Tag: District health officer

  • ಬಾಣಂತಿಯರ ಸಾವು ಪ್ರಕರಣ – ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಶೀಲನೆಗೆ ಮುಂದಾದ ಇಲಾಖೆ

    ಬಾಣಂತಿಯರ ಸಾವು ಪ್ರಕರಣ – ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಶೀಲನೆಗೆ ಮುಂದಾದ ಇಲಾಖೆ

    ರಾಯಚೂರು: ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವು ಮುಂದುವರೆದಿದ್ದು, ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇದರಿಂದ ಎಚ್ಚೆತ್ತ ಜಿಲ್ಲಾ ಆರೋಗ್ಯ ಇಲಾಖೆ (District Health Department)  ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪರಿಶೀಲನೆಗೆ ಮುಂದಾಗಿದೆ.

    ಕಳೆದ ತಿಂಗಳಿನಿಂದ ಇಲ್ಲಿಯವರೆಗೆ ಒಟ್ಟು 10 ಬಾಣಂತಿಯರನ್ನು ಸಾವನ್ನಪ್ಪಿದ್ದು, ಇದೀಗ ಜಿಲ್ಲಾ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪರಿಶೀಲನೆಗೆ ಮುಂದಾಗಿದ್ದು, ರಾಯಚೂರಿನ (Raichuru) ಕಲ್ಮಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (Primary Health Centre) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.ಇದನ್ನೂ ಓದಿ: ಲೋಕ್ ಅದಾಲತ್‌ನಲ್ಲಿ 73,628 ಪ್ರಕರಣ ಇತ್ಯರ್ಥ – ನ್ಯಾ.ಪ್ರಕಾಶ ಬನಸೋಡೆ

    ಬಾಣಂತಿಯರ ಆರೋಗ್ಯವನ್ನು ವಿಚಾರಿಸಿದ ಅಧಿಕಾರಿಗಳು ಆಸ್ಪತ್ರೆಯ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದರು. ಬಾಣಂತಿಯರು ಹೆರಿಗೆಯಾದ ನಂತರ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಚಳಿಗಾಲ ಇರುವ ಕಾರಣ ಸಣ್ಣಮಕ್ಕಳನ್ನು ಸಹ ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು. ಏನಾದರೂ ತೊಂದರೆ ಉಂಟಾದಲ್ಲಿ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು ಎಂದು ಸಲಹೆ ನೀಡಿದರು.

    ಇನ್ನೂ ಆಸ್ಪತ್ರೆಗೆ ಬರುವ ಸಾರ್ವಜನಿಕರು, ಗರ್ಭಿಣಿ, ಬಾಣಂತಿ ಮತ್ತು ನವಜಾತ ಶಿಶುಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಈ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಇದನ್ನೂ ಓದಿ: Mumbai Boat Accident | ಪ್ರಯಾಣಿಕ ಹಡಗಿಗೆ ನೌಕಾಪಡೆಯ ಬೋಟ್‌ ಡಿಕ್ಕಿ; 13 ಮಂದಿ ದಾರುಣ ಸಾವು

  • ಅನಧಿಕೃತ ಕ್ಲಿನಿಕ್, ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಬೀಗ ಜಡಿದ ಡಿಎಚ್‍ಓ

    ಅನಧಿಕೃತ ಕ್ಲಿನಿಕ್, ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಬೀಗ ಜಡಿದ ಡಿಎಚ್‍ಓ

    ಬೆಂಗಳೂರು: ನಗರ ಹೊರವಲಯದ ನೆಲಮಂಗಲದಲ್ಲಿ ಸೂಕ್ತ ದಾಖಲೆಗಳಿಲ್ಲದ ಅನೇಕ ಕ್ಲಿನಿಕ್ ಹಾಗೂ ಸ್ಕ್ಯಾನಿಂಗ್ ಸೆಂಟರ್ ಗಳು ತಲೆ ಎತ್ತಿವೆ. ಈ ಕುರಿತು ಸೂಕ್ತ ಮಾಹಿತಿ ಪಡೆದಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಯೋಗೀಶ್ ಗೌಡ ಅವರ ನೇತೃತ್ವದ ಅಧಿಕಾರಿಗಳ ತಂಡ ಭರ್ಜರಿ ದಾಳಿ ಮಾಡಿದೆ.

    ನೆಲಮಂಗಲದಲ್ಲಿರುವ ಅನಧಿಕೃತ ಕ್ಲಿನಿಕ್ ಹಾಗೂ ಸ್ಕ್ಯಾನಿಂಗ್ ಸೆಂಟರ್‍ಗಳ ಮೇಲೆ ಇಂದು ಜಿಲ್ಲಾ ಆರೋಗ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ತಾಲೂಕು ವೈದ್ಯಾಧಿಕಾರಿ ಹಾಗೂ ಅಧಿಕಾರಿಗಳು ಯೋಗೀಶ್ ಗೌಡ ಅವರಿಗೆ ಸಾಥ್ ನೀಡಿದರು. ಈ ಮೂಲಕ ಕೆಪಿಎಂಇ ಕಾಯ್ದೆ ಉಲ್ಲಂಘನೆ ಮಾಡಿ ನಡೆಸುತ್ತಿದ್ದ ಕ್ಲಿನಿಕ್‍ಗಳಿಗೆ ಬೀಗ ಜಡಿದಿದ್ದಾರೆ.

    ನೆಲಮಂಗಲದ ಸ್ಮೈಲ್ ಲೈನ್ ದಂತ ಚಿಕಿತ್ಸಾಲಯ ಹಾಗೂ ಯಂಟಗಾನಹಳ್ಳಿ ಜಿ.ಎನ್. ಎಕ್ಸರೇ ಸೆಂಟರ್ ಬೀಗ ಹಾಕಿ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸೂಕ್ತ ದಾಖಲೆಗಳಿಲ್ಲದ ಕ್ಲಿನಿಕ್‍ಗಳಿಗೆ ನೋಟಿಸ್ ಜಾರಿ ಮಾಡಿ ಶೀಘ್ರದಲ್ಲೇ ಉತ್ತರಿಸುವಂತೆ ಸೂಚನೆ ನೀಡಿದ್ದಾರೆ.

  • ಆರೋಗ್ಯ ತಪಾಸಣೆ ಆಯೋಜಿಸಿದ್ದ ನಕಲಿ ಡಾಕ್ಟರ್ ಆರೋಗ್ಯಾಧಿಕಾರಿ ಬರುತ್ತಿದ್ದಂತೆ ಪರಾರಿ!

    ಆರೋಗ್ಯ ತಪಾಸಣೆ ಆಯೋಜಿಸಿದ್ದ ನಕಲಿ ಡಾಕ್ಟರ್ ಆರೋಗ್ಯಾಧಿಕಾರಿ ಬರುತ್ತಿದ್ದಂತೆ ಪರಾರಿ!

    ಕಾರವಾರ: ಕಡಿಮೆ ವೆಚ್ಚದಲ್ಲಿ ಆರೋಗ್ಯ ತಪಾಸಣೆ ಮಾಡುತ್ತೇವೆ ಎಂದು ಶಿರಸಿ ಸಮೀಪದ ಕಾನಗೋಡಿನಲ್ಲಿ ಶಿಬಿರ ಆಯೋಜಿಸಿ ಮೋಸ ಮಾಡುತ್ತಿದ್ದ ನಕಲಿ ವೈದ್ಯನೊಬ್ಬ ಜಿಲ್ಲಾ ಆರೋಗ್ಯಾಧಿಕಾರಿ ಸ್ಥಳಕ್ಕೆ ಬರುತ್ತಿದ್ದಂತೆ ಪರಾರಿಯಾಗಿದ್ದಾನೆ.

    ಹುಬ್ಬಳ್ಳಿ ಮೂಲದ ಮುಕೇಶ್ ತಿವಾರಿ ಎನ್ನುವ ನಕಲಿ ವೈದ್ಯ ಜನರನ್ನು ವಂಚಿಸಿ ದುಡ್ಡು ದೋಚುತಿದ್ದ. ಮುಕೇಶ್ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಕಾನಗೋಡಿನಲ್ಲಿ ಆರೋಗ್ಯ ಶಿಬಿರ ನಡೆಸಿ, ಸ್ಥಳೀಯರಿಂದ ದುಡ್ಡು ದೋಚುತ್ತಿದ್ದ. ಖಚಿತ ಮಾಹಿತಿ ಪಡೆದು ಶಿಬಿರದ ಜಾಗಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ್ ಬರುತ್ತಿದ್ದಂತೆ ಸತೀಶ್ ಸ್ಥಳದಿಂದ ಓಡಿ ಹೋಗಿದ್ದಾನೆ.

    ಮುಕೇಶ್ ಈ ಹಿಂದೆಯೂ ಶಿರಸಿಯ ಬಿಸಲಕೊಪ್ಪದಲ್ಲಿ ‘ಹ್ಯೂಮನ್ ಕೇರ್ ವಿಷನ್’ ಎಂಬ ಹೆಸರಿನಲ್ಲಿ ಶಿಬಿರ ಆಯೋಜಿಸಿದ್ದನು. 36 ವಿವಿಧ ಆರೋಗ್ಯ ತಪಾಸಣೆಗಳನ್ನು ಶಿಬಿರದಲ್ಲಿ ಮಾಡಲಾಗುತ್ತದೆ. 10 ಸಾವಿರ ರೂ. ತಪಾಸಣೆಯನ್ನು ಕೇವಲ ಒಂದು ಸಾವಿರ ರೂ. ನಲ್ಲಿ ಮಾಡಲಾಗುತ್ತದೆ ಹಾಗೂ 100 ರೂ.ಗೆ ದೇಹ ತಪಾಸಣೆ ಮಾಡಲಾಗುತ್ತದೆ ಎಂದು ವಂಚಿಸಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಶಿಬಿರ ಆಯೋಜಿಸಿ, ಅದನ್ನು ಸ್ಥಳೀಯ ಮುಖಂಡರಿಂದ ಉದ್ಘಾಟನೆ ಮಾಡಿಸಿ, ಯಾರಿಗೂ ಅನುಮಾನ ಬಾರದಂತೆ ನಟಿಸುತ್ತಿದ್ದ. ಕಾನಗೋಡಿನಲ್ಲಿ “ವೀ ಫಾರ್ ಯು” ಎಂಬ ಸಂಸ್ಥೆಯ ಹೆಸರಿನಲ್ಲಿ ಮುಕೇಶ್ ಶಿಬಿರ ಪ್ರಾರಂಭಿಸಿದ್ದ. ಆತನ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಸ್ಥಳೀಯರು ಕಾರವಾರ ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್ ಸ್ಥಳಕ್ಕೆ ಬರುತ್ತಿದ್ದಾರೆ ಎಂದು ಅರಿತ ಮುಕೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ ಕೆಲವು ಮಾತ್ರ ಸಿಬ್ಬಂದಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಚಿಕಿತ್ಸೆಗಾಗಿ ಶಿಬಿರಕ್ಕೆ ಬಂದಿದ್ದ ಸಾರ್ವಜನಿಕರು ಇದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews