Tag: District Administration

  • ಬಡತನದಲ್ಲೇ ಓದಿ ದೆಹಲಿ ಐಐಟಿ ಯಲ್ಲಿ ಪ್ರವೇಶ ಪಡೆದ ಆದಿವಾಸಿ ವಿದ್ಯಾರ್ಥಿಗಳು

    ಬಡತನದಲ್ಲೇ ಓದಿ ದೆಹಲಿ ಐಐಟಿ ಯಲ್ಲಿ ಪ್ರವೇಶ ಪಡೆದ ಆದಿವಾಸಿ ವಿದ್ಯಾರ್ಥಿಗಳು

    ರಾಯ್‍ಪುರ್: ಸಾಧಿಸುವ ಛಲವಿರುವವರಿಗೆ ಬಡತನ ಅಡ್ಡಿ ಬರಲ್ಲ ಎಂಬುದನ್ನ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಛತ್ತೀಸ್‍ಗಡದ ಆದಿವಾಸಿ ಜನಾಂಗದ ಇಬ್ಬರು ವಿದ್ಯಾರ್ಥಿಗಳು ದೆಹಲಿಯ ಐಐಟಿಯಲ್ಲಿ ಪ್ರವೇಶಾತಿ ಪಡೆಯುವ ಮೂಲಕ ಇದನ್ನ ಸಾಬೀತುಪಡಿಸಿದ್ದಾರೆ.

    ಛತ್ತೀಸ್‍ಗಢದ ಜಸ್ಪುರ್ ಜಿಲ್ಲೆಯ ಕುದೆಕೆಲಾ ಹಾಗೂ ಜಾಗ್ರಮ್ ಗ್ರಾಮದ ಅದಿವಾಸಿ ಜನಾಂಗಕ್ಕೆ ಸೇರಿದ ದೀಪಕ್ ಕುಮಾರ್ ಹಾಗೂ ನಿತೀಶ್ ಗಂಜಾನ್ ದೆಹಲಿ ಐಐಟಿಯಲ್ಲಿ ಪ್ರವೇಶ ಪಡೆದವರು. ಬಡತನದ ಮಧ್ಯೆಯೂ ಆದಿವಾಸಿ ವಿದ್ಯಾರ್ಥಿಗಳು ಮಾಡಿರುವ ಸಾಧನೆ ಇತರರಿಗೆ ಮಾದರಿಯಾಗಿದೆ.

    ಈ ಇಬ್ಬರು ವಿದ್ಯಾರ್ಥಿಗಳು ದೆಹಲಿಯ ಪ್ರತಿಷ್ಠಿತ ಐಐಟಿಯಲ್ಲಿ ಟೆಕ್ಸ್‍ಟೈಲ್ ಬ್ರ್ಯಾಂಚ್‍ನಲ್ಲಿ ಪ್ರವೇಶ ಪಡೆದಿದ್ದಾರೆ. ಈ ಸಾಧನೆಯಿಂದ ವಿದ್ಯಾರ್ಥಿಗಳ ಕುಟುಂಬಸ್ಥರು ಸಂತಸಗೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿಗಳು ತಮ್ಮ ಈ ಸಾಧನೆಗೆ ಕುಟಂಬಸ್ಥರು ಹಾಗೂ ಜಿಲ್ಲಾಡಳಿತ ಪ್ರೇರಣೆ ಕಾರಣ ಎಂದು ತಿಳಿಸಿದ್ದಾರೆ.

  • ಕಪ್ಪತ್ತಗುಡ್ಡ ಚಿನ್ನದ ಗುಹೆಗಳನ್ನು ಮುಚ್ಚಲು ಮುಂದಾದ ಜಿಲ್ಲಾಡಳಿತ – ಅಧಿಕಾರಿಗಳಿಗೆ ಗ್ರಾಮಸ್ಥರ ಮುತ್ತಿಗೆ

    ಕಪ್ಪತ್ತಗುಡ್ಡ ಚಿನ್ನದ ಗುಹೆಗಳನ್ನು ಮುಚ್ಚಲು ಮುಂದಾದ ಜಿಲ್ಲಾಡಳಿತ – ಅಧಿಕಾರಿಗಳಿಗೆ ಗ್ರಾಮಸ್ಥರ ಮುತ್ತಿಗೆ

    ಗದಗ: ಗದಗ ಜಿಲ್ಲಾಡಳಿತ ಏಕಾಏಕಿ ಕಪ್ಪತ್ತಗುಡ್ಡದ ಗುಹೆಗಳನ್ನು ಮುಚ್ಚಲು ಮುಂದಾಗಿದ್ದು, ಈ ವೇಳೆ ಜಿಲ್ಲಾಡಳಿತದ ಕ್ರಮದ ವಿರುದ್ಧ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಹೊಸೂರ ಭಾಗದ ಕಪ್ಪತ್ತಗುಡ್ಡ ಕಣಿವೆಯಲ್ಲಿ ಅಕ್ರಮವಾಗಿ ಅದಿರು ತೆಗೆಯುವ ಕೆಲಸವನ್ನು ಇಲ್ಲಿನ ಜನರು ಜೀವದ ಹಂಗು ತೊರೆದು ಮಾಡುತ್ತಿದ್ದರು. ಈ ಕುರಿತು ಪಬ್ಲಿಕ್ ಟಿವಿ ವಿಶೇಷ ವರದಿ ಪ್ರಸಾರ ಮಾಡಿದ್ದು, ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಅಧಿಕಾರಿಗಳು ಏಕಾಏಕಿ ಜೆಸಿಬಿ ಮೂಲಕ ಗುಹೆ ಮುಚ್ಚಲು ಮುಂದಾಗಿದ್ದರು. ಆದರೆ ಈ ವೇಳೆ ಗುಹೆಯಲ್ಲಿ ಮೂವರು ಬಂಗಾರದ ಅದಿರು ತರಲು ಹೋಗಿರವ ಶಂಕೆ ವ್ಯಕ್ತವಾಗಿದ್ದು, ಗುಹೆ ಮುಚ್ಚದಂತೇ ಅಧಿಕಾರಿಗಳಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ್ದಾರೆ. 

    ಗುಹೆಗಳ ಹಿಂದಿನ ರಹಸ್ಯ ಏನು?:
    ನೂರಾರು ವರ್ಷಗಳ ಹಿಂದೆ ಬ್ರಿಟಿಷರು ಸಾಂಗ್ಲಿ ಮೈನಿಂಗ್ ಹೆಸರಿನಲ್ಲಿ ಅದಿರು ಮೂಲಕ ಚಿನ್ನ ತೆಗೆಯುತ್ತಿದ್ದರು. ನಂತರದಲ್ಲಿ ಕಾರಣಾಂತರಗಳಿಂದ ಸಾಂಗ್ಲಿ ಮೈನಿಂಗ್ ಸ್ಥಗಿತಗೊಂಡಿತ್ತು. ಬಳಿಕ 1980ರ ದಶಕದಲ್ಲಿ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಎಂಬ ಕಂಪನಿ ಕೇಂದ್ರ ಸರ್ಕಾರದ ಅಧೀನದಲ್ಲಿ ನಿಕ್ಷೇಪಗಳನ್ನ ತೆಗೆಯುತ್ತಿದ್ರು. ಈ ವೇಳೆ ತೋಡಿರುವ ಸುರಂಗ ಗುಹೆಗಳು ಹಾಗೆ ಉಳಿದುಕೊಂಡಿವೆ. ಹೀಗಾಗಿ ಈ ಗುಹೆಗಳ ಮೂಲಕ ಈಗಲೂ ಅದಿರು ತರುವ ಜನರು ಇದನ್ನ ಬಂಗಾರದ ಗುಂಡಿ ಅಂತಾನೇ ಕರೆಯುತ್ತಾರೆ.

    500 ಮೀಟರ್ ಆಳಕ್ಕೆ ಹೋದಂತೆ ಕಡಿದಾಗೋ ಈ ಗುಹೆ ಕವಲೊಡೆದು ನಾಲ್ಕೈದು ಕಿಲೋಮೀಟರ್ ವರೆಗೆ ಕ್ರಮಿಸಿವೆ. ಇಲ್ಲಿ ಅನೇಕ ಬಾರಿ ಗುಹೆಗಳು ಕುಸಿದು ಸಾವುನೋವುಗಳು ಸಂಭವಿಸಿದೆ. ಇಲ್ಲಿನ ಒಂದು ಟನ್ ಮಣ್ಣಿನಿಂದ 2 ರಿಂದ 4 ಗ್ರಾಂ ಚಿನ್ನ ತೆಗೆಯಬಹುದಾಗಿದೆ. ಚಿನ್ನ ಸಂಸ್ಕರಣೆಗೆ ಸೈನೇಡ್ ಬಳಕೆಯಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ.

     

  • ಮಕ್ಕಳ ಶಾಲೆಗಾಗಿ 15 ಕಿ.ಮೀ ಬೆಟ್ಟವನ್ನೇ ಕಡಿದು ರಸ್ತೆ ಮಾಡಿದ ತಂದೆ

    ಮಕ್ಕಳ ಶಾಲೆಗಾಗಿ 15 ಕಿ.ಮೀ ಬೆಟ್ಟವನ್ನೇ ಕಡಿದು ರಸ್ತೆ ಮಾಡಿದ ತಂದೆ

    ಭುವನೇಶ್ವರ್: ಮಕ್ಕಳು ಶಾಲೆಗೆ ಹೋಗಲು ಅನುಕೂಲವಾಗುವಂತೆ ತಂದೆಯೊಬ್ಬರು ಬೆಟ್ಟವನ್ನೇ ಕಡಿದು ಸುಮಾರು 15 ಕಿ.ಮೀ ರಸ್ತೆ ನಿರ್ಮಿಸುತ್ತಿರುವ ಘಟನೆ ಒಡಿಶಾದ ಗುಮ್ಸಾಹಿ ಗ್ರಾಮದಲ್ಲಿ ನಡೆದಿದೆ.

    ಜಲಂಧರ್ ನಾಯಕ್, ತಮ್ಮ ಗ್ರಾಮವಾದ ಗುಮ್ಸಾಹಿಯಿಂದ ಕಂಧಾಮಾಲ್ ಜಿಲ್ಲೆಯ ಫುಲ್ಬಾನಿ ಪಟ್ಟಣದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸಲು ಎರಡು ವರ್ಷಗಳಿಂದ ಪ್ರತಿದಿನ 8 ಗಂಟೆ ಕೆಲಸ ಮಾಡಿ 15 ಕಿ.ಮೀ ರಸ್ತೆ ನಿರ್ಮಿಸಲು ಒಬ್ಬರೇ ಶ್ರಮಿಸುತ್ತಿದ್ದಾರೆ.

    ಒಡಿಶಾದ ಗುಮ್ಸಾಹಿ ಗ್ರಾಮದಲ್ಲಿ ವಾಸವಾಗಿರುವ ಜಲಂದರ್ ನಾಯಕ್(45) ಅವರ ಊರಲ್ಲಿ ಯಾವುದೇ ಶಾಲೆಗಳಿಲ್ಲ. ಕಂಧಾಮಾಲ್ ಜಿಲ್ಲೆಯ ಫುಲ್ಬಾನಿ ಪಟ್ಟಣದಲ್ಲಿ ಶಾಲೆಯಿದ್ದು, ಅಲ್ಲಿಗೆ ಹೋಗಲು ಸುಮಾರು 15 ಕಿ.ಮೀ. ಗುಡ್ಡಗಾಡು ಪ್ರದೇಶ ದಾಟಿ ಹೋಗಬೇಕು. ಆದರೆ ಅಲ್ಲಿಗೆ ತೆರಳಲು ಸೂಕ್ತ ರಸ್ತೆ ಅಥವಾ ಸಾರಿಗೆ ಸೌಲಭ್ಯಗಳಿಲ್ಲ. ಹೀಗಾಗಿ ತಮ್ಮ ಮಕ್ಕಳು ಶಾಲೆಗೆ ಹೋಗಲು ನೆರವಾಗುವಂತೆ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಸುತ್ತಿಗೆ ಮತ್ತು ಉಳಿ ಹಿಡಿದು ದಿನದ 8 ಗಂಟೆ ದುಡಿದು ಈಗಾಗಲೇ 8 ಕಿ.ಮೀ. ರಸ್ತೆ ನಿರ್ಮಾಣ ಮಾಡಿದ್ದಾರೆ. ಈ ಕಾರ್ಯವನ್ನು ಮೆಚ್ಚಿ ಜಿಲ್ಲಾಡಳಿತ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಜಿಎನ್‍ಆರ್ ಇಜಿಎಸ್) ಅಡಿಯಲ್ಲಿ ಅವರ ಕೆಲಸಕ್ಕೆ ಸಂಬಳ ಪಾವತಿ ಮಾಡುವುದರ ಜೊತೆಗೆ ಸನ್ಮಾನ ಮಾಡಲು ನಿರ್ಧಾರ ಮಾಡಿದ್ದಾರೆ.

    ಈ ಹಿಂದೆ ಬಿಹಾರದ ದಶರತ್ ಮಂಝಿ ಅವರು ಸುಮಾರು 360 ಅಡಿ ರಸ್ತೆಯನ್ನು ನಿರ್ಮಿಸಲು 22 ವರ್ಷಗಳಷ್ಟು ಕಾಲ ಶ್ರಮಿಸಿ ಸುದ್ದಿಯಾಗಿದ್ದರು. ಈಗ ನಾಯಕ್ ಎರಡು ವರ್ಷಗಳಲ್ಲಿ 8 ಕಿ.ಮೀ. ಉದ್ದದ ರಸ್ತೆ ನಿರ್ಮಿಸಿದ್ದಾರೆ. ಇನ್ನು ಮೂರು ವರ್ಷಗಳಲ್ಲಿ 7 ಕಿ.ಮೀ. ವಿಸ್ತರಿಸಬೇಕೆಂದು ಯೋಜನೆ ಮಾಡಿಕೊಂಡಿದ್ದಾರೆ.

    ನಾಯಕ್ ತಮ್ಮ ಮೂವರು ಮಕ್ಕಳು ಶಾಲೆಗೆ ಹೋಗಲು ಎದುರಿಸುತ್ತಿದ್ದ ಸಮಸ್ಯೆಗಳೇ ಅವರಿಗೆ ಸುತ್ತಿಗೆ ಮತ್ತು ಉಳಿಗೆಯನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿದೆ. ಆದ್ರೆ ಈವರೆಗೆ ಇವರ ಶ್ರಮವನ್ನ ಯಾರು ಕೂಡ ಗಮನಿಸಿರಲಿಲ್ಲ. ಸ್ಥಳೀಯ ಪತ್ರಿಕೆಯಲ್ಲಿ ಈ ಬಗ್ಗೆ ವರದಿಗಳನ್ನ ಓದಿದ ನಂತರ ಜಿಲ್ಲಾಧಿಕಾರಿ ಬೃಂದಾ, ನಾಯಕ್ ಅವರನ್ನ ಕಚೇರಿಗೆ ಕರೆಸಿ ಹಣಕಾಸಿನ ನೆರವು ನೀಡಲು ಮುಂದಾಗಿದ್ದಾರೆ. ಜೊತೆಗೆ ನಾಯಕ್ ಅವರ ಜೊತೆಗೆ ಕೆಲಸಗಾರರನ್ನ ನಿಯೋಜಿಸಿ ರಸ್ತೆ ಕಾಮಗಾರಿ ಪೂರ್ಣಳಿಸುವಂತೆ ಫುಲ್ಬನಿಯ ಬ್ಲಾಕ್ ಅಭಿವೃದ್ಧಿ ಅಧಿಕಾರಿ(ಬಿಡಿಒ)ಗಳಿಗೆ ಸೂಚನೆ ನೀಡಿದ್ದಾರೆ.

    ನಾಯಕ್ ಮತ್ತು ಅವರ ಕುಟುಂಬ ಮಾತ್ರ ಗುಮ್ಸಾಹಿ ಗ್ರಾಮದ ನಿವಾಸಿಗಳಾಗಿದ್ದು, ಗ್ರಾಮದಲ್ಲಿ ಸರಿಯಾದ ರಸ್ತೆ ಮತ್ತು ಅಗತ್ಯ ಸೌಕರ್ಯಗಳ ಕೊರತೆಯಿಂದಾಗಿ ಇತರರು ಬಹಳ ಹಿಂದೆಯೇ ಗ್ರಾಮವನ್ನು ತೊರೆದ್ದರು. ನಾಯಕ್ ತರಕಾರಿಗಳನ್ನು ಮಾರಾಟ ಮಾಡುವುದರ ಮೂಲಕ ಜೀವನ ನಡೆಸುತ್ತಿದ್ದಾರೆ. ತಮ್ಮ ಪ್ರಯತ್ನಗಳನ್ನು ಗುರುತಿಸಿ ಸಹಾಯ ಮಾಡಿದ್ದಕ್ಕೆ ಜಿಲ್ಲಾಡಳಿತಕ್ಕೆ ಅವರು ಧನ್ಯವಾದ ಸಲ್ಲಿಸಿದ್ದಾರೆ. “ನಮ್ಮ ಹಳ್ಳಿಗೆ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಲು ಜಿಲ್ಲಾಧಿಕಾರಿ ನನಗೆ ಭರವಸೆ ನೀಡಿದ್ದಾರೆ” ಎಂದು ನಾಯಕ್ ಹೇಳಿದ್ದಾರೆ.

    ನಾಯಕ್ ಅವರ ಪರಿಶ್ರಮ ಮತ್ತು ಕೆಲಸಕ್ಕಾಗಿ ಕಂಧಾಮಾಲ್ ಉತ್ಸವದ ಸಮಯದಲ್ಲಿ ಅವರನ್ನು ಗೌರವಿಸಲು ಯೋಚನೆ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ಬೃಂದಾ ತಿಳಿಸಿದ್ದಾರೆ.

     

  • ಶಾಲಾ ಆವರಣದಲ್ಲೇ ಡೇಂಜರ್ ಟ್ಯಾಂಕರ್-ಅಂತಕದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರು

    ಶಾಲಾ ಆವರಣದಲ್ಲೇ ಡೇಂಜರ್ ಟ್ಯಾಂಕರ್-ಅಂತಕದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರು

    ಮಂಡ್ಯ: ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲೇ ಯಮಸ್ವರೂಪಿ ಟ್ಯಾಂಕರ್ ಒಂದು ಮಕ್ಕಳನ್ನು ಬಲಿಪಡೆಯಲು ಕಾಯುತ್ತಿದೆ. ಯಾವುದೇ ಕ್ಷಣದಲ್ಲಿ ಉರುಳಿ ಬೀಳುವ ಸಂಭವವಿದ್ದು, ಆತಂಕದಲ್ಲಿರುವ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದೆ ಇರಲು ನಿರ್ಧರಿಸಿದ್ದಾರೆ.

    ಜಿಲ್ಲೆಯ ಚೀರನಹಳ್ಳಿ ಗ್ರಾಮದ ಸರ್ಕಾರಿ ಪ್ರಥಾಮಿಕ ಶಾಲೆಯ ಆವರಣದಲ್ಲಿ ಸುಮಾರು 30 ವರ್ಷಗಳ ಹಳೆಯ ನೀರಿನ ಟ್ಯಾಂಕ್ ಇದ್ದು, ಈಗ ಆ ಟ್ಯಾಂಕ್ ಬಾಳಿಕೆ ಅವಧಿ ಮುಗಿದಿದೆ. ಯಾವಾಗ ಬೇಕಿದ್ದರು ಟ್ಯಾಂಕ್ ಕೆಳಗೆ ಬೀಳಬಹುದು. ಟ್ಯಾಂಕಿನ ಪಿಲ್ಲರ್ ಗಳು ಅಲುಗಾಡುತ್ತಿದ್ದು, ಸಿಮೆಂಟ್ ಪುಡಿ-ಪುಡಿಯಾಗಿ ಉದುರುತ್ತಿದೆ. ಶಾಲೆ ಆವರಣದಲ್ಲೇ ಟ್ಯಾಂಕರ್ ಇರುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

    ಟ್ಯಾಂಕ್ ಕೆಳಗೆ ಶಾಲಾ ಕೊಠಡಿಗಳು ಹಾಗೂ ಶೌಚಾಲಯವಿದೆ. ಮಕ್ಕಳು ಟ್ಯಾಂಕ್ ಕೆಳಗಿನಿಂದಲೇ ಶೌಚಾಲಯಕ್ಕೆ ಓಡಾಡಬೇಕು. ದಿನ ನಿತ್ಯ ಮಕ್ಕಳು ತಮ್ಮ ಆಟ ಪಾಠಗಳನ್ನು ಇದೇ ಟ್ಯಾಂಕ್ ಕೆಳಗೆ ನಿರ್ವಹಿಸಬೇಕಾಗಿದ್ದು, ಹೀಗಾಗಿ ಶಾಲೆಗೆ ಹೋಗಲು ಹೆದರಿಕೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

    ಟ್ಯಾಂಕರ್ ಉರುಳಿ ದೊಡ್ಡ ಅನಾಹುತ ಸಂಭವಿಸುವ ಮೊದಲು ಜಿಲ್ಲಾಡಳಿತ ಎಚ್ಚೆತ್ತು ಸೂಕ್ತ ಕ್ರಮಗೊಳ್ಳಬೇಕಿದೆ.

     

  • ಬಹು ವರ್ಷಗಳ ನಂತರ ತುಂಬಿದ ಕೋಲಾರ ಕೆರೆಗಳು-ಜನತೆಯಲ್ಲಿ ಹೊಸ ಆತಂಕ

    ಬಹು ವರ್ಷಗಳ ನಂತರ ತುಂಬಿದ ಕೋಲಾರ ಕೆರೆಗಳು-ಜನತೆಯಲ್ಲಿ ಹೊಸ ಆತಂಕ

    ಕೋಲಾರ: ಬಹುವರ್ಷಗಳ ನಂತರ ಬಯಲು ಸೀಮೆ ಪ್ರದೇಶದ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿದಿವೆ. ಆದರೆ ತುಂಬಿದ ಕೆರೆಗಳಲ್ಲಿನ ನೀರು ಹಸಿರು ಬಣ್ಣ ಪಡೆದಿದ್ದು ಜನರಲ್ಲಿ ಆತಂಕ ಮೂಡಿಸಿದೆ.

    ಜಿಲ್ಲೆಯಲ್ಲಿ ಸುಮಾರು 15 ವರ್ಷಗಳ ನಂತರ ಕೆರೆ ತುಂಬಿದ್ದು ಗ್ರಾಮಸ್ಥರಲ್ಲಿ ಮುಗುಳುನಗೆಯನ್ನು ಬೀರುವಂತೆ ಮಾಡಿತ್ತು. ಆದರೆ ಕೋಲಾರದ ತಾಲೂಕಿನ ಪ್ರಮುಖ ಕೈಗಾರಿಕಾ ಪ್ರದೇಶವಾದ ನರಸಾಪುರದ ಸುತ್ತಮುತ್ತಲಿನ ಕೆರೆಗಳ ನೀರು ಒಂದು ವಾರದಿಂದ ಹಸಿರು ಬಣ್ಣದಿಂದ ಕೂಡಿದೆ. ಈ ಭಾಗದಲ್ಲಿ ಸ್ಥಾಪನೆಯಾಗಿರುವ ಹಲವು ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ನೀರನ್ನು ಹೊರ ಬಿಟ್ಟಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಜಿಲ್ಲೆಯಾದ್ಯಂತ ಅಪರೂಪಕ್ಕೆ ಮಳೆಯಾಗಿದ್ದರೂ, ಹಸಿರು ಬಣ್ಣದಿಂದಾಗಿ ಕೆರೆಗಳ ನೀರು ಯಾರ ಉಪಯೋಗಕ್ಕೆ ಬರದಂತಾಗಿದೆ.

    ನರಸಾಪುರ ಭಾಗದ ಕೆರೆಗಳು ತುಂಬಿ ಕೋಡಿ ಬಿದ್ದಿರುವ ಪರಿಣಾಮದಿಂದ ಇದಕ್ಕೆ ಹೊಂದಿಕೊಂಡಿರುವ ದೊಡ್ಡವಲ್ಲಬ್ಬಿ ಹಾಗೂ ಇನ್ನಿತರ ಕೆರೆಗಳಿಗೂ ನೀರು ಹರಿದು ಹೋಗಿ ಸೇರುತ್ತಿದೆ. ಇದರಿಂದ ಉಳಿದ ಕೆರೆಗಳ ನೀರು ವಿಷಪೂರಿತವಾಗುವ ಆತಂಕ ಉಂಟಾಗಿದೆ.

    ರಾಜ್ಯ ಸರ್ಕಾರವು ಇದಕ್ಕೂ ಮುನ್ನ ಬಯಲುಸೀಮೆ ಜನರ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕೆ.ಸಿ.ವ್ಯಾಲಿ ಯೋಜನೆ ರೂಪಿಸಿ ಕೆರೆಗಳಿಗೆ ಹರಿಸುವ ಭರವಸೆಯನ್ನು ನೀಡಿತ್ತು. ಈಗ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ಈ ಯೋಜನೆಯ ವೇಗವೂ ಕಡಿಮೆಯಾಗಿದೆ. ಅಲ್ಲದೇ ಕಳೆದ ಒಂದು ವಾರದಿಂದ ಗ್ರಾಮದ ಕೆಲವರಿಗೆ ಸಾಂಕ್ರಾಮಿಕ ರೋಗಗಳು ಕಂಡು ಬಂದಿದ್ದು, ಗ್ರಾಮಸ್ಥರನ್ನು ಆತಂಕಕ್ಕೊಳಗಾಗುಂತೆ ಮಾಡಿದೆ. ನರಸಾಪುರ ಗ್ರಾಮ ಪಂಚಾಯತ್ ವತಿಯಿಂದ ಕೆರೆಯ ನೀರಿನ ಮಾದರಿಯನ್ನು ಪ್ರಯೋಗ ಶಾಲೆಯಲ್ಲಿ ಪರೀಕ್ಷೆ ಮಾಡಿಸಲಾಗಿದ್ದು, ಕೆರೆಯ ನೀರು ಕುಡಿಯಲು ಯೋಗ್ಯವಲ್ಲ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಸ್ತುವಾರಿ ಸಚಿವ ರಮೇಶ್ ಕುಮಾರ್, ಈ ಭಾಗದಲ್ಲಿ ತುಂಬಾ ವರ್ಷಗಳಿಂದ ನೀರಿಲ್ಲದೆ ಕೆರೆ ಬತ್ತಿದ್ದು, ಈಗ ಮಳೆ ನೀರು ಬಂದಿರುವುದು ಅಲ್ಗೆಯಿಂದಾಗಿ ಈ ರೀತಿಯ ಸಮಸ್ಯೆ ಎದುರಾಗಿರಬಹುದು. ಅಲ್ಲದೇ ಕೆಲ ಕಂಪನಿಗಳು ರಸಾಯನಿಕಗಳನ್ನ ತಂದು ಇಲ್ಲಿ ಸುರಿಯುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದು, ಈ ಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಹಲವು ವರ್ಷಗಳಿಂದ ಮಳೆ ಇಲ್ಲದೆ ಬರಗಾಲವನ್ನು ಎದುರಿಸಿದ ಸಂದರ್ಭದಲ್ಲಿ ಖಾಲಿಯಾಗಿದ್ದ ಕೆರೆಗಳನ್ನ ಕಸದ ಗುಂಡಿಗಳನ್ನಾಗಿ ಮಾಡಿದ ಪರಿಣಾಮ ಇಂದು ಹಲವು ಸಮಸ್ಯೆಗಳು ಎದುರಿಸಬೇಕಾಗಿದೆ. ಕೆರೆಗಳ ನೀರು ಮಾಲಿನ್ಯದಿಂದ ವಿಷವಾಗುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಈ ಕುರಿತು ಕ್ರಮವನ್ನು ಕೈಗೊಂಡು ಕೆರೆಗಳನ್ನು ರಕ್ಷಿಸಿಕೊಳ್ಳಬೇಕಿದೆ.

     

     

     

  • ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ನೀಡಿದ ಪಲಾವ್ ತಿಂದು 100ಕ್ಕೂ ಹೆಚ್ಚು ಕುರಿಗಳು ಸಾವು

    ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ನೀಡಿದ ಪಲಾವ್ ತಿಂದು 100ಕ್ಕೂ ಹೆಚ್ಚು ಕುರಿಗಳು ಸಾವು

    ಕೊಪ್ಪಳ: ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ಅನ್ನವನ್ನು ತಿಂದು ನೂರಕ್ಕೂ ಹೆಚ್ಚು ಕುರಿಗಳು ಸಾವಿಗೀಡಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಸೆ. 22 ರಂದು ಕೊಪ್ಪಳದ ಹೊರವಲಯ ಹೊಸಪೇಟೆ ರಸ್ತೆಯಲ್ಲಿ ರಾಜ್ಯದ ವಿವಿಧ ಅಭಿವೃದ್ದಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಮಾವೇಶಕ್ಕೆ ಸಿಎಂ ಚಾಲನೆ ನೀಡಿದ್ದು, ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಆಗಮಿಸಿದ್ದರು. ಅವರಿಗಾಗಿ ಟನ್‍ಗಟ್ಟಲೆ ಪಲಾವ್ ವ್ಯವಸ್ಥೆ ಮಾಡಲಾಗಿತ್ತು.

    ಜನರು ಪಲಾವ್ ತಿಂದು ಪ್ಲೇಟ್‍ಗಳು ಹಾಗೂ ಉಳಿದ ಅನ್ನವನ್ನು ಹಾಗೆ ಬಿಟ್ಟು ಅಲ್ಲೇ ಬಿಸಾಡಿ ಹೋಗಿದ್ದರು. ಅದನ್ನು ತಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರಗಾಂ ಗ್ರಾಮದ ಸೋಮಣ್ಣ ಪೂಜಾರ ಎಂಬವರ ನೂರಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.

    ಅನ್ನ ತಿಂದ ದಿನದಿಂದ ಕುರಿಗಳು ನಿರಂತರವಾಗಿ ಸಾವಿಗೀಡಾಗಿವೆ. ಸೋಮಣ್ಣ ಅವರು ಒಟ್ಟು 200 ಕುರಿಗಳನ್ನು ಹೊಂದಿದ್ದು, ಈಗ ಅರ್ಧದಷ್ಟು ಕುರಿಗಳು ಸಾವನ್ನಪ್ಪಿವೆ. ಇದನ್ನು ಕಂಡು ಸೋಮಣ್ಣ ಕಂಗಾಲಾಗಿದ್ದಾರೆ. ಕುರಿಗಳನ್ನೇ ನಂಬಿಕೊಂಡು ಊರು ಊರು ಸುತ್ತುತ್ತಾ ಉಪಜೀವನ ನಡೆಸುತ್ತಿದ್ದ ಸೋಮಣ್ಣ ಕುಟುಂಬ ಕುರಿಗಳ ಸಾವಿನಿಂದ ಏನೂ ತೋಚದೇ ಕಣ್ಣೀರಿಡುತ್ತಿದ್ದಾರೆ.

    ಈ ಕುರಿಗಳ ಸಾವಿಗೆ ಕೊಪ್ಪಳ ಜಿಲ್ಲಾಡಳಿತವೇ ಕಾರಣ ಎಂದು ಆರೋಪ ಮಾಡಲಾಗಿದೆ. ಕಾರ್ಯಕ್ರಮ ಮುಗಿದ ಮೇಲೆ ಇಲ್ಲಿ ಸ್ವಚ್ಚತಾ ಕಾರ್ಯ ಮಾಡಬೇಕಾಗಿತ್ತು. ಆದರೆ ಇಲ್ಲಿನ ಅಧಿಕಾರಿಗಳು ಯಾವುದೇ ರೀತಿಯ ಸ್ವಚ್ಛತೆ ಮಾಡದೆ ಪ್ಲಾಸ್ಟಿಕ್ ವಸ್ತುಗಳು ಮತ್ತು ಅನ್ನವನ್ನು ಅಲ್ಲೇ ಬಿಸಾಡಿದ್ದಾರೆ. ಇದರಿಂದ ಏನೂ ಅರಿಯದ ಮೂಕ ಪ್ರಾಣಿಗಳು ಅದನ್ನು ತಿಂದು ಸಾವಿಗೀಡಾಗಿವೆ. ಇದಕ್ಕೆಲ್ಲಾ ನೇರ ಹೊಣೆ ಕೊಪ್ಪಳ ಜಿಲ್ಲಾಡಳಿತವೇ ಆಗಿದೆ. ಆದ್ದರಿಂದ ಕೂಡಲೆ 100 ಕುರಿಗಳ ಸಾವಿಗೆ ಜಿಲ್ಲಾಡಳಿತವೇ ಪರಿಹಾರ ನೀಡಬೇಕು ಎಂದು ಸೋಮಣ್ಣ ಹೇಳುತ್ತಿದ್ದಾರೆ.

     

  • ನೀರು ಪೋಲಾಗುತ್ತಿರುವ ಪೋಟೋ ಕಳಿಸಿ ಬಹುಮಾನ ಗೆಲ್ಲಿ- ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಆಫರ್ !

    ನೀರು ಪೋಲಾಗುತ್ತಿರುವ ಪೋಟೋ ಕಳಿಸಿ ಬಹುಮಾನ ಗೆಲ್ಲಿ- ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಆಫರ್ !

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ಬರ ಹಿನ್ನಲೆ, ಹನಿ ಹನಿ ನೀರು ಪೋಲಾಗದಂತೆ ತಡೆದು ಜೀವಜಲ ಸಂರಕ್ಷಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಾಗಾಂಭಿಕಾ ದೇವಿ ಅವರು ಹೊಸ ಪ್ಲಾನ್ ಮಾಡುವಂತೆ ಡಿಸಿ ಮತ್ತು ಸಿಇಓ ಗೆ ಸೂಚನೆ ಕೊಟ್ಟಿದ್ದಾರೆ.

    ಜಿಲ್ಲೆಯಲ್ಲಿ ಸಾರ್ವಜನಿಕರು ನೀರು ಪೋಲಾಗುತ್ತಿರುವ ಪೋಟೋ ತೆಗೆದು ಕಳಿಸಿದ್ರೇ ಅವರಿಗೆ ಸೂಕ್ತ ಬಹುಮಾನ ನೀಡುವಂತೆ ಸಲಹೆ ನೀಡಿದ್ದಾರೆ. ಈ ಬಗ್ಗೆ ವಾಟ್ಸಾಪ್ ನಂಬರ್ ಸಾರ್ವಜನಿಕರು ನೀರು ಪೋಲಾಗುತ್ತಿರುವ ಅಥವಾ ಅದನ್ನ ತಡೆಯುವ ಪೋಟೋ ಕಳಿಸಿದ್ರೇ ಜಿಲ್ಲಾಡಳಿತದ ವತಿಯಿಂದ ಸೂಕ್ತ ಬಹುಮಾನ ನೀಡಲಾಗುವುದು ಎಂದು ನಾಗಾಂಭಿಕಾ ಹೇಳಿದ್ದಾರೆ.

    ನಾಗಾಂಭಿಕಾ ಅವರು ಡಿಸಿ ಮತ್ತು ಸಿಇಒ ಅವರಿಗೆ ವಾಟ್ಸಪ್ ನಂಬರ್ ಕ್ರಿಯೇಟ್ ಮಾಡಿ ಸಾರ್ವಜನಿಕರಿಗೆ ನೀಡುವಂತೆ ಸೂಚನೆ ನೀಡಿದ್ದಾರೆ. ಇನ್ನೂ ಬರ ಪರಿಶೀಲನಾ ಸಭೆಯಲ್ಲಿ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ನಾಗಾಂಭಿಕಾ ಅಸಮಾಧಾನ ವ್ಯಕ್ತಪಡಿಸಿದ್ರು.