ಬಾಲಿವುಡ್‌ನ(Bollywood) ಪ್ರೇಮ ಪಕ್ಷಿಗಳಾಗಿ (Love Birds) ಟೈಗರ್ ಶ್ರಾಫ್ (Tiger Shroff) ಮತ್ತು ದಿಶಾ ಪಠಾನಿ (Disha Patani) ಹೈಲೈಟ್ ಆಗಿದ್ದರು. ಇತ್ತೀಚೆಗೆ ಈ ಜೋಡಿಯ ಬ್ರೇಕಪ್ ನಂತರ ಮಾಡೆಲ್ ಅಲೆಕ್ಸಾಂಡರ್ ಅಲೆಕ್ಸ್ (Aleksandar Alex) ಜೊತೆ ದಿಶಾ ಪಟಾನಿ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ಸದ್ದು ಮಾಡ್ತಿದೆ.
View this post on Instagram
ಮುಂಬೈ ಗಲ್ಲಿಯಲ್ಲಿ ಸೌಂಡ್ ಮಾಡ್ತಿರುವ ಸುದ್ದಿ ಅಂದ್ರೆ ದಿಶಾ ಪಠಾನಿ ಡೇಟಿಂಗ್ (Dating) ಮ್ಯಾಟರ್. ಟೈಗರ್ ಶ್ರಾಫ್ ಮತ್ತು ದಿಶಾ ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡ್ತಿತ್ತಿದ್ದರು. ಆದರೆ ಏಕಾಏಕಿ ಇಬ್ಬರ ನಡುವೆ ಅದೇನು ಆಯ್ತೋ ಏನೋ ತಮ್ಮ ಪ್ರೀತಿಗೆ ಬ್ರೇಕ್ ಹಾಕಿದ್ದರು. ಟೈಗರ್ ಜೊತೆಗಿನ ಬ್ರೇಕಪ್ ನಂತರ ನಟಿ ದಿಶಾ, ಮಾಡೆಲ್ ಕಮ್ ಆಕ್ಟರ್ ಅಲೆಕ್ಸಾಂಡರ್ ಅಲೆಕ್ಸ್ ಜೊತೆ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಸಿಎಂ ಮೊಮ್ಮಗನ ಜೊತೆ ಮಾಲ್ಡೀವ್ಸ್‌ಗೆ ಹಾರಿದ ಜಾನ್ವಿ
View this post on Instagram
ಟೈಗರ್ ಶ್ರಾಫ್ ಜೊತೆಗಿನ ದಿಶಾ ಬ್ರೇಕಪ್ ಸುದ್ದಿ ಕೇಳಿ ಈಗಾಗಲೇ ಶಾಕ್ ಆಗಿರುವ ಫ್ಯಾನ್ಸ್, ಅಲೆಕ್ಸಾಂಡರ್ ಜೊತೆ ಡೇಟಿಂಗ್ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಭಾಘಿ ಜೋಡಿ ಬೇರೆ ಆಗಿರುವ ಸುದ್ದಿ ಕೇಳಿ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಈ ಜೋಡಿ ಅಧಿಕೃತವಾಗಿ ಹೇಳವವೆರೆಗೂ ಕಾದುನೋಡಬೇಕಿದೆ.






ಟೈಗರ್ ಶ್ರಾಫ್, ದಿಶಾ ಪಠಾಣಿ ಅವರು ಸ್ನೇಹಿತರಾಗಿದ್ದರು, ಸ್ನೇಹಿತರಾಗಿ ಉಳಿದಿದ್ದಾರೆ. ಇಬ್ಬರೂ ಜೊತೆಯಾಗಿ ಹೊರಗೆ ಹೋಗೋದನ್ನು ನಾನು ನೋಡಿರುವೆ. ಹಾಗಂತ ನನ್ನ ಮಗನನ್ನು ಟ್ರ‍್ಯಾಕ್ ಮಾಡ್ತೀದ್ದೀನಿ ಅಂತಲ್ಲ. ಅವರಿಬ್ಬರೂ ತುಂಬ ಆತ್ಮೀಯರು ಅಂತ ನನಗೆ ಗೊತ್ತಿದೆ, ಕೆಲಸದ ಹೊರತಾಗಿ ಅವರಿಬ್ಬರೂ ಸಮಯ ಕಳೆಯುತ್ತಾರೆ ಅಂತ ಗೊತ್ತಿದೆ ಎಂದು ಜಾಕಿ ಶ್ರಾಫ್ ಹೇಳಿದ್ದಾರೆ. ಬೇರೆಯಾಗಿರೋದು, ಒಟ್ಟಿಗೆ ಇರೋದು ಅವರಿಬ್ಬರಿಗೆ ಬಿಟ್ಟಿದ್ದು. ನಾನು, ನನ್ನ ಪತ್ನಿ ತರ ಇದು ಅವರ ಲವ್ ಸ್ಟೋರಿ. ದಿಶಾ ಜೊತೆ ನಮಗೆ ಒಳ್ಳೆಯ ಸಂಬಂಧ ಇದೆ ಎಂದು ಜಾಕಿ ಶ್ರಾಫ್ ಹೇಳಿದ್ದಾರೆ.
ಈ ಮೂಲಕ ಪುತ್ರನ ಲವ್ ಬ್ರೇಕಪ್ ವದಂತಿಯ ಕುರಿತು ಜಾಕಿ ಶ್ರಾಫ್ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಟೈಗರ್ ಮತ್ತು ದಿಶಾ ಸದ್ಯ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಬಹಳ ಸಮಯದಿಂದ ಬೇರೆಯಾಗಿರುವ ಈ ಜೋಡಿ. ಬ್ರೇಕಪ್ ಕುರಿತು ಅಧಿಕೃತವಾಗಿ ಹೇಳಿಕೊಂಡಿಲ್ಲ. ಈಗ ಸಾಲು ಸಲು ಸಿನಿಮಾಗಳಲ್ಲಿ ಈ ಜೋಡಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಬಿಟೌನ್‌ನಲ್ಲಿ ಕೈ ಕೈ ಹಿಡಿದು ಓಡಾಡಿಕೊಂಡಿದ್ದ ಟೈಗರ್ ಮತ್ತು ದಿಶಾ ಅವರ ದಾರಿ ಬೇರೆ ಬೇರೆಯಾಗಿದೆ ಎನ್ನಲಾಗುತ್ತಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಈ ಜೋಡಿ ಮತ್ತೆ ಒಂದಾಗಲಿ ಅಂತಾ ಹಾರೈಸುತ್ತಿದ್ದಾರೆ.
ಬಿಟೌನ್ ಕ್ವೀನ್ ದಿಶಾ ಈಗ `ಏಕ್ ವಿಲನ್ ರಿಟರ್ನ್ಸ್’ ಚಿತ್ರದ ಮೂಲಕ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಅರ್ಜುನ್ ಕಪೂರ್, ಜಾನ್ ಅಬ್ರಹಾಂ, ತಾರಾ ಜತೆ ಪ್ರಮುಖ ಪಾತ್ರದಲ್ಲಿ ದಿಶಾ ನಟಿಸಿದ್ದಾರೆ. ಈ ಚಿತ್ರದ ಟ್ರೈಲರ್ ಮತ್ತು ಪೋಸ್ಟರ್ ಮೂಲಕ ಭರ್ಜರಿ ಸೌಂಡ್ ಮಾಡುತ್ತಿದ್ದು, ಇದೇ ಜುಲೈ 29ಕ್ಕೆ ತೆರೆಗೆ ಅಬ್ಬರಿಸಲಿದೆ. ಹಾಗಾಗಿ ಪ್ರಚಾರ ಕಾರ್ಯದಲ್ಲಿ ಭಾಗಿದ್ದ ವೇಳೆ ದಿಶಾ ಹಾಟ್ ಲುಕ್ ಗಂಡ್ ಹೈಕ್ಳ ಟೆಂಪ್ರೇಚರ್ ಹೆಚ್ಚಿಸಿದೆ. ಇದನ್ನೂ ಓದಿ:
ಬ್ಲ್ಯಾಕ್ ಕಲರ್ ಕ್ರಾಪ್ ಟಾಪ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ದಿಶಾ ಲುಕ್ ಈಗ ನೋಡುಗರ ಗಮನ ಸೆಳೆಯುತ್ತಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.







