Tag: District Administration

  • ವಿಶ್ವ ವಿಖ್ಯಾತ ಹಂಪಿ ವೀಕ್ಷಣೆಗೆ ಮುಕ್ತ ಅವಕಾಶ

    ವಿಶ್ವ ವಿಖ್ಯಾತ ಹಂಪಿ ವೀಕ್ಷಣೆಗೆ ಮುಕ್ತ ಅವಕಾಶ

    ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.

    ಕೊರೊನಾ ಹೆಚ್ಚಳವಾಗುವ ಸಂಭವದ ಹಿನ್ನೆಲೆಯಲ್ಲಿ ಕಳೆದ ತಿಂಗಳ 14ರಿಂದ ಹೇರಿದ್ದ ವೀಕೆಂಡ್ ಕರ್ಫ್ಯೂ ತೆರವುಗೊಳಿಸಲಾಗಿದೆ. ಈ ಹಿಂದೆ ಪ್ರತಿ ಶನಿವಾರ, ಭಾನುವಾರ ಹಾಗೂ ಸೋಮವಾರಗಳಂದು ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಇಳಿಮುಖವಾಗಿತ್ತು. ಆದರೀಗ ಸ್ಮಾರಕಗಳ ವೀಕ್ಷಣೆಗೆ ಹೇರಲಾಗಿದ್ದ ನಿರ್ಬಂಧ ತೆರವು ಮಾಡಲಾಗಿದ್ದು, ಪ್ರವಾಸಿಗರಿಗೆ ಹಾಗೂ ಯಾತ್ರಾರ್ಥಿಗಳಿಗೆ ಸ್ಮಾರಕಗಳ, ದೇವಸ್ಥಾನಗಳ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿಕೊಡಲಾಗಿದೆ. ಇದನ್ನೂ ಓದಿ: ಇನ್ನೂ ಮಳೆಯಾಗಲಿದೆ, ಭೂಮಿ ನಡುಗುತ್ತೆ, ಆಪತ್ತುಗಳು ಕಳೆದಿಲ್ಲ: ಕೋಡಿಶ್ರೀ

    ಮಹಾಮಾರಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರವಾಸೋದ್ಯಮ ಬಹುತೇಕ ನೆಲ ಕಚ್ವಿದೆ. ಸದ್ಯ ಹಂಪಿ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳವ ಸಾಧ್ಯತೆ ಇದೆ.

  • ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿದ್ದರೆ ರೇಷನ್ ಕಾರ್ಡ್ ಕಟ್- ಯಾದಗಿರಿ ಜಿಲ್ಲಾಡಳಿತ ಎಚ್ಚರಿಕೆ

    ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿದ್ದರೆ ರೇಷನ್ ಕಾರ್ಡ್ ಕಟ್- ಯಾದಗಿರಿ ಜಿಲ್ಲಾಡಳಿತ ಎಚ್ಚರಿಕೆ

    ಯಾದಗಿರಿ: ಒಂದು ಕಡೆ ಕೋವಿಡ್ ಲಸಿಕೆ ಪಡೆಯಲು ಜನ ಹಿಂದೇಟು ಹಾಕುತ್ತಿದ್ದು, ಮತ್ತೊಂದೆಡೆ ಕೋವಿಡ್ ಲಸಿಕೆ ಪಡೆಯದಿದ್ದರೆ ರೇಷನ್ ಕಾರ್ಡ್ ಕಟ್ ಮಾಡಲಾಗುವುದು ಎಂದು ಜಿಲ್ಲಾಡಳಿತ ಖಡಕ್ ಎಚ್ಚರಿಕೆ ನೀಡಿದೆ.

    ಮೂರನೇ ಅಲೆ ಆತಂಕ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೋವಿಡ್ ಲಸಿಕೆ ನೀಡುವ ಪ್ರಮಾಣವನ್ನು ಹೆಚ್ಚಳ ಮಾಡಲು ಹರಸಾಹಸ ಪಡುತ್ತಿವೆ. ಹೀಗಾಗಿ ಕೋವಿಡ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ, ಲಸಿಕೆ ಕೊಡಿಸುವ ಕೆಲಸವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮಾಡುತ್ತಿದ್ದಾರೆ. ಬಹುತೇಕರು ಲಸಿಕೆ ಪಡೆಯಲು ಇಚ್ಛಿಸಿದ್ದು, ಇನ್ನೂ ಕೆಲವರು ಲಸಿಕೆ ಎಂದರೆ ಭಯಪಡುತ್ತಿದ್ದಾರೆ. ನಾನು ಸತ್ತರೂ ಲಸಿಕೆ ಪಡೆಯಲ್ಲ ಎಂದು ವೃದ್ಧೆಯೊಬ್ಬರು ಸಿಬ್ಬಂದಿಗೆ ಆವಾಜ್ ಹಾಕಿದ್ದಾರೆ. ಇದನ್ನೂ ಓದಿ: 1,262 ಹೊಸ ಪ್ರಕರಣಗಳು – ಪಾಸಿಟಿವಿಟಿ ರೇಟ್ ಶೇ.0.70

    ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಲಸಿಕೆ ಪ್ರಮಾಣ ಹೆಚ್ಚಳ ಮಾಡಲು ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಲಸಿಕೆ ಪಡೆಯದಿದ್ದರೆ ರೇಷನ್ ಕಟ್ ಮಾಡಲು ಅಧಿಕಾರಿಗಳಿಗೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ಜಿಲ್ಲೆಯ ಮುಂಡರಗಿ ಸೇರಿ ಬಹುತೇಕ ಹಳ್ಳಿಗಳಲ್ಲಿ ಲಸಿಕೆ ಪಡೆಯದಿದ್ದರೆ ರೇಷನ್ ಕಾರ್ಡ್ ಕಟ್ ಮಾಡಲಾಗುತ್ತದೆ ಎಂದು ಪಂಚಾಯಿತಿ ಅಧಿಕಾರಿಗಳು ವಾಹನಗಳ ಮೂಲಕ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ.

  • ಹಳ್ಳಿಗರು ಹೇಳುವ ಸಮಯಕ್ಕೆ, ಹೇಳಿದ ಸ್ಥಳಕ್ಕೆ ಬರುತ್ತೆ ಕೋವಿಡ್ ಲಸಿಕೆ

    ಹಳ್ಳಿಗರು ಹೇಳುವ ಸಮಯಕ್ಕೆ, ಹೇಳಿದ ಸ್ಥಳಕ್ಕೆ ಬರುತ್ತೆ ಕೋವಿಡ್ ಲಸಿಕೆ

    – ಯಾದಗಿರಿಯಲ್ಲಿಗ ವಾಕ್ಸಿನ್ ಎಕ್ಸ್ ಪ್ರೆಸ್ ಓಡಾಟ

    ಯಾದಗಿರಿ: ಜಿಲ್ಲೆಯಲ್ಲಿ ವ್ಯಾಕ್ಸಿನ್ ಪಡೆದುಕೊಂಡವರ ಪ್ರಮಾಣ ಕಡಿಮೆ ಇರುವುದನ್ನು ಕಂಡು ಜಿಲ್ಲಾಡಳಿತಕ್ಕೆ ಫುಲ್ ಟೆನ್ಷನ್ ಆಗಿತ್ತು. ಹಾಗಾಗಿ ಇದೀಗ ಹಳ್ಳಿಗರು ಹೇಳುವ ಸಮಯಕ್ಕೆ, ಹೇಳಿದ ಸ್ಥಳಕ್ಕೆ ಲಸಿಕೆ ತೆಗೆದುಕೊಂಡು ಹೋಗಿ ಲಸಿಕೆ ಹಾಕುವ ನೂತನ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.

    ಗ್ರಾಮೀಣ ಭಾಗದ ಜನ ಜಮೀನು ಕೆಲಸದ ನೆಪ ಹೇಳಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಯಾದಗಿರಿ ಜಿಲ್ಲಾಡಳಿತ ಒಂದು ಮಾಸ್ಟರ್ ಪ್ಲಾನ್ ರೂಪಿಸಿದೆ. ಹಳ್ಳಿಗರು ಹೇಳುವ ಸಮಯಕ್ಕೆ, ಹೇಳಿದ ಸ್ಥಳಕ್ಕೆ ಲಸಿಕೆ ತೆಗೆದುಕೊಂಡು ಹೋಗಲು ಮುಂದಾಗಿದೆ. ಇದನ್ನೂ ಓದಿ: ಕೋವಿಡ್ ಲಸಿಕೆ ಬಗ್ಗೆ ಯಾದಗಿರಿ ಜನರಲ್ಲಿ ಮೂಢನಂಬಿಕೆ

    ಇಡೀ ರಾಜ್ಯದಲ್ಲಿ ಇಂತಹ ಸಾಹಸಕ್ಕೆ ಕೈಹಾಕಿದ್ದು ಯಾದಗಿರಿ ಜಿಲ್ಲಾಡಳಿತವೇ ಮೊದಲು. ಈ ಕಾರ್ಯಕ್ಕೆ ಕೇರ್ ಫೌಂಡೇಶನ್ ಎನ್‍ಜಿಓ ಸಂಸ್ಥೆ ಸಾಥ್ ನೀಡಿದ್ದು, ಜಿಲ್ಲೆಗೆ ಸುಮಾರು 10 ಕ್ಕೂ ಹೆಚ್ಚು ಕೋವಿಡ್ ಲಸಿಕಾ ಎಕ್ಸ್ ಪ್ರೆಸ್ ವಾಹನಗಳನ್ನು ನೀಡಿದೆ. ಈ ವಾಹನಗಳಲ್ಲಿ ಒಬ್ಬರು ಸ್ಟಾಫ್ ನರ್ಸ್ ಹಾಗೂ ಒಬ್ಬರು ಕಂಪ್ಯೂಟರ್ ಆಪರೇಟರ್ ಇದ್ದು, ಹಳ್ಳಿಗಳಿಗೆ ಈ ವಾಹನಗಳಲ್ಲಿ ತೆರಳಿ ಲಸಿಕೆ ಹಾಕುವ ಕಾರ್ಯ ನಡೆಯುತ್ತಿದೆ.

    ಹೊಲ, ಗದ್ದೆಗಳಿಗೆ ತೆರಳುವ ಜನರ ಬಳಿ ಈ ವಾಹನದಲ್ಲಿ ತೆರಳಿ ಅವರಿಗೆ ವ್ಯಾಕ್ಸಿನ್ ಕುರಿತು ಜಾಗೃತಿ ಮೂಡಿಸಿ ಲಸಿಕೆ ಹಾಕಲಾಗುತ್ತಿದೆ. ಇದರಿಂದಾಗಿ ಲಸಿಕೆ ಪ್ರಮಾಣದಲ್ಲಿಯೂ ಸಹ ಏರಿಕೆಯಾಗುತ್ತಿದ್ದು ಜಿಲ್ಲಾಡಳಿತ ಸಂತಸಗೊಂಡಿದೆ. ಇದನ್ನೂ ಓದಿ: ಸರ್ಕಾರಿ ವೈದ್ಯೆ ಈಗ ಮಿಸೆಸ್ ಇಂಡಿಯಾ ಕರ್ನಾಟಕ ರನ್ನರ್‌ಅಪ್‌

  • ಹಾಕಿ ಆಟಗಾರ್ತಿ ಸಲೀಮಾ ಆಟ ನೋಡಲು ಗ್ರಾಮಕ್ಕೆ ಟಿವಿ ಅಳವಡಿಸಿದ ಜಿಲ್ಲಾಡಳಿತ

    ಹಾಕಿ ಆಟಗಾರ್ತಿ ಸಲೀಮಾ ಆಟ ನೋಡಲು ಗ್ರಾಮಕ್ಕೆ ಟಿವಿ ಅಳವಡಿಸಿದ ಜಿಲ್ಲಾಡಳಿತ

    ರಾಂಚಿ: ಟೋಕಿಯೋ ಒಲಂಪಿಕ್ಸ್ ಮಹಿಳಾ ವಿಭಾಗದ ಹಾಕಿ ಸೆಮಿಫೈನಲ್ ಪಂದ್ಯ ಇಂದು ನಡೆಲಿಯಲಿದೆ. ಈ ಪಂದ್ಯವನ್ನು ವೀಕ್ಷಿಸಲು ಹಾಕಿ ತಂಡದ ಆಟಗಾರ್ತಿ ಸಲೀಮಾ ಟೆಟೆ ಗ್ರಾಮಕ್ಕೆ ಜಿಲ್ಲಾಡಳಿತ ಕಡೆಗೂ ಟಿವಿ ಅಳವಡಿಸಿ ಗ್ರಾಮಸ್ಥರ ಬೇಡಿಕೆ ಈಡೇರಿಸಿದೆ.

    ಜಾರ್ಖಂಡ್‍ನ ಸಲೀಮಾ ಟೆಟೆ ಹುಟ್ಟೂರು ಸಿಮ್ದೇಗಾದಲ್ಲಿ ಟಿವಿ, ಮೊಬೈಲ್, ಇಂಟರ್ನೆಟ್ ಸಮಸ್ಯೆಯಿದೆ. ಆದರೆ ಇಲ್ಲಿನ ಹಳ್ಳಿ ಪ್ರತಿಭೆ ಜಪಾನ್ ನಲ್ಲಿ ಇತಿಹಾಸ ನಿರ್ಮಿಸಿದ ಭಾರತದ ವನಿತೆಯರ ಹಾಕಿ ತಂಡದ ಆಟಗಾರ್ತಿಯಾಗಿ ಮಿಂಚಿದ್ದರು. ಆದರೆ ಅವರ ಆಟ ನೋಡಲು ಅವರ ಮನೆಯವರಿಗಾಗಲಿ ಅಲ್ಲಿನ ಗ್ರಾಮಸ್ಥರಿಗಾಗಲಿ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಈ ಬಗ್ಗೆ ಆಕೆಯ ಸಹೋದರಿ ಮಹಿಮಾ ಟೆಟೆ, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಟಿವಿ ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು. ತಕ್ಷಣ ಸ್ಪಂದಿಸಿದ ಜಿಲ್ಲಾಡಳಿತ ಸಲೀಮಾ ಟೆಟ್ ಮನೆಯಲ್ಲಿ ಹೊಸ ಸ್ಮಾರ್ಟ್ ಟಿವಿಯನ್ನು ಸೆಟ್ ಆಪ್ ಬಾಕ್ಸ್ ನೊಂದಿಗೆ ಅಳವಡಿಸಿ ಪಂದ್ಯ ವೀಕ್ಷಣೆಗೆ ಅನುವು ಮಾಡಿಕೊಟ್ಟಿದೆ.

    ಜಿಲ್ಲಾಡಳಿತ ಟಿವಿ ಅಳವಡಿಸಿರುವುದರಿಂದಾಗಿ ಇದೀಗ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಇಂದು ನಡೆಯಲಿರುವ ಭಾರತ ಹಾಗೂ ಅರ್ಜೆಂಟೀನಾ ನಡುವಿನ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾ ಕ್ರೀಡಾಧಿಕಾರಿ ತುಷಾರ್ ರಾಯ್ ತಿಳಿಸಿದ್ದಾರೆ.

    ಸಲೀಮಾ ಜಾಖರ್ಂಡ್‍ನ ನಕ್ಸಲ್ ಪೀಡಿತ ಜಿಲ್ಲೆಯ ಭಾಗವಾದ ಸಿಮ್ದೇಗಾದ ಬಡ್ಕಿಚಾಪರ್ ಹಳ್ಳಿಯವರು. ಇಲ್ಲಿರುವ ಅನೇಕ ಮನೆಗಳು ಟಿವಿ, ಮೊಬೈಲ್, ಇಂಟರ್ನೆಟ್ ಸಂಪರ್ಕ ಸಿಗದೆ ಕಷ್ಟಪಡುತ್ತಿದೆ. ಇದೀಗ ಸಲೀಮಾ ಟೆಟೆಯ ಸಾಧನೆಯ ಬಳಿಕವಾದರೂ ಗ್ರಾಮದ ಅಭಿವೃದ್ಧಿ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಗ್ರಾಮಸ್ಥರು. ಇದನ್ನೂ ಓದಿ: ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಫೈನಲ್‍ಗೆ ಎಂಟ್ರಿ

    ನೀರಜ್ ಚೋಪ್ರಾ ಫೈನಲ್‍ಗೆ:
    ಟೋಕಿಯೋ ಒಲಿಂಪಿಕ್ಸ್ ನ 12ನೇ ದಿನವಾದ ಇಂದು ಭಾರತೀಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಫೈನಲ್ ಪ್ರವೇಶಿಸಿದ್ದಾರೆ. ನೀರಜ್ ಚೋಪ್ರಾ ಪೂಲ್ ‘ಎ’ನಲ್ಲಿದ್ದರು. ನೀರಜ್ ತಮ್ಮ ಮೊದಲ ಪ್ರಯತ್ನದಲ್ಲಿಯೇ 86.65 ಮೀಟರ್ ಥ್ರೋ ಮಾಡುವ ಮೂಲಕ ಭಾರತಕ್ಕೆ ಮತ್ತೊಂದು ಪದಕದ ನಿರೀಕ್ಷೆಯನ್ನು ಮೂಡಿಸಿದರು. ತಮ್ಮ ಮೊದಲ ಥ್ರೋನಲ್ಲಿಯೇ ಫೈನಲ್ ನಲ್ಲಿ ನೀರಜ್ ಸ್ಥಾನಗಿಟ್ಟಿಸಿಕೊಂಡರು.

    ಬೆಳಗ್ಗೆ 11 ಗಂಟೆಗೆ ಮಹಿಳೆಯರ 69 ಕೆಜಿ ವಿಭಾಗದ ಬಾಕ್ಸಿಂಗ್ ಸೆಮಿಫೈನಲ್ ಪಂದ್ಯ ನಡೆಯಲಿದೆ. ಭಾರತದ ಲವ್ಲಿನಾ ಟರ್ಕಿಯ ಬುಸೆನಾಜ್ ಸುರ್ಮೆನ್ಲಿ ವಿರುದ್ಧ ಸೆಣಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಮಹಿಳೆಯ ಹಾಕಿ ತಂಡ ಅರ್ಜೆಂಟಿನಾ ವಿರುದ್ಧ ಸೆಮಿಫೈನಲ್ ಆಡಲಿದೆ.

  • ನದಿ ತೀರದ ಜನ ಧೈರ್ಯವಾಗಿರಬೇಕು, ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ಧ: ಡಾ.ರಾಗಾಪ್ರಿಯಾ

    ನದಿ ತೀರದ ಜನ ಧೈರ್ಯವಾಗಿರಬೇಕು, ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ಧ: ಡಾ.ರಾಗಾಪ್ರಿಯಾ

    – ಯಾದಗಿರಿ ಕೃಷ್ಣಾ ನದಿ ತೀರದ ಜನರಿಗೆ ಡಿಸಿ ಅಭಯ

    ಯಾದಗಿರಿ: ಜನರು ಯಾವುದೇ ಕಾರಣಕ್ಕೂ ನದಿ ತೀರಕ್ಕೆ ತೆರಳಬಾರದು, ನದಿ ತೀರದ ಜನ ಧೈರ್ಯವಾಗಿರಬೇಕು, ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ಜನರಿಗೆ ಧೈರ್ಯ ತುಂಬಿದ್ದಾರೆ.

    ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೊರ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ವೀಡಿಯೋ ಸಂವಾದ ನಡೆಸಿ ಮಾತನಾಡಿದ ರಾಗಾಪ್ರಿಯಾ, ಜಲಾಶಯದಿಂದ ಕೃಷ್ಣಾ ನದಿಗೆ ಇಂದು ಸಂಜೆ 3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಪ್ರವಾಹ ಹೆಚ್ಚಾದರೆ ನದಿ ತೀರದ 16 ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಕ್ಕೆ ನಿರ್ಧಾರ ಮಾಡಲಾಗಿದೆ. ಒಟ್ಟು 13 ಕಾಳಜಿ ಕೇಂದ್ರ ಆರಂಭ ಮಾಡಲಾಗುತ್ತದೆ, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಡಿಸಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಭಾರೀ ಮಳೆ- ಕೊಚ್ಚಿಹೋದ ಮಲಕಪ್ಪನಳ್ಳಿ ರಸ್ತೆ

    ಕೃಷ್ಣಾ ನದಿಪಾತ್ರದಲ್ಲಿರುವ 16 ಗ್ರಾಮದಲ್ಲಿ ಪ್ರವಾಹ ಆತಂಕ ಹಿನ್ನೆಲೆಯಲ್ಲಿ ನದಿ ದಡಕ್ಕೆ ಯಾರು ಹೋಗದಂತೆ ಮತ್ತು ಪಂಪ್ ಸೆಟ್, ಪೈಪ್ ಹಾಗೂ ಯಾವುದೇ ಕೃಷಿ ಉಪಕರಣಗಳಿಗಾಗಿ ನದಿ ದಡಕ್ಕೆ ಹೋಗಬಾರದೆಂದು ಡಂಗೂರ ಸಾರುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜನ ಎಚ್ಚರಿಕೆಯಿಂದ ಇರಬೇಕು ಜಿಲ್ಲಾಡಳಿತ ಸದಾ ನಿಮ್ಮೊಂದಿಗೆ ಇದೆ ಎಂದು ಅಭಯ ನೀಡಿದರು.

  • ಕೊಡಗು ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನ ರೆಡ್ ಅಲರ್ಟ್

    ಕೊಡಗು ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನ ರೆಡ್ ಅಲರ್ಟ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದು, ಇಂದಿನಿಂದ ಜಿಲ್ಲೆಯಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಡಳಿತ ಮೂರು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಿದೆ.

    ಜುಲೈ 11 ರಿಂದ 13ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ಜಲಪ್ರಳಯದಿಂದ ಬೆಚ್ಚಿರುವ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಈಗಾಗಲೇ ಅಪಾಯದ ಸ್ಥಳದಲ್ಲಿರುವ ಜನರು, ಬೆಟ್ಟ-ಗುಡ್ಡಗಳಲ್ಲಿ ವಾಸ ಮಾಡುತ್ತಿರುವ ಜನರು ನದಿ ಅಂಚಿನಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಆದೇಶಿಸಿದ್ದಾರೆ.

    ಜಿಲ್ಲೆಯಲ್ಲಿ ಅನಾಹುತ ಸಂಭವಿಸಿದಂತೆ ಎಚ್ಚರವಹಿಸಲು ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್‍ಎಫ್) ತಂಡವನ್ನು ನಿಯೋಜನೆ ಮಾಡಲಾಗಿದೆ. ಈಗಾಗಲೇ ಸುರಿಯುತ್ತಿರುವ ಮಳೆಯಿಂದ ಕಾವೇರಿ ನೀರಿನ ಮಟ್ಟ ಏರಿಕೆಯಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಾರಂಗಿ ನೀರಿನ ಮಟ್ಟ ಏರಿಕೆಯಾಗಿದ್ದು, ನದಿ ಪಾತ್ರದ ಜನರು ಮತ್ತೆ ಆತಂಕದಲ್ಲಿ ಜೀವನ ಕಳೆಯುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೆಡ್ ಅಲರ್ಟ್-ಹವಾಮಾನ ಎಚ್ಚರಿಕೆ

  • ಮಳೆಗಾಲ ಎದುರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಸನ್ನದ್ಧ- NDRF ಜೊತೆ ತರಬೇತಿ ಪಡೆದ ತಂಡ ರೆಡಿ

    ಮಳೆಗಾಲ ಎದುರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಸನ್ನದ್ಧ- NDRF ಜೊತೆ ತರಬೇತಿ ಪಡೆದ ತಂಡ ರೆಡಿ

    ಚಿಕ್ಕಮಗಳೂರು: ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಮಲೆನಾಡು ಭಾಗದಲ್ಲಿ ಸಾವು-ನೋವು, ಕಷ್ಟ-ನಷ್ಟ ಸಂಭವಿಸಿತ್ತು. ಹೀಗಾಗಿ ಜಿಲ್ಲಾಡಳಿತ ಜಡಿ ಮಳೆಯ ಆರಂಭಕ್ಕೂ ಮುನ್ನವೇ ಮಳೆಗಾಲವನ್ನು ಎದುರಿಸಲು ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ. ಈಗಾಗಲೇ ಜಿಲ್ಲೆಯ ಆರೋಗ್ಯ, ಮೆಸ್ಕಾಂ, ಲೋಕೋಪಯೋಗಿ, ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಕಳೆದ ಎರಡು ವರ್ಷದಂತೆ ಭಾರೀ ಮಳೆ ಸುರಿದರೆ ಯಾವ ರೀತಿ ವಿಪತ್ತು ನಿರ್ವಹಣೆ ಮಾಡಬೇಕೆಂದು ಸಿದ್ಧತೆ ನಡೆಸಿದೆ.

    ಜಿಲ್ಲಾಡಳಿತ ಈಗಾಗಲೇ ಪ್ರವಾಹ, ಬೆಟ್ಟಗುಡ್ಡ ಕುಸಿತ, ನೀರು ಕೊಚ್ಚಿ ಹೋಗುವ ಜಾಗ, ಲೋ ಲೈನ್ ಏರಿಯಾ, ಸಂಕಷ್ಟಕ್ಕೀಡಾಗುವ ಗ್ರಾಮಗಳು ಸೇರಿದಂತೆ ಸಮಸ್ಯೆಯಾಗುವ ಜಾಗವನ್ನು ಪಟ್ಟಿ ಮಾಡಿ, ವರುಣನ ಅಬ್ಬರವನ್ನು ಎದುರಿಸಲು ರೂಪುರೇಷೆಯನ್ನು ಸಿದ್ಧಪಡಿಸಿಕೊಂಡಿದೆ. ಅದೇ ರೀತಿ ಮಳೆ ವಿಪತ್ತನ್ನು ನಿರ್ವಹಿಸಲು ಭೂಕುಸಿತವಾಗುವ 108 ಗ್ರಾಮಗಳು ಹಾಗೂ ಪ್ರವಾಹ ಉಂಟಾಗಬಹುದಾದ 40 ಏರಿಯಾಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಜೊತೆಗೆ ಭಾರೀ ಮಳೆ ಸುರಿದರೆ ಬೆಟ್ಟ-ಗುಡ್ಡ ಕುಸಿಯುವ 58 ಪ್ರದೇಶಗಳನ್ನೂ ಪಟ್ಟಿ ಮಾಡಿದ್ದಾರೆ. ತಜ್ಞರು ಕೂಡ ಬೆಟ್ಟಗುಡ್ಡ ಕುಸಿಯೋ ಜಾಗ ಹಾಗೂ ಪ್ರವಾಹ ಬರಬಹುದಾದ ಜಾಗದ ಬಗ್ಗೆ ಮಾಹಿತಿ ನೀಡಿದ್ದಾರೆ.

    ಕಳೆದ ಎರಡು ವರ್ಷದ ಮಳೆಗಾಲದಲ್ಲಿ ಆದ ಸಮಸ್ಯೆ ಈ ಬಾರಿ ಆಗಬಾರದು ಎಂದು ಜಿಲ್ಲಾಡಳಿತ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜಿಲ್ಲಾಡಳಿತದ ಜೊತೆ ಸ್ಥಳಿಯರು ಕೈಜೋಡಿಸಿದ್ದು, 463 ಸ್ವಯಂ ಸೇವಕರು, 290 ಹೋಮ್ ಗಾಡ್ರ್ಸ್, 70 ಈಜು ತಜ್ಞರು, 16 ಎನ್‍ಜಿಓ ತಂಡ, ಹೋಬಳಿ ಮಟ್ಟದಲ್ಲಿ ರಿಲೀಫ್ ಟೀಮ್, 62 ಸೇಫ್ ಸೆಂಟರ್ ಗಳು ಮಳೆ ಎದುರಿಸಲು ಸಜ್ಜಾಗಿವೆ.

    ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇರುವ ಹಿಟಾಚಿ, ಜೆಸಿಬಿ, ಟ್ರ್ಯಾಕ್ಟರ್, ಟ್ರಿಲ್ಲರ್, ಟಿಪ್ಪರ್ ಎಲ್ಲವುದರ ಮಾಹಿತಿಯನ್ನು ಜಿಲ್ಲಾಡಳಿತ ಪಡೆದುಕೊಂಡಿದೆ. ಮಳೆ ಹೆಚ್ಚಾಗಿ ವಿಪತ್ತು ಉಂಟಾದರೆ ಜಿಲ್ಲಾಡಳಿತದ ಜೊತೆ ಕೈಜೋಡಿಸುವಂತೆ ಸೂಚನೆ ನೀಡಲಾಗಿದೆ. ವಿಪತ್ತು ನಿರ್ವಹಣಾ ತಂಡವು ಎನ್‍ಡಿಆರ್‍ಎಫ್ ತಂಡದಿಂದ ತರಬೇತಿ ಪಡೆದಿದೆ. ಮಲೆನಾಡಿನ ಪ್ರತಿ ಹಳ್ಳಿಯಲ್ಲೂ ತರಬೇತಿ ಪಡೆದ ಸ್ವಯಂ ಸೇವರು ಮಳೆ ವಿಪತ್ತನ್ನ ಎದುರಿಸಲು ರೆಡಿಯಾಗಿದ್ದಾರೆ.

    ಈ ವರ್ಷದ ಮುಂಗಾರು ಕೂಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಆಶಾದಾಯಕವಾಗಿ ಆರಂಭಗೊಂಡಿದ್ದು, ಜಿಲ್ಲೆಯ ಜನರಿಗೆ ಮಳೆಗಾಲದ ಮಳೆ ಬಗ್ಗೆ ಆತಂಕ ಉಂಟಾಗಿದೆ. ಆಕಾಶದಲ್ಲಿ ಮೋಡ ಕಡುಗಟ್ಟುತ್ತಿದ್ದರೆ, ಮಲೆನಾಡಿಗರ ಮನದಲ್ಲಿ ಭಯ ಹುಟ್ಟುತ್ತಿದೆ. ಕಳೆದ ಎರಡು ವರ್ಷಗಳ ಮಳೆ ಅಬ್ಬರ ಅರ್ಧ ಮಲೆನಾಡನ್ನು ಹಿಂಡಿ ಹಿಪ್ಪೆಮಾಡಿತ್ತು. ಮಲೆನಾಡಿಗರ ಬದುಕು ಮೂರಾಬಟ್ಟೆಯಾಗಿತ್ತು. ವರುಣನ ಅಬ್ಬರಕ್ಕೆ ಬೆಟ್ಟ-ಗುಡ್ಡಗಳೇ ಕಳಚಿ ಬಿದ್ದಿದ್ದವು. ಮನೆ-ಮಠಗಳು ಕೊಚ್ಚಿ ಹೋಗಿ, ಜೀವಗಳು ನೀರಲ್ಲಿ ತೇಲಿ ಹೋಗಿದ್ದವು. ನದಿಗಳು ಊರು, ಗದ್ದೆ, ತೋಟ ಯಾವುದನ್ನೂ ಲೆಕ್ಕಿಸದೆ ಮನಸೋ ಇಚ್ಛೆ ಹರಿದು ಪ್ರವಾಹದ ರೂಪ ತಾಳಿದ್ದನ್ನು ಮಲೆನಾಡಿಗರು ಮರೆತಿಲ್ಲ. ಹೀಗಾಗಿ ಎಚ್ಚರಿಕೆ ವಹಿಸಿದ್ದಾರೆ.

    ಈ ವರ್ಷದ ಆರಂಭದ ಮಳೆಯೂ ಪ್ರವಾಹದ ಮೂನ್ಸೂಚನೆ ನೀಡಿರುವುದು ಜಿಲ್ಲಾಡಳಿತ ಹಾಗೂ ಮಲೆನಾಡಿಗರಿಗೆ ಮತ್ತದೇ ಆತಂಕ ತಂದಿದೆ. ಈ ಬಾರಿ ಜಿಲ್ಲಾಡಳಿತ ವರುಣದೇವನಿಗೂ ಸೆಡ್ಡು ಹೊಡೆದು, ಹೈ ಅಲರ್ಟ್ ಘೋಷಿಸಿದೆ.

  • ಗ್ರಂಥಾಲಯಗಳು ರೀ ಓಪನ್- ಯಾದಗಿರಿಯಲ್ಲಿ ಸಾಹಿತ್ಯ ಪ್ರೇಮಿಗಳ ಸಂತಸ

    ಗ್ರಂಥಾಲಯಗಳು ರೀ ಓಪನ್- ಯಾದಗಿರಿಯಲ್ಲಿ ಸಾಹಿತ್ಯ ಪ್ರೇಮಿಗಳ ಸಂತಸ

    ಯಾದಗಿರಿ: ಜಿಲ್ಲೆಯಲ್ಲಿ ಎಲ್ಲ ಗ್ರಂಥಾಲಯಗಳಿಗೆ ಮರುಜೀವ ಬಂದಿದ್ದು, ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಗ್ರಂಥಾಲಯದೊಳಗೆ ಓದುಗರಿಗೆ ಅವಕಾಶ ಕಲ್ಪಿಸಿ ಜಿಲ್ಲಾಡಳಿತ ಆದೇಶಿಸಿದೆ.

    ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರ ವರೆಗೆ ಗ್ರಂಥಾಲಯಗಳನ್ನು ತೆರೆದು ಸಾರ್ವಜನಿಕರಿಗೆ ಅನುಮಾಡಿಕೊಡಲಾಗಿದೆ. ಆದರೆ ಪ್ರತಿದಿನ ನೈಟ್ ಕರ್ಫ್ಯೂ ಸಂಜೆ 7 ರಿಂದ ಬೆಳಗ್ಗೆ 05ರವರೆಗೆ ಹಾಗೂ ವಾರಾಂತ್ಯದ ಕರ್ಫ್ಯೂ ಶುಕ್ರವಾರ ಸಂಜೆ 07 ರಿಂದ ಸೋಮವಾರ ಬೆಳಗ್ಗೆ 05ರ ವರೆಗೆ ಮತ್ತು ಸಾರ್ವಜನಿಕ ರಜಾ ದಿನಗಳಲ್ಲಿ ಗ್ರಂಥಗಳು ಬಾಗಿಲು ಹಾಕಲಿವೆ.

    ಗ್ರಂಥಾಲಯ ರೀ ಓಪನ್ ನಿಂದ ಸಾಹಿತ್ಯ ಪ್ರೇಮಿಗಳು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ ನಡೆಸಿರುವ ಅಭ್ಯರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

  • ಪ್ರವಾಹದಿಂದ ನೀರು ವ್ಯರ್ಥವಾಗುವುದನ್ನು ತಡೆದು, 35 ಕೆರೆ ತುಂಬಿಸಲು ಯಾದಗಿರಿ ಜಿಲ್ಲಾಡಳಿತ ಪ್ಲಾನ್

    ಪ್ರವಾಹದಿಂದ ನೀರು ವ್ಯರ್ಥವಾಗುವುದನ್ನು ತಡೆದು, 35 ಕೆರೆ ತುಂಬಿಸಲು ಯಾದಗಿರಿ ಜಿಲ್ಲಾಡಳಿತ ಪ್ಲಾನ್

    – ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ಧತೆ

    ಯಾದಗಿರಿ: ಜಿಲ್ಲೆಯಲ್ಲಿ ಉತ್ತಮ ಮುಂಗಾರು ಮಳೆಯಾಗುತ್ತಿದೆ, ಮತ್ತೊಂದೆಡೆ ಬಸವಸಾಗರ ಜಲಾಶಯದಿಂದ ಕೃಷ್ಣ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭೀಮಾನದಿಗೆ ಯಾವುದೇ ಕ್ಷಣದಲ್ಲಿ ನೀರು ಬಿಡುವ ಸಾಧ್ಯತೆಯಿದೆ. ಕಳೆದ ಬಾರಿ ಎರಡು ನದಿಗಳು ಸೃಷ್ಟಿಸಿದ ಪ್ರವಾಹದಿಂದ ಬುದ್ಧಿ ಕಲಿತಿರುವ ಜಿಲ್ಲಾಡಳಿತ, ಈಗ ಪ್ರವಾಹಕ್ಕೆ ಸೆಡ್ಡು ಹೊಡೆಯಲು ಮುಂದಾಗಿದೆ.

    ಈ ಬಾರಿ ಪ್ರವಾಹ ಉಂಟಾದರೆ ಅದೇ ನೀರಿನಿಂದ ಜಿಲ್ಲೆಯಲ್ಲಿನ 35 ಕೆರೆಗಳನ್ನು ತುಂಬಿಸುವ ಸಾಹಸಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಇದಕ್ಕಾಗಿ ಗುರುಸುಣಗಿ ಹತ್ತಿರದ ಬ್ರಿಡ್ಜ್ ಕಂ ಬ್ಯಾರೇಜ್ ಹತ್ತಿರ ವಿಶೇಷ ಯೋಜನೆ ನಿರ್ಮಾಣಗೊಳುತ್ತಿದೆ.

    ಸದ್ಯ ಕೆರೆ ತುಂಬಿಸಲು ದಡದಲ್ಲಿ ಕಾಮಗಾರಿ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಅಕ್ಟೋಬರ್ ತಿಂಗಳೊಳಗಾಗಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

  • ದೇವಸ್ಥಾನದಲ್ಲಿ ಬಿಜೆಪಿ ಮುಖಂಡನ ಮಗಳ ಅದ್ಧೂರಿ ವಿವಾಹ- ಜಿಲ್ಲಾಡಳಿತದಿಂದ ತಡೆ

    ದೇವಸ್ಥಾನದಲ್ಲಿ ಬಿಜೆಪಿ ಮುಖಂಡನ ಮಗಳ ಅದ್ಧೂರಿ ವಿವಾಹ- ಜಿಲ್ಲಾಡಳಿತದಿಂದ ತಡೆ

    ಮಂಗಳೂರು: ಲಾಕ್‍ಡೌನ್ ನಿಯಮ ಉಲ್ಲಂಘಿಸಿ ದೇವಸ್ಥಾನದಲ್ಲಿ ಅದ್ಧೂರಿ ಮದುವೆ ಮಾಡುತ್ತಿದ್ದ ವೇಳೆ ಸಹಾಯಕ ಆಯುಕ್ತರ ತಂಡ ದಾಳಿ ನಡೆಸಿ ಮದುವೆ ನಿಲ್ಲಿಸಿದ ಘಟನೆ ನಗರದಲ್ಲಿ ನಡೆದಿದೆ.

    ಸರ್ಕಾರದ ಮಾರ್ಗಸೂಚಿ ಗಾಳಿಗೆ ತೂರಿ ಬಿಜೆಪಿ ಮುಖಂಡ, ಕಾರ್ಪೋರೇಟರ್ ಭಾಸ್ಕರ್ ಚಂದ್ರ ಶೆಟ್ಟಿ ತಮ್ಮ ಮಗಳ ಮದುವೆಯನ್ನು ಮಂಗಳೂರಿನ ಮಂಗಳಾದೇವಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದರು. ಕೊರೊನಾ ಮಾರ್ಗಸೂಚಿಯಂತೆ ಮನೆಯ ಅಂಗಳದಲ್ಲೇ 20 ಜನರರೊಂದಿಗೆ ಮದುವೆ ಮಾಡಲು ಅವಕಾಶವಿದೆ. ಆದರೆ ಕೊರೊನಾ ನಿಯಮ ಗಾಳಿಗೆ ತೂರಿ ಜಿಲ್ಲಾಡಳಿತದ ಆದೇಶಕ್ಕೆ ಬೆಲೆ ಕೊಡದೆ, ವಿವಾಹ ನಡೆಸಿದ್ದು, ಮದುವೆ ಸಮಾರಂಭದಲ್ಲಿ 50ಕ್ಕೂ ಹೆಚ್ಚು ಕಾರ್ ನಲ್ಲಿ ಬಂದ ನೂರಾರು ಜನ ಸೇರಿದ್ದರು.

    ಮದುವೆಯ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಆದೇಶದಂತೆ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ದಾಳಿ ನಡೆಸಿ, ದೇವಸ್ಥಾನದ ಆಡಳಿತ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಒಂದೇ ಮುಹೂರ್ತದಲ್ಲಿ ನಾಲ್ಕು ಮದುವೆ ಎಂದು ಸಮಜಾಯಿಷಿ ನೀಡಿದ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

    ಅರ್ಧ ಗಂಟೆಯಲ್ಲಿ 4 ಮದುವೆಯನ್ನು ಹೇಗೆ ಮಾಡುತ್ತೀರಾ, ನಗರದಲ್ಲಿ ಈ 4 ಮದುವೆ ಮಾಡಲು ಯಾರು ನಿಮಗೆ ಅನುಮತಿ ಕೊಟ್ಟವರು ಎಂದು ಆಡಳಿತ ಮಂಡಳಿ ಸೇರಿ ಮದುವೆಗೆ ಸಂಬಂಧಪಟ್ಟವರ ಮೇಲೆ ದೂರು ದಾಖಲಿಸಿದ್ದಾರೆ. ಅನುಮತಿ ಇರುವ ಗಾಡಿಗಳನ್ನು ಬಿಟ್ಟು ಉಳಿದ ಎಲ್ಲ ವಾಹನಗಳನ್ನು ಸೀಜ್ ಮಾಡಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಆಯೋಜಕ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ.