Tag: Disguise

  • ಮಾರುವೇಶದಲ್ಲಿ ಪೊಲೀಸರ ದಾಳಿ – 400 ಕೆ.ಜಿ ದನದ ಮಾಂಸ ವಶ

    ಮಾರುವೇಶದಲ್ಲಿ ಪೊಲೀಸರ ದಾಳಿ – 400 ಕೆ.ಜಿ ದನದ ಮಾಂಸ ವಶ

    ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಬಡಾ ಉಚ್ಚಿಲ ಗ್ರಾಮ ಪಂಚಾಯತ್ ಸದಸ್ಯ ರಫೀಕ್ ಯಾನೇ, ಡಿಯೋ ರಫೀಕ್ ಉಸ್ತುವಾರಿವಾರಿಯಲ್ಲಿ ಉಚ್ಚಿಲ ಭಾಸ್ಕರ ನಗರದಲ್ಲಿ ನಡೆಯುತ್ತಿದ್ದ ಬೃಹತ್ ಅಕ್ರಮ ಕಸಾಯಿಖಾನಿಗೆ ಪೊಲೀಸರು ದಾಳಿ ಮಾಡಿದ್ದಾರೆ.

    ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಪಡುಬಿದ್ರಿ ಎಸ್‍ಐ ನೇತೃತ್ವದಲ್ಲಿ ದಾಳಿ ನಡೆಸಿದ ವೇಳೆ ಭಾರೀ ದನದ ಮಾಂಸ ಸಹಿತ ಜೀವಂತ ದನ ಪತ್ತೆಯಾಗಿದೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪಡುಬಿದ್ರೆ ವ್ಯಾಪ್ತಿಯಲ್ಲಿ ಹಲವು ಮನೆಗಳಲ್ಲಿ ಅಕ್ರಮವಾಗಿ ದನವನ್ನು ಕಡಿಯಲಾಗುತ್ತದೆ ಎಂಬ ಮಾಹಿತಿ ಪೊಲೀಸರಿಗೆ ತಿಳಿದಿತ್ತು. ಮಾಂಸ ಮಾರುವವರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡಿಕೊಂಡಿದ್ದರು. ಪಡುಬಿದ್ರಿ ಪೊಲೀಸ್ ಠಾಣೆಯ ಸಿಬ್ಬಂದಿ ಮಾರುವೇಷದಲ್ಲಿ ಮನೆಯೊಂದಕ್ಕೆ ದಾಳಿ ಮಾಡಿದಾಗ ಜೀವಂತ ಜನ ದನದ ಮಾಂಸ ಮತ್ತು ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ.  ಇದನ್ನೂ ಓದಿ: ಉಡದ ಮೇಲೆ ಅತ್ಯಾಚಾರಗೈದ ನಾಲ್ವರು ಅರೆಸ್ಟ್

    ದಿನಕ್ಕೊಂದು ಮನೆಗಳೇ ಹಸುವಿನ ವಧಾ ಸ್ಥಳ. ಪ್ರಮುಖ ಆರೋಪಿ ರಫೀಕ್ ಯಾನೇ, ಡಿಯೋ ರಫೀಕ್ ಪೊಲೀಸ್ ದಾಳಿ ವೇಳೆ ಪರಾರಿಯಾಗಿದ್ದು, ಇನ್ನೊರ್ವ ಆರೋಪಿ ಮನೆ ಮಾಲೀಕ ಸಾಬನ್ ತಲೆ ಮರೆಸಿಕೊಂಡಿದ್ದಾನೆ. ಉಳಿದಂತೆ ಕಳತ್ತೂರು ಸೂರ್ಯಗುಡ್ಡೆ ನಿವಾಸಿಗಳಾದ ಮಹಮ್ಮದ್ ರಫೀಕ್ (44), ಇಲಿಯಾಸ್ (38), ಉಚ್ಚಿಲ ಭಾಸ್ಕರ ನಗರ ಬಿಸ್ಮಿಲ್ಲಾ ಸ್ಕೋರ್ ಬಳಿ ನಿವಾಸಿ ಮೋಹಿನ್ ಉದ್ಧೀನ್ (17), ಮೂಳೂರು ಸುನ್ನಿ ಸೆಂಟರ್ ಬಳಿ ನಿವಾಸಿ ಮೊಯಿದಿನಬ್ಬ (40) ಬಂಧಿತ ಆರೋಪಿಗಳು ಯಾರಿಗೂ ಸಂಶಯ ಬರಬಾರದು ಎಂದು ದಿನಕ್ಕೊಂದು ಮನೆಯಲ್ಲಿ ಮಾಂಸ ಮಾಡುತ್ತಿದ್ದರು.

    ನಿಖರ ಮಾಹಿತಿ ದೊರೆತ ಹಿನ್ನಲೆಯಲ್ಲಿ ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಪ್ರಕಾಶ್ ಹಾಗೂ ಪಡುಬಿದ್ರಿ ಎಸ್‍ಐ ಪುರುಷೋತ್ತಮ್ ತಂಡ ಮಸೀದಿ ಸಮೀಪ ಸುತ್ತಲೂ ಮುಸ್ಲಿಂ ಮನೆಗಳಿರುವ ಪ್ರದೇಶದ ಮಧ್ಯೆ ಭಾಗದ ಸಾಬನ್ ಮನೆಯನ್ನೇ ಅಕ್ರಮ ಕಸಾಯಿಖಾನೆಯನ್ನಾಗಿ ಮಾಡಿಕೊಂಡು, ರಾಜಾರೋಷವಾಗಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದರು. ಈ ವೇಳೆ ದಿಢೀರ್ ದಾಳಿ ನಡೆಸಿದಾಗ ಡಿಯೋ ರಫೀಕ್ ತಪ್ಪಿಸಿಕೊಂಡಿದ್ದಾನೆ. ಸ್ಥಳದಲ್ಲಿದ್ದ ಉಳಿದವರನ್ನು ಪೊಲೀಸ್ ತಂಡ ಬಂಧಿಸಿದೆ. ಮೂರು ದನಗಳನ್ನು ಕಡಿದು ಮಾಂಸ ಮಾಡಲಾದ 400 ಕೆ.ಜಿ ಮಾಂಸ ಸ್ಥಳದಲ್ಲೇ ಪತ್ತೆಯಾಗಿದೆ. ಇದನ್ನೂ ಓದಿ: ಹಸು ಜೊತೆಗೆ ಸೆಕ್ಸ್ – ವಿಕೃತ ಕಾಮಿ ಅರೆಸ್ಟ್

    ಪೊಲೀಸ್ ದಾಳಿಯಾಗುತ್ತಿದಂತೆ ಒಂದು ದನದ ಕತ್ತಿಗೆ ಚೂರಿ ಇರಿದ ಪರಿಣಾಮ ಪೊಲೀಸ್ ಮುಂಭಾಗದಲ್ಲೇ ಒದ್ದಾಟ ನಡೆಸಿ ಪ್ರಾಣ ಬಿಟ್ಟಿರುವ ದೃಶ್ಯ ಪೊಲೀಸರ ಕೋಪ ನೆತ್ತಿಗೇರುವಂತೆ ಮಾಡಿದೆ. ಜೀವಂತ ದನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ಒಂದು ಸ್ಕೂಟರ್ ಸಹಿತ ಕೃತ್ಯಕ್ಕೆ ಬಳಸಲಾಗಿದ್ದ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

  • ಅನಾರೋಗ್ಯ ಪೀಡಿತರ ಸಹಾಯಕ್ಕೆ ವೇಷ ಧರಿಸಿ ಮಾನವೀಯತೆಯ ಮೆರೆದ ಯುವಕ

    ಅನಾರೋಗ್ಯ ಪೀಡಿತರ ಸಹಾಯಕ್ಕೆ ವೇಷ ಧರಿಸಿ ಮಾನವೀಯತೆಯ ಮೆರೆದ ಯುವಕ

    ಮಂಗಳೂರು: ಅನಾರೋಗ್ಯ ಪೀಡಿತರ ಸಹಾಯಕ್ಕಾಗಿ ನಗರದ ಹೊರವಲಯದ ಸುರತ್ಕಲ್ ಸಮೀಪದ ಜನತಾ ಕಾಲೋನಿಯ ನಿವಾಸಿ ಧನಂಜಯ(ಧನು) ಪೂಜಾರಿಯವರು ಕೃಷ್ಣಾಪುರ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ವೇಷ ಧರಿಸಿ ಹಣ ಸಂಗ್ರಹಿಸಿದ್ದಾರೆ.

    ನಗರದ ಹೊರವಲಯದ ಸುರತ್ಕಲ್ ಸಮೀಪದ ಜನತಾ ಕಾಲೋನಿಯ ನಿವಾಸಿ ಧನಂಜಯ(ಧನು) ಪೂಜಾರಿಯವರು ಕೃಷ್ಣಾಪುರ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ವೇಷ ಧರಿಸಿ ತನ್ನ ಬಂಧು-ಬಳಗ, ಗೆಳೆಯರ ಹಾಗೂ ಸಾರ್ವಜನಿಕರ ಸಹಕಾರದಿಂದ 26,994 ರೂಪಾಯಿ ಸಂಗ್ರಹಿಸಿದ್ದಾರೆ. ಈ ಹಣವನ್ನು 3 ಜನ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನೀಡಲು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ವೇಷಧರಿಸಿ 72 ಲಕ್ಷ ರೂ. ದಾನ ಮಾಡಿದ್ದ ರವಿ ಕಟಪಾಡಿ ಈ ಬಾರಿ ಡಾರ್ಕ್ ಅಲೈಟ್ ಲುಕ್‍ನಲ್ಲಿ ಪ್ರತ್ಯಕ್ಷ

    ಇವರು ಕಲೆಗಾರರಾಗಿದ್ದು, ಸುರತ್ಕಲ್ ಆಪತ್ಬಾಂಧವ ಸಮಾಜ ಸೇವಾ ಸಂಘದ ಸದಸ್ಯರಾಗಿದ್ದಾರೆ. ಸದಾ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತ ಇನ್ನೊಬ್ಬರ ನೋವಿಗೆ ಸ್ಪಂದಿಸುವ ಹೃದಯವಂತಿಕೆಯವರು. ಇವರ ಹೃದಯವಂತಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಗುಂಬೆ ಘಾಟ್ ತಿರುವಿನಲ್ಲಿ ಧರೆಗುರುಳಿದ ಮರ – ಎರಡು ಗಂಟೆ ರಸ್ತೆ ಬ್ಲಾಕ್

  • ಗರ್ಲ್‍ಫ್ರೆಂಡ್ ಭೇಟಿಯಾಗಲು ವಧುವಿನ ವೇಷದಲ್ಲಿ ಮದುವೆ ಮನೆಗೆ ಬಂದ ಬಾಯ್‍ಫ್ರೆಂಡ್

    ಗರ್ಲ್‍ಫ್ರೆಂಡ್ ಭೇಟಿಯಾಗಲು ವಧುವಿನ ವೇಷದಲ್ಲಿ ಮದುವೆ ಮನೆಗೆ ಬಂದ ಬಾಯ್‍ಫ್ರೆಂಡ್

    – ಹುಡುಗಿಯ ಕುಟುಂಬಸ್ಥರಿಗೆ ಸಿಕ್ಕಿಬಿದ್ದು ಫಜೀತಿ

    ಲಕ್ನೋ: ಕೆಲವರು ಪ್ರೀತಿಗಾಗಿ ಏನೂ ಬೇಕಿದ್ದರೂ ಮಾಡುತ್ತಾರೆ. ಇಂತಹ ಹಲವು ನಿದರ್ಶನಗಳನ್ನು ಸಹ ನಾವು ನೋಡಿರುತ್ತೇವೆ. ಅದೇ ರೀತಿ ಇಲ್ಲೊಬ್ಬ ಯುವಕ ತನ್ನ ಲವರ್ ಮದುವೆಗೆ ಸೀರೆಯುಟ್ಟು, ಮೇಕಪ್ ಮಾಡಿಕೊಂಡು, ಬಳೆ, ಆಭರಣ ತೊಟ್ಟು ವಧುವಿನ ವೇಷದಲ್ಲೇ ಹೋಗುವ ಮೂಲಕ ಗಮನ ಸೆಳೆದಿದ್ದಾನೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಉತ್ತರ ಪ್ರದೇಶದ ಬದೋಹಿಯಲ್ಲಿ ಘಟನೆ ನಡೆದಿದ್ದು, ಯುವಕ ತನ್ನ ಲವರ್ ನೋಡಲು ವಧುವಿನ ವೇಷ ಧರಿಸಿಕೊಂಡು ಮದುವೆ ಮನೆಗೆ ಪ್ರವೇಶಿಸಿದ್ದಾನೆ. ವ್ಯಕ್ತಿಯ ಚಲನವಲನ ಗಮನಿಸಿದ ಕುಟುಂಬಸ್ಥರು, ಅನುಮಾನಗೊಂಡಿದ್ದಾರೆ. ಬಳಿಕ ಯುವಕನ ಪ್ಲಾನ್ ಉಲ್ಟಾ ಆಗಿದ್ದು, ಹುಡುಗಿಯ ಕುಟುಂಬಸ್ಥರು ಪತ್ತೆಹಚ್ಚಿದ್ದಾರೆ. ಈ ವೀಡಿಯೋ ಇದೀಗ ಸಖತ್ ವೈರಲ್ ಆಗಿದೆ.

    ವ್ಯಕ್ತಿ ಕೆಂಪು ಸೀರೆಯುಟ್ಟು ಹುಡುಗಿಯಂತೆ ಸಿಂಗಾರಗೊಂಡಿದ್ದು, ತಲೆಗೆ ವಿಗ್, ಕೈಗೆ ಬಳೆ, ಆಭರಣ ಮಾತ್ರವಲ್ಲದೆ ಮೇಕಪ್ ಸಹ ಮಾಡಿಕೊಂಡಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಅಲ್ಲದೆ ಹುಡುಗಿ ಸಹ ಬೇರೊಬ್ಬ ವ್ಯಕ್ತಿಯನ್ನು ವಿವಾಹವಾಗಲು ಸಿದ್ಧವಾಗಿದ್ದಳು. ಬಾಯ್‍ಫ್ರೆಂಡ್ ಆಕೆಯನ್ನು ಭೇಟಿಯಾಗಲು ಬಂದಾಗ ವಿವಾಹದ ಸಿದ್ಧತೆಗಳು ಭರದಿಂದ ಸಾಗಿದ್ದವು.

    ಆರಂಭದಲ್ಲಿ ಹುಡುಗಿಯ ರೂಮ್‍ಗೆ ಹೋಗಬಹುದೆಂದು ವ್ಯಕ್ತಿ ಯೋಚಿಸಿದ್ದ. ಆದರೆ ಅಷ್ಟರಲ್ಲೇ ಹುಡುಗಿಯ ಕುಟುಂಬಸ್ಥರಿಗೆ ಸಿಕ್ಕಿಬಿದ್ದ. ಆದರೆ ಪೊಲೀಸರಿಗೆ ಮಾಹಿತಿ ನೀಡುವಷ್ಟರಲ್ಲಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಎಸ್ಕೇಪ್ ಆಗಿದ್ದಾನೆ ಎಂದು ವರದಿಯಾಗಿದೆ.

    ಸೀರೆ ಧರಿಸಿದ್ದ ಯುವಕನನ್ನು ಪತ್ತೆಹಚ್ಚುತ್ತಿದ್ದಂತೆ ಕುಟುಂಬಸ್ಥರು ಸುತ್ತುವರೆದಿದ್ದು, ಆಘಾತಕ್ಕೊಳಗಾಗಿದ್ದಾರೆ. ಅಲ್ಲದೆ ಕೋಪದಿಂದ ಸೀರೆಯನ್ನು ಎಳೆಯಲು ಯತ್ನಿಸಿ, ಮುಖದ ಮುಸುಕನ್ನು ತೆರೆಯಲು ನೋಡಿದ್ದಾರೆ. ಆದರೆ ಯುವಕ ಮಾತ್ರ ಸೀರೆಯನ್ನು ಬಿಟ್ಟಿಲ್ಲ.

  • ಜನರಿಗೆ ಜಾಗೃತಿ ಮೂಡಿಸಲು ರೋಡಿಗಿಳಿದ ಯಮ, ಕಿಂಕರರು

    ಜನರಿಗೆ ಜಾಗೃತಿ ಮೂಡಿಸಲು ರೋಡಿಗಿಳಿದ ಯಮ, ಕಿಂಕರರು

    ಹಾವೇರಿ: ಯಮ, ಕಿಂಕರರು ಹಾಗೂ ಕೊರೊನಾ ವೈರಸ್ ವೇಷ ಹಾಕಿಕೊಂಡು ಸ್ಥಳೀಯರು ಕೊರೊನಾ ವೈರಸ್ ಕುರಿತು ಜನರಿಗೆ ಜಾಗೃತಿ ಮೂಡಿಸುತ್ತಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಹೊಸಪೇಟೆ ಓಣಿಯ ನಾಲ್ವರಲ್ಲಿ ಓರ್ವ ಯಮನ ವೇಷ, ಇಬ್ಬರು ಕಿಂಕರರ ವೇಷ ಹಾಗೂ ಮತ್ತೊಬ್ಬ ಕೊರೊನಾ ವೈರಸ್ ನ ವೇಷ ಹಾಕಿಕೊಂಡು ಪಟ್ಟಣದಲ್ಲಿ ಜನರಿಗೆ ಕೊರೊನಾ ವೈರಸ್ ಮತ್ತು ಲಾಕ್‍ಡೌನ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

    ಯಮ ಕೊರೊನಾ ವೈರಸ್ ವೇಷಧಾರಿಯ ಕೊರಳಿಗೆ ಹಗ್ಗ ಹಾಕಿಕೊಂಡು ಹಿಡ್ಕೊಂಡು ಓಡಾಡುತ್ತಿದ್ದರೆ, ಇಬ್ಬರು ಕಿಂಕರರು ರಸ್ತೆ ತುಂಬ ಓಡಾಡುತ್ತಾ ಮನೆಬಿಟ್ಟು ಹೊರಗಡೆ ಓಡಾಡೋರಿಗೆ ಎಚ್ಚರಿಕೆ ನೀಡಿತ್ತಿದ್ದಾರೆ. ಯಮ, ಕಿಂಕರರು ಹಾಗೂ ಕೊರೊನಾ ವೈರಸ್ ವೇಷಧಾರಿಗಳಿಗೆ ಬ್ಯಾಡಗಿ ಠಾಣೆ ಪೊಲೀಸರು ಸಹ ಸಾಥ್ ನೀಡುತ್ತಿದ್ದಾರೆ. ವೇಷಧಾರಿಗಳ ಮೂಲಕ ಮನೆಬಿಟ್ಟು ಹೊರಬರದೆ, ಮನೆಯಲ್ಲೇ ಇದ್ದು ಕೊರೊನಾ ಸೋಂಕು ಹರಡದಂತೆ ತಡೆಯಲು ಸಹಕರಿಸಿ ಎಂದು ಜನರಿಗೆ ಮನವಿ ಮಾಡಲಾಗುತ್ತಿದೆ.

  • ಕಾಡು ಮನುಷ್ಯರ ವೇಷದಲ್ಲಿ ಬರ್ತ್ ಡೇ ಆಚರಿಸಿಕೊಂಡ ಯುವಕ

    ಕಾಡು ಮನುಷ್ಯರ ವೇಷದಲ್ಲಿ ಬರ್ತ್ ಡೇ ಆಚರಿಸಿಕೊಂಡ ಯುವಕ

    ಕಾರವಾರ: ಹಲವು ಜನರಿಗೆ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳಬೇಕು ಅನ್ನುವ ಆಸೆ ಇರುತ್ತದೆ. ಕೆಲವರು ಗೆಳೆಯರ ಜೊತೆ ಸೇರಿ ಭರ್ಜರಿ ಗುಂಡು-ತುಂಡಿನ ಪಾರ್ಟಿ ಮಾಡಿ ಆಚರಿಸಿಕೊಳ್ಳುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಯುವಕನೊಬ್ಬ ಕಾಡು ಮನುಷ್ಯರ ವೇಷದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.

    ಕಾರವಾರದ ದೇವಲಿವಾಡದ ವಿಘ್ನೇಶ್ ಪೆಡ್ನೇಕರ್ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ವಿಘ್ನೇಶ್ ತಮ್ಮ ಜಿಲ್ಲೆಯ ಹೆಮ್ಮೆಯ ಸಿದ್ದಿ ಜನಾಂಗದ ಸಾಂಪ್ರದಾಯಿಕ ಕಾಡು ಜನರ ಉಡುಗೆ ತೊಟ್ಟು ತನ್ನ 18ನೇ ವಯಸ್ಸಿನ ಜನ್ಮದಿನವನ್ನು ತನ್ನ ಗೆಳೆಯರೊಂದಿಗೆ ಆಚರಿಸಿಕೊಂಡಿದ್ದಾನೆ.

    ವಿಘ್ನೇಶ್ ಪೆಡ್ನೇಕರ್ ಪ್ರತಿ ವರ್ಷ ಬರುವ ಸುಗ್ಗಿ ಹಬ್ಬದಲ್ಲಿ ಹೆಣ್ಣಿನ ವೇಷ ತೊಟ್ಟು ಸುಗ್ಗಿ ಕುಣಿತ ಮಾಡುತ್ತಾನೆ. ಈತನಿಗೆ ತನ್ನ ಜನುಮ ದಿನದಂದು ತಮ್ಮ ಊರಿನ ಕಾಡು ಜನರ (ಸಿದ್ದಿ ಜನಾಂಗ) ವೇಷ ತೊಟ್ಟು ವಿಶಿಷ್ಟವಾಗಿ ಜನುಮದಿನ ಆಚರಿಸುವ ಹಂಬಲವಿತ್ತು.

    ಹೀಗಾಗಿ ತನ್ನ 18ನೇ ವರ್ಷದ ಹುಟ್ಟುಹಬ್ಬಕ್ಕಾಗಿ ಈ ವಿಶಿಷ್ಟ ಉಡುಪನ್ನು ಧರಿಸಿ ನೃತ್ಯ ಮಾಡುವ ಮೂಲಕ ಗೆಳೆಯರೊಂದಿಗೆ ತನ್ನ ಜನುಮದಿನವನ್ನು ಸಂಭ್ರಮಿಸಿದ್ದಾನೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]