Tag: District

  • 21 ವರ್ಷಗಳ ಬಳಿಕ ಈಡೇರಿದ ಸಂಕಲ್ಪ- ಕೊನೆಗೂ ಗಡ್ಡ ತೆಗೆಸಿಕೊಂಡ ವ್ಯಕ್ತಿ

    21 ವರ್ಷಗಳ ಬಳಿಕ ಈಡೇರಿದ ಸಂಕಲ್ಪ- ಕೊನೆಗೂ ಗಡ್ಡ ತೆಗೆಸಿಕೊಂಡ ವ್ಯಕ್ತಿ

    ರಾಯ್ಪುರ: ತನ್ನ ಸಂಕಲ್ಪ ಈಡೇರುವವರೆಗೆ ಗಡ್ಡವನ್ನು ಕತ್ತರಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದ ವ್ಯಕ್ತಿ ಬರೋಬ್ಬರಿ 21 ವರ್ಷಗಳ ಬಳಿಕ ಶುಕ್ರವಾರ ತಮ್ಮ ಸಂಕಲ್ಪ ಈಡೇರಿದ ಹಿನ್ನೆಲೆ ಗಡ್ಡವನ್ನು ತೆಗೆಸಿಕೊಂಡಿದ್ದಾರೆ.

    ಛತ್ತೀಸ್‌ಗಢದ(Chhattisgarh) ವ್ಯಕ್ತಿ 21 ವರ್ಷಗಳ ಹಿಂದೆ ರಾಜ್ಯದ ಮನೇಂದ್ರಗಢ-ಚಿರ್ಮಿರಿ-ಭಾರತ್‌ಪುರ(MCB) ಹೊಸ ಜಿಲ್ಲೆಯಾಗುವವರೆಗೆ ತಾವು ಗಡ್ಡವನ್ನು ಕತ್ತರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಇದೀಗ ಛತ್ತೀಸ್‌ಗಢ ಸರ್ಕಾರ ಎಂಸಿಬಿಯನ್ನು ರಾಜ್ಯದ 32ನೇ ಜಿಲ್ಲೆಯಾಗಿ ಗುರುತಿಸಿದೆ. ಈ ಹಿನ್ನೆಲೆ ವ್ಯಕ್ತಿ ಕನಸು ನನಸಾಗಿರುವುದರಿಂದ ತನ್ನ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ.

    ಹೌದು, ಈ ವ್ಯಕ್ತಿಯ ಹೆಸರು ರಾಮಶಂಕರ್ ಗುಪ್ತಾ. ಇವರು ಮಹೇಂದ್ರಗಢ ನಿವಾಸಿಯಾಗಿದ್ದು, ಆರ್‌ಟಿಐ ಕಾರ್ಯಕರ್ತರೂ ಆಗಿದ್ದಾರೆ. ಮನೇಂದ್ರಗಢ-ಚಿರ್ಮಿರಿ-ಭಾರತ್‌ಪುರವನ್ನು ಹೊಸ ಜಿಲ್ಲೆಯನ್ನಾಗಿ ಮಾಡುವ ಘೋಷಣೆಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿಯೇ ಮಾಡಲಾಗಿತ್ತು. ಈ ಹಿನ್ನೆಲೆ ಗುಪ್ತಾ ಅವರು 21 ವರ್ಷಗಳ ಬಳಿಕ ಗಡ್ಡವನ್ನು ಕತ್ತರಿಸಿದ್ದರು. ಆದರೆ ಹೊಸದಾಗಿ ಘೋಷಣೆಯಾದ ಜಿಲ್ಲೆ ಉದ್ಘಾಟನೆಗೊಳ್ಳಲು ಮತ್ತೊಂದು ವರ್ಷವೇ ಬೇಕಾಯಿತು. ತಾನು ಮಾಡಿದ ಸಂಕಲ್ಪದಂತೆ ಗುಪ್ತಾ ಅವರು ಮತ್ತೆ ತನ್ನ ಗಡ್ಡವನ್ನು ಕತ್ತರಿಸದೇ 1 ವರ್ಷ ಹಾಗೆಯೇ ಬಿಟ್ಟಿದ್ದರು. ಇದೀಗ ಶುಕ್ರವಾರ ಎಂಸಿಬಿಯನ್ನು ಹೊಸ ಜಿಲ್ಲೆಯಾಗಿ ಉದ್ಘಾಟನೆಗೊಳಿಸುತ್ತಲೇ ಗುಪ್ತಾ ಅವರು ಕೊನೆಗೂ ಕ್ಲೀನ್ ಶೇವ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪ್ರತಿ 44 ಸೆಕೆಂಡ್‍ಗೆ ಒಬ್ಬರಂತೆ ಕೊರೊನಾಗೆ ಬಲಿಯಾಗುತ್ತಿದ್ದಾರೆ – WHO

    ಈ ಬಗ್ಗೆ ತಿಳಿಸಿರುವ ಗುಪ್ತಾ ಎಂಸಿಬಿ ಜಿಲ್ಲೆ ರಚನೆಯಾಗುವವರೆಗೂ ನಾನು ನನ್ನ ಗಡ್ಡವನ್ನು ಕತ್ತರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ. ಒಂದು ವೇಳೆ ಎಂಸಿಬಿ ಜಿಲ್ಲೆಯಾಗದೇ ಹೋಗಿದ್ದರೆ ನಾನು ಗಡ್ಡವನ್ನು ತೆಗೆಸುತ್ತಿರಲಿಲ್ಲ. ಈ ಜಿಲ್ಲೆಗಾಗಿ 40 ವರ್ಷಗಳ ಸುದೀರ್ಘ ಹೋರಾಟ ನಡೆಸಲಾಗಿದೆ. ಆದರೆ ಈ ಜಿಲ್ಲೆಗಾಗಿ ನಿಜವಾಗಿಯೂ ಹೋರಾಟ ಮಾಡಿದವರು ಇಂದು ನಮ್ಮೊಂದಿಗಿಲ್ಲ. ಇದೀಗ ಜಿಲ್ಲೆ ರಚನೆಯಾಗಿದ್ದು, ಇದಕ್ಕಾಗಿ ಹೋರಾಟ ಮಾಡಿದವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ಭೀಕರ ಪ್ರವಾಹ – ಸಂತ್ರಸ್ತರಿಗೆ ದೇವಾಲಯದಲ್ಲಿ ಆಶ್ರಯ ನೀಡಿದ ಹಿಂದೂ ಸಮುದಾಯ

    ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಶುಕ್ರವಾರ ತಮ್ಮ ರಾಜ್ಯದಲ್ಲಿ 2 ಹೊಸ ಜಿಲ್ಲೆಗಳ ರಚನೆಗೆ ಅನುಮೋದನೆ ನೀಡಿದ್ದಾರೆ. ಈ ಮೂಲಕ ರಾಜ್ಯದ ಒಟ್ಟು ಜಿಲ್ಲೆಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಮನೇಂದ್ರಗಢ-ಚಿರ್ಮಿರಿ-ಭಾರತ್‌ಪುರ ಹಾಗೂ ಶಕ್ತಿ ಎಂಬ ಹೊಸ 2 ಜಿಲ್ಲೆಗಳಿಗೆ ಬಘೇಲ್ ಅನುಮೋದನೆ ನೀಡಿದ್ದಾರೆ ಎಂದು ರಾಜ್ಯ ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್: ಶಾಲಾ ಕಟ್ಟಡ ದುರಸ್ತಿಗೆ ಜಿಲ್ಲಾಡಳಿತದಿಂದ 20ಲಕ್ಷ ರೂ. ಅನುದಾನ ಬಿಡುಗಡೆ

    ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್: ಶಾಲಾ ಕಟ್ಟಡ ದುರಸ್ತಿಗೆ ಜಿಲ್ಲಾಡಳಿತದಿಂದ 20ಲಕ್ಷ ರೂ. ಅನುದಾನ ಬಿಡುಗಡೆ

    ಬೆಳಗಾವಿ: ಟೆಂಟ್‍ನಲ್ಲಿ ವಿದ್ಯಾರ್ಥಿಗಳು ಪಾಠ ಕಲಿಯುತ್ತಿರುವ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿದ ಬಳಿಕ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಶಾಲಾ ದುರಸ್ತಿಗೆ ತಕ್ಷಣಕ್ಕೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿರುವುದಾಗಿ ಆದೇಶ ಹೊರಡಿಸಿದರು.

    ಶಿಥಿಲವಾದ ಶಾಲಾ ಕೊಠಡಿ ಹಿನ್ನೆಲೆ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮಸ್ಥರು ಸರ್ಕಾರಿ ಶಾಲಾ ಮೈದಾನದಲ್ಲಿಯೇ ಮೊದಲ ದಿನವೇ ಟೆಂಟ್‍ನಲ್ಲಿ ವಿದ್ಯಾರ್ಥಿಗಳು ಪಾಠಕ್ಕೆ ಪಟ್ಟುಡಿದಿದ್ದರು. ಈ ಬಗ್ಗೆ ಸಂಪೂರ್ಣವಾಗಿ ವರದಿ ಬಿತ್ತರಿಸಿ ಪಬ್ಲಿಕ್ ಟಿವಿ ಶಾಲಾ ಮಕ್ಕಳ ಸಮಸ್ಯೆಯನ್ನು ಎಳೆಎಳೆಯಾಗಿ ಪ್ರಸಾರ ಮಾಡುವ ಮೂಲಕ ಸರ್ಕಾರದ ಗಮನಕ್ಕೆ ತಂದಿತ್ತು. ಪರಿಣಾಮ, ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಶಾಲಾ ದುರಸ್ತಿ ತಕ್ಷಣಕ್ಕೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿರುವುದಾಗಿ ಆದೇಶ ಹೊರಡಿಸಿದರು. ಇದನ್ನೂ ಓದಿ: ಯಾರಿಗೂ ತಿಳಿಯದೇ ವಾಟ್ಸಪ್ ಗ್ರೂಪ್‍ನಿಂದ ನಿರ್ಗಮಿಸುವುದು ಹೇಗೆ? 

    ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದ್ದೇನೂರು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಬೀಡು ಬಿಟ್ಟಿರುವ ಪಬ್ಲಿಕ್ ಟಿವಿಯ ಪ್ರತಿನಿಧಿಗಳು ಮುದ್ದೇನೂರು ಗ್ರಾಮದ ಸರ್ಕಾರಿ ಶಾಲೆಯ ಸಮಸ್ಯೆಗಳ ಸರಮಾಲೆಯನ್ನು ಸರ್ಕಾರಕ್ಕೆ ಎಚ್ಚರಿಸಿತ್ತು. ಇದರ ಪರಿಣಾಮವಾಗಿ ರಾಜ್ಯ ಸರ್ಕಾರ ಮುದ್ದೇನೂರು ಗ್ರಾಮದ ಕನ್ನಡ ಶಾಲೆಯ ಏಂಟು ಕೊಠಡಿಗಳ ದುರಸ್ಥಿಗೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ.

    ಜೊತೆಗೆ ತಕ್ಷಣವೇ ನಿತೇಶ್ ಪಾಟೀಲ್ ಅವರು, ದುರಸ್ತಿ ಕಾರ್ಯವನ್ನು ಪ್ರಾರಂಭ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ಕೊಟ್ಟಿದ್ದಾರೆ.

  • ಬೆಂಗಳೂರು ಸಹಿತ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ

    ಬೆಂಗಳೂರು ಸಹಿತ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ

    ಬೆಂಗಳೂರು: ಬೆಂಗಳೂರಿನಲ್ಲಿ ಬೆಳಗ್ಗೆ ಒಂದಷ್ಟು ಸಮಯ ಸೂರ್ಯ ಇಣುಕಿ ನೋಡಿದ. ಸಂಜೆ ಹೊತ್ತಿಗೆ ಮತ್ತೆ ಮಳೆ ಅಬ್ಬರಿಸಿದೆ. ಮಲ್ಲೇಶ್ವರಂ, ಬಸವನಗುಡಿ, ಕೆ.ಆರ್ ಮಾರ್ಕೆಟ್, ಕಾರ್ಪೊರೇಷನ್, ಯಶವಂತಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ.

    ದಕ್ಷಿಣ ಒಳನಾಡು, ಕರಾವಳಿ, ಮತ್ತು ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ ಚಿಕ್ಕಮಗಳೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಬೆಂಗಳೂರು ನಗರದಲ್ಲಿ ಮಳೆಯ ಪರಿಣಾಮ ಎಂದಿನಂತೆ ವಾಹನ ಸವಾರರು ಪರದಾಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಎರಡು ದಿನ ಮಳೆ ಮೂನ್ಸೂಚನೆ 

    ಕೇರಳದಂತೆ ಕರ್ನಾಟಕದಲ್ಲೂ ಮುಂದಿನ 2 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಭಾರೀ ಮಳೆಗೆ ಭತ್ತದ ಗದ್ದೆಗಳಲ್ಲಿ ನೀರು ತುಂಬಿ, 20ಕ್ಕೂ ಹೆಚ್ಚು ಎಕರೆ ಪ್ರದೇಶದ ಭತ್ತದ ಫಸಲು ನಾಶವಾಗಿದೆ. ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದ ವಡ್ಗಲ್ ರಂಗನಾಥಸ್ವಾಮಿ ದೇವಾಲಯದ ಬಳಿ ಗುಡ್ಡ ಕುಸಿತವಾಗಿದೆ. ಶ್ರೀರಂಗಪಟ್ಟಣದಲ್ಲಿ ಮಳೆಯಿಂದಾಗಿ ಸೆಂದಲ್ ಕೋಟೆಯ ಗೋಡೆ ಕುಸಿತವಾಗಿದೆ. ಮೈಸೂರು, ಕೇರಳ ಗಡಿಭಾಗದಲ್ಲಿ ನಿರಂತರ ಮಳೆಯಿಂದ, ಹೆಚ್.ಡಿ.ಕೋಟೆ ತಾಲೂಕಿನ ಹೆಬ್ಬಳ್ಳ ಕೆರೆ ಕೋಡಿ ಬಿದ್ದಿದೆ. ಕೋಡಿ ನೀರಲ್ಲಿ ಕೆರೆಯಿಂದ ಹೊರಬರುತ್ತಿರುವ ಮೀನುಗಳನ್ನು ಹಿಡಿಯಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ ಭೂಕಂಪಕ್ಕೆ ಮನೆ ಕಳೆದುಕೊಂಡವರಿಗೆ 50 ಸಾವಿರ ಮನೆ ಕಟ್ಟಿಕೊಟ್ಟ ಭಾರತ

  • ವ್ಯಾಕ್ಸಿನೇಷನೇಷನ್ ಪ್ರಮಾಣ ಕಡಿಮೆ – 48 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮೋದಿ ಖಡಕ್ ಎಚ್ಚರಿಕೆ

    ವ್ಯಾಕ್ಸಿನೇಷನೇಷನ್ ಪ್ರಮಾಣ ಕಡಿಮೆ – 48 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮೋದಿ ಖಡಕ್ ಎಚ್ಚರಿಕೆ

    ನವದೆಹಲಿ: ಸ್ಥಳೀಯ ಮುಖಂಡರ ಸಹಾಯ ಪಡೆಯುವ ಮೂಲಕ ವ್ಯಾಕ್ಸಿನೇಷನ್ ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಕಡಿಮೆ ವ್ಯಾಕ್ಸಿನೇಷನ್ ವರದಿ ಮಾಡಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಿದ ಮೋದಿ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

    ಒಂದು ಕೋಟಿ ಡೋಸ್ ನೀಡಿದ ಬಳಿಕವೂ ಹಲವು ಜಿಲ್ಲೆಗಳು ವ್ಯಾಕ್ಸಿನೇಷನ್‍ನಲ್ಲಿ ಹಿಂದೆ ಬಿದ್ದಿದ್ದು, ಈ ಜಿಲ್ಲೆಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು. ಸಭೆಯಲ್ಲಿ ವ್ಯಾಕ್ಸಿನೇಷನ್ ಕಡಿಮೆ ಸಾಧನೆಗೆ ಬೇಸರ ವ್ಯಕ್ತಪಡಿಸಿದ ಅವರು ವ್ಯಾಕ್ಸಿನೇಷನ್ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಕಾರ್ಯಕರ್ತರಿಗೆ ಕರೆ ನೀಡಿದರು. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ವ್ಯಾಕ್ಸಿನೇಷನ್ ಹೆಚ್ಚಿಸಲು ಸಣ್ಣ ಸಣ್ಣ ತಂಡಗಳನ್ನು ರಚಿಸಲು ಸೂಚಿಸಿದ ಅವರು, ಪ್ರತಿ ಹಳ್ಳಿ, ಪಟ್ಟಣಗಳಿಗೆ ಪ್ರತ್ಯೇಕ ಕಾರ್ಯತಂತ್ರಗಳನ್ನು ರೂಪಿಸಿ ಆರೋಗ್ಯಕರ ಸ್ಪರ್ಧೆ ಏರ್ಪಡಿಸಿ ಎಂದು ಮೋದಿ ಹೇಳಿದರು. ಅಲ್ಲದೇ ಪ್ರತಿ ಮನೆ ಮನೆಗೂ ತಲುಪಿ ಜನರನ್ನು ಕರೆ ತನ್ನಿ, ಅವಶ್ಯವಾದರೆನೆಗೆ ತೆರಳಿ ವ್ಯಾಕ್ಸಿನ್ ನೀಡಲು ಮೋದಿ ಸಭೆಯಲ್ಲಿ ಸೂಚನೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

    ರೋಗ ಮತ್ತು ಶತ್ರುಗಳ ವಿರುದ್ಧ ಕಡೆಯವರೆಗೂ ಹೋರಾಡಬೇಕು, ಒಂದು ಕೋಟಿ ಡೋಸ್ ಆಯಿತು ಎಂದು ಸುಮ್ಮನೆ ಕೂರುವಂತಿಲ್ಲ ಎರಡನೇ ಡೋಸ್ ಅನ್ನು ಜನರಿಗೆ ಅಗತ್ಯವಾಗಿ ನೀಡಬೇಕು. ಈ ನಿಟ್ಟಿನಲ್ಲಿ ಜನರನ್ನು ಗುರುತಿಸಿ ವ್ಯಾಕ್ಸಿನ್ ಪಡೆಯಲು ಪ್ರೇರೆಪಿಸಲು ಮೋದಿ ಹೇಳಿದರು. ಇದನ್ನೂ ಓದಿ: ಶಿರವಾಳ ಗ್ರಾಮದ ವೃತ್ತಕ್ಕೆ ಪುನೀತ್ ಹೆಸರು ನಾಮಕರಣ

    ವ್ಯಾಕ್ಸಿನೇಷನಗೆ ಮೌಡ್ಯ ಅಡ್ಡಿ ಉಂಟು ಮಾಡುತ್ತಿದ್ದು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಮತ್ತು ಸ್ಥಳೀಯ ಧಾರ್ಮಿಕ ಮುಖಂಡರ ಸಹಾಯ ಪಡೆದು ವ್ಯಾಕ್ಸಿನೇಷನ್ ಹೆಚ್ಚು ಮಾಡಲು ಪ್ರಯತ್ನಿಸಿ ಎಂದ ಪ್ರಧಾನಿ ನರೇಂದ್ರ ಮೋದಿ ವಿದೇಶಗಳಲ್ಲೂ ಇದೇ ಪ್ರಯೋಗ ನಡೆದಿದೆ ಎಂದರು. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

  • ಬೆಂಗ್ಳೂರು ಮಾತ್ರವಲ್ಲ ಜಿಲ್ಲೆಗಳಲ್ಲಿಯೂ ಭಾರೀ ಮಳೆ- ಎಲ್ಲೆಲ್ಲಿ ಏನೇನಾಗಿದೆ?

    ಬೆಂಗ್ಳೂರು ಮಾತ್ರವಲ್ಲ ಜಿಲ್ಲೆಗಳಲ್ಲಿಯೂ ಭಾರೀ ಮಳೆ- ಎಲ್ಲೆಲ್ಲಿ ಏನೇನಾಗಿದೆ?

    ಬೆಂಗಳೂರು: ಸಿಲಿಕಾನ್ ಸಿಟಿಯಷ್ಟೇ ಅಲ್ಲ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಸೇತುವೆ ಮುಳುಗಡೆಯಾಗಿದ್ದು, ಇದರಲ್ಲಿ ಬೈಕ್ ಸವಾರರು ತಗ್ಲಾಕೊಂಡು ಪರದಾಡಿದ್ರು. ಕೊನೆಗೆ ಹಗ್ಗದ ಮೂಲಕ ಸ್ಥಳೀಯರು ರಕ್ಷಣೆ ಕಾರ್ಯ ಮಾಡಲಾಯ್ತು.

    ತೊಗರಿ ಕಣಜ ಕಲಬುರಗಿಯಲ್ಲಿ ಮಳೆರಾಯನ ಅಬ್ಬರ ತಗ್ಗಿದ್ದರೂ ಪ್ರವಾಹದ ಭೀತಿ ಎದುರಾಗಿದೆ. ಭಾರೀ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, 5 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಕಬ್ಬು, ಬಾಳೆ ಸೇರಿದಂತೆ ಇನ್ನಿತರ ಬೆಳೆಗಳು ನೀರು ಪಾಲಾಗಿವೆ. ಜೊತೆಗೆ ಜಿಲ್ಲೆಯ ಚಿಂಚೋಳಿ, ಕಾಳಗಿ, ಕಮಲಾಪುರ, ಅಫಜಲಪುರ್ ತಾಲೂಕುಗಳಲ್ಲಿ ಅತೀ ಹೆಚ್ಚು ಬೆಳೆ ಹಾನಿಯಾಗಿದೆ. ಆದರೆ ಬೆಳೆ ಹಾನಿ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸರ್ವೇ ಮಾಡಿಲ್ಲ ಹಾಗೂ ಕಳೆದ ಬಾರಿಯ ಪ್ರವಾಹದಿಂದಾದ ನಷ್ಟಕ್ಕೆ ಬರಬೇಕಾಗಿದ್ದ ಪರಿಹಾರ ಹಣವೂ ಕೂಡ ಬಂದಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಅಲ್ಲದೆ ಪ್ರವಾಹದಿಂದಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ರಾಜ್ಯ ಸರ್ಕಾರ ಕೂಡಲೆ ಸಮರ್ಪಕ ರೀತಿಯಲ್ಲಿ ಸರ್ವೇ ಮಾಡಿ ನಷ್ಟದಲ್ಲಿರುವ ಅನ್ನದಾತರಿಗೆ ಪರಿಹಾರ ಕಲ್ಪಿಸಿಕೊಡಬೇಕೆಂಬ ಕೂಗು ಸಹ ಕೇಳಿಬರುತ್ತಿದೆ. ಇದನ್ನೂ ಓದಿ: ಮನೆಯಿಂದ ಮಳೆ ನೀರು ಹೊರ ಹಾಕುವ ವೇಳೆ ಕರೆಂಟ್ ಶಾಕ್ – ವ್ಯಕ್ತಿ ದುರ್ಮರಣ

    ಬೆಳಗಾವಿಯಲ್ಲಿ ಭಾರೀ ಅನಾಹುತ ಒಂದು ಜಸ್ಟ್ ಮಿಸ್ ಆಗಿದೆ. ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಮನೆ ಕುಸಿದು ಬಿದ್ದಿದ್ದು, 8 ಮಂದಿ ಜಸ್ಟ್ ಮಿಸ್ ಆಗಿದ್ದಾರೆ. ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದಲ್ಲಿ ಮನೆ ಕುಸಿದು ಬಿದ್ದಿದೆ. ಛಾವಣಿ ಸಪ್ಪಳಕ್ಕೆ ಮನೆಯಲ್ಲಿದ್ದವರು ಹೊರಗೆ ಓಡಿ ಬಂದಿದ್ದಾರೆ. ಕುಟುಂಬಸ್ಥರು ಹೊರಗೆ ಓಡಿ ಬರ್ತಿದ್ದಂತೆ ಮನೆ ಕುಸಿದು ಬಿದ್ದಿದೆ. ಇನ್ನು ದಾವಣಗೆರೆಯಲ್ಲಿ ಭಾರೀ ಮಳೆಗೆ 4 ಮನೆಗಳು ಕುಸಿದಿವೆ. ಹರಿಹರ ತಾಲೂಕಿನ ಯಲವಟ್ಟಿ ಗ್ರಾಮದಲ್ಲಿ ಮನೆಗಳು ಕುಸಿತವಾಗಿದ್ರೆ, ಗ್ರಾಮದ ದಲಿತ ಕಾಲೋನಿ ಸಂಪೂರ್ಣ ಮಳೆ ನೀರಿನಿಂದ ಆವೃತವಾಗಿತ್ತು. ಪರಿಣಾಮ ಜನ ಶಾಲೆಯಲ್ಲಿ ಆಶ್ರಯ ಪಡೆಯುವಂತಾಯ್ತು. ಇದನ್ನೂ ಓದಿ: ಏರ್‌ಪೋರ್ಟ್‌ ಟರ್ಮಿನಲ್‍ಗೆ ನುಗ್ಗಿದ ಮಳೆ ನೀರು – ಟ್ರಾಫಿಕ್‍ನಲ್ಲಿ ಹೈರಾಣಾದ ಪ್ರಯಾಣಿಕರು

    ಮಂಡ್ಯ ಜಿಲ್ಲೆಯಾದ್ಯಂತ ಮುಂದುರೆದ ವರುಣನ ಆರ್ಭಟ ಮುಂದುವರೆದಿದೆ. ಭಾರೀ ಮಳೆಗೆ ಬೀದಿ-ಬದಿ ವ್ಯಾಪಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಆಯುಧ ಪೂಜೆ ಹಿನ್ನೆಲೆ ಬಂದಿದ್ದ ಬೂದು ಕುಂಬಳಕಾಯಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಧಾರವಾಡದಲ್ಲೂ ವರುಣ ಅಬ್ಬರಿಸಿದ್ದಾನೆ. ಅಳ್ನಾವರ ತಾಲೂಕಿನ ಧಾರಾಕಾರ ಮಳೆಯಿಂದಾಗಿ ಕಂಬಾರಗಣವಿ ಹಳ್ಳ ತುಂಬಿ ಹರಿಯುತ್ತಿದೆ. ಪರಿಣಾಮ ಅಳ್ನಾವರ ತಾಲೂಕಿನ ಕಂಬಾರಗಣವಿ ಮತ್ತು ಅರವಟಗಿ ರಸ್ತೆ ಸಂಪರ್ಕ ಕಡಿತವಾಗಿದೆ. ಇನ್ನು ಚಿಕ್ಕೋಡಿ ಹಾಗೂ ಹುಕ್ಕೇರಿ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗಿದೆ. ಚಿಕ್ಕೋಡಿ ತಾಲೂಕಿನ ವಡ್ರಾಳ ಕೆರೆ ತುಂಬಿ ಹರಿದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿತ್ತು.

    ಭಾರೀ ಮಳೆಯಿಂದಾಗಿ ಚಿಕ್ಕಬಳ್ಳಾಪುರ ತಾಲೂಕಿನ ಕೇತೇನಹಳ್ಳಿ ಬಳಿಯ ಜರಮಡುಗು ಜಲಪಾತ ಮೈದುಂಬಿ ಹರಿಯುತ್ತಿದೆ. ಜಲಪಾತವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನರ ಬರುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಬೆಟ್ಟ ಗುಡ್ಡದ ಮಧ್ಯೆ ಜಲಾಶಯ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರು ಜಾರಿ ಬೀಳುವ ಆತಂಕ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಜರಮಡುಗು ಜಲಾಶಯದ ಬಳಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರನ್ನ ನಿಯೋಜಿಸಲಾಗಿದೆ. 2 ಪಾಳಿಯಲ್ಲಿ ಜಲಪಾತದ ಬಲಿ ಇಬ್ಬರು ಪೊಲೀಸರನು ನಿಯೋಜಿಸಲಾಗಿದ್ದು, ಪ್ರವಾಸಿಗರು ನೀರಿಗೆ ಇಳಿಯದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಇದರಿಂದ ಜಲಪಾತ ಕಣ್ತುಂಬಿಕೊಳ್ಳಲು ಬಂದ ಜನರು ನಿರಾಸೆಯಿಂದ ವಾಪಸ್ಸಾಗುತ್ತಿದ್ದಾರೆ. ಜೊತೆಗೆ ಪ್ರವಾಸಿಗರು ನೀರು ನೋಡಿ ಖುಷಿ ಪಡಿ, ಆದರೆ ಜೀವಗಳ ಜೊತೆ ಚೆಲ್ಲಾಟ ಆಡಲು ಹೋಗಬೇಡಿ ಅಂತ ಪೊಲೀಸ್ ಇಲಾಖೆ ಮನವಿ ಮಾಡುತ್ತಿದೆ.

  • ವಿಜಯನಗರ ಆಯ್ತು, ಇದೀಗ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟಗಾರರಿಂದ ಒತ್ತಾಯ!

    ವಿಜಯನಗರ ಆಯ್ತು, ಇದೀಗ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟಗಾರರಿಂದ ಒತ್ತಾಯ!

    ಚಿಕ್ಕೋಡಿ: ಬೆಳಗಾವಿ ನಾಯಕರು ಮನಸ್ಸು ಮಾಡಿದರೆ ರಾಜ್ಯದ ಸರ್ಕಾರವನ್ನು ಬದಲಿಸುವ ಶಕ್ತಿಯನ್ನು ಹೊಂದಿದ್ದಾರೆ. ಹಲವಾರು ದಶಕಗಳಿಂದ ಚಿಕ್ಕೋಡಿ ಜಿಲ್ಲೆ ಮಾಡಿ ಎಂದು ಹೋರಾಟಗಳು, ಪ್ರತಿಭಟನೆಗಳು ನಡೆಯುತ್ತಲ್ಲೇ ಇವೆ. ಆದರೆ, ಇನ್ನೂ ಕೂಡ ಜಿಲ್ಲೆಯ ಕನಸು ನನಸಾಗದೆ ಉಳಿದಿದೆ. ಹೀಗಾಗಿ ಜನಪ್ರತಿನಿಧಿಗಳ ವಿರುದ್ಧ ಚಿಕ್ಕೋಡಿ ಜಿಲ್ಲಾ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಜ್ಯದಲ್ಲಿ ಆಡಳಿತಾತ್ಮಕವಾಗಿ, ಜನಸಂಖ್ಯಾನುಸಾರವಾಗಿ, ವಿಸ್ತಿರ್ಣಾನುಸಾರವಾಗಿ ಅತ್ಯಂತ ದೊಡ್ಡ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಸದ್ಯ 14 ತಾಲೂಕುಗಳಿವೆ. ಬಹುಷ: ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲೂ ಇಷ್ಟು ಪ್ರಮಾಣದ ತಾಲೂಕುಗಳು ಉಪವಿಭಾಗಗಳು ಇರಲಿಕ್ಕಿಲ್ಲ. ಸದ್ಯ ಬಳ್ಳಾರಿ ಜಿಲ್ಲೆಯ ವಿಭಜನೆ ಈಗ ಬೆಳಗಾವಿಯಲ್ಲಿ ಬೆಂಕಿ ಎಬ್ಬಿಸಿದೆ. ಚಿಕ್ಕೋಡಿಯೂ ಸಹ ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬ ಹಲವಾರು ವರ್ಷಗಳ ಕೂಗಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ಸ್ಪಂದನೆ ಇಲ್ಲದ ಕಾರಣದಿಂದ ಜಿಲ್ಲಾ ವಿಭಜನೆಯ ಕನಸು ಕನಸಾಗೆ ಉಳಿದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ

    ಸಚಿವ ಆನಂದ್ ಸಿಂಗ್, ಸಾಕಷ್ಟು ವಿರೋಧದ ನಡುವೆಯೂ ರಾಜ್ಯದ 31 ನೇ ಜಿಲ್ಲೆಯಾಗಿ ವಿಜಯನಗರ ಪ್ರತ್ಯೇಕ ಮತ್ತು ಸ್ವತಂತ್ರ ಜಿಲ್ಲೆಯಾಗಿ ರಚನೆಯಾಗಿದೆ. ಬೆಳಗಾವಿಯ ಮಟ್ಟಕ್ಕೆ ಹೇಳುವುದಾದರೆ ಜಿಲ್ಲಾ ವಿಭಜನೆಗೆ ರಾಜಕೀಯ ಹಿತಾಸಕ್ತಿಯ ಕೊರತೆಯಂತೂ ಎದ್ದು ಕಾಣುತ್ತಿದೆ. ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಚಿಕ್ಕೋಡಿ ಉಪವಿಭಾಗದ ಹುಕ್ಕೇರಿ, ನಿಪ್ಪಾಣಿ, ರಾಯಬಾಗ, ಚಿಕ್ಕೋಡಿ, ಕಾಗವಾಡ ಹಾಗೂ ಅಥಣಿ ತಾಲೂಕಿನ ಜನ ಸಂಪೂರ್ಣವಾಗಿ ಅವಲಂಬಿತವಾಗಿರುವುದು ಮಹಾರಾಷ್ಟ್ರದ ಮಾರುಕಟ್ಟೆಗಳು. ಏಕೆಂದರೆ ಇವರು ಬೆಳಗಾವಿ ಜಿಲ್ಲಾ ಮಾರುಕಟ್ಟೆಗಳಿಗೆ ತೆರಳಬೇಕಾದರೆ ನೂರಾರು ಕಿ.ಮೀ ಕ್ರಮಿಸಬೇಕು ಹೀಗಾಗಿ ಈ ಭಾಗದ ಜನ ಅವಲಂಬಿತವಾಗಿರುವುದು ಮಹಾರಾಷ್ಟ್ರದ ಮಿರಜ, ಸಾಂಗಲಿ, ಕೊಲ್ಲಾಪುರ, ಇಚಲಕರಂಜಿ ಅಂತಹ ದೊಡ್ಡ ನಗರಗಳ ಮೇಲೆ ಹೀಗಾಗಿ ನಮ್ಮ ತೆರಿಗೆ ಹಣವೆಲ್ಲ ಮಹಾರಾಷ್ಟ್ರ ಪಾಲಾಗುತ್ತಿದ್ದು, ಕರ್ನಾಟಕಕ್ಕೆ ಇದರಿಂದ ಹಾನಿಯೇ ಹೊರತು ಲಾಭವಿಲ್ಲ. ಇದನ್ನೂ ಓದಿ: ಶಿರಸಿಯಲ್ಲಿ ಶತಕ ದಾಟಿದ ಡೀಸಲ್ ದರ-ಸಾಗಾಟ ವೆಚ್ಚ ದುಬಾರಿ

    ಜಿಲ್ಲೆಯ ಜನಪ್ರತಿನಿಧಿಗಳ ವೈಮನಸ್ಸಿನಿಂದ ಹಲವು ದಶಕಗಳಿಂದ ಹೋರಾಟ ಮಾಡುತ್ತಿದ್ದರು ಸಹ ಚಿಕ್ಕೋಡಿ ಮಾತ್ರ ಜಿಲ್ಲೆಯಾಗುತ್ತಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ 14 ಶಾಸಕರು ಇದ್ದರು ಪ್ರಯೋಜನ ಮಾತ್ರ ಏನಿಲ್ಲ. ಮುಂಬರುವ ಬೆಳಗಾವಿ ಅಧಿವೇಶನ ನಡೆಯುವಷ್ಟರಲ್ಲಿ ಚಿಕ್ಕೋಡಿ ಜಿಲ್ಲೆಯಾಗಬೇಕು ಒಂದು ವೇಳೆ ಆಗದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದಾರೆ. ಹಲವಾರು ವರ್ಷಗಳಿಂದ ಜಿಲ್ಲೆಯಾಗಬೇಕೆಂದು ಹೋರಾಟಗಳು, ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ಬಳ್ಳಾರಿ ವಿಭಜನೆ ಬಳಿಕ ಮತ್ತಷ್ಟು ಆಕ್ರೋಶಗೊಂಡ ಚಿಕ್ಕೋಡಿ ಜಿಲ್ಲಾ ಹೋರಾಟಗಾರರು ನಮ್ಮ ಕಾಲಮಾನದವರಿಗೆ ಜಿಲ್ಲೆಯಂತೂ ಆಗಲಿಲ್ಲ ಮುಂದಿನ ಪೀಳಿಗೆಯವರಿಗಾದರೂ ಅನಕೂಲವಾಗಲಿ ಎಂಬುವುದು ಚಿಕ್ಕೋಡಿ ಉಪವಿಭಾಗದ ಜನರ ಕೂಗಾಗಿದ್ದು, ಇದಕ್ಕೆ ಸರ್ಕಾರ ಎಷ್ಟರ ಮಟ್ಟಿಗೆ ಸ್ಪಂದನೆ ನೀಡುತ್ತದೆ ಎಂದು ಕಾದು ನೋಡಬೇಕಿದೆ.

  • ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

    ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

    ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದ್ದು, ಇಂದೂ ರಾಜ್ಯದ ಕರಾವಳಿ ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಧಾರವಾಡ, ಗದಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.  ಇದನ್ನೂ ಓದಿ: ರಾತ್ರಿಯಿಂದ ಬೆಂಗಳೂರಲ್ಲಿ ಜಿಟಿಜಿಟಿ ಮಳೆ – ಮಲೆನಾಡು, ಗದಗ, ಕಲಬುರಗಿ, ಕೋಲಾರ, ಚಿತ್ರದುರ್ಗದಲ್ಲೂ ವರ್ಷಧಾರೆ

    ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಕೂಡ ಇಂದು ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ರಾಮನಗರ, ಕೊಡಗಿನಲ್ಲಿ ಮೈಸೂರು, ಮಂಡ್ಯದಲ್ಲಿ ಇಂದು ಭಾರೀ ಮಳೆ ಸುರಿಯುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

  • ರಾಜ್ಯದಲ್ಲಿ ಇನ್ನೆರಡು ದಿನ ಮಳೆ- ಹವಾಮಾನ ಇಲಾಖೆ ಮುನ್ಸೂಚನೆ

    ರಾಜ್ಯದಲ್ಲಿ ಇನ್ನೆರಡು ದಿನ ಮಳೆ- ಹವಾಮಾನ ಇಲಾಖೆ ಮುನ್ಸೂಚನೆ

    ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ಕರಾವಳಿ, ಮಲೆನಾಡು ಭಾಗಗಳಲ್ಲಿ ಸೆ.5 ಮತ್ತು 6ರಂದು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣದಿಂದ ಕಳೆದ ಹಲವು ದಿನಗಳಿಂದ ರಾಜ್ಯದ ವಿವಿಧೆಡೆ ಮುಂಗಾರು ಮಳೆ ಚುರುಕುಗೊಂಡಿದೆ. ವಾಯುಭಾರ ಸ್ಥಿತಿ ಮುಂದುವರಿದಿರುವ ಕಾರಣದಿಂದ ಮುಂದಿನ ಎರಡು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇದನ್ನೂ ಓದಿ: ಮನೆಯಂಗಳಕ್ಕೆ ಬಂದ ಹಾವು ಹಿಡಿದು ರಕ್ಷಿಸಿದ ಆರರ ಪೋರಿ

    ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಮಳೆ, ಇನ್ನೂ ಕೆಲ ದಿನಗಳ ಕಾಲ ಮುಂದುವರಿಯಲಿದೆ. ಕರಾವಳಿ ಭಾಗ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

    ಜಿಲ್ಲೆಗಳಲ್ಲಿ ಮಳೆಯ ಅಬ್ಬರ:
    ಕಳೆದ ನಾಲ್ಕು ದಿನಗಳಿಂದ ಮಳೆ ಬಿಸಿಲ ನಾಡು ವಿಜಯಪುರದಲ್ಲಿ ಮರೀಚಿಕೆ ಆಗಿತ್ತು. ಇಂದು ಮತ್ತೆ ಮಳೆ ಪ್ರಾರಂಭವಾಗಿದೆ. ನಿರಂತರ 3 ಗಂಟೆಯಿಂದ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಕೆಲವೆಡೆ ಮೋಡಕವಿದ ವಾತಾವರಣ ಮುಂದುವರಿದಿದ್ದು, ರಾತ್ರಿ ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಮಳೆಯಿಂದ ಜಿಲ್ಲೆಯ ರೈತ ವರ್ಗ ಸಂತೋಷಗೊಂಡಿದ್ದು, ಮಳೆ ಇಲ್ಲದೆ ಒಣಗಿ ಹೋಗಿದ್ದ ಬೆಳೆಗಳಿಗೆ ಮತ್ತೆ ಮಳೆ ಅಗಿದ್ದು ಜೀವ ತುಂಬಿದಂತಾಗಿದೆ. ಇದನ್ನೂ ಓದಿ: ಪ್ರೀತ್ಸೆ ಎಂದು ಲೈಂಗಿಕ ದೌರ್ಜನ್ಯ- ಕಾಮುಕ ಪ್ರೇಮಿಗೆ ಒಂದು ವರ್ಷ ಜೈಲು 

    ಗಡಿ ಜಿಲ್ಲೆ ಬೀದರ್ ನಲ್ಲಿ ಸತತ ಎರಡು ಗಂಟೆಗಳಿಂದ ಸುರಿದ ಧಾರಾಕಾರ ಮಳೆಗೆ ಬೀದರ್ ತಾಲೂಕಿನಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಬೀದರ್‍ನ ಪತ್ತೆಪೂರ್ ಗ್ರಾಮದ ಸೇತುವೆ ಮೇಲೆ ನೀರು ಹರಿದ ಪತ್ತೆಪೂರ್‍ದಿಂದ ಗಾದಗಿ ಗ್ರಾಮದ ರಸ್ತೆ ಸಂಪರ್ಕ ಕಡಿತವಾಗಿದೆ. ಧಾರಾಕಾರ ಮಳೆಗೆ ಜಮೀನಿನಲ್ಲಿ ಬೆಳೆದಿದ್ದ ಅಪಾರ ಪ್ರಮಾಣ ಬೆಳೆಗಳು ಹಾನಿಯಾಗಿದೆ. ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

  • ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆ

    ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆ

    ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರಿನಲ್ಲೂ ಮುಂದಿನ ಎರಡು ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಜೂನ್ 30 ರವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜೂನ್ 28 ರಿಂದ 2 ದಿನ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ. ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಭಾರೀ ಮಳೆ – ಎಲ್ಲೆಡೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ

    ಕರಾವಳಿ ಜಿಲ್ಲೆಗಳಲ್ಲಿ ಜೂನ್ 27 ರಿಂದ ಜುಲೈ 1 ತನಕ, ಉತ್ತರ ಒಳ ನಾಡಿನಲ್ಲಿ ಮುಂದಿನ ಎರಡು ದಿನ ಹೆಚ್ಚಿನ ಮಳೆ ಆಗಲಿದೆ. ಬೀದರ್, ಯಾದಗಿರಿ, ಕಲಬುರಗಿ, ರಾಯಚೂರು ಭಾಗಗಳು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆ ಕೂಡ ಮುಂದಿನ ನಾಲ್ಕು ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

  • ಕೋವಿಡ್ ಕೇರ್ ಸೆಂಟರ್ ಮೂಲಕ ಕೊಡಗು ಜಿಲ್ಲಾಡಳಿತಕ್ಕೆ ಕೆಟ್ಟ ಹೆಸರು ತರುವ ಹುನ್ನಾರ

    ಕೋವಿಡ್ ಕೇರ್ ಸೆಂಟರ್ ಮೂಲಕ ಕೊಡಗು ಜಿಲ್ಲಾಡಳಿತಕ್ಕೆ ಕೆಟ್ಟ ಹೆಸರು ತರುವ ಹುನ್ನಾರ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಎಷ್ಟೇ ಜಾಸ್ತಿಯಾಗುತ್ತಿದ್ದರೂ, ಜಿಲ್ಲಾಡಳಿತ ಎಲ್ಲೆಡೆ ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆದು ಎಲ್ಲರಿಗೂ ಚಿಕಿತ್ಸೆ ಕೊಡುವ ಕೆಲಸ ಮಾಡುತ್ತಿದೆ. ಎಲ್ಲೆಡೆ ಉತ್ತಮ ಆಹಾರವನ್ನು ಕೊಡಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಎಲ್ಲವೂ ಚೆನ್ನಾಗಿದ್ದರೂ ಊಟ ತಿಂಡಿ ಚೆನ್ನಾಗಿಲ್ಲ ಎಂದು ಗಲಾಟೆ ಮಾಡುವ ಮೂಲಕ ಜಿಲ್ಲಾಡಳಿತಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ನಡೆಯುತ್ತಿದೆ ಎನ್ನುವ ಅನುಮಾನ ಮೂಡಿದೆ.

    ಹೌದು, ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿರುವ ನವೋದಯ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ಸೋಮವಾರ ಬೆಳಿಗ್ಗೆ ತಿಂಡಿಗೆ ಕೊಟ್ಟಿದ್ದ ಉಪ್ಪಿಟ್ಟು ಸಂಪೂರ್ಣ ಉಪ್ಪಾಗಿದೆ. ಹೀಗೆ ಮಾಡಿದರೆ ನಾವು ಚೇತರಿಸಿಕೊಳ್ಳುವುದು ಹೇಗೆ ಎಂದು ಸೋಂಕಿತರು ವೈದ್ಯರ ಮೇಲೆಯೇ ಗಲಾಟೆ ಮಾಡಿದ್ದರು. ವೈದ್ಯರೊಂದಿಗೆ ಗಲಾಟೆ ಮಾಡುವ ವೀಡಿಯೋವನ್ನು ಸೆರೆ ಹಿಡಿದು ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಹಾಳಾಗಿರುವ ಉಪ್ಪಿಟ್ಟಿನ ಪ್ಯಾಕ್‍ಗಳ ಫೋಟೋಗಳನ್ನು ವೈರಲ್ ಮಾಡಿದ್ದರು. ಈ ಕುರಿತು ಕೋವಿಡ್ ಕೇರ್ ಸೆಂಟರ್‍ನ ಉಸ್ತುವಾರಿ ಹೊತ್ತಿಕೊಂಡಿರುವ ಕೊಡಗು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮಿ ಅವರನ್ನು ಕೇಳಿದಾಗ ಕಥೆ ಬೇರೆ ಇರುವುದು ಇರುವುದು ಗೊತ್ತಾಗಿದೆ.

    ಹಿಂದೆ ಹೊರಗಿನಿಂದ ಕೋವಿಡ್ ಕೇರ್ ಗಳಿಗೆ ಊಟ ತಿಂಡಿ ಪಾರ್ಸಲ್ ಮಾಡಿ ಸೋಂಕಿತರಿಗೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಸೋಂಕಿತರಿಗೆ ಊಟ ತಿಂಡಿ ಸಾಕಾಗುತ್ತಿಲ್ಲ ಎನ್ನುವ ದೂರುಗಳು ಬಂದಿದ್ದರಿಂದ ಜಿಲ್ಲಾಡಳಿತವೇ ಸ್ವತಃ ಅಡುಗೆ ಮಾಡಿಸಿಕೊಡುತ್ತಿದೆ. ನಾವು ಬೆಳಿಗ್ಗೆ ಸೋಂಕಿತರಿಗೆ ಉಪ್ಪಿಟ್ಟು ಕೊಟ್ಟಿರದೇ, ಚಿತ್ರಾನ್ನ ಕೊಟ್ಟಿದ್ದೆವು. ಆದರೆ ಕೊಟ್ಟಿರುವ ಉಪ್ಪಿಟ್ಟು ಸಂಪೂರ್ಣ ಉಪ್ಪಾಗಿದೆ ಎಂದು ಗಲಾಟೆ ಮಾಡಿದ್ದಾರೆ. ಚಿತ್ರಾನ್ನಕ್ಕೆ ಹುಳಿಯನ್ನು ಸರಿಯಾಗಿ ಮಿಕ್ಸ್ ಮಾಡದಿದ್ದರಿಂದ ಕೆಲವು ಪ್ಯಾಕ್‍ಗಳಲ್ಲಿ ಹುಳಿ ಜಾಸ್ತಿಯಾಗಿದ್ದರೆ, ಕೆಲವು ಪ್ಯಾಕ್‍ಗಳಲ್ಲಿ ಸಪ್ಪೆಯಾಗಿತ್ತು ಎನ್ನೋದು ಸತ್ಯ. ಇದು ಗೊತ್ತಾದ ಕೂಡಲೇ, ಅದನ್ನು ಬದಲಾಯಿಸಿ ಚಪಾತಿ ಮತ್ತು ಕೋಸು ಪಲ್ಯ ಕೊಟ್ಟಿದ್ದೇವೆ. ಇಷ್ಟಾದರೂ ಕೆಲವರು ಉದ್ದೇಶ ಪೂರ್ವಕವಾಗಿ ವೈದ್ಯರ ಕೊಠಡಿ ಬಳಿ ಬಂದು ಗಲಾಟೆ ಮಾಡಿದ್ದಾರೆ. ಅಲ್ಲದೆ ಯಾವುದೋ ಸಂದರ್ಭದ ಉಪ್ಪಿಟ್ಟಿನ ಪ್ಯಾಕ್ ಗಳನ್ನು ವೈರಲ್ ಮಾಡಿ ಕೆಟ್ಟ ಹೆಸರು ತರುವ ಹುನ್ನಾರ ಮಾಡಿದ್ದಾರೆ ಎನ್ನುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‍ರವರು ಕೂಡ ನಾನು ಪದೇ ಪದೇ ಕೋವಿಡ್ ಕೇರ್ ಸೆಂಟರ್‍ಗೆ ಹೋಗಿ ಪರಿಶೀಲಿಸುತ್ತಿದ್ದೇನೆ. ಎಲ್ಲವೂ ಚೆನ್ನಾಗಿದ್ದರೂ ಒಳ್ಳೆಯ ಕೆಲಸವನ್ನು ಗುರುತಿಸುತ್ತಿಲ್ಲ. ಕೆಲವು ನಾಲ್ಕು ಜನರು ಪದೇ ಪದೇ ಸುಳ್ಳು ವಿಷಯಗಳನ್ನು ಹೇಳುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳದೆ ಬಿಡುವುದಿಲ್ಲ ಎಂದಿದ್ದಾರೆ.