Tag: dismissal

  • ಈಶ್ವರಪ್ಪ ರಾಜೀನಾಮೆ ಕೊಡುವುದು ಬೇಡ, ವಜಾಗೊಳಿಸಿ: ರಮೇಶ್ ಕುಮಾರ್

    ಈಶ್ವರಪ್ಪ ರಾಜೀನಾಮೆ ಕೊಡುವುದು ಬೇಡ, ವಜಾಗೊಳಿಸಿ: ರಮೇಶ್ ಕುಮಾರ್

    ಕೋಲಾರ: ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ರಾಜೀನಾಮೆ ನೀಡುವುದು ಬೇಡ, ವಜಾಗೊಳಿಸಿ ಎಂದು ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಗ್ರಹಿಸಿದ್ದಾರೆ.

    ಕೋಲಾರ ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಅನ್ನೋದು ಗೌರಯುತವಾದ ಪದ, ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಕೂಡ ಈ ದೇಶದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ರೈಲ್ವೆ ಅಪಘಾತವಾದಾಗ ಅಷ್ಟು ಜನ ಮೃತಪಟ್ಟಿದ್ದರಿಂದ ನೈತಿಕಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು ಎಂದರು. ಇದನ್ನೂ ಓದಿ: ಆಧಾರ್ ಕಾರ್ಡ್ ಇರೋರೆಲ್ಲ ಭಾರತೀಯರು: ವಚನಾನಂದ ಶ್ರೀ

    ಯಶೋದಮ್ಮ ದಾಸಪ್ಪನವರು ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿ ರಾಜೀನಾಮೆ ಕೊಟ್ಟಿದ್ದರು. ಅಷ್ಟು ಗೌರವಯುತವಾದ ಪದವನ್ನ ಇವರಿಗೆ ಬಳಸುವುದು ಬೇಡ. ಇವರು ರಾಜೀನಾಮೆ ಅಲ್ಲ, ಡಿಸ್ಮಿಸ್ ಆಗಬೇಕು ಎಂದು ಆಗ್ರಹಿಸಿದರು. ಈಶ್ವರಪ್ಪ ರಾಜೀನಾಮೆ ಕುರಿತು ರಾಜ್ಯಪಾಲರನ್ನು ಭೇಟಿ ಮಾಡಲಾಗಿದೆ. ಅದನ್ನ ಬಿಡಿ ಬಿಡಿಯಾಗಿ ಹೇಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

    ದೇಶದಲ್ಲಿ ಕೋಮು ಗಲಭೆ ಸೃಷ್ಟಿಗೆ ನಾವು ಜೀವಂತವಿರುವ ವರೆಗೂ ಅವಕಾಶವಿಲ್ಲ. ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಗೆ ನಾವು ಬಿಡುವುದಿಲ್ಲ. ನಾವು ಕಳೆದು ಹೋದ ಮೇಲೆ ಏನಾಗುತ್ತೋ ಗೊತ್ತಿಲ್ಲ. ಮಧ್ಯೆ ಪ್ರದೇಶ, ಬಿಹಾರ, ರಾಜ್ಯಗಳಲ್ಲಿ ಸಾಮರಸ್ಯದಿಂದ ಬದುಕುತ್ತಿದ್ದಾರೆ ಎಂದರು. ಇದನ್ನೂ ಓದಿ: ಕಲಾವಿದನ ನಾಲಿಗೆಯಿಂದ ಅರಳಿತು ಅಂಬೇಡ್ಕರ್ ಚಿತ್ರ

    ಇನ್ನೂ ಯಾರು ಏನೇ ಪ್ರಯತ್ನ ಮಾಡಿದರು ಅಲ್ಪಸಂಖ್ಯಾತರು, ಧೀನ ದಲಿತರು, ಬಡವರನ್ನ ಗೌರವಯುತವಾಗಿ ಕರೆದುಕೊಂಡು ಹೋಗುತ್ತೇವೆ. ಪ್ರಾಣ ತ್ಯಾಗ ಮಾಡಲು ನಾವು ಮೊದಲು ನಿಂತಿರುತ್ತೇವೆ. ನಾವು ಸತ್ತರೆ ಅವರಿಗೇನಾದರು ತೊಂದರೆಯಾಗಬಹುದು. ನಾವು ಜೀವಂತವಿದ್ದರೆ ಅವರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದರು.

  • Better.com ಬಳಿಕ ಇನ್ನೊಂದು ಕಂಪನಿ- ಝೂಮ್ ಕಾಲ್‌ನಲ್ಲಿ 800 ಉದ್ಯೋಗಿಗಳ ವಜಾ

    Better.com ಬಳಿಕ ಇನ್ನೊಂದು ಕಂಪನಿ- ಝೂಮ್ ಕಾಲ್‌ನಲ್ಲಿ 800 ಉದ್ಯೋಗಿಗಳ ವಜಾ

    ಲಂಡನ್: ಈ ಹಿಂದೆ ಬೆಟರ್ ಡಾಟ್ ಕಾಂ ಕಂಪನಿಯ ಮುಖ್ಯಸ್ಥ ವಿಶಾಲ್ ಗಾರ್ಗ್ ತನ್ನ 900 ಉದ್ಯೋಗಿಗಳನ್ನು ಝೂಮ್ ವೀಡಿಯೋ ಕಾಲ್ ಮೀಟಿಂಗ್‌ನಲ್ಲಿ ವಜಾಗೊಳಿಸಿ ಭಾರೀ ಸುದ್ದಿಯಾಗಿದ್ದರು. ಇದೀಗ ಇಂತಹುದೇ ಮತ್ತೊಂದು ಘಟನೆ ಬ್ರಿಟಿಷ್ ಮೂಲದ ಕಂಪನಿಯಲ್ಲಿ ನಡೆದಿದೆ.

    ಬ್ರಿಟನ್ ಮೂಲದ ಶಿಪ್ಪಿಂಗ್ ಕಂಪನಿಯೊಂದು ತನ್ನ ಸುಮಾರು 800 ಉದ್ಯೋಗಿಗಳನ್ನು ಆನ್‌ಲೈನ್ ಝೂಮ್ ಕಾಲ್‌ನಲ್ಲಿ ವಜಾಗೊಳಿಸಿದ ಘಟನೆ ನಡೆದಿದೆ. ಬೆಟರ್ ಡಾಟ್ ಕಾಂ ಬಳಿಕ ಝೂಮ್ ಕಾಲ್ ಮುಖಾಂತರ ಉದ್ಯೋಗಿಗಳನ್ನು ವಜಾಗೊಳಿಸಿದ 2 ನೇ ಕಂಪನಿ ಎಂದೇ ಸುದ್ದಿಯಾಗುತ್ತಿದೆ. ಇದೀಗ ಝೂಮ್ ವೀಡಿಯೋ ಕಾಲ್ ಅಪ್ಲಿಕೇಶನ್ ಅನ್ನು ಕಂಪನಿಯಿದ ಉದ್ಯೋಗಿಗಳನ್ನು ವಜಾಗೊಳಿಸಲೆಂದೇ ಬಳಕೆ ಮಾಡಲಾಗುತ್ತಿದೆ ಎಂದು ಹಾಸ್ಯಾಸ್ಪದವಾಗಿ ಹೇಳಲಾಗುತ್ತಿದೆ. ಇದನ್ನೂ ಓದಿ: ಗುಜರಾತ್ ಫೈಲ್ಸ್ ಚಿತ್ರಕ್ಕಾಗಿ ಪ್ರಧಾನಿ ಮೋದಿಗೆ ಸವಾಲು ಹಾಕಿದ ಬಾಲಿವುಡ್ ನಿರ್ದೇಶಕ

    ಬ್ರಿಟನ್ ಮೂಲದ ಪಿ ಆಂಡ್ ಒ ಹೆಸರಿನ ಶಿಪ್ಪಿಂಗ್ ಕಂಪನಿ ಮಾರ್ಚ್ 17 ರಂದು ತನ್ನ 800 ಉದ್ಯೋಗಿಗಳನ್ನು ಝೂಮ್ ಕರೆ ಮೂಲಕ ವಜಾ ಗೊಳಿಸಿದೆ. ಕಂಪನಿಯ ಅಧಿಕಾರಿಯೊಬ್ಬರು ಕೇವಲ 3 ನಿಮಿಷಗಳಲ್ಲಿ ಝೂಮ್ ಕರೆಯಲ್ಲಿ ಉದ್ಯೋಗಿಗಳೊಂದಿಗೆ ಸಭೆ ನಡೆಸಿ ವಜಾಗೊಳಿಸುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಖಾಲಿ ಸ್ಟ್ರಾಲರ್ಸ್ ಸಾಲಾಗಿಟ್ಟು ಯುದ್ಧದಲ್ಲಿ ಕೊಲ್ಲಲ್ಪಟ್ಟ ಮಕ್ಕಳನ್ನು ಸ್ಮರಿಸಿದ ಉಕ್ರೇನ್

    ಪಿ ಆಂಡ್ ಒ ಕಂಪನಿ ಕಳೆದ 2 ವರ್ಷಗಳಿಂದ ನಷ್ಟ ಅನುಭವಿಸುತ್ತಿರುವುದರಿಂದ ತನ್ನ ಉದ್ಯೋಗಿಗಳನ್ನು ವಜಾ ಗೊಳಿಸುತ್ತಿರುದಾಗಿ ತಿಳಿಸಿದೆ. ಕೆಲವು ತಿಂಗಳ ಹಿಂದೆ ಬೆಟರ್ ಡಾಟ್ ಕಾಂ ಕಂಪನಿಯೂ ತನ್ನ 900 ಉದ್ಯೋಗಿಗಳನ್ನು ಝೂಮ್ ಕರೆಯ ಮೂಲಕ ವಜಾ ಗೊಳಿಸಿತ್ತು. ಬಳಿಕವೂ ನಷ್ಟದಲ್ಲಿದ್ದ ಕಂಪನಿ ಇ-ಮೇಲೆ ಮುಖಾಂತರ 4 ಸಾವಿರ ಉದ್ಯೋಗಿಳನ್ನು ವಜಾ ಗೊಳಿಸಿದೆ. ಹೀಗೆ ಕಂಪನಿ ಶೇ.50 ರಷ್ಟು ಉದ್ಯೋಗಿಗನ್ನು ವಜಾ ಗೊಳಿಸಿದೆ.

  • ಜಾಮೀನು ಅರ್ಜಿ ತಿರಸ್ಕೃತ – ರೌಡಿ ನಲಪಾಡ್‍ಗೆ ಜೈಲೇ ಗತಿ

    ಜಾಮೀನು ಅರ್ಜಿ ತಿರಸ್ಕೃತ – ರೌಡಿ ನಲಪಾಡ್‍ಗೆ ಜೈಲೇ ಗತಿ

    ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿ ನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಗರದ 63ನೇ ನ್ಯಾಯಾಲಯದ ತಿರಸ್ಕರಿಸಿದೆ.

    ಪ್ರಕರಣದಲ್ಲಿ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆ ಆಗಿರುವುದರಿಂದ ಆರೋಪಿ ನಲಪಾಡ್ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ವಿದ್ವತ್ ಪರ ವಕೀಲರು ಮಂಡಿಸಿದ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

    ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸರ್ಕಾರಿ ಅಭಿಯೋಜಕ ಶ್ಯಾಮ್ ಸುಂದರ್, ಆರೋಪಿ ವಿರುದ್ಧ ಇದ್ದ ಬಲವಾದ ಸಾಕ್ಷಿಗಳು ಹಾಗೂ ನಲಪಾಡ್ ತಂದೆ ಶಾಸಕರಾಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ನ್ಯಾಯಾಲಯ ಅರ್ಜಿ ತಿರಸ್ಕರಿಸಿದೆ. ಈ ಹಿಂದೆ ಇದೇ ಕೋರ್ಟ್‍ನಲ್ಲಿ ಜಾಮೀನು ನಿರಾಕರಿಸಲಾಗಿತ್ತು. ಆರೋಪಿ ವಿರುದ್ಧ ವಿಡಿಯೋ ಹಾಗೂ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯೂ ಅರ್ಜಿ ತಿರಸ್ಕೃತಗೊಳ್ಳಲು ಕಾರಣ ಎಂದು ತಿಳಿಸಿದರು.

    ಸಮಾಜದಲ್ಲಿ ನಲಪಾಡ್ ಪ್ರಕರಣ ಸಾಕಷ್ಟು ಭಯವನ್ನು ಉಂಟು ಮಾಡಿದೆ. ಅಲ್ಲದೇ ಈ ಹಿಂದೆಯೂ ಸಹ ಇಂತಹ ಹಲವು ಪ್ರಕರಣಗಳು ನಡೆದಿದ್ದು ಪದೇ ಪದೇ ಮರುಕಳಿಸುತ್ತಿದೆ ಎಂಬ ವಾದವನ್ನು ಮಂಡಿಸಲಾಗಿದೆ ಎಂದು ತಿಳಿಸಿದರು.

    ವಿದ್ವತ್- ಹಲ್ಲೆಗೊಳಗಾದ ಯುವಕ.

    ಏನಿದು ಪ್ರಕರಣ?
    ಘಟನೆ ನಡೆದ ನಗರದ ಫರ್ಜಿ ಕೆಫೆ ಯಲ್ಲಿ ಫೆಬ್ರವರಿ 17ರ ರಾತ್ರಿ ನಡೆದ ಪಾರ್ಟಿ ಆಯೋಜನೆಗೊಂಡಿತ್ತು. ನಗರದ ಶ್ರೀಮಂತ ಮನೆತನದ ಯುವಕ, ಯುವತಿಯರು ಪಾಲ್ಗೊಂಡಿದ್ದ ಕೆಫೆಯಲ್ಲಿ ಗಾಯಗೊಂಡಿದ್ದ ವಿದ್ವತ್ ಕಾಲು ಚಾಚಿ ಕುಳಿತ್ತಿದ್ದರು. ಇದನ್ನು ಕಂಡ ನಲಪಾಡ್ ನನ್ನ ಮುಂದೆ ದರ್ಪದಿಂದ ಕಾಲು ಚಾಚಿಕೊಂಡು ಕೂತಿದ್ದೀಯಾ ಎಂದು ವಿದ್ವತ್ ಮೇಲೆ ಜಗಳಕ್ಕೆ ನಿಂತಿದ್ದಾನೆ. ಅನಂತರ ಕ್ಷಮೆ ಕೇಳುವಂತೆ ಹೇಳಿದ್ದಕ್ಕೆ ವಿದ್ವತ್ ನಿರಾಕರಿಸಿದ್ದಾರೆ. ಇದರಿದ ರೊಚ್ಚಿಗೆದ್ದ ನಲಪಾಡ್ ಮೊದಲು ವಿದ್ವತ್ ಹೊಟ್ಟೆ ಮತ್ತು ಮುಖದ ಭಾಗಕ್ಕೆ ಏಟು ಹೊಡೆದಿದ್ದಾನೆ. ನಲಪಾಡ್ ಹೊಡೆದ ಬಳಿಕ ಆತನ ಗ್ಯಾಂಗ್ ನವರು ವಿದ್ವತ್ ಮೇಲೆ ಮನಸೋ ಇಚ್ಚೇ ಹಲ್ಲೆ ನಡೆಸಿದ್ದಾರೆ. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು.

    ನಲಪಾಡ್ ಮೇಲೆ ಯಾವೆಲ್ಲ ಕೇಸ್ ಹಾಕಲಾಗಿದೆ?
    ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಜಾಮೀನು ರಹಿತ ಕೇಸಾಗಿದ್ದು ಉಳಿದ ಸೆಕ್ಷನ್ ಗಳಾದ 341(ಅಕ್ರಮ ಬಂಧನ), 504(ಅವ್ಯಾಚ್ಯ ಶಬ್ಧಗಳಿಂದ ನಿಂದನೆ), 143, 144- 146, 147, 149 (ಅಕ್ರಮ ಗುಂಪುಗಾರಿಕೆ), 326(ಗಂಭೀರ ಗಾಯ), 506 ಬಿ (ಪ್ರಾಣಬೆದರಿಕೆ) ಜಾಮೀನು ಸಿಗುವ ಕೇಸುಗಳಾಗಿವೆ.