Tag: district collector

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ನಂದಿಬೆಟ್ಟದಲ್ಲಿ ಮತ್ತೆ ಲಾಕ್ ಡೌನ್

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ನಂದಿಬೆಟ್ಟದಲ್ಲಿ ಮತ್ತೆ ಲಾಕ್ ಡೌನ್

    ಚಿಕ್ಕಬಳ್ಳಾಪುರ: ಕೊರೊನಾ ಆತಂಕ ಹಾಗೂ ಕೊರೊನಾ ಸೋಂಕು ನಿಯಂತ್ರಣ ಮಾಡುವ ಸಲುವಾಗಿ ಜಿಲ್ಲೆಯ ವಿಶ್ವವಿಖ್ಯಾತ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮವನ್ನ ಮತ್ತೆ ಲಾಕ್ ಡೌನ್ ಮಾಡಿರುವುದಾಗಿ ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್ ಆದೇಶ ಹೊರಡಿಸಿದ್ದಾರೆ.

     ಅನ್ ಲಾಕ್ ಆಗಿದ್ದ ಕಳೆದ ವೀಕೆಂಡ್ ನಲ್ಲಿ ಸಾವಿರಾರು ಮಂದಿ ಪ್ರವಾಸಿಗರು ನಂದಿಗಿರಿಧಾಮಕ್ಕೆ ಆಗಮಿಸಿದ್ದರು. ಸಾವಿರಾರು ವಾಹನಗಳ ಆಗಮನದ ಹಿನ್ನೆಲೆ ಸಂಚಾರ ದಟ್ಟಣೆ ಹಾಗೂ ಪ್ರಮುಖವಾಗಿ ಕೊರೊನಾ ನಿಯಮಗಳ ಪಾಲನೆ ಮಾಡದೇ ಬಹುತೇಕ ಪ್ರವಾಸಿಗರು ನಿರ್ಲಕ್ಷ್ಯ ವಹಿಸಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್ ಕುಮಾರ್ ಜಿಲ್ಲಾಡಳಿತಕ್ಕೆ ನಂದಿಬೆಟ್ಟದಲ್ಲಿ ಪ್ರವಾಸಿಗರ ಆಗಮನ ಹೆಚ್ಚಾಗಿದ್ದು, ಸಿಬ್ಬಂದಿ ನಿಯೋಜನೆ ಮಾಡಿದ್ದರೂ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಕೋವಿಡ್ ನಿಯಮಗಳ ಪಾಲನೆ ಮಾಡಲಾಗುತ್ತಿಲ್ಲ. ಹೀಗಾಗಿ ಪ್ರವಾಸಿಗರಿಗೆ ನಿಬಂಧನೆಗಳನ್ನು ವಿಧಿಸಿದರೆ ಸೋಂಕು ನಿಯಂತ್ರಣಕ್ಕೆ ಅನೂಕುಲಕರವಾಗಿರುತ್ತದೆ ಎಂಬುದಾಗಿ ಕೋರಿಕೊಂಡಿದ್ದರು.

    ಈ ಕೋರಿಕೆ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆರೋಗ್ಯ ಸಚಿವ ಸುಧಾಕರ್ ಜೊತೆ ಚರ್ಚಿಸಿ, ನಂದಿಗಿರಿಧಾಮದಲ್ಲಿ ಜನಸಂದಣಿ ತಡೆಯುವುದು ಅತ್ಯವಶ್ಯಕವಾಗಿದೆ ಎಂದು ಮನಗಂಡು, ವೀಕೆಂಡ್ ಶನಿವಾರ-ಭಾನುವಾರ ಕಂಪ್ಲೀಟ್ ಆಗಿ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿಬರ್ಂಧಿಸಿ ಅಪರ ಜಿಲ್ಲಾಧಿಕಾರಿ ಎಚ್ ಅಮರೇಶ್ ಆದೇಶ ಹೊರಡಿಸಿದ್ದಾರೆ. ಮುಂದಿನ ಆದೇಶದವರೆಗೂ ಈ ಆದೇಶ ಜಾರಿಯಲ್ಲಿರಲಿದೆ. ಶುಕ್ರವಾರ ಸಂಜೆ 6 ಗಂಟೆಗೆ ನಂದಿಬೆಟ್ಟದ ಬಾಗಿಲು ಬಂದ್ ಆಗಲಿದ್ದು, ಮರಳಿ ಸೋಮವಾರ ಎಂದಿನಂತೆ 6 ಗಂಟೆಗೆ ತೆರೆಯಲಿದೆ. ಇದನ್ನೂ ಓದಿ:1023 ಕಾರು, 425 ಬೈಕ್, 46 ಮಿನಿ ಬಸ್- ಮುಳ್ಳಯ್ಯನಗಿರಿಯಲ್ಲಿ ಫುಲ್ ಟ್ರಾಫಿಕ್ ಜಾಮ್

  • ಮಹಾರಾಷ್ಟ್ರದಿಂದ ರಾಯಚೂರಿಗೆ ಡೆಲ್ಟಾ ಆತಂಕ – ರೈಲು ನಿಲ್ದಾಣದಲ್ಲಿ ತೀವ್ರ ತಪಾಸಣೆ

    ಮಹಾರಾಷ್ಟ್ರದಿಂದ ರಾಯಚೂರಿಗೆ ಡೆಲ್ಟಾ ಆತಂಕ – ರೈಲು ನಿಲ್ದಾಣದಲ್ಲಿ ತೀವ್ರ ತಪಾಸಣೆ

    ರಾಯಚೂರು: ಡೆಲ್ಟಾ ಆತಂಕ ಹಿನ್ನೆಲೆಯಲ್ಲಿ ನಗರದ ರೈಲ್ವೇ ನಿಲ್ದಾಣದಲ್ಲಿ ಅಧಿಕಾರಿಗಳು ಕೊರೊನಾ ತಪಾಸಣೆಗೆ ಮುಂದಾಗಿದ್ದಾರೆ.

    ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಪ್ರಯಾಣಿಕರ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಆದೇಶಕ್ಕೆ ಕೊನೆಗೂ ಎಚ್ಚೆತ್ತು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡುತ್ತಿದ್ದಾರೆ.

    72 ಗಂಟೆಯೊಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ತಪಾಸಣೆಯಿಂದ ವಿನಾಯಿತಿಯಿದೆ. ನೆಗೆಟಿವ್ ವರದಿ ಇರದ ಎಲ್ಲಾ ಪ್ರಯಾಣಿಕರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ರೈಲ್ವೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ ಮುಗಿಬಿದ್ದು ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟದಿಂದ ಬರುವ ರೈಲ್ವೆ ಪ್ರಯಾಣಿಕರನ್ನ ಮಾತ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆರ್‌ಟಿಪಿಸಿಆರ್ ನೆಗೆಟಿವ್ ವರದಿ, 1 ಲಸಿಕೆ ಪಡೆದ ದಾಖಲೆ ಪರಿಶೀಲನೆ ಮಾಡಿ ಪ್ರಯಾಣಿಕರನ್ನ ಜಿಲ್ಲೆಯ ಒಳಗೆ ಬಿಡಲಾಗುತ್ತಿದೆ. ಇದನ್ನೂ ಓದಿ: ಫಿಲಿಪೈನ್ಸ್ ಮಿಲಿಟರಿ ವಿಮಾನ ದುರಂತ – 29 ಜನ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

  • ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ತಡೆ ನೀಡಿಲ್ಲ: ಮಡಿಕೇರಿ ಡಿಸಿ

    ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ತಡೆ ನೀಡಿಲ್ಲ: ಮಡಿಕೇರಿ ಡಿಸಿ

    ಮಡಿಕೇರಿ: ಕೊಡಗಿನ ಜನರ ಅಚಾರ, ವಿಚಾರ, ಪದ್ಧತಿ, ಧಾರ್ಮಿಕ ಅಚರಣೆಗಳಿಗೆ ಕೊಡಗಿನ ತಲಕಾವೇರಿಯ ಭಾಗಮಂಡಲದ ಭಂಗಡೇಶ್ವರ ದೇವಾಲಯ ಪ್ರಸಿದ್ಧ. ಅದರಲ್ಲೂ ಸತ್ತವರ ಪಿಂಡ ಪ್ರದಾನವನ್ನು ಭಾಗಮಂಡಲ ಸಮೀಪದ ತ್ರಿವೇಣಿ ಸಂಗಮದಲ್ಲಿ ಮಾಡುವುದು ವಾಡಿಕೆ. ಆದರೆ ಕೋವಿಡ್ ಬಳಿಕ ಜನರಲ್ಲಿ ಗೊಂದಲ ಉಂಟಾಗಿತ್ತು. ಇದಕ್ಕೆ ಸ್ವತಃ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸ್ಪಷ್ಟನೆ ನೀಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಅಸ್ಥಿ ಬಿಡಲು ತಡೆ ನೀಡಿಲ್ಲ ಎಂದಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ಇದುವರೆಗೆ ಯಾವುದೇ ತಡೆ ನೀಡಿಲ್ಲ. ಜನ ಗೊಂದಲಕ್ಕೊಳಗಾಗಬಾರದು ಎಂದು ದೇವಾಲಯ ಸಮಿತಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ. ಲಾಕ್‍ಡೌನ್ ಇರುವುದರಿಂದ ಐದು ಜನ ಮೀರದಂತೆ ಪಿಂಡ ಪ್ರದಾನ ಮಾಡಲು ನಿಯಮ ಜಾರಿಯಲ್ಲಿ ಇದೆ. ದೇವಾಲಯ ಸಮಿತಿಯ ಪೂರ್ವಾನುಮತಿ ಪಡೆದು ಪಿಂಡ ಪ್ರದಾನ ಮಾಡಬಹುದು. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಪಿಂಡ ಪ್ರದಾನ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಲಾಕ್‍ಡೌನ್ ಮುಂದುವರಿಕೆ – ಅಗತ್ಯ ವಸ್ತುಗಳ ಖರೀದಿಗೆ ಸಡಿಲಿಕೆ

    ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಮಾಡಿದರೆ ಮೋಕ್ಷ ಲಭಿಸುವ ನಂಬಿಕೆ ಕೊಡಗಿನ ಜನರದ್ದಾಗಿದೆ. ಅಲ್ಲದೆ ತಲಾಂತರಗಳಿಂದ ತ್ರಿವೇಣಿ ಸಂಗಮದಲ್ಲೇ ಪಿಂಡ ಪ್ರದಾನ ಮಾಡುತ್ತ ಬಂದಿದ್ದಾರೆ. ಹೀಗಾಗಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶ ನೀಡುವಂತೆ ಒಂದೂವರೆ ವರ್ಷದಿಂದ ಜನ ಮನವಿ ಮಾಡುತ್ತಿದ್ದರು. ಈ ಕುರಿತು ಇದೀಗ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

    ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಪಿಂಡ ಪ್ರದಾನಕ್ಕೆ ಸರಿಯಾದ ಮಾರ್ಗಸೂಚಿ ಇಲ್ಲದ ಕಾರಣ ಇಲ್ಲಿನ ಜನರು ಜಿಲ್ಲೆಯ ವಿವಿಧೆಡೆ ಎಲ್ಲೆಲ್ಲೂ ಹೋಗಿ ಪಿಂಡ ಪ್ರದಾನ ಮಾಡಿ ಬರುತ್ತಿದ್ದಾರೆ. ಮನೆಯಲ್ಲಿ ಯಾರದ್ರೂ ಹಿರಿಯರು ಸತ್ತರೆ ಪಿಂಡ ಪ್ರದಾನ ಮಾಡದೆ ಮೃತರ ಮನೆಯವರು ಮನೆಯಿಂದ ಹೊರಗೆ ಹೋಗುವಂತಿಲ್ಲ ಇದು ಕೊಡಗಿನವರ ಪರಂಪರಾಗತ ಆಚರಣೆಯಾಗಿದೆ. ಹೀಗಾಗಿ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗಿತ್ತು.

  • ವ್ಯಾಕ್ಸಿನ್ ಪಡೆಯದ ಆಟೋ ಚಾಲಕರು ಆಟೋವನ್ನು ರಸ್ತೆಗಿಳಿಸುವಂತಿಲ್ಲ: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

    ವ್ಯಾಕ್ಸಿನ್ ಪಡೆಯದ ಆಟೋ ಚಾಲಕರು ಆಟೋವನ್ನು ರಸ್ತೆಗಿಳಿಸುವಂತಿಲ್ಲ: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

    ವಿಜಯಪುರ: ವ್ಯಾಕ್ಸಿನ್ ಹಾಕಿಸಿಕೊಳ್ಳದ ಆಟೋ ಚಾಲಕರು ಆಟೋಗಳನ್ನ ರಸ್ತೆಗೆ ಇಳಿಸುವ ಹಾಗಿಲ್ಲ. ಇನ್ನು ಈವರೆಗೂ ವ್ಯಾಕ್ಸಿನ್ ಪಡೆಯದ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುವ ಹಾಗಿಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ ಸುನೀಲ್‍ಕುಮಾರ್ ಖಡಕ್ ನಿರ್ಧಾರಕ್ಕೆ ಮುಂದಾಗಿದ್ದಾರೆ.

    ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಎಷ್ಟೇ ಹೇಳಿದರೂ, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ಕಟ್ಟಡ ಕಾರ್ಮಿಕರು ಕೇಳುತ್ತಿಲ್ಲ. ನಾವು ಆರೋಗ್ಯವಾಗಿದ್ದೀವಿ ವ್ಯಾಕ್ಸಿನ್ ಯಾಕೆ ಎಂದು ಹೇಳುತ್ತಿದ್ದಾರೆ.

    ಹೀಗಾಗಿ ಗರಂ ಆಗಿರುವ ಡಿಸಿ ಸುನೀಲ್‍ಕುಮಾರ್, ವ್ಯಾಕ್ಸಿನ್ ಹಾಕಿಸಿಕೊಂಡರೇ ಮಾತ್ರ ಆಟೋ ಓಡಿಸಬೇಕು. ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡಬಹುದು. ಇಲ್ಲದಿದ್ದರೆ ಪಾಲಿಕೆ ವ್ಯಾಕ್ಸಿನ್ ಹಾಕಿಸಿಕೊಳ್ಳದವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಲೇ ಬಾರದು ಎಂದು ಆದೇಶಿಸಿದ್ದಾರೆ.

    ವಿಜಯಪುರದಲ್ಲಿ 6 ಸಾವಿರದಷ್ಟು ಬೀದಿಬದಿ ವ್ಯಾಪಾರಿಗಳಿದ್ದಾರೆ, ಆದರೆ, ಅರ್ಧದಷ್ಟು ಜನರು ಕೂಡ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ. 75 ಸಾವಿರ ಕಟ್ಟಡ ಕಾರ್ಮಿಕರಿದ್ದು, ಅವರು ಕೂಡ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ ಎಂದು ಡಿಸಿ ಸುನೀಲ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಕೋಟೆನಾಡಲ್ಲಿ ಬಂದ್ ಆಗಿದ್ದ ಪ್ರವಾಸಿ ತಾಣಗಳು ಓಪನ್

  • ಹಾವೇರಿಯ ಶ್ರೀ ಬ್ರಹ್ಮಲಿಂಗೇಶ್ವರ ಜಾತ್ರೆ ನಿಷೇಧ – ಜಿಲ್ಲಾಧಿಕಾರಿಗಳ ಆದೇಶ

    ಹಾವೇರಿಯ ಶ್ರೀ ಬ್ರಹ್ಮಲಿಂಗೇಶ್ವರ ಜಾತ್ರೆ ನಿಷೇಧ – ಜಿಲ್ಲಾಧಿಕಾರಿಗಳ ಆದೇಶ

    ಹಾವೇರಿ: ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಐತಿಹಾಸಿಕ ಶ್ರೀ ಬ್ರಹ್ಮಲಿಂಗೇಶ್ವರ ಜಾತ್ರೆಯನ್ನು ನಿಷೇಧಿಸುವಂತೆ ಹಾವೇರಿ ಜಿಲ್ಲಾಧಿಕಾರಿ ಶ್ರೀಯುತ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಒಳ್ಳೆಯದಾಗಲಿ ನಿಮಗೆ ಮತ್ತಷ್ಟು ಶಕ್ತಿ ಬರಲಿ – ಅಶೋಕ್‍ಗೆ ಪರಮೇಶ್ವರ್ ಹಾರೈಕೆ

    ಕೋವಿಡ್-19 ಎರಡನೇ ಅಲೆ ಸಾಂಕ್ರಾಮಿಕ ರೋಗದ ನಿಯಂತ್ರಣದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ ಇದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳಿಂದ ಆದೇಶ ಹೊರಡಿಸಲಾಗಿದೆ.

    ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಜಾತ್ರೆಯೂ ಜೂನ್ 29 ರಿಂದ ಜುಲೈ 1ರವರೆಗೆ ನಡೆಯುತ್ತಿತ್ತು. ಆದರೆ ಈ ಆದೇಶದಿಂದ ರೈತರಿಗೆ ನಿರಾಸೆಯುಂಟಾಗಿದೆ. ಜಾತ್ರೆಯ ಮೂರನೇಯ ದಿನ ಎತ್ತುಗಳನ್ನು ಅಲಂಕಾರಗೊಳಿಸಿ ಬಹಳ ವಿಜೃಂಭಣೆಯಿಂದ ಬಂಡಿಗೆ ಕಟ್ಟಿ ಓಡಿಸಲಾಗುತ್ತದೆ. ಸುತ್ತಮುತ್ತಲಿನ ಹತ್ತಾರೂ ಹಳ್ಳಿಗಳಿಂದ ಸಾವಿರಾರು ರೈತ ಬಾಂಧವರು ಸೇರುವುದರಿಂದ ಕೋವಿಡ್ ಮಾರ್ಗಸೂಚಿ ಅನುಸಾರ ಹಾವೇರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಪ್ರವಾಹದಿಂದ ನೀರು ವ್ಯರ್ಥವಾಗುವುದನ್ನು ತಡೆದು, 35 ಕೆರೆ ತುಂಬಿಸಲು ಯಾದಗಿರಿ ಜಿಲ್ಲಾಡಳಿತ ಪ್ಲಾನ್

  • ಮದುವೆ ಸಮಾರಂಭಕ್ಕೆ ಅವಕಾಶ ಕಲ್ಪಿಸಿ ಆದೇಶ ಮಾಡಿದ ಜಿಲ್ಲಾಧಿಕಾರಿ

    ಮದುವೆ ಸಮಾರಂಭಕ್ಕೆ ಅವಕಾಶ ಕಲ್ಪಿಸಿ ಆದೇಶ ಮಾಡಿದ ಜಿಲ್ಲಾಧಿಕಾರಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್‍ರವರು ಜಿಲ್ಲೆಯಲ್ಲಿ ಲಾಕ್‍ಡೌನ್ ಸಡಿಲಿಕೆಯಲ್ಲಿ ಕೆಲವು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

    ಈ ಆದೇಶದಲ್ಲಿ ಜಿಲ್ಲೆಯಲ್ಲಿ ಮದುವೆ ಸಮಾರಂಭಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಮನೆಯಲ್ಲಿ 20 ಜನರಿಗೆ ಮೀರದಂತೆ ಸ್ಥಳೀಯ ಆಡಳಿತದ ಅನುಮತಿ ಪಡೆದು ನಡೆಸಬಹುದಾಗಿದೆ.

    ಜಿಲ್ಲೆಯಲ್ಲಿ ಯಾವುದೇ ಪ್ರದೇಶದಲ್ಲಿ ಹತ್ತಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾದಲ್ಲಿ ಇಂತಹ ಪ್ರದೇಶವನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಿ ಈ ಪ್ರದೇಶವನ್ನು ಸಂಪೂರ್ಣ ಲಾಕ್‍ಡೌನ್ ಮಾಡಲು ಆದೇಶಿಸಲಾಗಿದೆ. ಉಳಿದಂತೆ ರಾಜ್ಯ ಹೊರಡಿಸಿದ ಅನ್‍ಲಾಕ್ ನಿಯಮದಂತೆ ಜಿಲ್ಲೆಯಲ್ಲಿ ನಿಯಮಗಳು ಜಾರಿ ಇರಲಿದೆ.

    ವೀಕೆಂಡ್ ಲಾಕ್‍ಡೌನ್ ನಲ್ಲಿ ಸಹ ಬಸ್ ಸಂಚಾರ: ಜಿಲ್ಲೆಯಲ್ಲಿ ನಾಳೆಯಿಂದ ಆರು ಘಂಟೆಗೆ ಎಂದಿನಂತೆ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಂತರ್ ಜಿಲ್ಲಾ ಸಂಚಾರದಲ್ಲಿ ಪ್ರಯಾಣಿಕರ ಸಾಂದ್ರತೆಗನುಗುಣವಾಗಿ ಬಸ್ ಗಳನ್ನು ಬಿಡಲು ಸೂಚಿಸಲಾಗಿದ್ದು, ಮೂರು ಜನ ಕೂರುವ ಸೀಟ್ ನಲ್ಲಿ ಕೇವಲ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಕರೊನಾ ನಿಯಮ ಪಾಲಿಸಿ ಪ್ರಯಾಣಿಕರು ಪ್ರಯಾಣಿಸಬೇಕಿದೆ.

    ಹೊರ ಜಿಲ್ಲೆಗಳಿಗೂ ಬಸ್ ಸಂಚಾರ ಮಾಡಲಿದ್ದು, ಲಾಕ್‍ಡೌನ್ ಇರುವ ಜಿಲ್ಲೆಗಳಲ್ಲಿ ಸಂಚಾರ ನಿಬರ್ಂಧಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 133 ಜನರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದ್ದು, ನಾಲ್ಕು ಜನ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ 1,358 ಸಕ್ರಿಯ ಪ್ರಕರಣವಿದೆ. ಇದನ್ನೂ ಓದಿ: ಮಂಗಳೂರಿನ ಕುಪ್ಪೆಪದವಿನಲ್ಲಿ ಗುಡ್ಡ ಕುಸಿತ- ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ

  • ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ

    ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ

    ವಿಜಯಪುರ: ವಿಜಯಪುರದ ಮದಬಾವಿ-ಬುರನಾಪೂರ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮೊದಲನೇ ಹಂತದ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಪರಿಶೀಲನೆ ನಡೆಸಿದರು.

    ವಿಜಯಪುರ ನಗರದ ವಿಮಾನ ನಿಲ್ದಾಣದ ಮೊದಲನೇ ಹಂತದಲ್ಲಿ 95.00 ಕೋಟಿ ರೂ. ಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಉತ್ತಮ ದರ್ಜೆಯಲ್ಲಿ ಯಾವುದೇ ಲೋಪವಾಗದೇ ವ್ಯವಸ್ಥಿತವಾಗಿ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.

    ವಿಮಾನ ನಿಲ್ದಾಣದ ರನ್ ವೇ ಉದ್ದವು ಒಟ್ಟು 2,650 ಮೀಟರ ಉದ್ದವಿದ್ದು, 280 ಮೀಟರ ಅಗಲವಿರುತ್ತದೆ. ಅದರಲ್ಲಿ 1,800 ಮೀಟರ ಉದ್ದ 280 ಮೀಟರ್ ಅಗಲಕ್ಕೆ ಫಾರಮೇಶನ್ ಕೆಲಸ ಪ್ರಗತಿಯಲ್ಲಿರುವ ಬಗ್ಗೆ ಪರಿಶೀಲನೆ ನಡೆಸಿದರು. ಹಾಗೆಯೇ ಟ್ಯಾಕ್ಸಿ ವೇ ಉದ್ದವು ಒಟ್ಟು 190.50 ಮೀಟರ್ ಉದ್ದವಿದ್ದು, 26.00 ಮೀಟರ್ ಅಗಲವಿದ್ದು ಮೇಶನ್ ಕೆಲಸ ಪೂರ್ಣಗೊಂಡಿರುತ್ತದೆ. 170×104 ಮೀಟರ್ ಅಳತೆಯ ಏಪ್ರಾನ್ ಕೆಲಸವು ಪ್ರಗತಿಯಲ್ಲಿದ್ದು, ಆಯಸೊಲೇಶನ್‍ಬೇ ಉದ್ದವು ಒಟ್ಟು 190.50 ಮೀಟರ್ ಉದ್ದವಿದ್ದು, 26.00 ಮೀಟರ ಅಗಲವಿದ್ದು ಫಾರಮೇಶನ್ ಕೆಲಸ ಪೂರ್ಣಗೊಂಡಿರುವ ಬಗ್ಗೆ ವೀಕ್ಷಣೆ ನಡೆಸಿದರು. ಇದನ್ನು ಓದಿ: ರಾಜ್ಯಕ್ಕೆ ತಕ್ಷಣ 50 ಸಾವಿರ ಆಂಫೋಟೆರಿಸಿನ್ ಬಿ ಪೂರೈಸಿ: ಈಶ್ವರ್ ಖಂಡ್ರೆ

    ಫೆರಿಫೆರಲ್ ರಸ್ತೆಯ ಉದ್ದವು ಒಟ್ಟು 8,598 ಮೀಟರ ಉದ್ದವಿದ್ದು, 3.75 ಮೀಟರ ಅಗಲ ಹಾಗೂ ಎರಡು ಬದಿಗಳಲ್ಲಿ 2 ಮೀಟರ್ ಅಗಲಕ್ಕೆ ಶೋಲ್ಡರ್ ಅಳವಡಿಸಲಾಗಿದೆ. ಅದರಲ್ಲಿ 6,000 ಮೀಟರ್ ಉದ್ದಕ್ಕೆ ಫಾರಮೇಶನ್ ಕೆಲಸ ಪೂರ್ಣಗೊಂಡಿದ್ದು, ಬಾಕಿ ಕೆಲಸ ಪ್ರಗತಿಯಲ್ಲಿರುತ್ತದೆ.

    ಅದರಂತೆ 1,350 ಮೀಟರ್, ಬಾಕ್ಷ ಕಲ್ವರ್ಟ್ ಉದ್ದವು 300 ಮೀಟರ್ (2.50 x 2 50ಮೀ) ಇದ್ದು, ಅದರಲ್ಲಿ 300 ಮೀಟರ್ ಉದ್ದಕ್ಕೆ ಕೆಳಗಡೆಯ ಕಾಮಗಾರಿಯು ಮುಗಿದಿದ್ದು ಎರಡು ಬದಿಗಳ ಗೋಡೆಗಳನ್ನು 1.50 ಮೀಟರ್ ಎತ್ತರಕ್ಕೆ 250 ಮೀಟರ್ ಉದ್ದದ ಕಾಮಗಾರಿಯು ಸರಳು ಸಹಿತ ಮುಗಿದಿದ್ದು ಬಾಕಿ ಕೆಲಸ ಪ್ರಗತಿಯಲ್ಲಿರುತ್ತದೆ. ಇದನ್ನು ಓದಿ: ಸಂಪುಟದಲ್ಲಿ ಮುನಿರತ್ನಗೆ ಅವಕಾಶ ಸಿಗುತ್ತೆ: ಡಾ.ಸಿ.ಎನ್.ಅಶ್ವತ್ಥನಾರಾಯಣ

    ಚತುಷ್ಪಥ ರಸ್ತೆ ಒಟ್ಟು 715 ಮೀಟರ ಉದ್ದವಿದ್ದು ಅದರಲ್ಲಿ 715 ಮೀಟರ ಉದ್ದ 25 ಮೀಟರ್ ಅಗಲಕ್ಕೆ ಫಾರಮೇಶನ್ ಕೆಲಸ ಪೂರ್ಣಗೊಂಡಿದ್ದು, 1,568 ಮೀಟರ್ ಉದ್ದದ ದ್ವೀಪಥದ ಲೂಪ ರಸ್ತೆಯಿದ್ದು, ಅದರಲ್ಲಿ 1,500 ಮೀಟರ್ ಉದ್ದ 15.00 ಮೀಟರ್ ಅಗಲಕ್ಕೆ ಫಾರಮೇಶನ್ ಕೆಲಸ ಮುಗಿದಿರುತ್ತದೆ.

    4,892 ಮೀಟರ ಉದ್ದದ ಒಳ ರಸ್ತೆಗಳಿದ್ದು 2,462 ಮೀಟರ್ ಫಾರಮೇಶನ್ ಕೆಲಸ ಮುಕ್ತಾಯಗೊಂಡಿದ್ದು ಹಾಗೂ ಬಾಕಿ ಕೆಲಸ ಪ್ರಗತಿ ಹಂತದಲ್ಲಿದೆಯೆಂದು ಸಂಬಂಧಿಸಿದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದನ್ನು ಓದಿ: ಆಶಾ ಕಾರ್ಯಕರ್ತೆ ಮೇಲೆ ಅಂಗಡಿ ಮಾಲೀಕನಿಂದ ಹಲ್ಲೆ

    ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಪ್ರಶಾಂತ್ ಗಿಡದಾಣಪ್ಪಗೋಳ, ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಶ್ರೀ ಎಸ್.ಬಿ. ಪಾಟೀಲ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮುಜುಮದಾರ್, ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

  • ಎಲ್ಲ ಜನರಿಗೆ ಲಸಿಕೆ – ಬೀದರ್ ಜಿಲ್ಲೆಯ ಗ್ರಾಮ ಈಗ ರಾಜಕ್ಕೆ ಮಾದರಿ

    ಎಲ್ಲ ಜನರಿಗೆ ಲಸಿಕೆ – ಬೀದರ್ ಜಿಲ್ಲೆಯ ಗ್ರಾಮ ಈಗ ರಾಜಕ್ಕೆ ಮಾದರಿ

    ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಉಚ್ಛಾ ಗ್ರಾಮದ ಜನರು ನೂರಕ್ಕೆ ನೂರು ಲಸಿಕೆ ಪಡೆಯುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ.

    ಆರಂಭದಲ್ಲಿ ಲಸಿಕೆ ಪಡೆದರೆ ಅಡ್ಡಪರಿಣಾಮಗಳು ಆಗುತ್ತವೆ ವದಂತಿ ಹರಡಿದ್ದರೂ ಜನ ಈ ಸುಳ್ಳು ವದಂತಿಯನ್ನು ನಂಬದ ಕಾರಣ 45 ವರ್ಷ ಮೇಲ್ಪಟ್ಟ ಎಲ್ಲ ಜನ ಲಸಿಕೆ ಹಾಕಿದ್ದಾರೆ. ಈ ಗ್ರಾಮದ ಒಟ್ಟು 2,473 ಜನರು ಲಸಿಕೆ ಪಡೆಯುವ ಮೂಲಕ ರಾಜ್ಯಕ್ಕೆ ಮಾದರಿ ಗ್ರಾಮವಾಗಿ ಹೊರಹೊಮ್ಮಿದೆ.

    45 ವರ್ಷ ಮೇಲ್ಪಟ್ಟ 1,054 ಮಂದಿ, 18 ದಿಂದ 44 ವರ್ಷದ ಒಳಗಿನ ವಿಶೇಷ ಚೇತನರು, ವ್ಯಾಪಾರಿಗಳು ಸೇರಿದಂತೆ 589 ಜನ ಲಸಿಕೆ ಪಡೆದಿದ್ದಾರೆ. ಇದರ ಜೊತೆಗೆ 60 ವರ್ಷ ಮೇಲ್ಪಟ್ಟ 758 ವಯೋವೃದ್ಧರಿಗೂ ಮತ್ತು 71 ಜನ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದವರಿಗೂ ಲಸಿಕೆ ನೀಡಲಾಗಿದೆ. ಯಾವುದೇ ವದಂತಿಗಳಿಗೆ ಕಿವಿಗೊಡದೆ ಗ್ರಾಮಸ್ಥರು ಎಲ್ಲರು ಲಸಿಕೆ ಸ್ವೀಕರಿಸಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ.

    ಹಲವು ತಿಂಗಳಿಂದ ಬಸವಕಲ್ಯಾಣ ಸಹಾಯಕ ಆಯುಕ್ತರಾದ ಭುವನೇಶ್ ಪಾಟೀಲ್, ತಹಸೀಲ್ದಾರ್, ಸ್ಥಳೀಯ ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ಹಲವು ಬಾರಿಗೆ ಭೇಟಿ ನೀಡಿ ಜನರಲ್ಲಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸ್ಥಳೀಯ ಸಿಬ್ಬಂದಿ ಕೂಡಾ ಹಗಲಿ ಇರುಳು ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ ಶ್ರಮಿಸಿದ್ದರಿಂದ ಈ ಸಾಧನೆ ನಿರ್ಮಾಣವಾಗಿದೆ. ಇದನ್ನು ಓದಿ:ಬೆಂಗಳೂರಿನ ಸ್ಮಶಾನಗಳಲ್ಲಿರುವ ಅನಾಥ ಅಸ್ಥಿಗಳಿಗೆ ಇಂದು ಮಂಡ್ಯದಲ್ಲಿ ಮೋಕ್ಷ

    ಸ್ಥಳೀಯ ಶಾಸಕರಾದ ಈಶ್ವರ್ ಖಂಡ್ರೆ ಕೂಡಾ ಗ್ರಾಮದ ಜನರಲ್ಲಿ ಆತ್ಮಸ್ಥೈರ್ಯ ಮೂಡಿಸಿ ಲಸಿಕೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸತತ ಪರಿಶ್ರಮದಿಂದಾಗಿ ಇಂದು ಈ ಗ್ರಾಮ ಸಂಪೂರ್ಣವಾಗಿ ಲಸಿಕೆ ಪಡೆಯುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ.

    ಜಿಲ್ಲೆಯ 19 ಲಕ್ಷ ಜನಗಳ ಪೈಕಿ ಸದ್ಯ 3 ಲಕ್ಷ ಲಸಿಕೆ ವಿತರಣೆಯಾಗಿದೆ. ಇಡೀ ಜಿಲ್ಲೆಗೆ ಸಂಪೂರ್ಣವಾಗಿ ಲಸಿಕೆ ನೀಡುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ. ಅಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳ ಪರಿಶ್ರಮದಿಂದಾಗಿ ಸಂರ್ಪೂಣವಾಗಿ ಈ ಗ್ರಾಮದಲ್ಲಿ ಲಸಿಕೆ ಮಾಡಲಾಗಿದೆ. ನಮ್ಮದು ಗಡಿ ಜಿಲ್ಲೆಯಾಗಿದ್ದರಿಂದ ಯಾವುದೇ ಸಮಸ್ಯೆಯಾಗದಂತೆ ವೇಗವಾಗಿ ಈ ಲಸಿಕೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಲಸಿಕೆ ಪಡೆದ ಗ್ರಾಮಸ್ಥರು ಸುರಕ್ಷವಾಗಿದ್ದು, ಎಲ್ಲರು ಈ ಗ್ರಾಮವನ್ನು ಮಾದರಿಯಾಗಿ ತೆಗೆದುಕೊಂಡು ಎಲ್ಲರು ಲಸಿಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಓದಿ:ಜುಲೈ ಮಧ್ಯ, ಆಗಸ್ಟ್ ಆರಂಭದಲ್ಲಿ ದಿನಕ್ಕೆ 1 ಕೋಟಿ ಲಸಿಕೆ ಲಭ್ಯ – ಕೇಂದ್ರ

  • ಇಂತಹ ಅಧಿಕಾರಿಗಳಿಂದ ನಾವು ಪಾಠ ಕಲಿಯಬೇಕಾಗಿಲ್ಲ: ಪ್ರತಾಪ್ ಸಿಂಹ

    ಇಂತಹ ಅಧಿಕಾರಿಗಳಿಂದ ನಾವು ಪಾಠ ಕಲಿಯಬೇಕಾಗಿಲ್ಲ: ಪ್ರತಾಪ್ ಸಿಂಹ

    – ಇದುವರೆಗೂ ಎಷ್ಟು ಖರ್ಚಾಗಿದೆ ಲೆಕ್ಕ ಕೊಡಿ

    ಮೈಸೂರು: ಶಾಸಕ ಸರಾ ಮಹೇಶ್, ಜಿಟಿ ದೇವೇಗೌಡ ಅವರು ರೋಹಿಣಿ ಸಿಂಧೂರಿ ವಿರುದ್ಧ ನೇರವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಇಂದು ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲಾಧಿಕಾರಿ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂತಹ ಅಧಿಕಾರಿಗಳಿಂದ ನಾವು ಪಾಠ ಕಲಿಯಬೇಕಗಿಲ್ಲ, ಖರ್ಚು ಮಾಡ್ದಿದೀರಾ ಎಂಬುದನ್ನು ಲೆಕ್ಕ ಕೊಡಿ ಸರ್ಕಾರಕ್ಕೆ ಜನರಿಗೆ ಗೊತ್ತಾಗಲಿ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಪ್ರತಾಪ್ ಸಿಂಹ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ವರ್ಗಾವಣೆ ಮಾಡಿಸೋದು ಅತ್ಯಂತ ಸಣ್ಣ ಕೆಲಸ, ನನಗೆ ಆ ತಾಕತ್ ಬೇಡ: ಜಿಟಿಡಿಗೆ ಪ್ರತಾಪ್ ಸಿಂಹ ತಿರುಗೇಟು

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸಲೆಂದೇ ಪ್ರಧಾನಿಯವರು ದೇಶಾದ್ಯಂತ 1 ಲಕ್ಷ ವೆಂಟಿಲೇಟರ್ ಕೊಟ್ಟಿದ್ದಾರೆ. ಪಿಎಂ ಕೇರ್ ನಿಂದ ಮೈಸೂರಿಗೆ ಬಂದ 40 ವೆಂಟಿಲೇಟರ್‍ಗಳನ್ನ ಅಳವಡಿಕೆ ಮಾಡಿಲ್ಲ. ಇದು ಜಿಲ್ಲಾ ಅಧಿಕಾರಿಗಳ ವೈಫಲ್ಯ ತೋರಿಸುತ್ತದೆ. ಇದನ್ನ ಕೇಳಿದ್ರೆ ಜನಪ್ರತಿನಿಧಿಗಳು, ಅಧಿಕಾರಿಗಳ ಮಧ್ಯ ಅಸಹಕಾರ ಹೇಗಾಗುತ್ತೆ? ವೆಂಟಿಲೇಟರ್ ಅಳವಡಿಸಿ ಎಂದು ಹೇಳಿದರೆ ತಪ್ಪಾ? ಇದನ್ನು ನಾವು ಕೇಳಬಾರದಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:  ತಾಕತ್ ಇದ್ದರೆ ಮೈಸೂರು ಡಿಸಿಯನ್ನು ವರ್ಗಾವಣೆ ಮಾಡಿಸಲಿ- ಪ್ರತಾಪ್ ಸಿಂಹಗೆ ಜಿಟಿಡಿ ಸವಾಲು

    ಸಿಎಂ ಯಡಿಯೂರಪ್ಪ ಅವರು ಕೋವಿಡ್ ರೋಗಿಗಳಿಗೆ ನೆರವಾಗೆಲೆಂದು ಸ್ಟೆಪ್ ಡೌನ್ ಅಸ್ಪತ್ರೆ ತೆರೆಯಲು ಹೇಳಿದ್ದರು. ಖಾಸಗಿ ಆಸ್ಪತ್ರೆಯವರು ಸೂಕ್ತ ಸೌಲಭ್ಯ ತೋರಿಸಿದ ನಂತರ ಸಮಿತಿ ಒಪ್ಪಿಗೆ ಮೇರೆಗೆ ಆಸ್ಪತ್ರೆ ತೆರೆಯಲು ಅನುಮತಿ ಇತ್ತು. ಮೈಸೂರಿನಲ್ಲಿ ನಾಯಿಕೊಡೆಗಳಂತೆ ಸ್ಟೆಪ್ ಡೌನ್ ಆಸ್ಪತ್ರೆ ನಿರ್ವಹಿಸುತ್ತಿದ್ದವು. ಶಾಸಕ ರಾಮದಾಸ್ ಅವರು ಇದರ ಭ್ರಷ್ಟಾಚಾರ ಪತ್ತೆಹಚ್ಚುವ ತನಕ ಯಾರೂ ಗಮನಹರಿಸಿರಲಿಲ್ಲ. ನೀವು ಯಾರ ಅನುಮತಿ ಪಡೆದು 16 ಸ್ಟೆಪ್ ಡೌನ್ ಆಸ್ಪತ್ರೆಗೆ ಅನುಮತಿ ನೀಡಿದ್ದೀರಾ? ಮೊದಲು ಅದಕ್ಕೆ ಉತ್ತರ ಕೊಡಿ..ಇದರಲ್ಲಿ ನಿಮ್ಮ ಸ್ವಹಿತಾಸಕ್ತಿ ಇದೆಯಾ? ಎಂದು ಜಿಲ್ಲಾಧಿಕಾರಿಗಳನ್ನು ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ. ಇದನ್ನೂ ಓದಿ:  ಪಿಪಿಇ ಕಿಟ್ ಧರಿಸಿಕೊಂಡ ಬ್ಲಾಕ್ ಫಂಗಸ್ ರೋಗಿಗಳ ಆರೋಗ್ಯ ವಿಚಾರಿಸಿದ ಡಿಸಿ ರೋಹಿಣಿ ಸಿಂಧೂರಿ

    ಜನ ಸಂಕಷ್ಟದಲ್ಲಿ ಇರುವಾಗ ಸರ್ಕಾರದ 28 ಲಕ್ಷ ಹಣದಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ಳುವವರಿಂದ ಜನಪ್ರತಿನಿಧಿಗಳು ಬುದ್ದಿ ಕಲಿಯುವ ಅಗತ್ಯವಿಲ್ಲ. ಸ್ವಿಮಿಂಗ್ ಪುಲ್ ಕಟ್ಟಲು ನೀವು ಯಾವ ನಿಯಮ ಅನುಸರಿಸಿದ್ದಿರಾ? ಪಾರಂಪರಿಕ ಇಲಾಖೆ ಅನುಮತಿ, ಮೈಸೂರು ನಗರ ಪಾಲಿಕೆಯ ಅನುಮತಿ ಪಡೆದು ಕಟ್ಟಿಸಿದ್ದೀರಾ? ಕೋವಿಡ್ ಔಷಧಿ ಖರೀದಿಸಲು ಟೆಂಡರ್ ಅದು ಇದು ಎನ್ನುತ್ತೀರಾ ಆದರೆ, ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ಳಲು ಇದು ಯಾವುದು ಬೇಡ್ವಾ? ಕೋವಿಡ್ ನಿರ್ವಹಣೆಗೆ 41 ಕೋಟಿ ಹಣ ಕೊಟ್ಟಿದೆ. ಇದುವರೆಗೂ 39 ಕೋಟಿ ಖರ್ಚಾಗಿದೆ. ಯಾವುದಕ್ಕೆ ಎಷ್ಟು ಖರ್ಚು ಮಾಡ್ದಿದೀರಾ ಎಂಬುದನ್ನು ಲೆಕ್ಕ ಕೊಡಿ ಸರಕಾರಕ್ಕೆ ಜನರಿಗೆ ಗೊತ್ತಾಗಲಿ. ಇಂತಹ ಅಧಿಕಾರಿಗಳಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಇದನ್ನೂ ಓದಿ:  ಕೋವಿಡ್ ಮುಕ್ತ ವಾರ್ಡ್‍ಗೆ ವಿಶೇಷ ಪ್ಯಾಕೇಜ್-ರೋಹಿಣಿ ಸಿಂಧೂರಿ ಘೋಷಣೆ

  • ರಾಯಚೂರಿನಲ್ಲಿ ಸಂಚಾರಿ ಕೋವಿಡ್ ಚಿಕಿತ್ಸಾ ಆಸ್ಪತ್ರ್ರೆ ಆರಂಭ

    ರಾಯಚೂರಿನಲ್ಲಿ ಸಂಚಾರಿ ಕೋವಿಡ್ ಚಿಕಿತ್ಸಾ ಆಸ್ಪತ್ರ್ರೆ ಆರಂಭ

    ರಾಯಚೂರು: ಜಿಲ್ಲೆಯಲ್ಲಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಾಗದೆ, ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಂಚಾರಿ ಕೋವಿಡ್ ಚಿಕಿತ್ಸಾ ಕೇಂದ್ರ ಮತ್ತು ತುರ್ತು ಆಮ್ಲಜನಕ ಸಹಾಯ ಘಟಕದ ವ್ಯವಸ್ಥೆಯನ್ನ ಸಾರಿಗೆ ಬಸ್‍ಗಳಲ್ಲಿ ಮಾಡಲಾಗುತ್ತಿದೆ.

    ಎನ್.ಈ.ಕೆ.ಎಸ್.ಆರ್. ಟಿ.ಸಿಯ ಮೂರು ಬಸ್‍ಗಳನ್ನ ಸಂಚಾರಿ ಚಿಕಿತ್ಸಾ ಕೇಂದ್ರಕ್ಕೆ ಜಿಲ್ಲಾಡಳಿತ ಬಳಸಿಕೊಳ್ಳುತ್ತಿದೆ. ಬಸ್‍ನಲ್ಲಿ 4 ಬೆಡ್ ಹಾಗೂ ಸೋಂಕಿತರು ಕುಳಿತುಕೊಂಡು ಆಕ್ಸಿಜನ್ ಪಡೆಯಲು 4 ಸೀಟ್ ವ್ಯವಸ್ಥೆ ಮಾಡಲಾಗಿದೆ. ಬಸ್‍ನಲ್ಲಿ 5 ಆಕ್ಸಿಜನ್ ಸಿಲಿಂಡರ್, ವೆಂಟಿಲೇಟರ್, ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆಯಿದೆ. ಈ ಮೂರು ಬಸ್‍ಗಳನ್ನ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ, ತಾಲೂಕಾಸ್ಪತ್ರೆ ಮುಂದೆ ನಿಲ್ಲಿಸಲಾಗುತ್ತಿದೆ. ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಸಿಗದವರು, ಉಸಿರಾಟ ತೊಂದರೆ ಉಂಟಾದವರಿಗೆ ಬಸ್ ನಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.

    ಆಸ್ಪತ್ರೆಗೆ ದಾಖಲಾಗಿ ಐದಾರು ಗಂಟೆಯಲ್ಲಿ ಸಾವನ್ನಪ್ಪುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ತಾಲೂಕು, ಗ್ರಾಮೀಣ ಭಾಗದಿಂದ ಬರುವ ರೋಗಿಗಳಿಗೆ ಕೂಡಲೇ ಚಿಕಿತ್ಸೆ ಸಿಗಬೇಕಾದ ಅಗತ್ಯವಿದೆ. ಹೀಗಾಗಿ ಮೊಬೈಲ್ ಕೋವಿಡ್ ಆಸ್ಪತ್ರೆಗಳನ್ನ ತೆರೆಯಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಸಾರ್ವಜನಿಕ ಸೇವೆಗೆ ಬಸ್‍ಗಳು ಸಿಗಲಿವೆ ಅಂತ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಹೇಳಿದ್ದಾರೆ.