Tag: Disha Patani

  • ಇದೇ ಶುಕ್ರವಾರ ತೆರೆಗೆ ಅಪ್ಪಳಿಸಲಿದೆ ಬಾಗಿ-2!

    ಇದೇ ಶುಕ್ರವಾರ ತೆರೆಗೆ ಅಪ್ಪಳಿಸಲಿದೆ ಬಾಗಿ-2!

    ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಈ ಹಿಂದೆ ನಟಿಸಿದ ಬಾಗಿ ಚಿತ್ರ ಸಾಕಷ್ಟು ಯಶಸ್ಸು ಕಂಡು 100 ಕೋಟಿ ಬಾಕ್ಸ್ ಆಫೀಸ್ ಕ್ಲಬ್ ಸೇರಿತ್ತು. ಈಗ ಮತ್ತೆ ತಮ್ಮ ಹವಾ ಎಬ್ಬಿಸಲು ಬಾಗಿ-2 ಚಿತ್ರ ಇದೇ ಶುಕ್ರವಾರ ವಿಶ್ವಾದ್ಯಂತ ತೆರೆ ಕಾಣಲಿದೆ.

    2016ರಲ್ಲಿ ತೆಲುಗಿನಲ್ಲಿ ಬಿಡುಗಡೆಯಾದ ‘ಕ್ಷಣಂ’ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಗಿದ್ದು, ಅದ್ದಕ್ಕೆ ಬಾಗಿ-2 ಎಂದು ಟೈಟಲ್ ಇಡಲಾಗಿದೆ. ಚಿತ್ರದಲ್ಲಿ ನಟ ಟೈಗರ್ ಶ್ರಾಫ್ ರೋನಿ ಪಾತ್ರದಲ್ಲಿ ಮಿಂಚಿದ್ದು, ನಟಿ ದಿಶಾ ಪಠಾಣಿ ನೇಹಾ ಪಾತ್ರದಲ್ಲಿ ಮಿಂಚಿದ್ದಾರೆ.

    ಈ ಚಿತ್ರದಲ್ಲಿ ಟೈಗರ್ ಕಮಾಂಡೋ ಪಾತ್ರ ನಿರ್ವಹಿಸಿದ್ದು, ಕಳೆದು ಹೋದ ಮಗುವಿಗಾಗಿ ಹುಡುಕಾಟ ನಡೆಸುತ್ತಿರುತ್ತಾರೆ. ಅಷ್ಟೇ ಅಲ್ಲದೇ ಸಾಕಷ್ಟು ಆಕ್ಷನ್ ಹಾಗೂ ಥ್ರಿಲ್ಲರ್ ವನ್ನು ಈ ಸಿನಿಮಾ ಹೊಂದಿದೆ. ಈ ಸಿನಿಮಾವನ್ನು ಅಹ್ಮದ್ ಖಾನ್ ನಿರ್ದೇಶನ ಮಾಡಿದ್ದು, ಸಾಜಿದ್ ನದಿಯಾವಾಲಾ ಈ ಚಿತ್ರವನ್ನು ನಿರ್ಮಿಸಿದ್ದಾರೆ.

    ಈ ಹಿಂದೆ ಬಿಡುಗಡೆಯಾಗಿದ್ದ ಬಾಗಿ ಸಿನಿಮಾದಲ್ಲಿ ಟೈಗರ್ ಮಾರ್ಷಲ್ ಆರ್ಟ್ಸ್ ಪಾತ್ರದಲ್ಲಿ ಮಿಂಚಿದ್ದು, ಈಗ ಬಾಗಿ-2 ಚಿತ್ರದಲ್ಲಿ ಕಮಾಂಡೋ ಆಗಿ ಮಿಂಚಿದ್ದಾರೆ. ಬಾಗಿ ಸಿನಿಮಾದಲ್ಲಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹಾಗೂ ತನ್ನ ಗುರುವಿನ ಸಾವಿಗೆ ಕಾರಣವಾದವರ ಮೇಲೆ ಸೇಡು ತಿರಿಸಿಕೊಳ್ಳುವ ಸಿನಿಮಾವಾಗಿತ್ತು.

    ಬಾಗಿ ಚಿತ್ರದಲ್ಲಿ ಟೈಗರ್ ಶ್ರಾಫ್‍ಗೆ ಜೋಡಿಯಾಗಿ ಶ್ರದ್ಧಾ ಕಪೂರ್ ನಟಿಸಿದ್ದರು. ಆದರೆ ಈಗ ಬಾಗಿ-2 ಚಿತ್ರದಲ್ಲಿ ನಟಿ ದಿಶಾ ಪಠಾಣಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಜಾಕ್ವೇಲಿನ್ ಫೆರ್ನಂಡಿಸ್ ಕೂಡ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಂದು ತೇಜಬ್ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಹೆಜ್ಜೆ ಹಾಕಿದ ‘ಏಕ್ ದೋ ತಿನ್’ ಹಾಡಿಗೆ ಇಂದು ಜಾಕ್ವೇಲಿನ್ ಹೆಜ್ಜೆ ಹಾಕಿದ್ದಾರೆ.

    ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಟ್ರೇಲರ್ ಯೂ ಟ್ಯೂಬ್ ನಲ್ಲಿ 5 ಕೋಟಿಗೂ ಅಧಿಕ ವ್ಯೂ ಕಂಡಿದೆ.

  • ಬೆಂಗ್ಳೂರಿಗೆ ಬಂದ ಬಾಲಿವುಡ್ ಚೆಲುವೆ ದಿಶಾ ಪಟಾನಿ

    ಬೆಂಗ್ಳೂರಿಗೆ ಬಂದ ಬಾಲಿವುಡ್ ಚೆಲುವೆ ದಿಶಾ ಪಟಾನಿ

    ಬೆಂಗಳೂರು: ಬಾಲಿವುಡ್ ಎಂ.ಎಸ್.ಧೋನಿ ಸಿನಿಮಾ ಖ್ಯಾತಿಯ ಬ್ಯೂಟಿಫುಲ್ ನಟಿ ದಿಶಾ ಪಟಾನಿ ಮೊದಲ ಬಾರಿಗೆ ಬುಧವಾರ ನಗರಕ್ಕೆ ಆಗಮಿಸಿದ್ದರು. ತಮ್ಮ ನೆಚ್ಚಿನ ನಟಿಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ರು.

    ಮಹದೇವಪುರದ ಫಿನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಸಿ. ಕೃಷ್ಣಯ್ಯ ಚೆಟ್ಟಿ ಜುವೆಲರ್ಸ್ ಫಾರ್ ಎವರ್ ಮಾರ್ಕ್ ನ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ದಿಶಾ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ದಿಶಾ ಪಟಾನಿ, ಫಾರ್ ಎವರ್ ಮಾರ್ಕ್ ನಲ್ಲಿನ ವಜ್ರದ ಅಭರಣಗಳು ಜಗತ್ತಿನ ಅತ್ಯಂತ ಸುಂದರ ಹಾಗೂ ಅಪರೂಪದ ವಜ್ರಗಳು. ಇದರ ಮೊದಲ ವರ್ಷದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿರುವುದು ತುಂಬಾ ಸಂತಸ ತಂದಿದೆ. ಬೆಂಗಳೂರಿನ ವಾತಾವರಣ ತುಂಬಾ ಚೆನ್ನಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ದಿಶಾ ಪಟಾನಿ ತೆಲಗುವಿನ ಲೋಫರ್, ಹಿಂದಿಯ ಎಂ.ಎಸ್.ಧೋನಿ, ಕುಂಗ್ ಫೂ ಯೋಗ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಭಾಗಿ-2 ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಎಂ.ಎಸ್.ಧೋನಿ ಸಿನಿಮಾ ದಿಶಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು.