Tag: Disha Patani

  • ಸರ್ಕಾರದಲ್ಲಿ ಉನ್ನತ ಸ್ಥಾನ ಕೊಡಿಸುವುದಾಗಿ ವಂಚನೆ – ನಟಿ ದಿಶಾ ಪಟಾನಿ ತಂದೆಗೆ 25 ಲಕ್ಷ ರೂ. ಪಂಗನಾಮ

    ಸರ್ಕಾರದಲ್ಲಿ ಉನ್ನತ ಸ್ಥಾನ ಕೊಡಿಸುವುದಾಗಿ ವಂಚನೆ – ನಟಿ ದಿಶಾ ಪಟಾನಿ ತಂದೆಗೆ 25 ಲಕ್ಷ ರೂ. ಪಂಗನಾಮ

    ರ್ಕಾರಿ ಆಯೋಗದಲ್ಲಿ ಉನ್ನತ ಸ್ಥಾನ ಕೊಡಿಸುವುದಾಗಿ ಭರವಸೆ ನೀಡಿ ಬಾಲಿವುಡ್‌ ನಟಿ ದಿಶಾ ಪಟಾನಿ (Disha Patani) ಅವರ ತಂದೆ, ನಿವೃತ್ತ ಡೆಪ್ಯೂಟಿ ಎಸ್‌ಪಿ ಕೂಡ ಆಗಿರುವ ಜಗದೀಶ್‌ ಸಿಂಗ್‌ ಪಟಾನಿಗೆ 25 ಲಕ್ಷ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಶುಕ್ರವಾರ ಸಂಜೆ ಬರೇಲಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶಿವೇಂದ್ರ ಪ್ರತಾಪ್ ಸಿಂಗ್, ದಿವಾಕರ್ ಗಾರ್ಗ್, ಜುನಾ ಅಖಾರಾದ ಆಚಾರ್ಯ ಜಯಪ್ರಕಾಶ್, ಪ್ರೀತಿ ಗಾರ್ಗ್ ಮತ್ತು ಒಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ವಂಚನೆ, ಕ್ರಿಮಿನಲ್ ಬೆದರಿಕೆ ಮತ್ತು ಸುಲಿಗೆ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಪ್ರಭಾರಿ ಡಿ ಕೆ ಶರ್ಮಾ ತಿಳಿಸಿದ್ದಾರೆ.

    ಬರೇಲಿಯ ಸಿವಿಲ್ ಲೈನ್ಸ್ ಪ್ರದೇಶದ ನಿವಾಸಿ ಜಗದೀಶ್ ಪಟಾನಿ ಎಂಬವರು, ತನಗೆ ವೈಯಕ್ತಿಕವಾಗಿ ಪರಿಚಯವಿರುವ ಶಿವೇಂದ್ರ ಪ್ರತಾಪ್ ಸಿಂಗ್, ದಿವಾಕರ್ ಗರ್ಗ್ ಮತ್ತು ಆಚಾರ್ಯ ಜಯಪ್ರಕಾಶ್ ಅವರಿಗೆ ಪರಿಚಯಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

    ನಮಗೆ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯವಿದೆ. ನಿಮಗೆ ಪಕ್ಷದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಅಥವಾ ಸರ್ಕಾರಿ ಆಯೋಗದಲ್ಲಿ ಅಂತುಹುದೇ ಪ್ರತಿಷ್ಠಿತ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿ ವಂಚಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಪಟಾನಿ ಅವರ ವಿಶ್ವಾಸ ಗಳಿಸಿದ ಬಳಿಕ ಅವರಿಂದ ವಂಚಕರು 25 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ. 5 ಲಕ್ಷ ನಗದು ಹಾಗೂ 20 ಲಕ್ಷ ಹಣವನ್ನು ಬೇರೆ ಬೇರೆ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಒಂದು ವೇಳೆ, ಮೂರು ತಿಂಗಳೊಳಗೆ ನಿಮಗೆ ಸೂಕ್ತ ಸ್ಥಾನಮಾನ ಕೊಡಿಸಲು ಸಾಧ್ಯವಾಗದಿದ್ದರೆ ಹಣ ವಾಪಸ್‌ ನೀಡುವುದಾಗಿ ವಂಚಕರು ತಿಳಿಸಿದ್ದರು.

    ಮೂರು ತಿಂಗಳು ಕಳೆದರೂ ಯಾವುದೇ ಪ್ರಗತಿ ಕಾಣದಿದ್ದಾಗ ಪಟಾನಿ ಹಣ ವಾಪಸ್‌ ಕೇಳಿದ್ದಾರೆ. ಆಗ ವಂಚಕರು ಬೆದರಿಕೆ ಒಡ್ಡಿದ್ದರು. ತನಗೆ ವಂಚನೆಯಾಗಿದೆ ಎಂದು ಪಟಾನಿ ಅವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

  • ಸೂರ್ಯ ನಟನೆಯ ‘ಕಂಗುವ’ ಚಿತ್ರದ ರೊಮ್ಯಾಂಟಿಕ್‌ ಸಾಂಗ್‌ ಔಟ್‌

    ಸೂರ್ಯ ನಟನೆಯ ‘ಕಂಗುವ’ ಚಿತ್ರದ ರೊಮ್ಯಾಂಟಿಕ್‌ ಸಾಂಗ್‌ ಔಟ್‌

    ಮಿಳಿನ ಸ್ಟಾರ್ ನಟ ಸೂರ್ಯ (Suriya) ನಟನೆಯ ಬಹುನಿರೀಕ್ಷಿತ ‘ಕಂಗುವ’ (Kanguva) ಸಿನಿಮಾ ರಿಲೀಸ್ ಸಜ್ಜಾಗಿದೆ. ಇದೀಗ ಸೂರ್ಯ ಮತ್ತು ದಿಶಾ (Disha Patani) ಕಾಣಿಸಿಕೊಂಡಿರುವ ರೊಮ್ಯಾಂಟಿಕ್ ಸಾಂಗ್‌ವೊಂದು ಚಿತ್ರತಂಡ ರಿಲೀಸ್ ಮಾಡಿದೆ. ಸಾಂಗ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ಗಟ್ಟಲೇ ವಿವ್ಸ್ ಪಡೆದಿದೆ.

    ಮೊದಲ ಬಾರಿಗೆ ಸೂರ್ಯ ಮತ್ತು ದಿಶಾ ಜೊತೆಯಾಗಿ ನಟಿಸುತ್ತಿದ್ದಾರೆ. ಸದ್ಯ ಚಿತ್ರದ ‘ಯೋಲೋ’ (Yolo) ಎಂಬ ಚೆಂದದ ಸಾಂಗ್ ಅನ್ನು ರಿಲೀಸ್ ಆಗಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹಾಡಿನಲ್ಲಿ ಸೂರ್ಯ ಮತ್ತು ದಿಶಾ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಹಾಗಾಗಿ ಫ್ಯಾನ್ಸ್‌ಗೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದನ್ನೂ ಓದಿ:ಅಜ್ಜಿಯ ನೆನೆದು ಭಾವನಾತ್ಮಕ ಪತ್ರ ಬರೆದ ಸುದೀಪ್ ಪುತ್ರಿ

    ಈ ಸಿನಿಮಾವು ಬಹುಭಾಷೆಗಳಲ್ಲಿ ನವೆಂಬರ್ 14ರಂದು ರಿಲೀಸ್ ಆಗುತ್ತಿದೆ. ಸೂರ್ಯ ಜೊತೆ ದಿಶಾ ಮತ್ತು ಬಾಬಿ ಡಿಯೋಲ್ (Bobby Deol), ಜಗಪತಿ ಬಾಬು ನಟಿಸಿದ್ದಾರೆ.

  • ‘ಕಲ್ಕಿ’ಯಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡ ದಿಶಾ ಪಟಾನಿ

    ‘ಕಲ್ಕಿ’ಯಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡ ದಿಶಾ ಪಟಾನಿ

    ಡಾರ್ಲಿಂಗ್‌ ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone) ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದಿಂದ ಹೊಸ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಬಾಲಿವುಡ್ ಹಾಟ್ ಬೆಡಗಿ ದಿಶಾ ಪಟಾನಿ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿ ನಟಿಯ ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ. ಇದನ್ನೂ ಓದಿ:ಇತಿಹಾಸದಲ್ಲೇ ಮೊದಲು- ದರ್ಶನ್‌ ಇರುವ ಪೊಲೀಸ್‌ ಠಾಣೆಗೆ ಶಾಮಿಯಾನ!

    ‘ಕಲ್ಕಿ’ ಸಿನಿಮಾದಲ್ಲಿ ಘಟಾನುಘಟಿ ಸ್ಟಾರ್‌ಗಳ ದಂಡೇ ಇದೆ. ಹೀಗಿರುವಾಗ ಪ್ರಭಾಸ್ ಜೊತೆ ದಿಶಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ನಟಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಚೆಂದದ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಪೋಸ್ಟರ್‌ಗೆ ಅಭಿಮಾನಿಗಳಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇದನ್ನೂ ಓದಿ:ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಯೋಪಿಕ್ ಅನೌನ್ಸ್

    ಅಂದಹಾಗೆ, ಇತ್ತೀಚೆಗೆ ಕಲ್ಕಿ ಟ್ರೈಲರ್ ಬಿಡುಗಡೆಯಾಗಿತ್ತು. ಜಗತ್ತಿನ ಮೊದಲ ಪ್ರದೇಶ ಮತ್ತು ಕೊನೆಯ ಪ್ರದೇಶ ಕಾಶಿ ಎನ್ನುಮ ಮೂಲಕ ಕಲ್ಕಿ ಟ್ರೈಲರ್ ಶುರುವಾಗುತ್ತೆ. ಜಗತ್ತಿನಿಂದ ಎಲ್ಲವನ್ನೂ ಕಿತ್ತುಕೊಂಡರೆ ಎಲ್ಲವೂ ಇರುತ್ತದೆ ಎನ್ನುವ ಕುತೂಹಲಕರ ಸಂಭಾಷೆಯಣೆಯಿದೆ. 6000 ಹಿಂದಿನ ಶಕ್ತಿ ಮತ್ತೆ ಬಂದಿದೆ. ಅಳಿವು- ಉಳಿವಿಗಾಗಿ ಹೋರಾಡುವವರ ದೃಶ್ಯ ತೋರಿಸಲಾಗಿದೆ. ಭೈರವನಾಗಿ ಯುದ್ಧಕ್ಕೆ ಪ್ರಭಾಸ್ (Prabhas) ಸಜ್ಜಾಗಿದ್ದಾರೆ. 2 ಜಗತ್ತಿನ ಹೋರಾಟವನ್ನು ಸೈನ್ಸ್ ಫಿಕ್ಷನ್ ಮೂಲಕ ಅದ್ಭುತವಾಗಿ ತೋರಿಸಿದ್ದಾರೆ.

    ಯುದ್ಧದಲ್ಲಿ ಇದುವರೆಗೂ ನಾನು ಸೋತಿಲ್ಲ, ಇದನ್ನೂ ಸಹ ನಾನು ಸೋಲಲ್ಲ ಎಂದು ಖಡಕ್ ಆಗಿ ಪ್ರಭಾಸ್ ಡೈಲಾಗ್ ಹೊಡೆದಿದ್ದಾರೆ. ಪ್ರಭಾಸ್ ಜೊತೆ ದೀಪಿಕಾ, ದಿಶಾ ಪಟಾನಿ ಮಿಂಚಿದ್ದಾರೆ. ಅಮಿತಾಭ್, ಕಮಲ್ ಹಾಸನ್ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನ ವಿಎಫ್‌ಎಕ್ಸ್ ದೃಶ್ಯಕ್ಕೆ ಫ್ಯಾನ್ಸ್ ಮನಸೋತಿದ್ದಾರೆ.

    ಇನ್ನೂ ನಾಗ ಅಶ್ವೀನ್ ನಿರ್ದೇಶನದ ‘ಕಲ್ಕಿ 2898 ಎಡಿ’ ಸಿನಿಮಾ ಬಹುಭಾಷೆಗಳಲ್ಲಿ ಇದೇ ಜೂನ್ 27ಕ್ಕೆ ರಿಲೀಸ್ ಆಗಲಿದೆ. ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಮಾತೃಭಾಷೆ ಕನ್ನಡದಲ್ಲಿ ಡಬ್ ಮಾಡಿರೋದು ವಿಶೇಷವಾಗಿದೆ.

  • ಥೈಲ್ಯಾಂಡ್ ಬೀಚ್: ಬಿಕಿನಿಯಲ್ಲಿ ಕಾಣಿಸಿಕೊಂಡ ದಿಶಾ

    ಥೈಲ್ಯಾಂಡ್ ಬೀಚ್: ಬಿಕಿನಿಯಲ್ಲಿ ಕಾಣಿಸಿಕೊಂಡ ದಿಶಾ

    ಬಾಲಿವುಡ್ ಖ್ಯಾತ ನಟಿ ದಿಶಾ ಪಟಾನಿ ಬೇಸಿಗೆ ರಜೆ ಕಳೆಯುವುದಕ್ಕಾಗಿ ಥೈಲ್ಯಾಂಡ್ (Thailand) ಗೆ ಹಾರಿದ್ದಾರೆ. ಬಿಕಿನಿಲ್ಲಿ (Bikini) ಹಾಟ್ ಬೆಡಗಿ ಪೋಸ್ ನೀಡಿ, ಹುಡುಗರ ನಿದ್ದೆ ಕೆಡಿಸಿದ್ದಾರೆ. ಸ್ಟುಡಿಯೋ ರೂಮ್ ಒಳಗೆ ಹಾಟ್ ಫೋಟೋಗೆ ಪೋಸ್ ಕೊಡುತ್ತಿದ್ದವರು ಈ ಬಾರಿ ಬೀಚ್ ನಲ್ಲಿ ಕಾಣಿಸಿಕೊಂಡಿದ್ದಾರೆ.

    ದಿಶಾ ಪಟಾನಿ (Disha Patani) ಅವರು ಸದಾ ಟ್ರೋಲ್‌ಗಳ ಮೂಲಕ ಸದ್ದು ಮಾಡ್ತಿರುತ್ತಾರೆ. ಕಳೆದ ಬಾರಿ ಫೇಸ್ ಸರ್ಜರಿ ವಿಷ್ಯವಾಗಿ ನಟಿ ಭಾರಿ ಟ್ರೋಲ್ ಆಗಿದ್ದರು. ನಂತರ ಹಾಟ್ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದರು.

    ಭಾಘಿ 2, ಭಾಘಿ 3, ರಾಧೆ (Radhe) ಸಿನಿಮಾಗಳಲ್ಲಿ ನಟಿಸಿರುವ ದಿಶಾ ಪಟಾನಿ ಅವರಿಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಸದಾ ಬೋಲ್ಡ್ ಫೋಟೋಶೂಟ್‌ನಿಂದಲೇ ನಟಿಮಣಿ ದಿಶಾ ಸಂಚಲನ ಸೃಷ್ಟಿಸಿದ್ದರು.

     

    ಸದ್ಯ ದಿಶಾ ಸದ್ಯ ‘ಕಂಗುವ’ (Kanguva) ಸಿನಿಮಾದಲ್ಲಿ ನಟಿಸಿದ್ದಾರೆ. 10 ಭಾಷೆಗಳಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ತಮಿಳಿನ ಸ್ಟಾರ್ ನಟ ಸೂರ್ಯಗೆ (Suriya) ಜೋಡಿಯಾಗಿ ದಿಶಾ ಕಾಣಿಸಿಕೊಂಡಿದ್ದಾರೆ. ಸಕ್ಸಸ್ ಸಿಗದೇ ಬೆಸತ್ತಿರೋ ದಿಶಾಗೆ, ಈ ಚಿತ್ರ ಯಶಸ್ಸು ನೀಡುತ್ತಾ ಎಂಬುದನ್ನ ಕಾದುನೋಡಬೇಕಿದೆ.

  • ತಾರಾಲೋಕದಲ್ಲಿ ಕಲರ್‌ಫುಲ್ ಹೋಳಿ

    ತಾರಾಲೋಕದಲ್ಲಿ ಕಲರ್‌ಫುಲ್ ಹೋಳಿ

    ಹೋಳಿ ಹಬ್ಬವು ಹಿಂದೂಗಳ ಅತ್ಯಂತ ಪ್ರಸಿದ್ಧ ಮತ್ತು ದೇಶಾದ್ಯಂತ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾಗಿದೆ. ಹೋಳಿಯನ್ನು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ಈ ಬಾರಿ ಫಾಲ್ಗುಣ ಮಾಸದ ಹುಣ್ಣಿಮೆ ತಿಥಿಯಂದು ಅಂದರೆ ಮಾ.25ರಂದು ಹೋಳಿ ಹಬ್ಬವನ್ನು ಆಚರಿಸಲಾಗುವುದು.

    ಹೋಳಿ ಹಬ್ಬ ಭಾರತೀಯ ಸಂಸ್ಕೃತಿಯ ಸಂಕೇತ. ಹೋಳಿ ಎಂದಾಕ್ಷಣ ಎಲ್ಲರಿಗೂ ಥಟ್ ಅಂತ ನೆನಪಾಗುವುದು ಬಣ್ಣ. ಒಬ್ಬರು ಮತ್ತೊಬ್ಬರಿಗೆ ಬಣ್ಣ ಹಚ್ಚುವುದು. ಇದೀಗ ಹೋಳಿ ಸಂಭ್ರಮಕ್ಕೆ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ಸೆಲೆಬ್ರೇಶನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ತಮ್ಮ ಕೆಲಸದ ನಡುವೆಯೇ ಹೋಳಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಈ ಬಾರಿ ನಮ್ಮೆಲ್ಲರಿಗೂ ಕೆಲಸದ ನಡುವೆಯೇ ಹೋಳಿ. ಆದರೆ ನೀವೆಲ್ಲರೂ ಸುರಕ್ಷಿತವಾಗಿ ಹೋಳಿ ಆಡುತ್ತಾ ಎಂಜಾಯ್ ಮಾಡುತ್ತಿದ್ದೀರಿ ಎಂದು ನಾನು ಭಾವಿಸಿದ್ದೇನೆ. ಇಲ್ಲಿಂದ ನಾವು ನಿಮಗೆ ಹೋಳಿ ಹಬ್ಬದ ಶುಭಾಶಯ ತಿಳಿಸುತ್ತೇವೆ ಎಂದು ತಮ್ಮ ತಂಡದ ಜೊತೆ ಇರುವ ಫೋಟೋವನ್ನ ರಶ್ಮಿಕಾ ಮಂದಣ್ಣ ಅವರು ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Kriti Kharbanda (@kriti.kharbanda)

    ‘ಗೂಗ್ಲಿ’ ನಟಿ ಕೃತಿ ಕರಬಂಧ (Kriti Kharabanda) ಅವರು ಮದುವೆಯ ಬಳಿಕ ಪತಿ ಪುಲ್ಕಿತ್ ಸಾಮ್ರಾಟ್ ಜೊತೆ ರೊಮ್ಯಾಂಟಿಕ್ ಆಗಿ ಹೋಳಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ.

    ರಿಯಲ್ ಸ್ಟಾರ್ ಉಪೇಂದ್ರ- ಪ್ರಿಯಾಂಕಾ (Priyanka Upendra) ದಂಪತಿ ಮನೆಯಲ್ಲಿ ಅದ್ಧೂರಿಯಾಗಿ ಹೋಳಿ ಸೆಲೆಬ್ರೇಶನ್ ಮಾಡಿದ್ದಾರೆ. ಉಪ್ಪಿ ಮನೆಯಲ್ಲಿ ತಾರೆಯರ ದಂಡೇ ಸೇರಿದೆ. ನಿರಂಜನ್, ಶರಣ್ಯಾ ಶೆಟ್ಟಿ, ಗುರುಕಿರಣ್ ದಂಪತಿ, ಪೂಜಾ ಲೋಕೇಶ್, ಗ್ರೀಷ್ಮಾ ಸೃಜನ್ ಲೋಕೇಶ್, ಶಿಲ್ಪಾ ಗಣೇಶ್ ಸೇರಿದಂತೆ ಅನೇಕರು ಭಾಗಿಯಾಗಿ ಸಂಭ್ರಮಿಸಿದ್ದಾರೆ.

    ಚಂದನವನದ ನಟಿ ಸುಧಾರಾಣಿ (Sudharani) ಹೋಳಿ ಹಬ್ಬವನ್ನು ಡ್ಯಾನ್ಸ್ ಮಾಡುವ ಮೂಲಕ ಸೆಲೆಬ್ರೇಟ್ ಮಾಡಿದ್ದಾರೆ. ಕಲರ್ ಕಲರ್ ‌ ಎಂಬ ಹಾಡಿಗೆ ಜಬರ್‌ದಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ನಟಿಯ ಡ್ಯಾನ್ಸ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

    ಬಾಲಿವುಡ್‌ನ ಲವ್ ಬರ್ಡ್ಸ್ ಕಿಯಾರಾ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಜೋಡಿ ಕೂಡ ಹೋಳಿ ಹಬ್ಬವನ್ನು ಕಲರ್‌ಫುಲ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಇದನ್ನೂ ಓದಿ:ಸೀಕ್ರೆಟ್ ಆಗಿ ಮದುವೆಯಾದ ನಟಿ ತಾಪ್ಸಿ ಪನ್ನು

    ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಟೈಗರ್ ಶ್ರಾಫ್, ದಿಶಾ ಪಟಾನಿ (Disha Patani) ಹೋಳಿಯಲ್ಲಿ ಆಟವಾಡುತ್ತಾ ಒಬ್ಬರಿಗೊಬ್ಬರು ಬಣ್ಣ ಹಚ್ಚಿ ತರಲೆ ಮಾಡುತ್ತಾ ಸೆಲೆಬ್ರೇಟ್ ಮಾಡಿದ್ದಾರೆ. ಓಕಳಿ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.

  • ಮೊದಲ ಗರ್ಲ್‌ಫ್ರೆಂಡ್‌ ಬಗ್ಗೆ ರಿವೀಲ್ ಮಾಡಿದ ಟೈಗರ್ ಶ್ರಾಫ್

    ಮೊದಲ ಗರ್ಲ್‌ಫ್ರೆಂಡ್‌ ಬಗ್ಗೆ ರಿವೀಲ್ ಮಾಡಿದ ಟೈಗರ್ ಶ್ರಾಫ್

    ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಅವರು ‘ಬಡೇ ಮಿಯಾನ್ ಚೋಟೆ ಮಿಯಾನ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಒಟಿಟಿ ಕಾರ್ಯಕ್ರಮವೊಂದಲ್ಲಿ ಮೊದಲ ಗರ್ಲ್‌ಫ್ರೆಂಡ್‌ ಬಗ್ಗೆ ಟೈಗರ್‌ ಶ್ರಾಫ್‌ ಬಾಯ್ಬಿಟ್ಟಿದ್ದಾರೆ. 25ನೇ ವಯಸ್ಸಿಗೆ ಎಂಗೇಂಜ್‌ ಆಗಿದ್ದರ ಬಗ್ಗೆ ನಟ ತಿಳಿಸಿದ್ದಾರೆ. ಇದನ್ನೂ ಓದಿ:ಸಾಯಿ ಪಲ್ಲವಿ ಬದಲು ಮೃಣಾಲ್‌ಗೆ ವಿಜಯ್ ಚಾನ್ಸ್ ಕೊಟ್ಟಿದ್ದೇಕೆ?

    ಇತ್ತೀಚೆಗೆ ಒಟಿಟಿ ಕಾರ್ಯಕ್ರಮವೊಂದು ಅದ್ಧೂರಿಯಾಗಿ ನಡೆದಿದೆ. ಈ ಇವೆಂಟ್‌ಗೆ ಹಲವು ಬಾಲಿವುಡ್ ನಟ-ನಟಿಯರು ಭಾಗಿಯಾಗಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿದ ಬಳಿಕ ಖಾಸಗಿ ವಿಚಾರವೊಂದು ಟೈಗರ್ ಶ್ರಾಫ್ ರಿವೀಲ್ ಮಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಸದಾ ದಿಶಾ ಜೊತೆಗಿನ ಲವ್‌ ರಿಲೇಷನ್‌ಶಿಪ್‌ ಬಗ್ಗೆ ಸುದ್ದಿಯಾಗ್ತಿದ್ದ ಟೈಗರ್‌ ಶ್ರಾಫ್‌ ಈಗ ಮೊದಲ ಪ್ರೇಯಸಿ ಬಗ್ಗೆ ಮಾತನಾಡಿರೋದು ಅಕ್ಷರಶಃ ಬಾಲಿವುಡ್‌ ನಟ ವರುಣ್‌ ಧವನ್‌ಗೆ ಶಾಕ್‌ ಕೊಟ್ಟಿದೆ.

    ವೇದಿಕೆಯಲ್ಲಿ ವರುಣ್ ಧವನ್ ಜೊತೆ ಮಾತನಾಡುವಾಗ ನಾನು ನಾಚಿಕೆ ಸ್ವಭಾವದ ವ್ಯಕ್ತಿ ಹಾಗಾಗಿ ನನಗೆ ಮೊದಲ ಗರ್ಲ್‌ಫ್ರೆಂಡ್‌ ಸಿಕ್ಕಿದ್ದೆ, 25 ವರ್ಷ ಆದಾಗ ಎಂದು ಟೈಗರ್ ಶ್ರಾಫ್ ಮಾತನಾಡಿದ್ದಾರೆ. ನೀನು ಸೀರಿಯಸ್‌ ಆಗಿ ಹೇಳ್ತಿದ್ದೀಯಾ? ಎಂದು ಶಾಕ್ ಆಗಿ ವರುಣ್ ಧವನ್ ಕೇಳಿದ್ದಾರೆ.

    ನಿಜ ನನಗೆ ಮೊದಲ ಗರ್ಲ್‌ಫ್ರೆಂಡ್‌ ಸಿಕ್ಕಿದ್ದು 25 ವರ್ಷ ಆದಾಗ, ನನ್ನ ಮೊದಲ ಚಿತ್ರದ ಆಡಿಷನ್ ಸಮಯದಲ್ಲಿ ಎಂದು ಟೈಗರ್ ಶ್ರಾಫ್ ವಿವರಿಸಿದ್ದಾರೆ. ತಕ್ಷಣವೇ ಕೃತಿ ಸನೋನ್ ಅಲ್ವಾ? ಎಂದು ವರುಣ್ ಧವನ್ (Varun Dhawan) ಹೇಳಿದ್ದಾರೆ. ಅವರ ಮಾತನ್ನು ಟೈಗರ್ ಶ್ರಾಫ್ ತಳ್ಳಿಹಾಕಿದ್ದಾರೆ. ನಗುತ್ತಲೇ ಅವರಲ್ಲ ಬಿಡಿ ಎಂದು ನಟ ಸ್ಟಷ್ಟನೆ ನೀಡಿದ್ದಾರೆ. ಕಡೆಗೂ ಆ ಹುಡುಗಿ ಯಾರು ಎಂಬುದನ್ನು ಟೈಗರ್ ಶ್ರಾಪ್ ಗುಟ್ಟಾಗಿಯೇ ಇಟ್ಟಿದ್ದಾರೆ. ಸದ್ಯ ಈ ನಟ ಮಾತನಾಡಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ನಟ ಹೇಳದೇ ಇದ್ರೆ ಏನಂತೆ ದಿಶಾ ಪಟಾನಿ ಅವರ ಮೊದಲ ಗರ್ಲ್‌ಫ್ರೆಂಡ್‌ ಅಲ್ವಾ? ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

    ಅಂದಹಾಗೆ, ಟೈಗರ್ ಶ್ರಾಫ್ ಅವರು ‘ಹೀರೋಪಂತಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರಕ್ಕೆ ಕೃತಿ ಸನೋನ್ ನಾಯಕಿಯಾಗಿದ್ದರು. ಹಾಗಾಗಿ ಕೃತಿ ಸನೋನ್‌ ಅಥವಾ ದಿಶಾ ಇರಬಹುದಾ ಎಂದು ಫ್ಯಾನ್ಸ್‌ ಯೋಚಿಸುತ್ತಿದ್ದಾರೆ. ದಿಶಾ ಪಟಾನಿ ಜೊತೆ ಟೈಗರ್‌ ಶ್ರಾಫ್‌ ಡೇಟಿಂಗ್‌ ಮಾಡಿದ್ದರು. ಕಳೆದ ವರ್ಷ ಇಬ್ಬರ ಪ್ರೀತಿಗೆ ಬ್ರೇಕ್‌ ಬಿದ್ದಿದೆ.

  • ಮುನಿಸು ಮರೆತು ಸಿನಿಮಾಗಾಗಿ ಒಂದಾದ ಮಾಜಿ ಪ್ರೇಮಿಗಳು

    ಮುನಿಸು ಮರೆತು ಸಿನಿಮಾಗಾಗಿ ಒಂದಾದ ಮಾಜಿ ಪ್ರೇಮಿಗಳು

    ಬಾಲಿವುಡ್ (Bollywood) ನಟ ಟೈಗರ್ ಶ್ರಾಫ್- ದಿಶಾ ಪಟಾನಿ (Disha Patani) ಸಿನಿಮಾಗಾಗಿ ಮತ್ತೆ ಒಂದಾಗಿದ್ದಾರೆ. ಬಿಟೌನ್‌ನಲ್ಲಿ ಕೈ ಕೈ ಹಿಡಿದು ಓಡಾಡಿಕೊಂಡಿದ್ದ ಜೋಡಿ ಕಳೆದ ವರ್ಷ ಬ್ರೇಕಪ್ ಮಾಡಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದರು. ಇದೀಗ ಮತ್ತೆ ಸಿನಿಮಾಗಾಗಿ ಟೈಗರ್ ಶ್ರಾಫ್-ದಿಶಾ ಜೊತೆಯಾಗಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

    ‘ಭಾಘಿ’ (Baaghi) ಸಿನಿಮಾ ಮೂಲಕ ಜೋಡಿಯಾಗಿ ಟೈಗರ್ ಶ್ರಾಫ್- ದಿಶಾ ಪಟಾನಿ ಕಮಾಲ್ ಮಾಡಿದ್ದರು. ಚಿತ್ರೀಕರಣ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಆದರೆ ಎಂದಿಗೂ ತಮ್ಮ ರಿಲೇಷನ್‌ಶಿಪ್ ಬಗ್ಗೆ ಖಾತ್ರಿಪಡಿಸಿರಲಿಲ್ಲ. ಕಳೆದ ವರ್ಷ ಬ್ರೇಕಪ್ ಮಾಡಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದರು. ಇದಾದ ಬಳಿಕ ಮತ್ತೆ ಮುನಿಸೆಲ್ಲಾ ಮರೆತು ಸಿನಿಮಾಗಾಗಿ ಒಂದಾಗಿದ್ದಾರೆ. ಸದ್ಯ ‘ಹೀರೋ ನಂ.1’ ಚಿತ್ರ ರದ್ದಾಗಿದೆ ಎಂದವರಿಗೆ ಡೈರೆಕ್ಟರ್ ಬಿಗ್ ಅಪ್‌ಡೇಟ್‌ವೊಂದನ್ನು ನೀಡಿದ್ದಾರೆ.

    ‘ಹೀರೋ ನಂ.1’ ಚಿತ್ರ ಮಾಡೋದಾಗಿ ಕೆಲ ತಿಂಗಳುಗಳ ಹಿಂದೆ ಅನೌನ್ಸ್ ಮಾಡಿದ್ದರು. ಟೈಗರ್ ಶ್ರಾಫ್(Tiger Shroff)- ದಿಶಾ ಪಟಾನಿ ಜೋಡಿಯಾಗಿ ಕಾಣಿಸಿಕೊಳ್ತಾರೆ ಎಂದು ಅನೌನ್ಸ್ ಆಗಿತ್ತು. ಆ ನಂತರ ಏನು ಅಪ್‌ಡೇಟ್ ಇಲ್ಲದ ಕಾರಣ, ಸಿನಿಮಾ ರದ್ದಾಗಿದೆ ಎಂದು ಸುದ್ದಿ ವೈರಲ್ ಆಯ್ತು. ಇದೀಗ ನಿರ್ದೇಶಕ ಜಗನ್ ಶಕ್ತಿ ಸ್ಪಷ್ಟನೆ ನೀಡಿದ್ದಾರೆ.

    ಈ ಸಿನಿಮಾ ರದ್ದಾಗಿಲ್ಲ. ‘ಹೀರೋ ನಂ.1’ (Hero No.1) ಚಿತ್ರ ಇದೇ ಜುಲೈನಿಂದ ಶೂಟಿಂಗ್ ಶುರುವಾಗಲಿದೆ ಎಂದು ತಿಳಿಸಿದ್ದಾರೆ. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳುತ್ತಿರೋದಾಗಿ ನಿರ್ದೇಶಕ ಜಗನ್ ಶಕ್ತಿ (Jagan Shakti) ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಶೋಲ್ಡರ್ ಲೆಸ್ ಟಾಪ್, ತುಂಡು ಜೀನ್ಸ್‌ನಲ್ಲಿ ‘ಬೃಂದಾವನ’ ನಟಿ- ದಂಗಾದ ಫ್ಯಾನ್ಸ್

    ಸದ್ಯ ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಟೈಗರ್ ಶ್ರಾಫ್-ದಿಶಾ (Disha Patani) ಸಿನಿಮಾ ಮಾಡಲಿ. ಬ್ರೇಕಪ್ ಆಗಿರುವ ಸಂಬಂಧ ಸರಿ ಹೋಗಲಿ ಎಂದು ಆಶಿಸುತ್ತಿದ್ದಾರೆ.

  • ಹಾಟ್ ಅವತಾರಲ್ಲಿ ದಿಶಾ ಪಟಾಣಿ: ಮಸ್ತ್ ಹುಡುಗಿ ಅಂದ ಫ್ಯಾನ್ಸ್

    ಹಾಟ್ ಅವತಾರಲ್ಲಿ ದಿಶಾ ಪಟಾಣಿ: ಮಸ್ತ್ ಹುಡುಗಿ ಅಂದ ಫ್ಯಾನ್ಸ್

    ತ್ತೊಮ್ಮೆ ಹಾಟ್ ಅವತಾರವೆತ್ತಿದ್ದಾರೆ ಬಾಲಿವುಡ್ ನಟಿ ದಿಶಾ ಪಟಾಣಿ. ಹೊಸದೊಂದು ಫೋಟೋ ಶೂಟ್ ಮಾಡಿಸಿರುವ ನಟಿ, ಆ ಫೋಟೋಗಳಲ್ಲಿ ಮಿರಿ ಮಿರಿ ಮಿಂಚಿದ್ದಾರೆ. ಜೊತೆಗೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಕಂಡ ಅಭಿಮಾನಿಗಳು ಮಸ್ತ್ ಹುಡುಗಿ ಎಂದು ಅಭಿಮಾನ ತೋರಿದ್ದಾರೆ.

    ಈ ನಡುವೆ ಅವರ ಡೇಟ್ ಮತ್ತು ಲವ್ ಬ್ರೇಕ್ ಅಪ್ ವಿಚಾರ ಕೂಡ ಬಿಟೌನ್‍ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಟೈಗರ್ ಶ್ರಾಫ್ (Tiger Shroff) ಮತ್ತು ದಿಶಾ (Disha Patani) ಡೇಟ್ ಮಾಡ್ತಿದ್ದರು ಎನ್ನಲಾಗಿತ್ತು. ಕೊವೀಡ್ ಸಂದರ್ಭದಲ್ಲಿ ಬ್ರೇಕಪ್ ಆಯ್ತು ಎಂದು ಹೇಳಲಾಯ್ತು. ಇಂದಿಗೂ ತಾವು ಸಂಬಂಧದಲ್ಲಿದ್ದ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಎನ್ನಲಿಲ್ಲ. ಟೈಗರ್ ಶ್ರಾಫ್ ಜೊತೆ ಬ್ರೇಕಪ್ ಆಯ್ತಾ ಎಂಬ ಅನುಮಾನಗಳ ನಡುವೆ ನಟಿ ದಿಶಾ ಈಗ ಹೊಸ ಬಾಯ್‌ಫ್ರೆಂಡ್‌ನ ಪರಿಚಯಿಸಿದ್ದಾರೆ.

    ದಿಶಾ ಪಟಾನಿ- ಟೈಗರ್ ಶ್ರಾಫ್ ಇಬ್ಬರು ಚಿತ್ರರಂಗದ ಸ್ಟರ‍್ಸ್. ಸಿನಿಮಾ ಮಾಡುವ ಮುಂಚೆಯೇ ಇಬ್ಬರಿಗೂ ಪರಿಚಯವಿತ್ತು. ಭಘಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಇಬ್ಬರ ಗೆಳೆಯನವೇ ಪ್ರೇಮಾಂಕುರವಾಗಲು ಕಾರಣವಾಯ್ತು. ಕೊವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಇಬ್ಬರೂ ಕಾರಿನಲ್ಲಿ ಸುತ್ತಾಟ ನಡೆಸಿದ್ದಕ್ಕೆ ಇವರ ಮೇಲೆ ಕೇಸ್ ಕೂಡ ದಾಖಲಾಗಿತ್ತು. ಆದರೆ, ಈ ಜೋಡಿ ಎಂದಿಗೂ ತಮ್ಮ ಸಂಬಂಧವನ್ನು ಒಪ್ಪಿಕೊಂಡಿಲ್ಲ. ಇವರ ಸಂಬಂಧ ಬ್ರೇಕಪ್‌ನಲ್ಲಿ ಕೊನೆಯಾಗಿದೆಯೇ ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.

    ದಿಶಾ ಪಟಾಣಿ ಅವರು ಅಲೆಕ್ಸಾಂಡರ್ ಅಲೆಕ್ಸಿಕ್ (Aleksander Alexilic) ಜೊತೆ ಆಗಾಗ ಕಾಣಿಸಿಕೊಳ್ಳುತ್ತಾರೆ. ತಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ಅನೇಕ ಬಾರಿ ದಿಶಾ ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾರೆ. ಆದರೆ, ಇವರ ಮಧ್ಯೆ ಈಗ ಪ್ರೀತಿ ಮೂಡಿದೆಯೇ ಎನ್ನುವ ಅನುಮಾನ ಮೂಡಿದೆ. ದಿಶಾ ಪಟಾಣಿ ಹಾಗೂ ಅಲೆಕ್ಸಾಂಡರ್ ಒಂದು ಕಡೆ ಸೇರಿದ್ದರು. ಈ ವೇಳೆ ದಿಶಾ ತಮ್ಮ ಗೆಳೆತಿಯರಿಗೆ ಅಲೆಕ್ಸಾಂಡರ್‌ನ ಪರಿಚಯ ಮಾಡಿದ್ದಾರೆ. ಇವರು ನನ್ನ ಬಾಯ್‌ಫ್ರೆಂಡ್ ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆ ಆಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

     

    ಕೆಲ ದಿನಗಳ ಹಿಂದೆ ಟೈಗರ್ ಶ್ರಾಫ್ (Tiger Shroff) ಜೊತೆ ನಟಿ ದಿಶಾ (Disha) ಕಾಣಿಸಿಕೊಂಡಿದ್ದರು. ಕಾರ್ಯಕ್ರಮವೊಂದಲ್ಲಿ ಟೈಗರ್ ಮತ್ತು ಅವರ ಸಹೋದರಿ ಮತ್ತು ತಾಯಿಯ ಜೊತೆ ದಿಶಾ ಕಾರ್ಯಕ್ರಮ ವೀಕ್ಷಿಸುತ್ತಿರುವುದು ಕ್ಯಾಮೆರಾ ಕಣ್ಣಿಗೆ ಸೆರೆ ಆಗಿತ್ತು. ಬ್ರೇಕಪ್ ಮತ್ತು ಪ್ಯಾಚ್ ಅಪ್ ಸುದ್ದಿಯ ನಡುವೆ ಈಗ ಅಲೆಕ್ಯಾಂಡರ್ ಅಲೆಕ್ಸಿಕ್ ಎಂಬ ಹೊಸ ಬಾಯ್‌ಫ್ರೆಂಡ್‌ನ ಎಂಟ್ರಿಯಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಸುಳ್ಳಾ ಕಾಯಬೇಕಿದೆ.

  • ನಾನಿನ್ನೂ ಸಿಂಗಲ್, ದಿಶಾ ಜೊತೆಗಿನ ಬ್ರೇಕಪ್ ಬಗ್ಗೆ ಟೈಗರ್ ಶ್ರಾಫ್ ಸ್ಪಷ್ಟನೆ

    ನಾನಿನ್ನೂ ಸಿಂಗಲ್, ದಿಶಾ ಜೊತೆಗಿನ ಬ್ರೇಕಪ್ ಬಗ್ಗೆ ಟೈಗರ್ ಶ್ರಾಫ್ ಸ್ಪಷ್ಟನೆ

    ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff)  ಅವರು ದಿಶಾ (Disha Patani) ಜೊತೆಗಿನ ಬ್ರೇಕಪ್ ಬಗ್ಗೆ ಮಾಹಿತಿ ನೀಡಿದ್ದಾರೆ. ತಮಗೆ ಕಮಿಟೆಡ್ ರಿಲೇಷನ್‌ಶಿಪ್ ಇಷ್ಟವಿಲ್ಲ, ನಾನು ಸಿಂಗಲ್ ಎನ್ನುವ ಮೂಲಕ ನಟ ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ಊಹಾಪೋಹಗಳಿಗೂ ಬ್ರೇಕ್‌ ಹಾಕಿದ್ದಾರೆ.

    ಟೈಗರ್ ಶ್ರಾಫ್- ದಿಶಾ ಪಟಾನಿ ಮದುವೆಯಾಗುವಂತೆ ದಿಶಾ ಬೇಡಿಕೆ ಇಟ್ಟಿದ್ದರು. ಕಮಿಟೆಡ್ ರಿಲೇಷನ್‌ಶಿಪ್ ಇಷ್ಟವಿಲ್ಲದ ಕಾರಣ ಟೈಗರ್ ಶ್ರಾಫ್ ನೋ ಎಂದಿದ್ದರು. ಹಾಗಾಗಿ ಇಬ್ಬರು 2020ರಲ್ಲೇ ಬೇರೆಯಾದರು ಎನ್ನಲಾಗಿದೆ. ಇದೀಗ ಸಂದರ್ಶನವೊಂದರಲ್ಲಿ ಟೈಗರ್ ಶ್ರಾಫ್, ತಾವು ಸಿಂಗಲ್ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಶಿವರಾಜ್ ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾದ ಶೂಟಿಂಗ್ ಮುಕ್ತಾಯ

    ಕಳೆದ ಎರಡು ವರ್ಷಗಳಿಂದ ನಾನು ಸಿಂಗಲ್ ಆಗಿಯೇ ಇದ್ದೇನೆ. ಇತ್ತೀಚೆಗೆ ನನ್ನ ಹೆಸರು ಕೆಲವರ ಜೊತೆ ತಳುಕು ಹಾಕಿಕೊಂಡಿದೆ. ಅದು ಸುಳ್ಳು ಎಂದಿದ್ದಾರೆ. ಪರೋಕ್ಷವಾಗಿ ದಿಶಾ ಪಟಾನಿ ಜೊತೆಗಿನ ಬ್ರೇಕಪ್‌ ಕಹಾನಿ ಬಗ್ಗೆ ಉತ್ತರಿಸಿದ್ದಾರೆ. ದಿಶಾ ಧನುಕಾ(Deesha Dhanuka) ಜೊತೆ ಟೈಗರ್ ಶ್ರಾಫ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಇತ್ತೀಚೆಗೆ ಹರಿದಾಡಿತ್ತು. ಆ ವಿಚಾರವಾಗಿಯೂ ಟೈಗರ್ ಶ್ರಾಫ್ ಸ್ಪಷ್ಟನೆ ಕೊಟ್ಟಂತೆ ಆಗಿದೆ.

    ಸದ್ಯ ದಿಶಾ ಪಟಾನಿ ಅವರಿಗೆ ಹೊಸ ಬಾಯ್‌ಫ್ರೆಂಡ್ ಸಿಕ್ಕಿದ್ದಾರೆ. ಅಲೆಕ್ಸಾಂಡರ್ ಜೊತೆ ನಟಿ ಡೇಟ್ ಮಾಡುತ್ತಿದ್ದಾರೆ. ಬಾಲಿವುಡ್ (Bollywood)  ಪಾರ್ಟಿಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೈಗರ್ ಶ್ರಾಫ್ ಜೊತೆ ಬ್ರೇಕಪ್? ಹೊಸ ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ದಿಶಾ

    ಟೈಗರ್ ಶ್ರಾಫ್ ಜೊತೆ ಬ್ರೇಕಪ್? ಹೊಸ ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ದಿಶಾ

    ಣ್ಣದ ಲೋಕದಲ್ಲಿ ಲವ್, ಬ್ರೇಕಪ್, ಸೆಕ್ಸ್ ಎಲ್ಲವೂ ಕಾಮನ್. ಟೈಗರ್ ಶ್ರಾಫ್ (Tiger Shroff) ಮತ್ತು ದಿಶಾ (Disha Patani) ಡೇಟ್ ಮಾಡ್ತಿದ್ದರು ಎನ್ನಲಾಗಿತ್ತು. ಕೊವೀಡ್ ಸಂದರ್ಭದಲ್ಲಿ ಬ್ರೇಕಪ್ ಆಯ್ತು ಎಂದು ಹೇಳಲಾಯ್ತು. ಇಂದಿಗೂ ತಾವು ಸಂಬಂಧದಲ್ಲಿದ್ದ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಎನ್ನಲಿಲ್ಲ. ಟೈಗರ್ ಶ್ರಾಫ್ ಜೊತೆ ಬ್ರೇಕಪ್ ಆಯ್ತಾ ಎಂಬ ಅನುಮಾನಗಳ ನಡುವೆ ನಟಿ ದಿಶಾ ಈಗ ಹೊಸ ಬಾಯ್‌ಫ್ರೆಂಡ್‌ನ ಪರಿಚಿಯಿಸಿದ್ದಾರೆ. ಇದನ್ನೂ ಓದಿ:ಬಿಪಾಶಾ ಬಸು ಮಗಳ ಹಾರ್ಟ್‌ನಲ್ಲಿ ಹೋಲ್- ಕಣ್ಣೀರಿಟ್ಟ ನಟಿ

    ದಿಶಾ ಪಟಾನಿ- ಟೈಗರ್ ಶ್ರಾಫ್ ಇಬ್ಬರು ಚಿತ್ರರಂಗದ ಸ್ಟರ‍್ಸ್. ಸಿನಿಮಾ ಮಾಡುವ ಮುಂಚೆಯೇ ಇಬ್ಬರಿಗೂ ಪರಿಚಯವಿತ್ತು. ಭಘಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಇಬ್ಬರ ಗೆಳೆಯನವೇ ಪ್ರೇಮಾಂಕುರವಾಗಲು ಕಾರಣವಾಯ್ತು. ಕೊವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಇಬ್ಬರೂ ಕಾರಿನಲ್ಲಿ ಸುತ್ತಾಟ ನಡೆಸಿದ್ದಕ್ಕೆ ಇವರ ಮೇಲೆ ಕೇಸ್ ಕೂಡ ದಾಖಲಾಗಿತ್ತು. ಆದರೆ, ಈ ಜೋಡಿ ಎಂದಿಗೂ ತಮ್ಮ ಸಂಬಂಧವನ್ನು ಒಪ್ಪಿಕೊಂಡಿಲ್ಲ. ಇವರ ಸಂಬಂಧ ಬ್ರೇಕಪ್‌ನಲ್ಲಿ ಕೊನೆಯಾಗಿದೆಯೇ ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.

    ದಿಶಾ ಪಟಾಣಿ ಅವರು ಅಲೆಕ್ಸಾಂಡರ್ ಅಲೆಕ್ಸಿಕ್ (Aleksander Alexilic) ಜೊತೆ ಆಗಾಗ ಕಾಣಿಸಿಕೊಳ್ಳುತ್ತಾರೆ. ತಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ಅನೇಕ ಬಾರಿ ದಿಶಾ ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾರೆ. ಆದರೆ, ಇವರ ಮಧ್ಯೆ ಈಗ ಪ್ರೀತಿ ಮೂಡಿದೆಯೇ ಎನ್ನುವ ಅನುಮಾನ ಮೂಡಿದೆ. ದಿಶಾ ಪಟಾಣಿ ಹಾಗೂ ಅಲೆಕ್ಸಾಂಡರ್ ಒಂದು ಕಡೆ ಸೇರಿದ್ದರು. ಈ ವೇಳೆ ದಿಶಾ ತಮ್ಮ ಗೆಳೆತಿಯರಿಗೆ ಅಲೆಕ್ಸಾಂಡರ್‌ನ ಪರಿಚಯ ಮಾಡಿದ್ದಾರೆ. ಇವರು ನನ್ನ ಬಾಯ್‌ಫ್ರೆಂಡ್ ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆ ಆಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಕೆಲ ದಿನಗಳ ಹಿಂದೆ ಟೈಗರ್ ಶ್ರಾಫ್ (Tiger Shroff) ಜೊತೆ ನಟಿ ದಿಶಾ (Disha) ಕಾಣಿಸಿಕೊಂಡಿದ್ದರು. ಕಾರ್ಯಕ್ರಮವೊಂದಲ್ಲಿ ಟೈಗರ್ ಮತ್ತು ಅವರ ಸಹೋದರಿ ಮತ್ತು ತಾಯಿಯ ಜೊತೆ ದಿಶಾ ಕಾರ್ಯಕ್ರಮ ವೀಕ್ಷಿಸುತ್ತಿರುವುದು ಕ್ಯಾಮೆರಾ ಕಣ್ಣಿಗೆ ಸೆರೆ ಆಗಿತ್ತು. ಬ್ರೇಕಪ್ ಮತ್ತು ಪ್ಯಾಚ್ ಅಪ್ ಸುದ್ದಿಯ ನಡುವೆ ಈಗ ಅಲೆಕ್ಯಾಂಡರ್ ಅಲೆಕ್ಸಿಕ್ ಎಂಬ ಹೊಸ ಬಾಯ್‌ಫ್ರೆಂಡ್‌ನ ಎಂಟ್ರಿಯಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಸುಳ್ಳಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]