Tag: Disha Ramesh

  • ಯುವ ಪ್ರತಿಭೆ ವಿನಯ್- ದಿಶಾ ರಮೇಶ್ ನಟನೆಯ ‘ದಿ’ ಸಿನಿಮಾದ ಸಾಂಗ್‌ ಔಟ್

    ಯುವ ಪ್ರತಿಭೆ ವಿನಯ್- ದಿಶಾ ರಮೇಶ್ ನಟನೆಯ ‘ದಿ’ ಸಿನಿಮಾದ ಸಾಂಗ್‌ ಔಟ್

    ನ್ನಡದಲ್ಲಿ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ವಿಭಿನ್ನ ಬಗೆಯ ಕಥಾಹಂದರ ಸಿನಿಮಾ ಮೂಲಕ ಯುವ ಸಿನಿಮೋತ್ಸಾಹಿಗಳು ಪ್ರೇಕ್ಷಕರ ಎದುರು ಹಾಜರಾಗುತ್ತಿದೆ. ಅದರ ಮುಂದುವರೆದ ಭಾಗವಾಗಿ ತಯಾರಾಗಿರುವ ಸಿನಿಮಾ ದಿ.‌ ಇದನ್ನೂ ಓದಿ:ಬಾಲಿವುಡ್‌ಗೆ ಕಾಲಿಟ್ಟ ಕೀರ್ತಿ ಸುರೇಶ್- ವರುಣ್‌ಗೆ ‘ಮಹಾನಟಿ’ ನಾಯಕಿ

    ‘ದಿ’ ಸಿನಿಮಾ (Dee Film) ಮೂಲಕ ವಿನಯ್ (Vinay) ನಾಯಕನಾಗಿ ಹಾಗೂ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಒಂದಷ್ಟು ವರ್ಷಗಳ ಅನುಭವವಿರುವ ಅವರೀಗ ‘ದಿ’ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೆಜ್ಜೆ ಇಟ್ಟಿದ್ದಾರೆ. ಈ ಚಿತ್ರದ ‘ನಾನು ಮೌನಿ’ ಎಂಬ ಮೆಲೋಡಿ ಹಾಡು ಬಿಡುಗಡೆಯಾಗಿದೆ. ಕವಿರಾಜ್ ಸಾಹಿತ್ಯದ ಈ ಹಾಡಿಗೆ ಸಾಯಿ ವಿಘ್ನೇಶ್ ಧ್ವನಿಯಾಗಿದ್ದು, ಯುಎಂ ಸ್ಟೀವನ್ ಸತೀಶ್ ಸಂಗೀತ ಒದಗಿಸಿದ್ದಾರೆ. ನಾನು ಮೌನಿ ಅಂತಾ ವಿನಯ್- ದಿಶಾ ರಮೇಶ್ (Disha Ramesh) ಹಾಡಿನಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ:ಯಶ್ ಫ್ಯಾನ್ಸ್ ದುರಂತ ಸಾವಿನ ಬಳಿಕ ದುನಿಯಾ ವಿಜಯ್ ವಿಶೇಷ ಮನವಿ

    ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ದಿ ಚಿತ್ರ ಡಾಲರ್ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ. ಹರಿಣಿ, ಬಾಲ ರಾಜ್ವಾಡಿ, ನಾಗೇಂದ್ರ ಅರಸ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರು, ಶರಣ್, ಸುರೇಶ್ ಬಾಬು, ಗಣೇಶ್, ಕಲಾರತಿ ಮಹದೇವ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.

     

    View this post on Instagram

     

    A post shared by Disha Ramesh (@disha.ramesh)

    ‘ವಿಡಿಕೆ’ ಸಿನಿಮಾಸ್ ಬ್ಯಾನರ್ ನಡಿ ‘ವಿಡಿಕೆ’ ಗ್ರೂಪ್ ‘ದಿ’ ಚಿತ್ರವನ್ನು ನಿರ್ಮಾಣ ಮಾಡಿದೆ. ತುಮಕೂರು, ಮೈಸೂರು, ಮೂಡುಗೆರೆ, ಚಿಕ್ಕಮಗಳೂರು, ಹೊನ್ನಾವರ, ಉತ್ತರ ಕನ್ನಡ, ಬೆಂಗಳೂರು, ಕೇರಳದಲ್ಲಿ ‘ದಿ’ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಆಲನ್ ಭರತ್ ಕ್ಯಾಮೆರಾ ವರ್ಕ್‌ ಮಾಡಿದ್ದು, ಯುಎಂ ಸ್ಟೀವನ್ ಸತೀಶ್ ಅವರು ಸಂಗೀತ ನಿರ್ದೇಶನ, ಕವಿರಾಜ್ – ವಿನಯ್ ಸಾಹಿತ್ಯ ಬರೆದಿದ್ದಾರೆ. ಚಿತ್ರಕ್ಕೆ ಸಿದ್ದಾರ್ಥ ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ ಮಾಡಿದ್ದಾರೆ.

    ‘ದಿ’ ಸಿನಿಮಾಗೆ ವಿನಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಿಂಪಲ್ ಸುನಿ (Simple Suni) ಈ ಹಿಂದೆ ಟೈಟಲ್ ರಿವೀಲ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದರು. ಸದ್ಯದಲ್ಲೇ ರಿಲೀಸ್‌ ಬಗ್ಗೆ ಚಿತ್ರತಂಡ ಅಪ್‌ಡೇಟ್‌ ನೀಡಲಿದೆ.

  • Weekend With Ramesh ಶೋನಲ್ಲಿ ಪ್ರೇಮ ಪ್ರಸಂಗ ಬಿಚ್ಚಿಟ್ಟ ಮಂಡ್ಯ ರಮೇಶ್

    Weekend With Ramesh ಶೋನಲ್ಲಿ ಪ್ರೇಮ ಪ್ರಸಂಗ ಬಿಚ್ಚಿಟ್ಟ ಮಂಡ್ಯ ರಮೇಶ್

    ಕಿರುತೆರೆಯ ಜನಪ್ರಿಯ ಶೋ Weekend With Ramesh-5 ಕಾರ್ಯಕ್ರಮದಲ್ಲಿ ಖ್ಯಾತ ನಟ ಅವಿನಾಶ್ ನಂತರ ಮಂಡ್ಯ ರಮೇಶ್ (Mandya Ramesh) ಅವರು ಸಾಧಕರ ಸೀಟ್ ಅನ್ನ ಅಲಂಕರಿಸಿದ್ದಾರೆ. ನಟ ರಮೇಶ್ ಅರವಿಂದ್ (Ramesh Aravind) ಜೊತೆ ತಮ್ಮ ಲವ್ ಸ್ಟೋರಿ (Love Story), ಮದುವೆ (Wedding), ಜರ್ಮನಿಯ ನಡೆದ ಘಟನೆ ಬಗ್ಗೆ ಮಂಡ್ಯ ರಮೇಶ್ ಹಂಚಿಕೊಂಡಿದ್ದಾರೆ.

    ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಈಗಾಗಲೇ ರಮ್ಯಾ, ಪ್ರಭುದೇವ, ಡಾಲಿ, ದತ್ತಣ್ಣ ಹೀಗೆ ಹಲವರು ಭಾಗವಹಿಸಿ ತಮ್ಮ ಬದುಕಿನ ಸ್ಪೂರ್ತಿದಾಯಕ ಕಥೆಗಳನ್ನ ಹಂಚಿಕೊಂಡಿದ್ದಾರೆ. ಇದೀಗ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಸರದಿ. ಪತ್ನಿ ಸರೋಜಾ (Saroja) ಅವರನ್ನ ಮೊದಲು ಭೇಟಿಯಾಗಿದ್ದು ಎಲ್ಲಿ? ಲವ್ ಕಹಾನಿ ಶುರುವಾಗಿದ್ದು ಹೇಗೆ? ಮಗಳು ದಿಶಾ ಬಂದ ಮೇಲೆ ಬದುಕಿನಲ್ಲಿ ಎದುರಿಸಿದ ಸವಾಲಿನ ಬಗ್ಗೆ ಮಂಡ್ಯ ರಮೇಶ್ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಐರೆನ್ ಲೆಗ್ ಎಂದು ಟೀಕಿಸಿದವರಿಗೆ ಉತ್ತರ ಕೊಟ್ಟ ಶ್ರುತಿ ಹಾಸನ್

    ಮಂಡ್ಯ ರಮೇಶ್- ಸರೋಜಾ ಅವರು ಮೊದಲು ನೀನಾಸಂನಲ್ಲಿ ಭೇಟಿ ಮಾಡಿದ್ದರು. ಸರೋಜ ಅವರು ಬಿಂದಾಸ್ ಆಗಿ ಅವರ ಪಾಡಿಗೆ ಅವರು ಇರುತ್ತಿದ್ದರು. ಒಮ್ಮೆ ಸರೋಜ ಅವರು ಏನೋ ಒಂದು ಸಣ್ಣ ತಪ್ಪನ್ನು ಮಾಡಿದ್ದರು. ಇದು ಡಿಸಿಪ್ಲಿನ್ ಕಮಿಟಿ ಲೀಡರ್ ಆಗಿದ್ದ ಮಂಡ್ಯ ರಮೇಶ್ ಗಮನಕ್ಕೆ ಬಂತು. ನೀನಾಸಂನಲ್ಲಿ ಸರೋಜ ಅವರಿಗೆ ಶಿಸ್ತಿನ ಪಾಠ ಮಾಡಿದ್ದರು. ಕೆಲದಿನಗಳ ಬಳಿಕ ಮಂಡ್ಯ ರಮೇಶ್ ಅವರಿಗೆ ಅಪಘಾತವಾಗಿತ್ತು. ಆಸ್ಪತ್ರೆಯಲ್ಲಿ ರಮೇಶ್ ಅವರಿಗೆ ಒಂದು ವಾರಗಳ ಕಾಲ ಮೂರ್ಛೆ ತಪ್ಪೋದು, ಎಚ್ಚರ ಆಗೋದು ಆಗುತ್ತಿತ್ತಂತೆ. ಅಷ್ಟೂ ದಿನ ರಮೇಶ್ ಅವರನ್ನು ಸರೋಜಾ ನೋಡಿಕೊಳ್ಳುತ್ತಿದ್ದರು. ಅದನ್ನು ನೋಡಿ ರಮೇಶ್ ಅವರ ಅಕ್ಕ ನಾವಿದ್ದಾಗ ಇವಳ್ಯಾಕೆ ನಿನ್ನ ಟ್ರೀಟ್‌ಮೆಂಟ್ ಮಾಡ್ತಿದ್ದಾಳೆ, ಏನು ವಿಶೇಷ ಅಂತಾ ರಮೇಶ್‌ಗೆ ಪ್ರಶ್ನೆ ಕೇಳಲು ಆರಂಭಿಸಿದರು. ಮನಸ್ಸಿನಲ್ಲಿ ಏನೂ ಇಲ್ಲದಿದ್ದರೂ ಕೂಡ ಎಷ್ಟೋ ಪ್ರೇಮ ಪ್ರಸಂಗಗಳು ಬೇರೆಯವರು ಹೇಳಿ ಹೇಳಿ ಹುಟ್ಟತ್ತಂತೆ ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.

    ಅಪಘಾತ ಆದ ಬಳಿಕ ಪ್ರೇಮದ ಗಳಿಗೆಗಳು ಹುಟ್ಟಲು ಆರಂಭಿಸಿದವಂತೆ. ಕೊನೆಗೂ ಇವರಿಬ್ಬರು ಮದುವೆಯಾದರು. ಮಗು ಹುಟ್ಟಿತು. ಇಬ್ಬರು ಕಲಾವಿದರು ಜರ್ಮನಿಯಲ್ಲಿ ನಾಟಕವೊಂದರಲ್ಲಿ ನಟಿಸಬೇಕಿತ್ತು. ಆ ವೇಳೆ ಮಗಳು ದಿಶಾ (Disha) ಚಿಕ್ಕವಳು. ಮಗಳನ್ನು ಎತ್ತಿಕೊಂಡು ಗಲೀಜು ಮಾಡಿಕೊಂಡರೆ ಕಾಸ್ಟ್ಯೂಮ್ ಹಾಳಾಗುತ್ತದೆ ಅಂತ ಮುಟ್ಟದೆ ಮಗಳನ್ನು ಸಂತೈಸುತ್ತಿದ್ದರಂತೆ. ಜರ್ಮನಿಯಲ್ಲಿ ನಾಟಕದ ಸಮಯದಲ್ಲಿ ಮಗು ತುಂಬ ಅತ್ತಾಗ ಸರೋಜ ಅವರು ಎದೆಹಾಲು ಕುಡಿಸುತ್ತಿದ್ದರು. ಆಮೇಲೆ ನಾಟಕ ಶುರು ಆಯ್ತು ಅಂತ ಅವರು ಎದೆಯಿಂದ ಮಗುವನ್ನು ಕಿತ್ತಿಟ್ಟು ನಾಟಕ ಮಾಡಲು ಆರಂಭಿಸಿದರು. ಎಲ್ಲರೂ ಯಾಕೆ ಸರೋಜ ಅವರು ಇಷ್ಟು ಬೆವತರು ಅಂತ ಅಂದುಕೊಂಡರು. ಆದರೆ ಎದೆಯಿಂದ ಮಗುವನ್ನು ಕಿತ್ತಿಟ್ಟು ಬಂದಿದ್ದರಿಂದ ಇಡೀ ಮೈ ಹಾಲಾಗಿ ಹೋಗಿತ್ತು ಎಂದು ಮಂಡ್ಯ ರಮೇಶ್ ಅವರು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

  • ‘ಸಿರಿ ಲಂಬೋದರ ವಿವಾಹ’ ಸಿನಿಮಾಗೆ ರಮೇಶ್ ಅರವಿಂದ್ ಸಾಥ್

    ‘ಸಿರಿ ಲಂಬೋದರ ವಿವಾಹ’ ಸಿನಿಮಾಗೆ ರಮೇಶ್ ಅರವಿಂದ್ ಸಾಥ್

    ಸೌರಭ್ ಕುಲಕರ್ಣಿ ನಿರ್ದೇಶನದ “ಸಿರಿ ಲಂಬೋದರ ವಿವಾಹ” (ಎಸ್ ಎಲ್ ವಿ) ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಖ್ಯಾತ ನಟ ರಮೇಶ್ ಅರವಿಂದ್ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈಗ ಚಿತ್ರೀಕರಣ ಪೂರ್ಣವಾಗಿ, ಮೊದಲಪ್ರತಿ ಸಿದ್ದವಾಗಿದೆ. “ಸಿರಿ ಲಂಬೋದರ ವಿವಾಹ” ಕಮರ್ಷಿಯಲ್ ಎಂಟರ್ಟೈನ್ಮೆಂಟ್ ವಿತ್ ಎ ಸಸ್ಪೆನ್ಸ್ ಥ್ರಿಲ್ಲರ್ ಎನ್ನಬಹುದು. ಸಿರಿ ಹಾಗೂ ಲಂಬೋದರ ಈ ಚಿತ್ರದ ನಾಯಕ, ನಾಯಕಿ ಅಲ್ಲ. ಮತ್ತೆ “ಸಿರಿ ಹಾಗೂ ಲಂಬೋದರ” ಯಾರು ಎಂದು ತಿಳಿಯಲು ಚಿತ್ರ ನೋಡಬೇಕು. ರಂಗಭೂಮಿ ಕಲಾವಿದರೇ ಹೆಚ್ಚಾಗಿ ಈತನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಗ ಟೀಸರ್ ಬಿಡುಗಡೆ ಮಾಡಿದ್ದೇವೆ. ಇನ್ನೆರಡು ತಿಂಗಳಲ್ಲಿ ಚಿತ್ರವನ್ನು ನಿಮ್ಮ ಮುಂದೆ ತರುತ್ತೇವೆ.  ಮತ್ತೊಂದು ಖುಷಿಯ ವಿಚಾರವೆಂದರೆ, ಡಿಸೆಂಬರ್ ನಲ್ಲಿ  ಓಮನ್ ಹಾಗೂ ದುಬೈ ದೇಶಗಳಲ್ಲಿ ನಮ್ಮ ಚಿತ್ರದ ಪ್ರೀಮಿಯರ್ ನಡೆಯಲಿದೆ.  ನಾನು ಸೇರಿದಂತೆ ಅನೇಕ ಸಿನಿಮಾಸಕ್ತರು ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೀವಿ. ಟೀಸರ್ ಬಿಡುಗಡೆ ಮಾಡಿಕೊಟ್ಟ ರಮೇಶ್ ಅರವಿಂದ್ ಅವರಿಗೆ ಧನ್ಯವಾದ ಎಂದರು ಸೌರಭ್ ಕುಲಕರ್ಣಿ.

    “ಸಿರಿ ಲಂಬೋದರ ವಿವಾಹ” ಸರಳ, ಸುಂದರ ಹಾಗೂ ಕುತೂಹಲ ಕಾಯ್ದುಕೊಳ್ಳುವ ಚಿತ್ರವೆಂದರು ನಟ ಸುಂದರ್ ವೀಣಾ. ನಾವು ಇಡೀ ತಂಡ ಮೂಲತಃ ರಂಗಭೂಮಿ ಅವರು.‌ ನಮ್ಮ ಚಿತ್ರ ಈಗ ತೆರೆಗೆ ಬರಲು ಸಿದ್ದವಾಗಿದೆ. ಒಳ್ಳೆಯ ಚಿತ್ರ ಮಾಡಿರುವ ಖುಷಿಯಿದೆ.  ನಾನು ಈ ಚಿತ್ರದಲ್ಲಿ ವೆಡ್ಡಿಂಗ್ ಪ್ಲಾನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಅಂಜನ್ ಎ ಭಾರದ್ವಾಜ್. ನಾನು ಈ ಹಿಂದೆ ಬಿ.ಸುರೇಶ್ ಅವರ “ದೇವರ ನಾಡಲ್ಲಿ” ಚಿತ್ರದಲ್ಲಿ ಅಭಿನಯಿಸಿದ್ದೆ. ಆನಂತರ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಸೌರಭ್ ಹಾಗೂ ತಂಡದವರು ಮಾಡಿರುವ ಕಥೆ ಚೆನ್ನಾಗಿದೆ. ನನ್ನ ಪಾತ್ರ ಕೂಡ ಅಷ್ಟೆ ಚೆನ್ನಾಗಿದೆ ಎನ್ನುತ್ತಾರೆ ನಾಯಕಿ ದಿಶಾ ರಮೇಶ್. ಇದನ್ನೂ ಓದಿ:ನನ್ನ ಮಗನ ಕಾರು ಅಪಘಾತಕ್ಕೆ ‘ಬುಧ ಭಕ್ತಿ’ ಕಾರಣ ಎಂದ ಜಗ್ಗೇಶ್

    ಛಾಯಾಗ್ರಾಹಕ ಕಿಟ್ಟಿ ಕೌಶಿಕ್, ಸಂಗೀತ ನಿರ್ದೇಶಕ ಸಂಘರ್ಷ್ ಕುಮಾರ್ ಹಾಗೂ ಕಾರ್ಯಕಾರಿ ನಿರ್ಮಾಪಕಿ ನಮ್ರತಾ ಚಿತ್ರದ ಕುರಿತು ಮಾತನಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯ ನಟ ಮಂಡ್ಯ ರಮೇಶ್ ಚಿತ್ರತಂಡಕ್ಕೆ ಶುಭ ಕೋರಿದರು. ಅಂಜನ್ ಎ ಭಾರದ್ವಾಜ್, ದಿಶಾ ರಮೇಶ್, ರಾಜೇಶ್ ನಟರಂಗ, ಸುಂದರ್ ವೀಣಾ, ಪಿ.ಡಿ.ಸತೀಶ್ ಚಂದ್ರ, ಮಜಾಭಾರತದ ಶಿವು ಹಾಗೂ ಸುಶ್ಮಿತ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸದಾನಂದ ಕಾಳೆ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]