ಶಿವಮೊಗ್ಗ: ಅಪ್ರಾಪ್ತನಿಗೆ ಬೈಕ್ ಚಲಾಯಿಸಲು ಕೊಟ್ಟ ಕಾರಣಕ್ಕೆ ವಾಹನ ಮಾಲೀಕರಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ 30 ಸಾವಿರ ರೂಪಾಯಿ ದಂಡ ವಿಧಿಸಿದೆ. 3ನೇ ಎ.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
2024 ರ ಜನವರಿ 30 ರಂದು ಶಿವಮೊಗ್ಗ ಪೂರ್ವ ಸಂಚಾರಿ ಠಾಣೆ ಪಿಎಸ್ ಐ ನವೀನ್ ಕುಮಾರ್ ಮಠಪತಿ ಅವರು ಶಿವಮೊಗ್ಗ ನಗರದ ಎಸ್ ಪಿ.ಎಂ ರಸ್ತೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಹತ್ತಿರ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ 17 ವರ್ಷದ ಹುಡುಗನೊಬ್ಬ ಮೊಪೆಡ್ ಅನ್ನು ಚಾಲನೆ ಮಾಡಿಕೊಂಡು ಬಂದಿದ್ದಾನೆ.
ಇದನ್ನ ಗಮನಿಸಿದ ಪಿಎಸ್ಐ ಅಪ್ರಾಪ್ತನಿಗೆ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ ತಾಯಿ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿದ್ದರು. ಪ್ರಕರಣ ಸಂಬಂಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು. ಇದೀಗ ಕೋರ್ಟ್ ಮೊಪೆಡ್ ವಾಹನದ ಮಾಲೀಕರಿಗೆ 30 ಸಾವಿರ ರೂ ದಂಡ ವಿಧಿಸಿದೆ.
ಶಿವಮೊಗ್ಗ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ (Sexual Assault) ಎಸಗಿದ್ದ ಯುವಕನಿಗೆ ಶಿವಮೊಗ್ಗ (Shivamogga) ಜಿಲ್ಲಾ ನ್ಯಾಯಾಲಯವು (District Court) 20 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷದ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
2020ರಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ (Bhadravathi) ತಾಲೂಕಿನ 21 ವರ್ಷದ ಯುವಕನೋರ್ವ 17 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಬಗ್ಗೆ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಇದನ್ನೂ ಓದಿ: ಕೊಲೆ ಪಾತಕಿಗೆ ಜೀವಾವಧಿ ಶಿಕ್ಷೆ – 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ
ಶಿವಮೊಗ್ಗ: ಆನಲೈನ್ ತರಗತಿಗಳಿಗಾಗಿ ಮಕ್ಕಳಿಗೆ ಮೊಬೈಲ್ (Mobile) ನೀಡುವುದರಿಂದ ಅವರಲ್ಲಿ ಖಿನ್ನತೆ ಉಂಟಾಗಿ, ಆನ್‌ಲೈನ್ ಶಿಕ್ಷಣವೆನ್ನುವುದು (Online Education) ವಿದ್ಯಾರ್ಥಿಗಳಿಗೆ ಶಿಕ್ಷೆಯಾಗಿ ಪರಿಣಮಿಸುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಆತಂಕಪಟ್ಟಿದ್ದಾರೆ.
ಕೋವಿಡ್ (Covid) ಬಂದ ನಂತರ ಮಾನಸಿಕ ಕಾಯಿಲೆಗಳ ಪ್ರಮಾಣ ಹೆಚ್ಚಾಗಿದ್ದು, ಆನ್‌ಲೈನ್ ತರಗತಿಗಳಿಗಾಗಿ ಮಕ್ಕಳಿಗೆ ಮೊಬೈಲ್ ನೀಡುವುದರಿಂದ ಅವರಲ್ಲಿ ಖಿನ್ನತೆಯುಂಟಾಗಿದೆ. ಶಿಕ್ಷಣ ಅನ್ನೋದು ವಿದ್ಯಾರ್ಥಿಗಳಿಗೆ ಶಿಕ್ಷೆಯಾಗಿ ಪರಿಣಮಿಸುತ್ತಿದೆ. ಆದ್ದರಿಂದ ಪೋಷಕರು ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಸಾರ್ವಜನಿಕ ಆಸ್ಪತ್ರೆಯಲ್ಲಿ 200 ಕೊಳೆತ ಶವ ಪತ್ತೆ
ಔಷಧವೆಂದರೆ (Medicines) ಕೇವಲ ಮಾತ್ರೆ ಮತ್ತು ಇಂಜೆಕ್ಷನ್‌ಗಳು ಮಾತ್ರವಲ್ಲ. ಶಿಸ್ತುಬದ್ಧ ಜೀವನಕ್ರಮ, ಉತ್ತಮವಾದ ನಡಿಗೆ, ವ್ಯಾಯಾಮ, ಸೂಕ್ತವಾದ ನಿದ್ರೆ ಮತ್ತು ಆಹಾರಗಳು ಕೂಡ ಔಷಧ. ಗರ್ಭಿಣಿಯರಿಗೆ (Pragnant) ಒತ್ತಡ ಹೆಚ್ಚಾದರೆ ಅದರ ಪರಿಣಾಮ ಮಕ್ಕಳ ಮೇಲೆ ಬೀಳುತ್ತದೆ. ಆದ್ದರಿಂದ ಮಾನಸಿಕ ಸಂತೋಷ ನೀಡುವಂತ ಪೂರಕ ವಾತವರಣ ಅವರಿಗೆ ನಿರ್ಮಿಸಿಕೊಡಬೇಕು ಎಂದು ಸಲಹೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜಣ್ಣ ಸಂಕಣ್ಣನವರ್, ಸಿಮ್ಸ್ ಪ್ರಾಂಶುಪಾಲರಾದ ಡಾ.ಮಂಜುನಾಥ್ ಎಂ.ಎಲ್, ಡಿಎಚ್‌ಒ ಡಾ.ರಾಜೇಶ್ ಸುರಗಿಹಳ್ಳಿ, ವೈದ್ಯಕೀಯ ಅಧೀಕ್ಷಕ ಡಾ.ಎಸ್‌ಶ್ರೀಧರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎಸ್ ರಾಮ್ ಪ್ರಸಾದ್, ಮನೋವೈದ್ಯ ಡಾ.ಎಂ.ಎನ್ ಸಂತೋಷ್ ಉಪಸ್ಥಿತರಿದ್ದರು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ವಾರಣಾಸಿಯ ಜಿಲ್ಲಾ ನ್ಯಾಯಾಲಯ ಮಹತ್ವದ ಆದೇಶ ನೀಡಲಿದೆ. ಸುಪ್ರೀಂಕೋರ್ಟ್ ಆದೇಶದನ್ವಯ ಇಂದು ಸುಮಾರು 45 ನಿಮಿಷಗಳ ಸುಧೀರ್ಘ ವಿಚಾರಣೆ ನಡೆಸಿದ ನ್ಯಾ. ಅಜಯ್ ಕೃಷ್ಣ ವಿಶ್ವೇಶ ನಾಳೆಗೆ ತೀರ್ಪು ಕಾಯ್ದಿರಿಸಿದರು.
ವಿಚಾರಣೆ ವೇಳೆ ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಹಿಂದೂ ಪರ ವಕೀಲರು ಸಲ್ಲಿಸಿದ್ದ ಅರ್ಜಿಗೆ ಮಸೀದಿ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು. 1991 ಕಾಯಿದೆ ಅನ್ವಯ ಈ ಅರ್ಜಿ ವಿಚಾರಣೆ ಅರ್ಹವಾಗಿಲ್ಲ, ಇದು ಆರ್ಡರ್ 7 ರೂಲ್ 11 ಉಲ್ಲಂಘನೆಯಾಗಿದೆ ಎಂದು ವಾದಿಸಿದರು. ಇದನ್ನೂ ಓದಿ: ದಲಿತ ಯುವತಿಯ ಮೇಲೆ ಗ್ಯಾಂಗ್ ರೇಪ್ – ಡಿಎಂಕೆ ಯುವ ನಾಯಕ ಅರೆಸ್ಟ್
ಈ ನಿಯಮ ಉಲ್ಲಂಘಿಸಿ ನಡೆಸಿದ ಸರ್ವೆ ಕೂಡಾ ಅನೂರ್ಜಿತವಾಗಿದ್ದು ಮೊದಲು ಈ ಅರ್ಜಿ ವಿಚಾರಣೆಗೆ ಅರ್ಹವೇ? ಅಲ್ಲವೇ? ಎಂದು ತಿರ್ಮಾನವಾಗಬೇಕು ಎಂದು ಕೋರ್ಟ್ ಗೆ ಮನವಿ ಮಾಡಿದರು. ಇದಕ್ಕೆ ಪ್ರತಿವಾದ ಸಲ್ಲಿಸಿದ ಹಿಂದೂ ಪರ ವಕೀಲರು ಕಾನೂನು ಬದ್ಧವಾಗಿ ನಿರ್ಮಿಸಿದ ಧಾರ್ಮಿಕ ಕ್ಷೇತ್ರಗಳಿಗೆ ಮಾತ್ರ 1991 ಅನ್ವಯವಾಗಲಿದ್ದು ಅತಿಕ್ರಮಣ ಕಟ್ಟಡಗಳಿಗಲ್ಲ, ರಾಮ ಮಂದಿರ ಪ್ರಕರಣವನ್ನು ಇದೇ ಆಧಾರದ ಮೇಲೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ ಎಂದರು. ಇದನ್ನೂ ಓದಿ: ಎಟಿಎಂಗೆ ಹಣ ಹಾಕು ಅಂತ ಕೊಟ್ಟರೆ, ಹಣದೊಂದಿಗೆ ಎಸ್ಕೇಪ್ ಆದ ಭೂಪ
ವಾದ ಪ್ರತಿವಾದ ಆಲಿಸಿದ ಜಿಲ್ಲಾ ನ್ಯಾಯಾಲಯ ನಾಳೆ ಅರ್ಜಿ ವಿಚಾರಣೆಗೆ ಅರ್ಹವೇ ಎಂಬುದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಲಿದೆ ಎಂದು ಹೇಳಿತು. ಅದರ ಅನ್ವಯ ಮುಂದಿನ ಹಂತದಲ್ಲಿ ಪ್ರಕರಣ ವಿಚಾರಣೆ ನಡೆಸುವುದಾಗಿಯೂ ಕೋರ್ಟ್ ಹೇಳಿತ್ತು.
ಈ ವಿಚಾರಣೆ ವೇಳೆ ಹಿಂದೂ ಪರ ವಕೀಲರಿಂದ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದ್ದು, ಮೇ 16 ರಿಂದ 19 ವರೆಗೂ ವಜುಖಾನದಲ್ಲಿ ವಜು ಮಾಡಿದವರ ವಿರುದ್ಧ 156 (3) ಸಿಆರ್‌ಸಿಪಿ, ಐಪಿಸಿ 153ಎ (2), 505 (3) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲು ಮನವಿ ಮಾಡಲಾಗಿದೆ.
ತೀರ್ಪು ಮಹತ್ವ ಪಡೆದುಕೊಂಡ ಅರ್ಜಿ ವಿಚಾರಣೆ ವೇಳೆ ಕೇವಲ 23 ಮಂದಿಗೆ ಮಾತ್ರ ಕೋರ್ಟ್ ಹಾಲ್ ಪ್ರವೇಶ ಮಾಡಲು ಅನುಮತಿ ನೀಡಲಾಗಿತ್ತು. 19 ಮಂದಿ ವಕೀಲರು ಮತ್ತು ನಾಲ್ಕು ಮಂದಿ ಅರ್ಜಿದಾರರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು.
ಲಕ್ನೋ: ಉತ್ತರಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿ (ಆಡಳಿತ ಮಂಡಳಿ) ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ನೀಡಿದ ಲಿಖಿತ ಆದೇಶದಂತೆ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಜ್ಞಾನವ್ಯಾಪಿ ಮಸೀದಿಯ ಆಡಳಿತ ಮಂಡಳಿಯ ಅರ್ಜಿಯನ್ನು ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ
ಹಲವು ಮಹತ್ವದ ಬೆಳವಣಿಗೆಯ ನಡುವೆ ವಾರಣಾಸಿ ನ್ಯಾಯಾಲಯವು ಅರ್ಜಿ ವಿಚಾರಣೆ ನಡೆಸಿದೆ. ಈಗಾಗಲೇ ಸಮೀಕ್ಷಾ ತಂಡವು ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗಿರುವ ಸ್ಥಳವನ್ನು ಬಂದ್ ಮಾಡುವಂತೆ ಅಲ್ಲಿನ ಜಿಲ್ಲಾಡಳಿತಕ್ಕೆ ಸೂಚಿಸಿದೆ.
ಕಳೆದ ವಾರ, ಮುಸ್ಲಿಂ ಮುಖಂಡ ಮನವಿಯಂತೆ ಸಮೀಕ್ಷೆ ವಿರುದ್ಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ರವಾನಿಸಲು ಸುಪ್ರೀಂ ನಿರಾಕರಿಸಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಪರಿಗಣಿಸಲು ಒಪ್ಪಿಕೊಂಡಿತು. ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಅರ್ಜಿಯನ್ನು ಪಟ್ಟಿ ಮಾಡಲು ಸೂಚಿಸಿತ್ತು. ಇದನ್ನೂ ಓದಿ: ಅಲ್ಪಸಂಖ್ಯಾತರ ಮೀಸಲಾತಿ ನಿಲ್ಲಿಸುತ್ತೇವೆ – ತೆಲಂಗಾಣ ಸರ್ಕಾರದ ವಿರುದ್ಧ ಶಾ ಗುಡುಗು
ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಹುಝೆಫಾ ಅಹ್ಮದಿ, ವಾರಣಾಸಿ ಆಸ್ತಿ ವಿಚಾರವಾಗಿ ಸಮೀಕ್ಷೆಗೆ ಸಂಬಂಧಿಸಿದಂತೆ ನಾವು ಅರ್ಜಿ ಸಲ್ಲಿಸಿದ್ದೇವೆ. ಇದು (ಜ್ಞಾನವಾಪಿ) ಅನಾದಿ ಕಾಲದಿಂದಲೂ ಮಸೀದಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಯಲಿದೆ.
ಗದಗ: ಒಂದೂವರೆ ವರ್ಷದ ಕಂದಮ್ಮನನ್ನು ಕೊಂದಿದ್ದ ಪಾಪಿ ತಂದೆಗೆ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ.ವಿ.ಪಾಟೀಲ್ ಅವರು ಆದೇಶ ಪ್ರಕಟಿಸಿದ್ದಾರೆ. ರೋಣ ತಾಲೂಕಿನ ಹುಲ್ಲೂರ ಗ್ರಾಮದ ಅಪರಾಧಿ ಪ್ರಶಾಂತಗೌಡ ಪಾಟೀಲ್ ಗೆ ಮರಣ ದಂಡನೆ ಶಿಕ್ಷೆ ನೀಡಲಾಗಿದೆ. ಅಪರಾಧಿ ಒಂದೂವರೆ ವರ್ಷದ ಹೆಣ್ಣು ಮಗುವನ್ನು ಕೊಲೆ ಮಾಡಿದ್ದಾನೆ.
ಅಪರಾಧಿ 2013 ರಲ್ಲಿ ಓರ್ವ ಮುಸ್ಲಿಂ ಮಹಿಳೆ ಪ್ರೀತಿಸಿ ಮದುವೆಯಾಗಿದ್ದ, ಕೆಲವು ತಿಂಗಳ ನಂತರ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡಿ ದೋಖಾ ಮಾಡಿದ್ದ. ನಿತ್ಯ ಕಿರುಕುಳದಿಂದ ನೊಂದ ಪತ್ನಿ ಮಹಿಳಾ ಸಾಂತ್ವನ ಕೇಂದ್ರ ಮೊರೆ ಹೋಗಿದ್ದಳು. ಈ ವೇಳೆ ಒಂದು ಹೆಣ್ಣು ಮಗು ಸಹ ಜನನವಾಗಿತ್ತು. ನಂತರ ಪತ್ನಿ ಕರೆಸಿ ಬುದ್ಧಿ ಹೇಳಿದ ಬಳಿಕ ಚೆನ್ನಾಗಿ ಜೀವನ ಮಾಡುವುದಾಗಿ ತಪ್ಪೊಪ್ಪಿಕೊಂಡಿದ್ದ.
ತಪ್ಪಿನ ಅರಿವಾದ ನಂತರ ರೋಣ ಪಟ್ಟಣದ ಸಿದ್ಧಾರೂಢ ಮಠದ ಬಳಿ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಕೆಲವು ತಿಂಗಳ ನಂತರ ಸಾಂತ್ವನ ಕೇಂದ್ರ ಕೇಸ್ ಹಿಂಪಡೆಯುವಂತೆ ಆಗಾಗ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಆಗ ನೊಂದ ಪತ್ನಿ ಮಗುವಿಗೆ ಜೀವನಾಂಶ ಬೇಡಿ ಕೋರ್ಟ್ ಮೊರೆ ಹೋಗಿದ್ದಳು. ಆಗ ಒಂದೂವರೆ ವರ್ಷದ ಮಗುವನ್ನು ಏಪ್ರಿಲ್ 6, 2015 ರಂದು ಕಿಡ್ನ್ಯಾಪ್ ಮಾಡಿ, ಗಜೇಂದ್ರಗಡದ ಕಾಲಕಾಲೇಶ್ವರ ಬೆಟ್ಟದಲ್ಲಿ ಕತ್ತುಹಿಸುಕಿ ಕೊಂದು ಸುಟ್ಟುಹಾಕಿ ಸಾಕ್ಷಿಗಳನ್ನು ಸಹ ನಾಶಮಾಡಿ ವಿಕೃತಿ ಮೆರೆದಿದ್ದ.
ನೊಂದ ಮಹಿಳೆ, ಗಂಡನ ಮೇಲೆ ಅನುಮಾನಗೊಂಡು ರೋಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ರೋಣ ಪೊಲೀಸರು ಪ್ರಕರಣ ಬೇಧಿಸಿದ ವೇಳೆ ಅಪರಾಧಿ ಪ್ರಶಾಂತಗೌಡ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಕೃತ್ಯ ಎಸಗಿರುವುದನ್ನು ಬಾಯ್ಬಿಟ್ಟಿದ್ದ. ಈ ಕುರಿತು ರೋಣ ಹಾಗೂ ಗಜೇಂದ್ರಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಂತರ ಅಪರಾಧ ಪ್ರಕರಣ ಸಾಬೀತಾದ ಹಿನ್ನೆಲೆ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರು ಅಪರಾಧಿಗೆ ಮರಣ ದಂಡನೆ ಶಿಕ್ಷೆ ನೀಡಿದ್ದಾರೆ. ಅಪರಾಧ ಎಸಗುವ ವ್ಯಕ್ತಿಗಳಿಗೆ ಇದು ಎಚ್ಚರಿಕೆ ಸಂದೇಶ ಎಂದು ಗದಗ ನ್ಯಾಯಾಲಯದ ಸರ್ಕಾರಿ ಅಭಿಯೋಜಕರು ಅಭಿಪ್ರಾಯಪಟ್ಟಿದ್ದಾರೆ.
ಶಿವಮೊಗ್ಗ: ಮಹಾಮಾರಿ ಕೊರೊನಾ ಎಲ್ಲೆಡೆ ವ್ಯಾಪಿಸುತ್ತಿದ್ದು, ಜನತೆ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೊರೊನಾ ವೈರಸ್ ನಾಶವಾಗಲಿ ಎಂದು ಮಂದಿರ, ಮಸೀದಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಗರದ ಕೋಟೆ ಮಾರಿಕಾಂಬ ದೇವಿಗೆ ಪೂಜೆ ಸಲ್ಲಿಸಿ, ನಂತರ ಕಾರ್ಯಕರ್ತರು 101 ಈಡುಗಾಯಿ ಒಡೆದರು. ಕೊರೊನಾ ಹರಡದಂತೆ ಮಾರಿಕಾಂಬೆ ದೇವಿಯಲ್ಲಿ ಪ್ರಾರ್ಥಿಸಿದರು. ಅಲ್ಲದೆ ಬಾಲರಾಜ್ ಅರಸು ರಸ್ತೆಯಲ್ಲಿನ ಹಜ್ರತ್ ಅಲಿ ಮಸೀದಿಯಲ್ಲಿ ಕಾರ್ಯಕರ್ತರು ಪ್ರಾರ್ಥನೆ ಸಲ್ಲಿಸಿದರು.
ಕೊರೊನಾ ವೈರಸ್ ಭೀತಿ ಹಿನ್ನೆಲೆ ನ್ಯಾಯಾಲಯದಲ್ಲಿಯೂ ತಪಾಸಣೆ ನಡೆಸಲಾಗುತ್ತಿದ್ದು, ಶಿವಮೊಗ್ಗದ ಜಿಲ್ಲಾ ನ್ಯಾಯಾಲಯದ ಸಿಬ್ಬಂದಿ, ವಕೀಲರು ಹಾಗೂ ಕಕ್ಷಿದಾರರನ್ನು ಕೊರೊನಾ ಪರೀಕ್ಷೆಗೆ ಒಳಪಡಿಲಾಗುತ್ತಿದೆ.
ವೈದ್ಯರು ನ್ಯಾಯಾಲಯದ ಆವರಣದಲ್ಲಿಯೇ ಪ್ರತಿಯೊಬ್ಬರಿಗೂ ತಪಾಸಣೆ ನಡೆಸುತ್ತಿದ್ದಾರೆ. ನೂರಾರು ಮಂದಿ ಸರತಿ ಸಾಲಿನಲ್ಲಿ ನಿಂತು ತಪಾಸಣೆ ನಂತರವೇ ನ್ಯಾಯಾಲಯಕ್ಕೆ ಪ್ರವೇಶಿಸುತ್ತಿದ್ದಾರೆ. ನ್ಯಾಯಾಲಯದ ಕಾರ್ಯ ಕಲಾಪಕ್ಕೆ ತಡವಾಗುತ್ತಿದ್ದರಿಂದ ವಕೀಲರು ಹಾಗೂ ಕಕ್ಷಿದಾರರು ಕೋರ್ಟ್ ಪ್ರವೇಶಿಸಲು ಹರಸಾಹಸಪಟ್ಟರು.
ರಾಮನಗರ: ದೇಶ ಬಿಟ್ಟು ಪರಾರಿಯಾಗಿರುವ ಅತ್ಯಾಚಾರ ಪ್ರಕರಣದ ಆರೋಪಿ, ಸ್ವಯಂ ಘೋಷಿತ ದೇವ ಮಾನವ ಬಿಡದಿಯ ನಿತ್ಯಾನಂದ ಧ್ಯಾನಪೀಠದ ನಿತ್ಯಾನಂದನಿಗೆ ರಾಮನಗರ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ. ಈ ಮೂಲಕ ನಿತ್ಯಾನಂದ ವಿಚಾರಣೆಗೆ ಹಾಜರಾಗುವ ಅವಶ್ಯಕತೆಯಿಲ್ಲ, ಗೈರಿನಲ್ಲೇ ವಿಚಾರಣೆ ನಡೆಸುವಂತೆ ಆದೇಶಿಸಿದೆ.
ನಿತ್ಯಾನಂದನ ವಿರುದ್ಧದ ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣದ ಹಿನ್ನೆಲೆಯಲ್ಲಿ ಸೋಮವಾರ ರಾಮನಗರದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಯಿತು. ಈ ವೇಳೆ ನಿತ್ಯಾನಂದನ ಪರ ವಕೀಲರಾದ ಸಿ.ವಿ ನಾಗೇಶ್ ಹಾಗೂ ಪ್ರಮೀಳಾ ನೇಸರ್ಗಿ ವಾದ ಮಂಡಿಸಿದ್ದಲ್ಲದೇ ಹೈಕೋರ್ಟಿನಿಂದ ತಂದಿರುವ ಆದೇಶದ ಲಕೋಟೆಯನ್ನು ನ್ಯಾಯಾಧೀಶರಿಗೆ ನೀಡಿದರು.
ನ್ಯಾಯಾಲಯದ ವಿಚಾರಣೆಗೆ ನಿತ್ಯಾನಂದ ಖುದ್ದು ಹಾಜರಾಗುವ ಅವಶ್ಯಕತೆ ಇಲ್ಲ. ನಿತ್ಯಾನಂದನ ಗೈರು ಹಾಜರಿಯಲ್ಲಿಯೇ ವಿಚಾರಣೆ ನಡೆಸಬಹುದು ಎಂದು ಹೈಕೋರ್ಟಿನ ಆದೇಶದಲ್ಲಿ ತಿಳಿಸಲಾಗಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಿಚಾರಣೆಗೆ ವಿನಾಯಿತಿ ನೀಡಿದ ರಾಮನಗರದ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ಧಲಿಂಗಪ್ರಭು ಆದೇಶ ನೀಡಿದರು. ಈ ಮೂಲಕ ಸದ್ಯಕ್ಕೆ ನಿತ್ಯಾನಂದನಿಗೆ ಕೋರ್ಟ್ ಗೆ ಹಾಜರಾಗುವ ವಿನಾಯಿತಿ ಸಿಕ್ಕಿದೆ.
ಇನ್ನೂ ವಿಚಾರಣೆಗೆ ಗೈರಾದರೂ ವಿಚಾರಣೆ ಮುಂದುವರಿಸುವಂತೆ ಆದೇಶ ನೀಡುವುದರ ಜೊತೆಗೆ ನಾಳೆಗೆ (ಡಿಸೆಂಬರ್ 10ಕ್ಕೆ) ವಿಚಾರಣೆಯನ್ನು ನ್ಯಾಯಾಧೀಶರು ಮುಂದೂಡಿದ್ದಾರೆ.
ಧಾರವಾಡ: ಧಾರವಾಡ ಜಿಲ್ಲಾ ನ್ಯಾಯಾಲಯದ ಲೋಕ ಅದಾಲತ್‍ನಲ್ಲಿ ಒಂದೇ ದಿನಕ್ಕೆ 1793 ಪ್ರಕರಣದ ರಾಜಿ ಸಂಧಾನ ಮಾಡಿಸುವ ಮೂಲಕ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸಲಾಗಿದೆ.
ಹಲವು ವರ್ಷಗಳಿಂದ ಜಿಲ್ಲೆಯ ಇತರ ನ್ಯಾಯಾಲಯಗಳಲ್ಲಿ ನಡೆದಿದ್ದ ಕೌಟುಂಬಿಕ, ಜಾಮೀನು ವ್ಯಾಜ್ಯ ಸೇರಿದಂತೆ ಹಲವು ಪ್ರಕರಣಗಳನ್ನು ಒಂದೇ ದಿನದಲ್ಲಿ ಇತ್ಯರ್ಥಪಡಿಸಲಾಗಿದೆ. ಒಟ್ಟು 38 ನ್ಯಾಯಾಧೀಶರು ಆಯಾ ನ್ಯಾಯಾಲಯದ ಆವರಣದಲ್ಲಿ 1793 ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.
ವಾಹನಗಳ ವ್ಯಾಜ್ಯ, ಬಾಕಿ ಕೊಡಬೇಕಾದ ಎಲ್ಲ ಪ್ರಕರಣಗಳನ್ನು ಸಹ ವಿಚಾರಣೆ ಮಾಡಿದ ನ್ಯಾಯಾಧೀಶರು, ರಾಜಿ ಮಾಡಿಸುವ ಮೂಲಕ 10 ಕೋಟಿ 33 ಲಕ್ಷದ ಚೆಕ್‍ಗಳನ್ನು ವಿತರಣೆ ಮಾಡಿದ್ದಾರೆ. ಈ ವ್ಯಾಜ್ಯಗಳು ಕಳೆದ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಇದ್ದವು. ಇಂದು ಕಕ್ಷಿದಾರರನ್ನು ಕರೆಸಿ ರಾಜಿ ಮಾಡಿಸಲಾಯಿತು.
ಇದೇ ಲೋಕ ಅದಾಲತ್‍ನಲ್ಲಿ ಕಳೆದ ಮೂರು ತಲೇಮಾರಿನಿಂದ ಆಸ್ತಿಗಾಗಿ ಉಳಿದಿದ್ದ ವ್ಯಾಜ್ಯವೊಂದನ್ನು ಇತ್ಯರ್ಥಪಡಿಸಲಾಯಿತು. ಜಿಲ್ಲೆಯ ಮನಗುಂಡಿ ಗ್ರಾಮದ ಶಾಂತವ್ವ ಅಂಗಡಿ ಅವರ ಜಮೀನಿನ ವಾಟ್ನಿ ಪ್ರಕರಣ ರಾಜಿ ಸಂಧಾನದಲ್ಲಿ ಮುಕ್ತಾಯಗೊಂಡಿದ್ದು ವಿಶೇಷವಾಗಿತ್ತು. ಪ್ರಕರಣದ ಕಕ್ಷಿದಾರರಾದ ಅಜ್ಜಿ, ಅಣ್ಣ-ತಮ್ಮಂದಿರು, ಮಕ್ಕಳು ಮತ್ತು ಮೊಮ್ಮಕ್ಕಳು ಇಂದಿನ ರಾಷ್ಟ್ರೀಯ ಲೋಕ್ ಅದಾಲತ್‍ದಲ್ಲಿ ಹಾಜರಾಗಿ ರಾಜಿ ಮಾಡಿಕೊಂಡರು.
ವಿಜಯಪುರ: ಹಾಡಹಗಲೇ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದ ಬೈಕ್‍ನ್ನು ಯುವಕನೊಬ್ಬ ಎಗರಿಸಿದ್ದಾನೆ. ಸ್ಥಳದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಯುವಕನ ಕೃತ್ಯ ಸೆರೆಯಾಗಿದೆ. ವಿಜಯಪುರ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಇದೇ ತಿಂಗಳ 10ರಂದು ಘಟನೆ ನಡೆದಿದೆ. ಬೈಕ್ ಕಳ್ಳತನ ಮಾಡಿದ ಯುವಕ ಸ್ಥಳದಿಂದ ಗಾಂಭಿರ್ಯವಾಗಿಯೇ ಪರಾರಿಯಾಗಿದ್ದಾನೆ.
ಘಟನೆ ವಿವರ:
ನ್ಯಾಯಾಲಯದ ಆವರಣದಲ್ಲಿ ಸಾಲಾಗಿ ನಿಂತಿದ್ದ ಬೈಕ್‍ಗಳ ಬಳಿ ಬಂದ ಯುವಕನೊಬ್ಬ ಅನುಮಾನ ಬಾರದಂತೆ ನಿಂತಿರುತ್ತಾನೆ. ಬಳಿಕ ಅಲ್ಲಿಯೇ ಒಂದು ಬೈಕ್‍ಗೆ ತನ್ನ ಬಳಿ ಇರುವ ಕೀ ಹಾಕಿ ನೋಡುತ್ತಾನೆ. ಕೀ ಬರುತ್ತದೆ ಎನ್ನವುದನ್ನು ಖಚಿತ ಪಡೆಸಿಕೊಂಡು, ತನ್ನದೇ ಎನ್ನುವಂತೆ ಹೊರ ತೆಗೆಯುತ್ತಾನೆ. ಸುತ್ತಮುತ್ತ ನೋಡಿ, ಭಯದಿಂದಲೇ ಬೈಕ್ ಪ್ರಾರಂಭಿಸಿ ಅಲ್ಲಿಂದ ಕಾಲ್ಕಿಳ್ಳುತ್ತಾನೆ.
ಭೀಮಾತೀರದ ಹಂತಕ ಬಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ ಬಳಿಕ ನ್ಯಾಯಾಲಯ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಇದರಿಂದ ಕಳ್ಳನ ಕೈಚಳಕದ ದೃಶ್ಯಗಳು ಸಿಕ್ಕಿವೆ. ಆದರೆ ನ್ಯಾಯಾಲಯ ಕೂಡ ಸುರಕ್ಷಿತವಾಗಿಲ್ಲ ಅಂತಾ ಸಾರ್ವಜನಿಕರು ಪೊಲೀಸರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಬಾಲಕನ ಹಿಂದೆ ದೊಡ್ಡ ತಂಡವೇ ಇದೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.