Tag: district collector

  • ರೈತರ ಮಕ್ಕಳಿಗೆ ಹೆಣ್ಣುಕೊಡ್ಸಿ; ಎಲ್ಲಾ ಸವಲತ್ತು ಕೊಡಿಸೋ ಸರ್ಕಾರ ಹೆಣ್ಣು ಕೊಡಿಸೋಕೆ ಆಗಲ್ವೆ? – ವೃದ್ಧನ ಅಳಲು

    ರೈತರ ಮಕ್ಕಳಿಗೆ ಹೆಣ್ಣುಕೊಡ್ಸಿ; ಎಲ್ಲಾ ಸವಲತ್ತು ಕೊಡಿಸೋ ಸರ್ಕಾರ ಹೆಣ್ಣು ಕೊಡಿಸೋಕೆ ಆಗಲ್ವೆ? – ವೃದ್ಧನ ಅಳಲು

    – ಜಿಲ್ಲಾಧಿಕಾರಿಗಳ ಎದುರು ಕಣ್ಣೀರಿಟ್ಟ ಚಿಕ್ಕನಕೋಟೆ ರೈತ

    ತುಮಕೂರು: ರೈತರ (Farmers) ಮಕ್ಕಳಿಗೆ ಮದುವೆಯಾಗಲು ಹೆಣ್ಣು ಕೊಡಿಸಿ ಎಂದು ಜಿಲ್ಲಾಧಿಕಾರಿಗಳ ಮುಂದೆ ವೃದ್ಧರೊಬ್ಬರು ಅಳಲು ತೋಡಿಕೊಂಡಿರುವ ಘಟನೆ ತುಮಕೂರು (Tumakuru) ಜಿಲ್ಲೆಯ ನಡೆದಿದೆ.

    ಜಿಲ್ಲೆಯ ಶಿರಾದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ವೃದ್ಧರೊಬ್ಬರು ಜಿಲ್ಲಾಧಿಕಾರಿ (District Collector) ಶುಭಕಲ್ಯಾಣ್ ಅವರಿಗೆ ಮನವಿ ಮಾಡಿದ್ದಾರೆ. ಚಿಕ್ಕನಕೋಟೆ ಗ್ರಾಮದ ರೈತರಾದ ಜಯರಾಮಪ್ಪ ಜಿಲ್ಲಾಧಿಕಾರಿಗಳ ಎದುರು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಮೇಲುಕೋಟೆಯಲ್ಲಿ ಟಿಪ್ಪು ಬ್ರಾಹ್ಮಣರನ್ನು ಕತ್ತರಿಸಿದ್ದ ಇತಿಹಾಸವಿದೆ – ಅಶೋಕ್‌ ಕೆಂಡಾಮಂಡಲ

    ರೈತರ ಮಕ್ಕಳಿಗೆ ಎಲ್ಲಿಯೂ ಹೆಣ್ಣು ಕೊಡಲ್ಲ ಅಂತಾರೆ. ಎಲ್ಲಿ ಹೋದ್ರೂ ಸರ್ಕಾರಿ ಕೆಲಸ ಇದ್ರೆನೇ ಹೆಣ್ಣು ಕೊಡೋದು ಅಂತಾರೆ. ನಮ್ಮಂಥವರು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಎಲ್ಲಾ ಸವಲತ್ತು ಕೊಡಿಸೋ ಸರ್ಕಾರ ಹೆಣ್ಣು ಕೊಡಿಸೋಕೆ ಆಗಲ್ವೆ? ಎಂದೂ ಸಹ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಾಂಡ್ಯ ನಾಯಕತ್ವ ವರವೋ ಶಾಪವೋ – ಕ್ಯಾಪ್ಟನ್‌ ಆದ ಒಂದೇ ಗಂಟೆಯಲ್ಲಿ 4 ಲಕ್ಷ ಫಾಲೋವರ್ಸ್‌ ಕಳೆದುಕೊಂಡ ಮುಂಬೈ

    ರೈತರಾದ ಜಯರಾಮಪ್ಪ ಸುಮಾರು 8 ವರ್ಷಗಳಿಂದ ತಮ್ಮ ಕೃಷಿಕ ಮಗನಿಗಾಗಿ ಹೆಣ್ಣು ಹುಡುಕಿ ಸುಸ್ತಾಗಿದ್ದಾರೆ. ಕೊನೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಶುಭಾಕಲ್ಯಾಣ್‌ ನೋಡೋಣ ಅನ್ನೋ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಕೊರೊನಾ ಭೀತಿ ಮತ್ತೆ ಶುರು; ಕೇರಳದ ಮಹಿಳೆಯಲ್ಲಿ ಕೋವಿಡ್ ಉಪತಳಿ ಜೆಎನ್.1 ಪತ್ತೆ

  • ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೆ ಅಡೆತಡೆಯಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

    ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೆ ಅಡೆತಡೆಯಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

    ವರಸ ನಾಯಕ ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ (Raghavendra Stores) ಸಿನಿಮಾ ರಾಜ್ಯದ ಬಹುತೇಕ ಕಡೆ ತುಂಬಿದ ಪ್ರದರ್ಶನ ಕಾಣುತ್ತಿದೆ. ವಿಧಾನಸಭೆ ಚುನಾವಣೆಗೆ (Election) ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಟ ಜಗ್ಗೇಶ್ (Jaggesh) ಪ್ರಚಾರ ಮಾಡುತ್ತಿದ್ದಾರೆ ಎನ್ನವ ಕಾರಣಕ್ಕಾಗಿ ನಿನ್ನೆ ದಾವಣಗೆರೆಯಲ್ಲಿ ಚುನಾವಣೆ ಅಧಿಕಾರಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಮಾಡಿದ್ದರು. ಪ್ರದರ್ಶನ ನಿಲ್ಲಿಸುವಂತೆ ಸೂಚಿಸಿದ್ದರು. ಈಗ ಈ ಘಟನೆ ಕುರಿತಂತೆ ದಾವಣಗೆರೆ ಜಿಲ್ಲಾಧಿಕಾರಿ (District Collector) ಸ್ಪಷ್ಟನೆ ನೀಡಿದ್ದಾರೆ.

    ಚುನಾವಣಾ ಅಧಿಕಾರಿಯ ಸೂಚನೆಯಂತೆ ಜಗ್ಗೇಶ್ ಇರುವ ಸಿನಿಮಾ ಪೋಸ್ಟರ್ ಗೆ ನಿನ್ನೆ ಬಿಳಿ ಹಾಳೆಯಿಂದ ಮುಚ್ಚಲಾಗಿತ್ತು. ಈ ಕುರಿತು ನಿರ್ಮಾಣ ಸಂಸ್ಥೆ ಚುನಾವಣೆ ಆಯೋಗಕ್ಕೆ ಪತ್ರ ಬರೆದಿತ್ತು. ಚುನಾವಣೆ ಆಯೋಗವು ಅಡೆತಡೆ ಮಾಡದಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಚಿತ್ರಕ್ಕೆ ಯಾವುದೇ ರೀತಿಯಲ್ಲಿ ಅಡೆತಡೆ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್

    ದಾವಣಗೆರೆ ಗೀತಾಂಜಲಿ ಚಿತ್ರಮಂದಿರದಲ್ಲಿ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಪ್ರದರ್ಶನ ಕಾಣುತ್ತಿತ್ತು. ನಿನ್ನೆ ಬೆಳ್ಳಗೆ ಚಿತ್ರಮಂದಿರಕ್ಕೆ ಆಗಮಿಸಿದ್ದ ಚುನಾವಣೆ ಅಧಿಕಾರಿ ಚಿತ್ರ ಪ್ರದರ್ಶನ ಮಾಡದಂತೆ ತಿಳಿಸಿದ್ದರು. ಜಗ್ಗೇಶ್ ನೇರವಾಗಿ ಚುನಾವಣೆ ಪ್ರಚಾರಕ್ಕೆ ಇಳಿದಿರುವುದರಿಂದ ಮತ್ತು ಅವರು ರಾಜ್ಯಸಭಾ ಸದಸ್ಯರು ಆಗಿರುವುದರಿಂದ ಸಿನಿಮಾ ಪ್ರದರ್ಶನ ಮಾಡದಂತೆ ಸೂಚಿಸಿದ್ದರು.

    ಜಗ್ಗೇಶ್ ಕೇವಲ ಸ್ಟಾರ್ ಪ್ರಚಾರಕರು. ಅವರು ಚುನಾವಣೆಗೆ ಸ್ಪರ್ಧಿಸಿಲ್ಲ. ಅಲ್ಲದೇ, ಅನೇಕ ನಟರು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಸುದೀಪ್ ಅವರ ವಿಷಯದಲ್ಲಿ ಚುನಾವಣೆ ಆಯೋಗ ಯಾವುದೇ ಕ್ರಮ ತಗೆದುಕೊಂಡಿಲ್ಲ. ಹಾಗಾಗಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಚಿತ್ರಮಂದಿರ ಮಾಲೀಕರು ಮನವರಿಕೆ ಮಾಡಿಕೊಟ್ಟಿದ್ದರು. ಆದರೂ, ಪ್ರಯೋಜನವಾಗಿರಲಿಲ್ಲ.

  • ನನ್ನ ಮಕ್ಕಳನ್ನು ದತ್ತು ಪಡೆಯಿರಿ- ನನಗೆ, ಪತ್ನಿಗೆ ದಯಾಮರಣ ನೀಡಿ ಎಂದು ಬಾಡಿಗೆದಾರನಿಂದ ಅರ್ಜಿ

    ನನ್ನ ಮಕ್ಕಳನ್ನು ದತ್ತು ಪಡೆಯಿರಿ- ನನಗೆ, ಪತ್ನಿಗೆ ದಯಾಮರಣ ನೀಡಿ ಎಂದು ಬಾಡಿಗೆದಾರನಿಂದ ಅರ್ಜಿ

    ತುಮಕೂರು: ನನ್ನ ಇಬ್ಬರು ಮಕ್ಕಳನ್ನು (Children) ದತ್ತು ತೆಗೆದುಕೊಳ್ಳಿ. ನನಗೂ, ನನ್ನ ಪತ್ನಿಗೆ (Wife) ದಯಾಮರಣ ಕೊಡಿ ಎಂದು ತುಮಕೂರು (Tumkur) ಜಿಲ್ಲಾಧಿಕಾರಿ (District Collector) ಕಚೇರಿ ಎಂದು ನೊಂದ ಬಾಡಿಗೆದಾರ ಅಳಲು ತೋಡಿಕೊಂಡರು.

    ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಮಕ್ಕಳೊಂದಿಗೆ ಹಾಗೂ ಸಂಬಂಧಿಕರ ಜೊತೆ ಬಂದ ನೊಂದ ಬಾಡಿಗೆದಾರ ಅಂತರಾಜು ಹಾಗೂ ಪತ್ನಿ ತೇಜಸ್ವಿನಿ ದಯಾಮರಣದ ಅರ್ಜಿಯನ್ನು ಮಾಧ್ಯಮದವರಿಗೆ ಪ್ರದರ್ಶಿಸಿ ನಂತರ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್‍ಗೆ ಸಲ್ಲಿಸಿದರು.

    ನಂತರ ಮಾಧ್ಯಮದವರ ಜೊತೆ ಮಾತನಾಡಿದ ಬಾಡಿಗೆದಾರ ಅಂತರಾಜು, ದೇಶದಲ್ಲಿ ನ್ಯಾಯಕ್ಕೆ ಬೆಲೆ ಇಲ್ಲ. ನೊಂದವರಿಗೆ ನ್ಯಾಯ ಕೊಡಿಸುವುದಕ್ಕೆ ಆಗಲ್ಲ. ನನ್ನ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಳ್ಳಿ. ಅಷ್ಟಾದರೂ ಮಾಡಿ. ನನಗೆ ಹಾಗೂ ನನ್ನ ಪತ್ನಿ ತೇಜಸ್ವಿಗೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

    ನಮಗೆ ಹೋಟೆಲ್‌ ಬಾಡಿಗೆ ಕೊಟ್ಟಂತಹ ಮಾಲೀಕರು ಎಷ್ಟು ಪ್ರಭಾವಶಾಲಿಯಾಗಿದ್ದಾರೆ ಅಂದ್ರೆ, ಸ್ಥಳೀಯ ಶಾಸಕರು, ಸಚಿವರು ಬರಲಿಲ್ಲ. ಜಿಲ್ಲಾಧಿಕಾರಿ, ಎಸ್ಪಿ ಕೂಡ ಬರಲಿಲ್ಲ. ಕೊನೆಗೆ ಒಬ್ಬ ಕಾರ್ಪೋರೇಟರ್ ಕೂಡ ಪ್ರತಿಭಟನೆಯ ಸ್ಥಳಕ್ಕೆ ಸುಳಿಯದಂತೆ ನೋಡಿಕೊಂಡಿದ್ದಾರೆ. 

    ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತನೆಂದುಕೊಂಡು ವೈ.ಸಿ. ಸಿದ್ದರಾಮಯ್ಯ ಹೋಟೆಲ್ ಬಾಡಿಗೆ ಕೊಟ್ಟು ಸುಮಾರು 2 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಭವಾನಿ ಅಕ್ಕ, ಪ್ರಜ್ವಲ್ ರೇವಣ್ಣ ನಶೆಯಲ್ಲಿರ್ತಾರೆ; ಥರ್ಟಿ, ಸಿಕ್ಸ್ಟಿ ಅಲ್ಲ 2 ಬಾಟ್ಲಿ ಕುಡಿತಾರೆ – ಪ್ರೀತಂ ಗೌಡ

    ಬಸವರಾಜ್ ಎಂಬವರ ತ್ರಿಸ್ಟಾರ್ ಹೋಟೆಲ್‍ನ್ನು ಅಂತರಾಜ್ ಬಾಡಿಗೆಗೆ ತಗೊಂಡು ನಡೆಸುತ್ತಿದ್ದರು. ಹೊಟೇಲ್ ಇಂಟಿರಿಯರ್ ಮತ್ತು ಪೀಠೋಪಕರಣಕ್ಕಾಗಿ ಅಂತರಾಜ್ 1 ಕೋಟಿ ರೂ. ಖರ್ಚು ಮಾಡಿದ್ದರು. ಜೊತೆಗೆ 50 ಲಕ್ಷ ರೂ. ಮುಂಗಡ ಹಣವನ್ನೂ ನೀಡಿದ್ದರೂ ಎನ್ನಲಾಗಿದೆ. ಆದರೆ ಹೊಟೇಲ್ ಆರಂಭವಾಗುತ್ತಿದ್ದಂತೆ ಅಂತರಾಜ್ ಜೊತೆ ಹೊಟೇಲ್ ಮಾಲೀಕ ಬಸವರಾಜ್ ಹಾಗೂ ವೈ.ಸಿ.ಸಿದ್ದರಾಮಯ್ಯ ಕ್ಯಾತೆ ತೆಗೆದಿದ್ದಾರೆ. ನಂತರ ಅಂತರಾಜ್‍ರನ್ನು ಹೋಟೆಲ್‍ನಿಂದಲೇ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತರಾಜ್‌ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸ್ನೇಹ ನಂಬಿ ಕೋಟಿ ಕೋಟಿ ಸುರಿದ- ಹಣ ಆಗ್ತಿದ್ದಂತೆ ಉಲ್ಟಾ ಹೊಡೆದ ಮಿತ್ರದ್ರೋಹಿ

    Live Tv
    [brid partner=56869869 player=32851 video=960834 autoplay=true]

  • ಪ್ರಶ್ನೆಗೆ ಉತ್ತರಿಸಲು ತಡಪಡಿಸಿದ ಜಿಲ್ಲಾಧಿಕಾರಿಗೆ ಸೀತಾರಾಮನ್ ಕ್ಲಾಸ್ – ಕೆಟಿಆರ್ ಆಘಾತ

    ಪ್ರಶ್ನೆಗೆ ಉತ್ತರಿಸಲು ತಡಪಡಿಸಿದ ಜಿಲ್ಲಾಧಿಕಾರಿಗೆ ಸೀತಾರಾಮನ್ ಕ್ಲಾಸ್ – ಕೆಟಿಆರ್ ಆಘಾತ

    ಹೈದರಾಬಾದ್: ನ್ಯಾಯಬೆಲೆ ಅಂಗಡಿಗಳ ಮೂಲಕ ಸರಬರಾಜು ಮಾಡುವ ಅಕ್ಕಿಯಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲು ಎಷ್ಟು ಎಂಬ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಾಗದ ಜಿಲ್ಲಾಧಿಕಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಛೀಮಾರಿ ಹಾಕಿದ್ದಾರೆ. ಇದಕ್ಕೆ ತೆಲಂಗಾಣ ಸಚಿವ ಕೆಟಿ ರಾಮರಾವ್ ಆಘಾತ ವ್ಯಕ್ತಪಡಿಸಿದ್ದಾರೆ.

    ಕೇಂದ್ರ ಸಚಿವೆ ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್) ಪಡಿತರ ಪರಿಶೀಲನೆ ವೇಳೆ ತೆಲಂಗಾಣದ ಬಿಕ್ರೂರ್‌ನಲ್ಲಿ ಜಿಲ್ಲಾಧಿಕಾರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಲ್ಲಾಧಿಕಾರಿ ಜಿತೇಶ್ ಪಾಟೀಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಇಲ್ಲಿ ಯಾಕೆ ಇಲ್ಲ ಎಂದು ಕೇಳಿದ್ದರು. ಬಳಿಕ ನ್ಯಾಯಬೆಲೆ ಅಂಗಡಿಗಳ ಮೂಲಕ ಸರಬರಾಜು ಮಾಡುವ ಅಕ್ಕಿಯಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲು ಎಷ್ಟು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಉತ್ತರಿಸಲು ತಡಪಡಿಸಿದ್ದು, ಇದಕ್ಕೆ ಗರಂ ಆದ ಸೀತಾರಾಮನ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: IT-BT ಕಂಪನಿಗಳಿಂದ ಸಿಎಂಗೆ ಪತ್ರ- ಬೇಡಿಕೆ ಈಡೇರದಿದ್ರೆ ವಲಸೆ ಹೋಗುವ ಎಚ್ಚರಿಕೆ

    ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕೆಟಿಆರ್ ಟ್ವೀಟ್ ಮಾಡಿ, ಇಂದು ಎಫ್‌ಎಂ ನಿರ್ಮಲಾ ಸೀತಾರಾಮನ್ ಅವರು ಜಿಲ್ಲಾಧಿಕಾರಿ ಅವರೊಂದಿಗೆ ನಡೆದುಕೊಂಡ ಅಶಿಸ್ತಿನ ವರ್ತನೆಯಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ. ಈ ರಾಜಕೀಯ ಇತಿಹಾಸಕಾರರು ಬೀದಿಯಲ್ಲಿ ಶ್ರಮವಹಿಸುವ ಎಐಎಸ್ ಅಧಿಕಾರಿಗಳನ್ನು ನಿರುತ್ಸಾಹಗೊಳಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಬ್ಬ ಜನಪ್ರತಿನಿಧಿಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಅಕ್ಷಮ್ಯ : ಲಿಂಬಾವಳಿ ವಿರುದ್ಧ ಕಾಂಗ್ರೆಸ್ ಕಿಡಿ

    Live Tv
    [brid partner=56869869 player=32851 video=960834 autoplay=true]

  • ಬದುಕಿರುವಾಗಲೇ ರೈತನಿಗೆ ಮರಣ ಪ್ರಮಾಣ ಪತ್ರ – ಗ್ರಾಮ ಲೆಕ್ಕಿಗ ಅಮಾನತು

    ಬದುಕಿರುವಾಗಲೇ ರೈತನಿಗೆ ಮರಣ ಪ್ರಮಾಣ ಪತ್ರ – ಗ್ರಾಮ ಲೆಕ್ಕಿಗ ಅಮಾನತು

    ಕೋಲಾರ: ಬದುಕಿರುವಾಗಲೇ ರೈತನ ಮರಣ ಪ್ರಮಾಣ ಪತ್ರ ನೀಡಿದ್ದ ಗ್ರಾಮ ಲೆಕ್ಕಿಗನನ್ನು ಅಮಾನತು ಮಾಡುವಂತೆ ಕೋಲಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.

    ಮುಳಬಾಗಿಲು ತಾಲೂಕಿನ ರೈತನೊರ್ವನಿಗೆ ಗ್ರಾಮ ಲೆಕ್ಕಿಗ ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ನೀಡಿದ್ದ. ಈ ಸಂಬಂಧ ಕೋಲಾರ ಸಹಾಯಕ ಕಮೀಷನರ್ ಪ್ರಕಾಶ್ ಮೀನಾ ತನಿಖೆ ನಡೆಸಿದ್ದರು. ಇದನ್ನು ಆಧಾರಿಸಿ ಮುಳಬಾಗಿಲು ತಾಲೂಕಿನ ಕಸಬಾ ಹೋಬಳಿ ಮಾರಾಂಡಹಳ್ಳಿ ಗ್ರಾಮದಲ್ಲಿ ಗ್ರಾಮ ಲೆಕ್ಕಿಗನಾಗಿದ್ದ ಹಾಗೂ ಪ್ರಸ್ತುತ ಮುಳಬಾಗಿಲು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಅರವಿಂದ್‌ನನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‍ಪಿನ್ ಅರೆಸ್ಟ್ 

    ನಡೆದಿದ್ದೇನು?
    ಅರವಿಂದ್ 2021ರ ಜೂನ್ 2 ರಂದು ರೈತ ಶಿವರಾಜ್‍ ಅವರಿಗೆ ಮರಣ ಪ್ರಮಾಣ ಪತ್ರ ನೀಡಿದ್ದ. ಅಷ್ಟೇ ಅಲ್ಲದೆ ಅರವಿಂದ್‌, ಶಿವರಾಜ್‌ ಅವರ ಮರಣ ಪ್ರಮಾಣ ಪತ್ರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿ ಅವಮಾನ ಮಾಡಿದ್ದ. ಈ ಹಿನ್ನೆಲೆ ಶಿವರಾಜ್ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಅರವಿಂದ್ ವಿರುದ್ಧ ದೂರು ಕೊಟ್ಟಿದ್ದರು.

  • ಶವರ್ಮ ತಿಂದು 16 ವರ್ಷದ ವಿದ್ಯಾರ್ಥಿನಿ ಸಾವು, 18 ಮಂದಿ ಅಸ್ವಸ್ಥ

    ಶವರ್ಮ ತಿಂದು 16 ವರ್ಷದ ವಿದ್ಯಾರ್ಥಿನಿ ಸಾವು, 18 ಮಂದಿ ಅಸ್ವಸ್ಥ

    ಕಾಸರಗೋಡು: ಕೇರಳದ ಕಾಸರಗೋಡಿನ ಉಪಾಹಾರ ಗೃಹದಲ್ಲಿ ಶವರ್ಮ ತಿಂದು 16 ವರ್ಷದ ಹುಡುಗಿಯೊಬ್ಬಳು ಮೃತಪಟ್ಟಿದ್ದು, 18 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.

    FOOD POISION

    ಕಾಸರಗೋಡು ಸಮೀಪದ ಕರಿವಲ್ಲೋರ್ ನಿವಾಸಿ ದೇವಾನಂದ ಕನಂಗಾಡ್ (16) ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದು, ವಿಷಪೂರಿತ ಉಪಾಹಾರ ಸೇವನೆ ಶಂಕೆ ವ್ಯಕ್ತಪಡಿಸಿದ್ದಾರೆ. ಉಪಾಹಾರ ಸೇವಿಸಿದ ಜ್ಯೂಸ್ ಅಂಗಡಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮಳಿಗೆಯನ್ನು ಬಂದ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜಾಗರಣೆ, ಡಿಜೆ ಸದ್ದು ಮಾಡುವಂತಿಲ್ಲ- ರಂಜಾನ್ ಆಚರಣೆಗೆ ಹಲವು ನಿರ್ಬಂಧ

    ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಅಸ್ವಸ್ಥಗೊಂಡ 18 ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಯಾರ ಸ್ಥಿತಿಯೂ ಗಂಭೀರವಾಗಿಲ್ಲ ಎಂದು ಹೇಳಿದ್ದಾರೆ.

    SHAWARMA 03

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಸಚಿವ ಎಂ.ವಿ.ಗೋವಿಂದನ್, ರಾಜ್ಯದೆಲ್ಲೆಡೆ ಇರುವ ಹೊಟೇಲ್‌ಗಳಲ್ಲಿ ಗುಣಮಟ್ಟದ ಆಹಾರ ನೀಡುವಂತೆ ಸರ್ಕಾರ ಖಚಿತಪಡಿಸುತ್ತದೆ. ರೆಸ್ಟೋರೆಂಟ್‌ಗಳಲ್ಲಿ ನೀಡಲಾಗುವ ಆಹಾರವು ಉತ್ತಮ ಗುಣಮಟ್ಟದ್ದಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ರಾಜ್ಯಾದ್ಯಂತ ತಪಾಸಣೆ ನಡೆಸುತ್ತದೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಬಿಜೆಪಿ ವಿಶ್ವ ದಾಖಲೆ ಮಾಡುತ್ತಿದೆ: ಕೇಜ್ರಿವಾಲ್‌ ಟೀಕೆ

    ಮೂಲಗಳ ಪ್ರಕಾರ ವಿದ್ಯಾರ್ಥಿಗಳು ಟ್ಯೂಷನ್‌ಗೆ ಹೋಗಿದ್ದಾಗ ಉಪಾಹಾರ ಸೇವಿಸಿದ್ದಾರೆ. ಜ್ಯೂಸ್ ಅಂಗಡಿಯು ಟ್ಯೂಷನ್ ಕೇಂದ್ರದ ಪಕ್ಕದಲ್ಲೇ ಇದೆ ಎಂದು ಹೇಳಲಾಗಿದೆ.

  • ವಿಜಯಪುರದ ನೂತನ ಜಿಲ್ಲಾಧಿಕಾರಿಯ ಕಾರು ಪಲ್ಟಿ

    ವಿಜಯಪುರದ ನೂತನ ಜಿಲ್ಲಾಧಿಕಾರಿಯ ಕಾರು ಪಲ್ಟಿ

    ವಿಜಯಪುರ: ನಿನ್ನೆಯಷ್ಟೇ ನಗರದ ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನ್ನಮ್ಮನವರ ಅವರ ಕಾರು ಪಲ್ಟಿಯಾದ ಘಟನೆ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿ ನಡೆದಿದೆ.

    ದಾವಣಗೆರೆ ಜಿಪಂ ಸಿಇಒ ಆಗಿದ್ದ ಅವರು ನಿನ್ನೆಯಷ್ಟೇ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದರು. ಈ ಹಿನ್ನೆಲೆ ವಿಜಯಪುರಕ್ಕೆ ತೆರಳುತ್ತಿದ್ದ ಅವರ ಕಾರು ಪಲ್ಟಿಯಾಗಿದೆ. ಸದ್ಯ ಅವರನ್ನು ಎಸ್‍ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ಶ್ವೇತಾ, ಮಕ್ಕಳಾದ ತನ್ವಿ, ವಿಹಾನ್ ಹಾಗೂ ಪ್ರವೀಣ ಕೂಡಾ ಕಾರಿನಲ್ಲಿ ಇದ್ದರು. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮೋದಿ, ಅಮಿತ್ ಶಾರನ್ನು ನಿಂದಿಸಿದ್ದ ವ್ಯಕ್ತಿ ಬಂಧನ

    ರಾಜ್ಯ ಸರ್ಕಾರ 20 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿದೆ. ಇದರಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿ ಪಿ ಸುನೀಲ್‍ಕುಮಾರ್ ವರ್ಗಾವಣೆ ಆಗಿದ್ದಾರೆ. ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವಿಜಯಮಹಾಂತೇಶ ದಾನ್ನಮ್ಮನವರ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪಿ ಸುನೀಲಕುಮಾರ್ ಸ್ಥಳ ನಿಯೋಜನೆಗಾಗಿ ಕಾಯುತ್ತಿದ್ದು, ವಿಜಯ ಮಹಾಂತೇಶ ಅವರು ವಿಜಯಪುರ ನೂತನ ಜಿಲ್ಲಾಧಿಕಾರಿಯಾಗಿ ನಿಯುಕ್ತರಾಗಿದ್ದಾರೆ. ಇದನ್ನೂ ಓದಿ: ನಮ್ಮಿಂದ ತಪ್ಪಾಗಿದೆ: ಕ್ಷಮೆ ಕೇಳಿದ ಶ್ರೀಲಂಕಾ ಅಧ್ಯಕ್ಷ

    ಈ ಹಿಂದೆ ವಿಜಯಪುರ ಜಿಲ್ಲಾಧಿಕಾರಿಯಾಗಿದ್ದ ಪಿ. ಸುನೀಲ್‍ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಇನ್ನು ಯಾವುದೇ ಸ್ಥಳ ನಿಯುಕ್ತಿಗೊಳಿಸಿಲ್ಲ. ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ವಿಜಯ ಅವರು ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಡಿಸಿ ಕಚೇರಿ ಮೂಲಗಳು ತಿಳಿಸಿವೆ.

  • ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ- ಪೊಲೀಸರ ಜೊತೆ ಪ್ರತಿಭಟನಾಕಾರರ ವಾಗ್ವಾದ

    ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ- ಪೊಲೀಸರ ಜೊತೆ ಪ್ರತಿಭಟನಾಕಾರರ ವಾಗ್ವಾದ

    ಉಡುಪಿ: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕಾರ್ಮಿಕ ಸಂಘಟನೆಗಳು ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದೆ. ಮಣಿಪಾಲ ಪೊಲೀಸರು ಮತ್ತು ಸಾವಿರಾರು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದು ಗೊಂದಲದ ವಾತಾವರಣ ನಿರ್ಮಾಣವಾಯಿತು.

    ಕಾರ್ಮಿಕ ವಿರೋಧಿ ಕಾನೂನುಗಳ ರದ್ಧತಿಗಾಗಿ, ಬೆಲೆ ಏರಿಕೆ ನಿಯಂತ್ರಣಕ್ಕಾಗಿ,ಅಡುಗೆ ಅನಿಲ,ಪೆಟ್ರೋಲ್, ಡೀಸಲ್ ಬೆಲೆ ಇಳಿಸಲು ಎಡಪಕ್ಷಗಳು ಮತ್ತು ಕಾರ್ಮಿಕ ಸಂಘಟನೆಗಳು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿತ್ತು. ಮಾರುತಿ 28ಕ್ಕೆ ಜಿಲ್ಲೆಯ ಏಳು ತಾಲೂಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು ಅಲ್ಲಲ್ಲಿ ವಾಹನ ಜಾಥಾ ರಸ್ತೆ ಜಾಥಾ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಅಸಮಾಧಾನವನ್ನು ಹೊರ ಹಾಕಿತ್ತು. ಇದನ್ನೂ ಓದಿ: ಟಿಪ್ಪು ಬಗ್ಗೆ ಶೃಂಗೇರಿ ಮಠಕ್ಕೆ ಹೋಗಿ ಕೇಳಲಿ ಕೊಲ್ಲೂರಿನಲ್ಲಿ ತಿಳಿದುಕೊಳ್ಳಲಿ: ಡಿಕೆಶಿ

    ಸಿಮೆಂಟ್, ಕಬ್ಬಿಣ, ಪೆಯಿಂಟ್ ಬೆಲೆ ನಿಯಂತ್ರಣಕ್ಕಾಗಿ ಉಡುಪಿ ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು) ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದೆ. ಗ್ರಾಮ ಪಂಚಾಯತ್, ಪುರಸಭೆಗಳ ಮೂಲಕ ಪ್ರಧಾನಿಗಳಿಗೆ ಮನವಿ ಸಲ್ಲಿಸಲಾಗಿದೆ. ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿಯಿಂದ ಹೊರಟ ಸಾವಿರಾರು ಜನ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ರಜತಾದ್ರಿ ಸಮೀಪದ ಆಚಾರ್ಯ ಸರ್ಕಲ್ ಬಳಿ ಪ್ರತಿಭಟನಾಕಾರರು ಆಕ್ರೋಶ ಮುಗಿಲು ಮುಟ್ಟಿತ್ತು.

    ಎರಡು ದಿನ ಜಿಲ್ಲೆಯ 13 ಸಾವಿರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರು ಕೆಲಸಕ್ಕೆ ಹಾಜರಾಗದೆ ಮುಷ್ಕರದಲ್ಲಿ ಭಾಗವಹಿಸಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಮಣಿಪಾಲ ಪೊಲೀಸರು ಹರಸಾಹಸ ಪಟ್ಟರು. ಕೊನೆಗೆ ಅಪರ ಜಿಲ್ಲಾಧಿಕಾರಿ ವೀಣಾ ಸ್ಥಳಕ್ಕೆ ಆಗಮಿಸಿ ಮನವಿಯನ್ನು ಪಡೆದುಕೊಳ್ಳುವುದರ ಮೂಲಕ ಕಾರ್ಮಿಕ ಸಂಘಟನೆಗಳ ಕಡಿಮೆಯಾಯಿತು. ಉಡುಪಿ ಜಿಲ್ಲೆಯ ಸ್ಥಳೀಯ ಸಮಸ್ಯೆಗಳ ಬಗ್ಗೆ ಪ್ರತಿಭಟನಾಕಾರರು ರಾಜ್ಯ ಸರ್ಕಾರದದ ಗಮನ ಸೆಳೆದರು.

     

  • ಜಿಲ್ಲಾಧಿಕಾರಿ ಮನೆಯ ಆವರಣದಲ್ಲಿ ಗಂಧದ ಕಳ್ಳತನಗೈದ ಕಳ್ಳ ಅರೆಸ್ಟ್

    ಜಿಲ್ಲಾಧಿಕಾರಿ ಮನೆಯ ಆವರಣದಲ್ಲಿ ಗಂಧದ ಕಳ್ಳತನಗೈದ ಕಳ್ಳ ಅರೆಸ್ಟ್

    ಧಾರವಾಡ: ಇತ್ತೀಚೆಗೆ ಧಾರವಾಡ ಜಿಲ್ಲಾಧಿಕಾರಿ ಮನೆ ಆವರಣದಲ್ಲಿ ಶ್ರೀಗಂಧ ಮರದ ಕಳ್ಳತನ ನಡೆದಿತ್ತು. ಕಳ್ಳತನ ನಡೆಸಿದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ

    ಆರೋಪಿ ಯಮನಪ್ಪ ಕಟ್ಟಿಮನಿ(31) ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದವನು. ಆರೋಪಿಯನ್ನು ಗುರುವಾರ ಗಂಧದ ಕಟ್ಟಿಗೆ ಸಮೇತ ಧಾರವಾಡ ವಲಯ ಅರಣ್ಯ ಅಧಿಕಾರಿಗಳು ಬಂಧಿಸಿದ್ದು, ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಜಿಲ್ಲಾಧಿಕಾರಿ ಮನೆ ಆವರಣದಲ್ಲಿನ ಶ್ರೀಗಂಧ ಮರ ಕಳ್ಳತನ

    ಆರೋಪಿ ಧಾರವಾಡ ನಗರದಲ್ಲಿರುವ ಜಿಲ್ಲಾಧಿಕಾರಿ ವಸತಿಗೃಹ ಆವರಣದಲ್ಲಿನ ಒಂದು ಶ್ರೀಗಂಧದ ಮರ ಹಾಗೂ ಗುಂಗರಗಟ್ಟಿ ಶ್ರೀಗಂಧದ ನೇಡುತೋಪಿನಲ್ಲಿದ್ದ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಅಕ್ರಮವಾಗಿ ಕಡಿದಿದ್ದ. ಸುಮಾರು 1 ಲಕ್ಷ ರೂ. ಮೌಲ್ಯದ ಶ್ರೀಗಂಧದ ತುಂಡುಗಳನ್ನು ಸಾಗಾಟ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಇದನ್ನೂ ಓದಿ: ಯುದ್ಧ ಬೇಡ: ಲೈವ್‌ನಲ್ಲೇ ರಷ್ಯಾ ಟಿವಿ ಚಾನೆಲ್‌ ಸಿಬ್ಬಂದಿ ಸಾಮೂಹಿಕ ರಾಜೀನಾಮೆ

    ಕಳ್ಳತನದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಬಂಧನಕ್ಕೆ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.

  • ಜಿಲ್ಲಾಧಿಕಾರಿ ಮನೆ ಆವರಣದಲ್ಲಿನ ಶ್ರೀಗಂಧ ಮರ ಕಳ್ಳತನ

    ಜಿಲ್ಲಾಧಿಕಾರಿ ಮನೆ ಆವರಣದಲ್ಲಿನ ಶ್ರೀಗಂಧ ಮರ ಕಳ್ಳತನ

    ಧಾರವಾಡ: ನಿನ್ನೆ ತಡರಾತ್ರಿ ಧಾರವಾಡ ಜಿಲ್ಲಾಧಿಕಾರಿಗಳ ನಿವಾಸದ ಆವರಣದಲ್ಲಿನ ಶ್ರೀಗಂಧದ ಮರ ಕಳ್ಳತನವಾಗಿದೆ.

    ಬೆಳಗ್ಗೆ ಸ್ಥಳ ಪರಿಶೀಲನೆ ಮಾಡಿ, ಪ್ರಕರಣ ದಾಖಲಿಸಲಾಗಿದೆ ಎಂದು ಧಾರವಾಡ ವಲಯ ಅರಣ್ಯ ಅಧಿಕಾರಿ ಆರ.ಎಸ್.ಉಪ್ಪಾರ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಗೂಂಡಾಗಳಿಂದ ಕೊಲೆ – ಈಶ್ವರಪ್ಪ ಹೇಳಿಕೆಗೆ ಸತೀಶ್ ಜಾರಕಿಹೊಳಿ ಕಿಡಿ

    ಈ ಕುರಿತು ಪ್ರಕಟಣೆ ನೀಡಿರುವ ಅವರು, ನಿನ್ನೆ ತಡರಾತ್ರಿ ಜಿಲ್ಲಾಧಿಕಾರಿಗಳ ನಿವಾಸದ ಆವರಣದಲ್ಲಿದ್ದ ಶ್ರೀಗಂಧದ ಮರ ಕಳ್ಳತನವಾಗಿದೆ. ಬೆಳಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮರ ಕಡಿದ ಸ್ಥಳವನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ : ಬಡ್ಡೀಸ್ ಚಿತ್ರಕ್ಕೆ ಯುಎಸ್ಎ ಕ್ಯಾಮೆರಾವುಮೆನ್ : ಇವರು ಎಮ್ಮಿ ಅವಾರ್ಡ್ ನಾಮಿನೇಟರ್

    ಈಗಾಗಲೇ ಅರಣ್ಯ ಇಲಾಖೆಯಿಂದ ಎಫ್‍ಐಆರ್ ದಾಖಲಿಸಲಾಗಿದೆ. ತನಿಖೆ ಆರಂಭಿಸಲಾಗಿದ್ದು, ಶೀಘ್ರದಲ್ಲೇ ಮರ ಕಳ್ಳರನ್ನು ಬಂಧಿಸಲಾಗುವುದು ಎಂದು ಧಾರವಾಡ ವಲಯ ಅರಣ್ಯ ಅಧಿಕಾರಿ ಆರ್ ಎಸ್ ಉಪ್ಪಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.