Tag: Disney Hotstar

  • ಫ್ರೀ.. ಫ್ರೀ.. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಡಿಸ್ನಿ+ ಹಾಟ್‍ಸ್ಟಾರ್‌ನಲ್ಲಿ ಫ್ರೀ

    ಫ್ರೀ.. ಫ್ರೀ.. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಡಿಸ್ನಿ+ ಹಾಟ್‍ಸ್ಟಾರ್‌ನಲ್ಲಿ ಫ್ರೀ

    ಮುಂಬೈ: ಈ ವರ್ಷದ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ (T20 World Cup 2024) ಕ್ರಿಕೆಟ್ ಪಂದ್ಯಗಳನ್ನು ಕ್ರಿಕೆಟ್ (Cricket) ಪ್ರಿಯರು ಮೊಬೈಲಿನಲ್ಲಿ ಉಚಿತವಾಗಿ ವೀಕ್ಷಿಸಬಹುದು.

    ಇಲ್ಲಿಯವರೆಗೆ ಡಿಸ್ನಿ ಹಾಟ್‍ಸ್ಟಾರ್‌ನಲ್ಲಿ (Disney+ Hotstar) ಲೈವ್ ಕ್ರಿಕೆಟ್ ನೋಡಬೇಕಾದರೆ ಸಬ್‍ಸ್ಕ್ರೈಬ್ ಮಾಡಬೇಕಿತ್ತು. ಮೊಬೈಲಿನಲ್ಲಿ ಮಾತ್ರ ಉಚಿತ ಸಿಗಲಿದ್ದು ಟಿವಿಯಲ್ಲಿ ವೀಕ್ಷಣೆ ಮಾಡಬೇಕಾದರೆ ಸಬ್‍ಸ್ಕ್ರೈಬ್ ಆಗಬೇಕಾಗುತ್ತದೆ.

    ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ಜೂನ್ 1 ರಿಂದ ಪ್ರಾರಂಭವಾಗಲಿದ್ದು ಅಮೆರಿಕ ಮತ್ತು ವೆಸ್ಟ್ ಇಂಡೀಸ್‍ನಲ್ಲಿ ನಡೆಯಲಿದೆ. ಈ ಮೂಲಕ ಮೊದಲ ಬಾರಿಗೆ ಅಮೆರಿಕದ ಅಂಗಳದಲ್ಲಿ ವಿಶ್ವಕಪ್ ಕ್ರಿಕೆಟ್ ನಡೆಯಲಿದೆ.

    ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಈಗಾಗಲೇ ಪ್ರಕಟಿಸಿದ್ದು, ಜೂನ್ 9 ರಂದು ಭಾರತ ಹಾಗೂ ಪಾಕಿಸ್ತಾನದ ನಡುವೆ ಪಂದ್ಯ ನಡೆಯಲಿದೆ.

    ಡಿಸ್ನಿ ಮತ್ತು ರಿಲಯನ್ಸ್ ತಮ್ಮ ಭಾರತೀಯ ದೂರದರ್ಶನ ಮತ್ತು ಸ್ಟ್ರೀಮಿಂಗ್‍ನ್ನು 8.5 ಬಿಲಿಯನ್ ಡಾಲರ್‌ಗೆ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದಿಂದ ಭಾರತದಲ್ಲಿನ ನೂರು ಕೋಟಿ ಮೊಬೈಲ್‍ಗಳಿಗೆ ಐಪಿಎಲ್ ಹಾಗೂ ವಿಶ್ವಕಪ್ ಕ್ರಿಕೆಟ್ ಉಚಿತವಾಗಿ ವೀಕ್ಷಿಸಲು ಸಾಧ್ಯವಾಗಲಿದೆ.

    ಒಪ್ಪಂದದ ನಿಯಮಗಳ ಅಡಿಯಲ್ಲಿ, ರಿಲಯನ್ಸ್ ಮತ್ತು ಅದರ ಅಂಗಸಂಸ್ಥೆಗಳು ಜಂಟಿ ಉದ್ಯಮದ 63% ಪಾಲನ್ನು ಹೊಂದಿದ್ದು, ಉಳಿದ 37%ನ್ನು ಡಿಸ್ನಿ ನಿರ್ವಹಿಸುತ್ತದೆ.

    ಒಟ್ಟಾರೆಯಾಗಿ, 120ಕ್ಕೂ ಹೆಚ್ಚು ಟಿವಿ ಚಾನೆಲ್‍ಗಳು ಮತ್ತು ಎರಡು ಸ್ಟ್ರೀಮಿಂಗ್ ಪ್ಲಾಟ್‍ಫಾರ್ಮ್‍ಗಳನ್ನು ನಿಯಂತ್ರಿಸುತ್ತದೆ. ಡಿಸ್ನಿಯು ಸ್ಟಾರ್ ಟಿವಿ ಮತ್ತು ಹಾಟ್‍ಸ್ಟಾರ್ ಬ್ರಾಂಡ್‍ಗಳ ಅಡಿಯಲ್ಲಿ ಡಿಜಿಟಲ್ ಸೇವೆಗಳನ್ನು ಹೊಂದಿದೆ. ರಿಲಯನ್ಸ್‍ನ ವಯಾಕಾಮ್ 18 ಜೆವಿ ಜಿಯೋಸಿನಿಮಾ ಬ್ರ್ಯಾಂಡ್ ಅಡಿಯಲ್ಲಿ ಸ್ಟ್ರೀಮಿಂಗ್ ಸೇವೆ ಒದಗಿಸಲಿದ್ದು, ಕ್ರಿಕೆಟ್ ಪ್ರಿಯರಿಗೆ ಉಚಿತವಾಗಿ ಐಪಿಎಲ್ ಹಾಗೂ ವಿಶ್ವಕಪ್ ವೀಕ್ಷಣೆಯ ಅವಕಾಶ ಮಾಡಿಕೊಡಲಾಗಿದೆ.

    ಸೋನಿಯ ಝೀ ಟಿವಿ ಮತ್ತು ಅಮೆಜಾನ್ ಮತ್ತು ನೆಟ್‍ಫ್ಲಿಕ್ಸ್‌ನಂತಹ ಅಂತರರಾಷ್ಟ್ರೀಯ ಸ್ಟ್ರೀಮಿಂಗ್ ಪ್ಲಾಟ್‍ಫಾರ್ಮ್‍ಗಳಿಗೆ ಸವಾಲು ಹಾಕಲು ಈ ಒಪ್ಪಂದದ ಸಂಬಂಧವನ್ನು ಉತ್ತಮವಾಗಿ ಇರಿಸಿಕೊಳ್ಳಲಾಗುವುದು. ಈ ಮೂಲಕ ಭಾರತದಲ್ಲಿ 7500 ಲಕ್ಷ ವೀಕ್ಷಕರನ್ನು ತಲುಪಲಿದ್ದೇವೆ ಎಂದು ಡಿಸ್ನಿ ಮತ್ತು ರಿಲಯನ್ಸ್ ಹೇಳಿಕೊಂಡಿವೆ.

    ಇದು ಭಾರತೀಯ ಮನರಂಜನಾ ಉದ್ಯಮದಲ್ಲಿ ಹೊಸ ಯುಗವನ್ನು ಹುಟ್ಟು ಹಾಕುವ ಮಹತ್ವದ ಒಪ್ಪಂದವಾಗಿದೆ ಎಂದು ರಿಲಯನ್ಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದರು. ನಾವು ಯಾವಾಗಲೂ ಡಿಸ್ನಿಯನ್ನು ಜಾಗತಿಕವಾಗಿ ಅತ್ಯುತ್ತಮ ಮಾಧ್ಯಮ ಗುಂಪು ಎಂದು ಗೌರವಿಸುತ್ತೇವೆ ಮತ್ತು ಈ ಕಾರ್ಯತಂತ್ರದ ಜಂಟಿ ಉದ್ಯಮವನ್ನು ರೂಪಿಸಲು ನಾವು ಉತ್ಸುಕರಾಗಿದ್ದೇವೆ. ಇದು ನಮ್ಮ ವ್ಯಾಪಕ ಸಂಪನ್ಮೂಲಗಳು, ಸೃಜನಶೀಲ ಸಾಮಥ್ರ್ಯ ಮತ್ತು ಮಾರುಕಟ್ಟೆ ಒಳನೋಟಗಳನ್ನು ಒಟ್ಟುಗೂಡಿಸಿ ರಾಷ್ಟ್ರದಾದ್ಯಂತ ಪ್ರೇಕ್ಷಕರಿಗೆ ಕೈಗೆಟುಕುವ ಬೆಲೆಯಲ್ಲಿ ಮನರಂಜನೆ ನೀಡಲು ಸಹಾಯ ಮಾಡುತ್ತದೆ. ರಿಲಯನ್ಸ್ ಗುಂಪಿನ ಪ್ರಮುಖ ಪಾಲುದಾರರಾಗಿ ಡಿಸ್ನಿಯನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದರು.

  • ಜಿಯೋ ಪ್ರೀಪೇಯ್ಡ್ ಗ್ರಾಹಕರಿಗೆ  JioTV ಪ್ರೀಮಿಯಂ ಪ್ಲ್ಯಾನ್‌ ಪರಿಚಯಿಸಿದ ರಿಲಯನ್ಸ್

    ಜಿಯೋ ಪ್ರೀಪೇಯ್ಡ್ ಗ್ರಾಹಕರಿಗೆ JioTV ಪ್ರೀಮಿಯಂ ಪ್ಲ್ಯಾನ್‌ ಪರಿಚಯಿಸಿದ ರಿಲಯನ್ಸ್

    ಬೆಂಗಳೂರು: ರಿಲಯನ್ಸ್ ಜಿಯೋದಿಂದ (Reliance Jio) ಈಗ ಜಿಯೋಟಿವಿ ಪ್ರೀಮಿಯಂ ಪ್ಲ್ಯಾನ್‌ಗಳನ್ನು (JioTV Premium Plans) ಪರಿಚಯಿಸಲಾಗುತ್ತಿದೆ. ಜಿಯೋ ಪ್ರೀಪೇಯ್ಡ್ ಬಳಕೆದಾರರು ಈಗ ಜಿಯೋಟಿವಿ ಪ್ರೀಮಿಯಂ ಪ್ಲ್ಯಾನ್‌ಗಳ ಜೊತೆಗೆ ನಿರಂತರ ಮನರಂಜನೆ ಆನಂದಿಸಬಹುದು. ಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಪ್ಲ್ಯಾನ್‌ಗಳು ಇರಲಿದ್ದು, ಇದರ ಮೂಲಕ ಅನಿಯಮಿತ ಡೇಟಾ, ಧ್ವನಿ, ಎಸ್‌ಎಂಎಸ್‌ ಹಾಗೂ 14 ಪ್ರಮುಖ OTT (ಓವರ್ ದಿ ಟಾಪ್)ಗಳಿಗೆ ಚಂದಾದಾರಿಕೆ ಪಡೆಯಬಹುದು. 1,000 ರೂ. ಮೌಲ್ಯದ ಒಟಿಟಿ ಚಂದಾದಾರಿಕೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೇ ಇದು ಲಭ್ಯವಾಗಲಿದೆ.

    ಪ್ಲ್ಯಾನ್‌ಗಳು ತಿಂಗಳಿಗೆ 398 ರೂ.ನೊಂದಿಗೆ ಆರಂಭವಾಗುತ್ತದೆ. ಅಂದ ಹಾಗೆ ಈ 14 OTT ಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕ ಕಂಟೆಂಟ್ ಲಭ್ಯವಾಗುತ್ತದೆ. ಡಿಜಿಟಲ್ ಟಿವಿ, ಕ್ರೀಡಾ, ಒರಿಜಿನಲ್ಸ್, ಟೀವಿ ಶೋಗಳು ಮುಂತಾದವು ದೊರೆಯುತ್ತವೆ. ಪ್ರೀಪೇಯ್ಡ್ ಸೆಗ್ಮೆಂಟ್‌ನಲ್ಲಿ ವಾರ್ಷಿಕ ಪ್ಲ್ಯಾನ್‌ ಖರೀದಿ ಮಾಡುವಂಥ ಗ್ರಾಹಕರಿಗಾಗಿಯೇ ಒನ್ ಕ್ಲಿಕ್ ಕಾಲ್ ಸೆಂಟರ್ ಬೆಂಬಲ ಸಹ ದೊರೆಯುತ್ತದೆ.

    ಯಾವ್ಯಾವ ಆ್ಯಪ್‌ಗಳು ದೊರೆಯುತ್ತವೆ?

    • ರಾಷ್ಟ್ರೀಯ ಆ್ಯಪ್‌ಗಳು: ಜಿಯೋಸಿನಿಮಾ (JioCinema) ಪ್ರೀಮಿಯಂ, ಡಿಸ್ನಿ+ ಹಾಟ್ ಸ್ಟಾರ್, ಝೀ5, ಸೋನಿಲಿವ್
    • ಅಂತಾರಾಷ್ಟ್ರೀಯ ಆ್ಯಪ್‌ಗಳು: ಪ್ರೈಮ್ ವಿಡಿಯೋ (ಮೊಬೈಲ್), ಲಯನ್ಸ್ ಗೇಟ್ ಪ್ಲೇ, ಡಿಸ್ಕವರಿ+, ಡಾಕ್ಯುಬೇ
    • ಪ್ರಾದೇಶಿಕ ಆ್ಯಪ್‌ಗಳು: ಸನ್ ನೆಕ್ಸ್ಟ್, ಹೊಯ್ ಚೊಯ್, ಪ್ಲಾನೆಟ್ ಮರಾಠಿ, ಚೌಪಾಲ್, ಎಪಿಕ್ ಆನ್, ಕಂಚಾ ಲಂಕಾ

    ಇದೊಂದು‌ ಪ್ಲ್ಯಾನ್‌ ಖರೀದಿಸಿದವರಿಗೆ ವಿವಿಧ ಒಟಿಟಿಗಳಿಗೆ ಸಬ್‌ಸ್ಕ್ರೈಬ್ ಆಗಬೇಕು ಎಂಬ ಅಗತ್ಯ ಇರುವುದಿಲ್ಲ. ಹಲವು ಲಾಗಿನ್ ಐಡಿ ಬೇಕು, ಪ್ರತಿ ಆ್ಯಪ್‌ ಗೂ ಪ್ರತ್ಯೇಕವಾಗಿ ಪಾಸ್‌ವರ್ಡ್‌ಬೇಕು ಅಂತಿಲ್ಲ. ಒಂದೇ ಕಡೆಗೆ ಎಲ್ಲ ವಿವಿಧ ಕಂಟೆಂಟ್‌ಗಳು ದೊರೆಯುತ್ತದೆ. ಇನ್ನೂ ಗ್ರಾಹಕರು ತಮಗೆ ಬೇಕಾದ ಕಂಟೆಂಟ್ ಹುಡುಕುವುದು ಸಹ ಸುಲಭವಾಗಿದ್ದು, ಶಿಫಾರಸಿಗಾಗಿಯೇ ಉತ್ತಮವಾದ ಹುಡುಕಾಟದ ಎಂಜಿನ್ ವ್ಯವಸ್ಥೆ ಇದೆ. ಅದೇ ರೀತಿ ಗ್ರಾಹಕರು ತಮ್ಮ ಆದ್ಯತೆಯಂತೆ ಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಪ್ಲ್ಯಾನ್‌ಗಳ ಮಿತಿಯನ್ನು ಆರಿಸಿಕೊಳ್ಳಬಹುದು. ಒಂದೇ ಕ್ಲಿಕ್ ನಲ್ಲಿ ಕಸ್ಟಮರ್ ಕೇರ್ ಕಾಲ್ ಬ್ಯಾಕ್ ಸೇವೆ ಲಭ್ಯ ಇದ್ದು, ವಾರ್ಷಿಕ ಪ್ಲ್ಯಾನ್‌ ರೀಚಾರ್ಜ್‌ಗೆ ಇಎಂಐ ಸೌಲಭ್ಯ ಸಹ ದೊರೆಯಲಿದೆ.

    ಪ್ರೀಮಿಯಂ OTT ಕಂಟೆಂಟ್ ಬಳಸುವುದು ಹೇಗೆ?

    • ಮೊದಲಿಗೆ ಜಿಯೋಟಿವಿ ಪ್ರೀಮಿಯಂನ ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಪ್ಲ್ಯಾನ್‌ನೊಂದಿಗೆ ರೀಚಾರ್ಜ್ ಮಾಡಬೇಕು
    • ಅದೇ ಜಿಯೋ ಮೊಬೈಲ್ ಫೋನ್ ಸಂಖ್ಯೆಯೊಂದಿಗೆ ಜಿಯೋ ಟಿವಿ ಆ್ಯಪ್‌ಗೆ ಸೈನ್ ಇನ್ ಆಗಬೇಕು
    • ಜಿಯೋಟಿವಿ ಪ್ರೀಮಿಯಂ ಟ್ಯಾಬ್ ಮೂಲಕವಾಗಿ ಪ್ರೀಮಿಯಂ ಒಟಿಟಿ ಆ್ಯಪ್‌ ಕಂಟೆಂಟ್ ಅನ್ನು ಆನಂದಿಸಬಹುದು
    • ಪ್ರತ್ಯೇಕವಾದ ಲಾಗಿನ್ ಅಥವಾ ಪಾಸ್‌ವರ್ಡ್ ಅಗತ್ಯ ಇಲ್ಲ.

    ಗಮನಿಸಬೇಕಾದ ಅಂಶಗಳು:

    • ಬಳಕೆದಾರರ ಮೈಜಿಯೋ ಕೂಪನ್ ವಿಭಾಗದಲ್ಲಿ ದೊರೆಯುವ ಕೂಪನ್ ಮೂಲಕವಾಗಿ ಜಿಯೋಸಿನಿಮಾ ಪ್ರೀಮಿಯಂ ಸಬ್ ಸ್ಕ್ರಿಪ್ಷನ್ ದೊರೆಯುತ್ತದೆ. ಪ್ರೀಮಿಯಂ ಕಂಟೆಂಟ್ ಬೇಕು ಅಂತಾದಲ್ಲಿ ಜಿಯೋಸಿನಿಮಾ ಆ್ಯಪ್‌ನಲ್ಲಿ ಕೂಪನ್ ರಿಡೀಮ್ ಮಾಡಬೇಕು.
    • ತಮ್ಮ ಬಳಿ ಇರುವಂಥ ಆಯಾ ಆ್ಯಪ್‌ ಮೂಲಕವಾಗಿಯೇ ಪ್ರೈಮ್ ವಿಡಿಯೋ (ಮೊಬೈಲ್) ಮತ್ತು ಡಿಸ್ನಿ+ ಹಾಟ್ ಸ್ಟಾರ್ ಕಂಟೆಂಟ್ ಗಳನ್ನು ನೋಡಬಹುದು.
    • ಮೈಜಿಯೋ ಮೂಲಕ ಬಳಕೆದಾರರು ಅಮೆಜಾನ್ ಪ್ರೈಮ್ ಸಬ್ ಸ್ಕ್ರಿಪ್ಷನ್ ಸಕ್ರಿಯಗೊಳಿಸಬೇಕಾಗುತ್ತದೆ. ಆಪ್‌ಗೆ ಲಾಗಿನ್ ಆಗುವಾಗ ಡಿಸ್ನಿ+ ಹಾಟ್ ಸ್ಟಾರ್ ಆಕ್ಟಿವೇಟ್ ಆಗುತ್ತದೆ.
    • ಈಗಾಗಲೇ ಇರುವಂಥ ಬಳಕೆದಾರರು ಹಾಗೂ ಹೊಸ ಬಳಕೆದಾರರಿಗೆ ಈ ಪ್ಲಾನ್ ದೊರೆಯಲಿದೆ. ಡಿಸೆಂಬರ್ 15ರಿಂದ ಈ ಪ್ಲ್ಯಾನ್‌ ದೊರೆಯಲಿದೆ.

  • 49th Century: ಗ್ರೌಂಡ್‌ ಹೊರಗೂ ದಾಖಲೆ ಬರೆದ ಕೊಹ್ಲಿ ಬರ್ತ್‌ ಡೇ ಶತಕ..!

    49th Century: ಗ್ರೌಂಡ್‌ ಹೊರಗೂ ದಾಖಲೆ ಬರೆದ ಕೊಹ್ಲಿ ಬರ್ತ್‌ ಡೇ ಶತಕ..!

    – ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ ನಲ್ಲಿ ಹಿಂದಿನ ಎಲ್ಲಾ ದಾಖಲೆಗಳೂ ಉಡೀಸ್‌

    ಕೋಲ್ಕತ್ತಾ: ಸೂಪರ್‌ ಸಂಡೇನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ (Disney+ Hotstar) ಏಕಕಾಲಕ್ಕೆ 4.4 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು, ಹಿಂದಿನ ಎಲ್ಲಾ ದಾಖಲೆಗಳೂ ಮುರಿದಿವೆ.

    ಇದೇ ವಿಶ್ವಕಪ್‌ ಆವೃತ್ತಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧ ಧರ್ಮಶಾಲಾ ಕ್ರೀಡಾಂಗಣದಲ್ಲಿ ಕಿವೀಸ್‌ ವಿರುದ್ಧ ನಡೆದ ಪಂದ್ಯದಲ್ಲಿ 4.3 ಕೋಟಿ ಕ್ರಿಕೆಟ್‌ ಅಭಿಮಾನಿಗಳಿಂದ ವೀಕ್ಷಣೆ ಕಂಡಿತ್ತು. ಆದರಿಂದು 4.4 ಕೋಟಿ ವೀಕ್ಷಣೆ ಕಂಡಿದ್ದು ಹಿಂದಿನ ಎಲ್ಲಾ ದಾಖಲೆಗಳನ್ನ ಉಡೀಸ್‌ ಮಾಡಿದೆ. ಇದನ್ನೂ ಓದಿ:  ನಮ್ಮ ಕ್ರಿಕೆಟ್‌ ತಂಡ ಮತ್ತೊಮ್ಮೆ ವಿಜಯಶಾಲಿಯಾಗಿದೆ: ಭಾರತದ ಗೆಲುವಿಗೆ ಮೋದಿ ಅಭಿನಂದನೆ

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ ಸ್ಫೋಟಕ ಆರಂಭದೊಂದಿಗೆ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 326 ರನ್‌ ಗೀಸಿತ್ತು. ಆರಂಭದಲ್ಲಿ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಹರಿಣರ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದ್ದರು. ಆರಂಭಿಕರು ಔಟಾಗುತ್ತಿದ್ದಂತೆ ರನ್‌ ವೇಗವೂ ಕಡಿಮೆಯಾಯಿತು.  ಇದನ್ನೂ ಓದಿ: ಕಾಲಿಗೆ ಬೀಳಬೇಡಪ್ಪ..: ಪಾದ ಮುಟ್ಟಲು ಬಂದ ಯುವ ಅಭಿಮಾನಿಗೆ ಕೊಹ್ಲಿ ಪ್ರೀತಿಯ ಮಾತು: Viral Video

    ನಿಧಾನಗತಿಯ ಬ್ಯಾಟಿಂಗ್‌ ಮಾಡಿದ ವಿರಾಟ್‌ ಕೊಹ್ಲಿ ತಮ್ಮ ಹುಟ್ಟುಹಬ್ಬದಂದೇ 49‌ನೇ ಏಕದಿನ ಕ್ರಿಕೆಟ್‌ ಶತಕ ದಾಖಲೆಯನ್ನ ಸಿಡಿಸಿ ಕ್ರಿಕೆಟ್‌ ದೇವರು ಸಚಿನ್‌ ದಾಖಲೆಯನ್ನ ಸರಿಗಟ್ಟಿದರು. ಆದ್ರೆ 48.3ನೇ ಓವರ್‌ನಲ್ಲಿ ಕೊಹ್ಲಿ ಶತಕವನ್ನ ಕಣ್ತುಂಬಿಕೊಳ್ಳಲು 4.4 ಕೋಟಿ ವೀಕ್ಷಕರು ಆನ್‌ಲೈನ್‌ ವೇದಿಕೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ಗೆ ಲಗ್ಗೆಯಿಟ್ಟಿದ್ದರು. ಕೊಹ್ಲಿ 90 ರನ್‌ ಗಳಿಸುತ್ತಿದ್ದಂತೆ ಲಕ್ಷ ಲಕ್ಷ ಅಭಿಮಾನಿಗಳು ಏಕಾಏಕಿ ಆನ್‌ಲೈನ್‌ ವೇದಿಕೆಗೆ ಲಗ್ಗೆಯಿಟ್ಟು ಗ್ರೌಂಡ್‌ ಹೊರಗೂ ಕೊಹ್ಲಿ ಶತಕ ದಾಖಲೆ ಬರೆಯುವಂತೆ ಮಾಡಿದರು. ಈ ಹಿಂದೆ ನ್ಯೂಜಿಲೆಂಡ್‌ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸುವಾಗ 4.3 ಕೋಟಿ ಅಭಿಮಾನಿಗಳು ವೀಕ್ಷಿಸಿದ್ದರು.

    ಭಾರತ ಮತ್ತು ಪಾಕ್‌ ಪಂದ್ಯದ ವೇಳೆ ರೋಹಿತ್‌ ಶರ್ಮಾ (Rohit Sharma) ಬ್ಯಾಟಿಂಗ್‌ ನೋಡಲು 3.5 ಕೋಟಿ ಜನರು ವೀಕ್ಷಣೆ ಮಾಡಿದ್ದು, ಈವರೆಗಿನ ದಾಖಲೆಯಾಗಿತ್ತು. ಈ ಹಿಂದೇ ಇದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ 2023ರ ಐಪಿಎಲ್‌ ಫೈನಲ್‌ ಪಂದ್ಯವನ್ನು ಜಿಯೋಸಿನಿಮಾದಲ್ಲಿ‌ ಏಕಕಾಲಕ್ಕೆ 3.2 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು ದಾಖಲೆಯಾಗಿತ್ತು. ಇದನ್ನೂ ಓದಿ: ICC World Cup: 20 ವರ್ಷಗಳ ಬಳಿಕ ಟೀಂ ಇಂಡಿಯಾದ ಸತತ 8ನೇ ಗೆಲುವು

    2023ರ ಐಪಿಎಲ್‌ ಆವೃತ್ತಿಯಲ್ಲಿ ಜಿಯೋಸಿನಿಮಾ ಸತತ 4ನೇ ಬಾರಿಗೆ ತನ್ನದೇ ವೀಕ್ಷಕರ ದಾಖಲೆ ಮುರಿದಿತ್ತು. ಜೊತೆಗೆ 2019ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ ನಿರ್ಮಿಸಲ್ಪಟ್ಟಿದ್ದ ವಿಶ್ವದಾಖಲೆಗಳೆಲ್ಲವನ್ನೂ ನುಚ್ಚುನೂರು ಮಾಡಿತ್ತು. 2013ರ ವಿಶ್ವಕಪ್‌ ಪಂದ್ಯವನ್ನು 2.53 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು.

    ಏಪ್ರಿಲ್ 17ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಪಂದ್ಯದ ವೇಳೆ ಎಂ.ಎಸ್ ಧೋನಿ ಅವರ ಆಟ ವೀಕ್ಷಿಸಲು 2.4 ಕೋಟಿ ವೀಕ್ಷಕರು ಜಿಯೋಸಿನಿಮಾದಲ್ಲಿ ಒಟ್ಟಾಗಿ ಸೇರಿದ್ದು ಹಿಂದಿನ ದಾಖಲೆ ಎನಿಸಿತ್ತು. ಅದಕ್ಕೂ ಮುನ್ನ ಏಪ್ರಿಲ್ 12ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಗತವೈಭವ ನೆನಪಿಸುವಂಥ ಬ್ಯಾಟಿಂಗ್ ಪ್ರದರ್ಶಿಸಿದಾಗ ಗರಿಷ್ಠ 2.2 ಕೋಟಿ ವೀಕ್ಷಕರ ದಾಖಲೆ ಕಂಡಿತ್ತು. ಇದನ್ನೂ ಓದಿ: 49th Century: ಕಿಂಗ್ ಕೊಹ್ಲಿ ಬರ್ತ್ ಡೇ ಶತಕ – ಶುಭಾಶಯಗಳ ಸುರಿಮಳೆ!

    ಭಾನುವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ತಂಡ 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಆಲೌಟ್‌ ಆಯಿತು. ಗುರಿ ಬೆನ್ನತ್ತಿದ್ದ ಭಾರತ ತಂಡ 30.3 ಓವರ್‌ಗಳಲ್ಲೇ 192 ರನ್‌ ಗಳಿಸಿ ಭರ್ಜರಿ ಜಯ ಸಾಧಿಸಿತು.

  • Record Break: ಭಾರತ-ಕಿವೀಸ್‌ ರೋಚಕ ಪಂದ್ಯಕ್ಕೆ ಗ್ರೌಂಡ್‌ ಹೊರಗಿನ ದಾಖಲೆಗಳೂ ಉಡೀಸ್‌

    Record Break: ಭಾರತ-ಕಿವೀಸ್‌ ರೋಚಕ ಪಂದ್ಯಕ್ಕೆ ಗ್ರೌಂಡ್‌ ಹೊರಗಿನ ದಾಖಲೆಗಳೂ ಉಡೀಸ್‌

    ಧರ್ಮಶಾಲಾ: ಭಾರತ ಮತ್ತು ನ್ಯೂಜಿಲೆಂಡ್‌ (India vs New Zealand) ನಡುವಿನ ರೋಚಕ ವಿಶ್ವಕಪ್‌ (World Cup 2023) ಪಂದ್ಯದಲ್ಲಿ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ (Disney+ Hotstar) ಏಕಕಾಲಕ್ಕೆ 4.3 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು, ಹಿಂದಿನ ಎಲ್ಲಾ ದಾಖಲೆಗಳನ್ನು ಉಡೀಸ್‌ ಮಾಡಿದೆ.

    ಸೂಪರ್‌ ಸಂಡೇನಲ್ಲಿ ಧರ್ಮಶಾಲಾದ HPCA ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಕಿವೀಸ್‌ ಪಂದ್ಯವು ಕೊನೇ ಕ್ಷಣದವರೆಗೂ ರೋಚತೆಯಿಂದ ಕೂಡಿತ್ತು. ಡೆತ್‌ ಓವರ್‌ ಶುರುವಾಗುತ್ತಿದ್ದಂತೆ, ಕೊಹ್ಲಿ (Virat Kohli) ವಿಶ್ವದಾಖಲೆಯ ಶತಕದ ವೈಭವ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಆನ್‌ಲೈನ್‌ ವೇದಿಕೆಯಲ್ಲಿ ದಾಂಗುಡಿಯಿಡುತ್ತಿದ್ದರು, ಕೊಹ್ಲಿ ಎದುರಿಸುವ ಪ್ರತಿ ಎಸೆತವನ್ನು ಸಿಕ್ಸರ್‌ ಸಿಡಿಸುತ್ತಾರೋ, ಬೌಂಡರಿ ಸಿಡಿಸುತ್ತಾರೋ ಎಂದು ಅಭಿಮಾನಿಗಳು ಉಸಿರು ಬಿಗಿಹಿಡಿದು ನೋಡುತ್ತಿದ್ದರು, ಪ್ರತಿ ಎಸೆತ ಚಚ್ಚಿದಾಗಲೂ ಕೊಹ್ಲಿ ಕೊಹ್ಲಿ ಎಂದು ಕೂಗುತ್ತಾ ಹುರಿದುಂಬಿಸುತ್ತಿದ್ದರು.

    ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿದ್ದ ಭಾರತ ತಂಡ, ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಎದುರಾಳಿ ನ್ಯೂಜಿಲೆಂಡ್‌ ತಂಡಕ್ಕೆ ಬಿಟ್ಟುಕೊಟ್ಟಿತ್ತು. ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌, ಜಸ್ಪ್ರೀತ್‌ ಬುಮ್ರಾ ಬೆಂಕಿ ಬೌಲಿಂಗ್‌ ದಾಳಿಯಿಂದ 273 ರನ್‌ಗಳಿಗೆ ಕಿವೀಸ್‌ ತಂಡವನ್ನು ಕಟ್ಟಿಹಾಕಿದ್ದ ಭಾರತ ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿತು. ನಾಯಕ ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌ ಸ್ಫೋಟಕ ಬ್ಯಾಟಿಂಗ್‌ನಿಂದ ಉತ್ತಮ ಆರಂಭ ಪಡೆದರೂ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಶ್ರೇಯಸ್‌ ಅಯ್ಯರ್‌ 33 ರನ್‌, ಕೆ.ಎಲ್‌ ರಾಹುಲ್‌ 27 ರನ್‌ ಗಳಿಸಿ ಔಟಾಗುತ್ತಿದ್ದಂತೆ‌ ಪಂದ್ಯ ಗೆಲ್ಲಿಸುವ ಜವಾಬ್ದಾರಿ ಕೊಹ್ಲಿ ಹೆಗಲ ಮೇಲೆ ಬಿದ್ದಿತ್ತು. ಇದಕ್ಕೆ ರವೀಂದ್ರ ಜಡೇಜಾ ಕೂಡ ಸಾಥ್‌ ನೀಡಿದರು.

    ಕೊಹ್ಲಿ 42.5ನೇ ಓವ್‌ನಲ್ಲಿ ಬ್ಯಾಟಿಂಗ್‌ ಮಾಡುವಾಗ 3.6 ಕೋಟಿಯಿದ್ದ ವೀಕ್ಷಕರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಾ ಸಾಗಿತು. 44ನೇ ಓವರ್‌ನಲ್ಲಿ 3.7 ಕೋಟಿ, 46.3ನೇ ಓವರ್‌ನಲ್ಲಿ 4 ಕೋಟಿ, 47ನೇ ಓವರ್‌ನಲ್ಲಿ 4.1 ಕೋಟಿ, ಅದೇ ಕ್ಷಣ 4.2 ಕೋಟಿ ಇದ್ದ ವೀಕ್ಷಕರ ಸಂಖ್ಯೆ 4.3 ಕೋಟಿಗೆ ಏರಿಕೆಯಾಗಿತ್ತು. ಆದ್ರೆ ಕೊಹ್ಲಿ ಶತಕವನ್ನ ಕಣ್ತುಂಬಿಕೊಳ್ಳಲು ಬಂದ ಅಭಿಮಾನಿಗಳಿಗೆ ನಿರಾಸೆಯಾಯಿತು. ಇದು ಈ ಹಿಂದಿನ ಎಲ್ಲ ದಾಖಲೆಗಳನ್ನ ಉಡೀಸ್‌ ಮಾಡಿದೆ. ಇದನ್ನೂ ಓದಿ: ಇಶಾನ್‌ಗೆ ಜೇನುಹುಳು ಕಂಟಕ, ಸೂರ್ಯನಿಗೆ ಮೊಣಕೈ ಗಾಯ – ಪಂದ್ಯ ಆರಂಭಕ್ಕೂ ಮುನ್ನವೇ ಭಾರತಕ್ಕೆ ತ್ರಿಬಲ್‌ ಶಾಕ್‌

    ಭಾರತ ಮತ್ತು ಪಾಕ್‌ ಪಂದ್ಯದ ವೇಳೆ ರೋಹಿತ್‌ ಶರ್ಮಾ (Rohit Sharma) ಬ್ಯಾಟಿಂಗ್‌ ನೋಡಲು 3.5 ಕೋಟಿ ಜನರು ವೀಕ್ಷಣೆ ಮಾಡಿದ್ದು, ಈವರೆಗಿನ ದಾಖಲೆಯಾಗಿತ್ತು. ಈ ಹಿಂದೇ ಇದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ 2023ರ ಐಪಿಎಲ್‌ ಫೈನಲ್‌ ಪಂದ್ಯವನ್ನು ಜಿಯೋಸಿನಿಮಾದಲ್ಲಿ‌ ಏಕಕಾಲಕ್ಕೆ 3.2 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು ಈ ವರೆಗಿನ ದಾಖಲೆಯಾಗಿತ್ತು. ಇದನ್ನೂ ಓದಿ: ಶಮಿ ಹೊಸ ದಾಖಲೆ – ODI ವಿಶ್ವಕಪ್‌ ಇತಿಹಾಸದಲ್ಲೇ 2 ಬಾರಿ ಐದು ವಿಕೆಟ್‌ ಕಬಳಿಸಿದ ಮೊದಲ ಭಾರತೀಯ

    2023ರ ಐಪಿಎಲ್‌ ಆವೃತ್ತಿಯಲ್ಲಿ ಜಿಯೋಸಿನಿಮಾ ಸತತ 4ನೇ ಬಾರಿಗೆ ತನ್ನದೇ ವೀಕ್ಷಕರ ದಾಖಲೆ ಮುರಿದಿತ್ತು. ಜೊತೆಗೆ 2019ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ ನಿರ್ಮಿಸಲ್ಪಟ್ಟಿದ್ದ ವಿಶ್ವದಾಖಲೆಗಳೆಲ್ಲವನ್ನೂ ನುಚ್ಚುನೂರು ಮಾಡಿತ್ತು. 2013ರ ವಿಶ್ವಕಪ್‌ ಪಂದ್ಯವನ್ನು 2.53 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು. ಇದನ್ನೂ ಓದಿ: ಎಲ್ಲಿ ಹೋಯ್ತು ಬಾಬರ್‌ನ ಬೆಂಕಿ ಬ್ಯಾಟಿಂಗ್? – ಮತ್ತೆ ಗಂಭೀರ್ ಕೆಣಕಿದ ಕೊಹ್ಲಿ ಫ್ಯಾನ್ಸ್

    ಏಪ್ರಿಲ್ 17ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಪಂದ್ಯದ ವೇಳೆ ಎಂ.ಎಸ್ ಧೋನಿ ಅವರ ಆಟ ವೀಕ್ಷಿಸಲು 2.4 ಕೋಟಿ ವೀಕ್ಷಕರು ಜಿಯೋಸಿನಿಮಾದಲ್ಲಿ ಒಟ್ಟಾಗಿ ಸೇರಿದ್ದು ಹಿಂದಿನ ದಾಖಲೆ ಎನಿಸಿತ್ತು. ಅದಕ್ಕೂ ಮುನ್ನ ಏಪ್ರಿಲ್ 12ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಗತವೈಭವ ನೆನಪಿಸುವಂಥ ಬ್ಯಾಟಿಂಗ್ ಪ್ರದರ್ಶಿಸಿದಾಗ ಗರಿಷ್ಠ 2.2 ಕೋಟಿ ವೀಕ್ಷಕರ ದಾಖಲೆ ಕಂಡಿತ್ತು.

    ಭಾನುವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ತಂಡ 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಆಲೌಟ್‌ ಆಯಿತು. ಗುರಿ ಬೆನ್ನತ್ತಿದ್ದ ಭಾರತ ತಂಡ 30.3 ಓವರ್‌ಗಳಲ್ಲೇ 192 ರನ್‌ ಗಳಿಸಿ ಭರ್ಜರಿ ಜಯ ಸಾಧಿಸಿತು. ಇದನ್ನೂ ಓದಿ: ಪಾಕಿಸ್ತಾನ್‌ ಜಿಂದಾಬಾದ್‌ ಅನ್ನದೇ ಇನ್ನೇನು ಹೇಳ್ಬೇಕು? – ಪೊಲೀಸ್‌ ಅಧಿಕಾರಿ ಜೊತೆ ಪಾಕ್‌ ಅಭಿಮಾನಿ ವಾಗ್ವಾದ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊಬೈಲ್ ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟ Hotstar – ವಿಶ್ವಕಪ್, ಏಷ್ಯಾಕಪ್ ಟೂರ್ನಿ ವೀಕ್ಷಣೆ ಫ್ರೀ

    ಮೊಬೈಲ್ ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟ Hotstar – ವಿಶ್ವಕಪ್, ಏಷ್ಯಾಕಪ್ ಟೂರ್ನಿ ವೀಕ್ಷಣೆ ಫ್ರೀ

    ಮುಂಬೈ: ಮೊಬೈಲಿನಲ್ಲಿ ಕ್ರಿಕೆಟ್ ವೀಕ್ಷಿಸುವ ಬಳಕೆದಾರರಿಗೆ ಡಿಸ್ನಿ ಹಾಟ್‌ಸ್ಟಾರ್ (Disney Hotstar) ಸಿಹಿ ಸುದ್ದಿ ಕೊಟ್ಟಿದೆ. ಪ್ರಸಕ್ತ ವರ್ಷದಲ್ಲೇ ನಡೆಯಲಿರುವ ಏಕದಿನ ಏಷ್ಯಾಕಪ್ (Asia Cup 2023) ಹಾಗೂ ಏಕದಿನ ವಿಶ್ವಕಪ್ ಟೂರ್ನಿಗಳನ್ನ (ICC Cricket World Cup) ಮೊಬೈಲ್ ಆ್ಯಪ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.

    2023ರಲ್ಲಿ ನಡೆದ 16ನೇ ಐಪಿಎಲ್ ಆವೃತ್ತಿಯಲ್ಲಿ ಜಿಯೋಸಿನಿಮಾ (JioCinema) ಆ್ಯಪ್ ಕ್ರಿಕೆಟ್ ಅಭಿಮಾನಿಗಳಿಗೆ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು ಸಕ್ಸಸ್ ಕಂಡಿತು. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯವನ್ನ 3.2 ಕೋಟಿ ಜನ ಏಕಕಾಲಕ್ಕೆ ವೀಕ್ಷಣೆ ಮಾಡಿದ್ದರು. ಇದು ಈ ಹಿಂದಿನ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡಿತು. ಹಾಗಾಗಿ ಪ್ರತಿಸ್ಪರ್ಧಿ ಡಿಸ್ನಿ ಹಾಟ್‌ಸ್ಟಾರ್ 2023ರಲ್ಲಿ ನಡೆಯಲಿರುವ ಏಕದಿನ ಏಷ್ಯಾಕಪ್ ಹಾಗೂ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಉಚಿತವಾಗಿ ವೀಕ್ಷಿಸಲು ಬಳಕೆದಾರರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಹೇಳಿದೆ.

    ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ಏಕದಿನ ವಿಶ್ವಕಪ್ ನಡೆಯಲಿದೆ. ಸೆಪ್ಟಂಬರ್ 2 ರಿಂದ ಸೆಪ್ಟಂಬರ್ 17ರ ವರೆಗೆ ಏಕದಿನ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಏಕದಿನ ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಈ ಟೂರ್ನಿಗಳನ್ನ ಹಾಟ್‌ಸ್ಟಾರ್ ಮೊಬೈಲ್ ಆ್ಯಪ್ ಬಳಕೆದಾರರು ಚಂದಾದಾರರಾಗದೆಯೂ ಉಚಿತವಾಗಿ ವೀಕ್ಷಿಸಬಹುದಾಗಿದೆ. ಇದನ್ನೂ ಓದಿ:  Record… Record… Record: ಫೈನಲ್‌ ಮ್ಯಾಚ್‌ನಲ್ಲಿ ಎಲ್ಲಾ ದಾಖಲೆ ಉಡೀಸ್‌ – ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 3.2 ಕೋಟಿ ಜನ ವೀಕ್ಷಣೆ

    2023ರ ಐಪಿಎಲ್ ಟೂರ್ನಿ ವೇಳೆ ಜಿಯೋಸಿನಿಮಾ ಮೊದಲ 5 ವಾರಗಳಲ್ಲೇ ದಾಖಲೆಯ 13 ಕೋಟಿ ಡಿಜಿಟಲ್ ವೀಕ್ಷಣೆ ಕಂಡಿತ್ತು. ಪ್ರತಿ ವೀಕ್ಷಕರು ಪ್ರತಿ ಪಂದ್ಯವನ್ನು ಕನಿಷ್ಠ 1 ಗಂಟೆ ವೀಕ್ಷಣೆ ಮಾಡಿದ್ದರು. 2023ರ ಐಪಿಎಲ್ ಹಕ್ಕು ಕಳೆದುಕೊಂಡ ನಂತರ ಹಾಟ್‌ಸ್ಟಾರ್ ಆ್ಯಪ್ ತನ್ನ 50 ಲಕ್ಷ ಮೂಲ ಬಳಕೆದಾರರನ್ನ ಕಳೆದುಕೊಂಡಿದೆ ಎಂದು ಸಿಎಲ್‌ಎಸ್‌ಎ ಸಂಶೋಧನಾ ಸಂಸ್ಥೆ ಅಂದಾಜಿಸಿದೆ. ಈ ಹಿನ್ನೆಲೆಯಲ್ಲಿ ಡಿಸ್ನಿ ಹಾಟ್‌ಸ್ಟಾರ್ ಸಹ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ಟೂರ್ನಿಗಳನ್ನ ಮೊಬೈಲ್ ಆ್ಯಪ್ ಬಳಕೆದಾರಿಗೆ ಉಚಿತ ಸ್ಟ್ರೀಮಿಂಗ್ ನೀಡಲು ನಿರ್ಧರಿಸಿದೆ. ಇದನ್ನೂ ಓದಿ: ಆಸೀಸ್‌ ಮಾರಕ ಬೌಲಿಂಗ್‌ಗೆ ಟಾಪ್‌ ಬ್ಯಾಟರ್‌ಗಳು ಪಲ್ಟಿ – 318 ರನ್‌ಗಳ ಹಿನ್ನಡೆಯಲ್ಲಿ ಭಾರತ

    ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ಲೇಷಕ ಕರಣ್ ತೌರಾನಿ, ಉಚಿತ ಕೊಡುಗೆಗಳು ದೀರ್ಘಾವಧಿಯಾಗಿ ಮುಂದುವರಿದರೇ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ಗಳಿಗೆ ನಷ್ಟ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.