ ಸುಮಯಾ ಅವರ ಕುಟುಂಬಸ್ಥರಿಗೆ ಶಾಸಕ ಡಾ. ಶ್ರೀನಿವಾಸ್‌ (Dr Srinivas) ಅವರು ಸರ್ಕಾರದ 5 ಲಕ್ಷ ರೂ. ಪರಿಹಾರದ ಚೆಕ್‌ ವಿತರಿಸಿದ್ದಾರೆ.

    ಸಿಸೇರಿಯನ್ ಬಳಿಕ ಐವರು ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಬಾಣಂತಿಯರ ಕುಟುಂಬಕ್ಕೆ ಸರ್ಕಾರ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿತ್ತು. ಇದೇ ವೇಳೆ ಜಿಲ್ಲಾಸ್ಪತ್ರೆಯಲ್ಲಿ ನ.10ರಂದು ಹೆರಿಗೆ ಮಾಡಿಸಿಕೊಂಡಿದ್ದ ಕೂಡ್ಲಿಗಿಯ ಸುಮಯಾ, ಹೆರಿಗೆ ಬಳಿಕ ಅಂಗಾಂಗ ವೈಫಲ್ಯದಿಂದ ಬಳಲಿ ಡಿ. 5 ರಂದು ಮೃತಪಟ್ಟಿದ್ದರು. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಗರ್ಭಿಣಿಯರ ಹಿಂದೇಟು – ದಾಖಲಾತಿ ಪ್ರಮಾಣ ಅರ್ಧಕರ್ಧ ಇಳಿಕೆ

    ಭಾನುವಾರ ಮೃತ ಬಾಣಂತಿ ಸುಮಯಾ ಕುಟುಂಬಸ್ಥರಿಗೆ ಕುಡ್ಲಿಗಿ ಶಾಸಕ ಡಾ. ಎನ್ ಟಿ ಶ್ರೀನಿವಾಸ್‌ ಅವರು 5 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದರು.

    ಚೆಕ್ ನೀಡಿ, ಮಗುವಿನ ಆರೋಗ್ಯ ವಿಚಾರಿಸಿದ ಶಾಸಕ ಡಾ. ಎನ್ ಟಿ ಶ್ರೀನಿವಾಸ್, ಮಗುವಿನ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವಂತೆ ಕುಟುಂಬಸ್ಥರಿಗೆ ಹೇಳಿದರು.

     

  • ಬಾಣಂತಿಯರ ಸರಣಿ ಸಾವು ಕೇಸ್ – ಬಳ್ಳಾರಿ ಜಿಲ್ಲಾಸ್ಪತ್ರೆ ಮೇಲೆ ‘ಲೋಕಾ’ ದಾಳಿ

    ಬಾಣಂತಿಯರ ಸರಣಿ ಸಾವು ಕೇಸ್ – ಬಳ್ಳಾರಿ ಜಿಲ್ಲಾಸ್ಪತ್ರೆ ಮೇಲೆ ‘ಲೋಕಾ’ ದಾಳಿ

    ಬಳ್ಳಾರಿ: ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾಸ್ಪತ್ರೆಗೆ (Bellary District Hospital) ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

    ಮೂರು ಪ್ರತ್ಯೇಕ ತಂಡವಾಗಿ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್, ಬಿಮ್ಸ್ ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆ ಆವರಣದ ವೆರ್ ಹೌಸ್‌ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆದಿದೆ. ಇದನ್ನೂ ಓದಿ: ಬಾಣಂತಿಯರ ಸಾವಿನಲ್ಲಿ ಕರ್ನಾಟಕ ನಂ.1 ಆಗಿದೆ – ಆರ್‌. ಅಶೋಕ್

    ಬಳ್ಳಾರಿ ಜಿಲ್ಲಾಸ್ಪತ್ರೆಯ ಔಷಧ ವಿಭಾಗದಲ್ಲಿ ಲೋಕಾಯುಕ್ತ ಪರಿಶೀಲನೆ ಮಾಡಿದೆ. ಐವಿ ಹಾಗೂ ಆರ್‌ಎಲ್ ಫ್ಲೂಯಿಡ್ ಔಷಧಿ ಬಂದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಐವಿ ದ್ರಾವಣ ಹಾಗೂ ಬಾಣಂತಿಯರ ಅಸ್ವಸ್ಥ ಆದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

    ರಿಯಾಕ್ಷನ್ ಆಗಿರುವ ಗ್ಲುಕೋಸ್, ಸೀಜ್ ಆಗಿರುವ 280 ಐವಿ ಫ್ಲೂಯಿಡ್ ಆರ್‌ಎಲ್ ಬಾಟಲ್ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: ಬಾಣಂತಿಯರ ಸಾವು ಕೇಸ್ – ಪ್ರಕರಣದಲ್ಲಿ ನನ್ನ ತಪ್ಪಿದ್ರೆ ರಾಜೀನಾಮೆ ಕೊಡಲು ಸಿದ್ಧ: ದಿನೇಶ್ ಗುಂಡೂರಾವ್

    ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಐವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿದ್ದು, ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ ಸೂಚನೆ ನೀಡಿದ್ದಾರೆ.

  • ದಾವಣಗೆರೆ | 7 ತಿಂಗಳಲ್ಲಿ 135 ಶಿಶುಗಳು, 28 ಗರ್ಭಿಣಿಯರು ಸಾವು!

    ದಾವಣಗೆರೆ | 7 ತಿಂಗಳಲ್ಲಿ 135 ಶಿಶುಗಳು, 28 ಗರ್ಭಿಣಿಯರು ಸಾವು!

    ದಾವಣಗೆರೆ: ನಾಲ್ಕೈದು ಜಿಲ್ಲೆಗಳ ಜೀವನಾಡಿಯಾಗಿರುವ ದಾವಣಗೆರೆ ಜಿಲ್ಲಾಸ್ಪತ್ರೆ (Davanagere District Hospital) ಇದೀಗ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಕಳೆದ 7 ತಿಂಗಳಲ್ಲಿ ನೂರಾರು ನವಜಾತ ಶಿಶುಗಳು ಹಾಗೂ ಗರ್ಭಿಣಿಯರು ಸಾವನ್ನಪ್ಪಿದ್ದಾರೆ.

    ದಾವಣಗೆರೆ (Davanagere) ಜಿಲ್ಲಾಸ್ಪತ್ರೆ ಎಂದರೆ ಸುತ್ತಮುತ್ತಲಿನ ನಾಲ್ಕೈದು ಜಿಲ್ಲೆಗಳ ಸಾವಿರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಿದೆ ಎನ್ನುವ ಆತಂಕಕಾರಿ ವರದಿ ಕೇಳಿ ಬಂದಿದೆ. ಇದನ್ನೂ ಕೇಳಿದ ಆರೋಗ್ಯ ಸಚಿವರೇ ನಿಬ್ಬೆರಗಾಗಿದ್ದಾರೆ.

    ಹೌದು, ಜಿಲ್ಲೆಯಲ್ಲಿ ಕಳೆದ 7 ತಿಂಗಳಲ್ಲಿ 135 ನವಜಾತ ಶಿಶುಗಳು 28 ಗರ್ಭಿಣಿಯರು ಸಾವನ್ನಪ್ಪಿರುವ ವರದಿಯಾಗಿದೆ. ಅದರಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಐದು ಸಾವಾಗಿದ್ದರೆ, ಇನ್ನುಳಿದವರು ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರತಿ ತಿಂಗಳು 600 ರಿಂದ 700 ಹೆರಿಗೆ ಆಗುವ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದೆ. ಇದರಿಂದ ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮುಂಚಿತವಾಗಿ ಗರ್ಭಿಣಿಯರನ್ನು ಕಳಿಸುವಂತೆ ಸೂಚನೆ ನೀಡಲಾಗಿದೆ.

    ಇನ್ನೂ ಜಿಲ್ಲೆಯ ಪ್ರಾಥಮಿಕ ಹಾಗು ತಾಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾವಹಿಸುವಂತೆ ಡಿಹೆಚ್‌ಓ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಗರ್ಭಿಣಿಯರ ಹಾಗೂ ನವಜಾತ ಶಿಶುಗಳ ಸಾವಿನ ಪ್ರಮಾಣ ಕಡಿಮೆ ಮಾಡಲು ಅಭಿಯಾನವನ್ನೇ ಹಮ್ಮಿಕೊಂಡಿದ್ದು, ಜಿಲ್ಲಾಸ್ಪತ್ರೆಯ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ ಕೂಡ ಹೆಚ್ಚಿದೆ. ಅಲ್ಲದೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಸಿಜೇರಿಯನ್ ಡೆಲಿವರಿಗಳು ಶೇ.75ರಷ್ಟು ಜಾಸ್ತಿ ಇದೆ. ಅದರ ಬಗ್ಗೆ ಕ್ರಮ ವಹಿಸುವಂತೆ ಆರೋಗ್ಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    ಒಟ್ಟಾರೆ ಕಳೆದ 7 ತಿಂಗಳಲ್ಲಿ ಗರ್ಭಿಣಿಯರ ಹಾಗೂ ನವಜಾತ ಶಿಶುಗಳ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಇದರ ಬಗ್ಗೆ ಆರೋಗ್ಯ ಇಲಾಖೆ ಎಚ್ಚರ ವಹಿಸಿದೆ. ಅಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ಸರ್ಕಾರ ಇನ್ನು ಹೆಚ್ಚಿನ ಸೌಲಭ್ಯ ಒದಗಿಸಿದರೆ ಬಡ ರೋಗಿಗಳ ಜೀವ ಉಳಿಸಿದಂತಾಗುತ್ತದೆ.

  • ಕಲಬುರಗಿ| ನರ್ಸ್‌ ವೇಷದಲ್ಲಿ ಬಂದ ಮಹಿಳೆಯರಿಂದ ಹಸುಗೂಸು ಕಿಡ್ನ್ಯಾಪ್‌

    ಕಲಬುರಗಿ| ನರ್ಸ್‌ ವೇಷದಲ್ಲಿ ಬಂದ ಮಹಿಳೆಯರಿಂದ ಹಸುಗೂಸು ಕಿಡ್ನ್ಯಾಪ್‌

    ಕಲಬುರಗಿ: ನರ್ಸ್‌ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಹಸುಗೂಸು ಅಪಹರಣ ಮಾಡಿರುವ ಘಟನೆ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಜಿಲ್ಲಾಸ್ಪತ್ರೆ ವಾರ್ಡ್ ನಂಬರ್ 115 ರಲ್ಲಿ ಕಸ್ತೂರಿ ಎಂಬವರಿಗೆ ಹೆರಿಗೆಯಾಗಿತ್ತು. ನಿನ್ನೆ ನಸುಕಿನ ಜಾವ 4 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ನರ್ಸ್ ವೇಶದಲ್ಲಿ ಬಂದು ಇಬ್ಬರು ಮಹಿಳೆಯರು ಮಗು ಕಿಡ್ನ್ಯಾಪ್‌ ಮಾಡಿದ್ದಾರೆ.

    ರಕ್ತ ತಪಾಸಣೆಗಾಗಿ ಮಗುವನ್ನ ಕರೆದುಕೊಂಡು ಬನ್ನಿ ಅಂತಾ ನಕಲಿ ನರ್ಸ್‌ಗಳು ಹೇಳಿದ್ದರು. ನರ್ಸ್‌ಗಳು ಸಂಪೂರ್ಣವಾಗಿ ಮುಖ ಮುಚ್ಚಿಕೊಂಡು ಬಂದಿದ್ದರು. ಅದರಂತೆ ಮಗುವಿನ ಚಿಕ್ಕಮ್ಮ ಚಂದ್ರಕಲಾ ಮಗುವನ್ನ ರಕ್ತ ತಪಾಸಣೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗುವನ್ನ ನಮಗೆ ಕೊಡಿ ಅಂತಾ ಹೇಳಿದರು. ಬಳಿಕ ಮಗುವನ್ನ ಎತ್ತಿಕೊಂಡು ಎಸ್ಕೇಪ್‌ ಆಗಿದ್ದಾರೆ.

    ರಾಮಕೃಷ್ಣ ಮತ್ತು ಪತ್ನಿ ಕಸ್ತೂರಿ ದಂಪತಿ ಮಗು ಕಿಡ್ನ್ಯಾಪ್‌ ಆಗಿದೆ. ಸೈಯದ್ ಚಿಂಚೋಳಿ ಗ್ರಾಮದಿಂದ ದಂಪತಿ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಬಂದಿದ್ದರು. ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಔಷಧಗಳು ಮೂಲೆಗುಂಪು – ಔಷಧ ಸಂಗ್ರಹ ಜಾಗದಲ್ಲೇ ಶ್ವಾನಗಳ ಮೂತ್ರ ವಿಸರ್ಜನೆ

    ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಔಷಧಗಳು ಮೂಲೆಗುಂಪು – ಔಷಧ ಸಂಗ್ರಹ ಜಾಗದಲ್ಲೇ ಶ್ವಾನಗಳ ಮೂತ್ರ ವಿಸರ್ಜನೆ

    ಮಡಿಕೇರಿ: ಬಡವರ್ಗದ ಜನರ ಅರೋಗ್ಯ ಸುರಕ್ಷತಾ ದೃಷ್ಟಿಯಿಂದ ಸರ್ಕಾರ ಜಿಲ್ಲಾಸ್ಪತ್ರೆಗಳಿಗೆ (District Hospital) ಔಷಧಗಳನ್ನ ಸರಬರಾಜು ಮಾಡುತ್ತಿದೆ. ಆದ್ರೆ ಆ ಔಷಧಿಗಳು ಅನಾರೋಗ್ಯಪೀಡಿತರಿಗೆ ಸಿಕ್ಕುವ ಬದಲು ಆಸ್ಪತ್ರೆಯಲ್ಲೇ ಕೊಳೆಯುತ್ತಿವೆ. ಆಸ್ಪತ್ರೆಯಲ್ಲಿ ಔಷಧ ಶೇಖರಣೆಗೆ ಸೂಕ್ತ ಜಾಗವೂ ಇಲ್ಲದೇ ಸಾರ್ವಜನಿಕರು ಓಡಾಡುವ ಸ್ಥಳದಲ್ಲೇ ಔಷಧಗಳನ್ನ (Medicine) ಶೇಖರಿಸಿದ್ದು, ಈಗ ಅವು ಶ್ವಾನಗಳ ಆವಾಸಸ್ಥಾನವಾಗಿ ಮಾರ್ಪಾಡಾಗಿದೆ. ಇದರಿಂದಾಗಿ ಆಸ್ಪತ್ರೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ನಡೆದಿರುವುದು ಕೊಡಗು (Kodagu) ಜಿಲ್ಲಾಸ್ಪತ್ರೆಯಲ್ಲಿ.

    ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ (Madikeri) ಜಿಲ್ಲಾ ಆಸ್ಪತ್ರೆಗೆ ಹಾಸನ, ಮೈಸೂರು ಭಾಗದಿಂದಲೂ ಬಡವರ್ಗದ ಜನರು ಬರುತ್ತಾರೆ. ಚಿಕಿತ್ಸೆ ಪಡೆದ ರೋಗಿಗಳು ಉಚಿತ ಔಷಧಿ ತೆಗೆದುಕೊಂಡು ಹೋಗುತ್ತಾರೆ. ಆದ್ರೆ ಈ ಆಸ್ಪತೆಯಲ್ಲಿ ರೋಗಿಗಳಿಗೆ ಕೊಡುವ ಔಷಧಿ ಆಸ್ಪತ್ರೆಯೊಳಗೆ ಮೂಲೆಗುಂಪುಗಳಾಗಿವೆ. ಸಾರ್ವಜನಿಕರು ಓಡಾಡುವ ಜಾಗದಲ್ಲೇ ಔಷಧಿಗಳು ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲವಾಗಿರುವುದರಿಂದ ಔಷಧ ಬಾಕ್ಸ್‌ಗಳ ಮೇಲೆ ಫಂಗಸ್‌ ಬರಲು ಪ್ರಾರಂಭವಾಗಿದೆ. ಸಾಕಷ್ಟು ಬಾಕ್ಸ್‌ಗಳಿಂದ ಡ್ರಗ್ಸ್‌ ಲೀಕೇಜ್‌ ನೆಲದ ಮೇಲೆ ಹರಿಯುತ್ತಿದೆ. ಇದನ್ನೂ ಓದಿ: ಬೆಲೆ ಏರಿಕೆಯೇ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ – ಬೊಮ್ಮಾಯಿ ಟೀಕೆ

    ಇಷ್ಟು ಸಾಲದ್ದಕ್ಕೆ ಔಷಧಿ ಬಾಕ್ಸ್‌ಗಳನ್ನು ಶೇಖರಣೆ ಮಾಡಿರುವ ಸ್ಥಳದಲ್ಲೇ ಈಗ ಬೀದಿ ನಾಯಿಗಳು ಆವಾಸಸ್ಥಾನ ಮಾಡಿಕೊಂಡಿವೆ. ಔಷಧ ಬಾಕ್ಸ್‌ಗಳ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ಈ ಬಾರಿ 48 ಭೂಕುಸಿತ ವಲಯ ಗುರುತು – ಆಗಸ್ಟ್ ಮಳೆಗೆ ಇದ್ಯಾ ಮತ್ತೊಮ್ಮೆ ಕಂಟಕ?

    ಮತ್ತೊಂದೆಡೆ ಆಸ್ಪತ್ರೆಯಲ್ಲಿ ವಿದ್ಯುತ್‌ ಸಮಸ್ಯೆ ಕಾಡುತ್ತಿದೆ. ವಿದ್ಯುತ್ ಸಮಸ್ಯೆ ಹೆಚ್ಚಾಗಿರೋದ್ರಿಂದ ಆಸ್ಪತ್ರೆಯ ಡಯಾಲಿಸಸ್ ರೋಗಿಗಳು ಪರದಾಟ ನಡೆಸುವಂತಾಗಿದೆ. ಈ ಬಗ್ಗೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳನ್ನ ಕೇಳಿದ್ರೆ, ಬೆಲೆ ಬಾಳುವ ಔಷಧಗಳನ್ನ ಉಗ್ರಾಣ ಕೇಂದ್ರದಲ್ಲಿ ಇಡಲಾಗಿದೆ. ಇಲ್ಲಿ ಸಣ್ಣಪುಟ್ಟ ಡ್ರಗ್ಸ್‌ಗಳನ್ನ ಶೇಖರಣೆ ಮಾಡಲಾಗಿದೆ. ಆಸ್ಪತ್ರೆ ಕೊಠಡಿಗಳ ಸಮಸ್ಯೆ ಇರೋದ್ರಿಂದ ಹೀಗೆ ಆಗಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನವಜಾತ ಶಿಶುಗಳ ಐಸಿಯು ವಾರ್ಡ್‌ನಲ್ಲಿ ಶಾರ್ಟ್‌ಸರ್ಕ್ಯೂಟ್ – ತಪ್ಪಿದ ಭಾರೀ ಅನಾಹುತ

    ನವಜಾತ ಶಿಶುಗಳ ಐಸಿಯು ವಾರ್ಡ್‌ನಲ್ಲಿ ಶಾರ್ಟ್‌ಸರ್ಕ್ಯೂಟ್ – ತಪ್ಪಿದ ಭಾರೀ ಅನಾಹುತ

    ಹಾಸನ: ಜಿಲ್ಲಾಸ್ಪತ್ರೆಯ (District Hospital) ನವಜಾತ ಶಿಶುಗಳ (Infant) ಐಸಿಯು (ICU) ವಾರ್ಡ್‌ನಲ್ಲಿ ಶಾರ್ಟ್‌ಸರ್ಕ್ಯೂಟ್‌ (Short Circuit) ಉಂಟಾಗಿದ್ದು, ಭಾರೀ ಅನಾಹುತವೊಂದು ತಪ್ಪಿದ ಘಟನೆ ಹಾಸನದಲ್ಲಿ (Hassan) ನಡೆದಿದೆ.

    ಘಟನೆಯಿಂದ ಜನರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೂಡಲೇ ಐಸಿಯುನಲ್ಲಿದ್ದ 24 ನವಜಾತ ಶಿಶುಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಕೋಣೆಯೊಳಗೆ ಹೊಗೆ ತುಂಬಿಕೊಂಡಿದ್ದು, ಆಸ್ಪತ್ರೆ ಸಿಬ್ಬಂದಿ ಕಿಟಕಿ ಗಾಜುಗಳನ್ನು ಒಡೆದು ಮಕ್ಕಳನ್ನು ರಕ್ಷಿಸಿದ್ದಾರೆ. ಐಸಿಯುನಿಂದ ಮಕ್ಕಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ಬಳಿಕ ನವಜಾತ ಶಿಶುಗಳ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಭೀಮಾ ನದಿಯಲ್ಲಿ ನೀರು ಕುಡಿಯಲು ಹೋದ ಇಬ್ಬರು ಬಾಲಕರ ಸಾವು

    ಐಸಿಯುನಲ್ಲಿದ್ದ ಎಲ್ಲಾ 24 ನವಜಾತ ಶಿಶುಗಳು ಸುರಕ್ಷಿತವಾಗಿದ್ದು, ಸ್ಥಳಕ್ಕೆ ಹಿಮ್ಸ್‌ನ ನಿರ್ದೇಶಕ ರವಿಕುಮಾರ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಕೃಷ್ಣಮೂರ್ತಿ ಭೇಟಿ ನೀಡಿದ್ದಾರೆ. ಅಲ್ಲದೇ ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಫ್ಲೈಓವರ್‌ನಿಂದ ರೈಲ್ವೇ ಹಳಿಗೆ ಬಿದ್ದ ಕಾರು – ಐವರಿಗೆ ಗಂಭೀರ ಗಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]