Tag: Distribute

  • ರಂಜಾನ್‍ಗೆ ಸಚಿವರಿಂದ ಕೋಳಿ ಗಿಫ್ಟ್- ಸಾಮಾಜಿಕ ಅಂತರವಿಲ್ಲದೆ ಮುಗಿಬಿದ್ದ ಜನ

    ರಂಜಾನ್‍ಗೆ ಸಚಿವರಿಂದ ಕೋಳಿ ಗಿಫ್ಟ್- ಸಾಮಾಜಿಕ ಅಂತರವಿಲ್ಲದೆ ಮುಗಿಬಿದ್ದ ಜನ

    ಬೆಂಗಳೂರು: ರಂಜಾನ್ ಹಬ್ಬಕ್ಕೆಂದು ಸಚಿವರು ಕೋಳಿ ಮತ್ತು ಆಹಾರ ಕಿಟ್ ವಿತರಣೆ ಮಾಡುತ್ತಿದ್ದು, ಸಾಮಾಜಿಕ ಅಂತರವಿಲ್ಲದೇ ಜನರು ಮುಗಿಬಿದ್ದಿದ್ದಾರೆ.

    ಕೆ.ಆರ್ ಪುರದ ಬಿಜೆಪಿ ಶಾಸಕ ಮತ್ತು ನಗರಾಭಿವೃದ್ಧಿ ಸಚಿವರ ಬಿ.ಎ. ಬಸವರಾಜ್ ಅವರು ತಮ್ಮ ಕ್ಷೇತ್ರದ ಜನರಿಗೆ ರಂಜಾನ್ ಹಬ್ಬದ ಪ್ರಯುಕ್ತ ಕೋಳಿ ಮತ್ತು ಆಹಾರ ಕಿಟ್ ವಿರತೆಣೆ ಮಾಡುತ್ತಿದ್ದಾರೆ. ಈ ವೇಳೆ ಕೋಳಿ ಪಡೆಯಲು ಮುಗುಬಿದ್ದಿರುವ ಜನ ಕೊರೊನಾ ಭಯವನ್ನು ಮರೆತು ವರ್ತಿಸುತ್ತಿದ್ದಾರೆ.

    ಕೆ.ಆರ್.ಪುರ ಕ್ಷೇತ್ರದ ಬಸವನಪುರ ವಾರ್ಡ್ ಪಾಲಿಕೆ ಸದಸ್ಯ ಜಯಪ್ರಕಾಶ್ (ಜೆಪಿ) ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಹಂಚಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಚಾಲನೆ ನೀಡಿದ್ದಾರೆ. ನಂತರ ಜನರನ್ನು ದನ ಕರುಗಳಂತೆ ಕ್ಯೂನಲ್ಲಿ ಕೂಡಿಹಾಕಿ ಕಿಟ್‍ಗಳ ವಿತರಣೆ ಮಾಡಲಾಗಿದೆ.

    ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ಸಚಿವರ ಕಾರ್ಯಕ್ರಮದಲ್ಲೇ ಸಾಮಾಜಿಕ ಅಂತರವಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿ ಬಂದಿದೆ.

  • ಬಡವರಿಗೆ ಹೆಚ್.ಡಿ ದೇವೇಗೌಡರ ನೇತೃತ್ವದಲ್ಲಿ ದಿನಸಿ ಕಿಟ್ ಹಂಚಿಕೆ

    ಬಡವರಿಗೆ ಹೆಚ್.ಡಿ ದೇವೇಗೌಡರ ನೇತೃತ್ವದಲ್ಲಿ ದಿನಸಿ ಕಿಟ್ ಹಂಚಿಕೆ

    – ಕೋಳಿ, ಮೊಟ್ಟೆಗಾಗಿ ಮುಗಿಬಿದ್ದ ಜನ

    ಬೆಂಗಳೂರು: ಬೆಂಗಳೂರು ಹೊರವಲಯ ಟಿ. ದಾಸರಹಳ್ಳಿ ಕ್ಷೇತ್ರದ ಲಕ್ಷ್ಮೀಪುರ ಗ್ರಾಮದಲ್ಲಿ ಇಂದು ಬಡ ಹಾಗೂ ಕೂಲಿ ಕಾರ್ಮಿಕರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಅವರ ನೇತೃತ್ವದಲ್ಲಿ ದಿನಸಿ ಕಿಟ್ ವಿತರಣೆ ಮಾಡಲಾಯಿತು.

    ದೇವೇಗೌಡರು ಕಿಟ್ ವಿತರಣೆ ಮಾಡಿ ಕಾರ್ಯಕ್ರಮದಿಂದ ಹೊರಡುತ್ತಿದ್ದಂತೆ, ಕೋಳಿ ಪಡೆಯಲು ಸಾವಿರಾರು ಜನರು ಬಿರುಬಿಸಿಲನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತರು. ಸುಮಾರು 2000 ಜನರಿಗೆ ಸ್ಥಳೀಯ ಮುಖಂಡ ಚರಣ್‍ಗೌಡ ಆಹಾರ ಕಿಟ್ ವಿತರಣೆ ಮಾಡುತ್ತಿದ್ದು, ದಿನಸಿ, ಮೊಟ್ಟೆ ಹಾಗೂ ಕೋಳಿಗಾಗಿ ಜನರು ಮುಗಿಬಿದ್ದರು. ಕೆಲವೊಮ್ಮೆ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಕೋಳಿ ಪಡೆಯಲು ಮುಂದಾದ ಘಟನೆಯೂ ನಡೆಯಿತು.

    ಇದೇ ವೇಳೆ ಶಾಸಕ ಮಂಜುನಾಥ್ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಕಿಡಿಕಾರಿದರು. ಸರ್ಕಾರದಿಂದ ನೀಡುತ್ತಿರುವ ಆಹಾರ ಕಿಟ್‍ಗಳು ಬಿಜೆಪಿ ಕಾರ್ಯಕರ್ತರ ಮನೆ ಸೇರುತ್ತಿದೆ. ಆದರೆ ನಮ್ಮ ಕಾರ್ಯಕರ್ತರು ಯಾವುದೇ ಪಕ್ಷ ಬೇದ ಮಾಡದೇ ಎಲ್ಲ ವರ್ಗದ ಜನರಿಗೆ ಈ ಕೊರೊನಾ ಲಾಕ್‍ಡೌನ್ ವೇಳೆ ಆಹಾರ ಕಿಟ್ ಹಂಚುವಲ್ಲಿ ಮತ್ತು ಸಹಾಯ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.

  • ಮತದಾರರಿಗೆ ಸ್ಯಾನಿಟರಿ ಪ್ಯಾಡ್ ಹಂಚಿಕೆ- ಮುಜುಗರಕ್ಕೆ ಒಳಗಾದ ಮಹಿಳೆಯರಿಂದ ಪ್ರತಿಭಟನೆ

    ಮತದಾರರಿಗೆ ಸ್ಯಾನಿಟರಿ ಪ್ಯಾಡ್ ಹಂಚಿಕೆ- ಮುಜುಗರಕ್ಕೆ ಒಳಗಾದ ಮಹಿಳೆಯರಿಂದ ಪ್ರತಿಭಟನೆ

    ಬೆಳಗಾವಿ: ಇತ್ತೀಚೆಗೆ ಬೆಳಗಾವಿಯಲ್ಲಿ ಗ್ಯಾಸ್ ಸ್ಟೋ, ಕುಕ್ಕರ್ ಮತ್ತು ಇಸ್ತ್ರೀ ಪೆಟ್ಟಿಗೆಗಳನ್ನು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ವಿತರಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಆದ್ರೆ ಬಿಜೆಪಿ ಮುಖಂಡರೊಬ್ಬರು ಸ್ಲಂ ನಿವಾಸಿಗಳಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಿ ಮಹಿಳೆಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

    ಬೆಳಗಾವಿ ಶ್ರೀನಗರ ಗಾರ್ಡನ್ ಬಳಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಮಹಿಳೆಯರು ಸ್ಯಾನಿಟರಿ ಪ್ಯಾಡ್ ಕೈಯಲ್ಲಿ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಇದನ್ನು ನೀಡಿದ ರಾಜಕಾರಣಿಗೆ ಹಿಡಿ ಶಾಪ ಹಾಕಿದ್ದಾರೆ.

    ಸ್ಲಂ ನಿವಾಸಿಗಳ 60 ಮನೆಗಳಿಗೆ ಬಿಜೆಪಿ ಮುಖಂಡರ ಬೆಂಬಲಿಗರು ಬಂದು ಸ್ಯಾನಟರಿ ಪ್ಯಾಡ್ ನೀಡಿ ಇದನ್ನು ಬಳಸುವಂತೆ ಹೇಳಿದ್ದಾರೆ. ಆದರೇ ಮೊದಲು ಈ ಬಗ್ಗೆ ಇಲ್ಲಿನ ಮಹಿಳೆಯರಿಗೆ ಗೊತ್ತಾಗಿಲ್ಲ. ನಂತರ ಮಾಹಿತಿ ತಿಳಿದು ಬಿಜೆಪಿ ಮುಖಂಡ ಅನಿಲ್ ಬೆನಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಅನಿಲ್ ಬೆನಕೆ ಅಪಮಾನ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸಹ ಇಲ್ಲಿನ ಮುಖಂಡರು ಪತ್ರ ಬರೆದು ಒತ್ತಾಯಿಸಿದ್ದಾರೆ. ಬುಧವಾರ ಸ್ಲಂ ನಿವಾಸಿಗಳು ದಿಢೀರ್ ಪ್ರತಿಭಟನೆ ನಡೆಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಿದ್ದು ಈಗಲ್ಲ. ಬದಲಿಗೆ ಮಾರ್ಚ್ 10ರಂದು ಮಹಿಳಾ ದಿನದ ಅಂಗವಾಗಿ ವಿತರಣೆ ಮಾಡಲಾಗಿತ್ತು. ಸ್ವಯಂ ಸೇವಾ ಸಂಘವೊಂದು ನನ್ನ ಬಳಿ ಬಂದು ಸ್ಯಾನಿಟರಿ ಪ್ಯಾಡ್ ವಿತರಣೆ ಸಹಾಯ ಕೇಳಿತ್ತು. ಅದರಂತೆ ಧನ ಸಹಾಯ ಮಾಡಿದ್ದೇನೆ. ಇದರಲ್ಲಿ ನನ್ನದು ಏನು ತಪ್ಪಿಲ್ಲ. ಈ ವಿಚಾರವನ್ನು ರಾಜಕೀಯಕ್ಕೆ ಬಳಸಲಾಗುತ್ತಿದೆ ಎಂದು ಅನಿಲ್ ಬೆನಕೆ ಸ್ಪಷ್ಟನೆ ನೀಡಿದ್ದಾರೆ.

    ಒಟ್ಟಾರೆಯಾಗಿ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ರಾಜಕಾರಣಿಗಳು ಪರಸ್ಪರ ಕಾಲೆಳೆಯೋದು ಆರಂಭವಾಗಿದೆ.