Tag: Disha Salian

  • ಇಂದು ಸುಶಾಂತ್ ಸಿಂಗ್ ರಜಪೂತ್ ಸಾವಿನ ಸೀಕ್ರೆಟ್ ಔಟ್?

    ಇಂದು ಸುಶಾಂತ್ ಸಿಂಗ್ ರಜಪೂತ್ ಸಾವಿನ ಸೀಕ್ರೆಟ್ ಔಟ್?

    -ಆತ್ಮಹತ್ಯೆಯೋ? ಕೊಲೆಯೋ?

    ಮುಂಬೈ: ನಿಗೂಢವಾಗಿ ಉಳಿದಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಅಸಲಿ ಸತ್ಯ ಇಂದು ಬಹಿರಂಗಗೊಳ್ಳಲಿದೆ. ವೈದ್ಯಕೀಯ ಪರೀಕ್ಷೆ ನಡೆಸಿರುವ ಏಮ್ಸ್ ವೈದ್ಯರ ತಂಡ ಇಂದು ಮಹತ್ವದ ವರದಿ ನೀಡಲಿದ್ದು, ಸುಶಾಂತ್ ಸಾವಿನ ಸೀಕ್ರೆಟ್ ಏನು ಅನ್ನೋದು ಗೊತ್ತಾಗಲಿದೆ.

    ಬಾಲಿವುಡ್ ನಟ ಸುಶಾಂತ್ ಸಿಂಗ್ ನಿಗೂಢ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ನಿಗೂಢ ಸಾವಿನ ತನಿಖೆ ಆರಂಭದ ಬಳಿಕ ಡ್ರಗ್ಸ್ ಮಾಫಿಯಾ, ಅಕ್ರಮ ಹಣ ವರ್ಗಾವಣೆ ಹೀಗೆ ಅನೇಕ ಆಯಾಮಗಳಲ್ಲಿ ಕೇಸ್ ವಿಸ್ತರಿಸುತ್ತಾ ಹೋಗುತ್ತಿದೆ. ಇದರ ಕಾವು ರಾಜ್ಯಕ್ಕೂ ತಟ್ಟಿದೆ. ಸುಶಾಂತ್ ಸಿಂಗ್ ಸಾವಿಗೆ ಆತ್ಮಹತ್ಯೆ ಕಾರಣವೋ ಅಥವಾ ಅವರನ್ನು ಕೊಲೆ ಮಾಡಲಾಗಿದೆಯೇ ಎನ್ನುವ ಬಗ್ಗೆ ಇಂದು ಸ್ಪಷ್ಟ ಮಾಹಿತಿ ತಿಳಿಯಲಿದೆ. ಸುಶಾಂತ್ ಸಿಂಗ್ ನಿಗೂಢ ಸಾವು ಕುರಿತು ಎಲ್ಲ ಆಯಾಮಗಳಿಂದಲೂ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿರುವ ದೆಹಲಿಯ ಏಮ್ಸ್ ಆಸ್ಪತ್ರೆ ತಜ್ಞರು, ಬಾಲಿವುಡ್ ನಟನ ಸಾವಿನ ಹಿಂದಿನ ಕಾರಣವನ್ನು ಸ್ಪಷ್ಟವಾಗಿ ತಿಳಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಕೊನೆ ಇನ್‍ಸ್ಟಾ ಪೋಸ್ಟ್ ನಲ್ಲಿ ಅಮ್ಮನ ಬಗ್ಗೆ ಭಾವುಕ ಮಾತು-ಕಣ್ಣೀರು ತರಿಸುತ್ತೆ ಅಮ್ಮ-ಮಗನ ಕಪ್ಪು ಬಿಳುಪು ಫೋಟೋ

    ಹಿರಿಯ ವೈದ್ಯ ಡಾ.ಸುಧೀರ್ ಗುಪ್ತ ನೇತೃತ್ವದ ಏಮ್ಸ್ ವೈದ್ಯರ ತಂಡ ಇಂದು ಸಭೆ ಸೇರಲಿದ್ದು, ಸುಶಾಂತ್ ಸಿಂಗ್ ನಿಗೂಢ ಸಾವು ಪ್ರಕರಣದಲ್ಲಿ ಈವರೆಗೆ ನಡೆಸಲಾದ ಮರಣೋತ್ತರ ಪರೀಕ್ಷೆ ಸೇರಿದಂತೆ ವಿವಿಧ ವೈದ್ಯಕೀಯ ಪರೀಕ್ಷೆಗಳ ವರದಿಗಳನ್ನು ಪರಿಶೀಲಿಸಿ ಈ ಬಗ್ಗೆ ಅಂತಿಮ ಅಭಿಪ್ರಾಯ ಪ್ರಕಟಿಸಲಿದ್ದಾರೆ. ಈ ವರದಿ ಇಡೀ ಇಡೀ ತನಿಖೆ ದಿಕ್ಕನ್ನೇ ಬದಲಿಸುವ ಸಾಧ್ಯತೆಗಳಿವೆ.  ಇದನ್ನೂ ಓದಿ: ದಿಶಾ ಸಾಲಿಯನ್ ಗೆಳೆಯನಿಗೆ ಭದ್ರತೆ ನೀಡಿ – ಅಮಿತ್ ಶಾಗೆ ನಿತೇಶ್ ರಾಣೆ ಪತ್ರ

    ಈ ನಡುವೆ ಸುಶಾಂತ್ ಸಿಂಗ್ ರಜಪೂತ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ 28 ವರ್ಷದ ದಿಶಾ ಸಾಲಿಯನ್ ಜೂನ್ 8 ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಮುಂಬೈನ ಮಲಾಡ್ ಪ್ರದೇಶಲ್ಲಿರುವ ಮನೆಯ 14ನೇ ಮಹಡಿಯಿಂದ ಕಳೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಐದು ದಿನಗಳ ನಂತರ ಜೂನ್ 14ರಂದು ಸುಶಾಂತ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಎರಡು ಸಾವಿಗೂ ಸಂಬಂಧವಿದೆ ಎನ್ನಲಾಗುತ್ತಿದ್ದು ಈ ಆಯಾಮದಲ್ಲಿ ತನಿಖೆ ನಡೆಸುವಂತೆ ಸಿಬಿಐಗೆ ಒತ್ತಡ ಹೆಚ್ಚಾಗುತ್ತಿದೆ. ಇದನ್ನು ಓದಿ: ಸಾರಾ, ರಿಯಾ, ಸುಶಾಂತ್ ಸೇರಿ ತೋಟದ ಮನೆಯಲ್ಲಿ ಪಾರ್ಟಿ ಮಾಡ್ತಿದ್ರು: ಮ್ಯಾನೇಜರ್

    ಸದ್ಯ ಪ್ರಕರಣದಲ್ಲಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಜೈಲು ಸೇರಿದ್ದು ಮಂಗಳವಾರ ಕೋರ್ಟ್ ಜಾಮೀನು ಅರ್ಜಿ ವಿಚಾರಣೆ ನಡೆಸಲಿದೆ. ಏಮ್ಸ್ ಆಸ್ಪತ್ರೆ ವೈದ್ಯರ ವರದಿ ಈ ಜಾಮೀನು ಅರ್ಜಿ ಮೇಲೂ ಪ್ರಭಾಯ ಬೀರಬಹುದು. ಆದರೆ ಸುಶಾಂತ್ ಸಾವು ಪ್ರಕರಣದಲ್ಲಿ ಡಗ್ಸ್ ಜಾಲದ ನಂಟು ಕೇಳಿ ಬಂದ ನಂತರ ತನಿಖೆಯ ಆಳ ಅಗೆದಷ್ಟು ಹೊಸ ಸಂಗತಿಗಳು ಬೆಳಕಿಗೆ ಬರುತ್ತಿದ್ದು ಮುಂದೆ ಮತ್ತಷ್ಟು ಆಯಾಮಗಳಲ್ಲಿ ಮಾಹಿತಿ ಹೊರ ಬರಲಿದೆ.

  • ದಿಶಾ ಸಾಲಿಯನ್ ಗೆಳೆಯನಿಗೆ ಭದ್ರತೆ ನೀಡಿ – ಅಮಿತ್ ಶಾಗೆ ನಿತೇಶ್ ರಾಣೆ ಪತ್ರ

    ದಿಶಾ ಸಾಲಿಯನ್ ಗೆಳೆಯನಿಗೆ ಭದ್ರತೆ ನೀಡಿ – ಅಮಿತ್ ಶಾಗೆ ನಿತೇಶ್ ರಾಣೆ ಪತ್ರ

    – ದಿಶಾ, ಸುಶಾಂತ್ ಸಾವಿಗೂ ಲಿಂಕ್ ಇದೆ
    – ದೊಡ್ಡ ವ್ಯಕ್ತಿಗಳಿಂದ ಆತನ ಜೀವಕ್ಕೆ ಅಪಾಯವಿದೆ

    ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಪ್ರಿಯಕರನಿಗೆ ಭದ್ರತೆ ನೀಡಬೇಕೆಂದು ಮುಂಬೈ ಬಿಜೆಪಿ ಶಾಸಕ ನಿತೇಶ್ ರಾಣೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ 28 ವರ್ಷದ ದಿಶಾ ಸಾಲಿಯನ್ ಕಳೆದ ಜೂನ್ 8 ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಮುಂಬೈನ ಮಲಾಡ್ ಪ್ರದೇಶಲ್ಲಿರುವ ಮನೆಯ 14ನೇ ಮಹಡಿಯಿಂದ ಕಳೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಐದು ದಿನಗಳ ನಂತರ ಜೂನ್ 14ರಂದು ಸುಶಾಂತ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಎರಡು ಸಾವಿಗೂ ಸಂಬಂಧವಿದೆ ಎನ್ನಲಾಗಿದೆ.

    ಈಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ ಎಂಎಲ್‍ಎ ನಿತೇಶ್ ರಾಣೆ, ದಿಶಾ ಸಾವನ್ನಪ್ಪಿದ ದಿನ ಅವಳ ಗೆಳೆಯ ರೋಹನ್ ರೈ ಆಕೆಯ ಜೊತೆಯಲ್ಲಿ ಇದ್ದು, ಆತನಿಗೆ ಕೆಲ ಸೂಕ್ಷ್ಮ ವಿಚಾರಗಳು ಗೊತ್ತಿದೆ. ಆದರೆ ಆತ ಯಾವುದೋ ಪ್ರಭಾವಿ ವ್ಯಕ್ತಿಗಳಿಗೆ ಭಯಪಟ್ಟು ಯಾವ ವಿಚಾರವನ್ನು ಹೊರಗೆ ಹೇಳುತ್ತಿಲ್ಲ. ಆತನಿಗೆ ಭರವಸೆ ಮತ್ತು ಭದ್ರತೆ ಬೇಕಿದೆ. ಹೀಗಾಗಿ ಅವನಿಗೆ ಭದ್ರತೆ ನೀಡಿ ಎಂದು ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

    ದಿಶಾ ಸಾಲಿಯನ್ ಸಾವಿಗೂ ಮತ್ತು ಸುಶಾಂತ್ ಸಿಂಗ್ ಸಾವಿಗೂ ಲಿಂಕ್ ಇದೆ. ಇದರಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಕೈವಾಡವಿದೆ. ಹೀಗಾಗಿಯೇ ರೋಹನ್ ಮುಂಬೈ ಬಿಟ್ಟು ಹೋಗಿದ್ದಾನೆ. ಆತನನ್ನು ಯಾರೋ ಬಲವಂತವಾಗಿ ಮುಂಬೈ ಬಿಟ್ಟು ಹೋಗುವಂತೆ ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿರುವಾಗ ಆತ ಮುಂಬೈಗೆ ಬರಲು ಹೆದರುತ್ತಿದ್ದಾನೆ ಎಂದು ನಾನು ಭಾವಿಸುತ್ತೇನೆ. ಜೊತೆಗೆ ಇದರಲ್ಲಿ ಪ್ರಭಾವಶಾಲಿ ಜನರ ಒತ್ತಡವು ಇದೆ ಎಂದು ರಾಣೆ ಆರೋಪ ಮಾಡಿದ್ದಾರೆ.

    ದಿಶಾ ಸಾಲಿಯನ್ ಪ್ರಕರಣದಲ್ಲಿ ಮುಂಬೈ ಪೊಲೀಸರು ನಾಟಕವಾಡುತ್ತಿದ್ದಾರೆ. ಆಕೆ ಪ್ರಕರಣದಲ್ಲಿ ಅತೀ ಮುಖ್ಯ ಸಾಕ್ಷಿಯಾದ ರೋಹನ್ ಅವರನ್ನು ಪೊಲೀಸರು ತನಿಖೆ ಮಾಡಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಸುಶಾಂತ್ ಕೇಸ್ ತನಿಖೆ ಮಾಡುತ್ತಿರುವ ಸಿಬಿಐ ಕೂಡ ರೋಹನ್ ಹೇಳಿಕೆಯನ್ನು ಪಡೆಯಬಹುದು. ಈ ಎರಡು ಪ್ರಕರಣಗಳಿಗೆ ಲಿಂಕ್ ಇದೆ. ಹೀಗಾಗಿ ಆತನಿಗೆ ಭದ್ರತೆ ಕೊಟ್ಟು ವಿಚಾರಣೆ ಮಾಡಬೇಕು. ಈ ವಿಚಾರದಲ್ಲಿ ನಾನು ಕೂಡ ಸಿಬಿಐಗೆ ಹೇಳಿಕೆ ನೀಡಲು ಸಿದ್ಧವಿದ್ದೇನೆ ಎಂದು ರಾಣೆ ಪತ್ರ ಬರೆದಿದ್ದಾರೆ. ಇದನ್ನು ಓದಿ: ಸಾರಾ, ರಿಯಾ, ಸುಶಾಂತ್ ಸೇರಿ ತೋಟದ ಮನೆಯಲ್ಲಿ ಪಾರ್ಟಿ ಮಾಡ್ತಿದ್ರು: ಮ್ಯಾನೇಜರ್

    ಮೊದಲಿಗೆ ಸುಶಾಂತ್ ಜೊತೆ ಕೆಲಸ ಮಾಡುತ್ತಿದ್ದ ದಿಶಾ ಸಾಲಿಯನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ನಂತರ ಸುಶಾಂತ್ ಕೂಡ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದರು. ಹೀಗಾಗಿ ಈ ಪ್ರಕರಣಗಳು ಹಲವಾರು ತಿರುವುಗಳನ್ನು ಪಡೆದುಕೊಂಡಿವೆ. ಸುಶಾಂತ್ ಅನ್ನು ಕೊಲೆ ಮಾಡಲಾಗಿದೆ ಎಂದು ಕೆಲವರ ಆರೋಪಿಸಿದ್ದಾರೆ. ಇದರ ಮಧ್ಯೆ ಡ್ರಗ್ ಕೇಸ್ ಕೂಡ ಈ ಪ್ರಕರಣಕ್ಕೆ ತಳುಕು ಹಾಕಿಕೊಂಡಿದೆ. ಈ ಪ್ರಕರಣದಲ್ಲಿ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಅರೆಸ್ಟ್ ಕೂಡ ಆಗಿದ್ದಾರೆ. ಇದನ್ನೂ ಓದಿ: ಜಾಮೀನು ಅರ್ಜಿ ವಜಾ – ರಿಯಾ ಚಕ್ರವರ್ತಿಗೆ ಜೈಲೇ ಗತಿ

    ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಂಗನಾ ರಣಾವತ್, ಬಾಲಿವುಡ್ ಮತ್ತು ಮಹಾರಾಷ್ಟ್ರ ಸರ್ಕಾರಗಳ ಮಧ್ಯೆ ಜಟಾಪಟಿ ಮುಂದುವರೆದಿದೆ. ಜೊತೆಗೆ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಹಾರದಲ್ಲಿ ಬಿಜೆಪಿ ಪಕ್ಷ ಸುಶಾಂತ್ ಅವರ ಹೆಸರನ್ನು ತೆಗೆದುಕೊಂಡು ರಾಜಕೀಯ ಮಾಡಿದರೆ, ಇತ್ತ ಪಶ್ಚಿಮ ಬಂಗಾಳದಲ್ಲಿ ರಿಯಾ ಚಕ್ರವರ್ತಿಯನ್ನು ಬೆಂಬಲಿಸಿ ಕಾಂಗ್ರೆಸ್ ಪ್ರತಿಭಟನೆ ಮಾಡಿದೆ.

  • ಪೊಲೀಸರಿಗೆ ದೂರು ನೀಡಿದ ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ತಂದೆ

    ಪೊಲೀಸರಿಗೆ ದೂರು ನೀಡಿದ ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ತಂದೆ

    ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಅವರ ತಂದೆ ಮಗಳ ಸಾವಿನ ಬಗ್ಗೆ ಸುಳ್ಳು ವದಂತಿ ಹಬ್ಬಿಸುತ್ತಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

    ಜೂನ್ 14ರಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಅವರು ಜೂನ್ 8ರಂದು ಮುಂಬೈನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮುಂಬೈನ ಮಲಾಡ್‍ನಲ್ಲಿರುವ ತನ್ನ ಅಪಾರ್ಟ್‍ಮೆಂಟ್‍ನ 14ನೇ ಮಹಡಿಯಿಂದ ಹಾರಿ ದಿಶಾ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು.

    ಮಗಳ ಆತ್ಮಹತ್ಯೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ್ದ ದಿಶಾ ಅವರ ಕುಟುಂಬಸ್ಥರು, ತನ್ನ ಮಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸದಂತೆ ಮನವಿ ಮಾಡಿಕೊಂಡಿದ್ದರು. ಆದರೂ ಕೆಲವರು ಆಕೆಯ ಸಾವಿನ ವಿಚಾರವಾಗಿ ವದಂತಿಯನ್ನು ಹಬ್ಬಿಸಿದ್ದರು. ದಿಶಾ ಸಾವನ್ನಪ್ಪಿದಾಗ ಆಕೆ ದೇಹವು ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜೊತೆಗೆ ಆಕೆಯನ್ನು ರೇಪ್ ಮಾಡಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

    ಈ ಸುಳ್ಳು ಸುದ್ದಿಯಿಂದ ಬೇಸರಗೊಂಡ ದಿಶಾ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಈ ಸುಳ್ಳು ಸುದ್ದಿಯನ್ನು ತಳ್ಳಿ ಹಾಕಿರುವ ಮುಂಬೈ ಪೊಲೀಸರು, ಆಕೆ ಮೃತದೇಹ ಸಿಕ್ಕಾಗ ಅದರ ಮೈಮೇಲೆ ಬಟ್ಟೆಗಳು ಇದ್ದವು. ಜೊತೆಗೆ ಆಕೆ ಮರಣೋತ್ತರ ಪರೀಕ್ಷೆ ನಡೆಸಿದ್ದು, ಅದರಲ್ಲಿ ಯಾವುದೇ ರೇಪ್ ಆಗಿದೆ ಎಂಬ ವರದಿ ಬಂದಿಲ್ಲ. ಆದರೆ ಕೆಲವರು ಬೇಕು ಎಂದೇ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಈ ತಿಂಗಳ ಆರಂಭದಲ್ಲಿ ದಿಶಾ ವಿಚಾರವಾಗಿ ಮಾತನಾಡಿದ್ದ ಬಿಜೆಪಿ ಮುಖಂಡ ನಾರಾಯಣ್ ರಾಣೆ, ದಿಶಾ ಸಾಲಿಯನ್ ಅವರು ಕಟ್ಟಡದ 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ದಿಶಾ ಅವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ಖಾಸಗಿ ಭಾಗಗಳಿಗೆ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ ಎಂದು ಅವರು ಹೇಳಿದ್ದರು. ಜೊತೆಗೆ ಸುಶಾಂತ್ ಮತ್ತು ದಿಶಾ ಪ್ರಕರಣದಲ್ಲಿ ಮುಂಬೈ ಸರ್ಕಾರ ಅಪಾರಾಧಿಗಳನ್ನು ಬಚಾವ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪ ಮಾಡಿದ್ದರು.

  • ಮಾಜಿ ಮ್ಯಾನೇಜರ್ ದಿಶಾ ಸಾವಿನ 4 ದಿನ ಬಳಿಕ ಸುಶಾಂತ್ ಆತ್ಮಹತ್ಯೆ

    ಮಾಜಿ ಮ್ಯಾನೇಜರ್ ದಿಶಾ ಸಾವಿನ 4 ದಿನ ಬಳಿಕ ಸುಶಾಂತ್ ಆತ್ಮಹತ್ಯೆ

    ಮುಂಬೈ: ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವನ್ನಪ್ಪಿದ್ದ ನಾಲ್ಕು ದಿನಗಳ ಬಳಿಕ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮುಂಬೈನ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗುತ್ತಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜೂನ್ 10ರಂದು ದಿಶಾ 14ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಅಂದು ರಾತ್ರಿ ಗೆಳೆಯರ ಜೊತೆ ಪಾರ್ಟಿ ಮಾಡಿದ್ದ ದಿಶಾ 14ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ದಿಶಾ ಗೆಳೆಯನ ಜೊತೆ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು.

    ಇನ್ನು ಖಾಸಗಿ ವಾಹಿನಿಯ ಪವಿತ್ರ ರಿಶ್ತಾ ಧಾರಾವಾಹಿ ಮೂಲಕ ಸುಶಾಂತ್ ಮನೆ ಮಾತಾಗಿದ್ದರು. ಹಂತ ಹಂತವಾಗಿ ಬೆಳವಣಿಗೆ ಹೊಂದಿದ್ದ ಸುಶಾಂತ್, ತಮ್ಮ ಕ್ಯೂಟ್ ಸ್ಮೈಲ್, ಸ್ಟೈಲ್, ಕಟ್ಟುಮಸ್ತಾದ ದೇಹದ ಮೂಲಕ ಗುರುತಿಸಿಕೊಂಡಿದ್ದಾರೆ. ಧೋನಿ ಸಿನ್ಮಾ ಬಳಿಕ ಟಾಪ್ ನಟರಲ್ಲಿ ಒಬ್ಬರಾಗಿ ಸುಶಾಂತ್ ಒಬ್ಬರಾಗಿದ್ದರು.

    ಕೈ ಪೋ ಚೇ, ಶುದ್ಧ ದೇಸಿ ರೊಮ್ಯಾನ್ಸ್, ಪಿಕೆ, ರಾಬ್ತಾ, ವೆಲ್ ಕಮ್ ನ್ಯೂಯಾರ್ಕ್, ಕೇದಾರನಾಥ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸುಶಾಂತ್ ನಟಿಸಿದ್ದರು.

     

  • 14ನೇ ಮಹಡಿಯಿಂದ ಬಿದ್ದು ಸುಶಾಂತ್ ಸಿಂಗ್ ರಜಪೂತ ಮಾಜಿ ಮ್ಯಾನೇಜರ್ ಸಾವು

    14ನೇ ಮಹಡಿಯಿಂದ ಬಿದ್ದು ಸುಶಾಂತ್ ಸಿಂಗ್ ರಜಪೂತ ಮಾಜಿ ಮ್ಯಾನೇಜರ್ ಸಾವು

    ಮುಂಬೈ: 14ನೇ ಮಹಡಿಯಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ದಿಶಾ ಸಲಿಯನ್ ಸಾವನ್ನಪ್ಪಿದ ಯುವತಿ. ಬಾಲಿವುಡ್ ಸೆಲೆಬ್ರಿಟಿಗಳಾದ ಸುಶಾಂತ್ ಸಿಂಗ್ ರಜಪೂತ್, ಭಾರತಿ, ವರುಣ್ ಶರ್ಮಾ ಸೇರಿದಂತೆ ಹಲವರ ಮ್ಯಾನೇಜರ್ ಆಗಿ ದಿಶಾ ಕೆಲಸ ಮಾಡಿಕೊಂಡಿದ್ದರು. ಸೋಮವಾರ ರಾತ್ರಿ ಕಟ್ಟಡ ಮೇಲಿಂದ ಬಿದ್ದಿರೋ ದಿಶಾರನ್ನು ಕೂಡಲೇ ಸ್ಥಳೀಯರು ಬೋರಿವಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರು ದಿಶಾ ಸಾವನ್ನಪ್ಪಿರೋದನ್ನ ಖಚಿತ ಪಡಿಸಿದ್ದಾರೆ.

    ದಿಶಾ ತನ್ನ ಗೆಳೆಯನ ಜೊತೆ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು ಎಂದು ವರದಿಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಿಶಾ ಪೋಷಕರು, ನೆರೆಹೊರೆಯವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಜೊತೆಯಲ್ಲಿ ವಾಸವಾಗಿದ್ದ ಗೆಳೆಯನ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕಿದೆ.

    ಈ ಕುರಿತು ಮಾಹಿತಿ ನೀಡಿರುವ ಮುಂಬೈ ಪೊಲೀಸರು, ಘಟನೆಗೂ ಮುನ್ನ ದಿಶಾ ಗೆಳೆಯ ಸೇರಿದಂತೆ ನಾಲ್ಕೈದು ಜನರ ಜೊತೆ ರಾತ್ರಿಯ ಊಟ ಮಾಡಿದ್ದರು. ಊಟದ ನಂತರ ಏನಾಯ್ತು ಎಂಬುದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಸದ್ಯ ಬಂಟಿ ಸಜ್ದೇಹ ಮ್ಯಾನೇಜಮೆಂಟ್ ಕಂಪನಿಯಲ್ಲಿ ದಿಶಾ ಕೆಲಸ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.

    https://www.instagram.com/p/CBNwTQrB2_9/

    ದಿಶಾ ಸಾವಿಗೆ ಸಂತಾಪ ಸೂಚಿಸಿರುವ ನಟ ವರುಣ್ ಶರ್ಮಾ, ಇನ್‍ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡು ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ಒಳ್ಳೆಯ ಗೆಳೆತಿಯನ್ನು ಇಂದು ನಾನು ಕಳೆದುಕೊಂಡಿದ್ದೇನೆ. ಈಗಲೂ ದಿಶಾ ಸಾವನ್ನು ನಂಬಲು ಆಗ್ತಿಲ್ಲ ಎಂದು ಸಂತಾಪ ಸೂಚಿಸಿದ್ದಾರೆ.

    https://www.facebook.com/publictv/posts/4369546059729779