Tag: District Administration

  • ಅನಾರೋಗ್ಯದಿಂದ 6ರ ಬಾಲಕಿ ಸಾವು – ಕೊರೊನಾ ಪ್ರೋಟೋಕಾಲ್‍ನಂತೆ ಶವಸಂಸ್ಕಾರ

    ಅನಾರೋಗ್ಯದಿಂದ 6ರ ಬಾಲಕಿ ಸಾವು – ಕೊರೊನಾ ಪ್ರೋಟೋಕಾಲ್‍ನಂತೆ ಶವಸಂಸ್ಕಾರ

    – ಬಾಲಕಿ ಗಂಟಲು ದ್ರವ ಮತ್ತು ರಕ್ತ ಮಾದರಿ ಕಲಬುರಗಿಗೆ ರವಾನೆ

    ಯಾದಗಿರಿ: ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದ ಜಿಲ್ಲೆಯ ಶಹಪುರ ತಾಲೂಕಿನ ಕೊಂಗಂಡಿ ಗ್ರಾಮದ ಆರು ವರ್ಷದ ಬಾಲಕಿಯ ಅಂತ್ಯಕ್ರಿಯೆಯನ್ನು ವಿಶ್ವ ಅರೋಗ್ಯ ಸಂಸ್ಥೆಯ ಪ್ರೋಟೋಕಾಲ್ ನಿಯಮದಂತೆ ಅಧಿಕಾರಿಗಳು ನೆರವೇರಿಸಿದ್ದಾರೆ.

    ಕಳೆದ ಮೂರು ದಿನಗಳಿಂದ ಬಾಲಕಿ ತೀವ್ರ ಕೆಮ್ಮು, ಜ್ವರ ಹಾಗೂ ಗಂಟಲು ನೋವಿನಿಂದ ಬಳಲುತ್ತಿದ್ದಳು. ಹೀಗಾಗಿ ಬಾಲಕಿ ಕುಟುಂಬಸ್ಥರು ಅವಳಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಬಾಲಕಿ ಗುಣಮುಖವಾಗದ ಹಿನ್ನಲೆ ಹೆಚ್ಚಿನ ಚಿಕಿತ್ಸೆಗಾಗಿ, ಶಹಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾಳೆ.

    ಮೃತ ಬಾಲಕಿ ಪೋಷಕರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ ಲಾಕ್‍ಡೌನ್ ಆದೇಶವಿದ್ದರೂ ಸಹ ಏಪ್ರಿಲ್ 1ರಂದು ವಾಪಸ್ ಜಿಲ್ಲೆಗೆ ಬಂದಿದ್ದರು. ಏ.4ರಂದು ಬಾಲಕಿಗೆ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಈ ಬಗ್ಗೆ ಮಾಹಿತಿ ಅರಿತ ಆರೋಗ್ಯ ಅಧಿಕಾರಿಗಳು ಮೃತ ಬಾಲಕಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪಡೆದು ಕಲಬುರಗಿಗೆ ಕಳುಹಿಸಿದ್ದಾರೆ. ಸಂಜೆ ಜಿಲ್ಲಾಡಳಿತದಿಂದ ಡಬ್ಲ್ಯುಹೆಚ್‍ಓ ಪ್ರೋಟೋಕಾಲ್ ನಿಯಮದಂತೆ ಅಂತ್ಯಕ್ರಿಯೆ ಮಾಡಲಾಗಿದೆ.

  • ಮೈಸೂರಿನಲ್ಲಿ 35 ಪ್ರಕರಣ ಪತ್ತೆಯಾದರೂ ಡೋಂಟ್ ಕೇರ್

    ಮೈಸೂರಿನಲ್ಲಿ 35 ಪ್ರಕರಣ ಪತ್ತೆಯಾದರೂ ಡೋಂಟ್ ಕೇರ್

    – ತಂಡೋಪತಂಡವಾಗಿ ಮಾರುಕಟ್ಟೆಗೆ ಆಗಮನ

    ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 35ಕ್ಕೆ ತಲುಪಿದರೂ ಜನ ಬುದ್ಧಿ ಕಲಿಯುತ್ತಿಲ್ಲ. ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು, ತಂಡೋಪತಂಡವಾಗಿ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ಜನರ ನಿಯಂತ್ರಣ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

    ಸದ್ಯ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ 35ಕ್ಕೆ ಏರಿಯಾಗಿದೆ. ಈ ಸಂಖ್ಯೆ ಇನ್ನೂ ದುಪ್ಪಟ್ಟಾಗುವ ಆತಂಕವಿದೆ. ಹೀಗಾಗಿ, ಜನರು ಮನೆಯಿಂದ ಹೊರಗೆ ಬಾರದಂತೆ ನೋಡಿಕೊಳ್ಳಲು ಮೈಸೂರು ಜಿಲ್ಲಾಡಳಿತ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಇದರ ಭಾಗವಾಗಿ ಅವಶ್ಯಕ ಸಾಮಾಗ್ರಿಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಆದರೆ ಮೈಸೂರಿನ ಲಲಿತ್ ಮಹಲ್ ಮೈದಾನದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಮಾತ್ರ ಜನಜಂಗುಳಿ ಉಂಟಾಗಿದೆ.

    ಆದರೂ ಜನ ಮಾತ್ರ ಹೊರಗಡೆ ಬರುವುದನ್ನು ನಿಲ್ಲಿಸುತ್ತಿಲ್ಲ. ತರಕಾರಿ ಮಾರುಕಟ್ಟೆಯಲ್ಲಿ ಜನ ಹೆಚ್ಚಾಗುತ್ತಿದ್ದ ಕಾರಣ ತಾತ್ಕಾಲಿಕವಾಗಿ ಆಯಾ ಬಡಾವಣೆಗಳಲ್ಲೇ ತರಕಾರಿ ಮಾರುಕಟ್ಟೆ ಆರಂಭಿಸಲಾಗಿದೆ. ಆದರೂ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಂತೆಯಲ್ಲಿ ತರಕಾರಿ ಖರೀದಿ ಮಾಡುತ್ತಿದ್ದಾರೆ.

  • 800 ರೇಷನ್ ಕಿಟ್ ಜಿಲ್ಲಾಡಳಿತಕ್ಕೆ ಹಸ್ತಾಂತರ

    800 ರೇಷನ್ ಕಿಟ್ ಜಿಲ್ಲಾಡಳಿತಕ್ಕೆ ಹಸ್ತಾಂತರ

    – ಪ್ರತಿ ಮನೆಗೆ ಬರಲಿದೆ ತರಕಾರಿ ಸಂಚಾರಿ ವಾಹನ

    ಬಳ್ಳಾರಿ: ಕೊರೊನಾ ಮಾಹಾಮಾರಿಗೆ ಈಡಿ ವಿಶ್ವವೇ ತಲ್ಲಣಗೊಂಡಿದೆ. ಈ ಸಂದರ್ಭದಲ್ಲಿ ಅನೇಕ ದಾನಿಗಳು ಬಡವರಿಗೆ ನೆರವಾಗುತ್ತಿದ್ದಾರೆ.

    ಬಳ್ಳಾರಿಯ ಆರ್ಯವೈಶ್ಯ ಅಸೋಸಿಯೇಶನ್ ಮತ್ತು ಬಳ್ಳಾರಿ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಜಿಲ್ಲಾಡಳಿತ ಸಹಾಯಕ್ಕೆ ದಾವಿಸಿದ್ದು, ಈ ಎರಡು ಸಂಸ್ಥೆಗಳು ಜೊತೆಗೂಡಿ ತಲಾ 400 ರೇಷನ್ ಕಿಟ್‍ಗಳಂತೆ ಒಟ್ಟು 800 ರೇಷನ್ ಕಿಟ್‍ಗಳನ್ನು ಬಳ್ಳಾರಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ.

    ಪ್ರತಿ ಒಂದು ಕಿಟ್‍ನಲ್ಲಿ ದಿನ ನಿತ್ಯ ಬೇಕಾಗುವ ವಿವಿಧ ಬಗೆಯ ಧಾನ್ಯಗಳ ಇದ್ದು, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಈ ರೇಷನ್ ಕಿಟ್‍ಗಳನ್ನು ಸ್ವೀಕರಿಸಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ನೆರವಿಗೆ ಬಂದಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಇವುಗಳನ್ನು ನಿರಾಶ್ರಿತರಿಗೆ ಮತ್ತು ನಿರ್ಗತಿಕರಿಗೆ ವಿತರಿಸಲಾಗುವುದು ಎಂದಿದ್ದಾರೆ.

    ಸಂಚಾರಿ ವಾಹನ ಮೂಲಕ ತರಕಾರಿ ಮಾರಾಟ:
    ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಹೊಸಪೇಟೆ ನಗರವನ್ನು ಕಂಟೈನ್‍ಮೆಂಟ್ ಝೋನ್ ವ್ಯಾಪ್ತಿಗೆ ಒಳಪಡಿಸಿದೆ. ಹೀಗಾಗಿ ಜನರಿಗೆ ಅಗತ್ಯ ವಸ್ತುಗಳ ಕೊರತೆ ಉಂಟಾಗುವ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ಅಗತ್ಯ ವಸ್ತುಗಳು ಪೂರೈಕೆಗೆ ಜಿಲ್ಲಾಡಳಿತ ಮುಂದಾಗಿದೆ. ನಗರಕ್ಕೆ ಯಾವುದೇ ವಾಹನಗಳ ಸಂಚಾರಕ್ಕೆ ನಿರ್ಬಂಧ ಇರುವ ಕಾರಣದಿಂದ ಸಾರ್ವಜನಿಕರಿಗೆ ದಿನನಿತ್ಯದ ಬಳಕೆಗೆ ತರಕಾರಿಗಳನ್ನು ಜಿಲ್ಲಾಡಳಿತದ ವತಿಯಿಂದ ಸಂಚಾರಿ ತರಕಾರಿ ಮಾರಾಟದ ವಾಹನಗಳ ಮೂಲಕ ಎಲ್ಲಾ ವಾರ್ಡ್ ಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡಲಾಗುತ್ತಿದೆ.

    ಹೊಸಪೇಟೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದ ಕಾರಣ ಕಳೆದ ಮೂರು ದಿನಗಳಿಂದ ತರಕಾರಿಯ ಆಮದನ್ನು ನಿರ್ಬಂಧಿಸಲಾಗಿತ್ತು. ಈಗ ನಿರ್ಬಂಧವನ್ನು ತೆರವುಗೊಳಿಸಿ ಬೆಳಗ್ಗೆ 5 ರಿಂದ 10ರವರೆಗೆ ಕೇವಲ ರೈತರು, ಸಗಟು ವ್ಯಾಪಾರಿಗಳಿಂದ ತರಕಾರಿಗಳನ್ನು ಕೊಳ್ಳಲು ಅವಕಾಶವಿದೆ. ಚಿಲ್ಲರೆ ವ್ಯಾಪಾರಕ್ಕೆ ಅನುವುಮಾಡಿಕೊಟ್ಟರೆ ಜನ ದಟ್ಪಣೆ ಉಂಟಾಗುವುದರಿಂದ ಚಿಲ್ಲರೆ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ.

    ಸಾರ್ವಜನಿಕರಿಗೆ ತರಕಾರಿ ಸರಬರಾಜು ಮಾಡುವ ಸಲುವಾಗಿ ನಗರಸಭೆ ವತಿಯಿಂದ ತರಕಾರಿ ಮಾರಾಟ ಸಂಚಾರಿ ವಾಹನ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯನ್ನು ಅರಣ್ಯ ಸಚಿವರಾದ ಆನಂದ್ ಸಿಂಗ್ ರವರು ಉದ್ಘಾಟಿಸಿದ್ದಾರೆ. ಹಾಲು ವಿತಕರಿಗೆ ಈಗಾಗಲೇ ವ್ಯವಸ್ಥೆ ಕಲ್ಪಿಸಿದ್ದು, ಸಾರ್ವಜನಿಕರು ಡೈರಿಗೆ ಬಾರದಂತೆ ವಿತರಕರೇ ಹೆಚ್ಚಿನ ಮಾನವ ಸಂಪನ್ಮೂಲ ಬಳಸಿ ಮನೆ-ಮನೆಗೆ ಸರಬರಾಜು ಮಾಡುವಂತೆ ವಿತರಕರಿಗೆ ಸೂಚಿಸಲಾಗಿದೆ.

  • ಮಂಡ್ಯದ ಒಂದೇ ಗ್ರಾಮದ 50 ಮಂದಿಗೆ ಜ್ವರ – ಆತಂಕದಲ್ಲಿ ಗ್ರಾಮಸ್ಥರು

    ಮಂಡ್ಯದ ಒಂದೇ ಗ್ರಾಮದ 50 ಮಂದಿಗೆ ಜ್ವರ – ಆತಂಕದಲ್ಲಿ ಗ್ರಾಮಸ್ಥರು

    ಮಂಡ್ಯ: ಇದಕ್ಕಿದ್ದಂತೆ ಒಂದು ಊರಿನ 50 ಜನರಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿದ್ದು, ಇದರಿಂದ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

    ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ದೊಡ್ಡಹಾರನಹಳ್ಳಿಯಲ್ಲಿ 50 ಮಂದಿ ಜನರಿಗೆ ಕಳೆದ ಹಲವು ದಿನಗಳಿಂದ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿದೆ. ಗ್ರಾಮದಲ್ಲಿ 100 ಕುಟುಂಬಗಳಿದ್ದು, ಇದರಲ್ಲಿ ಬಹುತೇಕ ಕುಟುಂಬದ ಸದಸ್ಯರಿಗೆ ಜ್ವರ ಕಾಣಿಸಿಕೊಂಡಿದೆ. ಇದರದ ಇಡೀ ಗ್ರಾಮ ಹಾಗೂ ಅಕ್ಕ-ಪಕ್ಕದ ಜನರು ಗಾಬರಿಗೊಂಡಿದ್ದಾರೆ.

    ಈ ಗ್ರಾಮಕ್ಕೆ ಮುಂಬೈ, ದುಬೈ ಹಾಗೂ ಬೆಂಗಳೂರಿನಿಂದ ಹಲವು ಜನರು ಬಂದಿರುವುದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಹಲವು ದಿನಗಳಿಂದ ಜ್ವರ ಬಂದಿದ್ದರೂ ಸಹ ಜನರು ಆಸ್ಪತ್ರೆಗೆ ಹೋಗುತ್ತಿಲ್ಲ. ಆಸ್ಪತ್ರೆಗೆ ಹೋದರೆ ಕ್ವಾರಂಟೈನ್‍ನಲ್ಲಿ ಹಾಕಬಹುದು ಎನ್ನುವ ಕಾರಣಕ್ಕೆ ಹೋಗುತ್ತಿಲ್ಲ ಎಂದು ಹೇಳಲಾಗಿದೆ.

    ಇಂದಿಗೂ ಸಹ ಈ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಾಲಿಟ್ಟಿಲ್ಲ. ಕೇವಲ ಆಶಾ ಕಾರ್ಯಕರ್ತೆಯರು ಫೋನ್‍ನಲ್ಲಿ ಆರೋಗ್ಯ ವಿಚಾರಣೆ ಮಾಡುತ್ತಿದ್ದಾರೆ. ಪತ್ರಕರ್ತರ ಸಹಾಯದಿಂದ ಜನರು ಮಾತ್ರೆ ತರಿಸಿಕೊಂಡು ತೆಗೆದುಕೊಳ್ಳುತ್ತಿದ್ದಾರೆ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತು ಈ ಜನರನ್ನು ತಪಾಸಣೆ ಮಾಡಬೇಕಾಗಿದೆ.

  • ರಾಯಚೂರಲ್ಲಿ ಎಲ್ಲರಿಗೂ ಲಭ್ಯವಿಲ್ಲ ಪೆಟ್ರೋಲ್ – ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಬಂಕ್ ಓಪನ್

    ರಾಯಚೂರಲ್ಲಿ ಎಲ್ಲರಿಗೂ ಲಭ್ಯವಿಲ್ಲ ಪೆಟ್ರೋಲ್ – ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಬಂಕ್ ಓಪನ್

    ರಾಯಚೂರು: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದರೂ ಜನ ಅನಾವಶ್ಯಕವಾಗಿ ಹೊರಗಡೆ ಓಡಾಡುತ್ತಲೇ ಇದ್ದಾರೆ. ಹೀಗಾಗಿ ರಾಯಚೂರು ಜಿಲ್ಲಾಡಳಿತ ಹೊಸ ತಂತ್ರಕ್ಕೆ ಮುಂದಾಗಿದೆ. ಪೆಟ್ರೋಲ್ ಬಂಕ್‍ಗಳಲ್ಲಿ ಹೊಸ ನಿಯಮಗಳನ್ನ ಜಾರಿಗೆ ತರಲಾಗಿದೆ.

    ಕೊರೊನಾ ವೈರಸ್ ಸೋಂಕು ತಡೆಯುವ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು, ಕೆಲಸಗಾರರು, ಸ್ವಯಂ ಸೇವಕರಿಗೆ ಮಾತ್ರ ಪೆಟ್ರೋಲ್ ಹಾಕಬೇಕು. ತುರ್ತು ಪರಸ್ಥಿತಿಯನ್ನು ಮಾತ್ರ ಪರಿಗಣಿಸಬೇಕು. ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಪೆಟ್ರೋಲ್ ಬಂಕ್ ತೆರೆಯಬೇಕು ಎಂದು ನಿಯಮ ಜಾರಿಗೆ ತರಲಾಗಿದೆ. ಅಲ್ಲದೆ ಬಾಟಲಿಗಳಲ್ಲಿ ಪೆಟ್ರೋಲ್ ಹಾಕಬಾರದು ಎಂಬ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

    ಬೈಕ್‍ವೊಂದಕ್ಕೆ 200 ರೂಪಾಯಿ ಪೆಟ್ರೋಲ್ ಹಾಗೂ ವಾಹನಗಳಿಗೆ 500 ರೂಪಾಯಿವರೆಗೆ ಮಾತ್ರ ಡಿಸೇಲ್ ಅಥವಾ ಪೆಟ್ರೋಲ್ ಹಾಕಲು ಸೂಚಿಸಲಾಗಿದೆ. ಜಿಲ್ಲಾಡಳಿತ ಪೆಟ್ರೋಲ್ ಬಂಕ್ ಮಾಲೀಕರೊಂದಿಗೆ ನಡೆಸಿದ ಸಭೆಯಲ್ಲಿ ಈ ಕ್ರಮಗಳಿಗೆ ಮಾಲೀಕರು ಒಪ್ಪಿಕೊಂಡಿದ್ದು, ಇಂದಿನಿಂದ ಪೆಟ್ರೋಲ್ ಎಲ್ಲರಿಗೂ ಲಭ್ಯವಿಲ್ಲ. ತುರ್ತು ಪರಸ್ಥಿತಿ, ರೈತರ ವಾಹನಗಳಿಗೆ ಮಾತ್ರ ವಿನಾಯಿತಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

    ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ ಮುಂದೆಯೂ ಕಾಣಿಸಿಕೊಳ್ಳದ ಹಾಗೇ ತಡೆಯಲು ಕಟ್ಟುನಿಟ್ಟಿನ ಕ್ರಮಗಳ ಅಗತ್ಯ ಇರುವುದರಿಂದ ಜಿಲ್ಲಾಡಳಿತ ಪೆಟ್ರೋಲ್ ಬಂಕ್‍ಗಳ ಮೇಲೆ ನಿರ್ಭಂದ ಹೇರಿದೆ.

  • ಹಾಸನದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ಟೈಂಟೇಬಲ್ – ಯಾವ ವಾರ ಏನು ಸಿಗುತ್ತೆ?

    ಹಾಸನದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ಟೈಂಟೇಬಲ್ – ಯಾವ ವಾರ ಏನು ಸಿಗುತ್ತೆ?

    ಹಾಸನ: ನಾವು ಅಗತ್ಯ ವಸ್ತುಗಳನ್ನು ಕೊಳ್ಳಲು ಹೊರಗೆ ಬಂದಿದ್ದೇವೆ ಎಂದು ಸಬೂಬು ಹೇಳುತ್ತಾ ದಿನಪೂರ್ತಿ ಸುತ್ತಾಡುತ್ತಿದ್ದವರಿಗೆ ಕಡಿವಾಣ ಹಾಕಲು ಹಾಸನ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಹೊಸ ಟೈಂಟೇಬಲ್ ಸಿದ್ಧಪಡಿಸಿದೆ.

    ಸಾರ್ವಜನಿಕರ ಹಿತದೃಷ್ಟಿಗೆ ಈ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಭಾನುವಾರ, ಮಂಗಳವಾರ, ಗುರುವಾರ, ಶನಿವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರಗೆ ದಿನಸಿ ಅಂಗಡಿಗಳು, ತರಕಾರಿ, ಪೇಪರ್, ಹಾಲು, ಪೆಟ್ರೋಲ್ ಬಂಕ್‍ಗಳ ಸೌಲಭ್ಯ ಪಡೆಯಬಹುದಾಗಿದೆ. ಸೋಮವಾರ, ಬುಧವಾರ, ಶುಕ್ರವಾರ ಬೆಳಗ್ಗೆ 6 ರಿಂದ 8 ರವರಗೆ ಹಾಲು ಮತ್ತು ಪೇಪರ್ ಮಾತ್ರ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

    ಪ್ರತಿನಿತ್ಯ ಬೆಳಗ್ಗೆಯಿಂದ ರಾತ್ರಿಯವರೆಗೆ ಮೆಡಿಕಲ್ ಸ್ಟೋರ್ ಮತ್ತು ಕ್ಲಿನಿಕ್‍ಗಳು ಓಪನ್ ಇರುತ್ತವೆ. ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ 2 ಪೆಟ್ರೋಲ್ ಬಂಕ್‍ಗಳು ಬೆಳಗ್ಗೆಯಿಂದ ರಾತ್ರಿಯವರಗೆ ಮಾತ್ರ ತೆರೆದಿರುತ್ತವೆ. ಹೋಟೆಲ್‍ಗಳ ಹೋಂ ಡೆಲಿವರಿ ಮಾತ್ರ ಅವಕಾಶ ನೀಡಲಾಗಿದೆ. ಕೆಲವರು ವಸ್ತುಗಳ ಖರೀದಿ ನೆಪದಲ್ಲಿ ಮೋಜು ಮಸ್ತಿಗಳನ್ನು ಮಾಡುತ್ತಿದ್ದು, ಅಂತವರ ಮೇಲೆ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಟೈಂಟೇಬಲ್ ಹಾಕಲಾಗಿದೆ.

  • ಪೊಲೀಸರಿಗೆ ಧಮ್ಕಿ ಹಾಕಿ ಸುತ್ತಾಡಿದವ ಅರೆಸ್ಟ್ – ಸಾರ್ವಜನಿಕರಿಗೆ ಸಿಗಲ್ಲ ಪೆಟ್ರೋಲ್

    ಪೊಲೀಸರಿಗೆ ಧಮ್ಕಿ ಹಾಕಿ ಸುತ್ತಾಡಿದವ ಅರೆಸ್ಟ್ – ಸಾರ್ವಜನಿಕರಿಗೆ ಸಿಗಲ್ಲ ಪೆಟ್ರೋಲ್

    ಕಾರವಾರ: ಹೆಲ್ತ್ ಎಮರ್ಜೆನ್ಸಿ ಇದ್ದರೂ ಅನವಶ್ಯಕವಾಗಿ ಓಡಾಡಿ, ಪೊಲೀಸರಿಗೇ ಧಮ್ಕಿ ಹಾಕಿದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

    ಕೆ.ಎಮ್ ಶಾಝೀರ್(39) ಎಂಬವನ ವಿರುದ್ಧ ಪ್ರಕರಣ ದಾಖಲಾಗಿದ್ದು, ಲಾಕ್‍ಡೌನ್ ಇದ್ದರೂ ಈತ ಬೈಕ್‍ನಲ್ಲಿ ಅನವಶ್ಯಕವಾಗಿ ಮಾಸ್ಕ್ ಹಾಕಿಕೊಳ್ಳದೇ ಓಡಾಡುತ್ತಿದ್ದನು. ಅಷ್ಟೇ ಅಲ್ಲದೇ ತನ್ನನ್ನು ಪ್ರಶ್ನೆ ಮಾಡಿದ ಪೊಲೀಸರಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 270, 504, 506 ಹಾಗೂ 188 ಅಡಿಯಲ್ಲಿ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಲಾಗಿದೆ.

    ಸಾರ್ವಜನಿಕರಿಗೆ ಪೆಟ್ರೋಲ್ ಬಂದ್:
    ಜಿಲ್ಲಾಡಳಿತ ಜನರು ಮನೆಯಿಂದ ಹೊರ ಬರದಂತೆ ಆದೇಶ ನೀಡಿದರೂ ಹಲವರು ನಗರ ಪ್ರದೇಶದಲ್ಲಿ ಅನಾವಶ್ಯಕವಾಗಿ ಓಡಾಡುತ್ತಿದ್ದಾರೆ. ಈ ಹಿನ್ನೆಲೆ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೆಟ್ರೋಲ್ ಬಂಕ್‍ನಲ್ಲಿ ಸಾರ್ವಜನಿಕರಿಗೆ ಪೆಟ್ರೋಲ್ ನೀಡುವುದನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

    ಕೇವಲ ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮಾತ್ರ ಪೆಟ್ರೋಲ್ ನೀಡಲು ಜಿಲ್ಲಾಡಳಿತ ಪೆಟ್ರೋಲ್ ಬಂಕ್‍ಗಳಿಗೆ ಸೂಚನೆ ನೀಡಿದೆ. ಹಾಗೆಯೇ ಜಿಲ್ಲೆಯ ಎಲ್ಲಾ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತ ಮನೆ ಬಾಗಿಲಿಗೆ ಕಳುಹಿಸಿ ಕೊಡಲಾಗುತ್ತಿದ್ದು, ಜನರು ಇದರ ಉಪಯೋಗ ಪಡೆದುಕೊಂಡು ಮನೆಯಲ್ಲಿರುವಂತೆ ಜಿಲ್ಲಾಡಳಿತ ತಿಳಿಸಿದೆ.

    ಪತ್ರಕರ್ತರಿಗೆ ಜಿಲ್ಲಾಧಿಕಾರಿಗಳ ಮನವಿ:
    ಪತ್ರಕರ್ತರು ಹಲವು ಸ್ಥಳಗಳಿಗೆ ತೆರಳಿ ಸುದ್ದಿ ಮಾಡುತ್ತಿರುತ್ತೀರಿ. ಕೊರೊನಾ ಪೀಡಿತ ವ್ಯಕ್ತಿಗಳು ಜಿಲ್ಲೆಯ ಹಲವು ಭಾಗದಲ್ಲಿ ಓಡಾಡಿದ್ದರಿಂದ ನೀವು ಜಾಗೃತರಾಗಿರಬೇಕಿದೆ. ಪತ್ರಕರ್ತರು ಮನೆಯಲ್ಲಿಯೇ ಇದ್ದು ಸುದ್ದಿ ಮಾಡಬೇಕು. ಆದಷ್ಟು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

  • ಶನಿವಾರ ದಕ್ಷಿಣ ಕನ್ನಡ ಸಂಪೂರ್ಣ ಬಂದ್

    ಶನಿವಾರ ದಕ್ಷಿಣ ಕನ್ನಡ ಸಂಪೂರ್ಣ ಬಂದ್

    ಮಂಗಳೂರು: ದಕ್ಷಿಣ ಕನ್ನಡದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಶನಿವಾರ ಜಿಲ್ಲೆಯನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದೆ.

    ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಡಳಿತ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಶನಿವಾರ ಅಂಗಡಿ ಮುಂಗಟ್ಟುಗಳು ಹಾಗೂ ಸಾರ್ವಜನಿಕ ಓಡಾಟವನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ನೀಡಿದ ಸಮಯವನ್ನೂ ಕೂಡ ಜಿಲ್ಲಾಡಳಿತ ಹಿಂಪಡೆದಿದೆ.

    ಈಗಾಗಲೇ ರಾಜ್ಯದಲ್ಲಿ 64 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಇಂದು ಒಂದೇ ದಿನ 9 ಪ್ರಕರಣ ಕರ್ನಾಟಕದಲ್ಲಿ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 7 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಈ ಹಿನ್ನೆಲೆ ಸೋಂಕು ಹರಡುವುದನ್ನು ತಡೆಗಟ್ಟಲು ಮೆಡಿಕಲ್ ಸ್ಟೋರ್, ಆಸ್ಪತ್ರೆ ಸೇವೆ ಹಾಗೂ ಅಂಬುಲೆನ್ಸ್ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಸಂಪೂರ್ಣವಾಗಿ ಜಿಲ್ಲಾದ್ಯಂತ ಶನಿವಾರ ಸ್ಥಗಿತಗೊಳಿಸಲಾಗುತ್ತಿದೆ.

  • ದಾವಣಗೆರೆ ಸೋಂಕಿತನ ಟ್ರಾವೆಲ್ ಹಿಸ್ಟರಿ – ಜಿಲ್ಲಾಡಳಿತದಿಂದ ಮಾಹಿತಿ

    ದಾವಣಗೆರೆ ಸೋಂಕಿತನ ಟ್ರಾವೆಲ್ ಹಿಸ್ಟರಿ – ಜಿಲ್ಲಾಡಳಿತದಿಂದ ಮಾಹಿತಿ

    ದಾವಣಗೆರೆ: ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಫ್ರಾನ್ಸ್ ನಿಂದ ದಾವಣಗೆರೆಗೆ ಬಂದಿದ್ದ ವ್ಯಕ್ತಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸೋಂಕಿತ ವ್ಯಕ್ತಿ ಎಲ್ಲೆಲ್ಲಿ ಪ್ರಯಾಣಿಸಿದ್ದ ಎಂಬ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.

    ಮಾರ್ಚ್ 17ರಂದು ಫ್ರಾನ್ಸ್ ನಿಂದ ಅಬುದಾಭಿ ಮುಖಾಂತರ ವಿಮಾನದಲ್ಲಿ ಬೆಳಗ್ಗೆ 11:30ಕ್ಕೆ ಸೋಂಕಿತ ವ್ಯಕ್ತಿ ಹೊರಟಿದ್ದರು. ಮಾರ್ಚ್ 18ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರು ತಲುಪಿದ ಸೋಂಕಿತ ವೋಲ್ವೋ ಬಸ್ ಮುಖಾಂತರ ಬೆಳಗ್ಗೆ 8 ಗಂಟೆಗೆ ಮೆಜೆಸ್ಟಿಕ್‍ನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ತಲುಪಿದ್ದರು. ಮೆಜೆಸ್ಟಿಕ್‍ನಿಂದ ರಾಜಹಂಸ ಬಸ್ಸಿನಲ್ಲಿ ಬೆಳಗ್ಗೆ 10 ಗಂಟೆಗೆ ಹೊರಟು ಮಧ್ಯಾಹ್ನ 4 ಗಂಟೆಗೆ ದಾವಣಗೆರೆಗೆ ಬಂದಿಳಿದು, ತಮ್ಮ ಸ್ವಂತ ಕಾರಿನಲ್ಲಿ ಮನೆಗೆ ಹೋಗಿದ್ದರು.

    ಸೋಂಕಿತ ವ್ಯಕ್ತಿಯ ಪ್ರಯಾಣ ಮಾಹಿತಿಯು ವಿಮಾನ ನಿಲ್ದಾಣದ ಪ್ರಾಧಿಕಾರದ ಮುಖಾಂತರ ಮಾರ್ಚ್ 18ರ ಮಧ್ಯರಾತ್ರಿ ಜಿಲ್ಲಾ ಸರ್ವೇಕ್ಷಣ ಘಟಕಕ್ಕೆ ಲಭ್ಯವಾಗಿತ್ತು. ಬಳಿಕ ಮಾರ್ಚ್ 22ರಂದು ವ್ಯಕ್ತಿಯನ್ನು ಸಂಪರ್ಕಿಸಿ ಕೋವಿಡ್-19 ಮಾರ್ಗಸೂಚಿಗಳನ್ವಯ ಕ್ರಮ ಕೈಗೊಳ್ಳಲಾಗಿತ್ತು.

    ಆದರೆ ಮಾರ್ಚ್ 25ರಂದು ವ್ಯಕ್ತಿಯಲ್ಲಿ ಕೆಮ್ಮು, ಗಂಟಲು ನೋವು, ಜ್ವರ ಕಾಣಿಸಿಕೊಂಡಿದ್ದು ಅವರನ್ನು ತಪಾಸಣೆ ಒಳಪಡಿಸಲಾಗಿತ್ತು. ಇಂದು ವ್ಯಕ್ತಿಯ ವೈದ್ಯಕೀಯ ಪರೀಕ್ಷೆಯ ವರದಿ ಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗಿದ್ದು, ಸೋಂಕಿತ ಒಟ್ಟು 18 ಮಂದಿ ಜೊತೆ ನೇರ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಅವರನ್ನೂ ಕೂಡ ತಪಾಸಣೆಗೆ ಒಳಪಡಿಸಲಾಗಿದೆ.

  • ವಿದೇಶದಿಂದ ಬಂದ ಕೇರಳಿಗರು ಖಾಸಗಿ ವಾಹನ ಬಳಸುವಂತಿಲ್ಲ – ದ.ಕ ಜಿಲ್ಲಾಡಳಿತ ಕಟ್ಟೆಚ್ಚರ

    ವಿದೇಶದಿಂದ ಬಂದ ಕೇರಳಿಗರು ಖಾಸಗಿ ವಾಹನ ಬಳಸುವಂತಿಲ್ಲ – ದ.ಕ ಜಿಲ್ಲಾಡಳಿತ ಕಟ್ಟೆಚ್ಚರ

    ಮಂಗಳೂರು: ದೇಶದಿಂದ ಬಂದ ಕೇರಳಿಗರಿಗೆ ಖಾಸಗಿ ವಾಹನ ಬಳಸುವಿಕೆಯನ್ನು ಮಂಗಳೂರು ವಿಮಾನ ನಿಲ್ದಾನದಲ್ಲಿ ಜಿಲ್ಲಾಡಳಿತ ನಿಷೇಧಿಸಿದೆ.

    ಕೇರಳದಿಂದ ಬಂದ ಪ್ರಯಾಣಿಕರಿಗೆ ಜಿಲ್ಲಾಡಳಿತ ಸರ್ಕಾರಿ ಬಸ್ ಸೇವೆ ಕಲ್ಪಿಸಿದೆ. ಕರ್ನಾಟಕದ ಸರ್ಕಾರಿ ಬಸ್ ನಲ್ಲಿ ಕೇರಳದ ಗಡಿವರೆಗೂ ಡ್ರಾಪ್ ಮಾಡಲಾಗುತ್ತಿದೆ. ಇಂದು ದುಬೈನಿಂದ ಬಂದ ಪ್ರಯಾಣಿಕರನ್ನು 3 ಬಸ್ ನಲ್ಲಿ ತಲಪಾಡಿಯವರೆಗೂ ಬಿಡಲಾಗಿದೆ.

    ವಿಮಾನದಲ್ಲಿ ಬಂದ ಪ್ರಯಾಣಿಕರು ತಲಪಾಡಿಯಿಂದ ತಮ್ಮ ಖಾಸಗಿ ವಾಹನಗಳಲ್ಲಿ ಕೇರಳಕ್ಕೆ ಪ್ರಯಾಣ ಬೆಳಸಬೇಕಿದ್ದು, ವಿದೇಶದಿಂದ ಬಂದವರಿಗೆ ಮಂಗಳೂರಿನಲ್ಲಿ ಸುತ್ತಾಡಲು ನಿರ್ಬಂಧ ಹೇರಲಾಗಿದೆ. ವಿದೇಶದಿಂದ ಬಂದವರು ವಿಮಾನ ನಿಲ್ದಾಣದಿಂದ ಸೀದಾ ಬಸ್ ಹತ್ತಬೇಕು ಎಂದು ಕಟ್ಟಪ್ಪಣೆ ಮಾಡಲಾಗಿದೆ.