Tag: Disha Patani

  • ಬಾತ್‍ಟಬ್‍ನಲ್ಲಿ ಕುಳಿತು ಹಾಟ್ ಫೋಟೋ ಕ್ಲಿಕ್ಕಿಸಿಕೊಂಡ ದಿಶಾ ಪಠಾಣಿ

    ಬಾತ್‍ಟಬ್‍ನಲ್ಲಿ ಕುಳಿತು ಹಾಟ್ ಫೋಟೋ ಕ್ಲಿಕ್ಕಿಸಿಕೊಂಡ ದಿಶಾ ಪಠಾಣಿ

    ಮುಂಬೈ: ಟೀಂ ಇಂಡಿಯಾ ಕ್ರಿಕೆಟರ್ ಎಂಎಸ್ ಧೋನಿ ಅವರ ಬಯೋಪಿಕ್ ‘ದ ಅನ್‍ಟೋಲ್ಡ್ ಸ್ಟೋರಿ’ ಸಿನಿಮಾ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿರುವ ನಟಿ ದಿಶಾ ಪಠಾಣಿ ಸದ್ಯಕ್ಕೆ ಪಡ್ಡೆ ಹುಡುಗರ ಹಾಟ್ ಫೇವರೇಟ್ ಆಗಿದ್ದಾರೆ.

    ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಾಗಿಂದ ತಮ್ಮ ಅಭಿಮಾನಿ ಬಳಗಕ್ಕೆ ಸಿಹಿ ಸುದ್ದಿ ನೀಡುತ್ತಲೇ ಬಂದಿರುವ ನಟಿ ದಿಶಾ ಪಠಾಣಿ, ಇದೀಗ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ.

    https://www.instagram.com/p/B0-Nc3UARfr/

    ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ದಿಶಾ ಪಠಾಣಿ ಅವರು ಬಿಕಿನಿ ತೊಟ್ಟ ಹಾಟ್ ಫೋಟೊಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಇತ್ತೀಚೆಗೆ ಹರಿಯಬಿಟ್ಟಿದ್ದರು. ಇದೀಗ ದಿಶಾ ‘ಬಾತ್ ಟಬ್’ನಲ್ಲಿ ಕುಳಿತು ಕ್ಯಾಮೆರಾಗೆ ಫೋಸ್ ನೀಡಿದ್ದಾರೆ. ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಬ್ಲಾಕ್ ಡ್ರೆಸ್‍ನಲ್ಲಿ ದಿಶಾ ಪಠಾಣಿ ಮಿಂಚಿದ್ದು, ಮತ್ತೊಂದು ಫೋಟೋದಲ್ಲಿ ಅವರು ಧರಿಸಿದ್ದ ಉಂಗುರ ಹಾಗೂ ಆಭರಣ ಹೈಲೆಟ್ ಆಗಿವೆ. ಬಾಲಿವುಟ್ ಹಾಟ್ ನಟಿ ದಿಶಾ ಅವರ ಫೋಟೋ ನೋಡಿರುವ ಅಭಿಮಾನಿಗಳು ತಮ್ಮದೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

    ಇತ್ತೀಚೆಗೆ ರಿಲೀಸ್ ಆಗಿ ಪ್ರೇಕ್ಷಕರು ಹಾಗೂ ಅಭಿಮಾನಿಗಳ ಮನ ಗೆದ್ದ ಸಲ್ಮಾನ್ ಖಾನ್ ನಾಯಕತ್ವದ ‘ಭಾರತ್’ ಚಿತ್ರದಲ್ಲಿ ದಿಶಾ ಅವರು ‘ರಾಧಾ’ ಪಾತ್ರದಲ್ಲಿ ಮಿಂಚಿದ್ದಾರೆ. ದಿಶಾ ಪಠಾಣಿ ಅವರು ಸದ್ಯಕ್ಕೆ ಮೋಹಿತ್ ಸೂರಿ ನಿರ್ದೇಶನದ ‘ಮಲಾಂಗ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

    https://www.instagram.com/p/B0-Ms8HgTFn/

  • ಟೈಗರ್-ದಿಶಾ ಲವ್ ಬ್ರೇಕಪ್

    ಟೈಗರ್-ದಿಶಾ ಲವ್ ಬ್ರೇಕಪ್

    ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಹಾಗೂ ನಟಿ ದಿಶಾ ಪಠಾಣಿ ನಡುವೆ ಲವ್ ಬ್ರೇಕಪ್ ಆಗಿದೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಕೇಳಿ ಬರುತ್ತಿದೆ.

    ಟೈಗರ್ ಹಾಗೂ ದಿಶಾ 3 ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಆದರೆ ಈ ಬಗ್ಗೆ ದಿಶಾ ಆಗಲಿ ಟೈಗರ್ ಆಗಲಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿರಲಿಲ್ಲ. ಇಬ್ಬರು ಕಾರ್ಯಕ್ರಮಕ್ಕೆ ಒಟ್ಟಿಗೆ ತಿರುಗಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆ ಆಗಿತ್ತು.

    ಕೆಲವು ದಿನಗಳ ಹಿಂದೆ ಟೈಗರ್ ಹಾಗೂ ದಿಶಾ ಸಂಬಂಧದಲ್ಲಿ ಯಾವುದು ಸರಿ ಇರಲಿಲ್ಲ. ಹಾಗಾಗಿ ಇಬ್ಬರು ಅಧಿಕೃತವಾಗಿ ಬ್ರೇಕಪ್ ಮಾಡಿಕೊಂಡಿದ್ದಾರೆ. ಇಬ್ಬರು ತಮ್ಮ ಒಪ್ಪಿಗೆಯ ಮೇರೆಗೆ ಕೆಲವು ವಾರಗಳ ಹಿಂದೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ವೆಬ್‍ಸೈಟ್ ನಲ್ಲಿ ವರದಿಯಾಗಿದೆ. ಇದನ್ನೂ ಓದಿ: ಇದುವರೆಗೂ ಯಾವ ಹುಡ್ಗನೂ ಪ್ರಪೋಸ್ ಮಾಡಿಲ್ಲ: ದಿಶಾ ಪಟಾನಿ

    ರಿಲೇಶನ್‍ಶಿಪ್‍ನಲ್ಲಿ ಇರುವುದಕ್ಕಿಂತ ಒಳ್ಳೆಯ ಸ್ನೇಹಿತರಾಗಿ ಇರಬಹುದು ಎಂದು ಟೈಗರ್ ಹಾಗೂ ದಿಶಾ ಆಪ್ತರ ಮುಂದೆ ಹೇಳಿಕೊಂಡಿದ್ದಾರೆ. ಅಲ್ಲದೆ ಟೈಗರ್ ಹಾಗೂ ದಿಶಾ ಇಬ್ಬರು ಮೆಚ್ಯೂರ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರು ಜೋಡಿಯಾಗಿ ಇರುವುದಿಲ್ಲ. ಅವರು ಒಳ್ಳೆಯ ಸ್ನೇಹಿತರಾಗಿ ಇರುತ್ತಾರೆ ಎಂದು ಇಬ್ಬರಿಗೂ ಆತ್ಮೀಯರಾದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

    ಈ ಹಿಂದೆ ಸಂದರ್ಶನವೊಂದರಲ್ಲಿ ದಿಶಾ, ‘ಇಂದಿನವರೆಗೂ ಯಾವ ಹುಡುಗ ನನಗೆ ಪ್ರಪೋಸ್ ಮಾಡಿಲ್ಲ. ನಾನು ಸುಳ್ಳು ಹೇಳುತ್ತಿಲ್ಲ, ಯಾವ ಹುಡುಗರಿಂದಲೂ ನನಗೆ ಪ್ರಪೋಸ್ ಮಾಡುವ ರೀತಿಯ ಸನ್ನೆಗಳು ಬಂದಿಲ್ಲ. ಟೈಗರ್ ಶ್ರಾಫ್ ಜೊತೆ ತಿರುಗಾಡುತ್ತೇನೆ. ಊಟಕ್ಕೆ ಹೋಗಿ ಎಂಜಾಯ್ ಮಾಡುತ್ತೇವೆ. ಕೇವಲ ನಾವಿಬ್ಬರು ಒಳ್ಳೆಯ ಗೆಳೆಯರು ಎಂಬ ದೃಷ್ಟಿಕೋನದಿಂದ ತಿರುಗಾಡುತ್ತೇವೆಯೇ ಹೊರತು ನಮ್ಮಿಬ್ಬರ ಮಧ್ಯೆ ಪ್ರೀತಿ ಪ್ರೇಮ ಏನಿಲ್ಲ. ಟೈಗರ್ ಗಾಗಿ ಜಿಮ್ನಾಸ್ಟಿಕ್ ಎಲ್ಲ ಮಾಡಿದ್ರೂ ಅವರು ಇಂಪ್ರೆಸ್ ಆಗಿಲ್ಲ’ ಎಂದು ಹೇಳುವ ಮೂಲಕ ಒನ್‍ಸೈಡ್ ಲವ್ ಕಹಾನಿಯನ್ನ ಬಿಚ್ಚಿಟ್ಟಿದ್ದರು.

  • ನನ್ನ ಗ್ಲಾಮರಸ್ ಫೋಟೋ ನೋಡಿ ತಂದೆಗೆ ವಿಚಿತ್ರವೆನಿಸುತ್ತದೆ: ದಿಶಾ ಪಠಾಣಿ

    ನನ್ನ ಗ್ಲಾಮರಸ್ ಫೋಟೋ ನೋಡಿ ತಂದೆಗೆ ವಿಚಿತ್ರವೆನಿಸುತ್ತದೆ: ದಿಶಾ ಪಠಾಣಿ

    ಮುಂಬೈ: ಬಾಲಿವುಡ್ ಹಾಟ್ ಬೆಡಗಿ ದಿಶಾ ಪಠಾಣಿ ನನ್ನ ಗ್ಲಾಮರಸ್ ಫೋಟೋ ನೋಡಿ ನನ್ನ ತಂದೆಗೆ ವಿಚಿತ್ರವಾಗಿ ಭಾವಿಸುತ್ತಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಇತೀಚೆಗೆ ಪ್ರತಿಕೆಯೊಂದಕ್ಕೆ ನಟಿ ದಿಶಾ ಪಠಾಣಿ ಸಂದರ್ಶನ ನೀಡಿದ್ದರು. ಈ ವೇಳೆ ಸಂದರ್ಶಕ ನೀವು ಇನ್‍ಸ್ಟಾಗ್ರಾಂನಲ್ಲಿ ಗ್ಲಾಮರಸ್ ಫೋಟೋಗಳನ್ನು ಹಾಕುತ್ತೀರಾ. ಈ ಫೋಟೋಗಳನ್ನು ನೋಡಿ ನಿಮ್ಮ ಪೋಷಕರ ಪ್ರತಿಕ್ರಿಯೆ ಏನು ಎಂದು ಕೇಳಿದ್ದಾರೆ.

    ಸಂದರ್ಶಕನ ಪ್ರಶ್ನೆಗೆ ದಿಶಾ, “ನನ್ನ ಪೋಷಕರು ತುಂಬಾನೇ ಕೂಲ್ ಎಂದು ನಾನು ಅಂದುಕೊಂಡಿದ್ದೇನೆ. ಏಕೆಂದರೆ ಅವರು ನನಗೆ ತುಂಬಾನೇ ಸಪೋರ್ಟ್ ಮಾಡಿದ್ದಾರೆ. ನಾನು ಫೋಟೋಶೂಟ್ ಮಾಡಿಸಿದ ಫೋಟೋಗಳನೆಲ್ಲಾ ನನ್ನ ಫ್ಯಾಮಿಲಿ ಗ್ರೂಪ್‍ಗೆ ಕಳುಹಿಸುತೇನೆ. ನನ್ನ ತಾಯಿ ಕೂಡ ಈಗ ಇನ್‍ಸ್ಟಾಗ್ರಾಂನಲ್ಲಿ ಇದ್ದಾರೆ. ಹಾಗಾಗಿ ನಾನು ಅವರಿಗೆ ಹೆಚ್ಚು ಫೋಟೋಗಳನ್ನು ಕಳುಹಿಸುವುದಿಲ್ಲ” ಎಂದು ನಗುತ್ತಾ ಉತ್ತರಿಸಿದ್ದಾರೆ.

    ನಾನು ಯಾವುದೇ ತಪ್ಪು ಕೆಲಸ ಮಾಡುತ್ತಿಲ್ಲ. ನನ್ನ ಗ್ಲಾಮರಸ್ ಫೋಟೋ ನೋಡಿ ನನ್ನ ತಂದೆಗೆ ವಿಚಿತ್ರ ಎನಿಸಿತ್ತು. ನನ್ನ ಪೋಷಕರು ನನ್ನನ್ನು ನೋಡುತ್ತಿರುತ್ತಾರೆ ಎಂಬುದು ನನಗೆ ಗೊತ್ತು. ನಾನು ಯಾವುದೇ ತಪ್ಪು ಮಾಡುತ್ತಿಲ್ಲ. ನಾನು ನನ್ನ ಕೆಲಸಕ್ಕಾಗಿ ಮಾಡುತ್ತಿದ್ದೇನೆ ಎಂಬುದು ಅವರಿಗೆ ಗೊತ್ತು. ನನಗೆ ನನ್ನ ಪೋಷಕರ ಮೇಲೆ ಹೆಮ್ಮೆ ಇದೆ. ಆದರೆ ನಾನು ಫ್ಯಾಮಿಲಿ ಗ್ರೂಪ್‍ನಲ್ಲಿ ಫೋಟೋ ಕಳುಹಿಸಿದ್ದಾಗ ಅವರಿಗೆ ವಿಚಿತ್ರ ಎನಿಸುತ್ತದೆ. ಏಕೆಂದರೆ ಅವರು ಒಬ್ಬ ತಂದೆ. ಅವರಿಗೆ ಹಾಗೆ ಅನಿಸುವುದು ಸಹಜ ಎಂದರು.

    ದಿಶಾ ಪಠಾಣಿ ‘ಭಾಗಿ-2’ ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದು, ಈಗ ಅವರು ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರ ಜೊತೆ ನಟಿಸಿದ ‘ಭಾರತ್’ ಚಿತ್ರದಲ್ಲಿ ಟ್ರಾಪಿಜಿ ಕಲಾವಿದೆ (trapeze artist) ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್, ಜಾಕಿ ಶ್ರಾಫ್, ಸುನಿಲ್ ಗ್ರೋವರ್, ತಬು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಜೂನ್ 5ರಂದು ಬಿಡುಗಡೆ ಆಗಲಿದೆ.

  • ಇದುವರೆಗೂ ಯಾವ ಹುಡ್ಗನೂ ಪ್ರಪೋಸ್ ಮಾಡಿಲ್ಲ: ದಿಶಾ ಪಟಾನಿ

    ಇದುವರೆಗೂ ಯಾವ ಹುಡ್ಗನೂ ಪ್ರಪೋಸ್ ಮಾಡಿಲ್ಲ: ದಿಶಾ ಪಟಾನಿ

    – ಟೈಗರ್ ಜೊತೆಗಿನ ರಿಲೇಶನ್ ಶಿಪ್ ಬಗ್ಗೆ ಮಾತು
    – ಒನ್‍ಸೈಡ್ ಲವ್ ಕಹಾನಿ ಬಿಚ್ಚಿಟ್ಟ ದಿಶಾ

    ಮುಂಬೈ: ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುವ ಬಾಲಿವುಡ್ ನಟಿ ದಿಶಾ ಪಟಾನಿ, ತಮಗೆ ಇಲ್ಲಿಯವರೆಗೂ ಯಾವ ಹುಡುಗನೂ ಪ್ರಪೋಸ್ ಮಾಡಿಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

    ಕ್ರಿಕೆಟಿಗ ಧೋನಿ ಜೀವನಾಧರಿತ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ ದಿಶಾ ದಿಶಾ ಪಟಾನಿ ಸದ್ಯ ‘ಭಾರತ್’ ಚಿತ್ರದಲ್ಲಿ ನಟಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ದಿಶಾ ತಮ್ಮ ಖಾಸಗಿ ಜೀವನದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮೊಬೈಲ್ ಪಾಸ್‍ವರ್ಡ್ ನಿಂದಾಗಿ ದಿಶಾ-ಟೈಗರ್ ಮಧ್ಯೆ ಬ್ರೇಕಪ್-ಏನಿದು ಲವ್ ಸ್ಟೋರಿ?

    ಇಂದಿನವರೆಗೂ ಯಾವ ಹುಡುಗ ನನಗೆ ಪ್ರಪೋಸ್ ಮಾಡಿಲ್ಲ. ನಾನು ಸುಳ್ಳು ಹೇಳುತ್ತಿಲ್ಲ, ಯಾವ ಹುಡುಗರಿಂದಲೂ ನನಗೆ ಪ್ರಪೋಸ್ ಮಾಡುವ ರೀತಿಯ ಸನ್ನೆಗಳು ಬಂದಿಲ್ಲ. ಟೈಗರ್ ಶ್ರಾಫ್ ಜೊತೆ ತಿರುಗಾಡುತ್ತೇನೆ. ಊಟಕ್ಕೆ ಹೋಗಿ ಎಂಜಾಯ್ ಮಾಡುತ್ತೇವೆ. ಕೇವಲ ನಾವಿಬ್ಬರು ಒಳ್ಳೆಯ ಗೆಳೆಯರು ಎಂಬ ದೃಷ್ಟಿಕೋನದಿಂದ ತಿರುಗಾಡುತ್ತೇವೆಯೇ ಹೊರತು ನಮ್ಮಿಬ್ಬರ ಮಧ್ಯೆ ಪ್ರೀತಿ ಪ್ರೇಮ ಏನಿಲ್ಲ. ಟೈಗರ್ ಗಾಗಿ ಜಿಮ್ನಾಸ್ಟಿಕ್ ಎಲ್ಲ ಮಾಡಿದ್ರೂ ಅವರು ಇಂಪ್ರೆಸ್ ಆಗಿಲ್ಲ ಎಂದು ಹೇಳುವ ಮೂಲಕ ಒನ್‍ಸೈಡ್ ಲವ್ ಕಹಾನಿಯನ್ನ ಬಿಚ್ಚಿಟ್ಟರು. ಇದನ್ನೂ ಓದಿ: ದಿಶಾ ಪಟಾನಿ ಬಿಕಿನಿ ತೊಟ್ಟ ಫೋಟೋ ವೈರಲ್

    ಶಾಟ್ರ್ಸ್, ಬಾಸ್ಕೆಟ್ ಬಾಲ್ ಜರ್ಸಿ ಮತ್ತು ಸ್ಪೋರ್ಟ್ಸ್ ಶೂಗಳನ್ನು ಧರಿಸಲು ಇಷ್ಟಪಡುತ್ತೇನೆ. ಸಿನಿಮಾ ಮತ್ತು ಮಾಡೆಲಿಂಗ್ ಅಂಗಳಕ್ಕೆ ಬರುವ ಮುನ್ನ ಟಾಮ್ ಬಾಯ್ ಲುಕ್ ನಲ್ಲಿರಲು ಇಷ್ಟಪಡುತಿದ್ದೆ. ಸಿನಿಮಾಗೆ ಬಂದ ಮೇಲೆ ಕೂದಲು ಉದ್ದ ಬಿಟ್ಟಿದ್ದೇನೆ ಎಂದು ತಿಳಿಸಿದರು.

    ನನ್ನ ಗ್ಲಾಮರಸ್ ಲುಕ್ ಬಗ್ಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಲ್ಲ. ನನ್ನ ತಾಯಿ ಬೇರೆ ಹೆಸರಿನ ಖಾತೆಯ ಮೂಲಕ ಇನ್‍ಸ್ಟಾಗ್ರಾಂನಲ್ಲಿ ನ್ನನ್ನು ಫಾಲೋ ಮಾಡುತ್ತಾರೆ. ಕೆಲವೊಂದು ನನ್ನ ವಿಚಿತ್ರ ಗ್ಲಾಮರಸ್ ಫೋಟೋಗಳನ್ನು ನೋಡಿ ತಂದೆ ಚಕಿತರಾಗುತ್ತಾರೆ ಎಂದು ಸಂದರ್ಶನದಲ್ಲಿ ದಿಶಾ ಹೇಳಿಕೊಂಡಿದ್ದಾರೆ.

  • ನನಗೆ ಮತ್ತೆ ಸಲ್ಮಾನ್ ಖಾನ್ ಜೊತೆ ನಟಿಸಲು ಆಗಲ್ಲ: ದಿಶಾ ಪಠಾಣಿ

    ನನಗೆ ಮತ್ತೆ ಸಲ್ಮಾನ್ ಖಾನ್ ಜೊತೆ ನಟಿಸಲು ಆಗಲ್ಲ: ದಿಶಾ ಪಠಾಣಿ

    ಮುಂಬೈ: ನನಗೆ ಮತ್ತೆ ಸಲ್ಮಾನ್ ಖಾನ್ ಅವರ ಜೊತೆ ನಟಿಸುವುದಕ್ಕೆ ಆಗಲ್ಲ ಎಂದು ಬಾಲಿವುಡ್ ನಟಿ ದಿಶಾ ಪಠಾಣಿ ಹೇಳಿದ್ದಾರೆ.

    ಸಲ್ಮಾನ್ ಖಾನ್ ಅವರ ಮುಂಬರುವ ‘ಭಾರತ್’ ಚಿತ್ರದಲ್ಲಿ ದಿಶಾ ಪಠಾಣಿ ಟ್ರಾಪಿಜಿ ಕಲಾವಿದೆ (trapeze artist) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಶಾ ಮೊದಲ ಬಾರಿಗೆ ಸಲ್ಮಾನ್ ಅವರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು, ಇಬ್ಬರ ಕೆಮೆಸ್ಟ್ರಿ ಹೇಗಿದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತೀಚೆಗೆ ದಿಶಾ ಪಠಾಣಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ದಿಶಾ, “ವಯಸ್ಸಿನ ಅಂತರ ಇರುವ ಕಾರಣ ನನಗೆ ಸಲ್ಮಾನ್ ಖಾನ್ ಅವರ ಜೊತೆ ನಟಿಸಲು ಮತ್ತೆ ಅವಕಾಶ ಸಿಗುವುದಿಲ್ಲ” ಎಂದು ಹೇಳಿದ್ದಾರೆ.

    ನಿರ್ದೇಶಕ ಅಲಿ ಸರ್ ಈ ಚಿತ್ರದಲ್ಲಿ ನನಗೆ ಸಲ್ಮಾನ್ ಖಾನ್ ಅವರ ಜೊತೆ ಟ್ರಾಪಿಜಿ ಕಲಾವಿದೆ ಪಾತ್ರದಲ್ಲಿ ನಟಿಸಬೇಕು ಎಂದು ಹೇಳಿದ್ದರು. ಶೂಟಿಂಗ್‍ಗಾಗಿ ಸೆಟ್‍ಗೆ ತಲುಪಿದ್ದಾಗ ನನಗೆ ಸಲ್ಮಾನ್ ಸರ್ ಜೊತೆ ನಟಿಸಲು ಮತ್ತೆ ನಟಿಸಲು ಅವಕಾಶ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಎಂದು ಯೋಚಿಸುತ್ತಿದೆ. ನಿರ್ದೇಶಕ ಅಲಿ ಅವರು ನನಗೆ ಸ್ಕ್ರಿಪ್ಟ್ ಬಗ್ಗೆ ಹೇಳುವಾಗ ಅವರು ಕೂಡ ಈ ಮಾತನ್ನು ಹೇಳುತ್ತಿದ್ದರು ಎಂದರು.

    ನನ್ನ ಹಾಗೂ ಸಲ್ಮಾನ್ ಅವರ ವಯಸ್ಸಿನ ಅಂತರದಿಂದ ನನಗೆ ಮತ್ತೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುವುದಿಲ್ಲ. ಭಾರತ್ ಚಿತ್ರದಲ್ಲಿ ಸಲ್ಮಾನ್ ಅವರನ್ನು 20-30 ವರ್ಷದವರಂತೆ ತೋರಿಸಲಾಗುತ್ತೆ ಎಂದು ಹೇಳಲಾಗಿತ್ತು. ಆಗ ನಾನು ನಮ್ಮಿಬ್ಬರ ಜೋಡಿ ಮ್ಯಾಚ್ ಆಗುತ್ತೆ ಎಂದು ತಕ್ಷಣ ಸಿನಿಮಾವನ್ನು ಒಪ್ಪಿಕೊಂಡೆ. ಸಲ್ಮಾನ್ ಹಾರ್ಡ್ ವರ್ಕರ್ ಆಗಿದ್ದು, ನಾನು ಅವರಿಂದ ಹೆಚ್ಚು ಕಲಿತ್ತಿದ್ದೇನೆ ಎಂದು ದಿಶಾ ಪಠಾಣಿ ತಿಳಿಸಿದ್ದಾರೆ.

    ನಾನು ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ಏಕೆಂದರೆ ನನ್ನ ಹಾಗೂ ಸಲ್ಮಾನ್ ಖಾನ್ ಅವರ ಜೋಡಿ ಎಲ್ಲರಿಗೂ ಇಷ್ಟವಾಗಿದೆ. ನಮ್ಮಿಬ್ಬರ ನಡುವೆ ಒಳ್ಳೆಯ ಕೆಮೆಸ್ಟ್ರಿ ಇತ್ತು. ನಾನು ಅಭಿಮಾನಿಗಳ ಜೊತೆ ಕೋರಿಯೋಗ್ರಾಫರ್ ಹಾಗೂ ನಿರ್ದೇಶಕರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ದಿಶಾ ಸಂದರ್ಶನದಲ್ಲಿ ಹೇಳಿದ್ದಾರೆ.

  • ಮತ್ತೆ ಬಿಕಿನಿ ಧರಿಸಿ ನೀರಿನಲ್ಲಿ ಬೆಂಕಿ ಹಚ್ಚಿದ ನಟಿ ದಿಶಾ

    ಮತ್ತೆ ಬಿಕಿನಿ ಧರಿಸಿ ನೀರಿನಲ್ಲಿ ಬೆಂಕಿ ಹಚ್ಚಿದ ನಟಿ ದಿಶಾ

    ಮುಂಬೈ: ಬಾಲಿವುಡ್ ಹಾಟ್ ಬೆಡಗಿ ದಿಶಾ ಪಠಾಣಿ ಮತ್ತೊಮ್ಮೆ ಬಿಕಿನಿ ಧರಿಸಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ದಿಶಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಅಭಿಮಾನಿಗಳಿದ್ದಾರೆ. ಹಾಗಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ದಿಶಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಈಗ ಅವರು ಮತ್ತೊಮ್ಮೆ ಬಿಕಿನಿ ಧರಿಸಿ ಆ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ದಿಶಾ ಸಮುದ್ರದಲ್ಲಿ ಬಿಳಿ ಬಿಕಿನಿ ಧರಿಸಿ ಉಯ್ಯಾಲೆ ಮೇಲೆ ಕುಳಿತಿರುವ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದಿಶಾ ಅವರ ಈ ಫೋಟೋ ಸಖತ್ ಹಾಟ್ ಆಗಿದ್ದು, ಈ ಪೋಸ್ಟ್ ಗೆ 24 ಗಂಟೆಯಲ್ಲಿ ಬರೋಬ್ಬರಿ 14 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

     

    View this post on Instagram

     

    ????

    A post shared by disha patani (paatni) (@dishapatani) on

    ಕ್ರಿಸ್‍ಮಸ್ ಹಬ್ಬದಂದು ದಿಶಾ ಪಠಾಣಿ ಬಿಕಿನಿ ತೊಟ್ಟು ತಮ್ಮ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದರು. ದಿಶಾ ಬಿಳಿ ಬಿಕಿನಿ ತೊಟ್ಟು ಸೋಫಾ ಮೇಲೆ ಕುಳಿತಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದರು. ಆ ಫೋಟೋವನ್ನು ಪೋಸ್ಟ್ ಮಾಡಿ ಅದಕ್ಕೆ, “ಎಲ್ಲರಿಗೂ ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು” ಎಂದು ಕ್ಯಾಪ್ಷನ್ ನೀಡಿದ್ದರು.

     

    View this post on Instagram

     

    Merry Christmas to all????‍♀️????

    A post shared by disha patani (paatni) (@dishapatani) on

    ಈ ಹಿಂದೆ ದೀಪಾವಳಿ ಹಬ್ಬದಂದು ದಿಶಾ ಗೋಲ್ಡನ್ ಲೆಹೆಂಗಾ ಧರಿಸಿ ಅದಕ್ಕೆ ಒಳಉಡುಪು ಹಾಕಿ ಕೈಯಲ್ಲಿ ದೀಪ ಹಿಡಿದು ಫೋಟೋಗೆ ಪೋಸ್ ನೀಡಿದ್ದರು. ಹೋಟೆಲ್‍ನ ರೂಂವೊಂದರಲ್ಲಿ ದಿಶಾ ಫೆಸ್ಟಿವ್ ಲುಕ್‍ನಲ್ಲಿ ಈ ರೀತಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು.

    ದಿಶಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಯಾವಾಗಲೂ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಕೆಲವರು ಅಭಿಮಾನಿಗಳು ಅವರ ಫೋಟೋ ನೋಡಿ ಹೊಗಳುತ್ತಾರೆ. ಆದರೆ ಕೆಲವರು ತಮ್ಮ ಆಕ್ರೋಶ ಹೊರಹಾಕುತ್ತಾರೆ. ಇದಕ್ಕೆ ತಲೆಗೆಡಿಸಿಕೊಳ್ಳದೇ ದಿಶಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಟ್ ಫೋಟೋ ಅಪ್ಲೋಡ್ ಮಾಡುತ್ತಿರುತ್ತಾರೆ.

     

    View this post on Instagram

     

    ????????????????????

    A post shared by disha patani (paatni) (@dishapatani) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ರಿಸ್‍ಮಸ್ ಹಬ್ಬಕ್ಕೆ ಬಿಕಿನಿ ತೊಟ್ಟು ವಿಶ್ ಮಾಡಿದ ಹಾಟ್ ಬೆಡಗಿ ದಿಶಾ

    ಕ್ರಿಸ್‍ಮಸ್ ಹಬ್ಬಕ್ಕೆ ಬಿಕಿನಿ ತೊಟ್ಟು ವಿಶ್ ಮಾಡಿದ ಹಾಟ್ ಬೆಡಗಿ ದಿಶಾ

    ಮುಂಬೈ: ಬಾಲಿವುಡ್ ಹಾಟ್ ಬೆಡಗಿ ದಿಶಾ ಪಠಾಣಿ ಕ್ರಿಸ್‍ಮಸ್ ಹಬ್ಬಕ್ಕೆ ಬಿಕಿನಿ ತೊಟ್ಟು ತಮ್ಮ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.

    ದಿಶಾ ಬಿಳಿ ಬಿಕಿನಿ ತೊಟ್ಟು ಸೋಫಾ ಮೇಲೆ ಕುಳಿತಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆ ಫೋಟೋವನ್ನು ಪೋಸ್ಟ್ ಮಾಡಿ ಅದಕ್ಕೆ, “ಎಲ್ಲರಿಗೂ ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು” ಎಂದು ಕ್ಯಾಪ್ಷನ್ ನೀಡಿದ್ದಾರೆ.

    ದಿಶಾ ಅವರ ಈ ಪೋಸ್ಟ್ ನೋಡಿ ಕೆಲವರು ಹೊಗಳಿದರೆ, ಇನ್ನೂ ಕೆಲವರು ದಿಶಾ ಅವರ ಈ ಅವತಾರ ನೋಡಿ ದೆಹಲಿಯಲ್ಲಿ ಸಾಕಷ್ಟು ಚಳಿ ಇದೆ. ನಿಮಗೆ ಚಳಿ ಆಗುತ್ತಿಲ್ಲವೇ ಎಂದು ಪ್ರಶ್ನಿಸಿ ಕಾಲೆಳೆದಿದ್ದಾರೆ.

    ಈ ಹಿಂದೆ ದೀಪಾವಳಿ ಹಬ್ಬದಂದು ದಿಶಾ ಗೋಲ್ಡನ್ ಲೆಹೆಂಗಾ ಧರಿಸಿ ಅದಕ್ಕೆ ಒಳಉಡುಪು ಹಾಕಿ ಕೈಯಲ್ಲಿ ದೀಪ ಹಿಡಿದು ಫೋಟೋಗೆ ಪೋಸ್ ನೀಡಿದ್ದರು. ಹೋಟೆಲ್‍ನ ರೂಂವೊಂದರಲ್ಲಿ ದಿಶಾ ಫೆಸ್ಟಿವ್ ಲುಕ್‍ನಲ್ಲಿ ಈ ರೀತಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು.

    ದಿಶಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಅಭಿಮಾನಿಗಳಿದ್ದಾರೆ. ಹಾಗಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ದಿಶಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.

     

    View this post on Instagram

     

    Merry Christmas to all????‍♀️????

    A post shared by disha patani (paatni) (@dishapatani) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಗ್ಲಿಷ್ ಹಾಡಿಗೆ ಡ್ಯಾನ್ಸ್ ಮಾಡಿ ಹುಡುಗರ ಎದೆಬಡಿತ ಹೆಚ್ಚಿಸಿದ ದಿಶಾ: ವಿಡಿಯೋ

    ಇಂಗ್ಲಿಷ್ ಹಾಡಿಗೆ ಡ್ಯಾನ್ಸ್ ಮಾಡಿ ಹುಡುಗರ ಎದೆಬಡಿತ ಹೆಚ್ಚಿಸಿದ ದಿಶಾ: ವಿಡಿಯೋ

    ಮುಂಬೈ: ಬಾಲಿವುಡ್ ಹಾಟ್ ನಟಿ ದಿಶಾ ಪಠಾಣಿ ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕಿ ವಿಡಿಯೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ದಿಶಾ ಪಠಾಣಿ ಸಿನಿಮಾಗಳಲ್ಲಿ ಹೆಚ್ಚು ನಟಿಸದಿದ್ದರೂ, ಸಾಮಾಜಿಕ ಜಾಲತಾಣದ ಮೂಲಕ ತನ್ನ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಸದ್ಯ ಈಗ ಅವರು ಇಂಗ್ಲಿಷ್ ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಕೆಲವು ಗಂಟೆಗಳ ಹಿಂದೆ ಹಂಚಿಕೊಂಡಿದ್ದಾರೆ.

     

    View this post on Instagram

     

    #FEFE choreography @moonlightt_____________ ❤️❤️???? @nickiminaj ????????

    A post shared by disha patani (paatni) (@dishapatani) on

    ‘ಭಾಗಿ-2’ ಚಿತ್ರದ ನಂತರ ದಿಶಾ ಸಲ್ಮಾನ್ ಖಾನ ನಟನೆಯ ‘ಭಾರತ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಬ್ಯುಸಿ ಶೂಟಿಂಗ್ ನಡುವೆಯೂ ದಿಶಾ ಪಠಾಣಿ ತನ್ನ ಕೋರಿಯೋಗ್ರಾಫರ್ ಜೊತೆ ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    ಸದ್ಯ ದಿಶಾ ಭಾರತ್ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದಲ್ಲಿ ಅವರು ಆ್ಯಕ್ಷನ್ ಸೀನ್ ಮಾಡುತ್ತಿದ್ದಾರೆ. ಈ ಚಿತ್ರದ ಆ್ಯಕ್ಷನ್ ಸೀನ್‍ಗಾಗಿ ದಿಶಾ ಪಠಾಣಿ ಪ್ರ್ಯಾಕ್ಟಿಸ್ ಮಾಡುತ್ತಿರುವ ವಿಡಿಯೋವನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    Playing around @rakeshyadav13 #flyzonefitness❤️

    A post shared by disha patani (paatni) (@dishapatani) on

    ದೀಪಾವಳಿ ಹಬ್ಬಕ್ಕಾಗಿ ದಿಶಾ ಗೋಲ್ಡನ್ ಲೆಹೆಂಗಾ ಧರಿಸಿ ಅದಕ್ಕೆ ಒಳಉಡುಪು ಹಾಕಿ ಕೈಯಲ್ಲಿ ದೀಪ ಹಿಡಿದು ಫೋಟೋಗೆ ಪೋಸ್ ನೀಡಿದ್ದರು. ಹೋಟೆಲ್‍ನ ರೂಂವೊಂದರಲ್ಲಿ ದಿಶಾ ಫೆಸ್ಟಿವ್ ಲುಕ್‍ನಲ್ಲಿ ಈ ರೀತಿ ಫೋಟೋಶೂಟ್ ಮಾಡಿಸಿದ್ದರು. ಲೆಹೆಂಗಾಗೆ ದಿಶಾ ಹಣೆಗೆ ಬೈತಲೆ ಬೊಟ್ಟು ಹಾಕಿದ್ದರು. ಸದ್ಯ ದಿಶಾ ಅವರ ಆ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದಿಶಾ ಪಟಾಣಿ ಬಿಕಿನಿ ತೊಟ್ಟ ಫೋಟೋ ವೈರಲ್

    ದಿಶಾ ಪಟಾಣಿ ಬಿಕಿನಿ ತೊಟ್ಟ ಫೋಟೋ ವೈರಲ್

    ಮುಂಬೈ: ಬಾಲಿವುಡ್ ನಟಿ ದಿಶಾ ಪಟಾಣಿ ಬಿಕಿನಿ ತೊಟ್ಟ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಎಂ. ಎಸ್ ಧೋನಿ ದ ಅನ್‍ಟೋಲ್ಡ್ ಸ್ಟೋರಿ ಸಿನಿಮಾದ ಮೂಲಕ ಬಾಲಿವುಡ್ ಎಂಟ್ರಿ ಕೊಟ್ಟ ಕ್ವೀನ್ ಆಫ್ ಆರ್ಟ್ ದಿಶಾ ಪಟಾನಿ ಇತ್ತೀಚೆಗೆ ಬ್ಲೂ ಬಣ್ಣದ ಬಿಕಿನಿ ತೊಟ್ಟ ಫೋಟೋವೊಂದನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದರು. ಇದಕ್ಕೆ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿದ್ದು, ಇದೀಗ ಈ ಫೋಟೋ ಹೆಚ್ಚು ವೈರಲ್ ಆಗಿದೆ. ಅಪ್ಲೋಡ್ ಮಾಡಿದ ಒಂದೇ ದಿನಕ್ಕೆ 16 ಲಕ್ಷಕ್ಕೂ ಅಧಿಕ ಲೈಕ್ಸ್ ಮತ್ತು ಕಮೆಂಟ್‍ಗಳನ್ನು ಪಡೆದುಕೊಂಡಿದೆ.

    https://www.instagram.com/p/BpBZZH6Fwc7/?hl=en&taken-by=dishapatani

    ಇತ್ತೀಚೆಗೆ ಬಾಂಬೆ ಟೈಮ್ಸ್ ಫ್ಯಾಶನ್ ವೀಕ್‍ನಲ್ಲಿ ನಟಿ ದಿಶಾ ಪಟಾನಿ ಕ್ಯಾಟ್ ವಾಕ್ ಮಾಡಿದ್ದರು. ಅದರಲ್ಲಿ ಅವರು ಗುಲಾಬಿ ಬಣ್ಣದ ಲೇಹೆಂಗಾ ತೊಟ್ಟು ಸಿಂಪಲ್ ಮೇಕಪ್‍ನಲ್ಲಿ ವಧುವಿನ ಹಾಗೇ ಕಾಣಿಸಿಕೊಂಡಿದ್ದರು. ಈ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು.

    https://www.instagram.com/p/Bo6-QqLl9Y5/?hl=en&taken-by=dishapatani

    ವೈಯಕ್ತಿಕ ವಿಚಾರದಲ್ಲಿ ದಿಶಾ ಪಟಾನಿ ಟೈಗರ್ ಶ್ರಾಫ್ ಜೊತೆ ಸುದ್ದಿಯಾಗಿದ್ದರು. ಮೂರು ವರ್ಷಗಳಿಂದ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಕಳೆದೆರಡು ತಿಂಗಳಿನಿಂದ ಎಲ್ಲಿಯೂ ಕಾಣುತ್ತಿಲ್ಲ. ಟೈಗರ್ ಮತ್ತು ದಿಶಾ ಇಬ್ಬರು ಭಾಗಿ-2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಇಬ್ಬರ ಒಡನಾಟ, ಬಾಂಧವ್ಯ ಎಲ್ಲವೂ ತಾವು ಪ್ರೀತಿಯಲ್ಲಿದಿದ್ದನ್ನು ತೋರಿಸುತ್ತಿತ್ತು. ಒಂದು ಮೂಲಗಳ ಪ್ರಕಾರ ಇಬ್ಬರ ಮದುವೆಗೂ ಎರಡೂ ಕುಟುಂಬಸ್ಥರು ಒಪ್ಪಿಗೆಯನ್ನು ಸೂಚಿಸಿದ್ದರು. ಇತ್ತೀಚೆಗೆ ಟೈಗರ್ ಸ್ವತಃ ತಾವೇ ದಿಶಾರಿಂದ ದೂರ ಉಳಿಯುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿದ್ದವು.

    ಸದ್ಯಕ್ಕೆ ದಿಶಾ ಪಟಾನಿ ಸಲ್ಮಾನ್‍ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ಅದ್ದೂರಿ ಸಿನಿಮಾ`ಭಾರತ್’ನಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮೊಬೈಲ್ ಪಾಸ್‍ವರ್ಡ್ ನಿಂದಾಗಿ ದಿಶಾ-ಟೈಗರ್ ಮಧ್ಯೆ ಬ್ರೇಕಪ್-ಏನಿದು ಲವ್ ಸ್ಟೋರಿ?

    ಮೊಬೈಲ್ ಪಾಸ್‍ವರ್ಡ್ ನಿಂದಾಗಿ ದಿಶಾ-ಟೈಗರ್ ಮಧ್ಯೆ ಬ್ರೇಕಪ್-ಏನಿದು ಲವ್ ಸ್ಟೋರಿ?

    ಮುಂಬೈ: ಮೂರು ವರ್ಷಗಳಿಂದ ಲವ್ ನಲ್ಲಿದ್ದ ಬಾಲಿವುಡ್ ಹಾಟ್ ಕಪಲ್ ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ಇಬ್ಬರ ಮಧ್ಯೆ ಬ್ರೇಕಪ್ ಆಗಿದೆ ಎಂಬ ಸುದ್ದಿಯೊಂದು ಸಿನಿ ಗಲ್ಲಿಯಲ್ಲಿ ಹರಿದಾಡುತ್ತಿದೆ. ಟೈಗರ್ ಶ್ರಾಫ್ ದಿಢೀರ್ ಅಂತಾ ತಮ್ಮ ಮೊಬೈಲ್ ಪಾಸ್ ವರ್ಡ್ ಬದಲಾಯಿಸಿದ್ದರಿಂದ ದಿಶಾ ಕೋಪಗೊಂಡು ಗೆಳೆಯನಿಂದ ದೂರ ಉಳಿದುಕೊಂಡಿದ್ದಾರೆ ಎಂದು ಹಿಂದಿ ವೆಬ್‍ಸೈಟ್ ಪ್ರಕಟಿಸಿದೆ.

    ಮೂರು ವರ್ಷಗಳಿಂದ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಕಳೆದರೆಡು ತಿಂಗಳನಿಂದ ಎಲ್ಲಿಯೂ ಕಾಣುತ್ತಿಲ್ಲ. ಟೈಗರ್ ಮತ್ತು ದಿಶಾ ಇಬ್ಬರು ಭಾಗಿ-2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಇಬ್ಬರ ಒಡನಾಟ, ಬಾಂಧವ್ಯ ಎಲ್ಲವೂ ತಾವು ಪ್ರೀತಿಯಲ್ಲಿದಿದ್ದನ್ನು ತೋರಿಸುತ್ತಿತ್ತು. ಒಂದು ಮೂಲಗಳ ಪ್ರಕಾರ ಇಬ್ಬರ ಮದುವೆಗೂ ಎರಡೂ ಕುಟುಂಬಸ್ಥರು ಒಪ್ಪಿಗೆಯನ್ನು ಸೂಚಿಸಿದ್ದರು. ಇತ್ತೀಚೆಗೆ ಟೈಗರ್ ಸ್ವತಃ ತಾವೇ ದಿಶಾರಿಂದ ದೂರ ಉಳಿಯುತ್ತಿದ್ದಾರೆ ಎಂದು ಮೂಲಗಳು ಹೇಳುತ್ತವೆ.

    ಯಾಕೆ ಈ ದೂರ?
    ಕರಣ್ ಜೋಹರ್ ನಿರ್ಮಾಣದ ‘ಸ್ಟೂಡೆಂಟ್ ಆಫ್ ದಿ ಇಯರ್-2’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಈ ಚಿತ್ರದಲ್ಲಿ ಟೈಗರ್ ಗೆ ಜೊತೆಯಾಗಿ ತಾರಾ ಸುತಾರಿಯಾ ನಟಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ವೇಳೆ ಟೈಗರ್ ಮತ್ತು ತಾರಾ ಒಬ್ಬರಿಗೊಬ್ಬರು ಹತ್ತಿರ ಆಗುತ್ತಿದ್ದಾರೆ ಎಂಬ ಸುದ್ದಿ ಸಹ ಬಾಲಿವುಡ್ ಸುದ್ದಿ ಅಂಗಳದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ಟೈಗರ್ ಸಹ ದಿಶಾರಿಂದ ಅಂತರ ಕಾಯ್ದುಕೊಳ್ಳುತ್ತಿದ್ದು, ಮೊಬೈಲ್ ಪಾಸ್‍ವರ್ಡ್ ಬದಲಿಸಿ ಪ್ರೈವೇಸಿ ಕಾಪಾಡುತ್ತಿದ್ದಾರಂತೆ.

    ಟೈಗರ್ ಮುನ್ನಾ ಮೈಕಲ್ ಸಿನಿಮಾದ ವೇಳೆಯೂ ನಿಧಿ ಅಗರವಾಲ್ ಜೊತೆ ಅತ್ಯಂತ ಸಲುಗೆಯಿಂದ ನಡೆದುಕೊಳ್ಳುತ್ತಿದ್ದನ್ನು ಕಂಡಿದ್ದ ದಿಶಾ ಗೆಳೆಯನ ಮೇಲೊಂದು ಕಣ್ಣಿಟ್ಟಿದ್ದರು. ಈ ಬಾರಿ ಮೊಬೈಲ್ ಪಾಸ್‍ವರ್ಡ್ ಬದಲಿಸಿದ ಕೂಡಲೇ ದಿಶಾ ಸಂಶಯ ಮತ್ತಷ್ಟು ಬಲವಾಗಿದೆ. ಕಳೆದ ಒಂದೆರಡು ತಿಂಗಳನಿಂದ ಇಬ್ಬರ ನಡುವಿನ ಮುನಿಸು ಇಂದು ಹೊರ ಬಿದ್ದಿದೆ. 2018ರ ಹೊಸ ವರ್ಷ ಆಚರಣೆಗಾಗಿ ದಿಶಾ ಮತ್ತು ಟೈಗರ್ ಮಾಲ್ಡೀವ್ಸ್ ಗೆ ತೆರಳಿದ್ದರು. ಮಾಲ್ವೀವ್ಸ್ ನಲ್ಲಿ ಟೈಗರ್ ಟಾಪ್ ಲೆಸ್ ಆಗಿರೋ ಫೋಟೋ ಮತ್ತು ದಿಶಾರ ಬಿಕಿನಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv